Friday, August 8, 2014

ಒಂದು ಕೊಳವೆ ಬಾವಿ ಇಡೀ ಬದುಕನ್ನು ಕೊಲ್ಲದಿರಲಿ.....!?!?!?

ಒಂದು ಕೊಳವೆ ಬಾವಿ ಇಡೀ ಬದುಕನ್ನು ಕೊಲ್ಲದಿರಲಿ.....!?!?!?

ಮಗುವೊಂದು ಕೊಳವೆ ಬಾವಿಗೆ ಅಚಾನಕ್ಕಾಗಿ ಬೀಳುತ್ತದೆ!?!.ಬ್ರೇಕಿಂಗ್ ನ್ಯೂಸ್ ಅಲ್ಲಿ ಶುರುವಾಗುವ ಸುದ್ದಿ ಆ ಮಗುವಿನ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ....ಸರ್ಕಾರ ಮತ್ತು ಅಧಿಕಾರಿಗಳು ನಿದ್ದೆಯಿಂದ ದಿಡೀರ್ ಅಂತ ಎದ್ದಂತೆ ಕೆಲಸ ಮಾಡುತ್ತಾರೆ...ಆಮ್ಲಜನಕ ನೀರು ಅಹಾರದ ಕೊರತೆಯಿಂದ ಬಿದ್ದ ಮಗು ಬದುಕುವುದು ತುಂಬಾ ಕಷ್ಟ...ಆದರೂ ಮಾದ್ಯಮಗಳು ಮತ್ತು ಜನರ ಕಣ್ಣು ಮುಚ್ಚಿಸುವ ಸಲುವಾಗಿ ಕಾರ್ಯಾಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಟಿವಿ ಮಾದ್ಯಮಗಳು ಮಾಡುವ ತಪ್ಪೇನು ಗೊತ್ತಾ?!ಜೆಸಿಬಿ ಡ್ರೈವರನಿಂದ ಹಿಡಿದು ಕೊಳವೆ ಬಾವಿ ಅಂದರೆ ಏನೆಂದೇ ಗೊತ್ತಿಲ್ಲದವರ ಬಳಿಯೂ ಅರ್ಥವೇ ಇಲ್ಲದ ಪ್ರಶ್ನೆ ಕೇಳುವುದು.. ಶ್ರದ್ದೆಯಿಂದ ಸುರಂಗ ತೋಡುವವನ ಬಳಿ ಎಷ್ಟು ಅಡಿ ತೋಡಿದರು?! ಎಂದು ನಿಮಿಷಕ್ಕೊಂದು ಬಾರಿ ಪ್ರಶ್ನೆ ಕೇಳುವುದು....ಮತ್ತು ಗೊತ್ತಿಲ್ಲದ ವಿಷಯಗಳನ್ನು ಗೊತ್ತಿದ್ದಂತೆ ಹೇಳಿಬಿಡುವುದು....

