ಬದುಕು ಹಗಲಿನ ಪಯಣ
ಪಯಣದುದ್ದಕ್ಕೂ ಹಸಿರಿದೆ, ಒಂದಷ್ಟು ಬಂಗಲೆ, ಮತ್ತಷ್ಟು ಗುಡಿಸಲು,ಅಲ್ಲಲ್ಲಿ ಝರಿ ಹೊಳೆ ಹಾದಿ,ಗುಡ್ಡ ಬೆಟ್ಟ ಏರು ಇಳಿತ,
ಕೆಲವೊಮ್ಮೆ ಬರಿ ದಾರಿ...
ದಾರಿಯುದ್ದಕ್ಕೂ ಬೆಳಕಿದೆ
ನೋಡಿದಷ್ಟೂ ಖುಶಿಯಿದೆ
ಮತ್ತದೇ ಕಿಟಕಿಯೊಳಗೆ ಕುಳಿತಿದ್ದೇವೆ
ಶೋಕೆಸಿನ ಗೊಂಬೆಯಂತೆ
ಬಾಗಿಲು ತೆರೆದಿರೋ
ಉಸಿರು ನಿರಾಳ...
ತೆರೆದುಕೊಂಡಷ್ಟು ಬದುಕಿದೆ. ...
ಸಾಗುತ್ತಿದೆ ಪಯಣ...
ಸಾಗಲೇಬೇಕು ...
..ಹೊತ್ತು ಮುಳುಗುವ ಮುನ್ನ
ಕತ್ತಲೆಯಾವರಿಸುವ ಮುನ್ನ
ಬೆಳಕಿನ ಬದುಕು ಅನುಭವಿಸಲೇಬೇಕು...
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
9448219347
No comments:
Post a Comment