ಗಿರಿಶಿಖರದ ನಾಡಿನಲ್ಲಿ, ನೇಪಾಳದ ನೆಲದಲ್ಲಿ, ಪ್ರಕೃತಿಯ ಮಡಿಲಲ್ಲಿ #ವೆಂಕಟೇಶಸಂಪ
ಕೇವಲ ಮೂರು ಕೋಟಿ ಜನ ಸಂಖ್ಯೆಯ ನೇಪಾಳದಲ್ಲಿ ಶೇಕಡಾ 90 %ರಷ್ಟು ಹಿಂದು,5% ರಷ್ಟು ಬೌದ್ದರು, 3%ಮುಸ್ಲಿಮ್, 2%ಕ್ರಿಸ್ಚಿಯನ್ ಇದ್ದಾರೆ.ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 60% ಹೆಂಗಸರಿದ್ದಾರೆ. 40%ಗಂಡಸರಿದ್ದಾರೆ.ಜಗತ್ತಿನ ಏಕೈಕ ಹಿಂದುರಾಷ್ಟ್ರ ನೇಪಾಳ ಎಂಬ ಹೆಮ್ಮೆ ಇದೆ.ಇಲ್ಲಿನ ರಾಜಧಾನಿ ಖಾಟ್ಮಂಡು ಒಂದರಲ್ಲೇ 40 ಲಕ್ಷ ಜನಸಂಖ್ಯೆ ಇದ್ದು ಪೂರ್ತಿ ನೇಪಾಳದಲ್ಲಿ 31 ವಿಮಾನ ನಿಲ್ದಾಣವಿದೆ ಅದರಲ್ಲಿ 1 ಮಾತ್ರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. 17 ಬೇರೆ ಬೇರೆ ಬಾಷೆಗಳಿವೆ. ಶನಿವಾರ ಸರ್ಕಾರಿ ರಜ ಇಲ್ಲಿ, ಗೋವು ಇಲ್ಲಿನ ರಾಷ್ಟ್ರೀಯ ಪ್ರಾಣಿ.ಗೋವನ್ನು ಹಿಂಸೆ ಮಾಡಿದವರಿಗೆ ಜೀವನಪರ್ಯಂತ ಶಿಕ್ಷೆ ವಿಧಿಸುತ್ತಾರೆ.ಸಮುದ್ರ ಮಟ್ಟದಿಂದ ಬರೋಬ್ಬರಿ 4423 ಅಡಿ ಎತ್ತರದಲ್ಲಿರುವ ಈ ಗಿರಿಶಿಖರದ ನಾಡಿಗೆ ಪ್ರವಾಸೋಧ್ಯಮವೇ ಆಧಾಯದ ಮೂಲ. ಉಳಿದಂತೆ ಇಲ್ಲೂ ಬಡವರಿದ್ದಾರೆ,ಶ್ರೀಮಂತರಿದ್ದಾರೆ.ಒಳ್ಳೆಯವರಿದ್ದಾರೆ.ಮೋಸಗಾರರಿದ್ದಾರೆ.ಖಾಟ್ಮಂಡು ನಗರದಲ್ಲಿ ಸ್ವಚ್ಚತೆ ಕಡಿಮೆ ಇದೆ .ರಾಜಕುಟುಂಬದ 7 ಜನರನ್ನು ಒಟ್ಟಿಗೆ ಕೊಲೆಮಾಡಿದ್ದು ಈಗ ಪ್ರಜಾಪ್ರಭುತ್ವದ ವ್ಯವಸ್ಥೆಯೊಂದಿಗೆ ಸಂವಿಧಾನಾತ್ಮಕ ಸರ್ಕಾರ ಅಸ್ಥಿತ್ವದಲ್ಲಿದ್ದು, 50 ಕ್ಕು ಹೆಚ್ಚು ಬೇರೆ ಬೇರೆ ರಾಜಕೀಯ ಪಕ್ಷಗಳು ಇಲ್ಲಿವೆ. ಎರಡು ಪಕ್ಷ ಸೇರಿ ಸದ್ಯ ಅಲ್ಲಿ ಸರ್ಕಾರ ನೆಡೆಸುತ್ತಿದ್ದು ನಮ್ಮ ಭಾರತದ ಮೇಲೆ ತುಂಬಾ ಅವಲಂಬಿತ ದೇಶ ಇದಾಗಿದ್ದು ಇಲ್ಲಿನ ಪ್ರವಾಸಕ್ಕೆ ಯಾವುದೇ ವಿಸಾ ಮತ್ತು ಪಾಸ್ಪೋರ್ಟ್ ನ ಅವಶ್ಯಕತೆಯಿಲ್ಲ.ಸಣ್ಣ ಜಾಗವನ್ನು ವ್ಯರ್ಥಮಾಡದೇ ಕೃಷಿ ಮಾಡುವ ಇಲ್ಲಿನ ಜನ ತುಂಬಾ ಶ್ರಮಜೀವಿಗಳು,.ಪ್ರಕೃತಿ ತಾನಾಗಿಯೇ ತನ್ನ ಸೌಂದರ್ಯದೊಂದಿಗೆ ಜನರನ್ನು ಆಕರ್ಷಿಸುತ್ತಿದ್ದು ಒಮ್ಮೆ ನೋಡಬೇಕಾದ ದೇಶವಿದು.ಇನ್ನೂ ತಿಳಿಯಲು ಓದಿ ಸಂಪದ ಸಾಲು ಪತ್ರಿಕೆ #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment