ಆಧುನೀಕತೆಯ ಕನಸಿನಲ್ಲಿ, ಅಭಿವೃದ್ದಿಯ ಹೆಸರಿನಲ್ಲಿ ಪ್ರತಿಕ್ಷಣವೂ ಬೆಳವಣಿಗೆಗೆ ಹಂಬಲಿಸುವ ಮನುಷ್ಯ ಸಾಧಿಸುತ್ತಿರುವುದಾದರೂ ಏನನ್ನು?
ತಳಹದಿಯೇ ಇಲ್ಲದ ಸೌಧ ಕಟ್ಟುವ ಹುಚ್ಚು ಮನುಷ್ಯರ ಮನಸ್ಥಿತಿಗೆ ಏನು ಹೇಳೋಣ?
ಮನುಷ್ಯ ಪ್ರಕೃತಿಯ ಮೇಲೆ ದೌರ್ಜನ್ಯ ಮಾಡಿದ್ದರ ಪರಿಣಾಮ ಹೀಗೆಲ್ಲಾ ಆಯ್ತು ಎನ್ನೋದಾದರೆ ಇದರ ನಡುವೆ ಪ್ರಾಣಿ ಪಕ್ಷಿಗಳು ಬಲಿಯಾದವಲ್ವಾ? ಅದಕ್ಕೇನು ಮಾಡೋದು?
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತಾಗಿ ಎಷ್ಟೋ ವರ್ಷ ಕಷ್ಟ ಪಟ್ಟು ಕಟ್ಟಿದ ವ್ಯವಸ್ಥೆ ಕ್ಷಣ ಮಾತ್ರದಲ್ಲಿ ಕೊಚ್ಚಿಹೋಯಿತು?
ನಮ್ಮ ದೇಶದ ಸರಿಸುಮಾರು 10 ದೊಡ್ಡ ನದಿಗಳು ,210 ಕ್ಕು ಹೆಚ್ಚು ಸಣ್ಣನದಿಗಳಿಗೆ ನಮ್ಮ ದೇಶದಲ್ಲಿ 3250 ದೊಡ್ಡ ಮತ್ತು ಮದ್ಯಮ ಗಾತ್ರದ ಆಣೆಕಟ್ಟು ಕಟ್ಟಿದ್ದೇವೆ. ಯಾವುದರಲ್ಲಿ ಎಷ್ಟು ಪ್ರಮಾಣದ ನೀರು ಬಿಟ್ಟರೆ ಎಷ್ಟು ಪ್ರದೇಶ ಮುಳುಗಡೆಯಾಗುತ್ತದೆ ಎಂಬ ನದಿ ಪ್ರದೇಶದ ಹರಿಯುವಿಕೆಯ ಜಾಗ ಮತ್ತು ದಾರಿ ಗುರುತಿಸುವ ಕೆಲಸ ಮಾಡದ ಬೇಜವಬ್ದಾರಿಯ ಹಳೆಯ ಆಡಳಿತ ವ್ಯವಸ್ಥೆಯೇ ಇಂದಿನ ಮಹಾಪ್ರವಾಹಕ್ಕೆ ಕಾರಣ.
ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ.ಕೊಟ್ಯಾಂತರ ಜನರ ನಷ್ಟ ಅನುಭವಿಸಿದ್ದಾರೆ. ಲಕ್ಷಾಂತರ ಎಕರೆ ಜಮೀನು ನೀರುಪಾಲಾಗಿದೆ.ಲಕ್ಷಾಂತರ ಜಾನುವಾರುಗಳು ಕಾಡುಪ್ರಾಣಿಗಳು ಪಕ್ಷಿಗಳು ಜೀವ ಕಳೆದುಕೊಂಡವು. ನಿನ್ನೆಯವರೆಗೆ ಎಷ್ಟೋ ಜನಕ್ಕೆ ದಾನ ಕೊಡುತ್ತಿದ್ದ ಕೋಟ್ಯಾಧಿಪತಿಯೂ ಕೂಡ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.50 ಸಾವಿರ ಕೋಟಿಗೂ ಹೆಚ್ಚು ಅಧಿಕ ನಷ್ಟ ಸಂಭವಿಸಿದೆ.
ಇದಕ್ಕೆಲ್ಲಾ ಯಾರು ಹೊಣೆ?
ಪ್ರಕೃತಿ ಮೇಲಿನ ದೌರ್ಜನ್ಯವಾ?ಪ್ಲಾನ್ ಇಲ್ಲದೇ ನಿರ್ಮಿಸುವ ಯೋಜನೆಗಳಾ? ಸರ್ಕಾರವಾ?......
ನಮ್ಮವರ ನೋವಿಗೆ ನಾವೇ ಜೊತೆಯಾಗಬೇಕಿದೆ.ಎಲ್ಲದರಲ್ಲೂ ರಾಜಕಾರಣ ಮಾಡುವ ಜನರ ಹೊರತಾಗಿಯೂ ನಮ್ಮ ಕನ್ನಡಿಗರು ನಮ್ಮ ಕನ್ನಡದವರ ರಕ್ಷಣೆಗೆ ನಿಲ್ಲಬೇಕಿದೆ
No comments:
Post a Comment