ಜಗತ್ತಿನ ಯಾವುದೇ ಧರ್ಮ ದೇವರನ್ನು ತೆಗೆದುಕೊಳ್ಳಿ.ಅವೆಲ್ಲವೂ ನಂಬಿಕೆಗಳ ಮೇಲೆ ನಿಂತಿರುತ್ತದೆ. ಉತ್ತರ ಪ್ರದೇಶದ
ತ್ರಿವೇಣಿ ಸಂಗಮದ ಗಂಗಾ ಯಮುನಾ ಸರಸ್ವತಿ ಎಂಬ ಮೂರು ನದಿಗಳ ಸಂಗಮದ ಕ್ಷೇತ್ರವಿದು.ಭಕ್ತಿ ಮತ್ತು ನಂಬಿಕೆಗಳ ಆಧಾರದಲ್ಲಿ ಇಲ್ಲಿ ಒಂದಷ್ಟು ಆಚರಣೆಗಳು ಜರುಗುತ್ತವೆ. ಅತ್ಯಂತ ಪವಿತ್ರ ನದಿಗಳು ಮನುಷ್ಯರ ದುರ್ವರ್ತನೆಯ ಫಲವಾಗಿ ಗಬ್ಬುನಾರುತ್ತಿದೆ.ದೋಣಿಯಿಂದ ಕರೆದುಕೊಂಡು ಹೋಗಿ ಸ್ನಾನ ಮಾಡಲು ಅವಕಾಶ ಮಾಡೋದ್ರಿಂದ ಹಿಡಿದು ಪೂಜೆಯೂ ಸೇರಿದಂತೆ ಎಲ್ಲವೂ ಕಾಂಟ್ರಾಕ್ಟ್.ಎಲ್ಲದಕ್ಕೂ ಏಜೆಂಟ್,ಹಣವಿಲ್ಲದೇ ಇಲ್ಲಿ ಯಾವ ಪುಣ್ಯಕ್ಕೂ ಅವಕಾಶವೇ ಇಲ್ಲವೆಂಬ ನೆಡವಳಿಕೆ.ಇಲ್ಲಿ ಹೂವು ಮಾರೋರು, ದೋಣಿ ನೆಡೆಸೋರು,ಅಂಗಡಿ ವ್ಯಾಪಾರದವರು,ಬಿಕ್ಷುಕರು,ಜಾನುವಾರುಗಳು,ಒಂದಷ್ಟು ನಾಯಿಗಳು ಓಡಾಡುತ್ತಿರುತ್ತಾರೆ. ಕಂಡ ಕಂಡಲ್ಲಿ ಮನುಷ್ಯರ ಮಲ ಮೂತ್ರಗಳು, ಕೂದಲು,ಪ್ಲಾಷ್ಟಿಕ್ ಕೊಳಕುಗಳು, ಇದೆಲ್ಲದರ ನಡುವೆ ಭಕ್ತಿ ಎಲ್ಲೋ ಮಾಯವಾಗುತ್ತದೆ.ಅಚರಣೆ ಮಾಡಿದ್ದೇವೆಂಬ ಬಾವಕ್ಕೆ ಎಲ್ಲರೂ ಸ್ನಾನ ಪೂಜೆ ಮಾಡಿಸುತ್ತಾರೆ.ಅತ್ಯಂತ ಕೆಟ್ಟ ಆಡಳಿತದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಮಾಯಾವತಿ ಯ ದುರಾಡಳಿತದ ಫಲವಾಗಿ ಪವಿತ್ರ ಕ್ಷೇತ್ರ ಗಬ್ಬು ನಾರುತ್ತಿದೆ.
ಪ್ರಕೃತಿಯ ಪ್ರತಿ ಕಣ ಕಣದಲ್ಲೂ ದೇವರನ್ನು ಕಾಣುವ ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಇಡೀ ಜಗತ್ತು ಪ್ರೀತಿಸುತ್ತದೆ. ಆದರೆ ಅಧಿಕಾರದ ಹೋಪ್ ಲೆಸ್ ರಾಜಕಾರಣಿಗಳಿಂದ ,ಜನಗಳ ಕನಿಷ್ಟ ಕಾಮನ್ ಸೆನ್ಸ್ ಕೊರತೆಯಿಂದಾಗಿ ಪ್ರಕೃತಿ ಯ ದ್ವಂಸ ಕಾಣಬಹುದು. ಪ್ರಧಾನಿ ಮೋದಿಯ ಗಂಗಾ ಶುದ್ದಿ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದನ್ನು ಇಲ್ಲಿ ಕಾಣಬಹುದು.ಈಗಲೂ ಕಾರ್ಖಾನೆಯ ಕೊಳಕುಗಳು ಮನುಷ್ಯರ ಮಲಮೂತ್ರಗಳು ನೀರಿಗೆ ಸೇರುತ್ತಿವೆ.ಅದನ್ನೇ ಪವಿತ್ರ ಎಂಬ ಬಾವನೆಯಲ್ಲಿ ಇಲ್ಲಿ ವ್ಯಾಪಾರ ನೆಡೆಯುತ್ತಿದೆ. ಸ್ವಚ್ಚ ಭಾರತದ ಕಲ್ಪನೆ ಕೇವಲ ಭಾಷಣವಾ?ಸ್ವಚ್ಚತೆಯಿಲ್ಲದೇ ದೇವರು ಧರ್ಮಕ್ಕೆ ಮೌಲ್ಯವಿರುತ್ತದಾ? ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೇಸ್, ಬಿಜೇಪಿ, ಸಮಾಜವಾದಿ,ಬಿ ಎಸ್ ಪಿ ಯ ನಾಟಕದ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮತ್ತು ನಮ್ಮೆಲ್ಲರ ಮನಸ್ಸೇ ಶುದ್ದವಿಲ್ಲದಿದ್ದಾಗ ಗಂಗೆಯ ಶುದ್ದಿ ಕೇವಲ ಕನಸೇ ಆಗಬಹುದು.
ಪವಿತ್ರ ಗಂಗೆ ಸ್ವಚ್ಚವಾಗಲಿ, ಭಕ್ತಿಗೊಂದು ಮೌಲ್ಯ ಬರಲಿ, #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Wednesday, September 14, 2016
ಪವಿತ್ರ ಗಂಗೆ ಸ್ವಚ್ಚವಾಗಲಿ, ಭಕ್ತಿಗೊಂದು ಮೌಲ್ಯ ಬರಲಿ, #ವೆಂಕಟೇಶಸಂಪ .gange should be clean by sampada saalu patrike
Subscribe to:
Post Comments (Atom)
Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )
ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu
No comments:
Post a Comment