ಗಿರಿಶಿಖರದ ನಾಡಿನಲ್ಲಿ,ನೇಪಾಳದ ನೆಲದಲ್ಲಿ,ಪ್ರಕೃತಿಯ ಮಡಿಲಲ್ಲಿ,
#ವೆಂಕಟೇಶಸಂಪ
ಹಾಗಂತ ಭೌಗೋಳಿಕವಾಗಿ ಸಿಕ್ಕಾಪಟ್ಟೆ ದೊಡ್ಡ ದೇಶವಲ್ಲ ಇದು.ನಮ್ಮ ಕರ್ನಾಟಕದಷ್ಟು ಇರಬಹುದೇನೋ? ಗಿರಿಶಿಖರಗಳ ಊರು.ಒಂದಕ್ಕಿಂತ ಇನ್ನೊಂದು ಎತ್ತರ ಮತ್ತು ಚೆಂದದ ಶಿಖರಗಳು.ಅಲ್ಲಲ್ಲಿ ಜಲಪಾತಗಳು.ಬರೋಬ್ಬರಿ 180 ಕಿಲೋಮಿಟರ್ ಹರಿಯುವ ನಾರಯಣಿ ನದಿ.ಅದರ ಮಗ್ಗುಲಲ್ಲಿಯೇ ರಸ್ತೆಗಳು, ಪ್ರತಿ ಶಿಖರದಲ್ಲೂ ಅಲ್ಲಲ್ಲಿ ಪುಟ್ಟ ಮನೆಯೊಂದಿಗೆ ಬದುಕು ಕಟ್ಟಿಕೊಂಡ ನೇಪಾಳಿಗರು.ಒಂದು ಕ್ಷಣವೂ ಬಿಡುವಿಲ್ಲದಷ್ಟು ವಾಹನಗಳ ಸಂಚಾರ. ಪಕೃತಿಯ ವಿಕೋಪದ ಜೂಜಾಟ ನೆಡೆಯುವ ಸ್ಥಳವಿದು.ಅಂತ ಸಂದರ್ಭದಲ್ಲೂ ಸಾಧ್ಯವಿರುವಲ್ಲೆಲ್ಲಾ ಶಿಸ್ತುಬದ್ದ ರಸ್ತೆಗಳು, ಅಗಾಧ ಹಸಿರು ಸಂಪತ್ತು, ಅತ್ಯಂತ ಮೇಲ್ಮಟ್ಟದಲ್ಲಿರುವ ನೀರು ಮತ್ತು ಅಂತರ್ಜಲ. ರಸ್ತೆಯ ಇಕ್ಕೆಲಗಳಲ್ಲಿ ಎಡ ಮತ್ತು ಬಲ ಬಾಗದಲ್ಲಿ 60 ಅಡಿ ಬಿಟ್ಟು ಮನೆ ಮತ್ತು ಅಂಗಡಿಗಳು ನಿರ್ಮಿಸಲ್ಪಟ್ಟಿದೆ.ಪ್ರಕೃತಿ ವಿಕೋಪ ಮತ್ತು ಭೂಕಂಪದಂತಹ ತೊಂದರೆಗಳು ಈ ದೇಶಕ್ಕೆ ಆಗಾಗ ಎದುರಾದರೂ ಎಲ್ಲೆಡೆ ಸ್ವಚ್ಚತೆಗೆ ಆಧ್ಯತೆ ನೀಡಲಾಗಿದೆ.ಪ್ರತಿಯೊಂದು ಸೇತುವೆಗೂ ವಾಹನಗಳ ಸುರಕ್ಷತೆಗಾಗಿ ಕಬ್ಬಿಣದ ದಪ್ಪನೆಯ ಮತ್ತು ಎತ್ತರದ ಬೇಲಿ ಹಾಕಲ್ಪಟ್ಟಿರುತ್ತದೆ. ಚಿಕ್ಕ ಚಿಕ್ಕ ಮನೆಗಳಾದರೂ ನೀಟಾಗಿ ನಿರ್ಮಾಣಗೊಂಡಿವೆ. ನಮ್ಮ 1000 ರೂಪಾಯಿ ಇಲ್ಲಿ 1750 ರೂಪಾಯಿಗೆ ಸಮ,ಉದ್ಯಮಗಳು ಕಡಿಮೆ,ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದ್ದು ಅದನ್ನು ಬಳಸಿಕೊಂಡಿದೆ ನೇಪಾಳವೆಂಬ ಪುಟ್ಟ ದೇಶ.
ಅರಣ್ಯವನ್ನು ಚೆಂದವಾಗಿ ಕಾಪಾಡಿಕೊಂಡಿದ್ದಾರೆ. ಇಲ್ಲಿನ ಜನ ತುಂಬಾ ಶ್ರಮಜೀವಿ ಆಗಿದ್ದು ಗಂಡಸು ಹೆಂಗಸು ಎಂಬ ಬೇಧವಿಲ್ಲದೆ ಕೆಲಸಕ್ಕಾಗಿ ದೇಹ ಧಂಡನೆ ಮಾಡ್ತಾರೆ.
ಪಕ್ಕಾ ನಮ್ಮ ಮಲೆನಾಡಿನಂತಿರುವ ನೇಪಾಳ ಹಿಮ ಪರ್ವತಗಳ ಮೇಲೆ ವಿಮಾನದಲ್ಲಿ ಸುತ್ತಾಟ, ಅತ್ಯಂತ ಹಳೆಯದಾದ ಪಶುಪತಿನಾಥ ದೇವಸ್ಥಾನ ನೋಡಬೇಕಾದ ಇನ್ನೂ ಅನೇಕ ಪ್ರದೇಶಗಳಿವೆ. ಕಮರ್ಷಿಯಲ್ ಅಲ್ಲದ ಊರಿನಲ್ಲಿ ಹಣಕಾಸಿನ ಶ್ರೀಮಂತಿಕೆ ಕಡಿಮೆ ಇರಬಹುದು ಆದರೆ ಪ್ರಾಕೃತಿಕ ಶ್ರೀಮಂತಿಕೆ ಇಷ್ಟವಾಗುತ್ತದೆ. ಬುದ್ದ ಧರ್ಮವಿದ್ದರೂ ಹಿಂದೂ ಧರ್ಮದಲ್ಲಿ ಶ್ರದ್ದೆ ಇರೋರು ಜಾಸ್ತಿ,ಉಳಿದಂತೆ ಇಲ್ಲೂ ಬಡವರಿದ್ದಾರೆ,ಶ್ರೀಮಂತರಿದ್ದಾರೆ ,ಗುಡಿಸಲುಗಳಿವೆ,ಬಂಗಲೆಗಳಿವೆ,ಕೆಲವೆಡೆ ರಸ್ತೆಗಳು ಹಾಳಾಗಿವೆ,ಬಹುತೇಕ ಕಡೆ ರಸ್ತೆಯ ಇಕ್ಕೆಲಗಳಲ್ಲಿ ಒಂದೆಡೆ ಪ್ರಪಾತ ಮತ್ತೊಂದೆಡೆ ಧರೆ,ಆಗಾಗ ಜರಿಯಬಹುದೆಂಬ ಭಯವೂ ಕಾಡುತ್ತದೆ..ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ. ಒಟ್ಟಿನಲ್ಲಿ ಗಿರಿಶಿಖರದ ನಾಡಿನ ಸುದ್ದಿ ಇನ್ನೂ ಬಹಳ ಇದೆ.ಮತ್ತೇ ಹೇಳ್ತೀನಿ.ತಪ್ಪದೇ ಓದಿ ಸಂಪದ ಸಾಲು ಪತ್ರಿಕೆ #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Thursday, September 22, 2016
ಗಿರಿಶಿಖರದ ನಾಡಿನಲ್ಲಿ,ನೇಪಾಳದ ನೆಲದಲ್ಲಿ,ಪ್ರಕೃತಿಯ ಮಡಿಲಲ್ಲಿ, #ವೆಂಕಟೇಶಸಂಪ
Subscribe to:
Post Comments (Atom)
Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )
ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu
No comments:
Post a Comment