Sunday, September 18, 2016

ಸರಾಯಿಮುಕ್ತಗೊಳಿಸಿದ ಬಿಹಾರದ ಬದಿಯಲ್ಲಿ, #ವೆಂಕಟೇಶಸಂಪ bihar tour by sampada saalu patrike

ಸರಾಯಿಮುಕ್ತಗೊಳಿಸಿದ ಬಿಹಾರದ ಬದಿಯಲ್ಲಿ, #ವೆಂಕಟೇಶಸಂಪ

ದಾರಿ ಸಾಗಿದಂತೆ ಪ್ರಯಾಣ ಮುಂದುವರೆದಂತೆ ರಾಜ್ಯಗಳೇ ಬದಲಾಗುತ್ತಿದೆ.  ಇದು  ಬಿಹಾರದ ಪ್ರಸಿದ್ದ ಗಯಾ ಕ್ಷೇತ್ರ.ಇಲ್ಲಿ ಬುದ್ದಗಯ,ಗಯಾ,ವಿಷ್ಣುಪಾದ ದೇವಸ್ಥಾನ. ವಟವೃಕ್ಷ, ಫಲ್ಗುಣಿ ನದಿ,ಧಾರ್ಮಿಕವಾಗಿ ನೋಡಬೇಕಾದ ಸ್ಥಳಗಳು.
ಗಯಾಸುರನೆಂಬ ವ್ಯಕ್ತಿ ತನ್ನ ಮೋಕ್ಷಕ್ಕಾಗಿ ವಿಷ್ಣುವನ್ನು ತಪಸ್ಸು ಮಾಡುತ್ತಾನೆ. ಆತನಿಗೆ ಪಾತಾಳದಲ್ಲಿರು ಎಂದು ತನ್ನ ಪಾದದ ಮೂಲಕ ತಳ್ಳುತ್ತಾನೆ.ಹಾಗೆಯೇ ಮೂಡಿದ ಪಾದದ ಗುರುತಿನ ಸ್ಥಳವೇ ಬಿಹಾರದ ಗಯಾ ಊರಿನ ವಿಷ್ಣುಪಾದ.   
ಅಲ್ಲಿ  ನಿತ್ಯವೂ ಪಿತೃ ಕಾರ್ಯ ಜರುಗುತ್ತಲೇ ಇರುತ್ತದೆ. ಅಪರಕರ್ಮದ ಪಿಂಡ ಪ್ರತಿ ದಿನ ಆ ಪಾದದ ಮೇಲೆ ಬೀಳದಿದ್ದರೆ ಈ ಗಯಾಸುರ ಹೊರಗೆ ಬರುತ್ತಾನೆಂಬ ಪ್ರತೀತಿ ಇಲ್ಲಿದೆ.ಇಲ್ಲಿ ಶ್ರಾದ್ದ ಕರ್ಮ ಮಾಡಿದವರು ಯಾವುದಾದರೂ 3 ಬಗೆಯ ವಸ್ತುಗಳನ್ನು(1 ತರಕಾರಿ 1 ಸ್ವೀಟ್ 1 ಹಣ್ಣು)ತ್ಯಜಿಸಬೇಕು.
ಅದಕ್ಕೆ ವಟವೃಕ್ಷವೊಂದು ಸಾಕ್ಷಿ ಎನ್ನುತ್ತಾರೆ.
ಫಲ್ಗುಣಿ ನದಿ ಇಲ್ಲಿನ ನೀರಿನ ಮೂಲವೂ ಹೌದು,ಇದರ ವಿಶೇಷತೆಯೆಂದರೆ     ಆಳ ತೀರಾ ಕಡಿಮೆ ಹೆಚ್ಚೆಂದರೆ ಎರಡು ನಾಲ್ಕು ಅಡಿ ಆದರೆ ಅಗಲ ಮಾತ್ರ 2 ಕಿಲೋಮೀಟರ್ ನಷ್ಟು,
ಬುದ್ದಗಯವೂ ಇಲ್ಲಿಗೆ ಸಮೀಪವಿದೆ.29ನೇ ವಯಸ್ಸಿನಲ್ಲಿ  ಸಿದ್ದಾರ್ಥನೆಂಬ ರಾಜಕುಮಾರ  ಜಗತ್ತಿನ ಮತ್ತು ಬದುಕಿನ ಆಳವನ್ನು ಅರಿತು,ತನ್ನ ಆಲೋಚನೆಗಳನ್ನು ಧನಾತ್ಮಕವಾಗಿಸಿಕೊಂಡು ಗೌತಮ ಬುದ್ದನಾಗಿ  ಜ್ಞಾನೋದಯಗೊಂಡ ಸ್ಥಳವಿದು. ಹಿಂಸೆಯಿಂದ ಏನೂ ಸಿಗುವುದಿಲ್ಲ ಮತ್ತು ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ನಿಷ್ಟೆ ಇಟ್ಟುಕೊಂಡು ಅದರಂತೆ ನೆಡೆಯುವ ಪ್ರಯತ್ನ ಮಾಡಿದ.ಬರೋಬ್ಬರಿ 7 ವಾರಗಳ ಕಾಲ ಧ್ಯಾನವಸ್ಥೆಗೆ ಜಾರಿದ ಉಲ್ಲೇಖವಿದೆ.   
ಮಹಾಬೋದಿ ದೇವಸ್ಥಾನವನ್ನು ನವೀಕರಿಸಿದ್ದು ಸಾಮ್ರಾಟ್ ಅಶೋಕ್. (ಬಿ ಸಿ 260ರಲ್ಲಿ)    
ಅಹಿಂಸೆಯ ಹೆಸರಲ್ಲಿ ಪ್ರಾರಂಭಿಸಿದ ಈ ತತ್ವಗಳೇ ಒಂದು ಧರ್ಮವಾಗಿಬಿಟ್ಟಿತು ನೋಡಿ.ಬುದ್ದ ಧ್ಯಾನ ಮಾಡಿದ ಜಾಗದಲ್ಲಿ 10 ನಿಮಿಷ ಧ್ಯಾನ ಮಾಡಲಾಗದಷ್ಟು   ಜನಜಂಗುಳಿ.ಹೊರಗೆ ಪೂರ್ತಿ ಬಿಕ್ಷುಕರ ಕಾಟ. 
ಬಿಹಾರದ ತುಂಬಾ ಜಾಗದಲ್ಲಿ ಬಿಕ್ಷುಕರಿದ್ದಾರೆ. ಬಹುತೇಕರು ವಿಕಲಚೇತನರು.ಅವರನ್ನು ನೋಡಿದಾಗ ಪಾಪವೆನಿಸುತ್ತದೆ.ಈ ಸರ್ಕಾರಗಳೇಕೆ ಇಂತವರ ನೆರವಿಗೆ ಹೋಗುತ್ತಿಲ್ಲ ಎಂಬ ಬೇಸರ ಕಾಡುತ್ತದೆ.   
ನಿತೀಶ್ ಕುಮಾರ್ ಆಡಳಿತ ಸ್ವಲ್ಪ ಮಟ್ಟಿಗೆ ಚೆನ್ನಾಗಿದ್ದರೂ   ಅವಕಾಶ ಇನ್ನೂ ಬಳಸಿಕೊಳ್ಳಬಹುದಿತ್ತು.ಇಡೀ ಬಿಹಾರದಲ್ಲಿ ಸರಾಯಿ ನಿಷೇಧ ಮಾಡಿ ಭೇಶ್ ಅನ್ನಿಸಿಕೊಂಡಿದ್ದಾರೆ.ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಬಿಹಾರದ ಸ್ವಚ್ಚತೆ ಪರವಾಗಿಲ್ಲವಾದರೂ ಸ್ವಚ್ಚತೆ ಹೆಚ್ಚಬೇಕಿದೆ .ಸಿಕ್ಕಾಪಟ್ಟೆ ಟೋಲ್ ಗಳಿವೆ ಆದರೆ ರಸ್ತೆ ಅಷ್ಟಕ್ಕಷ್ಟೆ. ಮೇವು ಹಗರಣದಲ್ಲಿ ಮೆಂದ ಲಾಲುಪ್ರಸಾದ್ ಯಾದವ್ ಅವರ ಕೈಯಲ್ಲಿ ಬಹಳ ವರ್ಷ ನಲುಗಿಹೋಗಿದ್ದ ಬಿಹಾರದಲ್ಲಿ ಹೊಸ ಬದಲಾವಣೆ ಬರಬೇಕಿದೆ.#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Friday, September 16, 2016

ಪ್ರಧಾನಿಯ ಕ್ಷೇತ್ರದಲ್ಲಿ ಸ್ವಚ್ಚತೆಯ ಅರಸುತ್ತಾ! ? #ವೆಂಕಟೇಶಸಂಪ

ಪ್ರಧಾನಿಯ ಕ್ಷೇತ್ರದಲ್ಲಿ ಸ್ವಚ್ಚತೆಯ ಅರಸುತ್ತಾ! ?   #ವೆಂಕಟೇಶಸಂಪ

ಎಪ್ಪತ್ತೆರಡು ಜಿಲ್ಲೆ ಇರುವ ಉತ್ತರಪ್ರದೇಶದಲ್ಲಿಯ ವಾರಣಾಸಿಯಲ್ಲಿ 1329 ಹಳ್ಳಿಗಳಿರುವ ಇಲ್ಲಿ  ದೇವಸ್ಥಾನಗಳು ಎಲ್ಲೆಂದರಲ್ಲಿ ಇವೆ. ಪವಿತ್ರ ಹಿಂದೂ ಧರ್ಮದಲ್ಲಿ  ನಂಬಿಕೆಗಳೇ ದೇವರು,ಅದರ ನೆಲಗಟ್ಟಿನಲ್ಲಿ  ಬೆಳೆದ ಧರ್ಮ ಹೆಮ್ಮೆರವಾಗಿ ಬೆಳೆದಿದೆ.  ಜನಸಂಖ್ಯೆಯ ಸ್ಪೋಟದ ಪರಿಣಾಮ,ಆಚರಣೆಯ ಭಕ್ತಿಯ ಪ್ರಭಾವದಿಂದಾಗಿ,   ಭಕ್ತಿಗಿಂತ ಆಡಂಬರವೇ ಹೆಚ್ಚಾಗಿಹೋಗಿದೆ. ಪವಿತ್ರ ಗಂಗೆಯ ಇಕ್ಕೆಲಗಳು ವತ್ತುವರಿಯಾಗಿ ದೊಡ್ಡ ದೊಡ್ಡ ಬಿಲ್ಡಿಂಗ್ ಗಳು ತಲೆ ಎತ್ತಿವೆ. ಗಂಗೆಯ ಮೈಗೆ ಆಸಿಡ್ ಸೋಕಿದಂತೆ ಶುದ್ಧ ನೀರನ್ನು ಸಂಪೂರ್ಣವಾಗಿ ಹಾಳು ಮಾಡಲಾಗಿದೆ.  ಸಣ್ಣ ಸಣ್ಣ ರಸ್ತೆಗಳು,ಅಲ್ಲಿಂದಿಲ್ಲಿಗೂ ಬಿದ್ದ ಕೊಳಕು ಕಸಗಳು, ಕಮರ್ಷಿಯಲ್ ಆದ ವ್ಯವಸ್ಥೆ, ಅತಿಯಾದ ರಿಷ್ಟ್ರಿಕ್ಷನ್ ಗಳು,ಕಿರಿ ಕಿರಿ ಉಂಟು ಮಾಡುತ್ತವೆ.  ಗಲ್ಲಿಗಲ್ಲಿಗಳಲ್ಲಿ ಸಣ್ಣ ಪುಟ್ಟ ವ್ಯಾಪಾರದಿಂದ ರಸ್ತೆಗಳೇ ಇಲ್ಲದ ಕಾಲುಹಾದಿಯೇ ಇಡೀ ದೇವಸ್ಥಾನಗಳ ದರ್ಶನಕ್ಕೆ ರಹದಾರಿಯಾಗಿದೆ.    ನದಿಗಳ ಪಕ್ಕದಲ್ಲಿಯೇ ಘಾಟುಗಳೆಂಬ ಸ್ಮಶಾನಗಳು  87 ಇವೆ. ಬೇರೆ ಬೇರೆ ರಾಜ್ಯ,ರಾಜ,ಪ್ರಸಿದ್ದ ವ್ಯಕ್ತಿಗಳ ಹೆಸರಲ್ಲೂ ಘಾಟುಗಳಿವೆ.    ಅದರಲ್ಲಿ ಬಹುತೇಕ ಘಾಟುಗಳು 1700 ನೇ ಇಸವಿಯಲ್ಲಿ ಮರಾಠ ರಾಜರಿಂದ ಸ್ಥಾಪಿತವಾದ ಉಲ್ಲೇಖವಿದೆ.ಹರಿಶ್ಚಂದ್ರ ಘಾಟ್,ಮಣಿಕರ್ಣಿಕ ಘಾಟ್ ಹೆಚ್ಚು ಪ್ರಸಿದ್ದಿಯಾಗಿದ್ದು.ದಿನದ 24 ಗಂಟೆಯೂ ಶವಸಂಸ್ಕಾರವಾಗುತ್ತದೆ.
ವಿಶ್ವನಾಥ ಮಂದಿರ, ಪಾರ್ವತಿ, ವಿಶಾಲಾಕ್ಷಿ,ಅನ್ನಪೂರ್ಣ,ಹನುಮಾನ್, ತುಳಸಿ ಮಾನಸ, ಕವಡೆಬಾಯಿ,ದೇವಿ, ಅಮ್ಮನವರು ಕಾಲಭೈರವ ಹೀಗೆ ತುಂಬಾ ದೇವಸ್ಥಾನಗಳಿವೆ.  ರಸ್ತೆಯಿಲ್ಲದ,ಸ್ವಚ್ಚತೆಯಿಲ್ಲದೇ ಎಲ್ಲಾ ದೇವಸ್ಥಾನಗಳು ಭಕ್ತಿಯನ್ನು ಮಾಸುವಂತೆ ಮಾಡುತ್ತದೆ. ಅಲ್ಲಿರುವ ಬಹುತೇಕ ಅರ್ಚಕರು ದಕ್ಷಿಣೆ ಕೊಡಿ ಅಂತ ಕೈಯಿಂದ   ಕಸಿದುಕೊಳ್ಳುವುದು ನಿಜಕ್ಕೂ ಅಸಹ್ಯ ತರಿಸುತ್ತದೆ.
ಹಳೆಯ ಕಾಲದಲ್ಲಿ ವಿಶ್ವನಾಥ ಮಂದಿರ ಇನ್ನೂ ದೊಡ್ಡದಾಗಿತ್ತು ಅನ್ನುವುದಕ್ಕೆ ಅಲ್ಲಿರುವ ನಂದಿ ಬೇರೆಡೆ ಮುಖ ಮಾಡಿಕೊಂಡಿರುವುದು ನೋಡಿದಾಗ ತಿಳಿಯುತ್ತದೆ.ಮಸೀದಿಯೂ ಪಕ್ಕದಲ್ಲಿಯೇ     ಇರುವುದರಿಂದ ಅಡಿ ಅಡಿಗೂ ಪೋಲಿಸ್,ಹೋಮ್ ಗಾರ್ಡ್,ಮಿಲಿಟರಿಯ ಕೆಲವು ಮಂದಿ ನಿಂತಿರುತ್ತಾರೆ ಮತ್ತು ಭಕ್ತಿ ಮೂಡುವ ಜಾಗದಲ್ಲಿ ಭಯವೂ ಇರುವಂತೆ ಮಾಡಿದ್ದಾರೆ.   ಪ್ರಧಾನಿ
ನರೇಂದ್ರ ಮೋದಿಯೇ ಇಲ್ಲಿ ಸಂಸದರಾಗಿದ್ದು, ಶೇಕಡಾ 40% ಕೊಳಕು ತೊಳೆಯಲಾಗಿದೆ ಹಾಗು ಅಭಿವೃದ್ದಿ ಆಗಿದೆ ಅನ್ನುತ್ತಾರೆ ಇಲ್ಲಿನ ವಾಸಿಗಳು,
ಇಲ್ಲಿಯೇ ಅಂದರೆ ಬನಾರಸ್ ಹಿಂದೂ ವಿಶ್ವವಿಧ್ಯಾನಿಲಯದ ಒಳಗೆ ಖಾಸಗಿಯಾಗಿ ಕಟ್ಟಲ್ಪಟ್ಟ ಬಿರ್ಲಾ  ಮಂದಿರದ ವಿಶ್ವನಾಥ ದೇವಸ್ಥಾನ ನಿಜಕ್ಕೂ ಅಭಿವೃದ್ದಿ ಗೆ ಶಿಸ್ತುಬದ್ದ ನಿರ್ವಹಣೆಗೆ ಮಾದರಿಯಾಗಿದೆ. 
ಖಾಸಗಿಗೆ ಇಷ್ಟು ಚೆಂದ ನಿರ್ವಹಿಸಲು ಸಾಧ್ಯವಿರುವಾಗ ಈ ಸರ್ಕಾರಗಳಿಗೇನು ದಾಡಿ ಅಂತ ಯೋಚಿಸಿದರೆ    ಈ ಭ್ರಷ್ಟ ವ್ಯವಸ್ಥೆ ಮತ್ತು ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತದೆ, ಇಲ್ಲಿ ಬರುವ ಭಕ್ತರಿಗೂ  ಕೊಳಕು ಮಾಡಬಾರದೆಂಬ ಕನಿಷ್ಟ ಪ್ರಜ್ಞೆ ಮೂಡದಿದ್ದರೆ,ಇಲ್ಲಿರುವ ವ್ಯಾಪಾರಿಗಳಿಗೂ  ತಮ್ಮ ಊರು ಚಂದ ಇರಬೇಕೆಂಬ ಕಾಮನ್ ಸೆನ್ಸ್ ಇಲ್ಲದಿದ್ದರೆ,ಸ್ವಚ್ಚತೆಯಿಲ್ಲದೇ ದೇವಸ್ಥಾನಗಳಿದ್ದರೆ ಅಂತಹ ಪ್ರದೇಶದಲ್ಲಿ ಪವಿತ್ರ ಗಂಗೆ ಮತ್ತು  ವಿಶ್ವನಾಥ ಕೂಡ ಕಾಶಿಯಲ್ಲಿ ನಿಲ್ಲಲಾರ ಅನಿಸುತ್ತದೆ.ಸ್ವಚ್ಚ ಭಾರತದ ಕಲ್ಪನೆ,ಮೋದಿಯ ವಾರಣಾಸಿಯಿಂದಲೇ ಶುರುವಾಗಲಿ ಅಂತ ಆಶಿಸುತ್ತೇನೆ.
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ  

Wednesday, September 14, 2016

ಪವಿತ್ರ ಗಂಗೆ ಸ್ವಚ್ಚವಾಗಲಿ,  ಭಕ್ತಿಗೊಂದು ಮೌಲ್ಯ ಬರಲಿ,  #ವೆಂಕಟೇಶಸಂಪ .gange should be clean by sampada saalu patrike

ಜಗತ್ತಿನ ಯಾವುದೇ ಧರ್ಮ ದೇವರನ್ನು ತೆಗೆದುಕೊಳ್ಳಿ.ಅವೆಲ್ಲವೂ ನಂಬಿಕೆಗಳ ಮೇಲೆ ನಿಂತಿರುತ್ತದೆ. ಉತ್ತರ ಪ್ರದೇಶದ
ತ್ರಿವೇಣಿ ಸಂಗಮದ  ಗಂಗಾ ಯಮುನಾ ಸರಸ್ವತಿ ಎಂಬ  ಮೂರು ನದಿಗಳ ಸಂಗಮದ  ಕ್ಷೇತ್ರವಿದು.ಭಕ್ತಿ ಮತ್ತು ನಂಬಿಕೆಗಳ ಆಧಾರದಲ್ಲಿ ಇಲ್ಲಿ ಒಂದಷ್ಟು ಆಚರಣೆಗಳು ಜರುಗುತ್ತವೆ. ಅತ್ಯಂತ ಪವಿತ್ರ ನದಿಗಳು ಮನುಷ್ಯರ ದುರ್ವರ್ತನೆಯ ಫಲವಾಗಿ ಗಬ್ಬುನಾರುತ್ತಿದೆ.ದೋಣಿಯಿಂದ ಕರೆದುಕೊಂಡು ಹೋಗಿ ಸ್ನಾನ ಮಾಡಲು ಅವಕಾಶ ಮಾಡೋದ್ರಿಂದ ಹಿಡಿದು ಪೂಜೆಯೂ ಸೇರಿದಂತೆ ಎಲ್ಲವೂ ಕಾಂಟ್ರಾಕ್ಟ್.ಎಲ್ಲದಕ್ಕೂ ಏಜೆಂಟ್,ಹಣವಿಲ್ಲದೇ ಇಲ್ಲಿ ಯಾವ ಪುಣ್ಯಕ್ಕೂ ಅವಕಾಶವೇ ಇಲ್ಲವೆಂಬ ನೆಡವಳಿಕೆ.ಇಲ್ಲಿ ಹೂವು ಮಾರೋರು,   ದೋಣಿ ನೆಡೆಸೋರು,ಅಂಗಡಿ ವ್ಯಾಪಾರದವರು,ಬಿಕ್ಷುಕರು,ಜಾನುವಾರುಗಳು,ಒಂದಷ್ಟು ನಾಯಿಗಳು ಓಡಾಡುತ್ತಿರುತ್ತಾರೆ.    ಕಂಡ ಕಂಡಲ್ಲಿ ಮನುಷ್ಯರ ಮಲ ಮೂತ್ರಗಳು,  ಕೂದಲು,ಪ್ಲಾಷ್ಟಿಕ್ ಕೊಳಕುಗಳು, ಇದೆಲ್ಲದರ ನಡುವೆ ಭಕ್ತಿ ಎಲ್ಲೋ ಮಾಯವಾಗುತ್ತದೆ.ಅಚರಣೆ ಮಾಡಿದ್ದೇವೆಂಬ ಬಾವಕ್ಕೆ ಎಲ್ಲರೂ ಸ್ನಾನ ಪೂಜೆ ಮಾಡಿಸುತ್ತಾರೆ.ಅತ್ಯಂತ ಕೆಟ್ಟ ಆಡಳಿತದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಮಾಯಾವತಿ ಯ ದುರಾಡಳಿತದ ಫಲವಾಗಿ ಪವಿತ್ರ ಕ್ಷೇತ್ರ ಗಬ್ಬು ನಾರುತ್ತಿದೆ.
ಪ್ರಕೃತಿಯ ಪ್ರತಿ ಕಣ ಕಣದಲ್ಲೂ ದೇವರನ್ನು ಕಾಣುವ ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಇಡೀ ಜಗತ್ತು ಪ್ರೀತಿಸುತ್ತದೆ.   ಆದರೆ ಅಧಿಕಾರದ ಹೋಪ್ ಲೆಸ್ ರಾಜಕಾರಣಿಗಳಿಂದ ,ಜನಗಳ ಕನಿಷ್ಟ ಕಾಮನ್ ಸೆನ್ಸ್ ಕೊರತೆಯಿಂದಾಗಿ ಪ್ರಕೃತಿ ಯ ದ್ವಂಸ ಕಾಣಬಹುದು. ಪ್ರಧಾನಿ ಮೋದಿಯ ಗಂಗಾ ಶುದ್ದಿ  ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದನ್ನು ಇಲ್ಲಿ  ಕಾಣಬಹುದು.ಈಗಲೂ ಕಾರ್ಖಾನೆಯ ಕೊಳಕುಗಳು ಮನುಷ್ಯರ ಮಲಮೂತ್ರಗಳು ನೀರಿಗೆ ಸೇರುತ್ತಿವೆ.ಅದನ್ನೇ ಪವಿತ್ರ ಎಂಬ ಬಾವನೆಯಲ್ಲಿ ಇಲ್ಲಿ ವ್ಯಾಪಾರ ನೆಡೆಯುತ್ತಿದೆ.      ಸ್ವಚ್ಚ ಭಾರತದ ಕಲ್ಪನೆ ಕೇವಲ ಭಾಷಣವಾ?ಸ್ವಚ್ಚತೆಯಿಲ್ಲದೇ ದೇವರು ಧರ್ಮಕ್ಕೆ ಮೌಲ್ಯವಿರುತ್ತದಾ?  ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೇಸ್, ಬಿಜೇಪಿ, ಸಮಾಜವಾದಿ,ಬಿ ಎಸ್ ಪಿ ಯ ನಾಟಕದ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮತ್ತು ನಮ್ಮೆಲ್ಲರ ಮನಸ್ಸೇ ಶುದ್ದವಿಲ್ಲದಿದ್ದಾಗ ಗಂಗೆಯ ಶುದ್ದಿ   ಕೇವಲ ಕನಸೇ ಆಗಬಹುದು.
ಪವಿತ್ರ ಗಂಗೆ ಸ್ವಚ್ಚವಾಗಲಿ,  ಭಕ್ತಿಗೊಂದು ಮೌಲ್ಯ ಬರಲಿ,  #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

ಹಿಂದೂ ಮುಸ್ಲಿಮ್ ಕ್ರಿಸ್ಚಿಯನ್ ಎಲ್ಲಾ ಧರ್ಮದವರನ್ನೂ ಮದುವೆಯಾಗಿ ಅದಕ್ಕೊಂದುಂದು ಅರಮನೆ ಮಾಡಿದ ಅಕ್ಬರ್ ಎಂಬ ಮುಸ್ಲಿಮ್ ದೊರೆ, ಆ ಅರಮನೆಯೇ ಉತ್ತರ ಪ್ರದೇಶದ ಫತೇಪುರ್ ಸಿಕ್ರಿ

ಹಿಂದೂ ಮುಸ್ಲಿಮ್  ಕ್ರಿಸ್ಚಿಯನ್ ಎಲ್ಲಾ ಧರ್ಮದವರನ್ನೂ ಮದುವೆಯಾಗಿ ಅದಕ್ಕೊಂದುಂದು ಅರಮನೆ ಮಾಡಿದ  ಅಕ್ಬರ್ ಎಂಬ ಮುಸ್ಲಿಮ್ ದೊರೆ,
ಆ ಅರಮನೆಯೇ
ಉತ್ತರ ಪ್ರದೇಶದ ಫತೇಪುರ್ ಸಿಕ್ರಿ, 

16 ನೇ ಶತಮಾನದಲ್ಲಿ ಅಂದರೆ 1571 ಮತ್ತು 1583 ನಡುವಿನಲ್ಲಿ  ಮುಘಲ್ ಚಕ್ರವರ್ತಿ ಅಕ್ಬರ್ ಮೂಲಕ ಫತೇಪುರ್ ಸಿಕ್ರಿಯನ್ನು ನಿರ್ಮಿಸಲಾಗಿದೆ, ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣವಾದ ಫತೇಪುರ್ ಸಿಕ್ರಿ  ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿದೆ. ಮುಘಲ್ ಸಂಸ್ಕೃತಿ ಮತ್ತು ನಾಗರಿಕತೆಯ ಸಾಕ್ಷಿಯಾಗಿ ನಿಂತಿದೆ ಈ ಸ್ಮಾರಕ ಪಟ್ಟಣ. ಸಂತ ಶೇಖ್ ಸಲೀಂ ಚಿಸ್ತಿಯು ಅಕ್ಬರ್  ನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದಿದ್ದು ಇಲ್ಲಿಯೇ ಎನ್ನಲಾಗಿದೆ. ಇಲ್ಲಿನ ಯೋಜನೆ ಮತ್ತು ಪರಿಕಲ್ಪನೆಗಳು ಪಟ್ಟಣದ ಯೋಜನೆಯನ್ನು ಹೋಲುತ್ತದೆ ಮತ್ತು ಬಹುಷಃ ಹೆಚ್ಚಿನ ಮಾಹಿತಿಯನ್ನು ಹಳೆ ದಿಲ್ಲಿಯಲ್ಲಿರುವ ಷಹಜಹಾನಬಾದ್ ನಿಂದ ಪಡೆದರು ಎನ್ನಲಾಗಿದೆ.

1585 ರಲ್ಲಿ ಅಕ್ಬರ್ ಆಫ್ಘಾನ್ ಬುಡಕಟ್ಟು ಜನರ ವಿರುದ್ಧ ಹೋರಾಡುವಾಗ ಫತೇಪುರ್ ಸಿಕ್ರಿಯು ಮುಘಲ್ ಆಡಳಿತದ ಕಾರ್ಯಾಲಯವಾಗಿ ಒಮ್ಮೆ ಕಾರ್ಯನಿರ್ವಹಿಸಿತ್ತು. ಅದಾದ ತರುವಾಯ 1619 ರ ಸಮಯದಲ್ಲಿ ಆಗ್ರಾಗೆ ಪ್ಲೇಗ್ ಮಹಾರೋಗವು ಆಕ್ರಮಣ ಮಾಡಿದಾಗ ಜಹಂಗೀರನು ಇಲ್ಲಿ 3 ತಿಂಗಳ ಕಾಲ ಆಶ್ರಯವನ್ನು ಪಡೆದಿದ್ದನು. ಇದಾದನಂತರ ಮೂಲೆಗುಂಪಾಗಿದ್ದ ಈ ತಾಣವು ಮತ್ತೆ 1892 ರಲ್ಲಿ ಮರುಶೋಧಿಸಲ್ಪಟ್ಟಿತು. ಆದಾಗ್ಯೂ ತನ್ನ ಅಸ್ತಿತ್ವದ 14 ವರ್ಷಗಳಲ್ಲಿ ಗಮನಾರ್ಹ ಆಳ್ವಿಕೆ ನಡೆಸಿ ಸಾಕಷ್ಟು ಅರಮನೆಗಳು, ಸಾರ್ವಜನಿಕ ಕಟ್ಟಡಗಳು, ಮಸೀದಿಗಳನ್ನು ಕಟ್ಟಿದರು ಎನ್ನಲಾಗಿದೆ. ಇದು ರಾಜರ ಸೇವಕರು ಮತ್ತು ಸೇನೆಯ ಜೀವನ ಪ್ರದೇಶವಾಗಿ ಕಾರ್ಯ ನಿರ್ವಹಿಸಿತು ಮತ್ತು ಜನಸಂಖ್ಯೆ ಕಡಿಮೆ ಇದ್ದ ಪ್ರದೇಶವಾಗಿತ್ತು.
ವಿಶೇಷ ಸಂದರ್ಭಗಳಿಗಾಗಿ ನಿರ್ಮಿತವಾದ ಕೃತಕ ಸರೋವರದ ಹತ್ತಿರ ಕಲ್ಲಿನ ಪ್ರಸ್ಥಭೂಮಿ ಕಾಣಬಹುದು. 3 ಬದಿಗಳಲ್ಲಿ 6 ಕಿ.ಮೀ ಉದ್ದದ ಗೋಡೆಗಳನ್ನು ಹೊಂದಿರುವ ನಗರ ಸಾಕಷ್ಟು ಬೃಹತ್ ಕಟ್ಟಡಗಳು ಮತ್ತು 7 ಬಾಗಿಲುಗಳಿಂದ ಸಂರಕ್ಷಿಸಲ್ಪಟ್ಟಿದೆ. ಅದರಲ್ಲಿ ಮುಖ್ಯವಾದುದು ಆಗ್ರಾ ಬಾಗಿಲಾಗಿದೆ.
ಫತೇಪುರ್ ಸಿಕ್ರಿಯ ಮತ್ತು ಹತ್ತಿರದ ಪ್ರವಾಸಿ ಕೇಂದ್ರಗಳು
ಇಲ್ಲಿ ಕಂಡುಬರುವ ಅನೇಕ ಸ್ಮಾರಕಗಳನ್ನು ಕೆಂಪು ಸ್ಯಾಂಡ್ ಸ್ಟೋನ್‍ಗಳಿಂದ ನಿರ್ಮಿಸಲಾಗಿದ್ದು, ಹಿಂದೂ, ಇಂಡೊ-ಮುಸ್ಲಿಮ್ ಮತ್ತು ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಬಿಂಬಿಸುತ್ತವೆ. ಈ ಗಮನಾರ್ಹ ಕಟ್ಟಡಗಳಲ್ಲಿ ದಿವಾನ್-ಇ -ಆಮ್, ಸಾರ್ವಜನಿಕ ಪ್ರೇಕ್ಷಕರ ಸಭಾಂಗಣ ಪೋರ್ಟಿಕೊ ಒಳಗೊಂಡ ಅಕ್ಬರ್ ನ್ಯಾಯ ನೀಡಲು ಬಳಸುತ್ತಿದ್ದ ಜಾಗ ಕೂಡ ಇದರಲ್ಲಿ ಸೇರಿವೆ. ದಿವಾನ್-ಇ -ಆಮ್ ನಿಂದ ದೌಲತ್ ಖಾನ ಅಥವಾ ಚಕ್ರಾಧಿಪತ್ಯದ ಅರಮನೆಯನ್ನು ಕಾಣಬಹುದು. ನಂತರ ಬೌದ್ಧ ದೇವಾಲಯಗಳನ್ನು ಹೋಲುವ ರಾಂಚ್ ಮಹಲ್, ಜೋಧಾ ಬಾಯಿ ಅರಮನೆ, ಅನುಪ್ ತಾಲಾವ್ ಅಥವಾ ಟರ್ಕಿ ಸುಲ್ತಾನಾ ಪೆವಿಲಿಯನ್, ಬೀರಬಲ್ ಅರಮನೆಯನ್ನು ಕೂಡ ಕಾಣಬಹುದು.
ಫತೇಪುರ್ ಸಿಕ್ರಿ ಹಲವಾರು ಧಾರ್ಮಿಕ ಸ್ಮಾರಕಗಳನ್ನೂ ಒಳಗೊಂಡಿದೆ. ಶಾಸನದ ಮೂಲಕ ಮೆಕ್ಕಾದಷ್ಟೆ ಪವಿತ್ರವೆಂದು ತಿಳಿಯಪಡಿಸುವ ಜಾಮಾ ಮಸೀದಿ ಮತ್ತು ಮಹತ್ ಮಸೀದಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಮಸೀದಿಯು ಶೇಖ್ ಸಲೀಮನ ಸಮಾಧಿಯಾಗಿದ್ದು ನಂತರದಲ್ಲಿ ಜಹಾಂಗೀರ್ ಇದನ್ನು ಅಲಂಕರಿಸಿದನು. 1572 ರಲ್ಲಿ ಗುಜರಾತ್ ವಶಪಡಿಸಿಕೊಂಡ ನೆನಪಿಗಾಗಿ ಕಟ್ಟಿದ ಬುಲಂದ್ ದರ್ವಾಜಾ ಕೂಡ ನೋಡಬಹುದಾದ ಸ್ಥಳ. ಇದರ ಜೊತೆಗೆ ಇತರ ಸ್ಮಾರಕಗಳೆಂದರೆ ಇಬಾದತ್ ಖಾನ್, ಅನುಪ್ ತಾಲಾವ್, ಹುಜ್ರಾ ಇ ಅನುಪ್ ತಾಲಾವ್ ಮತ್ತು ಮಾರಿಮ್ ಉಜ್ ಜಮಾನಿ ಅರಮನೆಗಳು.
ಇಂದು ಫತೇಪುರ್ ಸಿಕ್ರಿ ಒಂದು ಪ್ರೇತ ಅಥವಾ ಭೂತಗಳ ನಗರ ಎಂಬ ನಾಮಧೇಯ ಪಡೆದಿದೆಯಾದರೂ ಇಲ್ಲಿರುವ ಸ್ಮಾರಕಗಳು ಮಾತ್ರ ಸಂರಕ್ಷಿಸಲ್ಪಟ್ಟು ಉತ್ತಮ ಸ್ಥಿತಿಯಲ್ಲಿವೆ.

ಇಲ್ಲಿ ಎಲ್ಲೆಡೆ ಸಿಕ್ಕಾಪಟ್ಟೆ ಕಮರ್ಷಿಯಲ್ ಆಗಿದ್ದು ಪ್ರತಿಯೊಂದಕ್ಕು ದುಡ್ಡು ಕೀಳುವ ಮಂದಿ ಇದ್ದಾರೆ ಪ್ರವಾಸಿಗರು ಜಾಗೃತರಾಗಿರಬೇಕಾದ್ದು   ಅನಿವಾರ್ಯ,
,#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Jaipur is really attractive place

ಇದು ರಾಜಸ್ಥಾನದ ರಾಜಧಾನಿ ಜೈಪುರ.  ಮೊದಲು ಅಂಬೇರ್ ಎಂಬ ಊರು ರಾಜಸ್ಥಾನಕ್ಕೆ ರಾಜಧಾನಿ ಆಗಿತ್ತು.ಅಲ್ಲಿ ನೀರು ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಅಲ್ಲಿಂದ 11 ಕಿಲೋಮೀಟರ್ ದೂರದಲ್ಲಿ ಭಾರತದ ಮೊದಲ ಶಿಸ್ತುಬದ್ದ ಸಿಟಿ ನಿರ್ಮಿಸಲಾಯಿತು.1727ರಲ್ಲಿ ಮಹಾರಾಜ    ಸವಾಯಿ ಜಯಸಿಂಘ್ 2 ಕಟ್ಟಿದ ಊರಿದು.ಈ ಸಿಟಿಯ ನಿರ್ಮಾಣಕ್ಕೆ ವಿದ್ಯಾಧರ ಭಟ್ಟಾಚಾರ್ಯ ಎಂಬ ಬ್ರಾಹ್ಮಣ ತಜ್ಞನೇ ಮುಖ್ಯ ಕಾರಣ ಎಂಬ ಉಲ್ಲೇಖವಿದೆ,  ಇದಕ್ಕೆ ಪಿಂಕ್ ಸಿಟಿ ಅಂತಲೂ ಕರೆಯುತ್ತಾರೆ.ಜಲ್ ಮಹಲ್,   ಬಿರ್ಲಾ ಮಂದಿರ,   ಅಲ್ಬರ್ಟ್ ಹಾಲ್ ಮ್ಯೂಸಿಯಮ್,ಹವಾ ಮಹಲ್,ಜಂತರ್ ಮಂತರ್ ಇಲ್ಲಿ ನೋಡಬಹುದಾದ ಪ್ರವಾಸಿ ತಾಣಗಳು,ಹೆಚ್ಚಿನ ಮಾಹಿತಿಗೆ ಓದಿ ಸಂಪದ ಸಾಲು ಪತ್ರಿಕೆ, #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu