Tuesday, October 31, 2017

ಭಾಷಣದಿಂದ ಭಾಷೆ ಬೆಳೆಯುವುದಿಲ್ಲ, ಪ್ರೀತಿಸುವುದರಿಂದ ದೇಶ ಬೆಳೆಯುತ್ತದೆ ವೆಂಕಟೇಶ ಸಂಪ

ಭಾಷಣದಿಂದ ಭಾಷೆ ಬೆಳೆಯುವುದಿಲ್ಲ,
ಪ್ರೀತಿಸುವುದರಿಂದ ದೇಶ ಬೆಳೆಯುತ್ತದೆ
                         ವೆಂಕಟೇಶ ಸಂಪ

ನವೆಂಬರ್ ಒಂದು !
ಕನ್ನಡ ಕನ್ನಡ ಕನ್ನಡ ಅಂತ ಭಾಷಣ ಮಾಡಿ ಸಿಹಿ ತಿಂದು ಪೋಟೋಗೆ ಪೋಸ್ ಕೊಡುವ ಬಹುತೇಕ ಕನ್ನಡದ ಸ್ವಘೋಷಿತ ಹೊರಾಟಗಳಿಗಿಂತ,ಪತ್ರಿಕೆ ಟಿವಿ ಫೇಸ್ಬುಕ್ ವಾಟ್ಸಫ್ ಅಂತ ಕೇವಲ ಪ್ರಚಾರ  ಮಾಡೋದಕ್ಕಿಂತ ತುರ್ತಾಗಿ ಮಾಡಲೇಬೇಕಾದದ್ದು ಏನು ಗೊತ್ತಾ!?

ಕನ್ನಡದ ಪತ್ರಿಕೆಗಳನ್ನು ಖರೀದಿಸಿ ಓದುವುದನ್ನು ಕಲಿಯಬೇಕು.ಪಕ್ಕದ ಮನೆಯ ಪತ್ರಿಕೆಯನ್ನೇ ಹತ್ತು ಜನ ಓದುವುದಲ್ಲ,

ಕನ್ನಡದ ನಾಟಕ ಮತ್ತು ಯಕ್ಷಗಾನದಂತಹ  ಕಲೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ     ಅಂತಹ ಸಂಸ್ಥೆಗಳಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು.

ಕನ್ನಡದ ಸರ್ಕಾರಿ ಶಾಲೆಯಲ್ಲಿ ಓದುವವರಿಗೆ ಸಾಕಷ್ಟು ಸೌಲಭ್ಯ ಒದಗಿಸಬೇಕು.

ಬೇರೆ ಭಾಷೆ ಕಲಿಯಲಿ ಆದರೆ ಕನ್ನಡವನ್ನು ಕಡ್ಡಾಯ ಸಿಲಬಸ್ ಅಂತ ಮಾಡಬೇಕು,   

ಅಗತ್ಯ ವಸ್ತುಗಳನ್ನು ದೊಡ್ಡ ದೊಡ್ಡ ಮಲ್ಟಿನ್ಯಾಷನಲ್ ಕಂಪನಿಯ ಮಾಲ್ ಗಳಲ್ಲಿ ಖರೀದಿಸುವುದಲ್ಲ,ನಮ್ಮ ಕನ್ನಡಿಗರ ಸಣ್ಣ ಸಣ್ಣ ಅಂಗಡಿಗಳಿಗೆ,ನಮ್ಮ ಕನ್ನಡದ ಉತ್ಪನ್ನಗಳನ್ನು ಬಳಸಬೇಕು,  

ಆದರೆ ದುರಂತವೇನು ಗೊತ್ತಾ!
ಬಹುತೇಕರು ಕನ್ನಡದ ಪತ್ರಿಕೆಗೆ ಸಣ್ಣ ಪ್ರೋತ್ಸಾಹ ಕೂಡ ಕೊಡಲ್ಲ, ನಾಟಕ ಯಕ್ಷಗಾನ ಸಿನಿಮಾಗಳನ್ನು ದುಡ್ಡು ಕೊಟ್ಟು ನೋಡಲ್ಲ. ನಮ್ಮ ನಾಡು ನುಡಿಯ ಕೆಲಸಕ್ಕಿಂತ ಹೆಚ್ಚಾಗಿ ಎಲ್ಲೋ ಆದ ಗಲಾಟೆಗೆ ನಮ್ಮ ಕರ್ನಾಟಕವನ್ನೇ ಬಂದ್ ಮಾಡಿ ನಮ್ಮ ಕನ್ನಡಿಗರಿಗೇ ತೊಂದರೆ ಕೊಟ್ಟರೆ ಏನು ಲಾಭ!?
ಕನ್ನಡ    ಅನ್ನೋದು ನಮ್ಮ ಮಾನಸಿಕತೆಯ ಭದ್ರ ನೆಲೆ ಆಗಬೇಕು ಆಗ ಮಾತ್ರಾ ಕನ್ನಡಕ್ಕೆ ಬೆಲೆ,
ನಮ್ಮತನ ಎನ್ನುವುದು  ಪ್ರಚಾರಕ್ಕೆ ಮಾತ್ರಾ ನಿಂತು  ಕೇವಲ ನವೆಂಬರ್ ಗೆ  ಸೀಮಿತವಾದರೆ ಕಟ್ಟುವುದಾದರೂ ಏನನ್ನು! ? 

ನಮ್ಮ ಆಲೋಚನೆಗಳು ಕನ್ನಡ ,ನಮ್ಮ ಕನಸುಗಳು ಕನ್ನಡ,ನಮ್ಮ ಉಸಿರು ಕನ್ನಡ,ನಮ್ಮ ಹೆಸರು ಕನ್ನಡ,ನಮ್ಮ ಬದುಕು ಕನ್ನಡ,ನಾವು ಕನ್ನಡ,ನಾನು ಕನ್ನಡ,ನಮ್ಮ ಸಂಪದ ಸಾಲು ಪತ್ರಿಕೆ ಕನ್ನಡ,ನನ್ನ ಬೆಂಬಲ ಕನ್ನಡಕ್ಕೆ ಎಂಬ ಮಾನೋಭಾವ ಮೂಡಿದ ದಿನವೇ ನಾವು ಸ್ವಾಭಿಮಾನಿ ಕನ್ನಡ  ನಾಡು ಸರ್ವರೀತಿಯಲ್ಲೂ ಸಂಪದವಾಗಬಲ್ಲದು, 
ಕಟ್ಟೋಣ ಕನ್ನಡ ನಾಡು ಬೆಳೆಸೋಣ ನಮ್ಮ ಬೀಡು!
ಜೈ ಕನ್ನಡಾಂಬೆ,
9448219347

#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu