ವ್ಯವಸ್ಥೆಯಲ್ಲಿ ಮಾತ್ರವಲ್ಲ, ನಮ್ಮೆಲ್ಲರ ಬದುಕಿನಲ್ಲಿ ಕೂಡ ಈ ಪರಿಜ್ಞಾನವಿರಲೇಬೇಕು... ಕೆಲಸಕ್ಕಿಂತ ಹೆಚ್ಚು ಮಾತಿರಬಾರದು...
ಸಾಧನೆಗಿಂತ ಹೆಚ್ಚು ಪ್ರಚಾರವಿರಬಾರದು.
ಆಸ್ತಿಗಿಂತ ಹೆಚ್ಚು ಸಾಲವಿರಬಾರದು.
ಮಂತ್ರಕ್ಕಿಂತ ಹೆಚ್ಚು ಉಗುಳಿರಬಾರದು.
ಅತಿಯಾದ ಆತ್ಮವಿಶ್ವಾಸವೂ ಅಪಾಯವೇ ಆಗುತ್ತದೆ.ಅತಿ ಸರ್ವತ್ರ ವರ್ಜಯೇತ್ ಎಂಬಂತೆ.....
ತುಂಬಿದ ಕೊಡ ತುಳುಕುವುದಿಲ್ಲವಂತೆ,ಖಾಲಿ ಕೊಡ ಹೆಚ್ಚು ಶಬ್ದ ಮಾಡಿದಂತೆ. ... ನಾವು ನಾವಾಗಿರಬೇಕೇ ವಿನಃ ನಾವಲ್ಲದ ನಮ್ಮನ್ನು ಬಿಂಬಿಸಿಕೊಂಡರೆ ಒಂದಲ್ಲಾ ಒಂದು ದಿನ ನಿಜ ಬಣ್ಣ ಬಯಲಾಗುತ್ತದೆ......
ವ್ಯಕ್ತಿಗಿಂತ ದೇಶ ಮುಖ್ಯ... ಮಾತಿಗಿಂತ ಕೆಲಸ ಮುಖ್ಯ...... ಇದು ಅರಿವಿಗೆ ಬಂದರೆ ಮಾತ್ರಾ ರಾಜಕಾರಣವೂ ಸೇರಿದಂತೆ ಎಲ್ಲವೂ ಯಶಸ್ಸಿನತ್ತ ಸಾಗುತ್ತದೆ. ...
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment