Saturday, July 5, 2014

ulta...palta....



ನನ್ನ ಮಗ ಇಂಜಿನೀಯರ್ ಆಗಬೇಕು.ಡಾಕ್ಟ್ರು ಆಗ್ಬೇಕು.ಅಂತ ತಿರ್ಮಾನ ಮಾಡಿದ ತಂದೆ ತಾಯಿ ಮಗ ಅತ್ತರೂ ಕೇಳದೇ ತಮ್ಮ ಮನೆಯಿಂದ ದೂರದ ರೆಸಿಡೆನ್ಸಿಯಲ್ ಸ್ಕೂಲ್ ಗೆ ಸಾಲ ಮಾಡಿ ಸೇರಿಸಿದ್ರು.
ಮಗ ಸ್ವಲ್ಪ ದಿನ ಅತ್ತು ಅತ್ತು ಅಲ್ಲೇ ಓದ ತೊಡಗಿದ.

ಓದಿದ

ಓದಿದ

ಓದಿದ.

ಇಂಜಿನಿಯರ್ ಕೂಡ ಆಗಿಬಿಟ್ಟ.!!!!!!.

ಕೈತುಂಬ ಸಂಬಳ ಬರ್ತಿತ್ತು.ಅಪ್ಪ ಅಮ್ಮಂಗೆ ಇನ್ನಿಲ್ಲದ ಸಂಭ್ರಮ.ಊರಿಗೆಲ್ಲಾ ಸಿಹಿ ಹಂಚಿದರು.

ಮಗ ಕೆಲಸದ ನಿಮಿತ್ತ ಅಮೇರಿಕಾಕ್ಕೆ ಹೋದ.ವರ್ಷಕ್ಕೊಮ್ಮೆ ಪಿಕ್ ನಿಕ್ ಗೆ ಬಂದಂತೆ ಊರಿಗೆ ಬಂದು ಹೋಗುತ್ತಿದ್ದ ಆತನಿಗೆ ಬಾಂದವ್ಯ ಅಂದ್ರೆ ವಾಟ್ಸಪ್ ಮೇಸೆಜ್ ಹಾಗು ಫೇಸ್ಬುಕ್ ಸ್ಟೇಟಸ್ ಆಗಿತ್ತು.

ಒಮ್ಮೆ ಊರಿಗೆ ಬಂದ.ನಾನು ಅಮೇರಿಕದಲ್ಲಿ ಹುಡುಗಿ ನೋಡ್ಕಂಡಿದಿನಿ.ಒಂದಷ್ಟು ಹಣ ಬೇಕು ಅಂತ ಹಠ ಮಾಡಿ ದುಡ್ಡು ತೆಗೆದುಕೊಂಡು ಹೋದಾತ ಊರು,ಅಪ್ಪ ಅಮ್ಮ ಎಲ್ಲರನ್ನೂ ಮರೆತಿದ್ದಾನೆ.

ಮಗ ಕೋಟಿ ಕೋಟಿ ದುಡಿಯಬೇಕು ಅಂತ ಮಮಕಾರವನ್ನೇ ಬಿಟ್ಟು ರೆಸಿಡೆನ್ಸಿಯಲ್ ಸ್ಕೂಲ್ ಗೆ ಬಿಟ್ಟಿದ್ದಕ್ಕೆ ಪ್ರತಿಫಲವಾಗಿ ಆತ ಇವರನ್ನು ದೂರ ಇಟ್ಟಿರಬಹುದೇನೋ?!

ಮುಂದೇನಾಯ್ತು......?"?!?....

..ಓದಿ ಸಂಪದ ಸಾಲು

www.sampadasaalu.blogspot.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu