ಕೇವಲ ಒಂದು ಊಟಕ್ಕಾಗಿ ಸರದಿಯ ಸಾಲಿನ ಕೊನೆಯಲ್ಲಿ ದಿನವಿಡೀ ಕ್ಯೂ ನಿಂತಾಗ ನಾನು ಹೇಳಿಕೊಳ್ಳುತ್ತೇನೆ....ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು.....
ಒಂದೇ ಒಂದು ಕೊಡ ನೀರಿಗಾಗಿ ದಿನವಿಡೀ ಕಿತ್ತಾಡುವ ಹೆಂಗಸರನ್ನು ಕಂಡಾಗ ನನಗೆ ನಾನೇ ಹೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು!
ಸಣ್ಣ ಆದಾಯ ದೃಢೀಕರಣ ಪತ್ರಕ್ಕಾಗಿ ವರ್ಷಗಟ್ಟಲೆ ಸರ್ಕಾರಿ ಕಛೇರಿ ಅಲೆಯುವ ನನ್ನ ರೈತಮಿತ್ರ ಅಲೆಯುವಾಗಲೆಲ್ಲಾ ಅಂದುಕೊಳ್ಳುತ್ತೇನೆ....ನಾನು ಸಾಮಾನ್ಯ ವ್ಯಕ್ತಿಯಾಗಬಾರದೆಂದು!
ಜೇಬಿನಲ್ಲಿ ಹಣವಿಲ್ಲದೇ ಕೆಮ್ಮು ಬಂದರೂ ಔಷಧಿ ತೆಗೆದುಕೊಳ್ಳಲಾಗದೇ ಒದ್ದಾಡುವ ಬಡ ಅಜ್ಜಿಯನ್ನು ಕಂಡಾಗ ಹೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು!
ತಿಂಗಳ ಸಮಸ್ಯೆಯಲ್ಲೂ ಎಟ್ಲೀಸ್ಟ್ ಕಡಿಮೆ ದರದ ಪ್ಯಾಡ್ ಕೂಡ ತೆಗೆದುಕೊಳ್ಳಲಾಗದೆ,ಅಸಹಾಯಕತೆಯನ್ನು ಹೇಳಲಾಗದ ಕೂಲಿಯ ಅಕ್ಕತಂಗಿಯರನ್ನು ಕಂಡಾಗ ಹೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು!
ವ್ಯವಸ್ಥೆಯ ವಿಚಿತ್ರ ಸನ್ನಿವೇಶಗಳನ್ನೆಲ್ಲಾ ಕಂಡಾಗ ಕೇಳಿಕೊಳ್ಳುತ್ತೇನೆ ನಾನ್ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಬಾರದೆಂದು! .....ಇದನ್ನೆಲ್ಲವನ್ನೂ ಮೀರಿ ಏನಾದರೂ ಮಾಡಿ ಎಲ್ಲರಿಗೂ ಉಪಕಾರಿಯಾಗಬೇಕೆಂದು......
ತುಂಬಾ ಒಳ್ಳೆಯವನನ್ನಾಗಿ ಮಾಡು ಎಂದು ಯಾವತ್ತೂ ಕೇಳುವುದಿಲ್ಲ,ಆದರೆ ತುಂಬಾ ಜನರಿಗೆ ಸಹಕಾರಿಯನ್ನಾಗಿ ಮಾಡು ಎಂಬ ನನ್ನ ಕೋರಿಕೆಗೆ
ಸ್ಪಂದಿಸುವೆಯಾ ಭಗವಂತಾ!?
ನಾನು ಬೆಳೆಯಲೇಬೇಕು ನನಗಾಗಿ ಅಲ್ಲದಿದ್ದರೂ ನನ್ನ ಕನಸುಗಳಿಗಾಗಿ,,,,,
ಸ್ಪಂದಿಸುವೆಯಾ ಸಮಾಜ?
ಆಶೀರ್ವದಿಸುವೆಯಾ ಭಗವಂತಾ?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com
2 comments:
ಚಂದದ ಸಾಲುಗಳು.. ಯೋಚನೆಗಳು.. ಆ ಹಾದಿಯಲ್ಲಿ ಸಾಗೋಣ 🙏
Yes, of course. God will bless you when you have a great vision of social welfare.
Post a Comment