Friday, September 16, 2016

ಪ್ರಧಾನಿಯ ಕ್ಷೇತ್ರದಲ್ಲಿ ಸ್ವಚ್ಚತೆಯ ಅರಸುತ್ತಾ! ? #ವೆಂಕಟೇಶಸಂಪ

ಪ್ರಧಾನಿಯ ಕ್ಷೇತ್ರದಲ್ಲಿ ಸ್ವಚ್ಚತೆಯ ಅರಸುತ್ತಾ! ?   #ವೆಂಕಟೇಶಸಂಪ

ಎಪ್ಪತ್ತೆರಡು ಜಿಲ್ಲೆ ಇರುವ ಉತ್ತರಪ್ರದೇಶದಲ್ಲಿಯ ವಾರಣಾಸಿಯಲ್ಲಿ 1329 ಹಳ್ಳಿಗಳಿರುವ ಇಲ್ಲಿ  ದೇವಸ್ಥಾನಗಳು ಎಲ್ಲೆಂದರಲ್ಲಿ ಇವೆ. ಪವಿತ್ರ ಹಿಂದೂ ಧರ್ಮದಲ್ಲಿ  ನಂಬಿಕೆಗಳೇ ದೇವರು,ಅದರ ನೆಲಗಟ್ಟಿನಲ್ಲಿ  ಬೆಳೆದ ಧರ್ಮ ಹೆಮ್ಮೆರವಾಗಿ ಬೆಳೆದಿದೆ.  ಜನಸಂಖ್ಯೆಯ ಸ್ಪೋಟದ ಪರಿಣಾಮ,ಆಚರಣೆಯ ಭಕ್ತಿಯ ಪ್ರಭಾವದಿಂದಾಗಿ,   ಭಕ್ತಿಗಿಂತ ಆಡಂಬರವೇ ಹೆಚ್ಚಾಗಿಹೋಗಿದೆ. ಪವಿತ್ರ ಗಂಗೆಯ ಇಕ್ಕೆಲಗಳು ವತ್ತುವರಿಯಾಗಿ ದೊಡ್ಡ ದೊಡ್ಡ ಬಿಲ್ಡಿಂಗ್ ಗಳು ತಲೆ ಎತ್ತಿವೆ. ಗಂಗೆಯ ಮೈಗೆ ಆಸಿಡ್ ಸೋಕಿದಂತೆ ಶುದ್ಧ ನೀರನ್ನು ಸಂಪೂರ್ಣವಾಗಿ ಹಾಳು ಮಾಡಲಾಗಿದೆ.  ಸಣ್ಣ ಸಣ್ಣ ರಸ್ತೆಗಳು,ಅಲ್ಲಿಂದಿಲ್ಲಿಗೂ ಬಿದ್ದ ಕೊಳಕು ಕಸಗಳು, ಕಮರ್ಷಿಯಲ್ ಆದ ವ್ಯವಸ್ಥೆ, ಅತಿಯಾದ ರಿಷ್ಟ್ರಿಕ್ಷನ್ ಗಳು,ಕಿರಿ ಕಿರಿ ಉಂಟು ಮಾಡುತ್ತವೆ.  ಗಲ್ಲಿಗಲ್ಲಿಗಳಲ್ಲಿ ಸಣ್ಣ ಪುಟ್ಟ ವ್ಯಾಪಾರದಿಂದ ರಸ್ತೆಗಳೇ ಇಲ್ಲದ ಕಾಲುಹಾದಿಯೇ ಇಡೀ ದೇವಸ್ಥಾನಗಳ ದರ್ಶನಕ್ಕೆ ರಹದಾರಿಯಾಗಿದೆ.    ನದಿಗಳ ಪಕ್ಕದಲ್ಲಿಯೇ ಘಾಟುಗಳೆಂಬ ಸ್ಮಶಾನಗಳು  87 ಇವೆ. ಬೇರೆ ಬೇರೆ ರಾಜ್ಯ,ರಾಜ,ಪ್ರಸಿದ್ದ ವ್ಯಕ್ತಿಗಳ ಹೆಸರಲ್ಲೂ ಘಾಟುಗಳಿವೆ.    ಅದರಲ್ಲಿ ಬಹುತೇಕ ಘಾಟುಗಳು 1700 ನೇ ಇಸವಿಯಲ್ಲಿ ಮರಾಠ ರಾಜರಿಂದ ಸ್ಥಾಪಿತವಾದ ಉಲ್ಲೇಖವಿದೆ.ಹರಿಶ್ಚಂದ್ರ ಘಾಟ್,ಮಣಿಕರ್ಣಿಕ ಘಾಟ್ ಹೆಚ್ಚು ಪ್ರಸಿದ್ದಿಯಾಗಿದ್ದು.ದಿನದ 24 ಗಂಟೆಯೂ ಶವಸಂಸ್ಕಾರವಾಗುತ್ತದೆ.
ವಿಶ್ವನಾಥ ಮಂದಿರ, ಪಾರ್ವತಿ, ವಿಶಾಲಾಕ್ಷಿ,ಅನ್ನಪೂರ್ಣ,ಹನುಮಾನ್, ತುಳಸಿ ಮಾನಸ, ಕವಡೆಬಾಯಿ,ದೇವಿ, ಅಮ್ಮನವರು ಕಾಲಭೈರವ ಹೀಗೆ ತುಂಬಾ ದೇವಸ್ಥಾನಗಳಿವೆ.  ರಸ್ತೆಯಿಲ್ಲದ,ಸ್ವಚ್ಚತೆಯಿಲ್ಲದೇ ಎಲ್ಲಾ ದೇವಸ್ಥಾನಗಳು ಭಕ್ತಿಯನ್ನು ಮಾಸುವಂತೆ ಮಾಡುತ್ತದೆ. ಅಲ್ಲಿರುವ ಬಹುತೇಕ ಅರ್ಚಕರು ದಕ್ಷಿಣೆ ಕೊಡಿ ಅಂತ ಕೈಯಿಂದ   ಕಸಿದುಕೊಳ್ಳುವುದು ನಿಜಕ್ಕೂ ಅಸಹ್ಯ ತರಿಸುತ್ತದೆ.
ಹಳೆಯ ಕಾಲದಲ್ಲಿ ವಿಶ್ವನಾಥ ಮಂದಿರ ಇನ್ನೂ ದೊಡ್ಡದಾಗಿತ್ತು ಅನ್ನುವುದಕ್ಕೆ ಅಲ್ಲಿರುವ ನಂದಿ ಬೇರೆಡೆ ಮುಖ ಮಾಡಿಕೊಂಡಿರುವುದು ನೋಡಿದಾಗ ತಿಳಿಯುತ್ತದೆ.ಮಸೀದಿಯೂ ಪಕ್ಕದಲ್ಲಿಯೇ     ಇರುವುದರಿಂದ ಅಡಿ ಅಡಿಗೂ ಪೋಲಿಸ್,ಹೋಮ್ ಗಾರ್ಡ್,ಮಿಲಿಟರಿಯ ಕೆಲವು ಮಂದಿ ನಿಂತಿರುತ್ತಾರೆ ಮತ್ತು ಭಕ್ತಿ ಮೂಡುವ ಜಾಗದಲ್ಲಿ ಭಯವೂ ಇರುವಂತೆ ಮಾಡಿದ್ದಾರೆ.   ಪ್ರಧಾನಿ
ನರೇಂದ್ರ ಮೋದಿಯೇ ಇಲ್ಲಿ ಸಂಸದರಾಗಿದ್ದು, ಶೇಕಡಾ 40% ಕೊಳಕು ತೊಳೆಯಲಾಗಿದೆ ಹಾಗು ಅಭಿವೃದ್ದಿ ಆಗಿದೆ ಅನ್ನುತ್ತಾರೆ ಇಲ್ಲಿನ ವಾಸಿಗಳು,
ಇಲ್ಲಿಯೇ ಅಂದರೆ ಬನಾರಸ್ ಹಿಂದೂ ವಿಶ್ವವಿಧ್ಯಾನಿಲಯದ ಒಳಗೆ ಖಾಸಗಿಯಾಗಿ ಕಟ್ಟಲ್ಪಟ್ಟ ಬಿರ್ಲಾ  ಮಂದಿರದ ವಿಶ್ವನಾಥ ದೇವಸ್ಥಾನ ನಿಜಕ್ಕೂ ಅಭಿವೃದ್ದಿ ಗೆ ಶಿಸ್ತುಬದ್ದ ನಿರ್ವಹಣೆಗೆ ಮಾದರಿಯಾಗಿದೆ. 
ಖಾಸಗಿಗೆ ಇಷ್ಟು ಚೆಂದ ನಿರ್ವಹಿಸಲು ಸಾಧ್ಯವಿರುವಾಗ ಈ ಸರ್ಕಾರಗಳಿಗೇನು ದಾಡಿ ಅಂತ ಯೋಚಿಸಿದರೆ    ಈ ಭ್ರಷ್ಟ ವ್ಯವಸ್ಥೆ ಮತ್ತು ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತದೆ, ಇಲ್ಲಿ ಬರುವ ಭಕ್ತರಿಗೂ  ಕೊಳಕು ಮಾಡಬಾರದೆಂಬ ಕನಿಷ್ಟ ಪ್ರಜ್ಞೆ ಮೂಡದಿದ್ದರೆ,ಇಲ್ಲಿರುವ ವ್ಯಾಪಾರಿಗಳಿಗೂ  ತಮ್ಮ ಊರು ಚಂದ ಇರಬೇಕೆಂಬ ಕಾಮನ್ ಸೆನ್ಸ್ ಇಲ್ಲದಿದ್ದರೆ,ಸ್ವಚ್ಚತೆಯಿಲ್ಲದೇ ದೇವಸ್ಥಾನಗಳಿದ್ದರೆ ಅಂತಹ ಪ್ರದೇಶದಲ್ಲಿ ಪವಿತ್ರ ಗಂಗೆ ಮತ್ತು  ವಿಶ್ವನಾಥ ಕೂಡ ಕಾಶಿಯಲ್ಲಿ ನಿಲ್ಲಲಾರ ಅನಿಸುತ್ತದೆ.ಸ್ವಚ್ಚ ಭಾರತದ ಕಲ್ಪನೆ,ಮೋದಿಯ ವಾರಣಾಸಿಯಿಂದಲೇ ಶುರುವಾಗಲಿ ಅಂತ ಆಶಿಸುತ್ತೇನೆ.
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ  

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu