Tuesday, July 5, 2016

ಚಟಕ್ಕೆ ಬಿದ್ದವರ ಬದುಕಿಸೋ ಭಗವಂತ!? *ವೆಂಕಟೇಶ ಸಂಪ,

ಚಟಕ್ಕೆ ಬಿದ್ದವರ ಬದುಕಿಸೋ ಭಗವಂತ!?         
                     *ವೆಂಕಟೇಶ ಸಂಪ,
ನಾಲ್ಕು ತಿಂಗಳ ಹಿಂದಿನ ಮಾತು!ವಿಧಾನ ಸೌಧದ ಎದುರು ಬಾಗಿಲಲ್ಲಿ ನಿಂತ ಮಹಿಳೆಯೊಬ್ಬಳು ಒಂದೇ ಸಮನೇ ರೋಧಿಸುತ್ತಿದ್ದಳು.ವರದಿಗೆಂದು ಹೊರಟ ನನಗೆ ಏನು ಕತೆ ನೋಡೋಣ ಅನಿಸಿತ್ತು.ಒಳಗೆ ಬಿಡಿ ಸಾರ್,ನನ್ನ ಗಂಡ ಸಾಯೋ ಸ್ತಿತಿಲಿ ಇದಾರೆ.ವಿಕ್ಟೋರಿಯಾ ಆಸ್ಪತ್ರೆಲಿ ಸೇರ್ಸ್ಕೊಂಡಿದಾರೆ.ಟ್ರಿಟಮೆಂಟ್ ಕೊಡ್ತಿಲ್ಲ.ದುಡ್ಡು ತನ್ನಿ ಅಂತಾರೆ.ಇಲ್ಲಿ ಸಭಾಪತಿ ಶಂಕರಮೂರ್ತಿ ಆಫೀಸ್ ಅಲ್ಲಿ ಪರಿಚಯದವರಿದ್ದಾರೆ.ಅವರ ಹತ್ತಿರ ಹೇಳಿಸುತ್ತೇನೆ.ಪ್ಲೀಸ್ ಬಿಡಿ ಅಂತ ವಿಧಾನ ಸೌಧದ ಗೇಟ್ ಕಾಯುವ ಪೋಲಿಸ್ ಬಳಿ ಅಂಗಲಾಚುತ್ತಿದ್ದಳು.ಸುಂಕದವರ ಜೊತೆ ದುಃಖ ಹೇಳಿದ್ರೆ ಕೇಳಲ್ಲ ಅಲ್ವಾ!?ಆ ಪೋಲಿಸ್ ನಿಮ್ಮೂರು ಯಾವದಮ್ಮ!?ಎಂ ಎಲ್ ಏ ಪಾಸ್ ಇದೆಯಾ!?ಮಧ್ಯಾನ್ಹ 3 ಗಂಟೆ ಮೇಲೆ ಬಾರಮ್ಮ ಎನ್ನುತ್ತಾ ಆ ಪೋಲಿಸ್ ನವರು ಸಂಬಂಧವೇ ಇಲ್ಲದಂತೆ ಸುಮ್ಮನಾದ.ಯಾಕೆ ಸಾರ್ ಎಂತೆಂತವರಿಗೋ ಒಳಗೆ ಬಿಡ್ತಿರಾ!?ಈ ಯಮ್ಮ ಇಷ್ಟೆಲ್ಲಾ ಹೇಳಿದ್ರು ಮಾತೇ ಕೇಳದಂತೆ ಇದಿರಾ!,ಆಕೆಯ ಅಳು ನಿಜವಾದದ್ದಾ!?ಅಥವಾ ನಾಟಕನಾ!?ನೋಡಿ ತಿಳ್ಕೊಳ್ಳಿ.ಹೌದಾದ್ರೆ ಒಳಗೆ ಬಿಡಿ.ನಿಮ್ಮ ರೂಲ್ಸ ಆಮೇಲೆ,ಕಷ್ಟದವರಿಗೆ ಸ್ಪಂದಿಸೋ ಗುಣ ಕಲೀಬೇಕಲ್ವಾ ಅಂದೆ.
ಹೌದು ಸಂಪ ಸಾರ್ ನೀವು ಹೇಳಿದ್ದು.ಆದರೆ ನಮ್ಮ ಮೇಲಿನ ಆಫೀಸರ್ ಗಳು ಬೈತಾರೆ.ಅದಲ್ಲದೆ ಈ ತರಹ ನಾಟಕ ಮಾಡೋರು ತುಂಬಾ ಬರ್ತಾರೆ ಸಾರ್.ಏನ್ಮಾಡಲಿ ಸಾರ್ ಅಂದರು.ಸರಿ ಸಾರ್ ಇವರು ಸಭಾಪತಿಗಳ ಕಚೇರಿಯವರ ಪರಿಚಯ ಅಂತಾರೆ.ಅವರಿಗೆ ಕಾಲ್ ಮಾಡಿ ಕೇಳಿ ಅಂದೆ.ತಕ್ಷಣ ಕಾಲ್ ಮಾಡಿದಾಗ ಈ ಹೆಂಗಸು ಪರಿಚಯ ಇದ್ದಿದ್ದು ಹೌದು ಅಂದರು. ಒಳಗೆ ನಾನೇ ಕರೆದುಕೊಂಡು ಹೊರಟೆ.
ಏನಮ್ಮಾ ನಿನ್ನ ಕಷ್ಟ ಕೇಳಿದೆ.ಅಣ್ಣಾ ನನ್ನ ಗಂಡ ಸಿಕ್ಕಾಪಟ್ಟೆ ಕುಡಿತಾನೆ.ಅದ್ಯಾವ್ದೋ ಸಮಸ್ಯೆ ಇದೆಯಂತೆ.ಅದಕ್ಕೆ ರಕ್ತ ತೆಗೆದು ಮತ್ತೆ ಫಿಲ್ಟ್ರು ಮಾಡ್ಬೇಕಂತೆ.ದುಡ್ಡಿಲ್ಲ.ಒಂದು ವಾರ ಆಯ್ತು ಇಲ್ಲಿ ಬಂದು.ಡಾಕ್ಟ್ರಿಗೆ ಹೇಳ್ಬೇಕಿತ್ತು.ಅಂದಾಗ ಆಕೆಯನ್ನು ಸುಮ್ಮನೆ ನೋಡಿದೆ.ಪಾಪ ಊಟ ಮಾಡದ,ಆಕೆಯ ಅಸಹಾಯಕತೆಯ ಕಣ್ಣು ನೋಡಿದಾಗ ಅನುಕಂಪ ಮೂಡಿತ್ತು.ಆಕೆಯ ಬಟ್ಟೆ ಮಾಸಿತ್ತು.ಸಂಬಂದಪಟ್ಟವರ ಬಳಿ ಕರೆದುಕೊಂಡು ಹೋದೆ.ಅಲ್ಲಿಂದ ಆಸ್ಪತ್ರೆಯ ಡಾಕ್ಟರ್ ಗೆ ಮಾತಾಡಿ ಟ್ರೀಟ್ಮೆಂಟ್ ಗೆ ವ್ಯವಸ್ತೆಯೂ ಆಯಿತು.ಅವಳಿಗೆ ಊಟಕ್ಕೆ ಮತ್ತು ಖರ್ಚಿಗೆ ಅವರು ನಾನು ಇಬ್ಬರೂ ಸ್ವಲ್ಪ ಹಣ ಕೊಟ್ಟೆವು.ಆಕೆಯ ಮುಖದಲ್ಲಿ ಚೂರು ಕೃತಜ್ಞತಾಭಾವ ಮೂಡಿತ್ತು..ತನ್ನ ಗಂಡನ ಅನಾರೋಗ್ಯದಲ್ಲಿ ಆಕೆಗೇನೂ ಹೇಳಲಾಗುತ್ತಿಲ್ಲವೆಂಬುದು ಅರ್ಥವಾಗಿತ್ತು.ನಮ್ಮ ಸಂಪದ ಸಾಲು  ಕಚೇರಿಯ  ಕಾರ್ಡ್ ಕೊಟ್ಟು ಏನಾದ್ರು ತೊಂದ್ರೆ ಆದ್ರೆ ಹೇಳಮ್ಮ ಅಂದೆ.ಆಕೆಗೆ ಯಾವ ಭಾವವೂ ಇರಲಿಲ್ಲ.ಆಸ್ಪತ್ರೆಗೆ ಓಡಿದ್ದಳು.ಇತ್ತೀಚೆಗೆ ಯಾವ್ದೋ ಕಾಯಿನ್ ಬಾಕ್ಸ್ ಪೋನಿಂದ ಕರೆ ಮಾಡಿದ್ದಳು.ಅಣ್ಣಾ ಅವತ್ತು ವಿಧಾನಸೌಧದಲ್ಲಿ ಸಿಕ್ಕಿದ್ರಲ್ರಿ.ನನ್ನ ಗಂಡ ಬದುಕಿದಾನ್ರೀ.ಅಣ್ಣಾ,ಆದ್ರೆ ಕುಡಿಯೋದು ಬಿಟ್ಟಿಲ್ರಿ ಅಂದಳು.
ಛೇ ಅಂದುಕೊಂಡೆ.ಆತ ಆರಾಮಾಗಿದ್ದಕ್ಕೆ ಖುಷಿ ಒಂದೆಡೆ ಆದರೆ,ಆತ ಕುಡಿತ ಬಿಟ್ಟಿಲ್ವಲ್ರಿ ಅಂತ ಬೇಜಾರಾಯ್ತು.ಈ ಹಾಳಾದ್ದು ಸಿಗರೇಟ್,ಬಿ ಡಿ,ಕುಡಿತದಂತ ಚಟಗಳನ್ನು ಯಾಕಾದ್ರೂ ಕಲಿತು ಇಡೀ ಸಮಾಜ ಹಾಳು ಮಾಡ್ತಾರೋ ಅಂತ ಅಸಹಾಯಕನ ದುಃಖ ಮೂಡಿತು.
ಹಾಳು ಸರ್ಕಾರವೇ ಬಿ.ಡಿ,ಸಿಗರೇಟ್,ತಂಬಾಕು,ಹೆಂಡಗಳನ್ನು ಯಾಕಾದ್ರೂ ತಯಾರಿಸುತ್ತೋ!?ಇಂತಹ ದರಿದ್ರಗಳನ್ನು ಮಾಡ್ಬಾರದು ಅನ್ನೋದು ಜನಕ್ಕೂ ಅರ್ಥ ಆಗಲ್ಲ.ಯಾಕೆ ಹೆತ್ತವರಿಗೂ ಕಟ್ಟಿಕೊಂಡವರಿಗೂ ಸಮಾಜಕ್ಕೂ ಕಷ್ಟಕೊಡ್ತಾರೋ!?ದರಿದ್ರ ವ್ಯವಸ್ಥೆ ನೆನೆದು ಅಸಹಾಯಕನಂತೆ ನಿಂತೆ.ಕಣ್ಣಿಂದ ಬಿದ್ದ ಹನಿ ನನಗೂ ತಿಳಿಯಲಿಲ್ಲ,ದುಶ್ಚಟದ ವಿರುದ್ದ ಏನಾದ್ರೂ ಜಾಗೃತಿ ಅಭಿಯಾನ ಮಾಡೋಣ್ವಾ!?*ವೆಂಕಟೇಶ ಸಂಪ.
ಓದಿ ಸಂಪದ ಸಾಲು,

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu