ಇವರು ನನ್ನೋರು!?!
* ವೆಂಕಟೇಶ ಸಂಪ.
ಹೊತ್ತು ಹೆತ್ತು ಸಾಕಿದವರು
ಹೊಟ್ಟೆ ತುಂಬ ಹಾಕಿದವರು
ಬದುಕು ಹೀಗೆ ಎಂದವರು
ಹಗಲು ರಾತ್ರಿ ಚಿಂತಿಸಿದವರು
ಇವರು ನನ್ನೋರು!
ಹೆಜ್ಜೆ ಇಡು ಎಂದೋರು
ಹೆಜ್ಜೆ ನೋಡಿ ನಕ್ಕೋರು
ಹೆಜ್ಜೆಯಲ್ಲಿ ಮುಳ್ಳು ಸುರಿದೋರು
ಕಾಣದಂತೆ ಕಲ್ಲು ಇಟ್ಟೋರು
ಇವರು ನನ್ನೋರು!
ನೆಡೆವ ದಾರೀಲಿ ಸಿಕ್ಕೋರು
ಸಿಕ್ಕು ಸಂತೋಷ ಕೊಟ್ಟೋರು
ಸಂತೋಷದ ನೆಪದಲ್ಲಿ ದುಃಖ ತಂದೋರು
ಇವನು ನಮ್ಮೋನು ಎಂದೋರು
ಇವರು ನನ್ನೋರು!
ಪ್ರೀತಿ ಕೊಡುವೆ ಎಂದೋರು
ಇದ್ದ ಪ್ರೀತಿ ಕಸಿದೋರು
ಕನಸು ಕಟ್ಟಿ ಹೋದೋರು
ಮನಸು ಬಿಚ್ಚಿ ಇಟ್ಟೋರು
ಇವರು ನನ್ನೋರು!
ಕತ್ತಲೆಯಲ್ಲಿ ಉಳಿದೋರು
ಬೆಳಕು ಹಚ್ಚಿ ನಿಂತೋರು
ಸಾವು ಮರೆಸಿ ಬದುಕ ನೆನಸಿ ಜಗವ ಉಳಿಸಿ ಬೆಳೆಸೋರು
ಇವರು ನನ್ನೋರು!
ಒಳಿತು ಕೆಡುಕು ಎರಡೂ ಬೇಕು
ಬದುಕು ಮುಖ್ಯ ಆಗಬೇಕು
ನಿಜದ ಪ್ರೀತಿ ಉಳಿಯಬೇಕು
ಮರುಭೂಮಿಯಲ್ಲೂ ಮಳೆ ಸುರಿಯಬೇಕು
ಇಂತ ಆಸೆ ಹೊತ್ತೋರು
ಸದಾ ನನ್ನೋರು.....
ಇವರೇ ನನ್ನೋರು!!!!!!
#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
* ವೆಂಕಟೇಶ ಸಂಪ.
ಹೊತ್ತು ಹೆತ್ತು ಸಾಕಿದವರು
ಹೊಟ್ಟೆ ತುಂಬ ಹಾಕಿದವರು
ಬದುಕು ಹೀಗೆ ಎಂದವರು
ಹಗಲು ರಾತ್ರಿ ಚಿಂತಿಸಿದವರು
ಇವರು ನನ್ನೋರು!
ಹೆಜ್ಜೆ ಇಡು ಎಂದೋರು
ಹೆಜ್ಜೆ ನೋಡಿ ನಕ್ಕೋರು
ಹೆಜ್ಜೆಯಲ್ಲಿ ಮುಳ್ಳು ಸುರಿದೋರು
ಕಾಣದಂತೆ ಕಲ್ಲು ಇಟ್ಟೋರು
ಇವರು ನನ್ನೋರು!
ನೆಡೆವ ದಾರೀಲಿ ಸಿಕ್ಕೋರು
ಸಿಕ್ಕು ಸಂತೋಷ ಕೊಟ್ಟೋರು
ಸಂತೋಷದ ನೆಪದಲ್ಲಿ ದುಃಖ ತಂದೋರು
ಇವನು ನಮ್ಮೋನು ಎಂದೋರು
ಇವರು ನನ್ನೋರು!
ಪ್ರೀತಿ ಕೊಡುವೆ ಎಂದೋರು
ಇದ್ದ ಪ್ರೀತಿ ಕಸಿದೋರು
ಕನಸು ಕಟ್ಟಿ ಹೋದೋರು
ಮನಸು ಬಿಚ್ಚಿ ಇಟ್ಟೋರು
ಇವರು ನನ್ನೋರು!
ಕತ್ತಲೆಯಲ್ಲಿ ಉಳಿದೋರು
ಬೆಳಕು ಹಚ್ಚಿ ನಿಂತೋರು
ಸಾವು ಮರೆಸಿ ಬದುಕ ನೆನಸಿ ಜಗವ ಉಳಿಸಿ ಬೆಳೆಸೋರು
ಇವರು ನನ್ನೋರು!
ಒಳಿತು ಕೆಡುಕು ಎರಡೂ ಬೇಕು
ಬದುಕು ಮುಖ್ಯ ಆಗಬೇಕು
ನಿಜದ ಪ್ರೀತಿ ಉಳಿಯಬೇಕು
ಮರುಭೂಮಿಯಲ್ಲೂ ಮಳೆ ಸುರಿಯಬೇಕು
ಇಂತ ಆಸೆ ಹೊತ್ತೋರು
ಸದಾ ನನ್ನೋರು.....
ಇವರೇ ನನ್ನೋರು!!!!!!
#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
No comments:
Post a Comment