ಸರಿ..ಕಾರ್ಯಾಚರಣೆ ಯಶಸ್ವಿಯಾಗಿ ಮಗು ಬದುಕಿ ಬಂದರೆ ಬಹಳ ಸಂತೋಷ...ಮಗು ಬದುಕಲಿಲ್ಲವಾದರೆ ಆ ರೈತನ ಹೊಲಗಳಲ್ಲೆಲ್ಲಾ ಸುರಂಗ ತೋಡಿ ಆತನ ಬದುಕಿನ ಆದಾಯವೇ ಇಲ್ಲದಂತಾಗುವ ಆತನ ಪರಿಸ್ತಿತಿಯನ್ನು ಯಾರೂ ಯೋಚಿಸುವುದಿಲ್ಲ....ಆ ರೈತನ ಸ್ಥಿತಿ "ಹೋದ ಕಣ್ಣು ಹೋಯತಣ್ಣ..ಇದ್ದ ಕಣ್ಣು ವಿನಾಶ"ವಾದಂತೆ ಮಗುವೂ ಇಲ್ಲ..ಹೊಲವೂ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ.
ನಾವೆಲ್ಲಾ ಪುಕ್ಸಟ್ಟೆ ಸಲಹೆ ನೀಡಬಹುದು...ಏನು ಬೇಕಾದರೂ ವಿಶ್ಲೇಷಣೆ ಮಾಡಬಹುದು...ಸರ್ಕಾರವೂ ಒಮ್ಮೆ ಸಹಾಯ ಮಾಡಿಬಿಡಬಹುದು...ಆದರೆ ಸಮಸ್ಯೆಯನ್ನು ಅನುಭವಿಸುವವನು ಅದೇ ರೈತ ಅಲ್ಲವೇ?!
ಕಾರ್ಯಾಚರಣೆ ಮಾಡಿದ್ದು ಸರಿ...ಅಗೆದ ಮಣ್ಣನ್ನು ಮತ್ತೆ ತುಂಬಿ ಕೊಡಬೇಕು ಇಲ್ಲವೇ ಆತನಿಗೆ ಬೇರೆ ಹೊಲ ಕೊಡಬೇಕು...ಇಲ್ಲದಿದ್ದರೆ ಬಾಗಲಕೋಟೆಯ ಸೂಳಿಕೆರಿಯ ರೈತನ ಬದುಕು ನಾಶವಾಗುತ್ತದೆ.
ಇನ್ನೊಂದು, ಸಣ್ಣ ವಿಷಯವಾದರೂ ಮಹತ್ವದ್ದು..ನಮಗೆ ಕಾಣುವ ಯಾವುದೇ ಕೊಳವೆ ಬಾವಿ ತೆರೆದಿದ್ದರೆ ಕೂಡಲೇ ಸರ್ಕಾರಕ್ಕೆ ಕಾಯದೇ ನಾವೇ ಮುಚ್ಚುವುದು....ಹಾಗು ಕೊಳವೆ ಬಾವಿ ಮುಚ್ಚುವುದೇ ಪ್ರಚಾರದ ಸರಕಾಗದಂತೆ ನೋಡಿಕೊಳ್ಳುವುದು...ಮತ್ತು ನೀರು ಬಾರದ ಬೋರ್ ವೆಲ್ ಅನ್ನು ಆ ಕಂಪನಿಯೇ ಮುಚ್ಚುವುದು ಕಡ್ಡಾಯವಾಗಬೇಕು.

"ಹೋದವರು ಹೋದರು..ಇದ್ದವರು ಸಾಯಬಾರದು" .ಕಂಡ ಕಂಡಲ್ಲಿ ಕೊಳವೆಬಾವಿ ಕೊರೆಯುವುದೇ ಅಂತರ್ಜಲದ ಕುಸಿತಕ್ಕೆ ಕಾರಣ ಎನ್ನುವುದನ್ನು ನೆನಪಿಡಬೇಕು...

ಕೊಳವೆ ಬಾವಿ ತೆರೆದಿಟ್ಟು. ಇನ್ಯಾರೋ ಬಿದ್ದು....ವಾರಗಟ್ಟಲೆ ಕಾರ್ಯಾಚರಣೆ ಮಾಡಿ...ಪ್ರತಿಕ್ಷಣವೂ ಬ್ರೇಕಿಂಗ್ ನ್ಯೂಸ್ ಆಗಿ....ಸರ್ಕಾರ ಮತ್ತು ಅಧಿಕಾರಿಗಳು ಒಮ್ಮೆಲೆ ಬ್ಯಾಟ್ರಿ ಚಾರ್ಜ್ ಆದವರಂತೆ ಕುಣಿದಾಡಿ....ಜನಗಳೆಲ್ಲಾ ಮರುಗಿ.... ಮತ್ತದೇ ರಾಗ...ಮತ್ತದೇ ತಾಳ...ಮತ್ತದೇ ಗೋಳು ಆಗದಿರಲಿ.......ಮುಗ್ದ ಮಕ್ಕಳು.... ಮತ್ತವರ ಕುಟುಂಬದವರ ಬದುಕು ನಾಶವಾಗದಿರಲಿ......ನೊಂದವರಿಗೆ ನೆಮ್ಮದಿ ಸಿಗಲಿ

"ಬದಲಾವಣೆ ಬರಲಿ ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu