ಸರಾಯಿಮುಕ್ತಗೊಳಿಸಿದ ಬಿಹಾರದ ಬದಿಯಲ್ಲಿ, #ವೆಂಕಟೇಶಸಂಪ
ದಾರಿ ಸಾಗಿದಂತೆ ಪ್ರಯಾಣ ಮುಂದುವರೆದಂತೆ ರಾಜ್ಯಗಳೇ ಬದಲಾಗುತ್ತಿದೆ. ಇದು ಬಿಹಾರದ ಪ್ರಸಿದ್ದ ಗಯಾ ಕ್ಷೇತ್ರ.ಇಲ್ಲಿ ಬುದ್ದಗಯ,ಗಯಾ,ವಿಷ್ಣುಪಾದ ದೇವಸ್ಥಾನ. ವಟವೃಕ್ಷ, ಫಲ್ಗುಣಿ ನದಿ,ಧಾರ್ಮಿಕವಾಗಿ ನೋಡಬೇಕಾದ ಸ್ಥಳಗಳು.
ಗಯಾಸುರನೆಂಬ ವ್ಯಕ್ತಿ ತನ್ನ ಮೋಕ್ಷಕ್ಕಾಗಿ ವಿಷ್ಣುವನ್ನು ತಪಸ್ಸು ಮಾಡುತ್ತಾನೆ. ಆತನಿಗೆ ಪಾತಾಳದಲ್ಲಿರು ಎಂದು ತನ್ನ ಪಾದದ ಮೂಲಕ ತಳ್ಳುತ್ತಾನೆ.ಹಾಗೆಯೇ ಮೂಡಿದ ಪಾದದ ಗುರುತಿನ ಸ್ಥಳವೇ ಬಿಹಾರದ ಗಯಾ ಊರಿನ ವಿಷ್ಣುಪಾದ.
ಅಲ್ಲಿ ನಿತ್ಯವೂ ಪಿತೃ ಕಾರ್ಯ ಜರುಗುತ್ತಲೇ ಇರುತ್ತದೆ. ಅಪರಕರ್ಮದ ಪಿಂಡ ಪ್ರತಿ ದಿನ ಆ ಪಾದದ ಮೇಲೆ ಬೀಳದಿದ್ದರೆ ಈ ಗಯಾಸುರ ಹೊರಗೆ ಬರುತ್ತಾನೆಂಬ ಪ್ರತೀತಿ ಇಲ್ಲಿದೆ.ಇಲ್ಲಿ ಶ್ರಾದ್ದ ಕರ್ಮ ಮಾಡಿದವರು ಯಾವುದಾದರೂ 3 ಬಗೆಯ ವಸ್ತುಗಳನ್ನು(1 ತರಕಾರಿ 1 ಸ್ವೀಟ್ 1 ಹಣ್ಣು)ತ್ಯಜಿಸಬೇಕು.
ಅದಕ್ಕೆ ವಟವೃಕ್ಷವೊಂದು ಸಾಕ್ಷಿ ಎನ್ನುತ್ತಾರೆ.
ಫಲ್ಗುಣಿ ನದಿ ಇಲ್ಲಿನ ನೀರಿನ ಮೂಲವೂ ಹೌದು,ಇದರ ವಿಶೇಷತೆಯೆಂದರೆ ಆಳ ತೀರಾ ಕಡಿಮೆ ಹೆಚ್ಚೆಂದರೆ ಎರಡು ನಾಲ್ಕು ಅಡಿ ಆದರೆ ಅಗಲ ಮಾತ್ರ 2 ಕಿಲೋಮೀಟರ್ ನಷ್ಟು,
ಬುದ್ದಗಯವೂ ಇಲ್ಲಿಗೆ ಸಮೀಪವಿದೆ.29ನೇ ವಯಸ್ಸಿನಲ್ಲಿ ಸಿದ್ದಾರ್ಥನೆಂಬ ರಾಜಕುಮಾರ ಜಗತ್ತಿನ ಮತ್ತು ಬದುಕಿನ ಆಳವನ್ನು ಅರಿತು,ತನ್ನ ಆಲೋಚನೆಗಳನ್ನು ಧನಾತ್ಮಕವಾಗಿಸಿಕೊಂಡು ಗೌತಮ ಬುದ್ದನಾಗಿ ಜ್ಞಾನೋದಯಗೊಂಡ ಸ್ಥಳವಿದು. ಹಿಂಸೆಯಿಂದ ಏನೂ ಸಿಗುವುದಿಲ್ಲ ಮತ್ತು ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ನಿಷ್ಟೆ ಇಟ್ಟುಕೊಂಡು ಅದರಂತೆ ನೆಡೆಯುವ ಪ್ರಯತ್ನ ಮಾಡಿದ.ಬರೋಬ್ಬರಿ 7 ವಾರಗಳ ಕಾಲ ಧ್ಯಾನವಸ್ಥೆಗೆ ಜಾರಿದ ಉಲ್ಲೇಖವಿದೆ.
ಮಹಾಬೋದಿ ದೇವಸ್ಥಾನವನ್ನು ನವೀಕರಿಸಿದ್ದು ಸಾಮ್ರಾಟ್ ಅಶೋಕ್. (ಬಿ ಸಿ 260ರಲ್ಲಿ)
ಅಹಿಂಸೆಯ ಹೆಸರಲ್ಲಿ ಪ್ರಾರಂಭಿಸಿದ ಈ ತತ್ವಗಳೇ ಒಂದು ಧರ್ಮವಾಗಿಬಿಟ್ಟಿತು ನೋಡಿ.ಬುದ್ದ ಧ್ಯಾನ ಮಾಡಿದ ಜಾಗದಲ್ಲಿ 10 ನಿಮಿಷ ಧ್ಯಾನ ಮಾಡಲಾಗದಷ್ಟು ಜನಜಂಗುಳಿ.ಹೊರಗೆ ಪೂರ್ತಿ ಬಿಕ್ಷುಕರ ಕಾಟ.
ಬಿಹಾರದ ತುಂಬಾ ಜಾಗದಲ್ಲಿ ಬಿಕ್ಷುಕರಿದ್ದಾರೆ. ಬಹುತೇಕರು ವಿಕಲಚೇತನರು.ಅವರನ್ನು ನೋಡಿದಾಗ ಪಾಪವೆನಿಸುತ್ತದೆ.ಈ ಸರ್ಕಾರಗಳೇಕೆ ಇಂತವರ ನೆರವಿಗೆ ಹೋಗುತ್ತಿಲ್ಲ ಎಂಬ ಬೇಸರ ಕಾಡುತ್ತದೆ.
ನಿತೀಶ್ ಕುಮಾರ್ ಆಡಳಿತ ಸ್ವಲ್ಪ ಮಟ್ಟಿಗೆ ಚೆನ್ನಾಗಿದ್ದರೂ ಅವಕಾಶ ಇನ್ನೂ ಬಳಸಿಕೊಳ್ಳಬಹುದಿತ್ತು.ಇಡೀ ಬಿಹಾರದಲ್ಲಿ ಸರಾಯಿ ನಿಷೇಧ ಮಾಡಿ ಭೇಶ್ ಅನ್ನಿಸಿಕೊಂಡಿದ್ದಾರೆ.ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಬಿಹಾರದ ಸ್ವಚ್ಚತೆ ಪರವಾಗಿಲ್ಲವಾದರೂ ಸ್ವಚ್ಚತೆ ಹೆಚ್ಚಬೇಕಿದೆ .ಸಿಕ್ಕಾಪಟ್ಟೆ ಟೋಲ್ ಗಳಿವೆ ಆದರೆ ರಸ್ತೆ ಅಷ್ಟಕ್ಕಷ್ಟೆ. ಮೇವು ಹಗರಣದಲ್ಲಿ ಮೆಂದ ಲಾಲುಪ್ರಸಾದ್ ಯಾದವ್ ಅವರ ಕೈಯಲ್ಲಿ ಬಹಳ ವರ್ಷ ನಲುಗಿಹೋಗಿದ್ದ ಬಿಹಾರದಲ್ಲಿ ಹೊಸ ಬದಲಾವಣೆ ಬರಬೇಕಿದೆ.#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment