Thursday, December 31, 2020

ಮತ್ತೊಂದು ಕ್ಯಾಲೆಂಡರ್ ವರ್ಷತರಲಿ ಇನ್ನಾದರೂ ಹರುಷ....#ವೆಂಕಟೇಶಸಂಪ

ಮತ್ತೊಂದು ಕ್ಯಾಲೆಂಡರ್ ವರ್ಷ
ತರಲಿ ಇನ್ನಾದರೂ ಹರುಷ....
#ವೆಂಕಟೇಶಸಂಪ Venkatesha Sampa 

ಸಮಯ ನಿಲ್ಲುವುದಿಲ್ಲ..! ಕ್ಷಣಗಳು ಉರುಳಿ..ನಿಮಿಷಗಳಾಗಿ.. ಗಂಟೆಗಳಾಗಿ.. ದಿನಗಳಾಗಿ.. ವಾರಗಳಾಗಿ.. ತಿಂಗಳುಗಳಾಗಿ.. ವರ್ಷಗಳಾಗಿ ಹೋಗುತ್ತವೆ. ಸಿಕ್ಕ ಸಮಯದಲ್ಲಿ, ಇರುವ ಅವಕಾಶ ದಲ್ಲಿ ಏನೆಲ್ಲಾ ಮಾಡಬಹುದು ಅದನ್ನು ಮಾಡಿದರೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. 
ನಾವು ಕೆಲಸ ಮಾಡಲಿ ಬಿಡಲಿ ಸಮಯ ಮಾತ್ರಾ ನಿಲ್ಲುವುದಿಲ್ಲ.!
ಹಾಗಂತ 2020 ಮಾತ್ರಾ ವಿಭಿನ್ನವಾಗಿತ್ತು. ನಾವು ಮಾಡಬಹುದಾದ ಕೆಲಸವನ್ನೂ ಮಾಡೋಕೆ ಬಿಡಲಿಲ್ಲ.  ಇಟ್ಟ ಮುಹೂರ್ತ, ಮಾಡಿದ ಸಂಕಲ್ಪ, ಮುಟ್ಟಬೇಕಾದ ಗುರಿ, ಮಾಡಬೇಕಾದ ಕೆಲಸ, ಎಲ್ಲವೂ ಸ್ಥಬ್ದವಾದಂತೆ ಆಗಿಹೋಗಿತ್ತು.
ಅದೆಷ್ಟೋ ಜನ ನಿರುದ್ಯೋಗಿಗಳಾದರು, ಅದೆಷ್ಟೋ ಜನ ಹೊಟ್ಟೆಗಿಲ್ಲದೆ ನರಳಿದರು. 
ಅದೆಷ್ಟು ಜನ ತಮ್ಮವರು ಸಂಕಷ್ಟಕ್ಕೀಡಾದರೂ ನೋಡಲಾಗದ ಸ್ಥಿತಿ, ಯಾವ ಸಮಯಕ್ಕೆ ಎಲ್ಲೆಲ್ಲಿ ದಿಡೀರ್ ಅಂತ ಲಾಕ್ಡೌನ್ ಅಂತ ಪೇಚಿಗೆ ಸಿಲುಕಿಬಿಟ್ರೋ ಲೆಕ್ಕವಿಲ್ಲ.  ಒಂದೂರಿನಿಂದ ಇನ್ನೊಂದು ಊರಿಗೆ ಬರಲಾರದೇ ಒದ್ದಾಡಿದವರೆಷ್ಟೋ?
ಹೆಜ್ಜೆ ಹೆಜ್ಜೆಗೂ ಆತಂಕ, ಕ್ಷಣ ಕ್ಷಣಕ್ಕೂ ಹೊಸ ಹೊಸ ಕಾನೂನುಗಳು, ಎಲ್ಲೋ ಮುಟ್ಟಬೇಕಾದ ದಾರಿ ಇನ್ನೆಲ್ಲೋ ಹೋಗಿ ಸೇರಿಬಿಟ್ಟಿತು.!
ಒಂದು ಹಂತದಲ್ಲಿ ಸಾಗುತ್ತಿದ್ದ ಪತ್ರಿಕೆಗೆ ಜಾಹಿರಾತು ಬರುವುದು ಕಷ್ಟವಾಗತೊಡಗಿತ್ತು.
ಸಾವಿರಾರು ಪತ್ರಿಕೆಗಳು ಮುಚ್ಚಲ್ಪಟ್ಟವು.
ನೂರಾರು ಪತ್ರಿಕೆಗಳು ತಮ್ಮ ಪತ್ರಿಕೆಗಳ ಪುಟ ಮತ್ತು   ಮುದ್ರಣವನ್ನು ಗಣನೀಯವಾಗಿ ಇಳಿಸಿಬಿಟ್ಟರು.!
ಇಂತಹ ಕಷ್ಟದ ಸಂದರ್ಭದಲ್ಲೂ ನಮ್ಮ ಸಂಪದ ಸಾಲು ಪತ್ರಿಕೆ ಅಚ್ಚುಕಟ್ಟಾಗಿ ಪ್ರಕಟವಾಗಿದ್ದು ನಮಗೆ  ಹೆಮ್ಮೆಯ ಖುಷಿಯ ವಿಚಾರ.
ಮಾರ್ಚ್ ತಿಂಗಳಲ್ಲೇ ಊರು ಸೇರಿ ಅತ್ಯಂತ ಖುಷಿ  ಕೊಡುವ  ಕೃಷಿಯಲ್ಲಿ ತೊಡಗಿಕೊಂಡೆ. ಏನೆಲ್ಲಾ ಸಾಧ್ಯತೆಗಳಿದ್ದವೋ ಆ ಕೃಷಿಗಳನ್ನು ಮಾಡುವ ಪ್ರಯತ್ನ ಮಾಡಿದೆ. ಮನೆ..ಪತ್ರಿಕೆ..ತೋಟ..ಕುಟುಂಬ ಇದಕ್ಕೇ ಸೀಮಿತವಾಗಿದ್ದರೂ ಸಿನಿಮಾ,ಪುಸ್ತಕ, ಅಂತೆಲ್ಲಾ ಸಾಗಿತ್ತು ಸಮಯ!
 ಲಕ್ಷ್ಮಿಯಂತಹ ಮಗಳು ಮನೆಗೆ ಬಂದಿದ್ದಾಳೆ....ಮೂರು ವರ್ಷದ ಮಗನ ಜೊತೆ ನಾವು ಮಗುವಾಗಿ ಆಡುವುದೂ ಸಂತಸವಾಗಿತ್ತು..... ಸಣ್ಣ ಅವಮಾನದ ಪ್ರತೀಕವಾಗಿ ಜಾಗವೊಂದನ್ನು ಪಡೆದು ಅಭಿವೃದ್ದಿಗೆ ಮತ್ತೊಂದು ಪುಟ್ಟ ಹೆಜ್ಜೆಯಿಟ್ಟಾಯಿತು.....ಆತಂಕ.... ಅನಿಸ್ಚಿತತೆ....ಅಭದ್ರತೆ.... ಅಸಹಾಯಕತೆಯ ನಡುವೆಯೇ. ...ಕ್ಯಾಲೆಂಡರ್ ನ ಮತ್ತೊಂದು ವರ್ಷ ಕಳೆದಿದೆ...ಬರಲಿರುವ ದಿನಗಳು ಆತಂಕದಿಂದ ದೂರವಾಗಿ ಎಲ್ಲೆಡೆ ಆನಂದವುಂಟಾಗಲಿ..... ಹಸಿದ ಹೊಟ್ಟೆಗೆ ಅನ್ನ ಸಿಗಲಿ.... ಕೆಲಸವಿಲ್ಲದ ಅದೆಷ್ಟೋ ಕೈಗಳಿಗೆ   ಉದ್ಯೋಗ ಸಿಗಲಿ.. ನಮ್ಮ ರೈತರಿಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿ... ಕರ್ತವ್ಯ ಪ್ರಜ್ಞೆ ಮರೆಯುತ್ತಿರುವ ಎಲ್ಲಾ ಆಡಳಿತ ಮತ್ತು ಅಧಿಕಾರಿವರ್ಗವೂ ಜನರ ಸುಂದರ ಬದುಕಿಗೆ ಶ್ರಮಿಸುವಂತಾಗಲಿ...
ಹೊಸ ಕ್ಯಾಲೆಂಡರ್ ವರ್ಷ.....ತರಲಿ ಸದಾಕಾಲ ಹರುಷ.. ಎಲ್ಲರಿಗೂ ಹೊಸ ಕ್ಯಾಲೆಂಡರ್ ವರುಷದ ಶುಭಾಶಯಗಳು!
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ #welcome2021 #Newcalenderyear sampadasaalu@gmail.com sampadasaalu.blogspot.com 9448219347

Monday, December 28, 2020

ಆಳಬೇಕಾದ ಅನ್ನದಾತ ಅಳಬಾರದು......... ವೆಂಕಟೇಶ ಸಂಪ

ಆಳಬೇಕಾದ ಅನ್ನದಾತ ಅಳಬಾರದು...
ವೆಂಕಟೇಶ ಸಂಪ

ರೈತ......ರೈತನಿಗಾಗಿ......ರೈತನಿಗೋಸ್ಕರ....
ಹೀಗಂತ ಪ್ರತಿ ಚುನಾವಣೆ ಸಂದರ್ಭದಲ್ಲೂ ಆಡುವ ಮಾತುಗಳು ಮತ್ತು ರಾಜಕಾರಣಿಗಳು ಕೊಡುವ ಭರವಸೆಗಳು....
ಹಾಗಂತ ರೈತ ಮಾತ್ರಾ ಅಲ್ಲೇ ಇದ್ದಾನೆ ಆತನ ಹೆಸರಲ್ಲಿ ಅದೆಷ್ಟು ಸರ್ಕಾರಗಳು ಬದಲಾಗಿವೆ...ಅದೆಷ್ಟು ರಾಜಕಾರಣಿ ಅಧಿಕಾರ ಹಿಡಿದ? ಯಾಕೆ ಹೀಗೆ?
ಉತ್ತರ ಬಹಳ ಸರಳ.....
ಮೊದಲಿನಿಂದಲೂ ರೈತ ಮುಗ್ದ.ಬಡವ.ಎಲ್ಲರನ್ನೂ ನಂಬುವ...ಒಬ್ಬರಿಂದಲಾದರೂ ಸಹಾಯವಾಗಬಹುದೆಂಬ ಹುಚ್ಚು ಆಸೆಯ ಫಲ.ಮತ್ತೆ ಮತ್ತೆ ಮೋಸ ಹೋಗುತ್ತಲೇ ಇದ್ದಾನೆ ನಮ್ಮ ರೈತ.

ದೇಶಕ್ಕೇ ಅನ್ನದಾತ....ಶೇಕಡಾ 75 ರಷ್ಟಿದ್ದರೂ ಅನ್ನದಾತ ಎಷ್ಟೋ ಬಾರಿ ಉಪವಾಸ ಮಲಗುತ್ತಿದ್ದಾನೆ ಎಂಬುದು ಅಷ್ಟೇ ಕಟುಸತ್ಯ.
ಹಾಗಂತ ರೈತನೇನು ಕೋಟಿ ಕೋಟಿ ಹಣ ಕೊಡಿ ಅಂತ ಕೇಳಿಲ್ಲ.
ಆತನಿಗೆ ಸರಿಯಾದ ನೀರಿನ ವ್ಯವಸ್ಥೆ.ಗೊಬ್ಬರ.ಬೀಜ.ಮತ್ತು ಉತ್ತಮ ಮಾರುಕಟ್ಟೆ....ನಿರ್ದಿಷ್ಟ ದರ. ಇದಷ್ಟನ್ನು ಕೊಡೋದು ಬಿಟ್ಟು ಎಲ್ಲಾ ಪಕ್ಷಗಳು ಭರವಸೆ ಕೊಟ್ಟರು.ಸರಿಯಾದ ದಾಖಲೆ ಪತ್ರ ಕೂಡ ಪಡೆಯೋಕೆ ಒದ್ದಾಟ ನೆಡೆಸುವಂತೆ ಮಾಡಿದರು.
ಇದೆಲ್ಲದರಿಂದ ನಮ್ಮ ರೈತ ಯಾವಾಗ ಮುಕ್ತನಾಗುತ್ತಾನೆ? ಅನ್ನ ನೀಡುವ ಕೈಗೆ ಯಾವಾಗ  ಸುಖ ಸಿಕ್ಕೀತು?

ರೈತ ಎಷ್ಟು ಮುಖ್ಯ ಎನ್ನ್ನೋಕೆ ಸಣ್ಣ ಕತೆ ಹೇಳ್ತಿನಿ ಕೇಳಿ .
ಒಂದು ರಾಜ್ಯದಲ್ಲಿ ಎಲ್ಲವೂ ಸುಭಿಕ್ಷವಾಗಿತ್ತು.ಆ ರಾಜ್ಯದ ರಾಜನಿಗೆ ಎಲ್ಲೆಡೆ ಸುಖ ಸಂಪತ್ತು ತುಂಬಿದ್ದು ನೋಡಿ ಎಲ್ಲಿಲ್ಲದ ಖುಷಿ ಆವರಿಸಿತ್ತು.ಆತ ಮಂತ್ರಿಗೆ ಕರೆದು ಇಷ್ಟು ಸಂಪದ್ಭರಿತ ರಾಜ್ಯಕ್ಕೆ ಕಾರಣೀಕರ್ತರಾದ ಈ ರಾಜ್ಯದ ಎಲ್ಲಾಗಣ್ಯರನ್ನು ಕರೆಯಿರಿ.ಅವರಿಗೆ ಸನ್ಮಾನ ಮತ್ತು ಔತಣ ಕೂಟ ಎರ್ಪಡಿಸಿ ಎಂದು ಆಜ್ಞೆಯಿತ್ತ.ಮಂತ್ರಿ ಎಲ್ಲರನ್ನೂ ಕರೆದ.ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು,ವಿಜ್ಞಾನಿಗಳು,ವಿದ್ವಾಂಸರು,ರಾಜಕಾರಣಿಗಳು,ವ್ಯಾಪಾರಿಗಳು ಎಲ್ಲರನ್ನೂ ಕರೆದರು.ಆದರೆ ರೈತರನ್ನು ಮಾತ್ರಾ ಕರೆಯಲಿಲ್ಲ.
ಆ ಔತಣಕೂಟಕ್ಕೆ ಕರೆಯೋಲೆ ಇಲ್ಲದಿದ್ದರೂ ರೈತ ಬಂದಿದ್ದ.ಆತನ ಹರಿದ ಅಂಗಿ,ಮಣ್ಣು ಬಡಿದ ಬಟ್ಟೆ ನೋಡಿ ಆಲ್ಲಿನ ಸೇವಕರು ಒಳಗೆ ಬಿಡಲಿಲ್ಲ.ನಾನು ಕೂಡ ಸಾಧಕ ಎಲ್ಲರಿಗೆ ಆನ್ನ ನೀಡುವ ರೈತ ನಾನೂ ರಾಜರ ಸನ್ಮಾನ ಮತ್ತು ಔತಣ ಸ್ವೀಕರಿಸಬೇಕೆಂದ.ಆದರೂ ಸೇವಕ ಒಳಗೆ ಬಿಡಲಿಲ್ಲ.ಅದರಿಂದ ಬೇಸರಗೊಂಡ ರೈತ ತನ್ನ ಕರ್ತವ್ಯದಿಂದ ವಿಮುಖನಾದ.ಬೆಳೆ ಬೆಳೆಯಲಿಲ್ಲ.ಕೆಲ ವರ್ಷದ ನಂತರ ಆ ರಾಜ್ಯದಲ್ಲಿ ಎಲ್ಲವೂ ಭಿಕಾರಿಯಾಗತೊಡಗಿತು.ತೀರಾ ದಾರಿದ್ರ್ಯ ಆವರಿಸಿತು.ಎಲ್ಲೆಡೆ   ಹಸಿವಿನ ಆಕ್ರಂದನ.ಇದನ್ನು ಗಮನಿಸಿದ ರಾಜ ಮತ್ತೆ ಮಂತ್ರಿಗೆ ಕೇಳಿದ.ಯಾಕೆ ಹೀಗೆ ಅಂತ.
ಮಂತ್ರಿ ಹೇಳಿದ ನಾವು ಆವತ್ತು ರಾಜ್ಯದ ಎಲ್ಲಾ ಸಾಧಕರನ್ನು ಸನ್ಮಾನಿಸಿದೆವು.ಔತಣ ಕೊಟ್ಟೆವು.ಆದರೆ ಬಹಳ ಮುಖ್ಯವಾಗಿದ್ದ ರೈತನನ್ನು ನಿರ್ಲಕ್ಷಿಸಿದೆವು.ಅವಮಾನಿಸಿದೆವು.ಆತ ತನ್ನ ಕರ್ತವ್ಯದಿಂದ ದೂರ ಸರಿದ.ಅದರ ಪರಿಣಾಮ ಈ ರಾಜ್ಯ ದಾರಿದ್ರ್ಯಕ್ಕೆ ಒಳಗಾಯಿತು ಎಂದ.
ಆಗ ರಾಜನಿಗೆ ಜ್ಞಾನೋದಯವಾಯಿತು.ಆದರೆ ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು.

ಈ ಕತೆಯಂತೆ ನಮ್ಮದೇಶದಲ್ಲಿ ರೈತ ಪ್ರತಿ ಸಲವೂ ಅವಮಾನಕ್ಕೆ ಈಡಾಗುತ್ತಿದ್ದಾನೆ.ಪ್ರತಿ ಸಲವೂ ಅನ್ಯಾಯಕ್ಕೊಳಗಾಗುತ್ತಿದ್ದಾನೆ.
ರೈತನಿಲ್ಲದೇ ನಾವಿಲ್ಲ.ಆಳಬೇಕಾದ ಅನ್ನದಾತ ಅಳುತ್ತಿದ್ದಾನೆ....ಪ್ಲೀಸ್ ಇನ್ನಾದರೂ ಜಾಗೃತರಾಗಬೇಕಿದೆ 
#ವೆಂಕಟೇಶಸಂಪ
ಓದಿ ಸಂಪದ ಸಾಲು ಪತ್ರಿಕೆ  ಸಂಪದ ಸಾಲು ಪತ್ರಿಕೆ
9448219347
sampadasaalu@gmail.com

Sunday, December 27, 2020

ಅಂದಿನ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಪುಟ್ಟ ಕವನ ಬರೆದಾತ ಎಲ್ಲರೂ ಆ ಕ್ಷಣಕ್ಕೆ ಕಾಡಿದವರೇ...... ವೆಂಕಟೇಶ ಸಂಪ..

ಅಂದಿನ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಪುಟ್ಟ ಕವನ ಬರೆದಾತ ಎಲ್ಲರೂ ಆ ಕ್ಷಣಕ್ಕೆ ಕಾಡಿದವರೇ......  ವೆಂಕಟೇಶ ಸಂಪ..

ಅದು  ಹೈಸ್ಕೂಲ್ ದಿನಗಳಿರಬಹುದು....ತುಂಬಾ ಕನಸುಗಳು....ಹಾಗಂತ ಯಾವ ಕನಸುಗಳಿಗೂ ಖಚಿತ ನಿಲುವು ಮತ್ತು ಸ್ಪಷ್ಟ ಅಲೋಚನೆಗಳಿರಲಿಲ್ಲ.
ಸಂಪದಿಂದ ಅರಳಗೋಡಿಗೆ ಬಂದು ಅಲ್ಲಿಂದ ಬಸ್ಸಿಗೆ ಹೋಗುವಾಗ,
ಬಸ್ ಅಲ್ಲಿ ಹತ್ತಿದ ಪ್ರಯಾಣಿಕರೆಲ್ಲರನ್ನೂ ಮುಂದೆ ಹೋಗಿ ಮುಂದೆ ಹೋಗಿ ಅಂತ ಒತ್ತಿ ಕಳುಹಿಸುವ ಕಂಡಕ್ಟರ್ ಕೈಯಲ್ಲಿ ಇರುವ ನೋಟುಗಳು,ಚಿಲ್ಲರೆಗಾಗಿ ಆಗಾಗ ತನ್ನಲ್ಲಿದ್ದ ಪುಟ್ಟ ಚೀಲ ಜೋರಾಗಿ ಅಲ್ಲಾಡಿಸುವ ಕಂಡಕ್ಟರ್ ನೋಡಿ ನಾನೂ ಮುಂದೊಂದು ದಿವಸ ಇದೇ ತರಹ ಕಂಡಕ್ಟರ್ ಆಗಬೇಕೆಂದುಕೊಂಡಿದ್ದು ಸುಳ್ಳಲ್ಲ.!ಕಂಡಕ್ಟರ್ ಪ್ರಭಾವ ಎಷ್ಟಿತ್ತೆಂದರೆ ಕೆಲವು ದಿವಸ ನೀನೇನಾಗುತ್ತೀಯಾ..? ಅಂದರೆ ನಾನು ಕಂಡಕ್ಟರ್ ಆಗಿ ಎಲ್ಲರನ್ನೂ ಮುಂದೆ ಕಳಿಸುತ್ತಾ ಕೈತುಂಬಾ ದುಡ್ಡು ಹಿಡಿದುಕೊಂಡು ಚಿಲ್ಲರೆ ಶಬ್ದ ಮಾಡಬೇಕು ಎಂದಿದ್ದೂ ಇದೆ.!
ಆಗಿನ್ನೂ ಪ್ರೈಮರಿ ಶಾಲೆ ಹುಡುಗ, ಶಾಲೆಯಲ್ಲಿ ವಾರ್ಷಿಕೋತ್ಸವ ಅಂತ ಮಾಡ್ತಿದ್ರು.ಎಲ್ಲಿಲ್ಲದ ಸಂಭ್ರಮ..ಕೋಲಾಟ.. ಏಕಪಾತ್ರಾಭಿನಯ,ಸ್ವಾಗತ, ನಿರೂಪಣೆ,ಅಂತೆಲ್ಲಾ ಬಾಯಿಪಾಠ ಮಾಡಿಸಿ ನಮ್ಮೆಲ್ಲರ ಪಾಲಕರನ್ನು ಕರೆದು ಅವರೆದುರು ಅದನ್ನೆಲ್ಲಾ ಪ್ರದರ್ಶಿಸುವ ದಿವಸ ಎನ್ನಬಹುದೇನೋ.....
ಅಂತ ದಿವಸದಲ್ಲಿ ನಮ್ಮ ಶಾಲೆಯ ಹುಡುಗನೊಬ್ಬ ಸ್ಟೈಲ್ ಆದ ಜಿನ್ಸ್ ಪ್ಯಾಂಟ್ ಹಾಕಿ,ಟೀಶರ್ಟ್ ಧರಿಸಿ,ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ಮುಕ್ಕಾಲಾ ಮುಕ್ಕಾಬುಲಾ ಅಂತ ಡ್ಯಾನ್ಸ್ ಮಾಡಿದಾಗ ಅಲ್ಲಿದ್ದ ಎಲ್ಲಾ ಜನ ಚಪ್ಪಾಳೆ ಸಿಳ್ಳೆ ಹೊಡೆದಿದ್ದು.., ಹುಡುಗೀರು ಕೂಡ ಎಷ್ಟ್ ಸ್ಟೈಲ್ ಆಗಿ ಕಾಣ್ತಾನೆ..!  ಅಂತ ಮಾತಾಡಿದ್ದು ಕೇಳಿದ ನನಗೆ  ಅದೆಷ್ಟು ಪ್ರಭಾವ ಬೀರಿತ್ತೆಂದರೆ.. ಒಂದಷ್ಟು ದಿವಸ ನಾನೂ ಮುಂದೊಂದು ದಿವಸ ಜಿನ್ಸ್ ಪ್ಯಾಂಟ್ ಹಾಕಿ ಟೀಶರ್ಟ್ ಧರಿಸಿ ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ದೊಡ್ಡ ಬ್ರೇಕ್ ಡ್ಯಾನ್ಸರ್ ಆಗಬೇಕೆಂದು ನನಗೆ ನಾನು ಒಬ್ಬನೇ ಮುಕ್ಕಾಲಾ ಮುಕ್ಕಾಬುಲಾ ಅಂತ ಡ್ಯಾನ್ಸ್ ಮಾಡುತ್ತಿದ್ದುದು.. ಯಾರಾದರೂ ನನ್ನನ್ನು ಆ ಸಮಯಕ್ಕೆ ನೋಡಿದರೆ.. ಏನು ಗೊತ್ತಿಲ್ಲದಂತೆ ನಿಂತಿದ್ದು ಎಲ್ಲಾ ನೆನಪಿದೆ.. ಸರಿಯಾದ ಚಡ್ಡಿ ಹಾಕುವುದಕ್ಕೇ ಕಷ್ಟವಿದ್ದ ಸಮಯದಲ್ಲಿ ಜಿನ್ಸ್ ಪ್ಯಾಂಟ್ ಮರೀಚಿಕೆಯಾದರೂ ಮುಂದೊಂದು ದಿವಸ ನಾನೂ  ಇದೇ ತರಹ ಬ್ರೇಕ್ ಡ್ಯಾನ್ಸರ್ ಆಗಬೇಕೆಂದು ಗೊಣಗಿದ್ದು ಸ್ಪಷ್ಟವಾಗಿದೆ.!

ಹರೆಯವೇ ಹಾಗೆ ಹಸಿ ಗೊಡೆಯ ತರಹ.....ಎಲ್ಲೆಲ್ಲೋ 
ಏನೇನೋ ಕನಸು ಮೂಡಿ.... ಮತ್ತೇನೋ ಅನ್ನಿಸಿ ಅಲ್ಲೆಲ್ಲೋ ಬದಲಾವಣೆ ಆವರಿಸಿಕೊಂಡುಬಿಡುತ್ತದೆ.

ಮತ್ತದೇ ಬಾಲ್ಯ.., ನಮ್ಮೂರಿನ ಯಾರದೋ ತಿಥಿ ಮನೆಯ ಊಟಕ್ಕೆ ಹೋಗಿದ್ದೆ.ಇಪ್ಪತ್ತು ಮೂವತ್ತು ಜನ ಬಂದಿರಬಹುದು.ಆ ಕಾಲದಲ್ಲಿ ಸಾಗರದ ಸಣ್ಣ ಪತ್ರಿಕೆಯೊಂದರಲ್ಲಿ ಅಲ್ಲಿ ಬಂದ ವ್ಯಕ್ತಿಯ ಕವನ ಪ್ರಕಟವಾಗಿತ್ತು.. ಆತನ ಬಗ್ಗೆ ಅಲ್ಲಿದ್ದವರ್ಯಾರೋ ಆತ ಕವಿ ಬರಹಗಾರ ಮಾರಾಯಾ....! 'ಅವನ ಕವನ ಎಲ್ಲಾ ಪತ್ರಿಕೆಲಿ ಬೈಂದು' ನೋಡು ಅಂತ ಯಾರೋ ಹೇಳಿದ ಮಾತು ಕೇಳಿದ ನನಗೆ ಆತನ ಹತ್ತಿರ ಹೋಗಿ ಆತನನ್ನೇ ನೋಡುತ್ತಿದ್ದೆ. ಅರ್ಧ ಗಂಟೆ ನಂತರ ನಾನೂ ಆತನ ಹಿಂದೇ ಓಡಾಡಿದ್ದನ್ನು ನೋಡಿ ಏನಾ ಅಪಿ ಎಂದಾಗ..... ನಿನ್ನ ಕೈ ಕೊಡೂ ಅಣ್ಣ .....ನಿನ್ನ ಹೆಸರು ಪೇಪರಲ್ಲಿ ಬೈಂದಡ ಅದಕ್ಕೆ ಅಂತ ಹೇಳಿ ಆತನ ಕೈ  ಮುಟ್ಟಿದ್ದು ಈಗಲೂ ನೆನಪಿದೆ.. ಅವತ್ತಿಡೀ ಮತ್ತದೇ ಕನಸು ನಾನೂ ಬರಹಗಾರ ಆಗಬೇಕು! ನಾನೂ ಪತ್ರಕರ್ತ ಆಗಬೇಕು ಅಂತೆಲ್ಲಾ.. ತಲೆಬುಡ ಗೊತ್ತಿಲ್ಲದ ಕ್ಷೇತ್ರ... ಆದರೂ ಜನ ನಮ್ಮನ್ನು ಗುರುತಿಸುತ್ತಾರೆ ಅಂತ ಅನಿಸಿದಾಗ ನಾನೂ ಆವತ್ತು  ಹೀಗಾಗಬೇಕೆಂದು ಚಡಪಡಿಸಿದ್ದೂ ಈಗಲೂ ನೆನಪಿದೆ.
 ಈ ತರಹದ ಕನಸುಗಳೇ ಬಹುಷಃ ನಮ್ಮನ್ನು ನಿರಂತರ ಚಲನೆಯಲ್ಲಿಡಬಹುದೇನೋ ಅನಿಸುತ್ತದೆ.
ಅವತ್ತು ಲೋಕಲ್ ಪತ್ರಿಕೆಯಲ್ಲಿ ಪುಟ್ಟ ಕವನ ಬರೆದವನ ಕೈ ಮುಟ್ಟಬೇಕೆಂಬ ಹುಚ್ಚುತನದಿಂದ ಹಿಡಿದು ಇವತ್ತು ನನ್ನದೇ ಸ್ವಂತ ಪತ್ರಿಕೆ 'ಸಂಪದ ಸಾಲು'  ರಾಜ್ಯಾದ್ಯಂತ ಓದುಗರನ್ನು ಪಡೆಯುವವರೆಗೂ, ಅವತ್ತು ಪುಟ್ಟ ಕವನ ಬರೆದವನ ಹಿಂದೆ ಅರ್ಧ  ಗಂಟೆ ಸುಮ್ಮನೆ ಸುತ್ತಿದ್ದ ನಾನೂ  800 ಕ್ಕೂ ಹೆಚ್ಚು ಹೊಸಬರಹಗಾರರಿಗೆ ಕಳೆದ 14 ವರ್ಷಗಳಲ್ಲಿ ಅವಕಾಶ ಕೊಡುತ್ತೇನೆಂಬ..,ಲಕ್ಷಾಂತರ ಓದುಗರು ನನ್ನ ಪತ್ರಿಕೆಗ ಸಿಗುತ್ತಾರೆಂಬ..,
 ಕಲ್ಪನೆಯಿಲ್ಲದಿದ್ದರೂ ನಾನೂ ಬರಹಗಾರ ಆಗಬೇಕು ಜನ  ನಮ್ಮನ್ನು ಗುರುತಿಸುತ್ತಾರೆ ಅಂತ ಆಸೆ ಇದ್ದಿದ್ದು ಸುಳ್ಳಲ್ಲ.!

ಬದುಕು ಕೇವಲ ಭಾನುವಾರವಲ್ಲ. ದಿನಗಳು ಬದಲಾಗುತ್ತವೆ......ಬದುಕೂ ಬದಲಾಗುತ್ತದೆ.... 
ಆದರೂ ಅಂದು ಕಂಡ ಕಂಡಕ್ಟರ್,ಬ್ರೇಕ್ ಡ್ಯಾನ್ಸರ್,ಕವನ ಬರೆದಾತ,,, ಎಲ್ಲರೂ ಆಗಾಗ ನಮ್ಮ ಕನಸನ್ನು ಎಚ್ಚರಿಸಿದ್ದು ಸತ್ಯ.....

ವೆಂಕಟೇಶ ಸಂಪ
ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

Saturday, May 30, 2020

ಪ್ರಿತ್ಸೋರಿಗೊಂದು ಮಾತು: *ವೆಂಕಟೇಶ ಸಂಪ

ಪ್ರಿತ್ಸೋರಿಗೊಂದು ಮಾತು: 
                         *ವೆಂಕಟೇಶ ಸಂಪ,
ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹಾಕಬಹುದಾದ ಒಂದು ಜೊತೆ ಬಟ್ಟೆ ತೆಗೆದುಕೊಳ್ಳೋ ನಾವು,ಬಣ್ಣ,ರೇಟು,ಕ್ವಾಲಿಟಿ,ಕಂಪನಿ,ಅಂತೆಲ್ಲಾ ನೋಡೋ ನಾವು ನಮ್ಮ ಇಡೀ ಜೀವನಕ್ಕೇ ಜೊತೆಯಾಗಿರಬೇಕಾದ ಸಂಗಾತಿ ಆರಿಸುವಾಗ ಕನಿಷ್ಟ ವಿವೇಚನೆ ಬಳಸದಿದ್ರೆ ಆಗ ಪ್ರೀತಿ ಕುರುಡು ಅನ್ನೋದು ಸ್ಪಷ್ಟವಾಗುತ್ತದೆ.
ಆರು ತಿಂಗಳಿಗೆ ಬಟ್ಟೆ ಬದಲಿಸಬಹುದು,ಆದರೆ ಇರುವ ಒಂದೇ ಒಂದು ಸುಂದರ ಬದುಕನ್ನು ಒಮ್ಮೆ ಹಾಳು ಮಾಡಿಕೊಂಡರೆ ಜೀವನಪೂರ್ತಿ ಸಾಯುತ್ತಲೇ ಇರಬೇಕಾದ ಸ್ಥಿತಿ ಬರುತ್ತದೆ.ಇವತ್ತಿನ ಕಠಿಣ ನಿರ್ಧಾರ ಇಡೀ ಜೀವನವನ್ನು ಸಂತಸವಾಗಿ ಇಡೋದಾದ್ರೆ ಒಳ್ಳೆ ನಿರ್ಧಾರಕ್ಕೆ ಹಿಂದೆ ಮುಂದೆ ನೋಡಬಾರದು,
ಏಕೆಂದರೆ ಪ್ರೀತಿಗಿಂತ ಬದುಕು ಮುಖ್ಯ ಕಾಣ್ರಿ.ಇಪ್ಪತ್ತು ವರ್ಷ ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ ಅಮ್ಮರ ವಾತ್ಸಲ್ಯಕ್ಕಿಂತ ಬೇಸ್ ಇಲ್ಲದ ಲವ್ ನ್ನು ನಂಬಿಕೊಂಡು,ಅದ್ಯಾರೋ ಕೈ ಕೊಟ್ರು ಅಂತ ದೇವದಾಸ್ ಆಗೋ ಅದೆಷ್ಟೋ ಜನ ಕ್ಷಣಿಕ ಪ್ರೀತಿಯ ಗುಲಾಮರಾಗಿ,ತಮ್ಮ ಬದುಕನ್ನು ಬಲಿಕೊಡುವುದರ ಜೊತೆಗೆ ಹೆತ್ತವರ ಕರುಳಿಗೆ ಆಸಿಡ್ ಹಾಕೋ ಈ ತರದ ಮಂದಿಗೆ ಹೇಳೋರು ಯಾರು!?ಪ್ರೀತಿಯ  ಆಕಾಂಕ್ಷಿಗಳಾಗುವ ಬರದಲ್ಲಿ ಇಡೀ ಬದುಕು ಬಲಿಯಾಗಬೇಕೇ!?
ನನ್ನ ಪ್ರಕಾರ ಸಮಸ್ಯೆಗಳಿಲ್ಲದ ಪ್ರೀತಿಗೆ ಪ್ರೋತ್ಸಾಹಿಸಬೇಕು.ಆದರೆ ಅದೇ ಪ್ರೀತಿ ಎಷ್ಟೋ ಬದುಕನ್ನು ಬಲಿ ತೆಗೆದುಕೊಳ್ಳುತ್ತದೆ ಅಂದರೆ ಅದನ್ನು ಕಿತ್ತೋಗೆಯಬೇಕು.ಲವ್ ಎಂಬ ಪ್ರೀತಿಗಿಂತ ಆಪ್ಯಾಯತೆ ನೀಡೋ ಜೀವನ ಪ್ರೀತಿ ದೊಡ್ಡದು.ಯಾರ ಬದುಕಿಗೂ ತೊಂದರೆ ಆಗದ ಪ್ರೀತಿ ಶಾಶ್ವತ ಸಂತೋಷ ನೀಡುತ್ತದೆ ಅಂತಾದರೆ ಅದನ್ನು ಒಪ್ಪಿಕೊಳ್ಳೋಣ.ಲವ್ ಫೇಲ್ ಆದ ತಕ್ಷಣ ಬದುಕೇ ಮುಗಿದುಹೋಯಿತು ಅಂದುಕೊಳ್ಳಬೇಡಿ.
ನೆನಪಿರಲಿ,ಯಾರೋ ಕೈ ಕೊಟ್ಟ ಮಾತ್ರಕ್ಕೆ ನಮ್ಮ ಜೀವನ ಮುಗಿಯೋದಿಲ್ಲ.ಅದು ಹೊಸ ಸುಂದರ ಬದುಕಿನ ಪ್ರಾರಂಭ ಎನ್ನೋದು ನೆನಪಿರಲಿ.
#ವೆಂಕಟೇಶಸಂಪ.
#ಓದಿಸಂಪದಸಾಲುಪತ್ರಿಕೆ 
Repost

our group

ಸ್ನೇಹಿತರೇ ಇದು ಸಂಪದ ಸಾಲು ಪತ್ರಿಕೆಯ ಮುಖಪುಸ್ತಕದ ಮುಖಪುಟ. 
ಇಲ್ಲಿ ಎಲ್ಲಾ ಸಹೃದಯರ  ಬರವಣಿಗೆಗೆ ಅವಕಾಶವಿದೆ.
ಯಾವುದೇ ನೆಗಟಿವ್ ಮತ್ತು ಕ್ರೈಂ ಹಾಗು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶವಿಲ್ಲ.  
ಸಾಹಿತ್ಯ,ಪ್ರಚಲಿತ ವಿಧ್ಯಮಾನ, ಕತೆ,ಕವನ,ಲೇಖನಗಳು,ಚುಟುಕು,ವಿಜ್ಞಾನ,ಇತಿಹಾಸ,ಅಡುಗೆ,ಆರೋಗ್ಯ,ಪುರಾಣ,ಸ್ಪೂರ್ತಿದಾಯಕ ಬರವಣಿಗೆ ಹೀಗೆ ಎಲ್ಲಾ ತರಹದ ಬರವಣಿಗೆಗಳಿಗೆ ವೇದಿಕೆ ಈ ಗ್ರೂಪ್.
ಯಾವುದೋ ಗ್ರೂಪ್ ನ ಲಿಂಕ್ ಮತ್ತು ಅಶ್ಲೀಲ ಬರವಣಿಗೆಯನ್ನು ಅಪ್ರುವಲ್ ಮಾಡುವುದಿಲ್ಲ.
ಇಲ್ಲಿ ತುಂಬಾ ಚೆನ್ನಾಗಿ ಬರೆಯುವವರ ಬರಹಗಾರರಿಗೆ ನಮ್ಮ ಸಂಪದ ಸಾಲು ಪತ್ರಿಕೆಯಲ್ಲಿ ಬರೆಯಲು ಅವಕಾಶವಿದೆ.
ನಮ್ಮ ಸಂಪದ ಸಾಲು ಪತ್ರಿಕೆಯ ಚಂದಾದಾರರಾದರೆ ನಿಮ್ಮ ಮನೆಗೆ ತಿಂಗಳಿಗೊಂದು ಸುಂದರ ಕೌಟುಂಬಿಕ ಪತ್ರಿಕೆ ತಲುಪುತ್ತದೆ.
ನಿಮ್ಮೆಲ್ಲ ಕನ್ನಡದ ಗೆಳೆಯರನ್ನು ಗ್ರೂಪಿಗೆ ಸೇರಿಸಬಹುದು ಮತ್ತು ಅವರಿಗೂ ಬರವಣಿಗೆ ಮತ್ತು ಓದುವ ಅಭ್ಯಾಸ  ಮಾಡಿಸಬಹುದು.
ಸಂಪರ್ಕಿಸಿ 9448219347  

https://www.facebook.com/groups/223327021059508/

someway

ರಾತ್ರಿ ಪಯಣ

ಬದುಕು  ರಾತ್ರಿಯ ಪಯಣ
ಅಲ್ಲಲ್ಲಿ ಮಿಣುಕು ದೀಪ
ಸುತ್ತಲೂ ಕಗ್ಗತ್ತಲು
ನಮ್ಮ ಪಯಣದಲ್ಲಿ ಎದುರು ಸಣ್ಣ ಬೆಳಕು ದೊಡ್ಡ ಬೆಳಕಿನೆಡೆಗೆ ಸಾಗುವೆವೆಂಬ ಅಧಮ್ಯ ವಿಶ್ವಾಸ!  

ಕಿಟಕಿಯೊಳಗಿನ ಜೀವನದಂತೆ ಕುಳಿತಿದ್ದೇವೆ
ಸ್ವಲ್ಪ ತೆರೆದರೆ ಸೂಂಯ್ ಎಂಬ ನಿನಾದ
ಕತ್ತಲೆಯ ನಡುವೆಯೂ ದಾರಿ ಸಾಗುತ್ತಿದೆ
ಆಕಾಶವೆಂಬ ಅನಂತತೆಯಲ್ಲಿ ನಕ್ಷತ್ರ ಮಿನುಗಿದೆ  

ದಾರಿ ಸಾಗುತ್ತಿದ್ದಂತೆ 
ಕತ್ತಲೆ ಕಳೆಯುತ್ತಿದೆಯೆಂಬ ಭಾವ ಮೂಡುತ್ತಿದೆ
ಕರಿಬಾನಿನ ಮಿನುಗು ದೀಪ ಬೆಳಕಿನ ಪಾಠ ಹೇಳಿದೆ
ಸಮಯ ಕಳೆಯುತ್ತದೆ ಜೊತೆ ಕತ್ತಲೆಯೂ ಕೂಡ   
ಬೆಳಕಿನಾಗಮನವಾದಂತೆ ಸಂತೋಷದ ಛಾಯೆ ಮೂಡಿದೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

someway

ಬದುಕು ಹಗಲಿನ ಪಯಣ
ಪಯಣದುದ್ದಕ್ಕೂ ಹಸಿರಿದೆ, ಒಂದಷ್ಟು  ಬಂಗಲೆ, ಮತ್ತಷ್ಟು  ಗುಡಿಸಲು,ಅಲ್ಲಲ್ಲಿ ಝರಿ ಹೊಳೆ ಹಾದಿ,ಗುಡ್ಡ ಬೆಟ್ಟ ಏರು ಇಳಿತ,
  ಕೆಲವೊಮ್ಮೆ  ಬರಿ ದಾರಿ...  
ದಾರಿಯುದ್ದಕ್ಕೂ ಬೆಳಕಿದೆ 
ನೋಡಿದಷ್ಟೂ ಖುಶಿಯಿದೆ
ಮತ್ತದೇ ಕಿಟಕಿಯೊಳಗೆ ಕುಳಿತಿದ್ದೇವೆ
ಶೋಕೆಸಿನ ಗೊಂಬೆಯಂತೆ 
ಬಾಗಿಲು ತೆರೆದಿರೋ 
ಉಸಿರು ನಿರಾಳ...
ತೆರೆದುಕೊಂಡಷ್ಟು ಬದುಕಿದೆ. ...
ಸಾಗುತ್ತಿದೆ ಪಯಣ...
 ಸಾಗಲೇಬೇಕು ...
..ಹೊತ್ತು ಮುಳುಗುವ ಮುನ್ನ  
ಕತ್ತಲೆಯಾವರಿಸುವ ಮುನ್ನ
ಬೆಳಕಿನ ಬದುಕು ಅನುಭವಿಸಲೇಬೇಕು...
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 
9448219347

someway

ಮನಸ್ಸು ಯಾವಾಗಲೂ  ಮಗುವಿನಂತೆ,ಆದರೆ ನಾವು ದೊಡ್ಡವರಾದಂತೆ ಮುಖವಾಡ ಧರಿಸುತ್ತೇವೆ,ಭಾವಗಳನ್ನು ಬಚ್ಚಿಟ್ಟುಕೊಳ್ಳುತ್ತೇವೆ,ದೊಡ್ಡವರಾಗಿದ್ದೇವೆಂದು ತೋರಿಸುವ ಬರದಲ್ಲಿ ನಮ್ಮ ಮುಗ್ದ ಮನಸ್ಸನ್ನು ಮರೆಮಾಚದೇ ಮಕ್ಕಳ ಮನಸ್ಥಿತಿ ಗೆ ಇಳಿದಾಗ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.*ವೆಂಕಟೇಶ ಸಂಪ.
ಓದಿ ಸಂಪದ ಸಾಲು

someway

ರಾತ್ರಿ ಕಳೆದಂತೆ ಹಗಲು ಬರುತ್ತದೆ.ಕಷ್ಟಗಳು ಕಳೆದಂತೆ ಸುಖವು ಆವರಿಸುತ್ತದೆ.ಆಲೊಚನೆಗಳು ಸ್ಪಷ್ಟವಾದಂತೆಲ್ಲಾ ದಾರಿ ಸುಗಮವಾಗುತ್ತದೆ.ಗುರಿಯ ಬಗ್ಗೆ ಏಕಾಗ್ರತೆ ಮೂಡಿದರೆ ಸಾಧನೆ ಸುಲಭವಾಗುತ್ತದೆ.ಮನಸ್ಸು ವಿಕ್ರುತವಾದರೆ ಜಗತ್ತು ವಿಕ್ರುತವಾಗಿ ಕಾಣುತ್ತದೆ.ಅಂತರಂಗದ ಕಣ್ಣು ಮಸುಕಾಗದಂತೆ ನೋಡಿಕೊಂಡಾಗ ಆತ್ಮೀಯತೆಯ ಜೀವನ ನಮ್ಮದಾಗುತ್ತದೆ.ಸಾಧನೆಯ ಶಿಖರವೇರುವ ಸಂತೋಷ ಸದಾ ನಮ್ಮಲ್ಲುಳಿಯುತ್ತದೆ.......ಓದಿ ಸಂಪದ ಸಾಲು

.ಓದಿ ಸಂಪದ ಸಾಲು

ಒಳ್ಳೆಯವರಿಗೆ ಒಳ್ಳೆತನದಲ್ಲಿ ಉತ್ತರಿಸುತ್ತಾ ಬದುಕಬೇಕು.ಆದರೆ ಫಟಿಂಗರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಬೇಕು.
ಫಟಿಂಗರಿಗೂ ಒಳ್ಳೆಯವನಂತೆ ಉತ್ತರಿಸುವುದು ನಮ್ಮ ದೌರ್ಬಲ್ಯ ಆಗಬಾರದು.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಲ್ಲವೇ!?
ಒಳ್ಳೆಯವರಂತೆ ನಟಿಸುವ ಫಟಿಂಗರ ಬಗ್ಗೆ ಜಾಗರೂಕರಾಗಿರಬೇಕು.
*ವೆಂಕಟೇಶ ಸಂಪ.ಓದಿ ಸಂಪದ ಸಾಲು,

ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ

ಅಮವಾಸ್ಯೆಯ ದಿನ...!
ಕಾರ್ಗತ್ತಲ ರಾತ್ರಿ.....!?
,,,,,,,,,,

ಒಬ್ಬ,

ಇನ್ನು ಬೆಳಕು ಬರುವುದಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ........!?


ಮತ್ತೊಬ್ಬ......

ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆಂದು.....ಆಕಾಶ ನೋಡುತ್ತಾ ಕುಳಿತ..... 

ಆತನ ತಾಳ್ಮೆ ಫಲ ಕೊಟ್ಟಿತು........



ಕಾರ್ಗತ್ತಲೆಯ ಜಾಗದಲ್ಲೀಗ ಬೆಳಕು ತುಂಬಿದೆ.......

ಓದಿ ಸಂಪದ ಸಾಲು.

ಸಂway52

ಸಂway52,
ಕೆಲವರ ಬದುಕೇ ಹಾಗೆ!ಉಸುಕಿನ ಮೇಲಿನ ಪ್ರಯಾಣದಂತೆ.ಪ್ರತಿ ಹೆಜ್ಜೆಯೂ ಹುಗಿಯುತ್ತಿರುತ್ತದೆ.ಪಯತ್ನ ಪಟ್ಟು ಆದಷ್ಟು ಬೇಗ ಗಟ್ಟಿ ನೆಲಕ್ಕೆ ಬಂದರೆ ಮಾತ್ರಾ ಸುಂದರ ಗಟ್ಟಿ ಬದುಕು ತೆರೆದುಕೊಳ್ಳುತ್ತದೆ.ಗಟ್ಟಿ ನೆಲಕ್ಕೆ ಬರದೇ ಅಯ್ಯೋ ನಾ ಉಸುಕಿನಲ್ಲಿ ಮುಳುಗುತ್ತಿದ್ದೇನೆ.ನನ್ನ ಹಣೆಬರಹವೇ ಇಷ್ಟು.ನನ್ನ ಪ್ರಾರಾಬ್ದ ಎಂದು ಕೊರಗುವವ ಎಂದೂ ಸಂತೋಷದ ಲವಲೇಶವನ್ನೂ ಪಡೆಯಲಾರ.*ವೆಂಕಟೇಶ ಸಂಪ.ಓದಿ ಸಂಪದ ಸಾಲು,

ವಿಮರ್ಶೆ ಮತ್ತು ಟೀಕೆ

ವಿಮರ್ಶೆ ಮತ್ತು ಟೀಕೆ        -  

ವಿಶ್ಲೇಷಣೆಗು ಮತ್ತು ಟೀಕೆಗು ವ್ಯತ್ಯಾಸವಿದೆ.ವಿಶ್ಲೇಷ­
ಣೆ ಪರಿವರ್ತನೆ ತರುವಂತಿರಬೇಕು.ಟೀಕೆ
ಎನ್ನುವುದು ಇನ್ನೊಬ್ಬರ ಬಗ್ಗೆ ತನ್ನ
ಕೊಳಕು ಮನಸ್ಸಿನ ಅನಾವರಣವೇ ವಿನಹ
ಅದರಿಂದ ಸಾಮಾಜಿಕ ಬದಲಾವಣೆ ಅಸಾದ್ಯ.
ವಿಚಾರಗಳಲ್ಲಿ ವೈರುಧ್ಯತೆ
ಇರಬಹುದು.ಆದರೆ ವ್ಯಕ್ತಿಯ ಮೇಲೆ
ದ್ವೇಷ ಇರಬಾರದು.ವಿಮರ್ಷಿಸುವ
ಮೊದಲು ಆ ವಿಚಾರದಲ್ಲಿ
ನಾವು ಪ್ರಾವೀಣ್ಯತೆಯನ್ನು ಹೊಂದಿರಬೇಕು.ಟೀಕಿಸುವವರ
ಬಗ್ಗೆ ತಲೆ ಕೆಡೆಸಿಕೊಳ್ಳಬಾರದು.ಏಕೆಂದರೆ
ನೆಗೆಟೀವ್ ಆಲೋಚನೆಗಳಿದ್ದವರಿಂದ
ಯಾವತ್ತೂ ಪ್ರಯೋಜನವಿಲ್ಲ.ವಿಕ್ರುತ
ಮನಸ್ಥಿತಿಯವರನ್ನು ದೂರವಿಟ್ಟು...ಸಕಾರಾತ್ಮ­
ಕವಾಗಿ ವಿಷಯವನ್ನು ವಿಶ್ಲೇಷಿಸಿದಾಗ
ಜ್ಞಾನ ಹೆಚ್ಚಾಗುವುದು..ಅದಕ್ಕೇ
ಹೇಳುವುದು.'ಸಗಣಿ ಜೊತೆ
ಸರಸವಾಡುವುದಕ್ಕಿಂತ ಗಂಧದ ಜೊತೆ
ಗುದ್ದಾಡಬೇಕು'ಅಂತ.
ರಾಜಕಾರಣಿಗಳು ಮತ್ತು ಕೀಳು ಅಭಿರುಚಿಯ
ಕೆಲವು ಬುದ್ದಿಜೀವಿಗಳು ಈ ತೆರನಾದ
ಟೀಕೆಯನ್ನು ಮಾಡುತ್ತಾರೆ.ಇವರಿಗೆ
ವಿಮರ್ಷಿಸುವ ತಾಳ್ಮೆ
ಇರುವುದಿಲ್ಲ.ಪುಕ್ಸಟ್ಟೆ ಪ್ರಚಾರ
ಸಿಗುತ್ತದೆ ಎಂಬ ಕಾರಣಕ್ಕೆ
ಯಾರ್ಯಾರನ್ನೋ ಟೀಕೆ
ಮಾಡುತ್ತಾರೆ.ಇತ್ತೀಚೆಗೆ ನರೇಂದ್ರ
ಮೋದಿಯ ಬಗ್ಗೆ
ಸಿದ್ರಾಮಯ್ಯನವರು ಕೊಟ್ಟ
ಹೇಳಿಕೆಯನ್ನೇ ನೋಡಿ.'ಯಾವುದೇ ಆಧಾರವಿಲ್ಲದೆ
ನರಹಂತಕ ಯೆಂದಿದ್ದರ ಪರಿಣಾಮ ತೀವ್ರ
ಮುಖಭಂಗಕ್ಕೆ ಈಡಾದರು.ಅನಂತಮೂರ್ತಿ
ದೇಶ ಬಿಟ್ಟು ಹೋಗುತ್ತೀನಿ ಅಂತ ಹೇಳಿಕೆ
ಕೊಟ್ಟು ನಗೆಪಾಟಲಾದರು.ಇವೆಲ್ಲವೂ
ಕೆಟ್ಟ ಟೀಕೆ ಗೆ ಉದಾಹರಣೆ.ಇಲ್ಲಿ
ಎದುರು ವ್ಯಕ್ತಿಯನ್ನು ಬೈಯ್ಯುವುದೇ ಉದ್ದೇಶವಾಗಿರುತ್ತದೆ..ಇಂತವರು ತಮ್ಮ
ವ್ಯಕ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಾರೆ.



ಓದಿ ಸಂಪದ ಸಾಲು
www.sampadasaalu.blogspot.com

ಹಿಂದು ಎನ್ನುವುದು ಕೇವಲ ಧರ್ಮವಲ್ಲ.ಅದೊಂದು ಶ್ರೇಷ್ಟ ಬದುಕು.

ಹಿಂದು ಎನ್ನುವುದು ಕೇವಲ ಧರ್ಮವಲ್ಲ.ಅದೊಂದು ಶ್ರೇಷ್ಟ ಬದುಕು.ಕಲ್ಲು ಮಣ್ಣು ಹುಲ್ಲು ಮರ ಗಿಡ ಹೀಗೆ  ಪ್ರಕ್ರುತಿಯ ಪ್ರತಿಯೊಂದರಲ್ಲು ದೈವತ್ವವನ್ನು ಕಾಣುವುದು ಬಹುಶ ನಮ್ಮ ಈ ಜೀವನ ಪದ್ದತಿಯಲ್ಲಿ ಮಾತ್ರ ಸಾದ್ಯ.
ಆತ್ಮೀಯತೆ.ಸ್ವಾತಂತ್ರ್ಯ.ಉತ್ತಮ ಆರೋಗ್ಯ.ಪಾಸಿಟೀವ್ ಆಲೋಚನೆ.ಎಲ್ಲರನ್ನೂ ತನ್ನವರೆಂದು ಒಪ್ಪಿಕೊಳ್ಳುವ ಬಗೆ ಜಗತ್ತಿನ ಇನ್ಯಾವ ದೇಶದಲ್ಲೂ ಸಿಗುವುದಿಲ್ಲ.ಇಲ್ಲಿ ಪ್ರತಿಯೊಂದು ಸಂಬಂದಕ್ಕು ಅರ್ಥವಿದೆ.ಆಚರಣೆಗು ವೈಜ್ನಾನಿಕ ಮಹತ್ವವಿದೆ.
ಕೇವಲ ಲೌಕಿಕವಲ್ಲದ  ಅಂತರಂಗದ ಜಗತ್ತಿನ ಪೂರ್ಣ ಹೂರಣವಿದೆ.ಪ್ರಸ್ತುತ ಬದುಕಿನ ಅನಾವರಣವಿದೆ.ಅಸಾದ್ಯತೆಯಲ್ಲೂ ಸಾದ್ಯತೆಗಳನ್ನು ಹುಟ್ಟಿಸುವ ಶಕ್ತಿಯಿದೆ. ಯಾವ ಧರ್ಮವನ್ನೂ ವಿರೋದಿಸದೆ ಎಲ್ಲರನ್ನೂ ಪ್ರೀತಿಸುವ ಸಹಬಾಳ್ವೆ ಇದೆ..ಅಹಂಕಾರವಿಲ್ಲದ ಅಭಿಮಾನವಿದೆ.ಅಸೂಯೆ ಇಲ್ಲದ ಪ್ರೀತಿಯಿದೆ.ಯಾರು ಏನೇ ಹೇಳಿದರೂ  ಯಾವ ದ್ರುಷ್ಟಿಯಲ್ಲಿ ನೋಡಿದರೂ ಇದೊಂದು ಕೇವಲ ಧರ್ಮವಲ್ಲ...ಇದೊಂದು ಆದರ್ಶ ಬದುಕು..ಓದಿ ಸಂಪದ ಸಾಲು

www.sampadasaalu.blogspot.com

ಬೆಂಗಳೂರು ಬಕಾಸುರನ ಹಸಿವು ನೀಗಿಸಲು ಮಲೆನಾಡಿನ ಬಲಿ. #ವೆಂಕಟೇಶಸಂಪ

ಬೆಂಗಳೂರು ಬಕಾಸುರನ ಹಸಿವು ನೀಗಿಸಲು ಮಲೆನಾಡಿನ ಬಲಿ.
         #ವೆಂಕಟೇಶಸಂಪ 
ಇದೇ ಅಲ್ವಾ ದುರಂತ ಎಂದರೆ.... ಗಾಯದ ಮೇಲೆ ಗಾಯ, ಬರೆಯ ಮೇಲೆ ಬರೆ...
ಮಲೆನಾಡಿನ ಪ್ರತಿ ಹಳ್ಳಿಯೂ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿದೆ.
ಇಡೀ ದೇಶಕ್ಕೆ ಬೆಳಕು ಕೊಟ್ಟ ಶರಾವತಿ ತೀರದ ಬಹುತೇಕ ಜನರು ಈಗಾಗಲೇ ಭೂಮಿ ಬದುಕು ಎಲ್ಲಾ ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ಸ್ವಾತಂತ್ರ್ಯ ನಂತರ ಬಂದ ಈವರೆಗಿನ ಯಾವ ಜನಪ್ರತಿನಿಧಿಯೂ ಮಲೆನಾಡಿನ ಬಗ್ಗೆ ಕಿಂಚಿತ್ತೂ     ಗಮನಹರಿಸಿಲ್ಲ. ಯಾವಾಗಲೋ ಯಾವ್ಯಾವುದೋ ಅಧಿಕಾರಿ ಬಂದು ತನಗಿಚ್ಛೆ  ಬಂದಂತೆ ಬರೆದು ಇನ್ಯಾವುದೋ ತಲೆಬುಡವಿಲ್ಲದ ಯೋಜನೆ ಪ್ರಕಟಿಸಿ, ಪ್ರತಿಭಟಿಸಲು ಶಕ್ತಿಯಿಲ್ಲದ ಮಲೆನಾಡಿಗರನ್ನು ಬೆಂಕಿಯಿಂದ ಬಾಣಲೆಗೆ ಹಾಕಿದ್ದೇ ಹೆಚ್ಚು ...ರಸ್ತೆಗಳಿಲ್ಲ. ದೇಶಕ್ಕೆ ಬೆಳಕು ಕೊಡುವ ಮಲೆನಾಡಿಗೆ ಸರಿಯಾಗಿ ವಿದ್ಯುತ್ತಿಲ್ಲ. ಸರಿಯಾದ ಆಸ್ಪತ್ರೆ ಇಲ್ಲ, ಶರಾವತಿ ಬೈ ಬ್ಯಾಕ್ ಎಂಬ ಒಕ್ಕಲೆಬ್ಬಿಸುವ ಭೂತ, ಫೋನು, ಶಾಲೆ, ನೀರು, ಸರಿಯಾದ ಅಷ್ಟೇ. ಊಹುಂ ಯಾವ ಸೌಲಭ್ಯ ಕೇಳಬೇಡಿ, ಯಾವುದೇ ಬದ್ದತೆಯ ನಾಯಕ ಈ ಕ್ಷಣದವರೆಗೂ ಮಲೆನಾಡಿಗೆ ಸಿಗದ ಕಾರಣವೇ  ನೋಡಿ ಅದೆಷ್ಟೋ ವರದಿಗಳು ಜನರ ಗಮನಕ್ಕೇ ಬಾರದೇ ಅನುಷ್ಠಾನದ ಹಂತ ತಲುಪಿದೆ.   
ಕೇಳುವವರಾರು? ಹೇಳುವರಾರು?
ಅಂತಹವರೇ ಹಣದ ಹಿಂದೆ ಬಿದ್ದಾಗ,   ನಿರ್ಲಕ್ಷ್ಯಕ್ಕೆ  ಜಾರಿದಾಗ ಯಾರನ್ನು ಕೇಳೋಣ?  
60 ವರ್ಷವಾದರೂ ಔಷಧಿ ಕಂಡುಹಿಡಿಯದ ಮಂಗನ ಕಾಯಿಲೆ, ಓದಲು ಸರಿಯಾದ ಜಾಗವಿಲ್ಲ, ಕಛೇರಿಗಳಲ್ಲಿ ಕೆಲಸವಾಗುವುದಿಲ್ಲ.
ಕಷ್ಟ ಕೇಳಬೇಕಾದ ಜನಪ್ರತಿನಿಧಿಯೂ  ಕತೆ ಹೇಳಿ ಕಳುಹಿಸುತ್ತಾನೆ .ಮಲೆನಾಡಿಗರು ಎಂದಿನಂತೆ ಮೌನವಾಗಿದ್ದಾರೆ.

ಇದೆಲ್ಲದರ ನಡುವೆ  ಬೆಂಗಳೂರೆಂಬ ಬಕಾಸುರನ ಹೊಟ್ಟೆಗೆ ಮಲೆನಾಡಿನ ಜೀವನದಿಯಾದ ಶರಾವತಿಯನ್ನು ಬಲಿಕೊಡಲು ಕ್ರಿಯಾಯೋಜನೆ ಸಿದ್ಧವಾಗುತ್ತಿದೆ.   ಮನುಷ್ಯನ ಸ್ವಾರ್ಥಕ್ಕೆ ಮಲೆನಾಡೇ ಬಯಲುಸೀಮೆಯಾಗಿ ನೀರಿನ ಕೊರತೆಯಲ್ಲಿರುವಾಗ ಬೆಂಗಳೂರಿನ ಬಕಾಸುರನ ಹಸಿವು ನೀಗಿಸಲು ಯೋಜಿಸುವುದರಲ್ಲಿ ಅರ್ಥವಿದೆಯೇ?

ಬರೋಬ್ಬರಿ 400 ಕಿಲೋಮಿಟರ್ ದೂರ, 2 ಕೋಟಿ ಜನಸಂಖ್ಯೆ,   12500 ಕೋಟಿ ಆರಂಭಿಕ ವೆಚ್ಚ,ಲಕ್ಷಾಂತರ ಎಕರೆ ಜಮೀನು ಕಾಡು ನಾಶ, ಶರಾವತಿಯ ಒಡಲಿನ ರಕ್ಷಣೆಯ ಬದಲು ಅದರ ಹನನ. 
ಈಗಾಗಲೇ ಬೆಳಕು ಕೊಟ್ಟ ಶರಾವತಿ ತೀರದ ಬಹುತೇಕ ಜನ ನರಳುತ್ತಿದ್ದಾರೆ. ಅವರನ್ನು ಸಂಪೂರ್ಣವಾಗಿ ನಾಶ ಮಾಡುವ ಹುನ್ನಾರಕ್ಕೆ ಎದಿರೇಟು ಕೊಡುವವರ್ಯಾರು?
ಕೇವಲ ಮನವಿ ಕೊಟ್ಟು ಈ ಯೋಜನೆ ಮಾಡಬೇಡಿ ಎಂದರೆ ಏನಕ್ಕೂ ಸಾಕಾಗುವುದಿಲ್ಲ.  ಮಲೆನಾಡಿನ  ಎಲ್ಲಾ ಶಾಸಕರು, ಸಂಸದರು,     ತಾಲ್ಲೂಕು, ಜಿಲ್ಲೆ ಗ್ರಾಮ ಪಂಚಾಯತಿ ಸದಸ್ಯರು, ಎಲ್ಲರೂ ಒಟ್ಟಾಗಿ ಪಕ್ಷಭೇದ ಮರೆತು   ಮಾಜಿ ಹಾಲಿ ರಾಜಕಾರಣಿಗಳು ಒಟ್ಟಾಗಿ ನಿಲ್ಲಿಸಲೇಬೇಕೆಂಬ ಹಠ ತೊಟ್ಟರೆ ಮಾತ್ರ ಮಲೆನಾಡು ಉಳಿಯುತ್ತದೆ. ಕೇವಲ ಮನವಿ ಪತ್ರ ಕೊಟ್ಟು ಸುಮ್ಮನಾದರೆ ಏನೂ ಉಪಯೋಗವಿಲ್ಲ.   
ಮಲೆನಾಡಿನ ಮಡಿಲಿನ ಎಲ್ಲಾ ಸಹೃದಯರೂ ಹೋರಾಡಬೇಕಿದೆ. ನಮ್ಮ ಸಂಪದ ಸಾಲು ಪತ್ರಿಕೆ ಕೂಡ ಜನರ ಹೋರಾಟಕ್ಕೆ ಸಾಥ್ ನೀಡಲಿದೆ. 
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 
9448219347
sampadasaalu@gmail.com
#savemalenadu #SaveSharavathi

ನೀವಿದನ್ನು ಶೇರ್ ಮಾಡಲೇಬೇಕು....ನೀರು ಉಳಿಸಿ... ಬದುಕು ಬೆಳೆಸಿ.... ಕೊಳವೆ ಬಾವಿ ಮುಚ್ಚುವುದರ ಬದಲು ಅದನ್ನು ಅಂತರ್ಜಲದ ವೃದ್ದಿಯಾಗುವಂತೆ ಮಾಡಬಹುದು # ವೆಂಕಟೇಶ ಸಂಪ

ನೀವಿದನ್ನು ಶೇರ್ ಮಾಡಲೇಬೇಕು....ನೀರು ಉಳಿಸಿ...   ಬದುಕು ಬೆಳೆಸಿ.... 

ಕೊಳವೆ ಬಾವಿ ಮುಚ್ಚುವುದರ ಬದಲು ಅದನ್ನು ಅಂತರ್ಜಲದ  ವೃದ್ದಿಯಾಗುವಂತೆ ಮಾಡಬಹುದು
                            # ವೆಂಕಟೇಶ ಸಂಪ

ತೆರೆದ ಬೋರ್ ವೆಲ್ ನಲ್ಲಿ ನೀರು ಬರಲಿಲ್ಲ ಎಂದ ಕಾರಣಕ್ಕೆ ಅದನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ.ಎಲ್ಲಾ ಟಿ ವಿ ಮಾಧ್ಯಮಗಳು ಕಂಡ ಕಂಡ ಕೊಳವೆ ಬಾವಿ ಮುಚ್ಚಿಸಿ ಅದೇ ಸಾಧನೆ ಅಂದುಬಿಡಬಹುದು...ಸರ್ಕಾರವೂ ಕೊಳವೆ ಬಾವಿ ಮುಚ್ಚಲು ಲಕ್ಷಾಂತರ ವ್ಯಯಿಸಬಹುದು....ಸಂಘಟನೆಗಳು ಕಲ್ಲು ಮುಚ್ಚಿ ಸುಮ್ಮನಾಗಬಹುದು....ಆದರೆ ಪಾಳು ಬಿದ್ದ ಬೋರ್ ವೆಲ್ ನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ..ಅದನ್ನೇ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧನವಾಗಿ ಬಳಸಬಹುದು..ನಿಮಗೆ ತಿಳಿದಿರಲಿ...ಭೂಮಿಯಲ್ಲಿನ ಅಂತರ್ಜಲ ಕುಸಿಯಲು ಕಾರಣವಾದದ್ದು ಇದೇ ಬೊರವೆಲ್ ಗಳು....ಅದೇ ಹಾಳು ಬಿದ್ದ ಬೋರವೆಲ್ ಗಳನ್ನು ಭೂಮಿಗೆ ನೀರು ತುಂಬಿಸುವ ಸಾಧನವಾಗಿ ಬಲಸಬಹುದೆಂದು ಯಾರು ಯೋಚಿಸಲಿಲ್ಲ....ಆಕಾಶದಲ್ಲಿ ಅರಮನೆ ಕಟ್ಟುವವರು ಮೊದಲು ಭೂಮಿಯಲ್ಲಿ ಗುಡಿಸಲು ಕಟ್ಟಿರಬೇಕು ಎಂದು..ಏಕೆಂದರೆ ಮಾದ್ಯಮಗಳು ಮತ್ತು ಜನ ಕೂಗಿದ ತಕ್ಷಣ ಸರ್ಕಾರ ಎಲ್ಲಾ ಕೊಳವೆ ಬಾವಿ ಮುಚ್ಚಿಸಬೇಕೆಂದು ನಿರ್ದೇಶನ ಕೊಟ್ಟರು....ಅದೇ ಈ ಮುಖ್ಯಮಂತ್ರಿಗಳು...ಸಚಿವರು...ಅಧಿಕಾರುಗಳು....ಮಾದ್ಯಮಗಳು ಸಾಮಾನ್ಯ ಜ್ಞಾನ ಉಪಯೋಗಿಸಬಹುದಿತ್ತು!?...ನೀರು ಬಾರದ ಕೊಳವೆ ಬಾವಿಯನ್ನು ಹೇಗೆ ಅಂತರ್ಜಲ ಹೆಚ್ಚಿಸುವ ಸಾಧನವಾಗಿಸಬಹುದು....ಈ ಲೇಖನ ಪೂರ್ತಿ ಓದಿದರೆ ತಿಳಿಯುತ್ತದೆ.

ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಮತ್ತು ಸಂಪದ ಜನ ಜಾಗೃತಿ ಬಳಗದ ವತಿಯಿಂದ ಅಂತರ್ಜಲ ಹೆಚ್ಚಳಕ್ಕೆ ಬೇರೆ ಬೇರೆ ತೆರನಾದ ಕೆಲಸ ಮಾಡುತ್ತಿದ್ದೇವೆ...

ಇವತ್ತು ಬೆಳಿಗ್ಗೆ ಎಂಟು ಗಂಟೆಗೆ ವ್ಯಕ್ತಿಯೊಬ್ಬ ಕರೆ ಮಾಡಿದ...ಅಣ್ಣಾ ಇಲ್ಲೊಂದು ನೀರು ಬಾರದ ಕೊಳವೆ ಬಾವಿ ಇದೆ..ನೀವು ಬನ್ನಿ..ವಿಡಿಯೋ ಮಾಡ್ಕೊಳ್ಳಿ...ಎಲ್ಲಾ ಟಿವಿ ಗಳಿಗೆ ಪೋನ್ ಮಾಡಿದೆ.ಯಾರು ಪೋನ್ ಎತ್ತಲಿಲ್ಲ...ದಯವಿಟ್ಟು ಬನ್ನಿ ಅಂದರು.....ಅದೀಗ ತಾನೆ ಬೆಳಗಾಗಿತ್ತು ನನಗೆ...ಅಣ್ಣಾ ಖಂಡಿತ ಬರ್ತಿನಿ...ನಾ ಬರುವವರೆಗೆ ಮುಚ್ಚಬೇಡ ಅಂದೆ.....ನನ್ನ ಆತ್ನೀಯರಾದ ಸೂರ್ಯನಾರಯಣ್ ಅವರನ್ನು ಕರೆದುಕೊಂಡು ಕಾರಲ್ಲಿ ಅಲ್ಲಿ ಹೋದೆ. ನನ್ನನ್ನು ನೋಡಿದ ಅಲ್ಲಿಯ ಜನ ದೊಡ್ಡ ದೊಡ್ಡ ಕಲ್ಲು ಹಿಡಿದು ಅದನ್ನು ಮುಚ್ಚಿಸಲು ಹೊರಟ್ರು.....ಎಲ್ಲಾ ಬನ್ನಿ ಅಣ್ಣಾ ಅಂತ...ಒಟ್ಟಿಗೆ  ಅಲ್ಲೇ ಮೀಟಿಂಗ್ ಗೆ ಕೂತೆವು.ನಾ ಹೇಳಿದೆ.ಈ ಕೊಳವೆ ಬಾವಿ ಮುಚ್ಚೋದು ಬೇಡ..ಇದನ್ನೇ ಇಂಗು ಗುಂಡಿ ಮಾಡೋಣ..ನಾಲ್ಕು ಇಂಚಿನ ಎರಡು ಪೈಪು..ಮತ್ತು ಒಂದು ಬೆಂಡು ಹಾಗು ರೆಡ್ಯೂಸರ್ ಪೈಪು ಹಾಗು ಒಂದು ಚಿಕ್ಕ ಫಿಲ್ಟರ್ ತನ್ನಿ ಅಂದೆ...  ನಾವು ಕಾಫಿ ಕುಡ್ಯೋ ಹೊತ್ತಿಗೆ...ಅಂತರ್ಜಲದ ಹೆಚ್ಚಿಸುವ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದೆ....ಆ ಪೈಪ್ ಗಳನ್ನು ತಂದ ವ್ಯಕ್ತಿ....ಬೋರ್ ಪಾಯಂಟ್ ಹತ್ರ ಕಳೆ ಸವರಿಸಿ..ಕ್ಲೀನ್ ಮಾಡಿಸಿದೆವು....ಆ ಇಪ್ಪತ್ತು ಅಡಿ  ಪೈಪ್ ಕೆಳಗೆ ಇಳಿಸಿದೆವು..ಎರಡನೆ ಪೈಪು ಸ್ವಲ್ಪ ಮಾತ್ರ....ಹೋಯ್ತು....ಭೂಮಿಯ ಅಳತೆಗೆ ಅದನ್ನು ಕೊಯ್ಡು ಬೆಂಡ್ ಹಾಕಿದೆವು.  ಆ ನಂತರ ರೆಡ್ಯೂಸರ್ ಪೈಪ್ ಹಾಕಿ...ಸಣ್ಣ ಪೈಪ್ ಅದಕ್ಕೆ ಜಾಯಂಟ್ ಮಾಡಿದೆವು...ಹಾಗು ಆ ಪೈಪಿನ ಒಳಗೆ ಮಳೆ ನೀರು ಹೋಗುವಂತೆ ಮಾಡಿ ಆ ನೀರನ್ನು ಭೂಮಿಗೆ ಇಂಗಿಸಲು ವ್ಯವಸ್ಥೆ ಮಾಡಿದೆವು....ಇನ್ನು ಸ್ವಲ್ಪ ಗ್ಯಾಪ್ ಇತ್ತು..ಗುದ್ದಲಿಯಿಂದ ಮಣ್ಣು ತುಂಬಿದರು.ಎಲ್ಲೋ ಹರಿದು ಸಮುದ್ರ ಸೇರಿ ವ್ಯರ್ಥ ವಾಗುವ ನೀರು ನಮ್ಮದೇ ಹೊಲದಲ್ಲಿ ಇಂಗಿತು ಎಂಬ ಖುಶಿ ಎಲ್ಲರ ಮುಖದಲ್ಲಿ ಮೂಡಿತು..

ಅಂತರ್ಜಲ ಹೆಚ್ಚಿಸಲು ಸರ್ಕಾರ ಎನೇನೋ ಯೋಜನೆ ಅನ್ನುತ್ತದೆ...ಆದರೆ ಇಷ್ಟು ಸರಳವಾದ ಕ್ರಮ ಇದ್ದರೂ ಯಾರು ಅನುಸರಿಸದೇ ಇರುವುದು ವಿಪರ್ಯಾಸ. . ಈ ವಾರದಲ್ಲಿ ಸಾವಿರಾರು ಕೊಳವೆ ಬಾವಿ ಮುಚ್ಚಿಸಿರಬಹುದು.....ಅದೆಲ್ಲವನ್ನು ಇಂಗುಗುಂಡಿಯಾಗಿ ಬದಲಾಯಿಸಿದ್ದರೆ ಬಹುಶಃ ಅಂತರ್ಜಲ ಮಟ್ಟ ಎಷ್ಟು ಏರುತ್ತಿತ್ತು ಎಂಬುದನ್ನು ನೆನಪಿಡಿ.....ಮುಚ್ಚುವುದಷ್ಟೇ ಪರಿಹಾರವಲ್ಲ...ಅದನ್ನು ಪಾಸಿಟಿವ್ ಆಗಿ ಪರಿವರ್ತಿಸುವುದೇ ಬುದ್ದಿವಂತಿಕೆ ಮತ್ತು ಅತ್ಯವಶ್ಯ.....ಸರ್ಕಾರ...ಟಿವಿ ಮಾದ್ಯಮಗಳು..ಅಧಿಕಾರಿಗಳು.ಸಂಬಂದ ಪಟ್ಟವರು ಇನ್ನಾದರೂ ಸಾಮಾನ್ಯ ಜ್ಞಾನ ಬಳಸಿ ಕೆಲಸ ಮಾಡಲಿ...ಅದಕ್ಕೇ ಹೇಳಿದ್ದು...."ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದಸಾಲು ಪತ್ರಿಕಾ ಅಭಿಯಾನ."ಅಂತ.. 
ಇನ್ನು ತೆರೆದ ಬಾವಿಗಳಿಗೆ ಮಳೆ ನೀರು ಇಂಗುವಂತೆ ಮಾಡೋಣ ... ಎಲ್ಲಾ ಕೊಳವೆ ಬಾವಿಗಳನ್ನು  ಇಂಗು ಗುಂಡಿಗಳಾಗಿ ಬದಲಾಯಿಸಿ ಅದನ್ನು ಮೇಲಿಂದ ಮುಚ್ಚೋಣ..ಯಾವ ಮಗುವು ಕೊಳವೆ ಬಾವಿಗೆ ಬೀಳಬಾರದು...ಹಾಗು ಕಡಿಮೆ ಹಣದಲ್ಲಿ ಹೆಚ್ಚು ನೀರನ್ನು ಭೂಮಿಗೆ ಇಂಗಿಸಿ ಅಂತರ್ಜಲ ಏರಿಸಿದ ಕೀರ್ತಿ ನಮಗೆ ಸಲ್ಲುತ್ತದೆ....ಇನ್ನೇಕೆ ತಡ....ಇದನ್ನು ಎಲ್ಲರಿಗೂ ತಲುಪುವಂತೆ ಶೇರ್ ಮಾಡಿ.......
9448219347
sampadasaalu@gmail.com
Venkatesha Sampa

ಆಧುನೀಕತೆಯ ಕನಸಿನಲ್ಲಿ

ಆಧುನೀಕತೆಯ ಕನಸಿನಲ್ಲಿ,  ಅಭಿವೃದ್ದಿಯ ಹೆಸರಿನಲ್ಲಿ ಪ್ರತಿಕ್ಷಣವೂ ಬೆಳವಣಿಗೆಗೆ ಹಂಬಲಿಸುವ ಮನುಷ್ಯ ಸಾಧಿಸುತ್ತಿರುವುದಾದರೂ ಏನನ್ನು?
ತಳಹದಿಯೇ ಇಲ್ಲದ ಸೌಧ ಕಟ್ಟುವ ಹುಚ್ಚು ಮನುಷ್ಯರ ಮನಸ್ಥಿತಿಗೆ ಏನು ಹೇಳೋಣ?     
ಮನುಷ್ಯ ಪ್ರಕೃತಿಯ ಮೇಲೆ ದೌರ್ಜನ್ಯ ಮಾಡಿದ್ದರ ಪರಿಣಾಮ ಹೀಗೆಲ್ಲಾ ಆಯ್ತು ಎನ್ನೋದಾದರೆ ಇದರ ನಡುವೆ ಪ್ರಾಣಿ ಪಕ್ಷಿಗಳು ಬಲಿಯಾದವಲ್ವಾ? ಅದಕ್ಕೇನು ಮಾಡೋದು?
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತಾಗಿ ಎಷ್ಟೋ ವರ್ಷ ಕಷ್ಟ ಪಟ್ಟು ಕಟ್ಟಿದ ವ್ಯವಸ್ಥೆ ಕ್ಷಣ ಮಾತ್ರದಲ್ಲಿ ಕೊಚ್ಚಿಹೋಯಿತು?
ನಮ್ಮ ದೇಶದ ಸರಿಸುಮಾರು 10 ದೊಡ್ಡ ನದಿಗಳು ,210 ಕ್ಕು  ಹೆಚ್ಚು ಸಣ್ಣನದಿಗಳಿಗೆ  ನಮ್ಮ ದೇಶದಲ್ಲಿ 3250 ದೊಡ್ಡ ಮತ್ತು ಮದ್ಯಮ ಗಾತ್ರದ ಆಣೆಕಟ್ಟು ಕಟ್ಟಿದ್ದೇವೆ. ಯಾವುದರಲ್ಲಿ ಎಷ್ಟು ಪ್ರಮಾಣದ ನೀರು ಬಿಟ್ಟರೆ ಎಷ್ಟು ಪ್ರದೇಶ ಮುಳುಗಡೆಯಾಗುತ್ತದೆ ಎಂಬ ನದಿ ಪ್ರದೇಶದ ಹರಿಯುವಿಕೆಯ ಜಾಗ ಮತ್ತು ದಾರಿ ಗುರುತಿಸುವ ಕೆಲಸ ಮಾಡದ ಬೇಜವಬ್ದಾರಿಯ ಹಳೆಯ ಆಡಳಿತ ವ್ಯವಸ್ಥೆಯೇ ಇಂದಿನ ಮಹಾಪ್ರವಾಹಕ್ಕೆ ಕಾರಣ.
ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ.ಕೊಟ್ಯಾಂತರ ಜನರ ನಷ್ಟ  ಅನುಭವಿಸಿದ್ದಾರೆ. ಲಕ್ಷಾಂತರ ಎಕರೆ ಜಮೀನು ನೀರುಪಾಲಾಗಿದೆ.ಲಕ್ಷಾಂತರ ಜಾನುವಾರುಗಳು ಕಾಡುಪ್ರಾಣಿಗಳು ಪಕ್ಷಿಗಳು ಜೀವ ಕಳೆದುಕೊಂಡವು. ನಿನ್ನೆಯವರೆಗೆ ಎಷ್ಟೋ ಜನಕ್ಕೆ ದಾನ ಕೊಡುತ್ತಿದ್ದ ಕೋಟ್ಯಾಧಿಪತಿಯೂ ಕೂಡ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.50 ಸಾವಿರ ಕೋಟಿಗೂ ಹೆಚ್ಚು ಅಧಿಕ ನಷ್ಟ ಸಂಭವಿಸಿದೆ.
ಇದಕ್ಕೆಲ್ಲಾ ಯಾರು ಹೊಣೆ?
ಪ್ರಕೃತಿ ಮೇಲಿನ ದೌರ್ಜನ್ಯವಾ?ಪ್ಲಾನ್ ಇಲ್ಲದೇ ನಿರ್ಮಿಸುವ ಯೋಜನೆಗಳಾ? ಸರ್ಕಾರವಾ?......
ನಮ್ಮವರ ನೋವಿಗೆ ನಾವೇ ಜೊತೆಯಾಗಬೇಕಿದೆ.ಎಲ್ಲದರಲ್ಲೂ ರಾಜಕಾರಣ ಮಾಡುವ ಜನರ ಹೊರತಾಗಿಯೂ ನಮ್ಮ ಕನ್ನಡಿಗರು ನಮ್ಮ ಕನ್ನಡದವರ ರಕ್ಷಣೆಗೆ ನಿಲ್ಲಬೇಕಿದೆ

ಇದನ್ನು ಒಪ್ಪಿಕೊಳ್ತಿರಾ?! ಹಾಗಿದ್ರೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

ಇದನ್ನು ಒಪ್ಪಿಕೊಳ್ತಿರಾ?! ಹಾಗಿದ್ರೆ  ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

ಯಾರು ನಮ್ಮನ್ನು ಗೌರವಿಸುತ್ತಾರೋ?!ಯಾರು ನಮ್ಮನ್ನು ಪ್ರೀತಿಸುತ್ತಾರೋ?! ಯಾರು ನಮ್ಮ ಕೆಲಸಗಳಿಗೆ ಜೊತೆಯಾಗಿ ಸಹಕರಿಸುತ್ತಾರೋ...?!ದೂರದಲ್ಲಿದ್ದರೂ ಇವರು ನಮ್ಮೋರು ಅಂತ ನಮ್ಮ ಬೆಳವಣಿಗೆಗೆ ಪೂರಕವಾಗಿ ನಿಲ್ಲುತ್ತಾರೋ?! ಯಾರು ನಮಗೆ ಕಷ್ಟ ಇದ್ದಾಗಲೂ ಏನು ಸಹಾಯ ಬೇಕು ಅಂತ ಕೇಳದೆಯೆ ತಮ್ಮಿಂದಾಗಬಹುದಾದ ಚಿಕ್ಕ ಸಹಾಯದ ಪ್ರಯತ್ನ ಮಾಡ್ತಾರೋ?! ಅವರೇ ನಮ್ಮ ನಿಜವಾದ ನೆಂಟರು...ನಿಜವಾದ ಗೆಳೆಯರು...ನಿಜವಾದ ಒಡನಾಡಿಗಳು...

ಯಾರು ನಮ್ಮನ್ನು ನಿರ್ಲಕ್ಷವಾಗಿ ನೋಡುತ್ತಾರೋ?!ಯಾರು ಸ್ನೇಹಿತರಂತೆ ಜೊತೆಗಿದ್ದು ಅಸೂಯೆ ಪಡುತ್ತಾರೋ?!ಯಾರು ಹಿತವಾಗಿದ್ದು ಶತ್ರುಗಳಂತೆ ನೆಡೆದುಕೊಳ್ಳುತ್ತಾರೋ?! ಯಾರು ನೆಂಟರಂತೆ ಇದ್ದರೂ ನಮ್ಮ ಏಳ್ಗೆಯನ್ನು ಹೀಯಾಳಿಸುತ್ತಾರೋ?!ಯಾರೋ ವಿಷಯವೇ ಗೊತ್ತಿಲ್ಲದಿದ್ದರೂ ಅಪಪ್ರಚಾರ ಮಾಡುತ್ತಾರೋ?!ಇವರೆಲ್ಲಾ ಯಾವತ್ತೂ ನಮ್ಮವರಲ್ಲ....

ಆದರೆ ಇಂತವರೂ ಇರಬೇಕು ಸಮಾಜದಲ್ಲಿ...ಏಕೆ ಗೊತ್ತಾ?!
 ದಾಸರು ಹೇಳಿದಂತೆ ಹೊಲಸು ತಿನ್ನುವವರು ಇದ್ದರೆ ಸ್ವಚ್ಚತೆ ಉಳಿಯುತ್ತದೆ...

ನಮ್ಮನ್ನು ಪ್ರೀತಿಸುವವರನ್ನು ಗೌರವಿಸೋಣ.ನಿಂದಕರನ್ನು ಸ್ವಚ್ಛಗೊಳಿಸುವ ಪ್ರಾಣಿಯಂತೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ....

"ಬದಲಾವಣೆ ಬರಲಿ.....ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಎಲ್ಲಿದೆ ಸ್ವಾಮಿ ಸ್ವತಂತ್ರ!? *ವೆಂಕಟೇಶ ಸಂಪ,

ಎಲ್ಲಿದೆ ಸ್ವಾಮಿ ಸ್ವತಂತ್ರ!?
          *ವೆಂಕಟೇಶ ಸಂಪ,
ಒಂದೆಡೆ ಸ್ವೆಚ್ಚಾಚಾರ ಮತ್ತೊಂದೆಡೆ ಜೀತದಾಳತ್ವ!?
ಒಂದೆಡೆ ಹೈ ಪ್ರೋಫೈಲ್ ಕೇಸ್ ಗಳಲ್ಲಿ ಶಿಕ್ಷೆಯಾದರೂ ಕಾನೂನಿನ ಲೂಪ್ ಹೋಲ್ಸ್ ಬಳಸಿ ಅಪರಾಧಿಯಾದರೂ ಅಟ್ಟಹಾಸ ಮಾಡೋರು.ಮಾಡದ ತಪ್ಪಿಗೆ ಬಡತನದಲ್ಲಿ ಶೋಷಿತರಾಗಿ ನರಳುವ, ಜೀತದಾಳಾಗಿ ಬದುಕುವವರು! ಇನ್ನೊಂದೆಡೆ,
ಇದಾ ಸ್ವಾತಂತ್ರ್ಯ!?
ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ಅನ್ನೋದು ಕೇವಲ ಜಾಹೀರಾತಿಗೆ ಸೀಮಿತವೇ!?
ಅತ್ಯಾಚಾರ,ಕೊಲೆ,ದರೋಡೆ ಮಾಡಿದರೂ ಸಮಾಜದ ಗಣ್ಯ ವ್ಯಕ್ತಿಯಂತೆ ಪೋಸ್ ಕೊಡ್ತಾ ಬದುಕುವ ಫಟಿಂಗರನ್ನು ನೋಡಿ ಸ್ವತಂತ್ರ ಅನ್ನಬೇಕೆ!?

ಚಿಕ್ಕದೊಂದು ಆದಾಯ ಧೃಡೀಕರಣ ಪತ್ರಕ್ಕಾಗಿ ತಿಂಗಳುಗಟ್ಟಲೇ ಸರ್ಕಾರಿ ಕಛೇರಿ ಅಲೆಯುವ ಹಳ್ಳಿಯ ವೃದ್ದನನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೇ!
ಅಧಿಕಾರ,ಹಣ ಇದೆ ಎಂಬ ಕಾರಣಕ್ಕೆ ಕಾನೂನನ್ನು ಮರೆತು ಸಾವಿರಾರು ಎಕರೆ ಜಮೀನನ್ನು ಮಂಜೂರು ಮಾಡೋದನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೋ!?
ಒಂದೆಡೆ ಹೊಟ್ಟೆಗಿಲ್ಲದ ಸ್ಥಿತಿ,ಇನ್ನೊಂದೆಡೆ ಮೃಷ್ಟಾನ್ನ ಭೋಜನ!ಇದಾ ಸ್ವಾತಂತ್ರ್ಯ!?
ಅನ್ನ ನೀಡೋ ಅನ್ನದಾತನಿಗೆ ಬೆಳೆ ಬೆಳೆಯೋಕೆ ಸೌಲಭ್ಯ ಕೊಡದೆ,ಬೆಳೆದ ಬೆಳೆಗೂ ಮಾರ್ಕೇಟ್ ಕೊಡದ ನಾವು ಸ್ವತಂತ್ರಿಗಳೇ?
ಉದ್ಘಾಟನೆ ಆಗುವ ಮೊದಲೇ ಉರುಳಿ ಬೀಳುವ ಸರ್ಕಾರಿ ಕಟ್ಟಡಗಳನ್ನು ಕಟ್ಟುವ ನಾವು ಹೊಂಡ ಬಿದ್ದ ರಸ್ತೆ ಮುಚ್ಚಲು ಹತ್ತು ವರ್ಷ ತೆಗೆದುಕೊಳ್ಳುತ್ತೇವೆ.ದುಡ್ಡಿದ್ದವರ ಕೆಲಸ ಮಾಡೋಕೆ ಹಿಂದೆ ಮುಂದೆ ನೋಡದ ಅಧಿಕಾರಿ ವರ್ಗ ಬಡವರ ಕೆಲಸ ಮಾಡಲು ಕಾನೂನು ಪುಸ್ತಕ ತೆಗೆಯುತ್ತದೆ.ದೊಡ್ಡ  ಕಳ್ಳರನ್ನು ಹಿಡಿಯಲಾಗದ ದುರವಸ್ಥೆ ಪಿಕ್ ಪಾಕೇಟ್ ಮಾಡಿದವನನ್ನು ಒಳಗೆ ಹಾಕಿ ಪ್ರಚಾರ ಪಡೆಯುತ್ತದೆ.ದುಡ್ಡಿಲ್ಲದೆ ಮತ ಹಾಕದ ಜನ ಶ್ರೇಷ್ಟ ನಾಯಕನ ಕನಸು ಕಾಣುತ್ತದೆ.ರಾವಣರೇ ರಾಮನ ಮುಖವಾಡ ಧರಿಸಿದಾಗ ನಂಬೋದಾದ್ರು ಯಾರನ್ನ!?ಎಗ್ಗಿಲ್ಲದೆ ಏರುವ ಕ್ರೈಮ್ ಗಳಿಗೆ ಶಿಕ್ಷಿಸುವ ಬದಲು ವಿಳಂಬ ನೀತಿಗೆ ನ್ಯಾಯಾಂಗವೂ ಸ್ಥಬ್ದವಾಗಿಹೋಗಿದೆ.ಸುದ್ದಿ ಮಾಡಿ ಜನರನ್ನು ತಲುಪುವ ಬಹುತೇಕ ಮಾಧ್ಯಮಗಳು ಟಿಆರ್ ಪಿ ಯ ಬೆನ್ನುಹತ್ತಿದೆ.ವ್ಯವಸ್ಥೆಯ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಆವರಿಸಿದಾಗ ಆರೋಗ್ಯವಂತ ಸಮಾಜದ ಕಲ್ಪನೆ ಮೂಡುವುದಾದರೂ ಹೇಗೆ!?ಅರವತ್ತೊಂಬತ್ತು ವರ್ಷದ ಹಿಂದೆ ಅರ್ಧರಾತ್ರಿಯ ನಿದ್ರೆಗಣ್ಣಿನಲ್ಲಿ ಪಡೆದ ಸ್ವಾತಂತ್ರ್ಯವೆಂಬ ಅನರ್ಘ್ಯ ರತ್ನ ಮಂಗನ ಕೈಗೆ ಕೊಟ್ಟ ಮಾಣಿಕ್ಯ ಆಯಿತೆ?!ಅಂದು ಶಾಂತಿಕಾರಿಗಳು,ಕ್ರಾಂತಿಕಾರಿಗಳು,ಸಾಮಾನ್ಯರು ಹೋರಾಡಿದ್ದು ,ಸ್ವತಂತ್ರರಾಗಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೇಲಿಬಿಟ್ಟಂತಾಯ್ತೆ!?
ಆಕಾಶಕ್ಕೆ ಕ್ಷಿಪಣಿ ಹಾರಿಸಿದ್ದೇವೆ,ಕೋಟ್ಯಾಂತರ ಬಂಡವಾಳ ತಂದಿದ್ದೇವೆ.ಬೆಳೆ ಬರಬೇಕಾದ ಜಾಗದಲ್ಲೆಲ್ಲಾ ವಿದೇಶಿ ದುಡ್ಡಿನ ಹೊಗೆ ಉಗುಳುವ ಕಾರ್ಖಾನೆ ನಿರ್ಮಿಸುತ್ತಿದ್ದೇವೆ.ಮನುಷ್ಯರು ಹುಟ್ಟಿದಂತೆ ಮನುಷ್ಯತ್ವ ಸಾಯುತ್ತಿದೆ.ವಾಹನಗಳು ಹೆಚ್ಚಿವೆ,ರಸ್ತೆ ಚಿಕ್ಕದಾಗಿದೆ.ನಾನು ನನ್ನದು ಎಂಬ ದಾಹದಲ್ಲಿ ಎಲ್ಲವೂ ಇಂಗಿ ಹೋಗಿ ಬರಡಾಗುತ್ತಿದೆ.ಸ್ವತಂತ್ರಕ್ಕೂ ಎರಡು ವರ್ಷ ಮೊದಲೇ ಅಪಕ್ವರಾದವರಿಗೆ ಸ್ವತಂತ್ರ ಸಿಕ್ಕರೆ ಏನಾಗುತ್ತದೆ ಎಂದು ಚರ್ಚಿಲ್ ಎಂಬ ಪುಣ್ಯಾತ್ಮ ಹೇಳಿದಂತೆ "power will go to the hands of rascals,rogues,and freebooters.
All indians leaders will be of low caliber and men of straw.
They will have sweet toungues and silly hearts.
They will fight amongst themselves for power and India will be lost in political squabbles.
A day would come when even air and water would be taxed in India."ಆಗಿ ಹೋಗಿದೆ.
ಆದರೂ ಉತ್ಸವ ಮಾಡಬೇಕಿದೆ.ಬಾವನೆಗಳೆಲ್ಲಾ ಟಿವಿ ದಾರಾವಾಹಿಗಳಿಗೆ ಸೀಮಿತವಾದ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಒಂದು ಹಬ್ಬವಾಗಿ ಹೋಗಿದೆ ಅಷ್ಟೆ.ಪಕ್ಷ ಯಾವುದೇ ಇರಲಿ,ವ್ಯವಸ್ಥೆಗಳೇ ಹೊದ್ದು ಮಲಗಿದಾಗ ಎಳೆದು ಕೂರಿಸಬೇಕಾದ ಕರ್ತವ್ಯ ಜನಸಾಮಾನ್ಯರದ್ದು.
ಚೆಂದದ ಡ್ರೆಸ್ ಹಾಕಿ,ಬ್ಯಾಂಡ್ ಬಾರಿಸಿ,ಬಾವುಟ ಹಾರಿಸಿ,ಉದ್ದುದ್ದ ಭಾಷಣ ಮಾಡಿ,ಚಾಕಲೇಟ್ ತಿಂದು,ಅದಕ್ಕೂ ನಮ್ಮದೇ ತೆರಿಗೆಹಣ ಉಪಯೊಗಿಸಿ ಉತ್ಪಾದಕತೆ ಇಲ್ಲದೆ  ದಿನ ದೂಡಿದರೆ ಪ್ರಯೋಜನವೇನು!?ಮನುಷ್ಯತ್ವ ಮರೆತು ಜಾತಿ ಧರ್ಮದ ದೃಷ್ಟಿಯಲ್ಲಿ ಆಡಳಿತ ನೆಡೆದರೆ,ಪಾಸಿಟೀವ್ ಆಲೋಚನ ಕ್ರಮ ಮೂಡದೇ ಇದ್ದರೆ ಸ್ವಾತಂತ್ರೋತ್ಸವ ಅರವತ್ತೊಂಬತ್ತು ಅಲ್ಲ ಆರುಸಾವಿರದ ಒಂಭತ್ತು ವರ್ಷ ಕಳೆದರೂ ತೂತು ಬಿದ್ದ ಬಲೂನಿಗೆ ಗಾಳಿ ತುಂಬಿದಂತಾಗುತ್ತದೆ ಅಷ್ಟೆ.ಸ್ವತಂತ್ರ ಭಾರತದ ಸ್ವಚ್ಚ ಆಡಳಿತದ ಕನಸು ಕಂಡ ಮಹಾತ್ಮ ಗಾಂಧೀಜಿ,ಅಬ್ದುಲ್ ಕಲಾಂರ ಕನಸಿಗೆ ಇನ್ನಾದರೂ ಸಿಕ್ಕಬಹುದೇ ಮನ್ನಣೆ!?
ಸ್ವೇಚ್ಚಾಚಾರವಾಗದ ಸ್ವತಂತ್ರ ಉಳಿಯಬಹುದೇ!? ಹೆಮ್ಮೆಯಿಂದ ಶುಭಾಶಯ ಕೋರಬಹುದೇ!?
#ವೆಂಕಟೇಶಸಂಪ.
#ಓದಿಸಂಪದಸಾಲುಪತ್ರಿಕೆ   Venkatesha Sampa

ಓದಿ "ಸಂಪದ ಸಾಲು

ಚಳಿ ಗಾಳಿ ಮಳೆಗಂಜದಿಹ ಕಠೋರ
ರೌದ್ರ ತಾಂಡವಗಳಿಗೆ ತಲ್ಲಣಗೊಳದ ಕ್ಲಿಷ್ಟ
ತ್ರೈಜಗದ ಅಲ್ಲೋಲ ಕಲ್ಲೋಲಕ್ಕೆ ಅಲುಗಾಡದೇ.. 
ಕಲ್ಲಾಗಿ ಕುಳಿತು ಎಲ್ಲವನೂ ಅವಲೋಕಿಪ ಮನಸೇ.. 
ಕರಗಳ ಜೋಡಿಸಿ ತನ್ಮಯತೆಯಿಂ
ಬೇಡಿಕೊಳ್ವೆ.. ನಿನ್ನಂತೇ ತಾಳ್ಮೆ,  ದೃಢಮನಸು,  ಎಲ್ಲವನೂ ಸಹ್ಯ ಮಾಡುವ ಅಂತಃಶಕ್ತಿಯ
ನನಗಿತ್ತು ಮನ್ನಿಸೆಂದೂ... 

ವೆಂಕಟೇಶ ಸಂಪ 
ಓದಿ "ಸಂಪದ ಸಾಲು "

ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ. # ವೆಂಕಟೇಶ ಸಂಪ

ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ.
                        # ವೆಂಕಟೇಶ ಸಂಪ

ಖಾಸಗಿ ಟಿವಿ ಚಾನಲ್ ಒಂದರ ಕಾರ್ಯಕ್ರಮ ಮುಖ್ಯಸ್ಥನಾಗಿದ್ದ ದಿನಗಳವು.ಪಾಸಿಟೀವ್ ಪಾಲಿಟಿಕ್ಸ್ ಎಂಬ ಕಾರ್ಯಕ್ರಮದಡಿಯಲ್ಲಿ ಮಾಜಿ ಸಭಾದ್ಯಕ್ಷರಾದ ರಮೇಶ್ ಕುಮಾರ್ ಅವರ ಜೊತೆ ಮಾತಾಡುತ್ತಿದ್ದೆ....ಆ ಮಾತುಕತೆಯ ಕೆಲವು ಆಯ್ದ ವಿಷಯಗಳು ಎಷ್ಟು ಪ್ರಸ್ತುತ ಅನಿಸುತ್ತೆ....ಒಮ್ಮೆ ಓದಿ ಬಿಡಿ.....

ಒಬ್ಬ ರಾಜಕಾರಣಿ ಅನಿಸಿಕೊಂಡವನು ಎಮ್ ಎಲ್ ಎ ಆಗಬೇಕೆಂದರೆ ಲಕ್ಷಾಂತರ ಜನಗಳ ಮತ ಪಡೆಯಬೇಕಾಗುತ್ತದೆ.ಒಮ್ಮೆ ಗೆದ್ದ ನಂತರ ಮತ್ತು ರಾಜಕಾರಣದಲ್ಲಿ ಒಂದಷ್ಟು ಪಟಾಲಂ ಜೊತೆಗಿರುತ್ತದೆ..ಇವರು ಗೆದ್ದ ನಂತರ ದಿನಕ್ಕೊಂದು ಬಾರಿ ಒಂದೈವತ್ತು ಮಂದಿ ನಮ್ಮ ಸುತ್ತ ಸುತ್ತುತ್ತಾರೆ..ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ರಾಜಕಾರಣಿಗಳು ಮಾಡಿದ್ದೆಲ್ಲಾ ಸರಿ ಎಂಬಂತೆ ಈ ಪಟಲಾಂ ಸುಖಾಸುಮ್ಮನೆ ಜೈಕಾರ ಹಾಕುತ್ತಾರೆ.ಯಾಕೆಂದರೆ ಆತನದ್ದು ಯಾವುದೋ ಟ್ರಾನ್ಸಪರ್ರೋ,ಕಮಿಶನ್ ವ್ಯವಹಾರವೋ ಇರತ್ತೆ..ಅದಕ್ಕೆ ನಾವು ಆತನ ಜೈಕಾರ ಕ್ಕೆ ಮರುಳಾಗಿ ಆತ ಹೇಳಿದ್ದೆಲ್ಲಾ ಸರಿ ಅಂದುಬಿಡುತ್ತೇವೆ...ಕೇವಲ ಈ ಐವತ್ತು ನೂರು ಮಂದಿಗಳು ದಿನ ನಮ್ಮ ಸುತ್ತ ಗಿರ್ಕಿ ಹೊಡೆಯುತ್ತಾರೆ...ದುರಂತ ಅಂದ್ರೆ ಓಟ್ ಹಾಕಿದ ಲಕ್ಷಾಂತರ ಜನರನ್ನು ಮರಿತೀವಿ...ಈ ಪಟಾಲಂ ಅನ್ನೇ ಜನ ಅಂದುಕೊಳ್ತೀವಿ...ಈ ಐವತ್ತು ಹೊಗೊಳೋ ಭಟರನ್ನೇ ಜನ ಅಂದುಕೊಳ್ತೀವಿ....ಹಾಗು ಅವರು ಹೇಳಿದ ಕೆಲ್ಸವನ್ನೇ ಮಾಡ್ತಿವಿ....ಜನಗಳಿಗೆ ನಾವು ಮಾಡೊ ಕೆಲ್ಸ ಬೇಕೋ ಬೇಡವೋ ಯೋಚಿಸೋದಿಲ್ಲ...ಯಾವತ್ತು ಈ ಪಟಲಾಂಗಳನ್ನು ದೂರ ಇಟ್ಟುಕೊಳ್ಳಬೇಕು....

ಇನ್ನೊಂದು ಈ ಆಪ್ತ ಸಹಾಯಕರು...ಪಿ ಎ ಗಳು ಅಂತ ನೇಮಕ ಮಾಡಿಕೊಳ್ಳೋ ಮಂತ್ರಿಗಳು...ಶಾಸಕರುಗಳು...ಒಮ್ಮೆ ಯೋಚಿಸಬೇಕು...ಈ ಮನುಷ್ಯ ಡೀಲ್ ಮಾಷ್ಟರ್ರಾ?! ಅಥವಾ ಕೆಲಸ ಕೊಡಸ್ತೀನಿ ಅಂತಾ ಹೆಣ್ಣುಮಕ್ಕಳಿಗೆ ಆಸೆ ತೋರಿಸಿ ಮೋಸ ಮಾಡಿದವನಾ?!ಈತನಿಗೆ ತಲೆ ಇದೆಯಾ?!ಮಾನವೀಯ ಹೃದಯ ಇದೆಯಾ?!ಅಥವಾ ಶೋಕಿವಾಲ ನಾ?!ಅಥವಾ ಶಾಸಕನ ಹೆಸರಲ್ಲಿ ದುಡ್ಡು ಪೀಕುವವನಾ?!ಅಂತ ಯೋಚಿಸಬೇಕು...ಇಲ್ಲದಿದ್ದರೆ ಆ ರಾಜಕಾರಣಿಯೂ ಹಾಳು....ಈ ಅನಿಷ್ಟ ಪಿ ಎ ಯಿಂದ ಸಮಾಜವೂ ಹಾಳು.....

ಗೆಲುವು ಮತ್ತು ಅಧಿಕಾರ ಬಂದ ಮೇಲೆ ನಮ್ಮ ಜೊತೆಯಲ್ಲಿರುವವರ ಬಗ್ಗೆ ಜಾಗೃತರಾಗಿರಬೇಕು...ಜೊತೆಗೆ ಕೆಲಸ ಮಾಡುವವರು ಮತ್ತು ಪಟಾಲಂ ಗಳು ಅಭಿವೃದ್ದಿಗೆ ಪೂರಕವಾಗಬೇಕೇ ವಿನಃ ಜನ ಸಾಮಾನ್ಯರ ಬದುಕಿಗೇ ತಡೆ ಗೋಡೆಯಾಗಬಾರದು....

ಸಾಮಾನ್ಯ ಜ್ಞಾನ ಮತ್ತು ಮಾನವೀಯ ಮೌಲ್ಯ ಹಾಗು ಯಾರನ್ನು ಯಾವ ರೀತಿ ಬಳಸಿಕೊಳ್ಳಬೇಕು ಮತ್ತು ಯಾರಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಅರಿಯಬೇಕು.....

  ಇಂದಿನ ಬಹುತೇಕ ರಾಜಕಾರಣಿಗಳನ್ನು ಮತ್ತು ಮಂತ್ರಿ ಮಹೋದಯರನ್ನು ನೋಡಿದ್ದೇನೆ..ಅವರ ಆಪ್ತ ಸಹಾಯಕರ ದುರಹಂಕಾರ ಮತ್ತು ಡೀಲ್ ಸ್ವಭಾವವನ್ನೂ ನೋಡಿದ್ದೇನೆ... ಕಂಡ ಕಂಡವರ ಜೊತೆ ಆಟ ಆಡುವ ಇಂತವರನ್ನು ನೋಡಿದಾಗ ನಮ್ಮ ರಮೇಶ್ ಕುಮಾರ್ ಅವರ ಮಾತು ಸದಾ ನೆನಪಾಗತ್ತೆ.......

ತೊಲಗಬೇಕು ದುರಹಂಕಾರಿಗಳು...."ಬೇಕು ಪಾಸಿಟೀವ್ ಪಾಲಿಟಿಕ್ಸ್"

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಕಟ್ಟುವಿಕೆಯ ಕನಸು ಕಂಡು #ವೆಂಕಟೇಶಸಂಪ

ಕಟ್ಟುವಿಕೆಯ ಕನಸು ಕಂಡು
        #ವೆಂಕಟೇಶಸಂಪ 

ಕಟ್ಟುವಿಕೆಯ ಬದುಕು ನಮ್ಮದಾಗಬೇಕು.ಕಟ್ಟುವಿಕೆಯ ಸಂಸ್ಕೃತಿ ನಮ್ಮದಾಗಬೇಕು,ಕಟ್ಟುವಿಕೆಯನ್ನು ಜೀವನ ಪದ್ದತಿ ಮಾಡಿಕೊಳ್ಳಬೇಕಿದೆ,ಸಂಪದ ಸಾಲು ಪತ್ರಿಕೆ

ಆದರೆ ನೋಡಿ ಇಂದಿನ ದಿನದ ವಿದ್ಯಮಾನಗಳನ್ನು!
ಆಧುನೀಕತೆಯ ತುಟ್ಟತುದಿಯಲ್ಲಿ ನಿಂತು ಬೀಗುತ್ತಿದ್ದೇವೆ.ವಿದ್ಯಾವಂತರಾಗಿದ್ದೇವೆಂದು ಕೊಚ್ಚಿಕೊಳ್ಳುತ್ತಿದ್ದೇವೆ.ನಾಗರೀಕತೆಯ ವಿಕಾಸ ಎಂದೆಲ್ಲಾ ಬಾಯಿ ಬಡಿದುಕೊಳ್ಳುತ್ತಿದ್ದೇವೆ.ಆದರೆ ಎಲ್ಲಾ ಎಲ್ಲೆಯನ್ನೂ ಮೀರಿದ್ದೇವೆ ಎನ್ನುವ ನಾವೇ
 ಮಾನವೀಯತೆಯ ತಳಹದಿಯನ್ನು ಮರೆಯುತ್ತಿದ್ದೇವೆ.
ಯಾಕೆ ಹೀಗೆ!?
ಪ್ರತಿ ಸ್ವತಂತ್ರೋತ್ಸವ ಬಂದಾಗಲೂ ಅಷ್ಟೇ
ನಾವು ಸ್ವಾತಂತ್ರ ಅನುಭವಿಸುತ್ತಿದ್ದೇವೆ.ನಾವು ಸ್ವಾವಲಂಬಿಗಳು ಅಂತೆಲ್ಲಾ ನಮಗೆ ನಾವೇ ಭಾಷಣ ಮಾಡಿ ಸ್ವೀಟು ತಿಂದು ಅವತ್ತೂ ಕೆಲಸಕ್ಕೆ ರಜೆ ಘೋಷಿಸಿ ಮನೆಯಲ್ಲಿ ಉಳಿದುಬಿಡುತ್ತೇವಲ್ಲವಾ!?   

ಆದರೆ ಇಷ್ಟು ವರ್ಷಕ್ಕೆ ನಾವು ಕಟ್ಟುವಿಕೆಯ ಬಗ್ಗೆ ಯೋಚಿಸಲೇ ಇಲ್ಲ ನೋಡಿ,ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಕಟ್ಟುವಂತೆ ಸುಂದರ ಸೌಧ ನಿರ್ಮಿಸಿದಂತೆ ನಮ್ಮ ಆಲೋಚನೆಗಳು ಮತ್ತು ಒಂದಕ್ಕೊಂದು ಮನಸ್ಸುಗಳು ಕಟ್ಟಬೇಕಿದೆ,
ಒಂದಕ್ಕೊಂದು ಸಮಾಜಗಳು ಪರಸ್ಪರ ಕಟ್ಟಬೇಕಿದೆ. ಧರ್ಮ ಧರ್ಮಗಳ ನಡುವೆ ಮಾನವೀಯತೆ ಬೆಸೆಯಬೇಕಿದೆ.ಸಂಸ್ಕೃತಿ ಆಚರಣೆಗಳ ನಡುವೆಯೂ ದೇಶ ಕಟ್ಟಬೇಕಿದೆ.ದ್ವೇಶ ಅಸೂಯೆ ಸಿಟ್ಟು ದುಃಖ ಎಲ್ಲದರ ನಡುವೆ ನಾವು ನಾವಾಗುವುದು ಯಾವಾಗ!?

ಒಂದೆಡೆ ದೇಶದ ದ್ವೇಷ ಸಾಧಿಸಲು ಹವಣಿಸುವ ಶತ್ರುರಾಷ್ಟ್ರಗಳು,ಮತ್ತೊಂದೆಡೆ ದೇಶದ ಒಳಗೆ ಇದ್ದು ನಮ್ಮವರ ಮೇಲೆಯೇ ಹಗೆ ಸಾಧಿಸಲು ಹಗೆ ಸಾಧಿಸಲು ಸಂಚು ರೂಪಿಸುವವರು.
ಇದರ ಮಧ್ಯೆ ಧರ್ಮದ ಹೆಸರಲ್ಲಿ    ದೇವರ ಹೆಸರಲ್ಲಿ ಜಾತಿಯ ಹೆಸರಲ್ಲಿ ವಿಷ ಬೀಜ ಬಿತ್ತಿ ಮತ್ತೆ ಕೆಡಹುವ ಒಂದಷ್ಟು ರಾಜಕಾರಣಿಗಳು,ಮತ್ತೊಂದಷ್ಟು ಧಾರ್ಮಿಕ ಮುಖಂಡರುಗಳು,       ಅರ್ಧಂಬರ್ದ ತಿಳಿದುಕೊಂಡ ಬುದ್ದಿಜೀವಿ ಸೋಗಿನ ಮನುಷ್ಯರುಗಳು,     ಕೇವಲ ಗದ್ದಲ ಸೃಷ್ಟಿಸೋದೇ ಮಾಧ್ಯಮ ಎಂಬ ಕಲ್ಪನೆಯಂತೆ ವರ್ತಿಸುವ ಒಂದಷ್ಟು ಪತ್ರಕರ್ತರು,   
  ತಿಳಿದೂ ತಿಳಿದು ಭ್ರಷ್ಟರನ್ನೇ ಆಯ್ಕೆ ಮಾಡುವ ಕೆಟ್ಟದ್ದನ್ನೇ ಪ್ರೋತ್ಸಾಹಿಸುವ  ಒಳ್ಳೆಯದನ್ನು ತಿರಸ್ಕರಿಸಿ ಬೆಳೆಸದೇ ಇರುವ ಒಂದಷ್ಟು ಜನ ಸಾಮಾನ್ಯರು! 
ಆದರೂ ದ್ವೇಷ ಅಳಿಸಬೇಕಿದೆ! ದೇಶ ಕಟ್ಟಬೇಕಿದೆ!
ಸುಂದರ ಆಲೋಚನೆಗಳ ಸ್ವತಂತ್ರ ಬದುಕಿನ ಸುಸಂಸ್ಕೃತ ಮನಸ್ಥಿತಿಯ ಸಾಧಿಸುವ ಹಂಬಲದ    ಚೆಂದನೆಯ  ವಾತಾವರಣದ ಉತ್ತಮ ದೇಶ ಕಟ್ಟಲು ಜೊತೆಯಾಗೋಣ ಬನ್ನಿ , 9448219347
ಸರ್ವರಿಗೂ ಸ್ವತಂತ್ರೋತ್ಸವದ ಶುಭಾಶಯಗಳು,
ಸಸಂಪದ ಸಾಲು ಪತ್ರಿಕೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

3 years back storyಲೈಕು ಒತ್ತುವ ಬರದಲ್ಲಿ ಅಮಾಯಕರನ್ನು ಅಪರಾಧಿ ಮಾಡಿಬಿಟ್ಟೆವು ನೋಡಿ! * ವೆಂಕಟೇಶ ಸಂಪ,

3 years back story
ಲೈಕು ಒತ್ತುವ ಬರದಲ್ಲಿ ಅಮಾಯಕರನ್ನು  ಅಪರಾಧಿ ಮಾಡಿಬಿಟ್ಟೆವು ನೋಡಿ!  
* ವೆಂಕಟೇಶ ಸಂಪ, 
ಯೆಸ್ , ವಿಷಯ ಪೂರ್ತಿ ತಿಳಿದುಕೊಳ್ಳದೇ ಯಾರಾದರೂ ಏನೋ ಹೇಳಿದ ತಕ್ಷಣ ಅದನ್ನೇ ನಂಬಿ ಪ್ರತಿಕ್ರಿಯಿಸುವ ಪರಿ ನೋಡಿ.ಕಣ್ಣಾರೆ ಕಂಡರೂ ಪರಾಮರ್ಶಿಸದೇ ಒಪ್ಪಿಕೊಳ್ಳುವ ಮನಸ್ಥಿತಿಯ ಪರಿಣಾಮಗಳನ್ನು ನೋಡಿ.ಯಾರೋ ಹೇಳಿದ,    ಎಲ್ಲೋ ಕೇಳಿದ ವಿಚಾರಕ್ಕೆ ಮಹತ್ವ ಕೊಟ್ಟು ಅವ್ರು ಸರಿ ಇಲ್ಲ.ಇವ್ರು ಸರಿ ಇಲ್ಲ.ಅವನು ಹಂಗೆ,   ಇವನು ಹಿಂಗೆ,  ಅವಳ ಕತೆ ಇದು ಅಂತೆಲ್ಲಾ ಕೊಚ್ಚುವ ನಮ್ಮ ವಿಕೃತ ಮನಸ್ಸಿಗೆ ಅಮಾಯಕರು ಬಲಿಯಾಗುತ್ತಿದ್ದಾರೆಂಬ ಮಿನಿಮಮ್ ಯೋಚನೆಯೂ ನಮಗಿರುವುದಿಲ್ಲ.
ತೀರಾ ಇತ್ತೀಚೆಗೆ ನೆಡೆದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆ.
ನಮ್ಮ ಸಂಪದ ಸಾಲು ಪತ್ರಿಕೆಯ ಕೆಲಸ ಮಾಡುತ್ತಾ      ಕುಳಿತ ನನಗೆ ಟಿವಿ ನೋಡೋಣ ಅನ್ನಿಸಿ ಟಿವಿ ಹಾಕಿದೆ . ಬ್ರೇಕಿಂಗ್ ನ್ಯೂಸ್ ಒಂದು ಎಲ್ಲಾ ಚಾನಲ್ ಗಳಲ್ಲಿ ಎಕ್ಸ್ಲೂಸೀವ್ ಅಂತ ಒಂದೇ ಸುದ್ದಿ ಬರುತ್ತಿತ್ತು.    ಅದೇನಪ್ಪಾ ಅಂದರೆ "ಡಿವೈಎಸ್ಪಿಯೇ ಡೀಲ್ ಮಾಡಿದ ಕತೆ"ಅಂತ.    ವ್ಯವಸ್ಥೆಯೇ ಕುಲಗೆಟ್ಟಿರುವಾಗ,ರಾಜಕಾರಣವೇ ದಂಧೆಯಾಗಿರುವಾಗ,ಸುದ್ದಿಗಳೇ ದುಡ್ಡು ಮಾಡುವ ಬಂಡವಾಳವಾಗಿರುವಾಗ,ಚೀಫ್ ಜಷ್ಟೀಸ್ ಗೇ ಲಂಚ ಆಫರ್ ಮಾಡಿದರೂ      ಅವರನ್ನು ಅರೆಷ್ಟ್ ಮಾಡದಿದ್ದಾಗ,ಅತ್ಯಾಚಾರಿಗಳೇ ಅರಾಮಾಗಿ ಅಡ್ಡಾಡುತ್ತಿರುವಾಗ,  ಇಂತಹ ಪ್ರಕರಣಗಳು ಸತ್ಯ ಇರಬಹುದೆಂದು ನಾನೂ ಬಾವಿಸಿಬಿಟ್ಟೆ.ಹಾಗಂತ ಟಿವಿ ಮತ್ತು ನ್ಯೂಸ್ ಪೇಪರ್ನಲ್ಲಿ ಬಂದ ತಕ್ಷಣ ಯಾವುದನ್ನೂ ಒಂದೇ ಸಲಕ್ಕೆ ನಂಬಬಾರದು ಎಂಬ ಧೋರಣೆ ನನ್ನದು.ಅವತ್ತು ಆ ನ್ಯೂಸ್ ಸರಿ ಇರಬಹುದೆಂದು ಬಾವಿಸಿಬಿಟ್ಟೆ.ಆ ಕ್ಷಣದಲ್ಲಿ ಫೇಸ್ಬುಕ್ ನೋಡಿದೆ.ಅದರಲ್ಲೂ ರಕ್ಷಕರೇ ಭಕ್ಷಕರು ಅಂತ ಯಾರೋ ಪುಣ್ಯಾತ್ಮರು ಬರೆದಿದ್ದನ್ನು ನೋಡಿ ನಾನೂ ಥೂ ಅಂತ ಕಾಮೆಂಟ್ ಹಾಕಿಬಿಟ್ಟೆ.  
ಅದಾದ ಮರುದಿವಸವೇ ಕಲ್ಲಪ್ಪ ಹಂಡಿಬಾಗ್ ಎಂಬ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡನೆಂದು ತಿಳಿಯಿತು.  ನನ್ನ ಮನಸ್ಸಿಗೇಕೋ ಈ ಮಾಧ್ಯಮಗಳು  ವಿವೇಚನೆಯಿಲ್ಲದೆ ಕಾಮೆಂಟ್  ಹಾಕಿಬಿಟ್ಟಿದೆ ಅಂತ ಗಿಲ್ಟಿನೆಸ್ಸ್ ಕಾಡತೊಡಗಿತ್ತು.ನನ್ನ ಗೆಳೆಯರಿಗೇ ಆತನ ಬದುಕಿನ ಒಂದಷ್ಟು  ಮಾಹಿತಿಗಾಗಿ ಕೇಳಿಕೊಂಡೆ.   ಆತ ಪ್ರಾಮಾಣಿಕ ಟೀಚರ್ ಆಗಿದ್ದನಂತೆ  ನಿಷ್ಟಾವಂತ ಅಧಿಕಾರಿಯಾಗಿ ಮೂರ್ನಾಲ್ಕು ವರ್ಷದಿಂದ ಡಿವೈಎಸ್ಪಿ ಆಗಿ ಕೆಲಸಕ್ಕೆ ಸೇರಿದವನಿಗೆ ಬದ್ದತೆ ಇದ್ದಿದ್ದರಿಂದಲೇ ಆತ ಇನ್ನೂ ಆಶ್ರಯ ಮನೆಯೆಂಬ   ಗುಡಿಸಲಲ್ಲಿದ್ದ.ಇನ್ನೂ ದುರಂತ ಅಂದರೆ ಆತನ ಮನೆ ರೈಡ್ ಮಾಡಿದಾಗ ಸಿಕ್ಕಿದ್ದು ಎರಡು ಶರ್ಟ್ ಮತ್ತು ಒಂದಷ್ಟು ವಿವೇಕಾನಂದರ ಪುಸ್ತಕಗಳು.ಪಾಪ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗೋದಾದರೆ ಈ ಕಲ್ಲಪ್ಪ ತನ್ನ ಯುನಿಫಾರ್ಮ್ ಅಲ್ಲೇ ಹೋಗುತ್ತಿದ್ದನಂತೆ.ಕಾರಣ ಒಂದು ಜೊತೆ ಒಳ್ಳೆ ಡ್ರೆಸ್ಸ್ ಕೂಡ ಇಲ್ಲದ ಸ್ಥಿತಿ.ಇಂತವನಿಗೆ ಯಾವನೋ ಹೆಣೆದ ಕತೆಗೆ,ಯಾರೋ ರೆಕಾರ್ಡ್ ಮಾಡಿದ ಕರೆಗೆ,  ಬದ್ದತೆ ಇಲ್ಲದೆ ಎನೇನೋ ಬಿತ್ತರಿಸುವ ಟಿವಿಗೆ, ಧರ್ಮ ರಕ್ಷಕರ ಫೋಶಾಕು ಧರಿಸಿ ಪವಿತ್ರ ಹಿಂದು ಧರ್ಮವನ್ನು ಗುತ್ತಿಗೆಪಡೆದುಕೊಂಡಂತೆ ಕೂಗಾಡುವ ಒಂದಷ್ಟು ವಿಕೃತ ಮಂದಿಯ ಸಂಚಿಗೆ  ಅಮಾಯಕ ಕಲ್ಲಪ್ಪ ಬಲಿಯಾದ.ಆತನ 22 ವರ್ಷದ  ಹೆಂಡತಿ   ವಿದವೆಯಾದಳು.1 ವರ್ಷದ ಪುಟ್ಟ ಪಾಪು ಅನಾಥವಾಯಿತು. ಯಾವತ್ತೂ ಒಂದು ರೂಪಾಯಿ ಪಡೆಯದ ಮಗ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದ ಸಮಾಜ ಕಂಡು ವೃದ್ದ ತಂದೆ ತಾಯಿಗೆ ಕಣ್ಣಿನಲ್ಲಿ ರಕ್ತ ಬಂದಿತ್ತು.ತಪ್ಪೇ ಮಾಡದವನಿಗೆ ತಪ್ಪಿತಸ್ಥ ಎಂಬ ಅರೋಪ ಬಂದಾಗ ಎದುರಿಸುವ ತಾಕತ್ತು ಎಲ್ಲರಿಗೂ ಇರುವುದಿಲ್ಲ.ಬೆಳೆದ ವಾತಾವರಣದ ಪರಿಣಾಮ ಕೆಲವರು ಸೂಕ್ಷ್ಮಮತಿಗಳಾಗಿರುತ್ತಾರೆ.ಕಲ್ಲಪ್ಪ ಕೂಡ ಹಾಗೆ ಇದ್ದ.      ನಿಜವಾದ ತಪ್ಪಿತಸ್ಥ ಎಮ್ಮೆ ಚರ್ಮದವನಾಗಿರುತ್ತಾನೆ.ತಪ್ಪು ಮಾಡಿದರೂ ತಪ್ಪೇ ಮಾಡಿಲ್ಲದಂತೆ ದಾಖಲೆ ಸೃಷ್ಟಿಸುತ್ತಾನೆ.ಹತ್ತಾರೂ ಕೋಟಿ ಹಣ ಸಿಕ್ಕರೂ ಅಧಿಕಾರದಲ್ಲಿರುವ ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಷ್ಟಿಲ್ಲ ಹೇಳಿ?     ಆದರೆ ಕಲ್ಲಪ್ಪ ನಿಜವಾದ ನಿರಪರಾಧಿ ಆಗಿದ್ದಕ್ಕೆ ಆತನಿಗೆ ವ್ಯವಸ್ಥೆಯ ಕ್ರೂರತೆಯ ಅರಿವಿರಲಿಲ್ಲ.ವ್ಯವಸ್ಥೆಯನ್ನೇ ಬಿಟ್ಟು ಹೋದ.ಅಷ್ಟೆಲ್ಲಾ ಓದಿದ ಆತ ಇದ್ದು ಹೋರಾಡಬೇಕಿತ್ತು  ಮತ್ತು  ಅದರಲ್ಲಿ ಜಯಿಸಬೇಕಿತ್ತು." ಹಲ್ಲುಗಳ ಮದ್ಯೆ ನಾಲಿಗೆ ಬದುಕಿದಂತೆ", ಬದುಕಿ ಸಾರ್ಥಕತೆ ಮೆರೆಯಬಹುದಿತ್ತು.
 ಅದಿರಲಿ ನಮ್ಮ ಸಮಾಜದ ಮನಸ್ಥಿತಿಗೆ ನಿಜಕ್ಕೂ ಧಿಕ್ಕಾರವಿರಲಿ ಅನಿಸುತ್ತದೆ.ಕಲ್ಲಪ್ಪನ ಅಮಾಯಕ ಸಾವಿಗೆ ಇವರೂ ಕಾರಣವಲ್ಲವೇ?ಪೋಲಿಸ್ ವ್ಯವಸ್ಥೆಯಲ್ಲಿ ಅನವಶ್ಯಕ ಕೇಸ್ ಯಾಕೆ ಅಲ್ಲೇ ಸೆಟ್ಲ್ ಮಾಡಿ ಎಂಬ ಪರಿಸ್ಥಿತಿಯಿದೆ ಎಂಬ ವಿಚಾರಗಳನ್ನು ತಿಳಿಯದೇ,   ಯಾವನೋ ಕೊಟ್ಟ ವಾಯ್ಸ್ ರೆಕಾರ್ಡ್ ನ ಬಗ್ಗೆ ಗ್ಯಾರಂಟಿ ಮತ್ತು ಖಚಿತತೆ  ತಿಳಿದುಕೊಳ್ಳದೇ,ಇಡೀ ಜಗತ್ತಿಗೇ ತೋರಿಸಿದ  ಮಾದ್ಯಮಗಳು, ಅದನ್ನು ನೋಡಿ ಕೂಡಲೇ ಸಸ್ಪೆಂಡ್ ಮಾಡಿದ ಪೋಲಿಸ್ ಇಲಾಖೆ,  ಇದನ್ನು ನಿಯಂತ್ರಿಸಲು ಬಾರದ ಬೆಪ್ಪು ಸರ್ಕಾರ,   ಟಿವಿ ಲಿ ಬಂದ ತಕ್ಷಣ ಫೇಸ್ಬುಕ್ ವಾಟ್ಸಫ್ ನಂತಹ ಜಾಲತಾಣದಲ್ಲಿ ಹಾಕಿದವರೂ,  ಗೊತ್ತಿಲ್ಲದೇ ಲೈಕು ಒತ್ತಿದ ನಾವುಗಳು,    ಧರ್ಮದ ಹೆಸರಲ್ಲಿ ರೋಲ್ಕಾಲ್ ಮಾಡುವ ಮಂದಿಗಳು, ಬ್ರೇಕಿಂಗ್ ನ ಬೆನ್ನು ಹತ್ತುವ ಕ್ರೈಮ್ಗಳನ್ನೇ  ವಿಜ್ರಂಭಿಸುವ ಮಾದ್ಯಮಗಳೇ ಅಮಾಯಕರನ್ನು ಮತ್ತು ಅಮಾಯಕತೆಯನ್ನೂ ಮಾನವೀಯತೆಯ ಮೌಲ್ಯವನ್ನೂ ಕೊಂದಿದೆ ಅನ್ನಬಹುದು.
ಇನ್ನಾದರೂ ಕ್ರೂರತೆ ಅಳಿಯಲಿ,ಮಾನವೀಯತೆ ಗೆಲ್ಲಲಿ, * ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ, 9448219347,
sampadasaalu@gmail.com

ಒಂದು ಕಾಫಿಯಿಂದ ಏನು ಬೇಕಾದ್ರೂ ಆಗಬಹುದು. ..ಒಂದು ವ್ಯವಸ್ಥೆಯ ಸಣ್ಣ ಬಿರುಕು ಏನು ಬೇಕಾದರೂ ಮಾಡಬಹುದು. ವೆಂಕಟೇಶ ಸಂಪ

ಒಂದು ಕಾಫಿಯಿಂದ ಏನು ಬೇಕಾದ್ರೂ ಆಗಬಹುದು. ..
ಒಂದು ವ್ಯವಸ್ಥೆಯ ಸಣ್ಣ ಬಿರುಕು ಏನು ಬೇಕಾದರೂ ಮಾಡಬಹುದು.
           ವೆಂಕಟೇಶ ಸಂಪ 

ನಾನು ಯಾವತ್ತೂ ಈ ವ್ಯಕ್ತಿ ಬಗ್ಗೆ ತಿಳಿದುಕೊಂಡವನಲ್ಲ.ಯಾವತ್ತೂ ಭೇಟಿ ಆದವನಲ್ಲ. ಮಾತಾಡಿದವನೂ ಅಲ್ಲ.ನೆಂಟರಲ್ಲ. ಬಂಧುವೂ ಅಲ್ಲ. ಸ್ನೇಹಿತರೂ ಅಲ್ಲ. ಆದರೂ ನನ್ನನ್ನು ಇವರ ವಿಷಯ ಕಾಡಿತ್ತು. 
 ಇವತ್ತು ನಮ್ಮ ಸಂಪದ ಸಾಲು ಪತ್ರಿಕೆಯ ಕೆಲಸ ಮಾಡುತ್ತಾ ಕುಳಿತ ನನಗೆ ಯಾವುದೋ ವಾಟ್ಸಫ್ ನಲ್ಲಿ ಸಿದ್ಧಾರ್ಥ ಎಂಬ ಉದ್ಯಮಿ, ಮಾಜಿ ಮುಖ್ಯಮಂತ್ರಿಗಳ ಅಳಿಯನ ನಿಗೂಢ ಕಣ್ಮರೆ ಮತ್ತು ಅವರು ಬರೆದಿದ್ದಾರೆನ್ನಲಾದ ಪತ್ರ ದ ಸಾರಾಂಶ ಬಂದಿತ್ತು.      
ದೊಡ್ಡ ಸಂಸ್ಥೆಯೊಂದನ್ನು ಕಟ್ಟಿದ, ಬರೋಬ್ಬರಿ 50 ಸಾವಿರ ಜನಕ್ಕೆ ಉದ್ಯೋಗ ಕೊಟ್ಟ ವ್ಯಕ್ತಿಯೊಬ್ಬ ಸಾಲಕ್ಕೆ ಅಥವಾ ನಮ್ಮ ದೇಶದ ಆದಾಯ ಇಲಾಖೆಯ ಕಿರುಕುಳಕ್ಕೆ ಮತ್ತು ಅಂದುಕೊಂಡಿದ್ದನ್ನು ಸಾಧಿಸಲಾಗದ ಅಸಹಾಯಕತೆಯ ಬಗ್ಗೆ ಉಲ್ಲೇಖವಿತ್ತು ಆ   ಪತ್ರದಲ್ಲಿ. 

ನಮ್ಮ ದೇಶದ ವ್ಯವಸ್ಥೆಯಲ್ಲಿ ದೊಡ್ಡದೊಂದು ದುರಂತವಿದೆ. ... ಒಬ್ಬ ವ್ಯಕ್ತಿ ಬೆಳೆದುಬಿಟ್ಟ ಎಂದರೆ ಆತನ ಬಗ್ಗೆ ತೀರಾ ಹಗುರಾಗಿ ಮಾತಾಡುತ್ತಾರೆ.ಅವನು ಯಾರಿಗೋ ಮೋಸ ಮಾಡಿದ್ದಾನೆ,  ಆತ ಎಲ್ಲೋ ಬೇಡದ ಕೆಲಸ ಮಾಡಿದ್ದಾನೆ ಹಾಗಾಗಿಯೇ ಇಷ್ಟು ಶ್ರೀಮಂತ ಆದ ..  ಆತ ಸರಿ ಇಲ್ಲ.ಈತ ಸರಿ ಇಲ್ಲ....ಹಾಗೆ ಹೀಗೆ ಅಂತ ಪುಂಖಾನುಪುಂಖವಾಗಿ ವಿಶ್ಲೇಷಣೆ ಮಾಡಿ ಕಂಡ ಕಂಡಲ್ಲಿ ಬಾಯಿಚಪಲ ತೀರಿಸಿಕೊಳ್ಳುತ್ತೇವೆ.
ಈ ಸಿದ್ಧಾರ್ಥ ವಿಷಯದಲ್ಲೂ ಒಂದಷ್ಟು ಮಂದಿ ಹಾಗೆ ವರ್ತಿಸಿದ್ದರು. ಶ್ರಮ ಪಟ್ಟು ಐವತ್ತು ಸಾವಿರ ಜನಕ್ಕೆ ಉದ್ಯೋಗ ಕೊಟ್ಟ ವ್ಯಕ್ತಿಯೊಬ್ಬ ಮುಖ್ಯಮಂತ್ರಿಗಳ ಅಳಿಯ ಅಂತ ಅವರು ಹೇಗೇಗೋ ಬೆಳೆದರು ಅಂತ ಅಂದುಬಿಟ್ಟಿದ್ದರು.
ನನಗೆ ತಿಳಿದಂತೆ ಒಮ್ಮೆಯೂ ರಾಜಕಾರಣದಲ್ಲಿ ಅವರು ತೊಡಗಿಕೊಂಡಿಲ್ಲ. ಯಾವುದೇ ಟ್ರಾನ್ಫರ್ ದಂಧೆ ಮಾಡಿಲ್ಲ.  ಅಧಿಕಾರಕ್ಕೆ ಹಸ್ತಕ್ಷೇಪ ಮಾಡಿ ಮಾವನ ಹಿಂದೆ ತಿರುಗಲಿಲ್ಲ.
ಆದರೂ ಅಪವಾದಗಳು ಬಿಟ್ಟಿರಲಿಲ್ಲ ...ಅದು ಸಹಜ ಕೂಡ ಬಿಡಿ. ಯಾಕೆಂದರೆ ಹಣ್ಣಿರುವ ಮರಕ್ಕೇ ಅಲ್ಲವೇ ಕಲ್ಲು ಹೊಡೆಯೋದು. .. ? ಅವರು ಇರಬೇಕಿತ್ತು ಮತ್ತು ಇದ್ದು ಜಯಿಸಬೇಕಿತ್ತು. ಹಾಗಂತ ಇದು ಕೇವಲ ಆತ್ಮಹತ್ಯೆ ಎನ್ನಲು ಸಾಧ್ಯವಿಲ್ಲ. ವ್ಯವಹಾರ ಮತ್ತು ರಾಜಕೀಯ ಎಂಬ ಎರಡೂ ಮಾಫಿಯಾದ ನಡುವೆ ಯಾರ್ಯಾರೋ   ಏನೇನೋ ಮಾಡಿರಬಹುದು.... ತನಿಖೆ ಆಗಲೇಬೇಕಿದೆ. 

ಇನ್ನೊಂದು ಕಾಡಿದ ವಿಷಯ ಏನ್ಗೊತ್ತಾ?
ನಮ್ಮ ಸಂಪದ ಸಾಲು ಪತ್ರಿಕೆಯ ಓದುಗನೊಬ್ಬ ಹೇಳುತ್ತಿದ್ದ.  "ಹೊಟ್ಟೆಗೆ ಹಿಟ್ಟಿಲ್ಲದೆ ಬೀದಿ ಬದಿಯಲ್ಲಿ ಅನ್ನಕ್ಕಾಗಿ ಅಳುತ್ತಿದ್ದಾಗ ಮುಖ ತಿರುಗಿಸಿ ನೋಡದ ಈ ಸರ್ಕಾರ ನಾವು ಕಷ್ಟಪಟ್ಟು ಬೆಳೆದ ಮೇಲೆ ಎಲ್ಲದಕ್ಕೂ ಟ್ಯಾಕ್ಸ್ ಕಟ್ಟು ಅಂತ ಹೆದರಿಸುತ್ತದೆ.    
ಇಲ್ಲಸಲ್ಲದ ನೋಟಿಸ್ ಕೊಟ್ಟು ಇನ್ಯಾವುದೋ ಡೀಲ್ ಮಾಡೋಕೆ ಪ್ರಚೋದನೆ ಮಾಡುತ್ತದೆ. ನಮ್ಮ ದೇಶದ ಕಾನೂನು ಅಂತ ಗೌರವಿಸಿದ್ರೆ , ಗೌರವಿಸುವವರಿಗೇ ಹೆಚ್ಚು ತೊಂದರೆ ನೀಡುತ್ತದೆ." ಅಂದಿದ್ದ ನನ್ನ ಪರಿಚಿತನ ಮಾತಿಗೂ ಈ ಸಿದ್ಧಾರ್ಥ ಬರೆದಿದ್ದಾರೆನ್ನಲಾದ  ಪತ್ರಕ್ಕೂ ಸಾಮ್ಯತೆ  ಇದೆ.
ಯೆಸ್ ಅಫ್ಕೋರ್ಸ್ ಈ ಜಗತ್ತಿನಲ್ಲಿ ಯಾರೂ ಸಾಚಾಗಳಲ್ಲ. ಅವಕಾಶ ಸಿಕ್ಕಾಗ ಸದ್ಬಳಕೆ ಮಾಡಿಕೊಂಡು ಬೆಳೆಯುವುದು ಜಾಣತನ. ಅವಕಾಶ ಸಿಗದವರು ವೇದಾಂತದ ಮಾತಾಡುತ್ತಾರೆ. ಎಂದು ಹೇಳುವ ನನ್ನ ಇನ್ನೊಬ್ಬ ಪರಿಚಿತನ ಮಾತು ಕೂಡ ಅಲ್ಲಗಳೆಯುವಂತಿಲ್ಲ.
ಇದು ಕಲಿಯುಗ ಇಲ್ಲಿ ಯುಗಧರ್ಮದ ಸ್ವಭಾವದಂತೆ ನಡೆಯುತ್ತದೆ. ಅತಿಯಾದ ಸೂಕ್ಷ್ಮ  ಮನಸ್ಥಿತಿಗೆ ಬೆಲೆ ಇಲ್ಲ. ಭಂಡತನವೇ ಗಟ್ಟಿಗೊಳ್ಳುತ್ತಿದೆ. ಮಾನಕ್ಕಿಂತ ಪ್ರಾಣ ಮುಖ್ಯ ಎಂದು ಹೊರಾಡುವವ ಮಾತ್ರಾ ಉಳಿಯಬಲ್ಲ ಎಂಬಂತಾಗಿದೆ. . 

ಯಾಕೆ ನಮ್ಮ ವ್ಯವಸ್ಥೆ ಮತ್ತು ಜೊತೆಯ ಜನಗಳು ಬೆಳವಣಿಗೆಗೆ ಪೂರಕವಾಗಿ ನಿಲ್ಲುತ್ತಿಲ್ಲ. ಯಾಕೆ ಸಿನಿಕರಾಗಿ ಇನ್ನೊಬ್ಬರು ಸರಿ ಇಲ್ಲ ಅಂತ ಸರ್ಟಿಫಿಕೇಟ್ ಕೊಡುತ್ತೇವೆ. ಯಾಕೆ ದೊಡ್ಡ ದೊಡ್ಡ ಸಾಮಾಜಿಕ  ಕ್ರಾಂತಿ ಮಾಡಿದ ವ್ಯಕ್ತಿ ತಿಳಿಯದೇ ಮಾಡುವ ಸಣ್ಣ ತಪ್ಪಿಗೆ ತಿದ್ದಿಕೊಳ್ಳಲು ಅವಕಾಶ ನೀಡದೇ ಕಾಡಿಸುತ್ತೀರಿ? ಕಾನೂನು ಇರುವುದು ಸ್ವೇಚ್ಚಾಚಾರದ ಕಡಿವಾಣಕ್ಕೆ ಅನ್ನೋದು ಸತ್ಯ ಆದರೂ ಸ್ವಾತಂತ್ರಕ್ಕೇ ಧಕ್ಕೆ ತರುವಾಗ ಅದಕ್ಕೆ ಅರ್ಥವಿದೆಯೇ? 
ಕೆಲವು ಭಂಡರು ಏನೇ ಸರಿ ತಪ್ಪುಗಳಾದರೂ ಒರೆಸಿಕೊಂಡು ಬದುಕುತ್ತಾರೆ. ಕೆಲವರು ತುಂಬಾ ಸೂಕ್ಷ್ಮಮತಿಗಳಾಗಿರುತ್ತಾರೆ.    ಅವರಿಗೆ ಸಣ್ಣ ಬೇಸರವೂ ದೊಡ್ಡದಾಗಿ ಕಾಡುತ್ತದೆ ಎಂಬ ಮಿನಿಮಮ್ ಪ್ರಜ್ಞೆ ಇಡೀ ವ್ಯವಸ್ಥೆಗೆ ಬರಬೇಕಿದೆ.....
ಒಂದು ಕಾಫಿ ಏನನ್ನು ಬೇಕಾದರೂ ಮಾಡಬಲ್ಲದು ಎಂಬ ಕೆಫೆ ಕಾಫಿ ಡೇ ನ ಸಿದ್ಧಾರ್ಥ ರ ಆಲೋಚನೆಯಂತೆ......ಈ ವ್ಯವಸ್ಥೆಯ ಸಣ್ಣ ಲೋಪ ಬಹುದೊಡ್ಡ ಅಪಾಯ ತರಬಲ್ಲದು. ...      
ಕಾನೂನಿನ ಮೂಲಕ ದೇಶ ಕಟ್ಟುವ ಮೊದಲು ನೈತಿಕ ಆಲೋಚನೆಗಳ ಮೂಲಕ  ಸಂತೋಷದ ದಾರಿಯಲ್ಲಿ ನಿಜವಾದ ದೇಶ ನಿಲ್ಲಬೇಕಿದೆ..
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
sampadasaalu@gmail.com 9448219347

5 ವರ್ಷದ ಹಿಂದೆ ಬರೆದಿದ್ದು! "ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ....ಲಕ್ಷ ಲಕ್ಷ ಮಂದಿ........ # ವೆಂಕಟೇಶ ಸಂಪ

5 ವರ್ಷದ ಹಿಂದೆ ಬರೆದಿದ್ದು! 

"ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ....ಲಕ್ಷ ಲಕ್ಷ ಮಂದಿ........
                         # ವೆಂಕಟೇಶ ಸಂಪ

ನನ್ನ ಪರಿಚಿತರೊಬ್ಬರಿಗೆ ಯಾರೋ ಹೇಳಿದ್ದರಂತೆ..."ಸಂಪದ ಸಾಲು ಪತ್ರಿಕೆನಾ....ಅದು ಸಣ್ಣ ಪತ್ರಿಕೆ"ಅಂತ...
ಎಸ್...ಹೌದು...ನಮ್ಮದು ಸಣ್ಣ ಪತ್ರಿಕೆ...ಆದರೆ ಕೆಟ್ಟ ಪತ್ರಿಕೆ ಅಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ....
ದೊಡ್ಡ ನದಿಯೊಂದು ವಿಸ್ತಾರವಾಗಿ ಹರಿಯುವ ಮುನ್ನ...ತನ್ನ ಉಗಮದಲ್ಲಿ ಅದು ಚಿಕ್ಕ ಹನಿಯಾಗೇ ಪ್ರಾರಂಭವಾಗಿರುತ್ತದೆ...ಹಾಗೆಯೇ ಚಿಕ್ಕ ಮಗುವೊಂದು ತನ್ನ ವಿಶಿಷ್ಟತೆಯಿಂದ ಬೆಳೆದು ದೊಡ್ಡವನಾಗುತ್ತಾನೆ ವಿನಃ ಹುಟ್ಟಿದ ಕೂಡಲೇ ದೊಡ್ಡವನಾಗಲು ಸಾಧ್ಯವಿಲ್ಲ...

ಅದಿರಲಿ...

ಬರೋಬ್ಬರಿ ಎಂಟು ವರ್ಷಗಳ ಹಿಂದಿನ ಮಾತು...ಗಲ್ಲಿ ಗಲ್ಲಿಗಳಲ್ಲಿ ಜೀವನೋಪಾಯಕ್ಕಾಗಿ ಪತ್ರಿಕೆ ಹಂಚಿ ವಿದ್ಯಾಬ್ಯಾಸ ಮಾಡುತ್ತಿದ್ದ ನನಗೆ ಪತ್ರಿಕೆ ಆರಂಭಿಸಲೇಬೇಕೆಂಬ ಛಲವಿತ್ತು.ಆಸೆ ಇತ್ತು...ಕನಸಿತ್ತು....ಆ ಕೂಡಲೇ ಕೇಂದ್ರ ಸರ್ಕಾರದಿಂದ ನೊಂದಾಯಿಸಿ ಪತ್ರಿಕೆ ಪ್ರಾರಂಭಿಸಿದೆ....ನನಗೆ ಅರಿವೇ ಇಲ್ಲದಂತೆ ದಾಖಲೆ ಆದದ್ದು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಪತ್ರಿಕೆಯೊಂದನ್ನು ನೊಂದಾವಣೆ ಮಾಡಿ ಪ್ರಾರಂಭಿಸಿದ ಚಿಕ್ಕ ವಯಸ್ಸಿನ ಸಂಪಾದಕ ಎಂದು.....

ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಈ ಪುಟ್ಟ ಪತ್ರಿಕೆ ಇಂದು ರಾಜ್ಯಾದ್ಯಂತ 5766 ಗ್ರಾಮಗಳನ್ನೊಳಗೊಂಡಂತೆ..29823 ಹಳ್ಳಿಗಳನ್ನೂ ಸೇರಿಕೊಂಡು ರಾಜ್ಯದ ಎಲ್ಲೆಡೆ ಸದಸ್ಯರನ್ನು ಹೊಂದಿದೆ..ಮತ್ತು ಅಂತರ್ಜಾಲದ ಮೂಲಕ ವಿಶ್ವದೆಲ್ಲೆಡೆ ತನ್ನ ಪುಟ್ಟ ಹೆಜ್ಜೆಯನ್ನಿಟ್ಟಿದೆ...

ಪತ್ರಿಕೆಯ ಪ್ರಾರಂಭವಾದಂದಿನಿಂದ ಈ ವರೆಗೆ 468 ಕ್ಕೂ ಹೆಚ್ಚು ಹೊಸ ಬರಹಗಾರರು ನಮ್ಮ ಸಂಪದ ಸಾಲು ಪತ್ರಿಕೆಯಿಂದಲೇ ತಮ್ಮ ಬರವಣಿಗೆ ಪ್ರಾರಂಭಿಸಿದ್ದಾರೆ..

ಈ ವರೆಗೆ ಎಂಟು ಬಾರಿ ಕರ್ನಾಟಕ ವಿಧಾನ ಪರಿಷತ್ ಮತ್ತು ವಿಧಾನ ಸಭೆಯಲ್ಲಿ ನಮ್ಮ ಪತ್ರಿಕೆಯಲ್ಲಿ ಬಂದ ಲೇಖನಗಳನ್ನು ಉಲ್ಲೇಖಿಸಿ ಮಾತಾಡಿದ್ದಾರೆ..

ಕೇಂದ್ರ ಸರ್ಕಾರ ಗುರುತಿಸಿದ ಕೆಲವೇ ನಿಯತಕಾಲಿಕೆಯಲ್ಲಿ ನಮ್ಮ ಸಂಪದ ಸಾಲು ಒಂದು ಎನ್ನುವುದಕ್ಕೆ ಹೆಮ್ಮೆ ಅನಿಸುತ್ತದೆ.

ಪತ್ರಿಕೆಯ ಮೊದಲನಿಂದಲೂ ಈವರೆಗೂ ನಮ್ಮ ಪತ್ರಿಕೆಯಲ್ಲಿ ಕ್ರೈಮ್ ಗಳ ವೈಭವೀಕರಣ ಮಾಡಿಲ್ಲ..ಸೆಕ್ಸ್ ಅನ್ನೇ ಸರ್ವಸ್ವ ಎಂಬಂತೆ ಬಿಂಬಿಸಿಲ್ಲ..

ಕಲರ್ ಕಲರ್ ಮಾಡಿ ಪತ್ರಿಕೆ ಪುಟಗಳನ್ನು ಶೃಂಗರಿಸಲಿಲ್ಲ..ಆದರೆ ವಿಷಯಗಳ ವೈವಿದ್ಯತೆಯ ಹುಡುಕಾಟಕ್ಕೆ ಅವಕಾಶ ನೀಡಿದ್ದೇವೆ..

ಟೆಂಪ್ಟೇಷನ್ ಮಾಡುವಂತ ಬರವಣಿಗೆ ಹಾಕಲಿಲ್ಲ..ಮೋಟಿವೇಷನ್ ಆಗುವಂತೆ ವಿಷಯ ಮಂಡನೆ ಮಾಡಿರುವ ಅಭಿಮಾನವಿದೆ...

ನಮ್ಮ ಪತ್ರಿಕೆಯನ್ನು ಓದಿ ಪರಿವರ್ತನೆಯಾದವರು ಸಾಕಷ್ಟಿದ್ದಾರೆ...ಆದರೆ ಅದು ಶುದ್ದ ಸರಸ್ವತಿಗೆ ಇರುವ ಶಕ್ತಿಯೇ ವಿನಃ ನಮ್ಮ ಬರವಣಿಗೆಯೇ ಬದಲಾವಣೆ ತಂದಿದೆ ಎಂಬ ಅಹಂಕಾರವಲ್ಲ..

ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದಡಿ ಕಲಿಕೆಯ ಜೊತೆ ಗಳಿಕೆಯ ದಾರಿ..ಮತ್ತು ರಕ್ತದಾನ ..ನೇತ್ರದಾನ...ಇದರಿಂದ ಜೀವದಾನ  ಹಾಗು ಸಹಜತೆಯೇ ಶ್ರೇಷ್ಟತೆ ಎಂಬ ವಿಶಿಷ್ಟ ಕಾರ್ಯಕ್ರಮ..ರೈತರು ಮತ್ತು ಸ್ವಾವಲಂಬನೆ ಹೀಗೆ ಹಲವಾರು ವಿಚಾರದಲ್ಲಿ ಕರ್ನಾಟಕದಾದ್ಯಂತ ಕಾರ್ಯಕ್ರಮ ನೀಡಿ ಯಶಸ್ವಿಯಾಗಿದೆ..

ಪತ್ರಿಕೆ ಸಿಕ್ಕಾಪಟ್ಟೆ ದುಡ್ಡು ಮಾಡಿಲ್ಲ. ಆದರೂ ತನ್ನ ಕಾಲ ಮೇಲೆ ತಾನು ನಿಂತು ಜನರನ್ನು ಗಳಿಸಿ ಸ್ವಾವಲಂಬನೆಯೇ ಶ್ರೇಷ್ಟ ಎಂಬುದನ್ನು ತೋರಿಸಿದೆ..

ಸಂಪದ ಸಾಲು ತನ್ನದೇ ಕಚೇರಿ ನಿರ್ಮಿಸಿಕೊಂಡು ರಾಷ್ಟ್ರ ಮಟ್ಟದ ಹಲವಾರು ಸಾಧಕರು ಬಂದು ಹೋಗಿದ್ದಾರೆ ಮತ್ತು ಬರುತ್ತಿದ್ದಾರೆಂಬುದು ಸಂತಸದ ವಿಷಯ..

ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ಜೀವನವನ್ನೇ ಸೆಲಬ್ರೇಟ್ ಮಾಡುವ ಸಾಮಾನ್ಯ ಜನರಲ್ಲೂ ಒಂದಷ್ಟು ಆಶಾ ಭಾವನೆ ಮೂಡಿಸಲು..ಕಾರಣವಾಗಿದೆ..ನಮ್ಮ ಸಂಪದ ಸಾಲು....

ನಾಡಿನ ಹೆಸರಾಂತ ಬರಹಗಾರರಾದ ಡಾ;ನಾಡಿಸೋಜ..ದೊಡ್ಡರಂಗೇಗೌಡ.ಚಂದ್ರಶೇಖರ ಕಂಬಾರ..ವಸುಮತಿ ಉಡುಪರಂತಹ ಘಟಾನುಘಟಿ ಸಾಹಿತಿಗಳೂ ನಮ್ಮ ಪತ್ರಿಕೆಗೆ ಬರೆದಿದ್ದಾರೆ..

ಯಾವುದೇ 'ಇಸಂ' ಗಳಿಗೆ ಅಂಟಿಕೊಳ್ಳದೇ ವಾಸ್ತವತೆ ಮತ್ತು ಸರಳತೆಗೆ ಕಟಿಬದ್ದರಾಗಿ ಪಾಸಿಟೀವ್ ಜರ್ನಲಿಸಂ ಹುಟ್ಟು ಹಾಕಿದ ಕೀರ್ತಿ ನಮ್ಮ ಬಳಗಕ್ಕಿದೆ...

ಸಿಕ್ಕಾಪಟ್ಟೆ ಒಳ್ಳೆ ಲೇಖನ ಪ್ರಕಟವಾಗದೇ ಇರಬಹುದು...ಆದರೆ ಸಿಕ್ಕಾಪಟ್ಟೆ ಕೆಟ್ಟ ಬರವಣಿಗೆಯನ್ನು ಪ್ರಕಟಿಸಿಲ್ಲ ಎಂಬುದು ಒಂದು ಸಾಧನೆಯೇ ಆಗಿದೆ...

ಪುಟ್ಟ ಹೆಜ್ಜೆಯನ್ನಿಟ್ಟು ಹೊರಟವನ ಹಿಂದೆ ಲಕ್ಷ ಲಕ್ಷ ಮಂದಿ ಜೊತೆಯಾಗಿದ್ದಾರೆ....ಸಣ್ಣ ಬಿಂದುವೊಂದು ದೊಡ್ಡ ಸಮುದ್ರವಾಗಬೇಕಿದೆ...

ಕ್ರಮಿಸಿದ ದಾರಿಯಲ್ಲಿ ಮುಳ್ಳುಗಳಿದ್ದವು...ತೊಡಕುಗಳಿದ್ದವು..ಆದರೆ ಅದೆಲ್ಲವೂ ನಮ್ಮ ಏಳ್ಗೆಗೆ ಮೈಲುಗಲ್ಲಾಯಿತು ಎಂಬುದು ಸೂರ್ಯನಷ್ಟೇ ಸತ್ಯ..

ಸಾಧಿಸಿದ್ದು ಕೇವಲ ಒಂದು ಬಿಂದುವಿನಷ್ಟು...ಸಾಧಿಸಬೇಕಾದ್ದು ಸಾಗರದಷ್ಟಿದೆ...

"ಇವನೆಂತಾ ಪತ್ರಿಕೆ ಮಾಡ್ತಾನೆ...ಇದೆಂತಾ ಪತ್ರಿಕೆ...ಆತ ಬರೀ ಮಾತು ಅಂದವರು...ಪತ್ರಿಕೆ ಮೆಂಬರ್ ಆಗ್ತೀನಿ..ಇಂದು ಬನ್ನಿ..ನಾಳೆ ಬನ್ನಿ ಅಂತ ಕಾಗೆ ಹಾರಿಸಿದವರು..ಕನ್ನಡ ಪತ್ರಿಕೆ ಓದಿ ಸದಸ್ಯರಾಗಿ ಬೆಂಬಲಿಸಿ ಅಂದಾಗ ಅಕ್ಷರಶಃ ಬಿಕ್ಷುಕನಂತೆ ನೋಡಿದವರೂ...ನಾನು ಬರಿತೀನಿ..ನಿಮ್ಮ ಜೊತೆ ಇರ್ತೀನಿ ಅಂತ ಹೇಳಿ ಕೈಗೆ ಸಿಗದಷ್ಟು ದೂರ ಹೋದವರು...ಸಬ್ಸ್ಕ್ರಿಪ್ಸನ್ ಕೇಳಿದ್ದಕ್ಕೇ ಸ್ನೇಹ ಬಿಟ್ಟವರು..ನಿಂದಿಸಿದವರು...ಅಸೂಯೆಪಟ್ಟವರು....ಕಾರಣವೇ ಇಲ್ಲದೆ ಮನಸ್ಸಲ್ಲೇ ಬೈದುಕೊಂಡವರು...ಹೊಗಳಿದವರು......
ಇವರೆಲ್ಲರ ನಡುವೆ ಈತ ನಮ್ಮ ಹುಡುಗ ಅಂತ ಜೊತೆಯಾದವರೂ...ಯಾವುದೇ ಅಪೇಕ್ಷೆ ಇಲ್ಲದೆ ಬೆಂಬಲಿಸಿದವರು..ಪ್ರಚಾರ ಕೊಟ್ಟವರು...ಅಂಗವಿಕಲನಾದರೂ ಕೂಲಿ ಕಾರ್ಮಿಕನಾದರೂ ನಿಮ್ಮ ಪತ್ರಿಕೆಗೆ ನಾವಿದ್ದೇವೆ ಅಂತ ಹತ್ತು ರೂಪಾಯಿ ಕೊಟ್ಟು ಬೆನ್ನು ತಟ್ಟಿದವರು..ನನ್ನ ಗೆಳೆಯ..ಅಣ್ಣಾ...ತಮ್ಮಾ...ಜೊತೆಗಾರ...ಆತ್ಮೀಯ....ಅಂತೆಲ್ಲಾ ಕೈಲಾದಷ್ಟು ಕೊಟ್ಟು ಬೆನ್ನೆಲುಬಾಗಿ ನಿಂತವರು...ಎಷ್ಟೇ ಕಷ್ಟ ಇದ್ದರೂ ಒಂದೇ ಮಾತಿಗೆ ತಮ್ಮ ಬರವಣಿಗೆ ಕಳುಹಿಸಿದವರು..ನಮ್ಮ ಹುಡುಗ ಅಂತ ಪ್ರೀತಿಯಿಂದ ಹೊತ್ತು ಹೆತ್ತು ಸಾಕಿದ ಮನೆಯವರು...ಮನೆ ಮಗನಂತೆ ಆತ್ಮಿಯರಾದವರು.....ಜಾಹೀರಾತು ಕೊಟ್ಟವರು...ಮೆಂಬರ್ ನ್ನು ಮಾಡಿಸಿದವರು.....ದುಡ್ಡು ಕೊಟ್ಟು ಪತ್ರಿಕೆ ಓದುತ್ತಿರುವವರು....ಸರಿಯಾದ ಸಮಯಕ್ಕೆ ಡಿಸೈನ್ ಮಾಡುವವರೂ...ಪ್ರಿಂಟ್ ಮಾಡುವವರು...ಪೋಸ್ಟ್ ಗೆ ಕಳುಹಿಸುವವರು.....ಸರಿಯಾದ ಸಮಯಕ್ಕೆ ಓದುಗರಿಗೆ ತಲುಪಿಸುವ ಅಂಚೆ ಇಲಾಖೆಯವರು.....ಹೀಗೆ ಜೊತೆಯಾದವರೇ ನಮ್ಮ ಸಂಪದ ಸಾಲು ಬಳಗ.....ಇವರೆಲ್ಲರಿಗೂ ನಾನು ಚಿರ ಋಣಿ...

ಕ್ರಮಿಸಿದ ದಾರಿ ಕೇವಲ ಕಿಲೋಮಿಟರ್ ಗಳಷ್ಟು...ಕ್ರಮಿಸಬೇಕಾದ ದಾರಿ ಇನ್ನೂ ಜ್ಯೋತಿರ್ವರ್ಷಗಳಷ್ಟಿದೆ...ನಿಮ್ಮೆಲ್ಲರ ಸಹಕಾರ..ಪ್ರೀತಿ....ಬೆಂಬಲ.....ಮತ್ತೊಮ್ಮೆ ಬಯಸುತ್ತೇನೆ..ಹಾಗು ನೀವು ಕೊಡಬಹುದಾದ ಚಿಕ್ಕದೊಂದು ಸಬ್ಸ್ಕ್ರಿಪ್ಸನ್ ನಮ್ಮ ಕೆಲಸಕ್ಕೆ ಜೊತೆಯಾಗುತ್ತದೆ..ಬೆಳಕು ಮೂಡಿಸುವ ಕಾರ್ಯದಲ್ಲಿ ನಿಮ್ಮದೂ ಚಿಕ್ಕ ಕೊಡುಗೆಯಾಗುತ್ತದೆ.. ಚಿಕ್ಕ ಚಿಕ್ಕ ಆಲೋಚನೆ ಮತ್ತು ಕೆಲಸಗಳೇ ದೊಡ್ಡ ದೊಡ್ಡ ಸಾಧನೆಗೆ ದಾರಿದೀವಿಗೆಯಾಗುತ್ತದೆ.....

ಇಂದೇ ಸಂಪದ ಸಾಲು ಪತ್ರಿಕೆಗೆ ಚಂದಾದಾರರಾಗಿ....ನಮ್ಮ ಕಚೇರಿ ಸಂಖ್ಯೆ 9448219347

"ಬದಲಾವಣೆ ಬರಲಿ..ಪರಿವರ್ತನೆ ತರಲಿ..ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿಸಂಪದಸಾಲುಪತ್ರಿಕೆ

ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ

ಕೆಸರಿನಲ್ಲಿಯೇ ಕಮಲ ಅರಳುತ್ತದೆ.....     ಆದರೂ ಕಮಲ ಎಲ್ಲರಿಗೂ ಇಷ್ಟವಾಗುತ್ತದೆ....ಅದರಂತೆ ಪ್ರತಿಯೊಂದರಲ್ಲಿ ಒಳ್ಳೆಯದನ್ನು ಗುರುತಿಸುವ ಗುಣ ಬೇಕು.
ಕೆಸರಿನಲ್ಲಿ ಕಮಲ ಅರಳಿದೆ ಅಂದ ಮಾತ್ರಕ್ಕೆ ಕಮಲವನ್ನು ದೂಷಿಸಲು ಸಾದ್ಯವಿಲ್ಲ...ಹಾಗೆಯೇ ಯಾವುದೋ ಒಂದು ವಿಚಾರದಲ್ಲಿ ಒಬ್ಬ ಕೆಟ್ಟವನು ಅನಿಸಿದರೆ ಆತ ತೀರಾ ಕೆಟ್ಟವನು ಎಂದು ಸರ್ಟಿಫಿಕೇಟ್ ಕೊಡುವುದರ ಬದಲು ಆತನ ಆ ಕೆಟ್ಟ ಗುಣವನ್ನು ಒಳ್ಳೆಯ ಗುಣವನ್ನಾಗಿಸಬೇಕು....ಸಾದ್ಯವಾಗದಿದ್ದರೆ....ಅವರಲ್ಲಿರಬಹುದಾದ ಯಾವುದಾದರೂ ಒಂದು ಒಳ್ಳೆ ಗುಣವನ್ನು ಒಪ್ಪಿಕೊಳ್ಳೋಬೇಕು....ಅದೂ ಆಗದಿದ್ದರೆ ಆ ವ್ಯಕ್ತಿಯನ್ನೂ ಸಂಪೂರ್ಣ ನಿರ್ಲಕ್ಷ ಮಾಡಬೇಕು..

..."ಅವನು ಸರಿ ಇಲ್ಲ...ಈಕೆ ಸರಿ ಇಲ್ಲ...ಅವರು ಹಂಗೆ...ಇವರು ಹಿಂಗೆ ಅನ್ನುವವರು .....ಯಾವತ್ತಿದ್ದರೂ ಕಮಲವಾಗುವುದಿಲ್ಲ....ಕಮಲ ಬೆಳೆಯಲು ಸಹಕರಿಸುವ ಕೆಸರಾಗುತ್ತಾರೆ....."
.
ಒಳ್ಳೆಯದನ್ನು ಗುರುತಿಸೋಣ....ಇನ್ನೊಬ್ಬರನ್ನು ದೂಷಿಸುವವರು ಕೆಸರಾಗುತ್ತಾರೆ......ದೂಷಿಸಿಕೊಂಡವನು ಕಮಲವಾಗುತ್ತಾನೆ.....ಆಯ್ಕೆ ನಮ್ಮದು....

# ವೆಂಕಟೇಶ ಸಂಪ
ಓದಿ ಸಂಪದ ಸಾಲು

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಮನುಷ್ಯತ್ವ ಮರೆತ ಪರಿಣಾಮ! Venkatesha sampa

ಮನುಷ್ಯತ್ವ ಮರೆತ ಪರಿಣಾಮ!  Venkatesha sampa 
ಹಾಗಂತ ಒಮ್ಮೆ ಯೊಚಿಸಿದರೆ ಸಾಕಿತ್ತು!
ನಮ್ಮದೇ ಊರು, ನಮ್ಮದೇ ಜನ, ನಮ್ಮನೆ ಹುಡುಗಿ ಅಂತನೋ ಅಥವಾ ತನ್ನನ್ನೇ ಹೆತ್ತ ಕರುಳನ್ನೋ ಒಮ್ಮೆ ನೆನೆಸಿಕೊಂಡರೆ ಖಂಡಿತಾ ಮನುಷ್ಯ ಮೃಗನಂತೆ ವರ್ತಿಸುತ್ತಿರಲಿಲ್ಲ.   ಅಮಾಯಕ ಹೆಣ್ಣು ನರಳಿ ನರಳಿ ಸಾಯುತ್ತಿರಲಿಲ್ಲ.  
ಇನ್ನೂ ಬಾಳಬೇಕಾದ,  ಇನ್ನೊಂದು ಬದುಕಿಗೆ ಕಾರಣವಾಗುವ ಹೆಣ್ಣೆಂಬ ದೇವತೆಯನ್ನು ಅಮಾನುಷವಾಗಿ ಬಲಾತ್ಕಾರ ಮಾಡಿ ಆಕೆಯನ್ನು ಜೀವಂತವಾಗಿ  ಕೊಂದು ಹಾಕುವಷ್ಟು ನೀಚ ಮನಸ್ಥಿತಿಯ ಸಮಾಜದಲ್ಲಿ ನಾವಿದ್ದೇವೆ ಅನ್ನೋದೇ ಅತ್ಯಂತ ವಿಷಾದದ ಸಂಗತಿ.

ಸುಖ ಅರಸುವ ಮನಸ್ಸು  ತನ್ನದೇ ಆದ ಪರಿಮಿತಿಯನ್ನು ಅರಿತಿರಬೇಕಾಗುತ್ತದೆ. ಇಲ್ಲದಿದ್ದರೆ ಮನುಷ್ಯನಿಗೂ ಪ್ರಾಣಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ.  

ಎಷ್ಟೇ ಸಮಾನತೆ ಎಂದರೂ, ಹೆಣ್ಣು ಎಂಬ ದೇವತೆಗೆ ಸಾಕಷ್ಟು  ವಿಭಿನ್ನತೆಗಳಿವೆ.  ಆಕೆಗೆ ಆಕೆಯದೇ ಆದ ಶಕ್ತಿಯೂ ಇದೆ ಅಷ್ಟೇ ದೌರ್ಬಲ್ಯಗಳಿವೆ. ಅದನ್ನು ಅರಿಯದ ಪರಿಣಾಮವೂ ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗಿಬಿಡುತ್ತದೆ.

ನ ಸ್ತ್ರೀ ಸ್ವಾತಂತ್ರಂ ಅರ್ಹತಿ ಎನ್ನುವ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೇ ಧಕ್ಕೆ ತಂದು ಮನೆಯ ಮೂಲೆಯಲ್ಲಿ ಕೂರುವ ಕಾಲಘಟ್ಟವಲ್ಲ ಇದು. ಒಬ್ಬ ಪುರುಷನಿಗೆ ಸರಿ ಸಮನಾಗಿ ಬದುಕನ್ನು ಕಟ್ಟುವ ಜೊತೆ ಸಮಾಜ ಮತ್ತು ದೇಶವನ್ನು ಕಟ್ಟಬಲ್ಲ ಶಕ್ತಿ ಹೊಂದಿದ  ಹೆಣ್ಣು ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಿಕೊಳ್ಳಬೇಕಾದ್ದು ಅನಿವಾರ್ಯ.

ಹೆಣ್ಣೆಂದರೆ ಅಡುಗೆ ಮನೆಗೆ ಸೀಮಿತ ಎನ್ನುತ್ತಿದ್ದ ಪುರುಷರೂ ಆಕೆಯ ಬದುಕಿಗೆ, ಆಸೆಗೆ, ಸಾಧನೆಗೆ ಬೆಂಬಲಿಸಬೇಕಾದ ಕರ್ತವ್ಯ ಮರೆಯಬಾರದು.
ಕೆಲವೊಮ್ಮೆ ತಡವಾಗಿ ನೌಕರಿ ಮುಗಿಸಿ ಬರುವಾಗ ಸಹೋದ್ಯೋಗಿಗಳಾದರೂ ಜೊತೆ ಹೋಗಿ ಸುರಕ್ಷಿತವಾಗಿ ತಲುಪುವಂತೆ ಕಾಳಜಿ ವಹಿಸಬೇಕಿದೆ. 
      ಪೋಲಿಸ್, ಕಾನೂನು ಎಷ್ಟೇ ಇದ್ದರೂ ತನ್ನದೇ ಎಚ್ಚರಿಕೆಯಲ್ಲಿ  ಹೆಣ್ಣು ಇರಬೇಕಿದೆ. 
ಸಮಾಜವೂ ಹೆಣ್ಣನ್ನು ನೋಡುವ ದೃಷ್ಟಿಯಲ್ಲಿ ಬದ್ದತೆ ಗಳಿಸಿಕೊಳ್ಳಬೇಕಿದೆ

ಇನ್ನು ಈ ಅಮಾನವೀಯ ಕೃತ್ಯ ಎಸಗಿದ ಪಾಪಿಗಳಿಗೆ ಶಿಕ್ಷೆ ಆಗಬೇಕು ಅದು ಹೇಗಿರಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.  ಯಾಕೆಂದರೆ ಭಾರತದ ಕಾನೂನಿನ ಮೂಲ ಆಶಯವೇ" ಸಾವಿರ ಜನ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು" ಎಂದು.
ಈ ಕಾರಣಕ್ಕಾಗಿಯೇ ಕಾನೂನಿನ ಪ್ರಕ್ರಿಯೆಗಳು ಧೀರ್ಘ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ನೊಂದವರಿಗೆ ನೋವಾಗುತ್ತಿದ್ದರೂ ಪ್ರಕ್ರಿಯೆ ಚುರುಕಿಗೆ ಮತ್ತೆ ಕಾನೂನು ರೂಪಿಸಬೇಕಿದೆ.

ಅನೈತಿಕ ಸಂಬಂಧಗಳು ಅತ್ಯಚಾರವಲ್ಲ! 
ಎಸ್ ಈ ಬಗ್ಗೆ ಕಾನೂನು ತನ್ನ ದೃಷ್ಟಿಕೋನ ಸರಿಯಾಗಿರಿಸಿಕೊಳ್ಳದಿದ್ದರೆ ಆಗಬಹುದಾದ ಬಹುದೊಡ್ಡ ಅಪಾಯಕ್ಕೆ ಯಾರು ಹೊಣೆ?
ಇತ್ತೀಚೆಗೆ ಹೆಚ್ಚುತ್ತಿರುವ ಅನೈತಿಕ   ಪ್ರಕರಣಗಳು, ಪರಸ್ಪರ ಒಪ್ಪಿತ ಸಂಬಂಧಗಳು ಹೇರಳವಾಗಿ ಹೆಚ್ಚುತ್ತಿದೆ.  ಇದರಲ್ಲಿ ತನ್ನ ಸ್ವಾರ್ಥಕ್ಕಾಗಿ ಕೆಲವು ಹೆಣ್ಣುಮಕ್ಕಳು ಹನಿ ಟ್ರಾಪ್, ಬ್ಲಾಕ್ ಮೇಲ್  ವಸೂಲಿ ದಂಧೆ ಮಾಡುವುದರ ಜೊತೆಗೆ ಅದೆಷ್ಟೋ ಅಮಾಯಕರ ಬದುಕಿನ ಜೊತೆಗೂ ಚೆಲ್ಲಾಟವಾಡುತ್ತಾರೆ.
ತನಗೆ ಬೇಕಾದಾಗ ಬೇಕಾದಷ್ಟು ದಿನ ಓಡಾಡಿದ ನಂತರ ತನ್ನ ಸ್ವಾರ್ಥ ನಡೆಯದಿದ್ದರೆ  ಅದನ್ನು ರೇಪ್ ಅಂತ ಕೇಸಗಳನ್ನು ಹಾಕಿ ಹೆದರಿಸುವುದು ಅಥವಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕುತ್ತೇನೆಂದು ಹೆದರಿಸುವುದು ಈ ತರಹದ ದುರುಪಯೋಗಗಳ ಬಗ್ಗೆಯೂ ಕಾನೂನು ರೂಪಿಸುವಾಗ ಎಚ್ಚರಿಕೆ ವಹಿಸಲೇಬೇಕಿದೆ.

ಎನ್ಕೌಂಟರ್ ಮತ್ತು ಶಿಕ್ಷೆ!
ಯಾವುದೇ ತಪ್ಪಿಗೆ ಕಾನೂನಿನ ಮೂಲಕ ಶಿಕ್ಷೆ ಆಗಬೇಕೇ ವಿನಃ ಭಾವನಾತ್ಮಕವಾಗಿ ವರ್ತಿಸಲು ಸಾಧ್ಯವಿಲ್ಲ. ಕಾನೂನು ನೀಡುವ ಗಲ್ಲುಶಿಕ್ಷೆಯಂತಹ ಕಾನೂನುಗಳು ಅತ್ಯಾಚಾರಿಗಳಿಗೆ ನೀಡಬೇಕು.        ಆ ಪ್ರಕ್ರಿಯೆ ಚುರುಕಾಗಬೇಕು ಆದರೆ     ಎನ್ಕೌಂಟರ್ ಎಂಬ ಅಸ್ತ್ರ ನಾಳೆ ದೊಡ್ಡ ಮಟ್ಟದಲ್ಲಿ ದುರುಪಯೋಗವಾದರೆ ಅದಕ್ಕೆ ಉತ್ತರದಾಯಿತ್ವ ಇರುವುದಿಲ್ಲ.

ನೈತಿಕ ಶಿಕ್ಷಣ ಮತ್ತು    ಮನುಷ್ಯತ್ವದ ಬದುಕು!
ಎಲ್ಲವೂ ಕಾನೂನಿನ ಮೂಲಕ ಸರಿ ಆಗುತ್ತದೆ ಎಂಬ ನಂಬಿಕೆಯಿಲ್ಲ.  ಬಹುತೇಕ ಬದಲಾವಣೆಗಳು ನಮ್ಮ ಮನಃಪರಿವರ್ತನೆಯಿಂದ,  ನಮ್ಮ ಆಲೋಚನೆಗಳು ಸ್ವಚ್ಚವಾಗಬೇಕು. ನೋಡುವ ದೃಷ್ಟಿಕೋನ ಮತ್ತು ನಡೆದುಕೊಳ್ಳುವ ರೀತಿ ಸರಿಯಾಗಬೇಕು. ಮನುಷ್ಯತ್ವದ ತಳಹದಿಯಲ್ಲಿ ಬದುಕು ನಿರ್ಮಾಣವಾಗಬೇಕಿದೆ.
ಕ್ರೌರ್ಯ, ಹಿಂಸೆ, ಯಾವತ್ತಿದ್ದರೂ ಅಸಹ್ಯ ಮತ್ತು ಖಂಡನೀಯ.
ಕಾನೂನಿನ ಭಯ,  ದುಷ್ಕೃತ್ಯದ ನಿಯಂತ್ರಣ,ನಮ್ಮದೇ ಆದ ಎಚ್ಚರಿಕೆಯ ನಡವಳಿಕೆ ಸಮಾಜದ ಸ್ವಾಸ್ಥ್ಯ ಮತ್ತು ಸಂತೋಷವನ್ನು    ಕಾಪಾಡಬಲ್ಲದು
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
sampadasaalu@gmail.com sampadasaalu.blogspot.com 
9448219347

ಪಾಸಿಟಿವ್ ಆಲೋಚನೆಯ ವ್ಯಕ್ತಿತ್ವ ಬೆಳಕನ್ನು ಸೃಷ್ಟಿಸುತ್ತಾ ಸಾಗುತ್ತದೆ. ವೆಂಕಟೇಶ ಸಂಪ

ಹರಿಯುವ ನೀರು ದಾರಿಯನ್ನು ಹುಡುಕಿಕೊಳ್ಳುತ್ತದೆ.ಹಸಿದವರು ಅನ್ನ ಹುಡುಕಿಕೊಳ್ಳುತ್ತಾರೆ.ಕಲಿಕೆಯ ಆಸಕ್ತಿ ಉಳ್ಳವನು ವಿದ್ಯೆಯನ್ನು ಪಡೆಯುತ್ತಾನೆ.   ಸಣ್ಣ ಆಲೋಚನೆಯ ನೆಗೆಟಿವ್ ವ್ಯಕ್ತಿತ್ವ ಕತ್ತಲೆಯಲ್ಲೇ ದಿನ ಕಳೆಯುತ್ತದೆ.ಪಾಸಿಟಿವ್ ಆಲೋಚನೆಯ ವ್ಯಕ್ತಿತ್ವ ಬೆಳಕನ್ನು ಸೃಷ್ಟಿಸುತ್ತಾ ಸಾಗುತ್ತದೆ.    ವೆಂಕಟೇಶ ಸಂಪ, ಓದಿ ಸಂಪದ ಸಾಲು

ದೇಶದ ಒಳಿತಿಗಾಗಿ ಬಂದ ಕಾನೂನನ್ನು ಗೌರವಿಸಲೇಬೇಕು#ವೆಂಕಟೇಶಸಂಪ

ದೇಶದ ಒಳಿತಿಗಾಗಿ ಬಂದ ಕಾನೂನನ್ನು ಗೌರವಿಸಲೇಬೇಕು

#ವೆಂಕಟೇಶಸಂಪ 


ಪಕ್ಕದ ಮನೆಯವನೊಬ್ಬ ನನ್ನ ಮನೆಗೆ ಅತಿಥಿಯಾಗಿ ಬರಬಹುದು. ಹೆಚ್ಚೆಂದರೆ ನಾಲ್ಕು ದಿನ ಉಳಿಯಬಹುದು ಆದರೆ ಆತನನ್ನು ನಮ್ಮನೆಯವನನ್ನಾಗಿ ಸ್ವೀಕರಿಸಿದರೆ ಲಾಭಕ್ಕಿಂತ ಅಪಾಯವೇ ಜಾಸ್ತಿ.ಆತನನ್ನು ನಮ್ಮನೆಯವನು ಅಂತ ಒಪ್ಪಿಕೊಂಡು ಎಲ್ಲ ಸ್ವಾತಂತ್ರ್ಯ ಕೊಟ್ಟರೆ ಮನೆಯವರೇ ಹೊರಗಿನವರಾಗುವ ಅಪಾಯದ ಸಣ್ಣ ಕಲ್ಪನೆ ಮಾಡಿಕೊಂಡರೆ ಸಾಕು ನಮ್ಮ ಭಾರತಕ್ಕೆ ಪೌರತ್ವ ಕಾಯಿದೆಯ ಅನಿವಾರ್ಯತೆ    ಅರ್ಥವಾಗುತ್ತದೆ.
ನಮ್ಮ ದೇಶದವರಲ್ಲ,ನಮ್ಮ ದೇಶದ ಮೂಲ ನಿವಾಸಿಗಳೂ ಅಲ್ಲದವರು ಅವರ ಯಾವ್ಯಾವುದೋ ಕಾರಣಕ್ಕೆ ಗೊತ್ತಿಲ್ಲದಂತೆ ನಮ್ಮ ದೇಶಕ್ಕೆ ನುಸುಳಿ ಅಲ್ಲಲ್ಲಿ ಸೇರಿಕೊಂಡು ಬದುಕು ನಿರ್ಮಿಸಿಕೊಳ್ಳಲು ಹೊರಟರೆ 130 ಕೋಟಿ ಜನಸಂಖ್ಯೆ ದಾಟಿದ ಭಾರತದ ಆರ್ಥಿಕ ಸಾಮಾಜಿಕ ಸ್ಥಿತಿ ಗತಿ ಏನಾಗಬಹುದು? ಒಮ್ಮೆ ಯೋಚಿಸಿ.
ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ನಮ್ಮ ಮನೆಯ ನಾಲ್ಕು ಜನರ ಬದುಕಿಗೆ ಮಾತ್ರಾ ಸಾಕಾಗುವಷ್ಟಿದ್ದು ಅಕ್ರಮವಾಗಿ ಮನೆಗೆ ಬಂದಾತ ಅದನ್ನು ಕಬಳಿಸಿಬಿಟ್ಟರೆ ಮನೆಯ ಜನ ಎಲ್ಲಿ ಹೊಗಬೇಕು?
ಹೆಚ್ಚುತ್ತಿದೆ ಕ್ರೈಂ... 
ಈ ತರಹದ ಅಕ್ರಮ ನುಸುಳುವಿಕೆಯ ಪರಿಣಾಮ ಎಲ್ಲೆಂದರಲ್ಲಿ ಕೊಲೆ ಕಳ್ಳತನ ಮತ್ತು ಅಕ್ರಮ ಚಟುವಟಿಕೆ ನಡೆಯುತ್ತಿದೆ.ಆದರೆ ಅಕ್ರಮಿಗರನ್ನು ಹಿಡಿಯೋದು ಹೇಗೆ?
ಕ್ರೈಮ್ ಗಳನ್ನು ನಿಯಂತ್ರಿಸೋದು ಹೇಗೆ?

ದೇಶದ ಸುರಕ್ಷತೆಗಿಂತ ರಾಜಕಾರಣ ಮುಖ್ಯವಾಗಬಾರದು
ನಮ್ಮ ಮನೆಯೇ ಅಪಾಯಕ್ಕೆ ಬಂದಿದೆ ಎಂದಾದರೆ ಮನೆಯ ಜನರೇ ಕಿತ್ತಾಡಬಾರದು.ಮನೆಯವರ ನಡುವೆ ಅಭಿಪ್ರಾಯ  ಭೇದವಿರಬಹುದು ಆದರೆ ಅದು ಹೊರಗಿನವರ ವಿಚಾರಕ್ಕೆ ಒಗ್ಗಟ್ಟು ಇಟ್ಟುಕೊಳ್ಳಲೇಬೇಕು.
ಭಾರತದಲ್ಲಿಯೇ ಹುಟ್ಟಿ ಬೆಳೆದ ಅಕ್ರಮಿಗರಲ್ಲದವರಿಗೆ ಏನು ತೊಂದರೆ ಇಲ್ಲವೆಂದರೂ ಪ್ರತಿಭಟನೆ ಗಲಾಟೆ ಮತ್ತು ಹಿಂಸೆ  ಮಾಡಿದರೆ ಏನು ಪ್ರಯೋಜನ?     

ಯಾವುದೇ ವಿಚಾರಗಳಿರಲಿ ಚರ್ಚೆಯಾಗಬೇಕು.   ಬದಲಾವಣೆ ಪರಿವರ್ತನೆಯ ಪ್ರಯತ್ನ ಮಾಡಬೇಕು.ಆಗಲಿಲ್ಲವೆಂದರೆ ವ್ಯವಸ್ಥೆಯನ್ನು ಹಾಳು ಮಾಡಬಾರದು. ಆಡಳಿತ ವ್ಯವಸ್ಥೆಯಲ್ಲಿ ಇವತ್ತು ಇದ್ದವರು ನಾಳೆ ಇರುತ್ತಾರೆಂಬ ನಂಬಿಕೆ ಇಲ್ಲ.ಇದ್ದಷ್ಟು ದಿವಸ ಭವಿಷ್ಯದ ಭಾರತದ ಕಲ್ಪನೆ ಇರಲೇಬೇಕು. ಆ ನಿಟ್ಟಿನಲ್ಲಿ ಪೌರತ್ವ ಕಾಯ್ದೆ  ಭಾರತಕ್ಕೆ ಅನಿವಾರ್ಯ. ದೇಶದ ಒಳಿತಿನ ಯೋಜನೆಗೂ ರಾಜಕೀಯ ಮಾಡಿದರೆ ದೇಶವನ್ನೇ ಅಪಾಯಕ್ಕೆ ತಂದಂತೆ ಎನ್ನುವುದು ನೆನಪಿರಲಿ. 
ಒಳ್ಳೆಯ ಕಾಯ್ದೆಗೆ ಎಲ್ಲರ ಬೆಂಬಲ ಇರಲೇಬೇಕು.     ದೇಶದ ಸುರಕ್ಷತೆಗಾಗಿ ಒಳಿತಿಗಾಗಿ ಯಾವುದೇ ಪಕ್ಷದ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡರೆ ಅವರ ಜೊತೆ ನಿಲ್ಲಬೇಕಾದ್ದು ಜನರ ಕರ್ತವ್ಯ .
We should support it...Because  ಎಲ್ಲಕ್ಕಿಂತ ದೇಶ ದೊಡ್ಡದು. ..
ವೆಂಕಟೇಶ ಸಂಪ 
9448219347

ನಾನು ಬೆಳೆಯಲೇಬೇಕು ನನಗಾಗಿ ಅಲ್ಲದಿದ್ದರೂ ನನ್ನ ಕನಸುಗಳಿಗಾಗಿ,,,,,

ಕೇವಲ ಒಂದು ಊಟಕ್ಕಾಗಿ ಸರದಿಯ ಸಾಲಿನ ಕೊನೆಯಲ್ಲಿ ದಿನವಿಡೀ ಕ್ಯೂ ನಿಂತಾಗ ನಾನು ಹೇಳಿಕೊಳ್ಳುತ್ತೇನೆ....ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು.....
ಒಂದೇ ಒಂದು ಕೊಡ ನೀರಿಗಾಗಿ ದಿನವಿಡೀ  ಕಿತ್ತಾಡುವ ಹೆಂಗಸರನ್ನು ಕಂಡಾಗ ನನಗೆ ನಾನೇ ಹೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು! 
 ಸಣ್ಣ ಆದಾಯ ದೃಢೀಕರಣ ಪತ್ರಕ್ಕಾಗಿ ವರ್ಷಗಟ್ಟಲೆ ಸರ್ಕಾರಿ ಕಛೇರಿ ಅಲೆಯುವ ನನ್ನ ರೈತಮಿತ್ರ ಅಲೆಯುವಾಗಲೆಲ್ಲಾ ಅಂದುಕೊಳ್ಳುತ್ತೇನೆ....ನಾನು ಸಾಮಾನ್ಯ ವ್ಯಕ್ತಿಯಾಗಬಾರದೆಂದು! 
 ಜೇಬಿನಲ್ಲಿ ಹಣವಿಲ್ಲದೇ ಕೆಮ್ಮು ಬಂದರೂ ಔಷಧಿ ತೆಗೆದುಕೊಳ್ಳಲಾಗದೇ ಒದ್ದಾಡುವ ಬಡ ಅಜ್ಜಿಯನ್ನು ಕಂಡಾಗ ಹೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು! 
ತಿಂಗಳ ಸಮಸ್ಯೆಯಲ್ಲೂ ಎಟ್ಲೀಸ್ಟ್ ಕಡಿಮೆ ದರದ ಪ್ಯಾಡ್ ಕೂಡ ತೆಗೆದುಕೊಳ್ಳಲಾಗದೆ,ಅಸಹಾಯಕತೆಯನ್ನು ಹೇಳಲಾಗದ ಕೂಲಿಯ ಅಕ್ಕತಂಗಿಯರನ್ನು ಕಂಡಾಗ ಹೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು! 
ವ್ಯವಸ್ಥೆಯ ವಿಚಿತ್ರ ಸನ್ನಿವೇಶಗಳನ್ನೆಲ್ಲಾ ಕಂಡಾಗ ಕೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು! .....ಇದನ್ನೆಲ್ಲವನ್ನೂ ಮೀರಿ ಏನಾದರೂ ಮಾಡಿ ಎಲ್ಲರಿಗೂ ಉಪಕಾರಿಯಾಗಬೇಕೆಂದು......
ತುಂಬಾ ಒಳ್ಳೆಯವನನ್ನಾಗಿ ಮಾಡು ಎಂದು ಯಾವತ್ತೂ ಕೇಳುವುದಿಲ್ಲ,ಆದರೆ ತುಂಬಾ ಜನರಿಗೆ ಸಹಕಾರಿಯನ್ನಾಗಿ ಮಾಡು ಎಂಬ ನನ್ನ ಕೋರಿಕೆಗೆ 
ಸ್ಪಂದಿಸುವೆಯಾ ಭಗವಂತಾ!?
ನಾನು ಬೆಳೆಯಲೇಬೇಕು ನನಗಾಗಿ ಅಲ್ಲದಿದ್ದರೂ ನನ್ನ ಕನಸುಗಳಿಗಾಗಿ,,,,,
ಸ್ಪಂದಿಸುವೆಯಾ ಸಮಾಜ?
ಆಶೀರ್ವದಿಸುವೆಯಾ ಭಗವಂತಾ?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

ತಡೆದು ನಿಲ್ಲಿಸಬಹುದಾಗಿದ್ದ ಸಮಸ್ಯೆ ಇಂದು ಜನರ ಬದುಕಿಗೇ ಕಂಟಕವಾಯಿತೇ!? ವೆಂಕಟೇಶ ಸಂಪ

ತಡೆದು ನಿಲ್ಲಿಸಬಹುದಾಗಿದ್ದ ಸಮಸ್ಯೆ ಇಂದು ಜನರ  ಬದುಕಿಗೇ ಕಂಟಕವಾಯಿತೇ!?
                     ವೆಂಕಟೇಶ ಸಂಪ 
ಒಂದೇ ಒಂದು ವೈರಸ್ ಸಂಪೂರ್ಣ ಜಗತ್ತೇ ದಿವಾಳಿಯಾಗುವಂತೆ ಮಾಡಿಬಿಟ್ಟಿತೇ?
ಹೌದು ಎನಿಸುತ್ತಿದೆ.  ಕಾರ್ಮಿಕರಿಗೆ ಕೂಲಿ ಕೆಲಸವಿಲ್ಲ.  ಉದ್ಯಮಿಗಳಿಗೆ ಮಾರುಕಟ್ಟೆ ಇಲ್ಲ. ಮಾರಾಟಗಾರರಿಗೆ ಕೊಳ್ಳುವವರಿಲ್ಲ. ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ಎಂದು ಲೆಕ್ಕವಿಲ್ಲದಷ್ಟು ಜನ ದಿಕ್ಕೆಟ್ಟು ಕುಳಿತಿದ್ದಾರೆ. ಸರ್ಕಾರವೂ ಶ್ರಮಿಸುತ್ತಿದೆ ಅಸಹಾಯಕನಾಗಿ ದಾರಿ ಹುಡುಕುತ್ತಿದೆ.      ಹಾಗಂತ ಈ ವೈರಸ್ ನಮ್ಮ ದೇಶದಲ್ಲಿ ಹುಟ್ಟಿದ್ದಲ್ಲ.   ವಿದೇಶಿ ವೈರಸ್.ತಡೆದು ನಿಲ್ಲಿಸಬಹುದಾಗಿತ್ತು....ಆದರೆ ಅದರ ಗಂಭೀರತೆ ತಿಳಿಯಲಿಲ್ಲ. ಸಾವು ನೋವುಗಳನ್ನು ಕಲ್ಪಿಸಿಕೊಳ್ಳಲಿಲ್ಲ.  ಪಾಪಿ ಚೀನಾದ ಕುಕೃತ್ಯಕ್ಕೆ ಹುಟ್ಟಿದ ವೈರಸ್ ಇಡೀ ವಿಶ್ವಕ್ಕೆ ಬೆಂಕಿ ಹಚ್ಚಿ ತಾನು ಶಾಂತವಾಗಿ ನಿಂತಿತು, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಧರ್ಮಾಂಧರಂತೆ!
ಡಿಸೆಂಬರ್ 2019 ಕ್ಕೆ ಚೀನಾದ ಕತೆ ಗೊತ್ತಾಗಿತ್ತು. ಅಲ್ಲಿಂದ ಎಲ್ಲಾ ದೇಶಕ್ಕೆ ಜನ ಓಡಾಡಿ ವೈರಸ್ ಹರಡಿದ್ದು ಜನವರಿಗೇ ತಿಳಿದಿತ್ತು. ಈಗ ಭಾರತದಲ್ಲೇ ತೆಗೆದುಕೊಳ್ಳಿ ದಿನವೊಂದಕ್ಕೆ ವಿದೇಶದಿಂದ ಸರಿ ಸುಮಾರು 80 ಸಾವಿರ ಜನ ಬರುತ್ತಿದ್ದರು.
ಇವರನ್ನೆಲ್ಲಾ ಹಿಡಿದು ಯಾವುದೋ ರೆಸಾರ್ಟ್ ಅಥವಾ ಹೋಟೆಲ್ ಅಥವಾ ಖಾಸಗಿ ಜಾಗದಲ್ಲಿ ಹಿಡಿದು 14 ದಿನ ನಿಯಂತ್ರಿಸಿ ಬಿಟ್ಟಿದ್ದರೆ ಖಂಡಿತಾ ಭಾರತ ಈ ತರ ನಲುಗುತ್ತಿರಲಿಲ್ಲ.   ಅಷ್ಟರ ಒಳಗೆ ಸರಿ ಸುಮಾರು 58 ದೇಶ ಈ ಸಮಸ್ಯೆ ಎದುರಿಸಿದ್ದು ಕಂಡಿತ್ತು ಭಾರತ. ಎಲ್ಲ ತಪ್ಪನ್ನು ನಾವೇ ಮಾಡಿ ಅನುಭವಿಸಿ ತಿಳಿದು ತಿದ್ದಿಕೊಳ್ಳುವಷ್ಟು ಸಮಯ ಈ ಜಗತ್ತಲ್ಲಿ ಇಲ್ಲ. ಪಕ್ಕದವರ ಸಮಸ್ಯೆಯನ್ನು ನೋಡಿ ಮುಂಜಾಗರೂಕತೆ ತೆಗೆದುಕೊಂಡಿದ್ದರೆ ಭಾರತ ವಿಶ್ವಗುರು ಆಗುತ್ತಿತ್ತು.
ಹೋಗಲಿ ಬಿಡಿ ಕಳೆದುಹೋದದ್ದಕ್ಕೆ ಎಷ್ಟು ಅಂತ ಪೋಸ್ಟ್ ಮಾರ್ಟಮ್ ಮಾಡೋದು ಹೇಳಿ?
ಒಂದಂತೂ ಸತ್ಯ...ದುಡ್ಡು ದುಡಿಮೆ ಅಂತ ಊರು ಬಿಟ್ಟು ಪರದೇಶಿಗಳಾಗಿದ್ದ ವಿದೇಶಿ ರಿಟರ್ನ್ಸ್ ಗಳಿಂದ ನಮ್ಮ ದೇಶದ 130 ಕೋಟಿ ಜನಸಂಖ್ಯೆಎಲ್ಲವನ್ನು ಬಿಟ್ಟು ಕೂರುವಂತಾಗಿದ್ದು ದುರಂತ ಸತ್ಯ!          

ಸರಿ ಸುಮಾರು 40%  ವಲಸಿಗರಿರುವ ನಮ್ಮ ಭಾರತದಲ್ಲಿ ಅವರ ಊಟ ವಸತಿ ಕೂಡ ದೊಡ್ಡ ಸಮಸ್ಯೆಯಾಗಿದೆ ಜಾಗ, ವಿಪರೀತ ಜನಸಂಖ್ಯೆ, ದಿನದ ದುಡಿಮೆ ನಂಬಿಕೊಂಡ ಬಹುತೇಕ ಜನ ಒಂದೆಡೆಯಾದರೆ, ಇನ್ನೊಂದು ತಿಂಗಳು ಹೇಗೋ ಬದುಕು ಸಾಗಿಸಬಲ್ಲ ಮಧ್ಯಮ ವರ್ಗ ಇನ್ನೊಂದೆಡೆ....ಕೇವಲ ಬೆರಳಿಕೆಯಷ್ಟು ಮಂದಿ ಮಾತ್ರಾ   ಶ್ರೀಮಂತಿಕೆಯಲ್ಲಿದ್ದಾರೆ.  
ಶ್ರೀಮಂತವರ್ಗಕ್ಕೆ ಬದುಕು ಹೇಗೋ ಸಾಗಿಬಿಡುತ್ತದೆ. ಇತ್ತ ಬಡವರಿಗೂ ಸರ್ಕಾರ ಸ್ಪಂದಿಸುತ್ತದೆ. ನಾವು ಸ್ಪಂದಿಸಲೇಬೇಕು. ಆದರೆ ಮದ್ಯಮ ವರ್ಗದ ಕತೆ ಏನು ಸ್ವಾಮಿ?
ಅತ್ತ ಹಾವು ಸಾಯುವುದಿಲ್ಲ....ಇತ್ತ ಕೋಲು ಮುರಿಯುವುದಿಲ್ಲ.... ಕೈ ಎತ್ತಿ ಎಲ್ಲರಿಗೂ ಕೊಡೋಣ ಅಂತ ಆಸೆ ಪಡುವ ಇವರಿಗೆ ನಾಳೆ ಇರುತ್ತದೆ ಎಂಬ ನಂಬಿಕೆ ಇರೋದಿಲ್ಲ.   ಕಷ್ಟ ಪಟ್ಟು ಪುಟ್ಟ ಕಾರು ತೆಗೆದುಕೊಂಡ ಮಧ್ಯಮ ವರ್ಗದವರಿಗೆ ಬಿಪಿಎಲ್ ಕಾರ್ಡ್ ಇರೋದಿಲ್ಲ. ತಿಂಗಳುಗಟ್ಟಲೆ ದುಡಿಮೆ ಇಲ್ಲದ ಆತನಿಗೆ ಪೆಟ್ರೋಲ್ ಕೂಡ ಹಾಕಲು ಆಗಲ್ಲ.  ಸಮಾಜ ನೋಡುತ್ತದೆ ಎಂಬ ಕಾರಣಕ್ಕೆ   ಗುಡಿಸಲಲ್ಲಿ ಬದುಕಲಾರದೆ ಸಾಲ ಮಾಡಿಯಾದ್ರು ಒಳ್ಳೆ ಬಾಡಿಗೆ ಮನೆ ಹಿಡಿದಿರುತ್ತಾರೆ.... ದುಡಿಮೆ ಇಲ್ಲದೆ ಬಾಡಿಗೆ ಹೇಗೆ ಕಟ್ಟಬೇಕು?   
ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸೋಣ ಎಂದರೆ ಕ್ವಾಲಿಟಿ ಇಲ್ಲದ ಶಿಕ್ಷಣ, ಖಾಸಗಿ ಶಾಲೆಗೆ ಕಳಿಸೋಣ ಎಂದರೆ ಲಕ್ಷಗಟ್ಟಲೆ ದುಡ್ಡು....ಆದರೂ ಮಕ್ಕಳು ಬೆಳೆಯಲಿ ಎಂಬ ಅತೀವ ಆಸೆ.  ಹೀಗೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ.   ಯಾರಿಗೆ ಹೇಳೋಣ ಪ್ರಾಬ್ಲಮ್ಮು!
ನಮ್ಮ ಜನಗಳ ನೋವಿಗೆ ಇಲ್ಲ ಮುಲಾಮು!
ಸಾವಿರಾರು ಜನ ಪವಾಡ ಮಾಡುವವರಿದ್ದಾರೆ! 
ಲಕ್ಷಾಂತರ ಮಠ, ಮಂದಿರ, ಮಸೀದಿ,ಚರ್ಚ್, ಸ್ವಾಮಿ, ಮೌಲ್ವಿ, ಫಾದರ್ ಗಳಿದ್ದಾರೆ  
ಎಲ್ಲರೂ ಭವಿಷ್ಯ ತೋರಿಸುವವರು.......ಆದರೆ ಯಾರಿಗೂ ದಾರಿ ತೋರಿಸಲಿಲ್ಲ. ಎಲ್ಲವೂ ಸರಿ ಇದ್ದಾಗ  ಬಹುತೇಕರು ದುಡ್ಡು, ಪ್ರಚಾರ, ಜಾತಿ, ಧರ್ಮ, ರಾಜಕೀಯ, ಪಕ್ಷ ಅಂತ ಸಂಕೀರ್ಣರಾದರು ಅಷ್ಟೇ. 
ಸಂಕಷ್ಟಕ್ಕೆ  ನಿಂತವರು ಬೆರಳೆಣಿಕೆಯಷ್ಟು ಮಾತ್ರಾ!

ಆದರೂ ಒಂದನ್ನು ಹೇಳಲೇ ಬೇಕಿದೆ.....
ಭಾರತ ಒಂದು ಆಧ್ಯಾತ್ಮ ನೆಲ.   ಎಷ್ಟೆಷ್ಟೋ ಸಮಸ್ಯೆಗೆ ತಾನಾಗಿಯೇ ದಾರಿ ಕಂಡುಕೊಂಡಿದೆ. ಈ ಸಮಸ್ಯೆಯನ್ನೂ ಸರಿಪಡಿಸಿಕೊಳ್ಳಬಹುದೇನೋ? ಎಂಬ ಸಣ್ಣ ನಂಬಿಕೆಯ ಜೊತೆ ಬಿಸಿಲಿಗೆ ವೈರಸ್ ಪಸರಿಸುವ ಅವಕಾಶ ಕಡಿಮೆ ಎಂಬುವುದು ಕೂಡ ಇನ್ನೊಂದು ನಂಬಿಕೆ.
ಸರಿ ಇನ್ನೇನು ಹೇಳೋದು.....ಯಾರಿಗೆ ಯಾರುಂಟು ಯರವಿನ ಸಂಸಾರ ನೀರ ಮೇಲಣ  ಗುಳ್ಳೆ ನಿಜವಲ್ಲ ಹರಿಯೆ ಎಂಬ  ಹಾಡೊಂದನ್ನು ಬಿಟ್ಟು.....!
ಆದರೂ ಒಂದನ್ನು ಹೇಳಲೇಬೇಕಿದೆ. ..  ಇದು ನಮ್ಮದೇ ಜೀವನ .....ನಮ್ಮದೇ ಜೀವ.... ಮತ್ಯಾರೋ ದಾರಿ ತೋರಿಸುತ್ತಾರೆಂಬ ಭ್ರಮೆ ಬಿಟ್ಟು ನಮ್ಮದೇ ಆತ್ಮವಿಶ್ವಾಸದೊಂದಿಗೆ ಹಲ್ಲುಗಳ ನಡುವೆ ನಾಲಿಗೆ ಬದುಕಿದಂತೆ ಬದುಕಲೇಬೇಕಿದೆ.     ನಾಳೆಯ ಉತ್ತಮ ಬದುಕಿನ ನಿರೀಕ್ಷೆಯೊಂದಿಗೆ ನಿಮ್ಮ  ವೆಂಕಟೇಶ ಸಂಪ 
#ಓದಿಸಂಪದಸಾಲುಪತ್ರಿಕೆ 
9448219347
sampadasaalu@gmail.com

sampadasaalu.blogspot.com

 
ಹಗಲಿನ ಖಾಲಿ ನೀಲಿ ಆಕಾಶ ರಾತ್ರಿಯಾದಂತೆ ಎಣಿಸಲಾರದಷ್ಟು ನಕ್ಷತ್ರ ತುಂಬಿಕೊಂಡು ಮಿಂಚುತ್ತದೆ.ಕಗ್ಗತ್ತಲೆಯ ಬಾನು ಕೂಡ ಹಗಲಾದಂತೆ ಬೆಳಕಿನ ಪ್ರಕಾಶತೆಯನ್ನು ಸೂಸಬಲ್ಲದು.ಬರಿದಾದ ಬದುಕು ಕೂಡ ಪರಿವರ್ತನೆಯತ್ತ ಸಾಗಬಲ್ಲದು.  ತಾಳ್ಮೆ ಸಂಯಮ ಅವಕಾಶಗಳ ಬಾಗಿಲನ್ನು ತೆರೆಯಬಲ್ಲದು. *ವೆಂಕಟೇಶ ಸಂಪ,ಓದಿ ಸಂಪದ ಸಾಲು ಪತ್ರಿಕೆ 
9448219347
sampadasaalu@gmail.com

ನಾವು ಕೊಡೋ ನಾಲ್ಕು ರೂಪಾಯಿ ಇನ್ನೊಂದು ಬದುಕನ್ನು ನಿರ್ಮಿಸಬಲ್ಲದು. Venkatesha sampa

10 ವರ್ಷಗಳ ಹಿಂದೆ ಬರೆದ ನೈಜಕತೆ. ... ಮತ್ತೊಮ್ಮೆ ನೆನಪಿಗಾಗಿ...ಓದಿ ಪ್ರತಿಕ್ರಿಯಿಸಿ 

ನಾವು ಕೊಡೋ ನಾಲ್ಕು ರೂಪಾಯಿ ಇನ್ನೊಂದು ಬದುಕನ್ನು ನಿರ್ಮಿಸಬಲ್ಲದು. 
           Venkatesha sampa

ಬೆಳಗಿನ ಜಾವ!? ಬೆಂಗಳೂರಿನಿಂದ ರಾಜಹಂಸ ಬಸ್ಸಲ್ಲಿ ಸಾಗರಕ್ಕೆ ಬರುತ್ತಿದ್ದೆ.. ಮುಂಚಿನ ದಿನದ ಕೆಲಸದೊತ್ತಡಕ್ಕೆ ಅನಿಸುತ್ತದೆ.ಬಸ್ ಹತ್ತಿದಕೂಡಲೇ ನಿದ್ದೆ ಆಕ್ರಮಿಸಿಬಿಟ್ಟಿತ್ತು.

ನಾ ನಿದ್ರೆಗಣ್ಣಿನಲ್ಲಿದ್ದೆ. ಯಾರೋ ಒಬ್ಬ ಹುಡುಗ ಬಂದು ಬಸ್ಸಲ್ಲಿದ್ದವರಿಗೆ "ಅಣ್ಣಾ ಪೇಪರ್ ತಗೊಳ್ಳಿ.ನಾ ಸ್ಕೂಲ್ ಗೆ ಹೋಗೊ ಹುಡುಗ. ನನಗೆ ಸಹಾಯ ಆಗುತ್ತೆ..ಅಂತಿದ್ದ....ಬಸ್ಸಲ್ಲಿ ಕೂತಿದ್ದ ದೊಡ್ಡ ಮನುಷ್ಯನೊಬ್ಬ "ಏಯ್ ಬೆಳಿಗ್ಗೆ ಮುಂಚೆ ಬಿಕ್ಷೆ ಕೇಳ್ಬೇಡ. ಹೋಗಪ್ಪ."ಅಂತ ಗದರಿಸುತ್ತಿದ್ದ...ಆ ಹುಡುಗ ವಿಚಲಿತನಾಗದೇ ಹೇಳಿದ."ಅಣ್ಣಾ ನಾನು ದುಡಿಯುತ್ತಿದ್ದೀನಿ. ನಿಮಗೆ ಸಾಧ್ಯ ಆದ್ರೆ ಪೇಪರ್ ತಗೊಳ್ಳಿ" ಹೇಳಿ ಮತ್ತೆ ಪೇಪರ್...ಪೇಪರ್ ಅಂದ.

ನನಗೆ ಹಳೆಯ ನೆನಪುಗಳು ಉಕ್ಕಿ ಬಂದವು.ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಪೇಪರ್ ಹಂಚಿದ್ದು...ಬೆಳಿಗ್ಗೆ ಮುಂಚೆ ಪೇಪರ್ ಹಾಕುವಾಗ ನಾಯಿ ಅಟ್ಟಿಸಿಕೊಂಡು ಬಂದದ್ದು....ಎಲ್ಲವೂ ಒಂದು ಕ್ಷಣ ನೆನಪಾಯ್ತು....

ಆ ಬಸ್ಸಿನಲ್ಲಿದ್ದ ಮಹಾನುಭಾವ, ಕಷ್ಟ ಪಟ್ಟು ದುಡಿಯುವವನಿಗೆ ಸಹಾಯ ಮಾಡೋದನ್ನ ಬಿಟ್ಟು ಬಿಕ್ಷೆ ಕೇಳ್ಬೇಡ ಅಂದಾಗಲೂ ಒಂದು ಕ್ಷಣ ನಮ್ಮ ಜನಗಳ ವರ್ತನೆ ಕಣ್ಣ ಮುಂದೆ ಬಂತು....
ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನ ಕ್ಕೆ ಹೋದಾಗ...ಪಾಸಿಟೀವ್ ಜರ್ನಲಿಸಂ ಗೆ ಸಪೋರ್ಟ್ ಮಾಡಿ ಅಂದಾಗ, ಕ್ರೈಮ್ ನ್ನು ವೈಭವೀಕರಿಸೋದಿಲ್ಲ ಎಂದಾಗಲೂ ಪತ್ರಿಕೆಗೆ ಮೆಂಬರ್ ಆಗದೆ ಏನೋ ಒಂದು ಕೊಂಕು ಮಾತಾಡಿ ಅಕ್ಷರಶಃ ಬಿಕ್ಷುಕರಂತೆ ನನ್ನನ್ನು ನೋಡಿದ್ದು ನೆನಪಾಯ್ತು......

ನಿದ್ರೆ ಹಾರಿ ಹೋಯ್ತು..ಆ ಪೇಪರ್ ಮಾರುವ ಹುಡುಗನನ್ನು ಕರೆದೆ..ಏನು ಪುಟ್ಟ ನಿನ್ನ ಹೆಸ್ರು ಅಂದೆ...ಅಣ್ಣಾ ನನ್ ಹೆಸ್ರು ರಮೇಶ ಅಂದ. ನಾಲ್ಕನೆ ಕ್ಲಾಸ್ ಓದ್ತಿದೀನಿ. ಅಪ್ಪ ಕೂಲಿ ಕೆಲ್ಸಕ್ಕೆ ಹೋಗ್ತಾರೆ. ದಿನಾ ಬೆಳಿಗ್ಗೆ 3 ಗಂಟೆಯಿಂದ 7 ಗಂಟೆವರೆಗೆ ಪೇಪರ್ ಮಾರುತ್ತೀನಿ. ನೂರು ರೂಪಾಯಿ ಸಿಗತ್ತೆ.ಅಮೇಲೆ ಶಾಲೆಗೆ ಹೋಗ್ತೀನಿ. ಸಂಜೆ ಒಂದು ಅಂಗಡಿಗೆ ಹೋಗಿ ಸಾಮಾನು ಕಟ್ಟುತ್ತೀನಿ..ಐವತ್ತು ರೂಪಾಯಿ ಕೊಡ್ತಾರೆ ಅಂದ.....

ಆತನ ಬಗ್ಗೆ ಹೆಮ್ಮೆ ಅನ್ನಿಸ್ತು. ಎಲ್ಲಾ ಪೇಪರ್ ಒಂದೊಂದು ಕೊಡು ಅಂದೆ. 50 ರೂಪಾಯಿ ಕೊಟ್ಟೆ. ಚಿಲ್ಲರೆ ನೀನೆ ಇಟ್ಕೊ ಅಂದೆ...ಆತ ಹೇಳಿದ್ದು "ಅಣ್ಣಾ ನಾ ದುಡಿದ ಹಣ ಮಾತ್ರ ಸಾಕು ನಂಗೆ" ಅಂತ....
ಇನ್ನೂ ಹೆಮ್ಮೆ ಅನ್ನಿಸ್ತು. ನನ್ನ ಫೋನ್ ನಂಬರ್ ಕೊಟ್ಟೆ. ಏನಾದ್ರು ಸಹಾಯ ಬೇಕಾದ್ರೆ ಯಾವಾಗ ಬೇಕಾದ್ರು ಕಾಲ್ ಮಾಡು ಹೇಳ್ದೆ....

ಆತ ಹೊರಟು ಹೋದ...ಬಸ್ ಹೊರಡಲು ಅನುವಾಯ್ತು.....ಬಿಕ್ಷೆ ಬೇಡು ಅಂದ ಮಹಾನುಭಾವನಿಗೆ ಪಶ್ಚಾತ್ತಾಪ ಮೂಡಿತ್ತು. ಆತ ಕಂಡಕ್ಟರ್ ಗೆ ಒಂದ್ನಿಷ ಅಂದವನೇ ಆ ಹುಡುಗನನ್ನು ಹುಡುಕಿ ಎಲ್ಲಾ ಪೇಪರನ್ನು ಒಂದೊಂದು ತಗೊಂಡು ಬಂದವನೇ ನನ್ನ ಪಕ್ಕ ಕುಳಿತ....

ನನ್ನ ನೋಡುತ್ತಾ....ಪ್ಲೀಸ್ ನನ್ನನ್ನ ಕ್ಷಮಿಸಿ.....ಒಬ್ಬ ದುಡಿಯುವ ಹುಡುಗನನ್ನು ಅವಮಾನಿಸಿದೆ.....ಅದಕ್ಕೀಗ ಪಶ್ಚಾತ್ತಾಪ ಆಗ್ತಿದೆ...ಇನ್ಯಾವತ್ತು ಈ ತರ ದುಡಿಯೋ ಮಂದಿಗಳನ್ನು ಅಗೌರವಿಸೋದಿಲ್ಲ...ಅಂದ......ನೀವೇನು ಮಾಡ್ತಿರಾ ಕೇಳಿದ...ನಾನು ಸಂಪದ ಸಾಲು ಪತ್ರಿಕೆಯವನು ಅಂದೆ.....

ಸಾರ್ ನಿಮ್ಮ ಪತ್ರಿಕೆ ಯಾವಾಗಲು ಓದ್ತೀನಿ....ಪತ್ರಿಕೆ ಬ್ಲಾಕ್ ಎಂಡ್ ವೈಟ್ ಆದ್ರು ಚೆನ್ನಾಗಿದೆ...ಆದ್ರೆ ಕಲರ್ ಮಾಡಿ ಸಾರ್ ಅಂದ.

ನಾಲ್ಕು ವರ್ಷದಿಂದ ನಿಮ್ಮ ಪತ್ರಿಕೆ ನಮ್ಮನೆಗೆ ಬರ್ತಿದೆ. ಆದ್ರೆ ನಾನು ಒಂದೇ ವರ್ಷದ ದುಡ್ದು ಕೊಟ್ಟಿದ್ದು...ಬಸ್ಸಲ್ಲಿ ದುಡ್ಡು ಕೊಟ್ಟೆ ಅನ್ಕೋಬೇಡಿ...ತಗೊಳ್ಳಿ ಅಂತ ಹತ್ತು ವರ್ಷದ ಮೆಂಬರ್ ಶಿಪ್ ತಗೊಂಡ....
ಆತನೇ ಹೇಳಿದ....ದುಡಿಯುವವರನ್ನು ಗೌರವಿಸಿ ಚಿಕ್ಕದಾದ ಬೆಂಬಲ ನೀಡಿದ್ರೆ ಎಷ್ಟು ಖುಶಿ ಅಲ್ವಾ? ಅಂದ...

ನಾನು ಹೇಳಿದೆ."ಸಪೋರ್ಟ್ ಮಾಡದಿದ್ದರೂ ಬೇಸರವಿಲ್ಲ. ಅವಮಾನಿಸಬಾರದು...ಈ ಹುಡುಗನ ಕತೆ ನೋಡಿ..ನಾವು ಕೊಡೋ ನಾಲ್ಕು ರುಪಾಯಿಯಲ್ಲಿ ಆತ ಬಿಲ್ಡಿಂಗ್ ಕಟ್ಟಲ್ಲ...ಆದ್ರೆ ಬದುಕನ್ನು ಕಟ್ಟಿ ಕೊಳ್ತಾನೆ....ಅಂದೆ....

ಆತನ ಮುಖದಲ್ಲಿ ಪರಿವರ್ತನೆಯ ನಗು ಮೂಡಿತು..... Venkatesha sampa

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ". #
#ಓದಿ ಸಂಪದ ಸಾಲು ಪತ್ರಿಕೆ 9448219347
sampadasaalu@gmail.com

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?! #ವೆಂಕಟೇಶ ಸಂಪ

ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?!
                 #ವೆಂಕಟೇಶ ಸಂಪ

ಮೇಖ್ರಿ ಸರ್ಕಲ್ ಬಳಿ ನಿಂತಿದ್ದೆ .ಜೊತೆಗೆ ಗೆಳೆಯನೂ ಇದ್ದ..ಅತ್ತಿಂದ ಇತ್ತ...ಇತ್ತಿಂದ ಅತ್ತ ವಾಹನಗಳು ಚಲಿಸುತ್ತಿದ್ದವು....ಆಗಾಗ ಸಿಗ್ನಲ್ ಗಳು ಬದಲಾಗುತ್ತಾ ನಿಂತು ಹೋಗುವ ವಾಹನಗಳು ನೋಡಿದಾಗ..ಜೀವನದಲ್ಲಿ ಎಷ್ಟೇ ವೇಗವಾಗಿ ಓಡಿದರೂ ಮದ್ಯದಲ್ಲೇಲ್ಲೋ ಯಾರೋ ನಿಯಂತ್ರಿಸುತ್ತಾರೆಂಬ ಸೂಚನೆಯಂತಿತ್ತು.....

ಈ ನಿಂತು ಹೋಗುವ ವಾಹನಗಳ ನಡುವೆಯೇ ಒಂದಷ್ಟು ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದರು.ಅದರಲ್ಲಿ ಮಂಗಳಮುಖಿಯರೂ ....ನಿದ್ದೆ ಇಂಜಕ್ಷನ್ ಕೊಟ್ಟ ಮಗುವೂ..ಅದನ್ನೆತ್ತಿಕೊಂಡ ತಾಯಿಯೂ....ಶಾಲೆಗೆ ಹೊಗಬಹುದಾದ ಮಕ್ಕಳೂ....ಗಟ್ಟಿ ದೇಹ ಹೊಂದಿದ್ದ ಗಂಡಸೂ ಇದ್ದರು.....

ಇದು ನನ್ನ ಏರಿಯಾ..ಇಲ್ಲಿ ಬರಬೇಡ ಹೋಗು....ಬರಬೇಡ ಹೋಗು.....ಎನ್ನುತ್ತಾ ಮಂಗಳಮುಖಿಯೊಬ್ಬಳು ಮಗುವೆತ್ತಿಕೊಂಡಾಕೆಯನ್ನು ತಳ್ಳುತ್ತಿದ್ದಳು...ಒಂದು ಸಣ್ಣ ಜಗಳ...ಅಲ್ಲಿದ್ದವರಿಗೆ ಮನರಂಜನೆ ನೀಡುತ್ತಿದೆ ಅನಿಸಿತು...ಬಾರೋ ನೋಡೋಣ ಎಂತ ಘಲಾಟೆ ಅಂತ ನನ್ನ ಗೆಳೆಯನನ್ನು ಕರದೆ...ಲೇ ಸಂಪಾ ಸುಮ್ನಿರೋ...ಊರಿನ ಉಸಾಬರಿ ನಿಂಗ್ಯಾಕೋ...ಬೇಡ....ಬಾ....ಅಂದ.....ಇರಲಿ ಬಾರೋ ಅಂತ ಆತನನ್ನು ಎಳೆದುಕೊಂಡು ಹೋದೆ....ಸರಿ.....ಎನ್ರಮ್ಮಾ ನಿಮ್ಮ ಗಲಾಟೆ ಅಂತ ಹತ್ರ ಹೋದೆ.......ನೋಡಿ ಸಾರ್ ನಮ್ಮ ಏರಿಯಾ....ದಲ್ಲಿ ಭಿಕ್ಷೆ ಬೇಡ್ತಾ ಇದಾರೆ......ಅದ್ಕೆ .........ಅವರಿನ್ನ ಬಿಡಲ್ಲಾ.....ಹಾಗೆ ಹೀಗೆ ಅಂತಾ ಕೂಗಾಡಿದ ಮಂಗಳಮುಖಿಗೆ ಕೇಳಿದೆ....ಬಿಕ್ಷೆ ಬೇಡೋದೆ ಅಪರಾದ....ಅದರಲ್ಲಿ ಏರಿಯಾ ನಂದು ಅಂತಾ ಅವಾಜು ಬೇರೇನಾ.....ನಮ್ಮ ತೋಟದಲ್ಲಿ ಕೆಲಸ ಮಾಡೊದಾದ್ರೆ ನಾ ಸಂಬಳ ಕೊಡ್ತಿನಿ....ಭಿಕ್ಷೆ ಕೇಳ್ಬೇಡಿ.....ಈಗ ಪೋಲಿಸ್ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಪೋನ್ ಮಾಡ್ತಿನಿ....ಇರಿ...ಏಯ್ ಪೋಟೋ ತೆಕ್ಕೋಳ್ಳೋ ಅಂದೆ.........!?!?

ನನ್ನ ಗೆಳೆಯ ಕ್ಯಾಮರ ತೆಗೆಯುವುದ್ರೋಳಗೆ.....ಅಲ್ಲಿದ್ದ ಆ ಮಕ್ಕಳು....ಆ ಮಗು ಎತ್ತಿಕೊಂಡ ತಾಯಿ....ಗಂಡಸು....ಶಾಲೆಗೆ ಹೋಗಬಹುದಾದ ಮಗು....ನನ್ನ ಏರಿಯಾ ಅಂತ ಅವಾಜು ಹಾಕ್ತಿದ್ದ ಮಂಗಳಮುಖಿ.....ಯಾರು ಇರಲಿಲ್ಲ.....ಚಲಿಸುತ್ತಿದ್ದ ವಾಹನಗಳ ನಡುವೆ ನಮ್ಮಿಂದ ದೂರವಾದರು....

ದಯವಿಟ್ಟು ದೇಹದಲ್ಲಿ ಗಟ್ಟಿಯಾಗಿರೋ ಜನಗಳಿಗೆ ಭಿಕ್ಷೆ ನೀಡಿ ಒಳ್ಳೆಯವರಾಗುವ ಪ್ರಯತ್ನ ಮಾಡಬೇಡಿ...ಸರ್ಕಾರದ ಕಾನೂನಿನ ಪ್ರಕಾರ ಬಿಕ್ಷೆ ಬೇಡೋದು ಮತ್ತು ಕೊಡೋದು ಎರಡೂ ಅಪರಾಧ...ಅಂಗವಿಕಲರಾದವರೇ ಸಾಧನೆ ಮಾಡುತ್ತಿರುವ ಸಾವಿರಾರು ಜನ ಇದ್ದಾರೆ.....ಅಂತಹ ಜನಗಳ ನಡುವೆ ಗಟ್ಟಿಮುಟ್ಟಾದ ಜನ ಸರಳವಾಗಿ ಹಣ ಮಾಡೋ ಅಕ್ರಮ ದಂಧೆ ಶುರು ಮಾಡಿದ್ದಾರೆ..ಕಷ್ಟದಲ್ಲಿರೋರಿಗೆ ಸಹಾಯ ಮಾಡೋಣ...ಆದರೆ ಅದು ಬಿಕ್ಷೆಯ ರೂಪದಲ್ಲಿ ಅಲ್ಲ...ಸಾಧ್ಯವದಷ್ಟು ದುಡಿಯಲು ಅವಕಾಶ ಮಾಡಿಕೊಡೋಣ... ಭಿಕ್ಷಾಟನೆ ಬಿಟ್ಟು ಕೆಲಸಕ್ಕೆ ಬರುವ ಒಂದಷ್ಟು ಜನಕ್ಕೆ ನನ್ನ ತೋಟದಲ್ಲಿ ಕೆಲಸ ನೀಡಲು ಸಿದ್ದನಿದ್ದೇನೆ......ದಯವಿಟ್ಟು ಭಿಕ್ಷಾಟನೆಗೆ ಪ್ರೋತ್ಸಾಹ ನೀಡಬೇಡಿ...ದುಡಿಯುವ ಕೈಯನ್ನು ನಿಷ್ಕ್ರಿಯಗೊಳಿಸದಿರಿ......

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".9448219347
sampadasaalu@gmail.com

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ" * ವೆಂಕಟೇಶ ಸಂಪ.

Old stories 
ಲಕ್ಷ ಲಕ್ಷ ಡೊನೇಷನ್ ಕೊಟ್ಟು ಪ್ರೈವೇಟ್ ಸ್ಕೂಲ್ ಗೆ ಸೇರಿಸುವವರು,ನಮ್ಮ ಮಕ್ಕಳು ಇಂಗ್ಲಿಷ್ ಮಾತಾಡಿದ್ರೆ ಸಾಕು ಎನ್ನುವವರು,ಕಂಪ್ಯೂಟರ್ ಕಲಿತರೆ ಸರ್ವಸ್ವ ಎನ್ನುವವರು,
ಬದುಕು ಕಲಿಯದಿದ್ರೂ ಸಂಬಳ ತರುವ ಫ್ಯಾಕ್ಟರಿ ಆದ್ರೆ ಸಾಕು ತನ್ನ ಮಕ್ಕಳು ಅಂದುಕೊಳ್ಳೋರು....ಜೀವನ ಅಂದ್ರೆ ಬರೀ ದುಡ್ಡು ಅಂದುಕೊಂಡೋರು.......ಇದನ್ನು ಓದಲೇಬೇಕು......

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ" 
* ವೆಂಕಟೇಶ ಸಂಪ.

ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದ ನಿಮಿತ್ತ ಸಾಗರದಿಂದ ಅನಂತಪುರಕ್ಕೆ ಕಾರಲ್ಲಿ ಹೊರಟಿದ್ದೆ.ಯಾರನ್ನು ಭೇಟಿಯಾಗಲಿ?!ಹೇಗೆ ಸದಸ್ಯತ್ವ ಪಡೆದುಕೊಳ್ಳೋದು?!ಅನ್ನೋ ಆಲೋಚನೆಯಲ್ಲಿದ್ದೆ.ಕಾರು ಚಲಿಸುತ್ತಿತ್ತು.ಯಾರೋ ಪುಟ್ಟ ಹುಡುಗಿ ಅಣ್ಣಾ ಹೂವು....ಅಣ್ಣಾ  ಹೂವು....ಅಂತ ಕೂಗಿದಳು....ನಾನು ಪರಿವೆಯೇ ಇಲ್ಲದೆ ಮುಂದೆ ಹೋದೆ......

ಅರ್ದ ಕಿಲೋಮಿಟರ್ ಹೋದ ನನಗೆ ಅಪರಾಧಿ ಪ್ರಜ್ನೆ ಕಾಡತೊಡಗಿತು.ಕಾರನ್ನು ವಾಪಸ್ಸು ತಿರುಗಿಸಿದೆ.!

ಮತ್ತೆ ಅದೇ ಹುಡುಗಿ....ಅಣ್ಣಾ ಹೂವು.....ಅಂದಳು...
ಹೇಯ್ ಪುಟ ಏನು ಹೆಸ್ರು?ಏನು ಓದ್ತಿದಿಯಾ?ಕೇಳಿದೆ....

ನಾನು ವಿದ್ಯಾ ಅಂತ.....ಆರನೇ ಕ್ಲಾಸು ಓದ್ತಿದಿನಿ....ಇಲ್ಲೇ ಸರ್ಕಾರಿ ಸ್ಕೂಲಲ್ಲಿ..ಅಂದ್ಲು.

ನಂಗೆ ಖುಶಿ ಆಯ್ತು...ಹೂವು ಎಲ್ಲಿಂದ ತರ್ತಿಯಾ?!ಯಾವಾಗ ಇದನ್ನ ಮಾಲೆ ಮಾಡ್ತಿಯಾ?ಅಂತೆಲ್ಲಾ ಕೇಳ್ದೆ....

ಇವನ್ಯಾಕಪ್ಪ ತಲೆ ತಿಂತಾನಪ್ಪ?ಅನ್ಕೋತಾಳೆನೋ ಅನ್ಕೊಂಡೆ...ಹಾಗಾಗಲಿಲ್ಲ...ಆಕೆ ಖುಶಿಂದ ಹೇಳಿದ್ಲು....
"ಅಣ್ಣಾ ನಾನೇ ಅಪ್ಪ ನ ಹತ್ರ ಏರಿ ಮಾಡ್ಸಿಕೊಂಡು ಹೂವು ಬೆಳ್ದಿದೀನಿ.ಬೆಳ್ಗೆ ಎದ್ದು ಅರ್ಧ ಗಂಟೆ ಈ ಹೂವಿನ ಕೆಲ್ಸ ಮಾಡ್ತಿನಿ.ಮದ್ಯಾನ್ಹ ಬಂದ ಕೂಡ್ಲೇ ಮಾಲೆ ರೆಡಿ ಮಾಡ್ತೀನಿ...ದಿನಕ್ಕೊಂದು ಐವತ್ತು ರೂಪಾಯಿ ಸಿಗತ್ತೆ....ನನ್ನ ಸ್ಕೂಲ್ ಗೆ ಬೇಕಾದ ಹಣ ನಾನೇ ದುಡ್ಕೋತೀನಿ ಅಂತ ಹೆಮ್ಮೆಯಿಂದ ಹೇಳಿದ್ಲು.....

ಒಂದು ಕ್ಷಣ...

ನಾನು ಹೈಸ್ಕೂಲ್ ಗೆ ಹೋಗುವಾಗ ಅಪ್ಪ ಎಲ್ಲಿಂದಲೋ ತಂದ ಜೇನುತುಪ್ಪನ ನಮ್ಮ ಮೇಸ್ಟ್ರಿಗೇ ಮಾರಿ ಆ ವರ್ಷದ ಸ್ಕೂಲ್ ಖರ್ಚು ನೊಡ್ಕಂಡಿದ್ದು ನೆನಪಾಯ್ತು....

ಆ ಹುಡ್ಗಿ ಹೇಳಿದ್ಲು....ಅಣ್ಣಾ ಕತೆ ಕೇಳಿದ್ರಿ....ಹೂವು ತಗೊಳ್ಳಿ ಅಂದ್ಲು.....ಅಷ್ಟು ಹೂವು ತಗೊಂಡು ನನ್ನ ಕಾರಲ್ಲಿ ಇದ್ದ ಸಂಪದ ಸಾಲು ಪುಸ್ತಕದ ರಾಶಿ ಮೇಲಿಟ್ಟೆ....

ನಮ್ಮ ಪತ್ರಿಕೆಯ ಒಂದಷ್ಟು ಸಂಚಿಕೆಯನ್ನು ಆ ಹುಡ್ಗಿಗೆ ಕೊಟ್ಟೆ.ಇದನ್ನು ಓದು ಅಂದೆ.ಆಕೆ ಹೇಳಿದ್ಲು..".ಅಣ್ಣಾ ,ಜೋಗ ನೋಡೋಕೆ ಅಂತ ತುಂಬಾ ಪ್ರವಾಸಿಗರು ಹೋಗ್ತಾರೆ..ಸಂಜೆ ವರೆಗೆ ಕೂತು ಇದನ್ನು ಮಾರಿ ಹೋಗ್ತೀನಿ...ಕೆಲವೊಬ್ರು ನನ್ನನ್ನು ನೋಡಿ ಹಿಯಾಳಿಸ್ತಾ....ಹೋಯ್ ಅಂತ ಕೂಗ್ತಾ ಹೋಗ್ತಾರೆ....ಕೆಲವೊಬ್ರು ಹೂವು ತಗೊಂಡು ಇನ್ನು ಸ್ವಲ್ಪ ಕಡಿಮೆಗೆ ಕೊಡಮ್ಮಾ ಅಂತಾ ಚೌಕಾಶಿ ಮಾಡ್ತಾರೆ....ಹೀಗೆ ಎಲ್ಲಾ ತರದವರು ಕಾಣ್ತಾರೆ."... ಖುಶಿ ಆಗತ್ತೆ..

"ನಾನು ದೊಡ್ಡವಳಾಗಿ ಈ ತರ ಕಾರಲ್ಲಿ ಬಂದು ಶಾಲೆ ಹುಡುಗರು..ವಯಸ್ಸಾದ ಹೆಂಗಸರು...ಅಂಗವಿಕಲರು ಈ ತರ ಹೂವು ಮಾರ್ತಾ ಇದ್ರೆ ಅಷ್ಟೂ ತಗೋಳ್ತೀನಿ.......ಅಣ್ಣಾ."ಅಂದ್ಲು...

ಅರಿವಿಲ್ಲದೇ ನನ್ನ ಕಣ್ಣಿಂದ ನೀರು ಬಿದ್ದಿತ್ತು.....

ಮತ್ತೆ ಕಾರು ತಿರುಗಿಸಿ ಅಭಿಯಾನಕ್ಕೆ ಹೊರಟೆ...ನಾನು ಕಣ್ಣಿಗೆ ಕಾಣುವಷ್ಟು ದೂರ ಹೋಗುವವರೆಗೂ   " ಟಾ ಟಾ "ಮಾಡುತ್ತಿದ್ದಳು .ಆ ಹುಡುಗಿ .....ಮತ್ತು ಆ ಹುಡುಗಿಯ "ಟಾ ಟಾ" ದಲ್ಲೂ ತನ್ನ ದುಡಿಮೆಯ ಜೊತೆಗಿನ ಕಲಿಕೆಯ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು...!......

.ಮನಸ್ಸಿಗೀಗ ನಿರಾಳ......

"ಬೇಕು ಕಲಿಕೆಯ ಜೊತೆ ಗಳಿಕೆ"

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು ಪತ್ರಿಕೆ 
Venkatesha sampa 9448219347
sampadasaalu@gmail.com

https://m.facebook.com/story.php?story_fbid=10207071797338994&id=1402623747

https://m.facebook.com/story.php?story_fbid=10207071797338994&id=1402623747

ಗುರಿ ಮುಟ್ಟುವ ಮೊದಲೇ ಎಡವಿಬಿಟ್ಟೆವಾ!? #ವೆಂಕಟೇಶಸಂಪ

ಗುರಿ ಮುಟ್ಟುವ ಮೊದಲೇ ಎಡವಿಬಿಟ್ಟೆವಾ!?
                  #ವೆಂಕಟೇಶಸಂಪ

ನಲ್ವತ್ತು ದಿವಸ ನಮ್ಮ ದೇಶದ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿ ಅದೆಷ್ಟೋ ಕೋಟಿ ಹಣ ಖರ್ಚು  ಮಾಡುವುದರ ಜೊತೆ ನಷ್ಟವನ್ನೂ ಮಾಡಿಕೊಂಡ ಸರ್ಕಾರಗಳು ಅನಿವಾರ್ಯವಾಗಿಯೋ,ಅಸಹಾಯಕನಾಗಿಯೋ ಗೊತ್ತಿಲ್ಲ.....ಗುರಿ ಮುಟ್ಟುವ ಮೊದಲೇ...ಎಡವಿಬಿಟ್ಟಿತೇ?..ಕೇವಲ ಮದ್ಯದ ವ್ಯಾಪಾರದ ಹಪಹಪಿಯಲ್ಲಿ ಅದೆಷ್ಟೋ ಜನರನ್ನು ಯಾವ ಸಾಮಾಜಿಕ ಅಂತರವೂ ಇಲ್ಲದೆ ಬಾರ್ ಗಳ ಮುಂದೆ ನಿಂತ ಸಾವಿರ ಸಾವಿರ ಜನರ ಸರತಿ ಸಾಲು ನೋಡಿದಾಗ ಎನಿಸುತ್ತಿದೆ.ನಮ್ಮ ದೇಶದಲ್ಲಿ ಊಟಕ್ಕಿಂತ,ತಮ್ಮ ಕುಟುಂಬಕ್ಕಿಂತ,ತನ್ನ ಸ್ವಂತ ಜೀವಕ್ಕಿಂತ ಕೇವಲ ಕುಡಿತವೇ ಹೆಚ್ಚಾಗಿಹೋಯಿತೆ?
ಸರ್ಕಾರಕ್ಕೆ ಮತ್ತು ಮಾಧ್ಯಮಗಳಿಗೂ ಈ ಕುಡುಕರ ಬಗ್ಗೆಯೇ  ಕಾಳಜಿ ಹೆಚ್ಚಾಯಿತೆ?

ಈ ಗಾದೆಗಳು ಇವತ್ತಿನ ಸಂದಿಗ್ದ ಪರಿಸ್ಥಿತ್ಗೆ ಸರಿ ಎನಿಸುತ್ತದೆ ನೋಡಿ....

ದಾರಿ ತೋರಿಸುವವರೇ ದಾರಿ ತಪ್ಪಿದರೇ?

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ..,!.
.
ಹೊಳೆಯಲ್ಲಿ ಹುಣಸೆಹಣ್ಣು ತೇಲಿಬಿಟ್ಟಂತೆ...!

ವರ್ಷದ ತಪಸ್ಸು ಕೊನೆಯಲ್ಲಿ ಟುಸ್ ಎಂದಂತೆ!

ಸರ್ವ ಬಣ್ಣ ಮಸಿ ನುಂಗಿದಂತೆ...

ವರ್ಷವೀಡೀ ಓದಿ ಪರೀಕ್ಷೆಯಲ್ಲಿ ಫೇಲ್ ಆದಂತೆ...

ಕೋಟೆಯನ್ನೇ ಕೊಳ್ಳೆ ಹೊಡೆದ ಮೇಲೆ ದೊಡ್ಡಿ ಬಾಗಿಲು ಹಾಕಿದಂತೆ..

ಹಾಲಿಗೆ ಹುಳಿ ಹಿಂಡಿದಂತೆ

ಕೆಟ್ಟ ಮೇಲೆ ಬುದ್ದಿ ಬಂತು(ಕೆಟ್ಟ ಮೇಲೂ ಬುದ್ದಿ ಬಂದಿಲ್ಲ)

ನೀವೂ ಇದೇ ತರಹ ಗಾದೆ ಮಾತು ಮುಂದುವರಿಸಿ...(u can comment here)

ಇನ್ನು ಹದಿನೈದು ದಿನಗಳಲ್ಲಿ ಅದೆಷ್ಟು ಅಪಾಯ ಕಾದಿದೆಯೋ ಭಗವಂತನೇ ಬಲ್ಲ..

ನಮ್ಮ ನಮ್ಮ ಬದುಕಿಗೆ ಮತ್ತು ಸಂತೋಷಕ್ಕೆ ನಾವೇ ಕಾಳಜಿ ವಹಿಸಿಕೊಳ್ಳಬೇಕು....
ದಯವಿಟ್ಟು ಜಾಗರೂಕರಾಗಿರಿ...
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ

ಲಾಕ್ಡೌನ್ ಮುಗಿಯಬಹುದು....ಆದರೆ ವೈರಸ್ ಕೊನೆಯಾಗಿಲ್ಲ!ಸಮಸ್ಯೆಯ ಸುಳಿಯಲ್ಲಿ ಸ್ವಾವಲಂಬನೆ ಹುಡುಕಿಕೊಳ್ಳಬೇಕಿದೆ... #ವೆಂಕಟೇಶಸಂಪ

ಲಾಕ್ಡೌನ್ ಮುಗಿಯಬಹುದು....ಆದರೆ ವೈರಸ್ ಕೊನೆಯಾಗಿಲ್ಲ!
ಸಮಸ್ಯೆಯ ಸುಳಿಯಲ್ಲಿ ಸ್ವಾವಲಂಬನೆ ಹುಡುಕಿಕೊಳ್ಳಬೇಕಿದೆ...
     #ವೆಂಕಟೇಶಸಂಪ
ಚೀನಾವೆಂಬ ಕುತಂತ್ರ ದೇಶದಲ್ಲಿ ಹುಟ್ಟಿದ ಕೊರೋನವೆಂಬ ವೈರಸ್ ಇಂದು ಭೂ ಮಂಡಲದ ದಶದಿಕ್ಕುಗಳಿಗೆ ವ್ಯಾಪಿಸಿ ಕರಾಳ ಸೃಷ್ಟಿಗೆ ಕಾರಣವಾಗಿದೆ. ವೈರಸ್ ಸೃಷ್ಟಿ ಕೃತಕ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.  ಕಲ್ಲೆಸೆದು ಅಲೆಯನ್ನು ಸೃಷ್ಟಿಸಿದ ಚೀನಾ ಇಂದೂ ವೈರಸ್ ಮುಕ್ತ ಎಂದು ಬೀಗುತ್ತಿದೆ. ವುಹಾನ್ ಎಂಬ ಬಡವರೇ ಹೆಚ್ಚಿರುವ ನಗರದಲ್ಲಿ ಹುಟ್ಟಿದ(ಹುಟ್ಟಿಸಿದ) ವೈರಸ್ ಲಕ್ಷಾಂತರ ಕಿಲೋಮೀಟರ್ ದೂರದ ದೇಶಗಳಿಗೆ ಹರಡಿ ಆತಂಕ ಸೃಷ್ಟಿಸಿದರೂ ಅದೇ ದೇಶದ ಪಕ್ಕದ ನಗರ ಬೀಜಿಂಗ್ ಶಾಂಗೈಗೆ ಒಂದೇ ಒಂದು ಕೇಸ್ ಕೂಡಾ ವ್ಯಾಪಿಸಿಲ್ಲ ಅನ್ನುತ್ತದೆ ಒಂದು ವರದಿ .. ಹಾಗಾದರೆ ಇದರ ಸೃಷ್ಟಿಕರ್ತ ಯಾರು? ಅವರ ಉದ್ದೇಶವೇನು? ವ್ಯಾಪಾರ ವ್ಯವಹಾರವೆಂಬ ಆರ್ಥಿಕ ಮಾಯೆಗೆ ಸಿಲುಕಿದ ಪ್ರಪಂಚದಲ್ಲಿ ತಾನೇ ದೊಡ್ಡವನು ಎಂದು ತೋರಿಸಲು ಚೀನಾ ಕುತಂತ್ರ ಮಾಡಿರಬಹುದೇ? ತಾನು ಕೈ ಇಟ್ಟದ್ದೆಲ್ಲಾ ಭಸ್ಮವಾಗಲಿ ಎಂಬ ವರ ಪಡೆದ ಭಸ್ಮಾಸುರನೆಂಬ ರಾಕ್ಷಸನ ಕತೆಯಂತಾಗುತ್ತೇನೆಂಬ ಭಯ ಚೀನಾಕ್ಕೆ ಇರಲಿಲ್ಲವಾ?  ತಾನು ಗೆಲ್ಲಬೇಕೆಂಬ ಹುಚ್ಚು ಮನಸ್ಸಿನಲ್ಲಿ ಸುತ್ತಲೂ ಸ್ಮಶಾನ ನಿರ್ಮಾಣ ಮಾಡಿ ಏನು ಸಾಧಿಸಬಹುದೆಂಬ ಮಿನಿಮಮ್ ಕಲ್ಪನೆ ಚೀನಾಕ್ಕೆ ಇಲ್ಲವಾ?
ಅಥವಾ ಅಚಾನಕ್ಕಾಗಿ ಪ್ರಕೃತಿಯಲ್ಲೇ ಸೃಷ್ಟಿಯಾಗಿದೆ ಈ ವೈರಸ್ ಎನ್ನುವುದಾದರೆ ಮೊದಲೇ ಯಾಕೆ ಸುದ್ದಿಯಾಗಲಿಲ್ಲ. ವರದಿಯನ್ನು ಸಾರ್ವಜನಿಕವಾಗಿ ಹೇಳಿದ ವಿಜ್ಞಾನಿ ಮತ್ತು ವೈದ್ಯರನ್ನೇಕೆ ಹೆದರಿಸಿದರು?
ಜಗತ್ತಿನಲ್ಲೆಡೆ ಲಕ್ಷಾಂತರ ಮಂದಿ ಸಾಯುತ್ತಿದ್ದರೂ ಚೀನಾದಲ್ಲೇಕೆ ನಾಲ್ಕು ಸಾವಿರ ಸಂಖ್ಯೆ ದಾಟುತ್ತಿಲ್ಲ.?
ವೈರಸ್ ಸೃಷ್ಟಿಸಿದವರೇ ಆಂಟಿವೈರಸ್ ಮಾಡಿಟ್ಟು  ರಕ್ಷಿಸುತ್ತಿರಬಹುದೇ? ಚೀನಾದ ಮಿತ್ರ ರಾಷ್ಟ್ರ  ಉತ್ತರಕೋರಿಯಾ ಯಾಕೆ ಕೊರೋನಾ ಮುಕ್ತವಾಗಿದೆ?
ಪ್ರಶ್ನೆಗಳು ಏಳುತ್ತಿವೆ...ಯಾರನ್ನು ಕೇಳೋಣ?
ನಮ್ಮಂತಹ ಪ್ರಜಾಪ್ರಭುತ್ವ ದೇಶವಾದರೆ ಕೇಳಬಹುದಿತ್ತು...ಆದರೆ ಅದು ಪಕ್ಕಾ ಕಮ್ಯುನಿಸ್ಟ್ ದೇಶ .... ಜನ ಮತ್ತು ಜನರ ಭಾವನೆಗಳಿಗೆ ಅಲ್ಲಿ ಸಾಸಿವೆಯಷ್ಟೂ ಬೆಲೆ ಇಲ್ಲ...ಒಂಥರಾ ಸರ್ವಾಧಿಕಾರದ ಸರ್ಕಾರ....ಅಲ್ಲಿ ಪತ್ರಕರ್ತರೂ ಸರ್ಕಾರದ ವಿರುದ್ದ   ಬರೆಯುವಂತಿಲ್ಲ.... ಚೀನಾದ ಈ ಕರಾಳ ವೈರಸ್ ಸೃಷ್ಟಿಯ ಕತೆ ನಿಗೂಢವಾಗಿಯೇ ಉಳಿದಿದೆ.....!

ಈ ಲೇಖನ ಬರೆಯುವ ಹೊತ್ತಿಗೆ  ಪ್ರಪಂಚದಾದ್ಯಂತ ಸರಿಸುಮಾರು 50 ಲಕ್ಷ ಜನಕ್ಕೆ ರೋಗ ಹರಡಿದೆ...3 ಲಕ್ಷಕ್ಕೂ ಅಧಿಕ ಜನ ಸತ್ತಿದ್ದಾರೆ.  213 ದೇಶಗಳು ಈ ಸಮಸ್ಯೆಯಲ್ಲಿ ನಲುಗಿಹೋಗಿದೆ ಮತ್ತು ವಿಶ್ವಕ್ಕೇ ದೊಡ್ಡಣ್ಣ ಎಂಬ ಅಮೇರಿಕಾದಲ್ಲಿ ಕೂಡ 15 ಲಕ್ಷ ಜನಕ್ಕೆ ಹರಡಿದೆ ಮತ್ತು ಸುಮಾರು 1 ಲಕ್ಷ ಜನ ಪ್ರಾಣ ತೆತ್ತಿದ್ದಾರೆ.
ಪ್ರತಿ ದೇಶಗಳು 10 ಕ್ಕೂ ಹೆಚ್ಚು ವರ್ಷ ಹಿಂದಿನ ಸ್ಥಿತಿಗೆ ತಲುಪಿದ್ದಾರೆ.  ಇಡೀ ಪ್ರಪಂಚವೇ ಒಂದು ಹಳ್ಳಿಯಂತೆ ಎಲ್ಲೆಡೆ ಸುತ್ತಾಡಬಹುದಾಗಿದ್ದ ವಿದೇಶಗಳು ಕೂಡ ತನ್ನ ಒಳಬರುವ ಮತ್ತು ಹೊರಹೋಗುವ ಪ್ರಯಾಣವನ್ನು ಬಹುತೇಕ ನಿಲ್ಲಿಸಿಬಿಟ್ಟಿವೆ. ಪ್ರತಿ ದೇಶ, ಪ್ರತಿ ರಾಜ್ಯಗಳು ಆರ್ಥಿಕವಾಗಿ ನಿತ್ರಾಣವಾಗಿ ನಿಂತಿವೆ.  ಬಹುತೇಕರು ಆತಂಕದಲ್ಲಿ  ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಹಲವರು ಹೊಟ್ಟೆಗಿಲ್ಲದೇ  ಪರಿತಪಿಸುತ್ತಿದ್ದಾರೆ.. ಯಾರ್ಯಾರೋ ಮತ್ಯಾವುದೋ ಖಾಯಿಲೆಗೆ ಸರಿಯಾಗಿ ಔಷಧಿ ಸಿಗದೆ ಒದ್ದಾಡಿದ್ದಾರೆ. ಇಡೀ ಪ್ರಪಂಚವೇ ಮಮ್ಮಲ ಮರುಗುತ್ತಿದೆ...ಆ ದೇಶಗಳು ತಮ್ಮದೇ ಆದ ರೀತಿಯಲ್ಲಿ ನಿಯಂತ್ರಣದ ಪ್ರಯತ್ನ ಮಾಡುತ್ತಿವೆ.   ಕೆಲವು ದೇಶಗಳಲ್ಲಂತೂ ಉಳಿದವರು ಉಳಿಯಲಿ ಹೋದವರು ಹೋಗಲಿ ಎಂಬ ಸ್ಥಿತಿಯಾಗಿದೆ.
ಪ್ರಾಪಂಚಿಕವಾಗಿ ಅವಾಂತರ ಸೃಷ್ಟಿಸಿದ ಈ ವೈರಸನ್ನು ನಮ್ಮ ಭಾರತವೂ ತನ್ನದೇ ಆದ ರೀತಿಯಲ್ಲಿ ಗೆಲ್ಲಬೇಕೆಂದು ಹೋರಾಡುತ್ತಿದೆ ..

ಲಾಕ್ಡೌನ್ ಸಡಿಲಿಸಿದ್ದೂ ಸರಿಯೇ?

ಮಾರ್ಚ್ ಎರಡನೇ ವಾರಕ್ಕೆ ಭಾರತದಲ್ಲಿ ಈ ಚೀನಾ ದ ಕೊರೋನಾ ವೈರಸ್ ಬಗ್ಗೆ ಸ್ವಲ್ಪ ಕಾಳಜಿ ಪ್ರಾರಂಭವಾಯಿತು. ಮಾರ್ಚ್ ಕೊನೆಯ ವಾರಕ್ಕೆ ಸಂಪೂರ್ಣ ಲಾಕ್ಡೌನ್ ಹೇರಲಾಯಿತು...ನೆನಪಿರಲಿ ಭಾರತದಂತಹ 135 ಕೋಟಿ  ಜನ ಇರುವ ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಸುಲಭದ ಮಾತಲ್ಲ.(ಕಡಿಮೆ ಜನಸಂಖ್ಯೆಯ ದೇಶದಲ್ಲಿ ಕೂಡ ಅಲ್ಪಕಾಲದ ಲಾಕ್ಡೌನ್ ಗೆ ಜನ ದಂಗೆ ಎದ್ದಿದ್ದಾರೆ)
ನಮ್ಮ ಜನ ಕೂಡ ಆತಂಕದಲ್ಲಿ ಜೀವ ಉಳಿಸಿಕೊಳ್ಳುವ ಸಲುವಾಗಿ ಕಾನೂನಿನ ಹೆದರಿಕೆ ಇನ್ನಿತರ ಕಾರಣಕ್ಕೆ ಸ್ಪಂದಿಸಿದರು.  ಬರೋಬ್ಬರಿ 50 ದಿನಗಳ ಹೊತ್ತಿಗೆ ಕಟ್ಟಿ ಹಾಕಿದ ಕರುವಿನಂತೆ ಪರಿತಪಿಸಲು ಪ್ರಾರಂಭಿಸಿದ್ದರು ಮತ್ತು ಸರ್ಕಾರ ಕೂಡ ಆರ್ಥಿಕವಾಗಿ ನಿತ್ರಾಣವಾಗುತ್ತಿತ್ತು...ಅದಕ್ಕಾಗಿಯೇ ಜೀವದ ಜೊತೆ ಜೀವನವೂ ಮುಖ್ಯ ಹಾಗು ಈ ವೈರಸ್ ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬರಲಾಯಿತು...
ಎಲ್ಲವೂ ಸ್ಥಬ್ಧವಾದ ಜಾಗದಲ್ಲಿ ನಿಧಾನವಾಗಿ ಚಲನೆ ಪ್ರಾರಂಭವಾಯಿತು...ಆದರೆ ವೈರಸ್ ಮಾತ್ರ ನಿಂತಿರಲಿಲ್ಲ.
ಆದರೆ  ಆ ವೈರಸ್ ದಾಳಿಯನ್ನು ಎದುರಿಸಲು ಭಾರತ ವೈದ್ಯಕೀಯವಾಗಿ ಸಿದ್ದವಾಗಿತ್ತು...ಕೇವಲ ನೆಪಕ್ಕೆ ತಯಾರಾಗುತ್ತಿದ್ದ ಮಾಸ್ಕ್ ಮತ್ತು ವೈದ್ಯಕೀಯ ಸಲಕರಣೆಗಳು ದಿನವೊಂದಕ್ಕೆ ಲಕ್ಷ ಲಕ್ಷ ತಯಾರಾದವು...ವೆಂಟಿಲೇಟರ್, ಆಕ್ಸಿಜನ್ ಪೂರೈಕೆ ,ಮಾತ್ರೆ, ಇಂಜೆಕ್ಷನ್, ವೈದ್ಯಕೀಯ ಸಿಬ್ಬಂದಿಗಳಿಗೆ ಸಣ್ಣತರಬೇತಿ, ಎಲ್ಲಾ ತೆರನಾಗಿ ಯುದ್ಧಕ್ಕೆ ಸಿದ್ದವಾದಂತೆ ತಯಾರಾದವು....ಹಾಗಾಗಿಯೇ ಮೊದಲು ಲಾಕ್ಡೌನ್ ಮಾಡಿದ್ದು.... ಈಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು...... ಹಾಗಂತ ಬದುಕು ಸಹಜವಾಗಿಲ್ಲ....ಇನ್ನು ಮುಂದಿದೆ ಹೋರಾಟ! 
ಕೊರೋನ ಹೋದರೂ ಬೇರೆ ಬೇರೆ ರೂಪದ ವೈರಸ್ ತಲೆಯೆತ್ತಬಹುದು...ತಾನು ವೈಜ್ಞಾನಿಕವಾಗಿ ಸಿಕ್ಕಾಪಟ್ಟೆ ಸಾಧಿಸಿದ್ದೇವೆಂದು ಬೀಗುವ ಎಲ್ಲರಿಗೂ ಕಣ್ಣಿಗೆ ಕಾಣದ ವೈರಸ್ ಧೂಳಿಪಟ ಮಾಡಬಹುದು.
ಸದ್ಯಕ್ಕೆ ಈ ವೈರಸ್ ಗೆ ಮುಕ್ತಿ ಬರಬೇಕೆಂದರೆ ಲಸಿಕೆ ಕಂಡುಹಿಡಿಯಲೇಬೇಕು.....ಔಷಧ ಕಂಡುಹಿಡಿಯದ ಹೊರತು ಆತಂಕ ನಿಲ್ಲುವುದಿಲ್ಲ.... ಇದರ ಜೊತೆ ಹೋರಾಡುತ್ತಾ ಬದುಕಬೇಕಷ್ಟೆ....

ಕೊರೋನೋತ್ತರ ಮತ್ತು ಕೊರೋನಾಪೂರ್ವ!

ದೊಡ್ಡದೊಂದು ಸಾಮಾಜಿಕ ಮತ್ತು ಆರ್ಥಿಕ 
 ಬದಲಾವಣೆಗೆ ಕಾರಣವಾದ ವೈರಸ್ ನ ಈ ಕಾಲಘಟ್ಟವನ್ನು ಎರಡು ವಿಭಾಗ ಮಾಡಬಹುದೇನೋ?
ಹಿಂದೆಲ್ಲಾ ನಾವು ಇತಿಹಾಸದಲ್ಲಿ ಬಳಸುತ್ತಿದ್ದ ಕ್ರಿಸ್ತ ಪೂರ್ವ,ಕ್ರಿಸ್ತಶಕೆ, ಎಂಬಂತೆ.... ಕೊರೋನೋತ್ತರ ಮತ್ತು ಕೊರೋನಾಪೂರ್ವ ಎಂದು.
ಯಾವ ನಿರ್ಬಂಧವೂ ಇಲ್ಲದೆ ಓಡಾಡುತ್ತಿದ್ದ ಕಾಲ ಇನ್ನಿರುವುದಿಲ್ಲ. ನಾವು ಎಷ್ಟೇ ಸರಿ ಇದ್ದರೂ ಎದುರು ಬರುವ ವ್ಯಕ್ತಿ ಎಷ್ಟೇ ಪರಿಚಿತನಾಗಿದ್ದರೂ ಯಾರು ಯಾರ ಒಡನಾಟ ಹೊಂದಿರುತ್ತಾರೋ ಗೊತ್ತಾಗಿರುವುದಿಲ್ಲ. ಹಾಗಾಗಿ ಮಾಸ್ಕ್ ಹಾಕಿಕೊಳ್ಳುವುದು ,  ಸಾರ್ವತ್ರಿಕವಾಗಿ ಅನವಶ್ಯಕ  
ಓಡಾಡದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು,
 ಆಗಾಗ ಕೈ ತೊಳೆಯುವುದು ಮತ್ತು ಹೊರಗೆ ಹೋಗಿ ಬಂದರೆ ಸ್ನಾನ ಮಾಡುವುದು ಮುಂತಾದ ಸಣ್ಣಸಣ್ಣ ಕ್ರಮಗಳು ನಮ್ಮಲ್ಲಿ ರೂಢಿಯಲ್ಲಿರಲಿವೆ...ಸರ್ಕಾರಕ್ಕೆ ಹೆದರಿ ಅಲ್ಲ, ನಮ್ಮ ಬದುಕಿನ ಆಸೆಗಾದರೂ ಈ ತರಹ ಬದುಕಬೇಕಾಗುತ್ತದೆ.
ಪ್ರತಿ ವ್ಯಕ್ತಿ,  ಕುಟುಂಬ, ಸರ್ಕಾರ
ಕಂಪನಿಗಳು, ವ್ಯವಹಾರಗಳು ಎಲ್ಲವೂ ಅತ್ಯಂತ ಯೋಜಿತ ಮತ್ತು ದುಂದು ವೆಚ್ಚ ರಹಿತ ನಿರ್ವಹಣೆಗೆ ಒತ್ತು ಕೊಡಲೇಬೇಕಾಗುತ್ತದೆ.
ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಎಂಬ ವಾತಾವರಣ ನಿರ್ಮಾಣ ಆಗುತ್ತದೆ. (ಟ್ವಿಟ್ಟರ್ ಅಂತಹ ಸಂಸ್ಥೆ ಖಾಯಂ ಆಗಿ ಮನೆಯಿಂದಲೇ ಕೆಲಸ ನಿರ್ವಹಿಸಲು ತಿಳಿಸಿದೆಯಂತೆ)
ದುಡ್ಡೇ ಸರ್ವಸ್ವ ಎಂಬ ಧೋರಣೆಯ ಜಾಗದಲ್ಲಿ ದುಡಿಮೆ ಮುಖ್ಯ ಮತ್ತು ಬದುಕು ಮುಖ್ಯ ಎಂಬ ಮಹತ್ವ ಪಡೆಯುತ್ತದೆ.(ಒಂದೇ ಕೆಲಸ ಕಲಿತ ವ್ಯಕ್ತಿ ಬಹುಬೇಗ ನಿರುದ್ಯೋಗಿಯಾಗುತ್ತಾನೆ)
ಅಚ್ಚರಿಯಾದರೂ ಸತ್ಯ ನೆನಪಿಟ್ಟುಕೊಳ್ಳಿ...ಮುಂದಿನ ದಿವಸಗಳಲ್ಲಿ ಶಾಲೆ, ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದು ಕಡಿಮೆಯಾಗುತ್ತದೆ ಮತ್ತು  ಪ್ರಯೋಗಶೀಲ ಶಿಕ್ಷಣ ಮತ್ತು ಆನ್ಲೈನ್ ಪಾಠ , ಪ್ರವಚನಗಳು ಪರೀಕ್ಷೆಗಳು, ಫಲಿತಾಂಶಗಳು, ಹೆಚ್ಚು ಪ್ರಸ್ತುತವಾಗುತ್ತದೆ.
ಹಳ್ಳಿಗಳು ಮತ್ತು ಕೃಷಿ ಕಾಯಕ ಮೌಲ್ಯ ಪಡೆಯುತ್ತದೆ.
ವಿದೇಶ ಮತ್ತು ನಗರದ ವ್ಯಾಮೋಹ ಸ್ವಲ್ಪ ಕಡಿಮೆಯಾಗಲಿದೆ,
ಸರ್ಕಾರಗಳು ಸರಿಯಾಗಿ ಪ್ರೋತ್ಸಾಹಿಸಿದ್ರೆ, ಜನರೂ ಕೂಡ ತಾವು ಬೆಳೆಯಬೇಕೆಂಬ ಸ್ವಾವಲಂಬನೆಯ ಛಲ ತೆಗೆದುಕೊಂಡರೆ, ಕ್ರಿಯಾಶೀಲತೆ, ಪ್ರಯೋಗಶೀಲತೆ, ಆವಿಷ್ಕಾರದ ಬಗ್ಗೆ ಆಲೋಚಿಸುವ ಮತ್ತು ಸಹಜವಾಗಿ ಬದುಕನ್ನು ರೂಪಿಸಿಕೊಳ್ಳಬಲ್ಲ ಚಾಕಚಕ್ಯತೆ ಪಡೆದುಕೊಂಡರೆ ಭಾರತಕ್ಕೆ ಇದು ಸಕಾಲ...
ನಮ್ಮಲ್ಲಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳು ನಮಗೆ ವರವಾಗಬೇಕು.  ನಮ್ಮ ಜನಗಳು ಸೋಮಾರಿಗಳೋ ಅಥವಾ ಅನುತ್ಪಾದಕ ಮನಸ್ಸುಗಳೋ ಆದರೆ ಯಾವ ಸರ್ಕಾರವೂ ನಮ್ಮನ್ನು ಬೆಳೆಸಲಾರದು. ಪ್ರಚಾರದ ರಾಜಕಾರಣಿಗಳು, ವಾಸ್ತವದ ಕಲ್ಪನೆಯಿಲ್ಲದ ಅಧಿಕಾರಿಗಳು,  ಎಲ್ಲವೂ ಫ್ರೀ ಸಿಗಲಿ ಎಂದು ಬಯಸುವ ಜನಗಳು, ಎಲ್ಲವನ್ನೂ ವಿರೋಧಿಸುವ ಬುದ್ದಿಜೀವಿಗಳು, ಸುದ್ದಿಗಿಂತ ಹೆಚ್ಚು ಸದ್ದು ಮಾಡುವ ಮಾಧ್ಯಮಗಳು ಕೂಡ ಬದಲಾಗಬೇಕಿದೆ.
ಓಡುವ ಪ್ರಪಂಚದಲ್ಲಿ ಬಹುತೇಕರು ಅಚಾನಕ್ಕಾಗಿ ಕುಂಟರಾಗುತ್ತಿದ್ದಾರೆ.  ಭಾರತದ ಪಾಲಿಗೆ ಆ ಸ್ಥಿತಿ ಇಲ್ಲ.  ಇಲ್ಲಿನ ಜನಸಂಖ್ಯೆ ವರವಾಗಬೇಕೇ ವಿನಃ ಶಾಪವಾಗಬಾರದು.
ಕೃಷಿಯೂ ಕೈಗಾರಿಕೆಯಂತೆ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು. ತಂತ್ರಜ್ಞಾನ ಎಲ್ಲೆಡೆ ಹೆಚ್ಚಬೇಕು. ಟ್ಯಾಕ್ಸ್ ಅನ್ನೋದು ಟೆರರಿಸಂ ಆಗಬಾರದು. ಸಂಪನ್ಮೂಲಗಳು  ತುಷ್ಟಿಗುಣವನ್ನು ಹೆಚ್ಚಿಸಿಕೊಳ್ಳಬೇಕು. ಮನುಷ್ಯ ಕೇವಲ ಆರ್ಥಿಕವಾಗಿ ಬೆಳೆಯುವುದಲ್ಲ.  ಆತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯುವಂತಾಗಬೇಕು. ಆರೋಗ್ಯ ಮತ್ತು ಶೈಕ್ಷಣಿಕ ವ್ಯವಸ್ಥೆ ಹೊಸ ಹೊಸ ದಾರಿ ಹುಡುಕಿಕೊಳ್ಳಬೇಕು. ಸಣ್ಣ ಪರವಾನಗಿ ಪತ್ರಕ್ಕೆ ವರ್ಷಗಟ್ಟಲೆ ಅಲೆಯುವ ಸ್ಥಿತಿ ಇರಬಾರದು. ಆಗ ಮಾತ್ರ ಭಾರತ ವಿಶ್ವಗುರುವಾಗಬಲ್ಲದು.
ಅಫ್ ಕೊರ್ಸ್ ಪ್ರತಿ ಹೆಜ್ಜೆಯಲ್ಲೂ ಸರ್ಕಾರ ಸ್ಪಂದಿಸಬೇಕಿದೆ. ನಮ್ಮ ದೇಶ, ನಮ್ಮ ಜನ ಮೊದಲು, ಆಮೇಲೆ ವಿದೇಶ ಎಂಬುದು ಅರಿವಿಗೆ ಬರಬೇಕು. ಕಂಡ ಕಂಡಲ್ಲಿ ಹೊಗೆ ಉಗುಳುವ ಕಾರ್ಖಾನೆಗಳಿಗಿಂತ ,
 ಪ್ರತಿ ಮನಸ್ಸು ಮತ್ತು ಬದುಕನ್ನು ಇಡಿಯಾಗಿ ಕಟ್ಟುವ ಗುಡಿ ಕೈಗಾರಿಕೆಗಳಿಗೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಕಟ್ಟಬೇಕಿದೆ. ಬೆಳೆದ ಬೆಳೆಯನ್ನು ಅತ್ಯಂತ ಲಾಭ ಮತ್ತು ಖುಷಿಯಲ್ಲಿ ಮಾರುವ ಸ್ವಾತಂತ್ರ್ಯ ನನ್ನ ರೈತ ಮಿತ್ರನಿಗೆ ಸಿಗಬೇಕಿದೆ.....
ಕೊರೋನೋತ್ತರ ಬದುಕು ಸದೃಢವಾಗಬೇಕಾಗಿದೆ....ಸ್ವಾಭಿಮಾನದ ಉಸಿರನ್ನಾಡಬೇಕಿದೆ. ಪ್ರಕೃತಿ  ಪ್ರೀತಿಯ ಅಭಿವೃದ್ದಿಯ ಪರ್ವ ಆರಂಭವಾಗಬೇಕಿದೆ...ನಮಗೆ ನಾವೇ ಆಲ್ ದಿ ಬೆಸ್ಟ್  ಹೇಳಿಕೊಳ್ಳೋಣ.....
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ 
9448219347
sampadasaalu@gmail.com

ವ್ಯಕ್ತಿಗಿಂತ ದೇಶ ಮುಖ್ಯ

ವ್ಯವಸ್ಥೆಯಲ್ಲಿ ಮಾತ್ರವಲ್ಲ, ನಮ್ಮೆಲ್ಲರ ಬದುಕಿನಲ್ಲಿ ಕೂಡ ಈ ಪರಿಜ್ಞಾನವಿರಲೇಬೇಕು...  ಕೆಲಸಕ್ಕಿಂತ ಹೆಚ್ಚು ಮಾತಿರಬಾರದು...
ಸಾಧನೆಗಿಂತ ಹೆಚ್ಚು ಪ್ರಚಾರವಿರಬಾರದು. 
ಆಸ್ತಿಗಿಂತ ಹೆಚ್ಚು ಸಾಲವಿರಬಾರದು.
ಮಂತ್ರಕ್ಕಿಂತ ಹೆಚ್ಚು ಉಗುಳಿರಬಾರದು.
ಅತಿಯಾದ ಆತ್ಮವಿಶ್ವಾಸವೂ ಅಪಾಯವೇ ಆಗುತ್ತದೆ.ಅತಿ ಸರ್ವತ್ರ ವರ್ಜಯೇತ್ ಎಂಬಂತೆ.....
ತುಂಬಿದ ಕೊಡ ತುಳುಕುವುದಿಲ್ಲವಂತೆ,ಖಾಲಿ ಕೊಡ ಹೆಚ್ಚು ಶಬ್ದ ಮಾಡಿದಂತೆ. ...  ನಾವು ನಾವಾಗಿರಬೇಕೇ ವಿನಃ ನಾವಲ್ಲದ ನಮ್ಮನ್ನು ಬಿಂಬಿಸಿಕೊಂಡರೆ ಒಂದಲ್ಲಾ ಒಂದು ದಿನ ನಿಜ ಬಣ್ಣ   ಬಯಲಾಗುತ್ತದೆ...... 
ವ್ಯಕ್ತಿಗಿಂತ ದೇಶ ಮುಖ್ಯ... ಮಾತಿಗಿಂತ ಕೆಲಸ ಮುಖ್ಯ...... ಇದು ಅರಿವಿಗೆ ಬಂದರೆ ಮಾತ್ರಾ ರಾಜಕಾರಣವೂ ಸೇರಿದಂತೆ ಎಲ್ಲವೂ ಯಶಸ್ಸಿನತ್ತ ಸಾಗುತ್ತದೆ. ...   
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu