Friday, July 11, 2014

ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಜನ ಜಾಗೃತಿ ಬಳಗದ ಕಾರ್ಯಕ್ರಮ

ಪರೀಕ್ಷೆಯಲ್ಲಿ ಪಾಸಾಗುವುದಷ್ಟೇ ವಿದ್ಯಾಬ್ಯಾಸದ ಉದ್ದೇಶವಲ್ಲ.ಈ ಕಾರಣಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಜನ ಜಾಗೃತಿ ಬಳಗದ ವತಿಯಿಂದ "ಕಲಿಕೆಯ ಜೊತೆ ಗಳಿಕೆಯ ದಾರಿ" ಎಂಬ ಕಾರ್ಯಕ್ರಮ ಇಂದು ಶಿವಮೊಗ್ಗ ಜಿಲ್ಲೆ ಹೊಸನಗರದ ಚಿಕ್ಕಜೇನಿಯಲ್ಲಿ ಜರುಗಿತು.ಜೊತೆಯಲ್ಲಿ ಶಿಕ್ಷಣ ತಜ್ಞ ದೇವೇಂದ್ರ ಬೆಳೆಯೂರು ಇದ್ದಾರೆ........





























Saturday, July 5, 2014

"ಹೋಗುವ ಜೀವ ಬದುಕಲಿ,ಆ ರೋಗಿಯ ಕುಟುಂಬದವರ ಆತಂಕ ಕಡಿಮೆ ಆಗಲಿ,".......... "ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ಮೊನ್ನೆ ಯಾವುದೋ ಶೂಟಿಂಗ್ ನ ಕಾರಣಕ್ಕೆ ಕಾರು ತೆಗೆದುಕೊಂಡು  ಮಲ್ಲೇಶ್ವರಂನಿಂದ ಹೊರಟಿದ್ದೆ.ಯಶವಂತಪುರದ ಸರ್ಕಲ್ ಹತ್ತಿರ ಒಂದು ಬದಿಯಲ್ಲಿ ನಾನಿದ್ದೆ,ವಾಹನಗಳು ಕಿಕ್ಕಿರಿದು ರಸ್ತೆಯಲ್ಲಿ ನಿಂತಿದ್ದವು.ಮುಂದೆಯೂ ಚಲಿಸಲಾರದ ಹಿಂದೆಯೂ ಹೋಗಲಾರದ ಸ್ತಿತಿ.ಪೋಲಿಸ್ ಪೇದೆಯೊಬ್ಬ ಸುಗಮ ಸಂಚಾರಕ್ಕೆ ಒದ್ದಾಡುತ್ತಿದ್ದ.ಹಿಂದಿನಿನಿದ ಜೋರಾಗಿ ಸೈರನ್ ಮಾಡುತ್ತಾ ಅಂಬುಲೆನ್ಸ್ ದಾರಿಗಾಗಿ ಹಾತೊರಿಯುತ್ತಿತ್ತು.ಆ ಸೈರನ್ ಕೇಳಿದೊಡನೆ ನನ್ನ ಎದೆಯಲ್ಲೂ ಬಡಿತ ಹೆಚ್ಚಾಯ್ತು.ಸಾಯುವ ಜೀವ ಬದುಕಲಿ ಎಂಬ ಆಸೆ ಹೆಚ್ಚಾಯ್ತು.ಪೋಲಿಸ್, ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಪ್ರಯತ್ನ ಮಾಡುತ್ತಿದ್ದು,ಅದರಲ್ಲಿ ಅಸಹಾಯಕನಾದಂತೆ ಕಾಣುತ್ತಿದ್ದ.ಅಲ್ಲಿದ್ದ ಬಹುತೇಕ ಜನ,ಅಂಬುಲೆನ್ಸ್ ಗೆ ದಾರಿ ಬಿಡುವ ಬದಲು  ಸಿಕ್ಕ ಸ್ವಲ್ಪ ದಾರಿಯಲ್ಲಿ ತಾವು ನುಗ್ಗಿ ಹೋಗುವ ಪ್ರಯತ್ನದಲ್ಲಿದ್ದರು.ನನ್ನ ಕಾರು ಎಡ ಬಾಗದಲ್ಲಿ ಇದ್ದುದ್ದರಿಂದ ಅಲ್ಲೇ ನಿಲ್ಲಿಸಿ,ಪೋಲಿಸ್ ಗೆ ಸಹಾಯ ಮಾಡೋಣ ಅಂತ ತಿರ್ಮಾನಿಸಿ ಟ್ರಾಫಿಕ್ ಪೋಲಿಸ್ ಕೆಲಸ ಮಾಡಿದೆ.ಹತ್ತು ನಿಮಿಷದಲ್ಲಿ ಅಂಬುಲೆನ್ಸ್ ಸೈರನ್ ಮಾಡುತ್ತಾ ಮುಂದೆ ಹೋಯಿತು.ಅದರಲ್ಲಿದ್ದ ರೋಗಿಯ ಸಂಬಂದಿಕರಿರಬಹುದು.ಹೋಗುತ್ತಿರುವ ಅಂಬುಲೆನ್ಸ್ನಿಂದಲೇ ಕೈ ಮುಗಿದರು.ಅಂಬುಲೆನ್ಸ್ ದೂರ ಹೋದಂತೆ ಸೈರನ್ ಕಡಿಮೆ ಆದಂತೆ ಮನಸ್ಸು ನಿರಾಳವಾಗುತ್ತಿತ್ತು.ಪೋಲಿಸ್ ಕೂಡ ಕಣ್ಣಿನಲ್ಲೇ ಕೃತಜ್ಞತೆ ಅರ್ಪಿಸಿದ.ನನ್ನಪ್ಪಾಜಿ ಯಾವಾಗಲು ಹೇಳುತ್ತಿದ್ದ ಮಾತು ನೆನಪಿಗೆ ಬಂತು."ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿ ಆತ್ಮ ಸಂತೋಷವಿದೆ".ಎಂದದ್ದು.
ಥ್ಯಾಂಕ್ಸ್ ಅಪ್ಪ ಬದುಕನ್ನು ಕಲಿಸಿದ್ದಕ್ಕೆ.

ನಮಗೆ ಎಷ್ಟೇ ಗಡಿಬಿಡಿ ಇರಲಿ.ಅಂಬುಲೆನ್ಸ್,ಅಗ್ನಿಶಾಮಕದ ವಾಹನ ಬಂದಾಗ ದಯವಿಟ್ಟು ಅವರು ಮುಂದೆ ಚಲಿಸಲು ಅವಕಾಶ ಮಾಡಿಕೊಡಿ,ಸಾದ್ಯವಾದರೆ ಅವರಿಗೆ ಸಹಾಯ ಮಾಡಿ.
"ಹೋಗುವ ಜೀವ ಬದುಕಲಿ,ಆ ರೋಗಿಯ ಕುಟುಂಬದವರ ಆತಂಕ ಕಡಿಮೆ ಆಗಲಿ,".

# ಓದಿ ಸಂಪದ ಸಾಲು.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ಸಂತೋಷ

ರಾತ್ರಿ ಕಳೆದಂತೆ ಹಗಲು ಬರುತ್ತದೆ.ಕಷ್ಟಗಳು ಕಳೆದಂತೆ ಸುಖವು ಆವರಿಸುತ್ತದೆ.ಆಲೊಚನೆಗಳು ಸ್ಪಷ್ಟವಾದಂತೆಲ್ಲಾ ದಾರಿ ಸುಗಮವಾಗುತ್ತದೆ.ಗುರಿಯ ಬಗ್ಗೆ ಏಕಾಗ್ರತೆ ಮೂಡಿದರೆ ಸಾಧನೆ ಸುಲಭವಾಗುತ್ತದೆ.ಮನಸ್ಸು ವಿಕ್ರುತವಾದರೆ ಜಗತ್ತು ವಿಕ್ರುತವಾಗಿ ಕಾಣುತ್ತದೆ.ಅಂತರಂಗದ ಕಣ್ಣು ಮಸುಕಾಗದಂತೆ ನೋಡಿಕೊಂಡಾಗ ಆತ್ಮೀಯತೆಯ ಜೀವನ ನಮ್ಮದಾಗುತ್ತದೆ.ಸಾಧನೆಯ ಶಿಖರವೇರುವ ಸಂತೋಷ ಸದಾ ನಮ್ಮಲ್ಲುಳಿಯುತ್ತದೆ.......ಓದಿ ಸಂಪದ ಸಾಲು

ಓ ಪ್ರೀತಿಯ ಜನ್ಮದಾತನೇ ನಿನಗಿದೋ ಕೋಟಿ ಕೋಟಿ ನಮನ

ಆತ್ಮೀಯತೆಗೆ ಇನ್ನೊಂದು ಹೆಸರಾದ,ಜೀವನ ಪ್ರೀತಿಯ ಸಂಕೇತವಾದ,ಶೋಷಿಸುವ ಸಮಾಜದ ಎದುರು ತಲೆ ಎತ್ತಿ,ಸ್ವಾವಲಂಬನೆಯ ಬದುಕನ್ನು ಕಲಿಸಿದ,ಕಷ್ಟಗಳಿಗೆ ಹೆದರದೆ ಸಾಧನೆಗೆ ಬದುಕನ್ನು ಅರ್ಪಿಸುವುದನ್ನು ಹೇಳಿಕೊಟ್ಟು,ತನ್ನೆಲ್ಲಾ ಸಮಸ್ಯೆಗಳನ್ನು ಮರೆತು,ಅನಾರೋಗ್ಯವನ್ನು ಲೆಕ್ಕಿಸದೇ ಜೀವನದ ಎಲ್ಲಾ ಆಯಾಮವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿದ....ತನ್ನೆಲ್ಲಾ ಸಮಸ್ಯೆಗಳನ್ನು ಮರೆತು ಮಕ್ಕಳ ಯಶಸ್ಸಲ್ಲೇ ತನ್ನ ಸುಖವನ್ನು ಕಂಡರೂ,ಸಾರ್ಥಕ ಬದುಕಿಗೆ ಉದಾಹರಣೆಯಾದ
ಓ ಪ್ರೀತಿಯ ಜನ್ಮದಾತನೇ ನಿನಗಿದೋ ಕೋಟಿ ಕೋಟಿ ನಮನ

ಯಶಸ್ಸು

ಇಟ್ಟಿಗೆಯ ಮೇಲೆ ಇಟ್ಟಿಗೆಯ ಇಟ್ಟು ಕಟ್ಟಡವ ಕಟ್ಟಿದಂತೆ.....
ಯಶಸ್ಸು ಎಂಬುದು ಪ್ರತಿಕ್ಶಣದ ಪ್ರಯತ್ನ.

ಪ್ರಯತ್ನವಿಲ್ಲದೇ ಸಿಗುವ ಯಶಸ್ಸು ಸಂತೋಷವನ್ನು ನೀಡುವುದಿಲ್ಲ.

ಕನಸು ಕಾಣುತ್ತಾ ಆ ಕನಸನ್ನು ನನಸು ಮಾಡಲಿಕ್ಕೆ ಪ್ರತಿ ಕ್ಶಣ ಬದ್ದತೆಯೊಂದಿಗೆ ಪ್ರಯತ್ನಿಸಿದರೆ ಯಶಸ್ಸೆಂಬ ಸಂತೋಷದ ಅನರ್ಘ್ಯ ರತ್ನ ಸಿಗುತ್ತದೆ........ಓದಿ ಸಂಪದ ಸಾಲು
www.sampadasaalu.blogspot.com

ವಿಮರ್ಶೆ ಮತ್ತು ಟೀಕೆ

ವಿಮರ್ಶೆ ಮತ್ತು ಟೀಕೆ -

ವಿಶ್ಲೇಷಣೆಗು ಮತ್ತು ಟೀಕೆಗು ವ್ಯತ್ಯಾಸವಿದೆ.ವಿಶ್ಲೇಷ­
ಣೆ ಪರಿವರ್ತನೆ ತರುವಂತಿರಬೇಕು.ಟೀಕೆ
ಎನ್ನುವುದು ಇನ್ನೊಬ್ಬರ ಬಗ್ಗೆ ತನ್ನ
ಕೊಳಕು ಮನಸ್ಸಿನ ಅನಾವರಣವೇ ವಿನಹ
ಅದರಿಂದ ಸಾಮಾಜಿಕ ಬದಲಾವಣೆ ಅಸಾದ್ಯ.
ವಿಚಾರಗಳಲ್ಲಿ ವೈರುಧ್ಯತೆ
ಇರಬಹುದು.ಆದರೆ ವ್ಯಕ್ತಿಯ ಮೇಲೆ
ದ್ವೇಷ ಇರಬಾರದು.ವಿಮರ್ಷಿಸುವ
ಮೊದಲು ಆ ವಿಚಾರದಲ್ಲಿ
ನಾವು ಪ್ರಾವೀಣ್ಯತೆಯನ್ನು ಹೊಂದಿರಬೇಕು.ಟೀಕಿಸುವವರ
ಬಗ್ಗೆ ತಲೆ ಕೆಡೆಸಿಕೊಳ್ಳಬಾರದು.ಏಕೆಂದರೆ
ನೆಗೆಟೀವ್ ಆಲೋಚನೆಗಳಿದ್ದವರಿಂದ
ಯಾವತ್ತೂ ಪ್ರಯೋಜನವಿಲ್ಲ.ವಿಕ್ರುತ
ಮನಸ್ಥಿತಿಯವರನ್ನು ದೂರವಿಟ್ಟು...ಸಕಾರಾತ್ಮ­
ಕವಾಗಿ ವಿಷಯವನ್ನು ವಿಶ್ಲೇಷಿಸಿದಾಗ
ಜ್ಞಾನ ಹೆಚ್ಚಾಗುವುದು..ಅದಕ್ಕೇ
ಹೇಳುವುದು.'ಸಗಣಿ ಜೊತೆ
ಸರಸವಾಡುವುದಕ್ಕಿಂತ ಗಂಧದ ಜೊತೆ
ಗುದ್ದಾಡಬೇಕು'ಅಂತ.
ರಾಜಕಾರಣಿಗಳು ಮತ್ತು ಕೀಳು ಅಭಿರುಚಿಯ
ಕೆಲವು ಬುದ್ದಿಜೀವಿಗಳು ಈ ತೆರನಾದ
ಟೀಕೆಯನ್ನು ಮಾಡುತ್ತಾರೆ.ಇವರಿಗೆ
ವಿಮರ್ಷಿಸುವ ತಾಳ್ಮೆ
ಇರುವುದಿಲ್ಲ.ಪುಕ್ಸಟ್ಟೆ ಪ್ರಚಾರ
ಸಿಗುತ್ತದೆ ಎಂಬ ಕಾರಣಕ್ಕೆ
ಯಾರ್ಯಾರನ್ನೋ ಟೀಕೆ
ಮಾಡುತ್ತಾರೆ.ಇತ್ತೀಚೆಗೆ ನರೇಂದ್ರ
ಮೋದಿಯ ಬಗ್ಗೆ
ಸಿದ್ರಾಮಯ್ಯನವರು ಕೊಟ್ಟ
ಹೇಳಿಕೆಯನ್ನೇ ನೋಡಿ.'ಯಾವುದೇ ಆಧಾರವಿಲ್ಲದೆ
ನರಹಂತಕ ಯೆಂದಿದ್ದರ ಪರಿಣಾಮ ತೀವ್ರ
ಮುಖಭಂಗಕ್ಕೆ ಈಡಾದರು.ಅನಂತಮೂರ್ತಿ
ದೇಶ ಬಿಟ್ಟು ಹೋಗುತ್ತೀನಿ ಅಂತ ಹೇಳಿಕೆ
ಕೊಟ್ಟು ನಗೆಪಾಟಲಾದರು.ಇವೆಲ್ಲವೂ
ಕೆಟ್ಟ ಟೀಕೆ ಗೆ ಉದಾಹರಣೆ.ಇಲ್ಲಿ
ಎದುರು ವ್ಯಕ್ತಿಯನ್ನು ಬೈಯ್ಯುವುದೇ ಉದ್ದೇಶವಾಗಿರುತ್ತದೆ..ಇಂತವರು ತಮ್ಮ
ವ್ಯಕ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಾರೆ.



ಓದಿ ಸಂಪದ ಸಾಲು
www.sampadasaalu.blogspot.com

ಧ್ಯಾನ.

ಆಲೋಚನೆಗಳು ಸ್ಥಬ್ಧವಾಗುವುದೇ ಧ್ಯಾನ.ಈ ಆಲೋಚನೆಗಳನ್ನು ಹಿಡಿತದಲ್ಲಿಡುವುದು ಹೇಗೆ? ಒಂದರ್ದ ಘಂಟೆಯ ಧ್ಯಾನ 5 ತಾಸಿನ ನಿದ್ದೆಗೆ ಸಮ.ಹಾಗಿದ್ದರೆ ಈ ಸಾಧನೆ ಹೇಗೆ ಸಾಧ್ಯ.ಇಂದೇ ಚಂದಾದಾರರಾಗಿ ಓದಿ ಸಂಪದ ಸಾಲು

ulta...palta....



ನನ್ನ ಮಗ ಇಂಜಿನೀಯರ್ ಆಗಬೇಕು.ಡಾಕ್ಟ್ರು ಆಗ್ಬೇಕು.ಅಂತ ತಿರ್ಮಾನ ಮಾಡಿದ ತಂದೆ ತಾಯಿ ಮಗ ಅತ್ತರೂ ಕೇಳದೇ ತಮ್ಮ ಮನೆಯಿಂದ ದೂರದ ರೆಸಿಡೆನ್ಸಿಯಲ್ ಸ್ಕೂಲ್ ಗೆ ಸಾಲ ಮಾಡಿ ಸೇರಿಸಿದ್ರು.
ಮಗ ಸ್ವಲ್ಪ ದಿನ ಅತ್ತು ಅತ್ತು ಅಲ್ಲೇ ಓದ ತೊಡಗಿದ.

ಓದಿದ

ಓದಿದ

ಓದಿದ.

ಇಂಜಿನಿಯರ್ ಕೂಡ ಆಗಿಬಿಟ್ಟ.!!!!!!.

ಕೈತುಂಬ ಸಂಬಳ ಬರ್ತಿತ್ತು.ಅಪ್ಪ ಅಮ್ಮಂಗೆ ಇನ್ನಿಲ್ಲದ ಸಂಭ್ರಮ.ಊರಿಗೆಲ್ಲಾ ಸಿಹಿ ಹಂಚಿದರು.

ಮಗ ಕೆಲಸದ ನಿಮಿತ್ತ ಅಮೇರಿಕಾಕ್ಕೆ ಹೋದ.ವರ್ಷಕ್ಕೊಮ್ಮೆ ಪಿಕ್ ನಿಕ್ ಗೆ ಬಂದಂತೆ ಊರಿಗೆ ಬಂದು ಹೋಗುತ್ತಿದ್ದ ಆತನಿಗೆ ಬಾಂದವ್ಯ ಅಂದ್ರೆ ವಾಟ್ಸಪ್ ಮೇಸೆಜ್ ಹಾಗು ಫೇಸ್ಬುಕ್ ಸ್ಟೇಟಸ್ ಆಗಿತ್ತು.

ಒಮ್ಮೆ ಊರಿಗೆ ಬಂದ.ನಾನು ಅಮೇರಿಕದಲ್ಲಿ ಹುಡುಗಿ ನೋಡ್ಕಂಡಿದಿನಿ.ಒಂದಷ್ಟು ಹಣ ಬೇಕು ಅಂತ ಹಠ ಮಾಡಿ ದುಡ್ಡು ತೆಗೆದುಕೊಂಡು ಹೋದಾತ ಊರು,ಅಪ್ಪ ಅಮ್ಮ ಎಲ್ಲರನ್ನೂ ಮರೆತಿದ್ದಾನೆ.

ಮಗ ಕೋಟಿ ಕೋಟಿ ದುಡಿಯಬೇಕು ಅಂತ ಮಮಕಾರವನ್ನೇ ಬಿಟ್ಟು ರೆಸಿಡೆನ್ಸಿಯಲ್ ಸ್ಕೂಲ್ ಗೆ ಬಿಟ್ಟಿದ್ದಕ್ಕೆ ಪ್ರತಿಫಲವಾಗಿ ಆತ ಇವರನ್ನು ದೂರ ಇಟ್ಟಿರಬಹುದೇನೋ?!

ಮುಂದೇನಾಯ್ತು......?"?!?....

..ಓದಿ ಸಂಪದ ಸಾಲು

www.sampadasaalu.blogspot.com

ಇರಾಕಿನಲ್ಲಿ ಶಾಂತಿ ನೆಲೆಸುವುದು ಯಾವಾಗ?

ಒಂದು ಮದ್ಯರಾತ್ರಿ!.ದಿಡೀರ್ ಅಂತ ದರೋಡೆಕೋರರ ಗುಂಪೊಂದು ಮನೆಗೆ ನುಗ್ಗಿ ಕಂಡ ಕಂಡವರನ್ನು ಕೊಂದು ಹೆಂಗಸರನ್ನು ಬಲತ್ಕಾರ ಮಾಡಿ ಎಳೆಯ ಮಕ್ಕಳನ್ನು ಎತ್ತಿ ಎಸೆದು ಸಿಕ್ಕಿದ್ದನ್ನೆಲ್ಲಾ ದೋಚುವ ಘಟನೆಯನ್ನು ಒಮ್ಮೆ ನೆನಪಿಸಿಕೊಳ್ಳಿ!?

ಅದೇ ರೀತಿಯಲ್ಲಿ ಇರಾಕ್ ಎಂಬ ದೇಶಕ್ಕೆ ಭಯೋತ್ಪಾದಕರೆಂಬ ದೇಶದ್ರೋಹಿಗಳು ನುಗ್ಗಿ ಇದೇ ತೆರನಾದ ಘಾತುಕತೆಯಲ್ಲಿ ತೊಡಗಿದ್ದಾರೆ.ಆ ದೇಶಕ್ಕೆ ದೇಶವೇ ಹೊತ್ತಿ ಉರಿಯುತ್ತಿದೆ.ಯಾವ ಕ್ಷಣದಲ್ಲಿ ಯಾರ ಮೇಲೆ ಯಾವ ಭಯೋತ್ಪಾದಕನ ಗುಂಡು ಮೈಮೇಲೆ ಬೀಳುತ್ತದೋ ಎಂಬ ಆತಂಕ!.ಇಲ್ಲಿ ಭಯೋತ್ಪಾದನೆ ಎಂಬುದು ಸ್ವಾತಂತ್ರ ಹೋರಾಟದಂತೆ ತಿಳಿದ ಪಾಪಿಗಳು ಹಾಡಹಗಲೇ ಹೆಂಗಸರು ಇವರ ಜೊತೆ ಮಲಗಬೇಕಂತೆ.ಒಂದೊಂದು ಕ್ಷಣವೂ ಭಯದಿಂದ ಸಾಯಬೇಕಾದ ಅಮಾಯಕ ಇರಾಕಿಗಳಿಗೆ ಎಲ್ಲಿದೆ ದಾರಿ?!
ಇವರ ರಕ್ಷಣೆ....ಯಾರ ಹೊಣೆ?!

ತೈಲ ಸಂಪದ್ಬರಿತ ರಾಷ್ಟ್ರದಲ್ಲಿ ಹತ್ತಿಕೊಂಡ ಬೆಂಕಿ ಆರುವುದು ಯಾವಾಗ?!
ವಿಶ್ವದ ಪ್ರಭಲ ರಾಷ್ಟ್ರಗಳೇಕೆ ಮದ್ಯ ಪ್ರವೇಶ ಮಾಡುತ್ತಿಲ್ಲ.?!
ಇರಾಕಿನಲ್ಲಿ ಶಾಂತಿ ನೆಲೆಸುವುದು ಯಾವಾಗ?!ಗಗನಕ್ಕೇರಿದ ತೈಲ ಬೆಲೆ ಇಳಿಯುವುದು ಯಾವಾಗ?!

ಓದಿ ಸಂಪದ ಸಾಲು
www.sampadasaalu.blogspot.com

one year of karnataka govt. review by sampada saalu

ಕಳೆದಿದ್ದು ಒಂದು ವರ್ಷ....!ಉಳಿದಿದ್ದು ನಾಲ್ಕು ವರ್ಷ.....?!!ಇನ್ನಾದರು ಬರಲಿ ಹರ್ಷ....!!!!

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ............ಒಂದು ರಾಜ್ಯದ ಅಭಿವೃದ್ದಿ ಅಂದರೆ ಇಡೀ ರಾಜ್ಯ ದ ಎಲ್ಲಾ ಜನ ಮತ್ತು ಎಲ್ಲಾ ಪ್ರದೇಶದ ಬೆಳವಣಿಗೆಗೆ ಗಮನ ಕೊಡಬೇಕು.ನಿಮ್ಮ ಆಡಳಿತಾತ್ಮಕ ನಿರ್ದಾರಗಳು ಮತ್ತು ನಿಮ್ಮ ಆಲೋಚನೆಗಳು ಅಹಿಂದದ ಮಂತ್ರ ಜಪಿಸುತ್ತಿದೆ.ದಯವಿಟ್ಟು ನಿಮ್ಮಲ್ಲಿ ಶಕ್ತಿಯಿದೆ.ಯಾವುದೋ ಒಂದು ಇಸಂ ಗೆ ಕಟ್ಟು ಬೀಳಬೇಡಿ.ನೀವು ವಿರೋದ ಪಕ್ಷದ ನಾಯಕರಾಗಿದ್ದಾಗ ಈ ಬಗ್ಗೆ ತಮ್ಮ ಜೊತೆ ಮಾತನಾಡಿದ್ದೇನೆ.ಯಾವ ವ್ಯಕ್ತಿಗೆ ದೂರದೃಷ್ಟಿ ಇರುತ್ತದೋ ಅಂತಹ ನಾಯಕ ಮಾತ್ರ ದೀರ್ಘ ಕಾಲ ಉಳಿಯಬಲ್ಲ.ನಿಮ್ಮಲ್ಲಿ ಶಕ್ತಿ ಇದೆ.ಆದರೆ ಆಲೋಚನ ಕ್ರಮ ಸರಿಯಾಗಬೇಕಿದೆ.ಉತ್ಪಾದಕತೆ ಹೆಚ್ಚಿಸುವ ಯೋಜನೆಗಳನ್ನು ಜಾರಿಗೆ ತನ್ನಿ.ಸಮಾನತೆ ಅಂದ್ರೆ ಪುಕ್ಸಟ್ಟೆ ಅಕ್ಕಿ ಕೊಡೊದಲ್ಲ.ಜನಗಳಿಗೆ ಕ್ರಿಯಾಶೀಲರನ್ನಾಗಿ ದುಡಿಯುವ ಸಾಧಕರನ್ನಾಗಿ ಮಾಡಿ.ನನ್ನಂತಹ ಕೋಟ್ಯಾಂತರ ಜನ ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ.ಕಳೆದಿದ್ದು ಕೇವಲ ಒಂದು ವರ್ಷ.!ಇನ್ನೂ ನಾಲ್ಕು ವರ್ಷಗಳು ನಿಮ್ಮೊಂದಿಗೆ ಇದೆ.ದಯವಿಟ್ಟು ಓಟ್ ಬ್ಯಾಂಕ್ ಬಗ್ಗೆ ತಲೆಕೆಡೆಸಿಕೊಳ್ಳಬೇಡಿ.ಈ ನಾಲ್ಕು ವರ್ಷ ರಾಜಕಾರಣವಿಲ್ಲದ ಅಭಿವೃದ್ದಿ ಮಾಡಿದರೆ......ಜೀವನ ಪೂರ್ತಿ ರಾಜಕಾರಣವಿಲ್ಲದ ಅಧಿಕಾರ ನಿಮಗೆ ಸಿಗುತ್ತದೆ.......
ಓದಿ ಸಂಪದ ಸಾಲು

ಮರಳಿ ಬರುವೆಯಾ ಓ ನನ್ನ ಬಾಲ್ಯವೇ ...?!

ಮರಳಿ ಬರುವೆಯಾ ಓ ನನ್ನ ಬಾಲ್ಯವೇ ...?!

ಯಾರ ಹಂಗು ಇಲ್ಲದೇ ಸ್ವತಂತ್ರನಾಗಿ ಕುಣಿದಾಡುವ ದಿನಗಳೇ..ಯಾಕೆ ಬಿಟ್ಟು ಹೋದೆ.?!
ಅಪ್ಪನ ಮುದ್ದು..ಅಮ್ಮನ ಆರೈಕೆ.ಹಳ್ಳಿ ಮೇಷ್ಟ್ರು ಪಾಠ,ಜೊತೆಗಾರ ಕಿಟ್ಟುವಿನ ಜೊತೆ ಕಿಲಾಡಿತನ,ಬೆಟ್ಟ ಗುಡ್ಡಗಳ ನಡುವೆ ಎರಡು ಕಿಲೋಮಿಟರ್ ನೆಡೆದುಕೊಂಡು ಹೋಗುವಾಗ ಸಿಗುತ್ತಿದ್ದ ಅನುಭೂತಿ,ಮನೆಯಲ್ಲಿ ಮಾಡುತ್ತಿದ್ದ ಹಠ,ಊರಿಗೆ ದೊಡ್ಡ ಮನುಷ್ಯನಾದರು ಅವರಿಗಿಂತ ನಾನೇ ದೊಡ್ಡವನೆಂದು ಬೇರೆ ಯಾವ ಆಲೋಚನೆಯು ಇಲ್ಲದೆ ಅವರೆದುರೇ ಕೂರುತ್ತಿದ್ದ ಪರಿ, ದಿನಾ ಹೇಳುವ ಬಾಯಿ ಪಾಠ,ನಮ್ಮ ಟೀಚರ್ ಹೇಳಿಕೊಟ್ಟ ಪುಣ್ಯಕೋಟಿ ಎಂಬ ಹಾಡು. ಚಿಕ್ಕ ಪೆನ್ಸಿಲ್ ಗಾಗಿ ನೆಡೆದ ನಮ್ಮ ಕ್ಲಾಸ್ ನ ಹೊಡೆದಾಟ,?!ಆಡುತ್ತಿದ್ದ ಮರಕೋತಿ ಆಟ,ಚಿನ್ನಿ ದಾಂಡು,ಮರೆಯದೇ ದಿನಾ ಆರಿಸುತ್ತಿದ್ದ ಅಡಿಕೆ,ದಾರಿಯಲ್ಲಿ ಹೋಗುವಾಗ ಸಿಕ್ಕ ಕಲ್ಲನ್ನು ಒದೆದುಕೊಂಡು ಅದು ಹೋಗುವ ದೂರ ನೋಡುತ್ತಿದ್ದ ಪರಿ,,,,,,,ಮಳೆಗಾಲವೆಂದರೆ ಮಳೆಯಲ್ಲಿ ನೆನೆದು ತಂಡಿ ಬರಿಸಿಕೊಂಡ ಆ ದಿನಗಳು,,,,,,ಹುಡುಗರು ಹುಡುಗಿಯರನ್ನು ನೊಡಿದ ಮಾತ್ರಕ್ಕೆ ಇದೇ ಲವ್ ಎಂದು ಒಬ್ಬರಿಗೊಬ್ಬರು ಛೇಡಿಸುತ್ತಿದ್ದುದು,
ಹೀಗೆ ಸಾಗುತ್ತದೆ ಅಂದಿನ ಬಾಲ್ಯ......
ಅದೆಷ್ಟು ಮುದ್ದಾದ ಚಿಕ್ಕ ಚಿಕ್ಕ ಘಟನೆಗಳಿವೆ........ಆ ನೆನಪುಗಳೇ ಎಷ್ಟು ಚೆಂದ.....ಮತ್ತೆ ಮರಳಿ ಬರುವೆಯ ಓ ನನ್ನ ಬಾಲ್ಯವೇ

.......
ಇಂದೇ ಚಂದಾದಾರರಾಗಿ,ಓದಿ ಸಂಪದ ಸಾಲು

ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ.......share,,,,,,suport,,,,,,subscribe ..

"ಬದಲಾವಣೆ ಬರಲಿ,ಪರಿವರ್ತನೆ ತರಲಿ".ಇದು ರಾಜ್ಯಾದ್ಯಂತ ನಮ್ಮ ಸಂಪದ ಸಾಲು ಪತ್ರಿಕೆಯಿಂದ ನೆಡೆಸುತ್ತಿರುವ ಅಭಿಯಾನ.ನೆಗೆಟೀವ್ ಬದುಕಿನಿಂದ ಪಾಸಿಟೀವ್ ಜೀವನ ಪದ್ದತಿಯೆಡೆಗೆ ಮತ್ತು ಸಾಧನೆಯ ಅವಕಾಶಗಳ ಸೃಷ್ಟಿಸುವಿಕೆ, ನಮ್ಮ ಸಣ್ಣತನಗಳನ್ನು ಮೀರಿ ಬೆಳೆಯುವ ಬಗ್ಗೆ ನಾವು ನಾವುಗಳೇ ಸೇರಿಕೊಂಡು ಬದಲಾಗುತ್ತಾ ಪರಿವರ್ತನೆ ತರುವ ಪ್ರಯತ್ನ.ಈ ಅಭಿಯಾನವನ್ನು ಆನ್ ಲೈನ್ ನಲ್ಲಿಯೂ ಮಾಡೋಣ ಎಂದು ಆಲೋಚಿಸಿದ್ದೇವೆ.ಆಸಕ್ತಿ ಇರುವವರು ನಮ್ಮ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.ನೀವು ಮಾಡಬೇಕಾದ್ದು ಇಷ್ಟೆ..ನಿಮ್ಮ ಪಾಸಿಟೀವ್ ಸ್ಟೇಟಸ್ ಗಳ ಕೆಳಗೆ "ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"ಅಂತ ನನಗೆ ಟ್ಯಾಗ್ ಮಾಡಿ.ನಾವು ನಿಮ್ಮ ಬರವಣಿಗೆಗೆ ಪ್ರಚಾರ ಕೊಡುತ್ತೇವೆ.ಹಾಗು ಪಾಸಿಟೀವ್ ಜರ್ನಲಿಸಂ ನ್ನು ಪ್ರೋತ್ಸಾಹಿಸಿದಂತಾಗುತ್ತದೆ.ಬೆಳಕು ಮೂಡಿಸಿದ ಕೀರ್ತಿ ನಿಮ್ಮದಾಗುತ್ತದೆ.ಕತ್ತಲೆ ತಾನಾಗಿಯೇ ದೂರಾಗುತ್ತದೆ.....ಇನ್ನೇಕೆ ತಡ.......ಶುರುವಾಗಲಿ ಅಭಿಯಾನ.......
ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ.......share,,,,,,suport,,,,,,subscribe ..

sampada saalu july 14

ಎಂತಹ ಸಿನಿಕರು ಕಾಣ್ರಿ ನಾವು.ಯಾರೋ ಒಬ್ಬ ವ್ಯಕ್ತಿ ಬೆಳೆದ ಅಂದ್ರೆ ನಾವು ಹೇಳೋದು "ಇವನ್ಯಾರಿಗೋ ಯಾಮಾರ್ಸಿದಾನೆ"ಅಂತ ಮಾತಾಡಿಬಿಡ್ತೇವೆ.ರಾಜಕಾರಣಿಗಳೆಲ್ಲ "ಕಳ್ಳರು "ಅಂತ ತಿರ್ಮಾನ ಮಾಡ್ತೇವೆ.ಸರ್ಕಾರಿ "ಅಧಿಕಾರಿಗಳೆಲ್ಲಾ ಭ್ರಷ್ಟರು" ಅಂದುಬಿಡ್ತೇವೆ.ಬಡವನಾಗಿದ್ದವ ಕಷ್ಟಪಟ್ಟು ಶ್ರೀಮಂತನಾದ್ರೂ "ಈತ ಯಾರದ್ದೊ ತಲೆ ಒಡೆದ" ಎಂದು ನಮ್ಮ ಬಾಯಿ ಚಟ ತೀರ್ಸ್ಕೋತೀವಿ.ಹಳೆ ಕಾಲವೇ ಚೆನ್ನ.ಹೊಸದೆಲ್ಲ ಹಾಳು ಅಂತ ಬಾಯಿ ಬಡ್ಕೋತೀವಿ.ಮೊಸರಿನಲ್ಲೂ ಕಲ್ಲು ಹುಡ್ಕ್ತೀವಿ.ದೇವರ ಹೆಸರಲ್ಲೂ ಚೌಕಾಶಿ ಮಾಡ್ತಿವಿ.ನಮಗೆ ಗೊತ್ತು ಗುರಿ ಇಲ್ಲದೆ ಬೀದಿ ಅಲಿತಾ ಇದ್ರು ದೇಶಕ್ಕಾಗಿ ಹೋರಾಡಿದ "ಮಹಾತ್ಮ ಗಾಂಧಿ ಸರಿ ಇರ್ಲಿಲ್ಲ ಕಾಣಯ್ಯ "ಅಂತ ಫೋಸ್ ಕೊಡ್ತಿವಿ.ಯಾರ ಜೊತೆಗೋ ಇನ್ಯಾರದ್ದೋ ಲಿಂಕ್ ಕೊಡ್ತಿವಿ.ನೆಟ್ಟಗೆ ಊರೇ ಗೊತ್ತಿಲ್ದಿದ್ರು ಜಗತ್ತೇ ತನ್ನ ಕೈ ಒಳಗೆ ಅಂತಿವಿ..."ಅವನು ಸರಿ ಇಲ್ಲ ಇವನು ಸರಿ ಇಲ್ಲ"ಅಂತ ನಾವೇ ಸರ್ಟಿಫಿಕೇಟ್ ಕೊಟ್ಟುಬಿಡ್ತೇವೆ....
ಯಾಕಿಷ್ಟು ನೆಗೆಟಿವ್ ಆಲೊಚನೆಗಳು ನಮ್ಮನ್ನಾಕ್ರಮಿಸಿ ನಮ್ಮ ತಲೆಯನ್ನು ಕಸದ ತೊಟ್ಟಿಯನ್ನಾಗಿಸುತ್ತಿವೆ?!
ಲೋಕದ ಡೊಂಕ ನೀವೇಕೆ ತಿದ್ದುವಿರಿ......ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಅಂದಿದ್ದು ಯಾಕೆ ಗೊತ್ತ?!
ಕತ್ತಲೆಯ ಬಗ್ಗೆ ಯೋಚಿಸುವಾತ ಕತ್ತಲೆಯಲ್ಲೇ ಉಳಿಯುತ್ತಾನೆ......ಬೆಳಕನ್ನು ಸೃಷ್ಟಿಸುವವನು ಕತ್ತಲೆಯೇ ಇಲ್ಲದಂತೆ ಮಾಡುತ್ತಾನೆ..
.ಬಿ ಪಾಸಿಟೀವ್......

#ಓದಿ ಸಂಪದ ಸಾಲು
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

sampada saalu july 2014

ಪ್ರಪಂಚದ ಪ್ರಸಿದ್ದ ಪಾಪ್ ಗಾಯಕ ಮೈಕಲ್ ಜಾಕ್ಸನ್ ಜಗತ್ತಿನಲ್ಲಿಯೇ ಅತ್ಯುನ್ನತ ಅವಾರ್ಡ್ ತೆಗೆದುಕೊಂಡ ಕ್ಷಣದಲ್ಲಿ ಆತ ಹೇಳಿದ ಮಾತು .
"ಈ ಚಿಕ್ಕ ತಗಡಿನ ಚೂರಿಗಾಗಿ ನನ್ನ ಬದುಕಿನ ಅದೆಷ್ಟೋ ರಜೆಯ ದಿನಗಳನ್ನು,ಸುಖದ ದಿನಗಳನ್ನು ಕಳೆದುಕೊಂಡೆನೋ ಗೊತ್ತಿಲ್ಲ.ನನಗೆ ಈ ಸಂಗೀತವೇ ಉಸಿರು..ಈ ಸಂಗೀತವೇ ಊಟ.ಪ್ರತಿಯೊಂದು ಕ್ಷಣವೂ ಸಂಗೀತವನ್ನು ಬಿಟ್ಟು ಬೇರೇನೂ ಚಿಂತಿಸಲೂ ಆಗಲಿಲ್ಲ."
ಈ ಮಾತು ನೆನಸಿಕೊಂಡರೆ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಬಿಟ್ಟರೆ ಬೇರೆ ಮಾರ್ಗ ಇಲ್ಲ ಎಂಬುದು ಅರಿವಾಗುತ್ತದೆ.

# ಓದಿ ಸಂಪದ ಸಾಲು

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

ವ್ಯವಸ್ಥೆ ಹಾಳಾದರೆ ರಾಜಕಾರಣಿಗಳನ್ನು ಬೈಯ್ಯುತ್ತೇವೆ.ಈ ರಾಜಕಾರಣಿಗಳು ಐದು ವರ್ಷಕ್ಕಾದರೂ ಬದಲಾಗುತ್ತಾರೆ.ಆದರೆ ಈ ಕಾರ್ಯಾಂಗ ಇದೆ ನೋಡಿ.ಇದು ಯಾವಾಗಲು ಇರುತ್ತದೆ.ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಬದ್ದರಾದರೆ ಸಮೃದ್ದ ಭಾರತ ನಿರ್ಮಾಣ ಸಾಧ್ಯ.ಹೇಗೆ?! ಈ ಬಾರಿಯ ಸಂಪದ ಸಾಲು ಪತ್ರಿಕೆಗೆ ಚಂದದಾರರಾಗಿ ಓದಿ. "ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ವ್ಯವಸ್ಥೆ ಹಾಳಾದರೆ ರಾಜಕಾರಣಿಗಳನ್ನು ಬೈಯ್ಯುತ್ತೇವೆ.ಈ ರಾಜಕಾರಣಿಗಳು ಐದು ವರ್ಷಕ್ಕಾದರೂ ಬದಲಾಗುತ್ತಾರೆ.ಆದರೆ ಈ ಕಾರ್ಯಾಂಗ ಇದೆ ನೋಡಿ.ಇದು ಯಾವಾಗಲು ಇರುತ್ತದೆ.ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಬದ್ದರಾದರೆ ಸಮೃದ್ದ ಭಾರತ ನಿರ್ಮಾಣ ಸಾಧ್ಯ.ಹೇಗೆ?! ಈ ಬಾರಿಯ ಸಂಪದ ಸಾಲು ಪತ್ರಿಕೆಗೆ ಚಂದದಾರರಾಗಿ ಓದಿ.
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu