ಗುರಿ ಮುಟ್ಟುವ ಮೊದಲೇ ಎಡವಿಬಿಟ್ಟೆವಾ!?
#ವೆಂಕಟೇಶಸಂಪ
ನಲ್ವತ್ತು ದಿವಸ ನಮ್ಮ ದೇಶದ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿ ಅದೆಷ್ಟೋ ಕೋಟಿ ಹಣ ಖರ್ಚು ಮಾಡುವುದರ ಜೊತೆ ನಷ್ಟವನ್ನೂ ಮಾಡಿಕೊಂಡ ಸರ್ಕಾರಗಳು ಅನಿವಾರ್ಯವಾಗಿಯೋ,ಅಸಹಾಯಕನಾಗಿಯೋ ಗೊತ್ತಿಲ್ಲ.....ಗುರಿ ಮುಟ್ಟುವ ಮೊದಲೇ...ಎಡವಿಬಿಟ್ಟಿತೇ?..ಕೇವಲ ಮದ್ಯದ ವ್ಯಾಪಾರದ ಹಪಹಪಿಯಲ್ಲಿ ಅದೆಷ್ಟೋ ಜನರನ್ನು ಯಾವ ಸಾಮಾಜಿಕ ಅಂತರವೂ ಇಲ್ಲದೆ ಬಾರ್ ಗಳ ಮುಂದೆ ನಿಂತ ಸಾವಿರ ಸಾವಿರ ಜನರ ಸರತಿ ಸಾಲು ನೋಡಿದಾಗ ಎನಿಸುತ್ತಿದೆ.ನಮ್ಮ ದೇಶದಲ್ಲಿ ಊಟಕ್ಕಿಂತ,ತಮ್ಮ ಕುಟುಂಬಕ್ಕಿಂತ,ತನ್ನ ಸ್ವಂತ ಜೀವಕ್ಕಿಂತ ಕೇವಲ ಕುಡಿತವೇ ಹೆಚ್ಚಾಗಿಹೋಯಿತೆ?
ಸರ್ಕಾರಕ್ಕೆ ಮತ್ತು ಮಾಧ್ಯಮಗಳಿಗೂ ಈ ಕುಡುಕರ ಬಗ್ಗೆಯೇ ಕಾಳಜಿ ಹೆಚ್ಚಾಯಿತೆ?
ಈ ಗಾದೆಗಳು ಇವತ್ತಿನ ಸಂದಿಗ್ದ ಪರಿಸ್ಥಿತ್ಗೆ ಸರಿ ಎನಿಸುತ್ತದೆ ನೋಡಿ....
ದಾರಿ ತೋರಿಸುವವರೇ ದಾರಿ ತಪ್ಪಿದರೇ?
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ..,!.
.
ಹೊಳೆಯಲ್ಲಿ ಹುಣಸೆಹಣ್ಣು ತೇಲಿಬಿಟ್ಟಂತೆ...!
ವರ್ಷದ ತಪಸ್ಸು ಕೊನೆಯಲ್ಲಿ ಟುಸ್ ಎಂದಂತೆ!
ಸರ್ವ ಬಣ್ಣ ಮಸಿ ನುಂಗಿದಂತೆ...
ವರ್ಷವೀಡೀ ಓದಿ ಪರೀಕ್ಷೆಯಲ್ಲಿ ಫೇಲ್ ಆದಂತೆ...
ಕೋಟೆಯನ್ನೇ ಕೊಳ್ಳೆ ಹೊಡೆದ ಮೇಲೆ ದೊಡ್ಡಿ ಬಾಗಿಲು ಹಾಕಿದಂತೆ..
ಹಾಲಿಗೆ ಹುಳಿ ಹಿಂಡಿದಂತೆ
ಕೆಟ್ಟ ಮೇಲೆ ಬುದ್ದಿ ಬಂತು(ಕೆಟ್ಟ ಮೇಲೂ ಬುದ್ದಿ ಬಂದಿಲ್ಲ)
ನೀವೂ ಇದೇ ತರಹ ಗಾದೆ ಮಾತು ಮುಂದುವರಿಸಿ...(u can comment here)
ಇನ್ನು ಹದಿನೈದು ದಿನಗಳಲ್ಲಿ ಅದೆಷ್ಟು ಅಪಾಯ ಕಾದಿದೆಯೋ ಭಗವಂತನೇ ಬಲ್ಲ..
ನಮ್ಮ ನಮ್ಮ ಬದುಕಿಗೆ ಮತ್ತು ಸಂತೋಷಕ್ಕೆ ನಾವೇ ಕಾಳಜಿ ವಹಿಸಿಕೊಳ್ಳಬೇಕು....
ದಯವಿಟ್ಟು ಜಾಗರೂಕರಾಗಿರಿ...
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
No comments:
Post a Comment