ಹಿಂದು ಎನ್ನುವುದು ಕೇವಲ ಧರ್ಮವಲ್ಲ.ಅದೊಂದು ಶ್ರೇಷ್ಟ ಬದುಕು.ಕಲ್ಲು ಮಣ್ಣು ಹುಲ್ಲು ಮರ ಗಿಡ ಹೀಗೆ ಪ್ರಕ್ರುತಿಯ ಪ್ರತಿಯೊಂದರಲ್ಲು ದೈವತ್ವವನ್ನು ಕಾಣುವುದು ಬಹುಶ ನಮ್ಮ ಈ ಜೀವನ ಪದ್ದತಿಯಲ್ಲಿ ಮಾತ್ರ ಸಾದ್ಯ.
ಆತ್ಮೀಯತೆ.ಸ್ವಾತಂತ್ರ್ಯ.ಉತ್ತಮ ಆರೋಗ್ಯ.ಪಾಸಿಟೀವ್ ಆಲೋಚನೆ.ಎಲ್ಲರನ್ನೂ ತನ್ನವರೆಂದು ಒಪ್ಪಿಕೊಳ್ಳುವ ಬಗೆ ಜಗತ್ತಿನ ಇನ್ಯಾವ ದೇಶದಲ್ಲೂ ಸಿಗುವುದಿಲ್ಲ.ಇಲ್ಲಿ ಪ್ರತಿಯೊಂದು ಸಂಬಂದಕ್ಕು ಅರ್ಥವಿದೆ.ಆಚರಣೆಗು ವೈಜ್ನಾನಿಕ ಮಹತ್ವವಿದೆ.
ಕೇವಲ ಲೌಕಿಕವಲ್ಲದ ಅಂತರಂಗದ ಜಗತ್ತಿನ ಪೂರ್ಣ ಹೂರಣವಿದೆ.ಪ್ರಸ್ತುತ ಬದುಕಿನ ಅನಾವರಣವಿದೆ.ಅಸಾದ್ಯತೆಯಲ್ಲೂ ಸಾದ್ಯತೆಗಳನ್ನು ಹುಟ್ಟಿಸುವ ಶಕ್ತಿಯಿದೆ. ಯಾವ ಧರ್ಮವನ್ನೂ ವಿರೋದಿಸದೆ ಎಲ್ಲರನ್ನೂ ಪ್ರೀತಿಸುವ ಸಹಬಾಳ್ವೆ ಇದೆ..ಅಹಂಕಾರವಿಲ್ಲದ ಅಭಿಮಾನವಿದೆ.ಅಸೂಯೆ ಇಲ್ಲದ ಪ್ರೀತಿಯಿದೆ.ಯಾರು ಏನೇ ಹೇಳಿದರೂ ಯಾವ ದ್ರುಷ್ಟಿಯಲ್ಲಿ ನೋಡಿದರೂ ಇದೊಂದು ಕೇವಲ ಧರ್ಮವಲ್ಲ...ಇದೊಂದು ಆದರ್ಶ ಬದುಕು..ಓದಿ ಸಂಪದ ಸಾಲು
www.sampadasaalu.blogspot.com
No comments:
Post a Comment