ಕಳೆದಿದ್ದು ಒಂದು ವರ್ಷ....!ಉಳಿದಿದ್ದು ನಾಲ್ಕು ವರ್ಷ.....?!!ಇನ್ನಾದರು ಬರಲಿ ಹರ್ಷ....!!!!
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ............ಒಂದ ು ರಾಜ್ಯದ ಅಭಿವೃದ್ದಿ ಅಂದರೆ ಇಡೀ ರಾಜ್ಯ ದ ಎಲ್ಲಾ ಜನ ಮತ್ತು ಎಲ್ಲಾ ಪ್ರದೇಶದ ಬೆಳವಣಿಗೆಗೆ ಗಮನ ಕೊಡಬೇಕು.ನಿಮ್ಮ ಆಡಳಿತಾತ್ಮಕ ನಿರ್ದಾರಗಳು ಮತ್ತು ನಿಮ್ಮ ಆಲೋಚನೆಗಳು ಅಹಿಂದದ ಮಂತ್ರ ಜಪಿಸುತ್ತಿದೆ.ದಯವಿಟ್ಟು ನಿಮ್ಮಲ್ಲಿ ಶಕ್ತಿಯಿದೆ.ಯಾವುದೋ ಒಂದು ಇಸಂ ಗೆ ಕಟ್ಟು ಬೀಳಬೇಡಿ.ನೀವು ವಿರೋದ ಪಕ್ಷದ ನಾಯಕರಾಗಿದ್ದಾಗ ಈ ಬಗ್ಗೆ ತಮ್ಮ ಜೊತೆ ಮಾತನಾಡಿದ್ದೇನೆ.ಯಾವ ವ್ಯಕ್ತಿಗೆ ದೂರದೃಷ್ಟಿ ಇರುತ್ತದೋ ಅಂತಹ ನಾಯಕ ಮಾತ್ರ ದೀರ್ಘ ಕಾಲ ಉಳಿಯಬಲ್ಲ.ನಿಮ್ಮಲ್ಲಿ ಶಕ್ತಿ ಇದೆ.ಆದರೆ ಆಲೋಚನ ಕ್ರಮ ಸರಿಯಾಗಬೇಕಿದೆ.ಉತ್ಪಾದಕತೆ ಹೆಚ್ಚಿಸುವ ಯೋಜನೆಗಳನ್ನು ಜಾರಿಗೆ ತನ್ನಿ.ಸಮಾನತೆ ಅಂದ್ರೆ ಪುಕ್ಸಟ್ಟೆ ಅಕ್ಕಿ ಕೊಡೊದಲ್ಲ.ಜನಗಳಿಗೆ ಕ್ರಿಯಾಶೀಲರನ್ನಾಗಿ ದುಡಿಯುವ ಸಾಧಕರನ್ನಾಗಿ ಮಾಡಿ.ನನ್ನಂತಹ ಕೋಟ್ಯಾಂತರ ಜನ ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ.ಕಳೆದಿದ್ದು ಕೇವಲ ಒಂದು ವರ್ಷ.!ಇನ್ನೂ ನಾಲ್ಕು ವರ್ಷಗಳು ನಿಮ್ಮೊಂದಿಗೆ ಇದೆ.ದಯವಿಟ್ಟು ಓಟ್ ಬ್ಯಾಂಕ್ ಬಗ್ಗೆ ತಲೆಕೆಡೆಸಿಕೊಳ್ಳಬೇಡಿ.ಈ ನಾಲ್ಕು ವರ್ಷ ರಾಜಕಾರಣವಿಲ್ಲದ ಅಭಿವೃದ್ದಿ ಮಾಡಿದರೆ......ಜೀವನ ಪೂರ್ತಿ ರಾಜಕಾರಣವಿಲ್ಲದ ಅಧಿಕಾರ ನಿಮಗೆ ಸಿಗುತ್ತದೆ.......
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ............ಒಂದ
No comments:
Post a Comment