ಹಿಂದೂ ಮುಸ್ಲಿಮ್ ಕ್ರಿಸ್ಚಿಯನ್ ಎಲ್ಲಾ ಧರ್ಮದವರನ್ನೂ ಮದುವೆಯಾಗಿ ಅದಕ್ಕೊಂದುಂದು ಅರಮನೆ ಮಾಡಿದ ಅಕ್ಬರ್ ಎಂಬ ಮುಸ್ಲಿಮ್ ದೊರೆ,
ಆ ಅರಮನೆಯೇ
ಉತ್ತರ ಪ್ರದೇಶದ ಫತೇಪುರ್ ಸಿಕ್ರಿ,
16 ನೇ ಶತಮಾನದಲ್ಲಿ ಅಂದರೆ 1571 ಮತ್ತು 1583 ನಡುವಿನಲ್ಲಿ ಮುಘಲ್ ಚಕ್ರವರ್ತಿ ಅಕ್ಬರ್ ಮೂಲಕ ಫತೇಪುರ್ ಸಿಕ್ರಿಯನ್ನು ನಿರ್ಮಿಸಲಾಗಿದೆ, ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣವಾದ ಫತೇಪುರ್ ಸಿಕ್ರಿ ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿದೆ. ಮುಘಲ್ ಸಂಸ್ಕೃತಿ ಮತ್ತು ನಾಗರಿಕತೆಯ ಸಾಕ್ಷಿಯಾಗಿ ನಿಂತಿದೆ ಈ ಸ್ಮಾರಕ ಪಟ್ಟಣ. ಸಂತ ಶೇಖ್ ಸಲೀಂ ಚಿಸ್ತಿಯು ಅಕ್ಬರ್ ನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದಿದ್ದು ಇಲ್ಲಿಯೇ ಎನ್ನಲಾಗಿದೆ. ಇಲ್ಲಿನ ಯೋಜನೆ ಮತ್ತು ಪರಿಕಲ್ಪನೆಗಳು ಪಟ್ಟಣದ ಯೋಜನೆಯನ್ನು ಹೋಲುತ್ತದೆ ಮತ್ತು ಬಹುಷಃ ಹೆಚ್ಚಿನ ಮಾಹಿತಿಯನ್ನು ಹಳೆ ದಿಲ್ಲಿಯಲ್ಲಿರುವ ಷಹಜಹಾನಬಾದ್ ನಿಂದ ಪಡೆದರು ಎನ್ನಲಾಗಿದೆ.
1585 ರಲ್ಲಿ ಅಕ್ಬರ್ ಆಫ್ಘಾನ್ ಬುಡಕಟ್ಟು ಜನರ ವಿರುದ್ಧ ಹೋರಾಡುವಾಗ ಫತೇಪುರ್ ಸಿಕ್ರಿಯು ಮುಘಲ್ ಆಡಳಿತದ ಕಾರ್ಯಾಲಯವಾಗಿ ಒಮ್ಮೆ ಕಾರ್ಯನಿರ್ವಹಿಸಿತ್ತು. ಅದಾದ ತರುವಾಯ 1619 ರ ಸಮಯದಲ್ಲಿ ಆಗ್ರಾಗೆ ಪ್ಲೇಗ್ ಮಹಾರೋಗವು ಆಕ್ರಮಣ ಮಾಡಿದಾಗ ಜಹಂಗೀರನು ಇಲ್ಲಿ 3 ತಿಂಗಳ ಕಾಲ ಆಶ್ರಯವನ್ನು ಪಡೆದಿದ್ದನು. ಇದಾದನಂತರ ಮೂಲೆಗುಂಪಾಗಿದ್ದ ಈ ತಾಣವು ಮತ್ತೆ 1892 ರಲ್ಲಿ ಮರುಶೋಧಿಸಲ್ಪಟ್ಟಿತು. ಆದಾಗ್ಯೂ ತನ್ನ ಅಸ್ತಿತ್ವದ 14 ವರ್ಷಗಳಲ್ಲಿ ಗಮನಾರ್ಹ ಆಳ್ವಿಕೆ ನಡೆಸಿ ಸಾಕಷ್ಟು ಅರಮನೆಗಳು, ಸಾರ್ವಜನಿಕ ಕಟ್ಟಡಗಳು, ಮಸೀದಿಗಳನ್ನು ಕಟ್ಟಿದರು ಎನ್ನಲಾಗಿದೆ. ಇದು ರಾಜರ ಸೇವಕರು ಮತ್ತು ಸೇನೆಯ ಜೀವನ ಪ್ರದೇಶವಾಗಿ ಕಾರ್ಯ ನಿರ್ವಹಿಸಿತು ಮತ್ತು ಜನಸಂಖ್ಯೆ ಕಡಿಮೆ ಇದ್ದ ಪ್ರದೇಶವಾಗಿತ್ತು.
ವಿಶೇಷ ಸಂದರ್ಭಗಳಿಗಾಗಿ ನಿರ್ಮಿತವಾದ ಕೃತಕ ಸರೋವರದ ಹತ್ತಿರ ಕಲ್ಲಿನ ಪ್ರಸ್ಥಭೂಮಿ ಕಾಣಬಹುದು. 3 ಬದಿಗಳಲ್ಲಿ 6 ಕಿ.ಮೀ ಉದ್ದದ ಗೋಡೆಗಳನ್ನು ಹೊಂದಿರುವ ನಗರ ಸಾಕಷ್ಟು ಬೃಹತ್ ಕಟ್ಟಡಗಳು ಮತ್ತು 7 ಬಾಗಿಲುಗಳಿಂದ ಸಂರಕ್ಷಿಸಲ್ಪಟ್ಟಿದೆ. ಅದರಲ್ಲಿ ಮುಖ್ಯವಾದುದು ಆಗ್ರಾ ಬಾಗಿಲಾಗಿದೆ.
ಫತೇಪುರ್ ಸಿಕ್ರಿಯ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳು
ಇಲ್ಲಿ ಕಂಡುಬರುವ ಅನೇಕ ಸ್ಮಾರಕಗಳನ್ನು ಕೆಂಪು ಸ್ಯಾಂಡ್ ಸ್ಟೋನ್‍ಗಳಿಂದ ನಿರ್ಮಿಸಲಾಗಿದ್ದು, ಹಿಂದೂ, ಇಂಡೊ-ಮುಸ್ಲಿಮ್ ಮತ್ತು ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಬಿಂಬಿಸುತ್ತವೆ. ಈ ಗಮನಾರ್ಹ ಕಟ್ಟಡಗಳಲ್ಲಿ ದಿವಾನ್-ಇ -ಆಮ್, ಸಾರ್ವಜನಿಕ ಪ್ರೇಕ್ಷಕರ ಸಭಾಂಗಣ ಪೋರ್ಟಿಕೊ ಒಳಗೊಂಡ ಅಕ್ಬರ್ ನ್ಯಾಯ ನೀಡಲು ಬಳಸುತ್ತಿದ್ದ ಜಾಗ ಕೂಡ ಇದರಲ್ಲಿ ಸೇರಿವೆ. ದಿವಾನ್-ಇ -ಆಮ್ ನಿಂದ ದೌಲತ್ ಖಾನ ಅಥವಾ ಚಕ್ರಾಧಿಪತ್ಯದ ಅರಮನೆಯನ್ನು ಕಾಣಬಹುದು. ನಂತರ ಬೌದ್ಧ ದೇವಾಲಯಗಳನ್ನು ಹೋಲುವ ರಾಂಚ್ ಮಹಲ್, ಜೋಧಾ ಬಾಯಿ ಅರಮನೆ, ಅನುಪ್ ತಾಲಾವ್ ಅಥವಾ ಟರ್ಕಿ ಸುಲ್ತಾನಾ ಪೆವಿಲಿಯನ್, ಬೀರಬಲ್ ಅರಮನೆಯನ್ನು ಕೂಡ ಕಾಣಬಹುದು.
ಫತೇಪುರ್ ಸಿಕ್ರಿ ಹಲವಾರು ಧಾರ್ಮಿಕ ಸ್ಮಾರಕಗಳನ್ನೂ ಒಳಗೊಂಡಿದೆ. ಶಾಸನದ ಮೂಲಕ ಮೆಕ್ಕಾದಷ್ಟೆ ಪವಿತ್ರವೆಂದು ತಿಳಿಯಪಡಿಸುವ ಜಾಮಾ ಮಸೀದಿ ಮತ್ತು ಮಹತ್ ಮಸೀದಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಮಸೀದಿಯು ಶೇಖ್ ಸಲೀಮನ ಸಮಾಧಿಯಾಗಿದ್ದು ನಂತರದಲ್ಲಿ ಜಹಾಂಗೀರ್ ಇದನ್ನು ಅಲಂಕರಿಸಿದನು. 1572 ರಲ್ಲಿ ಗುಜರಾತ್ ವಶಪಡಿಸಿಕೊಂಡ ನೆನಪಿಗಾಗಿ ಕಟ್ಟಿದ ಬುಲಂದ್ ದರ್ವಾಜಾ ಕೂಡ ನೋಡಬಹುದಾದ ಸ್ಥಳ. ಇದರ ಜೊತೆಗೆ ಇತರ ಸ್ಮಾರಕಗಳೆಂದರೆ ಇಬಾದತ್ ಖಾನ್, ಅನುಪ್ ತಾಲಾವ್, ಹುಜ್ರಾ ಇ ಅನುಪ್ ತಾಲಾವ್ ಮತ್ತು ಮಾರಿಮ್ ಉಜ್ ಜಮಾನಿ ಅರಮನೆಗಳು.
ಇಂದು ಫತೇಪುರ್ ಸಿಕ್ರಿ ಒಂದು ಪ್ರೇತ ಅಥವಾ ಭೂತಗಳ ನಗರ ಎಂಬ ನಾಮಧೇಯ ಪಡೆದಿದೆಯಾದರೂ ಇಲ್ಲಿರುವ ಸ್ಮಾರಕಗಳು ಮಾತ್ರ ಸಂರಕ್ಷಿಸಲ್ಪಟ್ಟು ಉತ್ತಮ ಸ್ಥಿತಿಯಲ್ಲಿವೆ.
ಇಲ್ಲಿ ಎಲ್ಲೆಡೆ ಸಿಕ್ಕಾಪಟ್ಟೆ ಕಮರ್ಷಿಯಲ್ ಆಗಿದ್ದು ಪ್ರತಿಯೊಂದಕ್ಕು ದುಡ್ಡು ಕೀಳುವ ಮಂದಿ ಇದ್ದಾರೆ ಪ್ರವಾಸಿಗರು ಜಾಗೃತರಾಗಿರಬೇಕಾದ್ದು ಅನಿವಾರ್ಯ,
,#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment