Saturday, July 5, 2014

sampada saalu july 14

ಎಂತಹ ಸಿನಿಕರು ಕಾಣ್ರಿ ನಾವು.ಯಾರೋ ಒಬ್ಬ ವ್ಯಕ್ತಿ ಬೆಳೆದ ಅಂದ್ರೆ ನಾವು ಹೇಳೋದು "ಇವನ್ಯಾರಿಗೋ ಯಾಮಾರ್ಸಿದಾನೆ"ಅಂತ ಮಾತಾಡಿಬಿಡ್ತೇವೆ.ರಾಜಕಾರಣಿಗಳೆಲ್ಲ "ಕಳ್ಳರು "ಅಂತ ತಿರ್ಮಾನ ಮಾಡ್ತೇವೆ.ಸರ್ಕಾರಿ "ಅಧಿಕಾರಿಗಳೆಲ್ಲಾ ಭ್ರಷ್ಟರು" ಅಂದುಬಿಡ್ತೇವೆ.ಬಡವನಾಗಿದ್ದವ ಕಷ್ಟಪಟ್ಟು ಶ್ರೀಮಂತನಾದ್ರೂ "ಈತ ಯಾರದ್ದೊ ತಲೆ ಒಡೆದ" ಎಂದು ನಮ್ಮ ಬಾಯಿ ಚಟ ತೀರ್ಸ್ಕೋತೀವಿ.ಹಳೆ ಕಾಲವೇ ಚೆನ್ನ.ಹೊಸದೆಲ್ಲ ಹಾಳು ಅಂತ ಬಾಯಿ ಬಡ್ಕೋತೀವಿ.ಮೊಸರಿನಲ್ಲೂ ಕಲ್ಲು ಹುಡ್ಕ್ತೀವಿ.ದೇವರ ಹೆಸರಲ್ಲೂ ಚೌಕಾಶಿ ಮಾಡ್ತಿವಿ.ನಮಗೆ ಗೊತ್ತು ಗುರಿ ಇಲ್ಲದೆ ಬೀದಿ ಅಲಿತಾ ಇದ್ರು ದೇಶಕ್ಕಾಗಿ ಹೋರಾಡಿದ "ಮಹಾತ್ಮ ಗಾಂಧಿ ಸರಿ ಇರ್ಲಿಲ್ಲ ಕಾಣಯ್ಯ "ಅಂತ ಫೋಸ್ ಕೊಡ್ತಿವಿ.ಯಾರ ಜೊತೆಗೋ ಇನ್ಯಾರದ್ದೋ ಲಿಂಕ್ ಕೊಡ್ತಿವಿ.ನೆಟ್ಟಗೆ ಊರೇ ಗೊತ್ತಿಲ್ದಿದ್ರು ಜಗತ್ತೇ ತನ್ನ ಕೈ ಒಳಗೆ ಅಂತಿವಿ..."ಅವನು ಸರಿ ಇಲ್ಲ ಇವನು ಸರಿ ಇಲ್ಲ"ಅಂತ ನಾವೇ ಸರ್ಟಿಫಿಕೇಟ್ ಕೊಟ್ಟುಬಿಡ್ತೇವೆ....
ಯಾಕಿಷ್ಟು ನೆಗೆಟಿವ್ ಆಲೊಚನೆಗಳು ನಮ್ಮನ್ನಾಕ್ರಮಿಸಿ ನಮ್ಮ ತಲೆಯನ್ನು ಕಸದ ತೊಟ್ಟಿಯನ್ನಾಗಿಸುತ್ತಿವೆ?!
ಲೋಕದ ಡೊಂಕ ನೀವೇಕೆ ತಿದ್ದುವಿರಿ......ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಅಂದಿದ್ದು ಯಾಕೆ ಗೊತ್ತ?!
ಕತ್ತಲೆಯ ಬಗ್ಗೆ ಯೋಚಿಸುವಾತ ಕತ್ತಲೆಯಲ್ಲೇ ಉಳಿಯುತ್ತಾನೆ......ಬೆಳಕನ್ನು ಸೃಷ್ಟಿಸುವವನು ಕತ್ತಲೆಯೇ ಇಲ್ಲದಂತೆ ಮಾಡುತ್ತಾನೆ..
.ಬಿ ಪಾಸಿಟೀವ್......

#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu