Friday, August 8, 2014

ಹೃದಯವಂತನಿಗೆ ಹೃದಯಾಘಾತವಾಯಿತೆ!?!? ಮರೆಯಲಾರದ ಮೀಸೆ ರಂಗಣ್ಣ.

ಹೃದಯವಂತನಿಗೆ ಹೃದಯಾಘಾತವಾಯಿತೆ!?!?
ಮರೆಯಲಾರದ ಮೀಸೆ ರಂಗಣ್ಣ.

ಪ್ರತಿಯೊಬ್ಬರನ್ನು ಪ್ರೀತಿಯಿಂದ ಗೌರವಿಸಿ"ನಾನು ಮೀಸೆ ರಂಗಣ್ಣ...ನಮಸ್ಕಾರ ಕಾಣ್ರಿ"ಅಂತ ಕರೆದು ಕಲ್ಲನ್ನೂ ಮಾತಾಡಿಸುತ್ತಿದ್ದ ರಂಗಣ್ಣ ತನ್ನ ಮೀಸೆ ಮೇಲೆ ಅಗಾಧ ಅಭಿಮಾನ ಹೊಂದಿದ್ದರು.ನನ್ನ ಮೀಸೆ ಅಂದ್ರೆ ಡಾ.ರಾಜಕುಮಾರಗೂ ಇಷ್ಟ ಆಗಿತ್ತು ಕಾಣ್ರಿ..ಅಂತ ಆ ಪೋಟೋವನ್ನೇ ತನ್ನ ಮೊಬೈಲ್ ಸ್ಕ್ರೀನ್ ಸೇವರ್ ಮಾಡಿಕೊಂಡಿದ್ರು.. ನನ್ನನ್ನು ಎಲ್ಲಿ ನೋಡಿದ್ರು " ವಾಟ್ ಮಿಷ್ಟರ್ ಯಂಗ್ ಮ್ಯಾನ್"ಅಂತ ಹೆಗಲ ಮೇಲೆ ಕೈ ಹಾಕಿ ಸಂಪದ ಸಾಲು ಚೆನ್ನಾಗಿ ಬರ್ತಿದೆ...ಬೆಳಿಯಪ್ಪ ಚೆನ್ನಾಗಿ...ಅನ್ನುತ್ತಾ ಮೀಸೆ ಮುಟ್ಟಲ್ವಾ?!ಕೇಳುತ್ತಿದ್ದುದು ನೆನಪಾಯ್ತು... ಇಂತ ಹೃದಯವಂತ ಪತ್ರಕರ್ತ ಮೀಸೆ ರಂಗಣ್ಣ ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನಸ್ಸಿಗ್ಯಾಕೋ ಬೇಸರದ ಛಾಯೆ ಆವರಿಸುತ್ತಿದೆ.....ಒಮ್ಮೆ ಪ್ರೆಸ್ ಕ್ಲಬ್ ಲ್ಲಿ ಕಾಫಿ ಕುಡಿತಾ ಮಾತಾಡ್ತಾ ಇದ್ವಿ.ನನ್ನಪ್ಪಾಜಿ ನಮ್ಮನ್ನಗಲಿದ ದುಃಖ ನನ್ನನ್ನಾವರಿಸಿತ್ತು...ಅದನ್ನು ನಾ ಹೇಳಿದ ತಕ್ಷಣ ಮೀಸೆ ರಂಗಣ್ಣ ತನ್ನ ಧರ್ಮಪತ್ನಿಯನ್ನು ಕಳೆದುಕೊಂಡಿದ್ದನ್ನು ನೆನೆಸಿ ಗದ್ಗದಿತರಾದರು.ನನ್ನ ಕೈ ಹಿಡಿದು ಮಾತಾಡ್ತಾ ಆಕೆ ನನ್ನ ಪಾಲಿನ ಪ್ರೀತಿಯ ದೇವರಾಗಿದ್ದಳು...ಆಕೆ ಇದ್ದಿದ್ದರೆ ಅನ್ನುತ್ತಾ ಕಣ್ಣೀರಿಟ್ಟರು... ನನ್ನ ದುಃಖದ ಜೊತೆ ಅವರ ದುಃಖವೂ ಸೇರುವಂತೆ ಮಾಡಿತ್ತು....

ಅವರು ಪತ್ರಕರ್ತರಾಗಿ ಏನೆಲ್ಲಾ ಬರೆದಿದ್ದಾರೋ?!ನನಗೆ ಗೊತ್ತಿಲ್ಲ.ಆದರೆ ಒಬ್ಬ ಹೃದಯವಂತನಾಗಿ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿಯಾಗಿದ್ದರು.....ಅಂತ ಹೃದಯವಂತನೊಬ್ಬ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ ಎಂಬುದು ನಿಜಕ್ಕೂ ಬೇಸರ...ನಿಮ್ಮ ನೈಜ ಆತ್ಮೀಯತೆಗೆ ನನ್ನದೊಂದು ಸಲಾಂ..ವಿ ಮಿಸ್ ಯು ಮೀಸೆ ರಂಗಣ್ಣ..........

#ಓದಿ ಸಂಪದ ಸಾಲು

ಪ್ರೀತಿಯಿಲ್ಲದ ಜಾತಿವಾದಕ್ಕೆ ಕೊನೆ ಎಂದು?!??!

ಪ್ರೀತಿಯಿಲ್ಲದ ಜಾತಿವಾದಕ್ಕೆ ಕೊನೆ ಎಂದು?!??!

ಸಾಮಾಜಿಕ ತಾಣಗಳು ಜಾತಿ ಧರ್ಮದ ಸಂಘರ್ಷಕ್ಕೆ ಬಲಿಯಾಗುತ್ತಿದೆಯೆ?!ಹೌದು ಅನಿಸುತ್ತಿದೆ ಇತ್ತೀಚಿನ ಕೆಲವು ಬೆಳವಣಿಗೆಗಳು.ಯಾಕೆ ಹೀಗೆ?!ಮಾನವೀಯತೆಯೆ ಸರ್ವಸ್ವ ಎಂಬ ಮನುಜ ಮತ...ವಿಶ್ವ ಪಥಕ್ಕೆ ಸಾಗಬೇಕಾದ ನಾವೆಲ್ಲ ಸಾಗುತ್ತಿರುವುದಾದರೂ ಎಲ್ಲಿ?!
ಹಣ ಸಂಸ್ಕ್ರತಿಯೇ ಜಗತ್ತನ್ನಾಳುತ್ತಿರುವಾಗ.. ಬಾವನೆಗಳೆಲ್ಲವೂ ಟಿ ವಿ ಸಿರಿಯಲ್ ಗಳಿಗೆ ಸೀಮಿತವಾಗುತ್ತಿವೆಯೆ?!
ಎಲ್ಲಾ ಧರ್ಮವೂ ಹೇಳುವುದು "ಶಾಂತಿಯ ಕ್ರಾಂತಿ ಆಗಬೇಕೆ ವಿನಃ ಕ್ರಾಂತಿಯಿಂದ ಶಾಂತಿ ಸ್ಥಾಪನೆ ಸಾದ್ಯವೇ ಇಲ್ಲ "ಎಂದು.
ಯಾವುದೇ ಧರ್ಮ ಮತ್ತು ಜಾತಿವಾದಗಳಿರಲಿ....ಅದು ಮನೆ ಮತ್ತು ಮನಸ್ಸಿನಲ್ಲಿರಬೇಕು.ಅದನ್ನು ಸಾರ್ವತ್ರಿಕಗೊಳಿಸಿದರೆ ಆಗುವುದು ಸಮರವೇ ವಿನಃ ಶಾಂತಿ ಅಲ್ಲ.ಏಕೆಂದರೆ ಪ್ರತಿಯೊಬ್ಬ ಹೆತ್ತವರಿಗೂ ತಮ್ಮ ಹೆಗ್ಗಣ ಮುದ್ದು ಅಲ್ಲವೇ?!

ಜಾಗತೀಕರಣದ ನಂತರದ ಕಾಲಗಟ್ಟದಲ್ಲೂ ನೆಡೆಯುವ ಇಂತಹ ಜಾತಿವಾದ ಮತ್ತು ಧರ್ಮ ಸಂಘರ್ಷ ಕೊನೆಗೊಳ್ಳಲಿ....ಕಾನೂನುಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸರ್ಕಾರ ಮತ್ತು ಅಧಿಕಾರಿಗಳು ಪಕ್ಷಬೇದ ಮರೆತು..ಧರ್ಮ ಬೇದ ಮರೆತು ಕ್ರಮ ತೆಗೆದುಕೊಳ್ಳಬೇಕು..ಅದನ್ನು ಬಿಟ್ಟು ತಪ್ಪು ಮಾಡದವರನ್ನೂ ಶಿಕ್ಷಿಸುವ ಗೊಡವೆಗೆ ಹೋಗಬಾರದು..ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕೆ ವಿನಃ ಕಾಮೆಂಟ್ ಹಾಕುವವರಿಗೆಲ್ಲಾ ಗುಂಡಾ ಕಾಯ್ದೆ ಹಾಕಿ ಅದೆನೋ ಸಾಧಿಸಿದೆವು ಎಂದುಕೊಂಡರೆ ಅದು ಸಾಮಾಜಿಕ ಸಾಮರಸ್ಯಕ್ಕೆ ಕೊಡಲಿಪೆಟ್ಟು ನೀಡಿದಂತಾಗುತ್ತದೆ.

"ಇಸಂ"ಗಳೇ ತುಂಬಿರುವ ನಿರ್ಧಾರಗಳು.."ಜೀವನಪ್ರೀತಿ"ಇಲ್ಲದ ಧರ್ಮ ಪ್ರಭೋದನೆ ...ಮಾನವೀಯ ಮೌಲ್ಯಗಳೇ ಇಲ್ಲದ ಆಚರಣೆ....ಬದ್ದತೆಯೇ ಇಲ್ಲದ ಆಡಳಿತ ವ್ಯವಸ್ಥೆ.....ಸಾಮಾನ್ಯಜ್ಞಾನವೂ ಇಲ್ಲದ ಅಧಿಕಾರಿವರ್ಗ......ಒಂದು ಕಣ್ಣಿಗೆ ಸುಣ್ಣ.. ಇನ್ನೊಂದು ಕಣ್ಣಿಗೆ ಬೆಣ್ಣೆ ಮಾಡುವ ನ್ಯಾಯ ವ್ಯವಸ್ಥೆ.....ಪಾಸಿಟೀವ್ ಕಲ್ಪನೆ ಇಲ್ಲದ ಮಾಧ್ಯಮಗಳು....ಇನ್ನೊಬ್ಬರನ್ನು ನೆಗೆಟಿವ್ ಆಗಿಯೆ ನೋಡುವ ದೃಷ್ಟಿಕೋನ....ಕಂಡ ಕಂಡವರ ಬಗ್ಗೆ ಕೆಟ್ಟದಾಗಿ ಮಾತಾಡುವ ಸ್ವಭಾವ......!....

ಇದೆಲ್ಲವೂ ವ್ಯವಸ್ಥೆ ಮತ್ತು ಬದುಕನ್ನು ಕೆಡಗುತ್ತದೆಯೇ ವಿನಃ ಬದುಕು ಮತ್ತು ವ್ಯವಸ್ಥೆಯನ್ನು ಕಟ್ಟುವುದಿಲ್ಲ .

ಬೇಕಿದೆ....ಪ್ರೀತಿ ತುಂಬಿದ ಜಾತಿವಾದ.....
ಬೇಕಿದೆ..... ಶಾಂತಿಯ ಕ್ರಾಂತಿ ...
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

ಒಂದು ಕೊಳವೆ ಬಾವಿ ಇಡೀ ಬದುಕನ್ನು ಕೊಲ್ಲದಿರಲಿ.....!?!?!?

ಒಂದು ಕೊಳವೆ ಬಾವಿ ಇಡೀ ಬದುಕನ್ನು ಕೊಲ್ಲದಿರಲಿ.....!?!?!?

ಮಗುವೊಂದು ಕೊಳವೆ ಬಾವಿಗೆ ಅಚಾನಕ್ಕಾಗಿ ಬೀಳುತ್ತದೆ!?!.ಬ್ರೇಕಿಂಗ್ ನ್ಯೂಸ್ ಅಲ್ಲಿ ಶುರುವಾಗುವ ಸುದ್ದಿ ಆ ಮಗುವಿನ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ....ಸರ್ಕಾರ ಮತ್ತು ಅಧಿಕಾರಿಗಳು ನಿದ್ದೆಯಿಂದ ದಿಡೀರ್ ಅಂತ ಎದ್ದಂತೆ ಕೆಲಸ ಮಾಡುತ್ತಾರೆ...ಆಮ್ಲಜನಕ ನೀರು ಅಹಾರದ ಕೊರತೆಯಿಂದ ಬಿದ್ದ ಮಗು ಬದುಕುವುದು ತುಂಬಾ ಕಷ್ಟ...ಆದರೂ ಮಾದ್ಯಮಗಳು ಮತ್ತು ಜನರ ಕಣ್ಣು ಮುಚ್ಚಿಸುವ ಸಲುವಾಗಿ ಕಾರ್ಯಾಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಟಿವಿ ಮಾದ್ಯಮಗಳು ಮಾಡುವ ತಪ್ಪೇನು ಗೊತ್ತಾ?!ಜೆಸಿಬಿ ಡ್ರೈವರನಿಂದ ಹಿಡಿದು ಕೊಳವೆ ಬಾವಿ ಅಂದರೆ ಏನೆಂದೇ ಗೊತ್ತಿಲ್ಲದವರ ಬಳಿಯೂ ಅರ್ಥವೇ ಇಲ್ಲದ ಪ್ರಶ್ನೆ ಕೇಳುವುದು.. ಶ್ರದ್ದೆಯಿಂದ ಸುರಂಗ ತೋಡುವವನ ಬಳಿ ಎಷ್ಟು ಅಡಿ ತೋಡಿದರು?! ಎಂದು ನಿಮಿಷಕ್ಕೊಂದು ಬಾರಿ ಪ್ರಶ್ನೆ ಕೇಳುವುದು....ಮತ್ತು ಗೊತ್ತಿಲ್ಲದ ವಿಷಯಗಳನ್ನು ಗೊತ್ತಿದ್ದಂತೆ ಹೇಳಿಬಿಡುವುದು....

ಸರಿ..ಕಾರ್ಯಾಚರಣೆ ಯಶಸ್ವಿಯಾಗಿ ಮಗು ಬದುಕಿ ಬಂದರೆ ಬಹಳ ಸಂತೋಷ...ಮಗು ಬದುಕಲಿಲ್ಲವಾದರೆ ಆ ರೈತನ ಹೊಲಗಳಲ್ಲೆಲ್ಲಾ ಸುರಂಗ ತೋಡಿ ಆತನ ಬದುಕಿನ ಆದಾಯವೇ ಇಲ್ಲದಂತಾಗುವ ಆತನ ಪರಿಸ್ತಿತಿಯನ್ನು ಯಾರೂ ಯೋಚಿಸುವುದಿಲ್ಲ....ಆ ರೈತನ ಸ್ಥಿತಿ "ಹೋದ ಕಣ್ಣು ಹೋಯತಣ್ಣ..ಇದ್ದ ಕಣ್ಣು ವಿನಾಶ"ವಾದಂತೆ ಮಗುವೂ ಇಲ್ಲ..ಹೊಲವೂ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ.
ನಾವೆಲ್ಲಾ ಪುಕ್ಸಟ್ಟೆ ಸಲಹೆ ನೀಡಬಹುದು...ಏನು ಬೇಕಾದರೂ ವಿಶ್ಲೇಷಣೆ ಮಾಡಬಹುದು...ಸರ್ಕಾರವೂ ಒಮ್ಮೆ ಸಹಾಯ ಮಾಡಿಬಿಡಬಹುದು...ಆದರೆ ಸಮಸ್ಯೆಯನ್ನು ಅನುಭವಿಸುವವನು ಅದೇ ರೈತ ಅಲ್ಲವೇ?!
ಕಾರ್ಯಾಚರಣೆ ಮಾಡಿದ್ದು ಸರಿ...ಅಗೆದ ಮಣ್ಣನ್ನು ಮತ್ತೆ ತುಂಬಿ ಕೊಡಬೇಕು ಇಲ್ಲವೇ ಆತನಿಗೆ ಬೇರೆ ಹೊಲ ಕೊಡಬೇಕು...ಇಲ್ಲದಿದ್ದರೆ ಬಾಗಲಕೋಟೆಯ ಸೂಳಿಕೆರಿಯ ರೈತನ ಬದುಕು ನಾಶವಾಗುತ್ತದೆ.
ಇನ್ನೊಂದು, ಸಣ್ಣ ವಿಷಯವಾದರೂ ಮಹತ್ವದ್ದು..ನಮಗೆ ಕಾಣುವ ಯಾವುದೇ ಕೊಳವೆ ಬಾವಿ ತೆರೆದಿದ್ದರೆ ಕೂಡಲೇ ಸರ್ಕಾರಕ್ಕೆ ಕಾಯದೇ ನಾವೇ ಮುಚ್ಚುವುದು....ಹಾಗು ಕೊಳವೆ ಬಾವಿ ಮುಚ್ಚುವುದೇ ಪ್ರಚಾರದ ಸರಕಾಗದಂತೆ ನೋಡಿಕೊಳ್ಳುವುದು...ಮತ್ತು ನೀರು ಬಾರದ ಬೋರ್ ವೆಲ್ ಅನ್ನು ಆ ಕಂಪನಿಯೇ ಮುಚ್ಚುವುದು ಕಡ್ಡಾಯವಾಗಬೇಕು.

"ಹೋದವರು ಹೋದರು..ಇದ್ದವರು ಸಾಯಬಾರದು" .ಕಂಡ ಕಂಡಲ್ಲಿ ಕೊಳವೆಬಾವಿ ಕೊರೆಯುವುದೇ ಅಂತರ್ಜಲದ ಕುಸಿತಕ್ಕೆ ಕಾರಣ ಎನ್ನುವುದನ್ನು ನೆನಪಿಡಬೇಕು...

ಕೊಳವೆ ಬಾವಿ ತೆರೆದಿಟ್ಟು. ಇನ್ಯಾರೋ ಬಿದ್ದು....ವಾರಗಟ್ಟಲೆ ಕಾರ್ಯಾಚರಣೆ ಮಾಡಿ...ಪ್ರತಿಕ್ಷಣವೂ ಬ್ರೇಕಿಂಗ್ ನ್ಯೂಸ್ ಆಗಿ....ಸರ್ಕಾರ ಮತ್ತು ಅಧಿಕಾರಿಗಳು ಒಮ್ಮೆಲೆ ಬ್ಯಾಟ್ರಿ ಚಾರ್ಜ್ ಆದವರಂತೆ ಕುಣಿದಾಡಿ....ಜನಗಳೆಲ್ಲಾ ಮರುಗಿ.... ಮತ್ತದೇ ರಾಗ...ಮತ್ತದೇ ತಾಳ...ಮತ್ತದೇ ಗೋಳು ಆಗದಿರಲಿ.......ಮುಗ್ದ ಮಕ್ಕಳು.... ಮತ್ತವರ ಕುಟುಂಬದವರ ಬದುಕು ನಾಶವಾಗದಿರಲಿ......ನೊಂದವರಿಗೆ ನೆಮ್ಮದಿ ಸಿಗಲಿ

"ಬದಲಾವಣೆ ಬರಲಿ ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

ನೊಂದವರಿಗೆ ನೆಮ್ಮದಿ ಸಿಗಲಿ..


ನೊಂದವರಿಗೆ ನೆಮ್ಮದಿ ಸಿಗಲಿ....

ನನ್ನ ಆತ್ಮೀಯರಲ್ಲೊಬ್ಬರಾದ ಸಚಿವ ಎಸ್ ಆರ್ ಪಾಟೀಲ್ ಅವರೊಂದಿಗೆ ಮಾತಾಡಿದೆ....ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಪಾಟೀಲ್ ಅವರ ಹತ್ತಿರ ಸೂಳಿಕೇರಿಯ ರೈತ ಹನುಮಂತ ಹಟ್ಟಿಯವರ ಮಗ ಕೊಳವೆ ಬಾವಿಗೆ ಬಿದ್ದದ್ದು...ಕಾರ್ಯಾಚರಣೆ ನೆಡೆಸಿದ್ದು...ಸುರಂಗ ತೋಡಿದ್ದು....ರೋಬೋ ತರಿಸಿದ್ದು ಎಲ್ಲಾ ವಿಚಾರ ಮಾತಾಡಿದೆವು...ಆ ರೈತನ ಮಗ ತಿಮ್ಮಣ್ಣನನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೀವಿ...ದೇವರ ಕೃಪೆ ಇದ್ದರೆ ಮಗು ಬದುಕುತ್ತದೆ ಎಂದರು...ಅದೇ ಸಂದರ್ಭದಲ್ಲಿ ನಾ ಅವರಿಗೆ ಹೇಳಿದೆ...ದಯವಿಟ್ಟು ಆ ರೈತನ ಹೊಲವನ್ನು ಮೊದಲಿನಂತೆ ಮಾಡಬೇಕಾದ ಜವಬ್ದಾರಿ ತಮ್ಮದಿದೆ..ಹಾಗು ಆ ರೈತನ ಆರ್ಥಿಕ ಸಂಕಷ್ಟಕ್ಕೂ ತಾವು ಸಹಕರಿಸಬೇಕು..ಮತ್ತು ಆ ವ್ಯಕ್ತಿಗೆ ನೈತಿಕವಾದ ಬೆಂಬಲ ನೀಡಬೇಕು ಸಾರ್ ಅಂದೆ....ಸಂಪಾ ಅವರೆ ನೀವು ಹೇಳಿದ ಸಲಹೆ ಸೂಕ್ತವಾದದ್ದು...ಖಂಡಿತಾ ಆ ಹೊಲವನ್ನು ಮೊದಲಿನಂತೆ ಮಾಡಿಕೊಡುತ್ತೇವೆ..ಮತ್ತು ಆ ರೈತನ ಆರ್ಥಿಕ ಸಂಕಷ್ಟಕ್ಕೆ ಜೊತೆಯಾಗಿರ್ತೇನೆ ಅಂದ್ರು...ಒಬ್ಬ ನಾಯಕನಾದವನಿಗೆ ಸ್ಪಂದನೆಯ ಗುಣ ಇರಬೇಕು..ಮತ್ತು ಭರವಸೆಗೆ ಮೀಸಲಾಗದೆ ಕೆಲಸ ಮಾಡಬೇಕು ಹಾಗು ನಂಬಿದವರ ರಕ್ಷಣೆ ಆಗಬೇಕು.ಅವರಿಗೆ ಸಹಕಾರಿಯಾಗಿ ನಿಲ್ಲಬೇಕೆಂಬ ಬದ್ದತೆಯನ್ನು ಸಚಿವರಾದ ಎಸ್ ಆರ್ ಪಾಟೀಲ್ ಪ್ರದರ್ಶಿಸುತ್ತಾರೆಂಬ ನಂಬಿಕೆ ಇದೆ....ಮತ್ತು ಆ ಶಕ್ತಿಯೂ ಅವರಿಗಿದೆ.
ಅವರ ಒಳ್ಳೆಯ ಕೆಲಸಕ್ಕೆ ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಬೆಂಬಲ ವ್ಯಕ್ತ ಪಡಿಸುತ್ತಾ ಅವರಿಗೆ ಶುಭ ಹಾರೈಸುತ್ತದೆ..... .ರೈತನ ಬದುಕು ಹಸನಾಗಲಿ...ನೊಂದವರಿಗೆ ನೆಮ್ಮದಿ ಸಿಗಲಿ.......

ನೀವಿದನ್ನು ಶೇರ್ ಮಾಡಲೇಬೇಕು....ನೀರು ಉಳಿಸಿ... ಬದುಕು ಬೆಳೆಸಿ.... ಕೊಳವೆ ಬಾವಿ ಮುಚ್ಚುವುದರ ಬದಲು ಅದನ್ನು ಅಂತರ್ಜಲದ ವೃದ್ದಿಯಾಗುವಂತೆ ಮಾಡಬಹುದು # ವೆಂಕಟೇಶ ಸಂಪ

ನೀವಿದನ್ನು ಶೇರ್ ಮಾಡಲೇಬೇಕು....ನೀರು ಉಳಿಸಿ... ಬದುಕು ಬೆಳೆಸಿ....

ಕೊಳವೆ ಬಾವಿ ಮುಚ್ಚುವುದರ ಬದಲು ಅದನ್ನು ಅಂತರ್ಜಲದ ವೃದ್ದಿಯಾಗುವಂತೆ ಮಾಡಬಹುದು
# ವೆಂಕಟೇಶ ಸಂಪ

ತೆರೆದ ಬೋರ್ ವೆಲ್ ನಲ್ಲಿ ನೀರು ಬರಲಿಲ್ಲ ಎಂದ ಕಾರಣಕ್ಕೆ ಅದನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ.ಎಲ್ಲಾ ಟಿ ವಿ ಮಾಧ್ಯಮಗಳು ಕಂಡ ಕಂಡ ಕೊಳವೆ ಬಾವಿ ಮುಚ್ಚಿಸಿ ಅದೇ ಸಾಧನೆ ಅಂದುಬಿಡಬಹುದು...ಸರ್ಕಾರವೂ ಕೊಳವೆ ಬಾವಿ ಮುಚ್ಚಲು ಲಕ್ಷಾಂತರ ವ್ಯಯಿಸಬಹುದು....ಸಂಘಟನೆಗಳು ಕಲ್ಲು ಮುಚ್ಚಿ ಸುಮ್ಮನಾಗಬಹುದು....ಆದರೆ ಪಾಳು ಬಿದ್ದ ಬೋರ್ ವೆಲ್ ನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ..ಅದನ್ನೇ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧನವಾಗಿ ಬಳಸಬಹುದು..ನಿಮಗೆ ತಿಳಿದಿರಲಿ...ಭೂಮಿಯಲ್ಲಿನ ಅಂತರ್ಜಲ ಕುಸಿಯಲು ಕಾರಣವಾದದ್ದು ಇದೇ ಬೊರವೆಲ್ ಗಳು....ಅದೇ ಹಾಳು ಬಿದ್ದ ಬೋರವೆಲ್ ಗಳನ್ನು ಭೂಮಿಗೆ ನೀರು ತುಂಬಿಸುವ ಸಾಧನವಾಗಿ ಬಲಸಬಹುದೆಂದು ಯಾರು ಯೋಚಿಸಲಿಲ್ಲ....ಆಕಾಶದಲ್ಲಿ ಅರಮನೆ ಕಟ್ಟುವವರು ಮೊದಲು ಭೂಮಿಯಲ್ಲಿ ಗುಡಿಸಲು ಕಟ್ಟಿರಬೇಕು ಎಂದು..ಏಕೆಂದರೆ ಮಾದ್ಯಮಗಳು ಮತ್ತು ಜನ ಕೂಗಿದ ತಕ್ಷಣ ಸರ್ಕಾರ ಎಲ್ಲಾ ಕೊಳವೆ ಬಾವಿ ಮುಚ್ಚಿಸಬೇಕೆಂದು ನಿರ್ದೇಶನ ಕೊಟ್ಟರು....ಅದೇ ಈ ಮುಖ್ಯಮಂತ್ರಿಗಳು...ಸಚಿವರು...ಅಧಿಕಾರುಗಳು....ಮಾದ್ಯಮಗಳು ಸಾಮಾನ್ಯ ಜ್ಞಾನ ಉಪಯೋಗಿಸಬಹುದಿತ್ತು!?...ನೀರು ಬಾರದ ಕೊಳವೆ ಬಾವಿಯನ್ನು ಹೇಗೆ ಅಂತರ್ಜಲ ಹೆಚ್ಚಿಸುವ ಸಾಧನವಾಗಿಸಬಹುದು....ಈ ಲೇಖನ ಪೂರ್ತಿ ಓದಿದರೆ ತಿಳಿಯುತ್ತದೆ.

ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಮತ್ತು ಸಂಪದ ಜನ ಜಾಗೃತಿ ಬಳಗದ ವತಿಯಿಂದ ಅಂತರ್ಜಲ ಹೆಚ್ಚಳಕ್ಕೆ ಬೇರೆ ಬೇರೆ ತೆರನಾದ ಕೆಲಸ ಮಾಡುತ್ತಿದ್ದೇವೆ...

ಇವತ್ತು ಬೆಳಿಗ್ಗೆ ಎಂಟು ಗಂಟೆಗೆ ವ್ಯಕ್ತಿಯೊಬ್ಬ ಕರೆ ಮಾಡಿದ...ಅಣ್ಣಾ ಇಲ್ಲೊಂದು ನೀರು ಬಾರದ ಕೊಳವೆ ಬಾವಿ ಇದೆ..ನೀವು ಬನ್ನಿ..ವಿಡಿಯೋ ಮಾಡ್ಕೊಳ್ಳಿ...ಎಲ್ಲಾ ಟಿವಿ ಗಳಿಗೆ ಪೋನ್ ಮಾಡಿದೆ.ಯಾರು ಪೋನ್ ಎತ್ತಲಿಲ್ಲ...ದಯವಿಟ್ಟು ಬನ್ನಿ ಅಂದರು.....ಅದೀಗ ತಾನೆ ಬೆಳಗಾಗಿತ್ತು ನನಗೆ...ಅಣ್ಣಾ ಖಂಡಿತ ಬರ್ತಿನಿ...ನಾ ಬರುವವರೆಗೆ ಮುಚ್ಚಬೇಡ ಅಂದೆ.....ನನ್ನ ಆತ್ನೀಯರಾದ ಸೂರ್ಯನಾರಯಣ್ ಅವರನ್ನು ಕರೆದುಕೊಂಡು ಕಾರಲ್ಲಿ ಅಲ್ಲಿ ಹೋದೆ. ನನ್ನನ್ನು ನೋಡಿದ ಅಲ್ಲಿಯ ಜನ ದೊಡ್ಡ ದೊಡ್ಡ ಕಲ್ಲು ಹಿಡಿದು ಅದನ್ನು ಮುಚ್ಚಿಸಲು ಹೊರಟ್ರು.....ಎಲ್ಲಾ ಬನ್ನಿ ಅಣ್ಣಾ ಅಂತ...ಒಟ್ಟಿಗೆ ಅಲ್ಲೇ ಮೀಟಿಂಗ್ ಗೆ ಕೂತೆವು.ನಾ ಹೇಳಿದೆ.ಈ ಕೊಳವೆ ಬಾವಿ ಮುಚ್ಚೋದು ಬೇಡ..ಇದನ್ನೇ ಇಂಗು ಗುಂಡಿ ಮಾಡೋಣ..ನಾಲ್ಕು ಇಂಚಿನ ಎರಡು ಪೈಪು..ಮತ್ತು ಒಂದು ಬೆಂಡು ಹಾಗು ರೆಡ್ಯೂಸರ್ ಪೈಪು ಹಾಗು ಒಂದು ಚಿಕ್ಕ ಫಿಲ್ಟರ್ ತನ್ನಿ ಅಂದೆ... ನಾವು ಕಾಫಿ ಕುಡ್ಯೋ ಹೊತ್ತಿಗೆ...ಅಂತರ್ಜಲದ ಹೆಚ್ಚಿಸುವ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದೆ....ಆ ಪೈಪ್ ಗಳನ್ನು ತಂದ ವ್ಯಕ್ತಿ....ಬೋರ್ ಪಾಯಂಟ್ ಹತ್ರ ಕಳೆ ಸವರಿಸಿ..ಕ್ಲೀನ್ ಮಾಡಿಸಿದೆವು....ಆ ಇಪ್ಪತ್ತು ಅಡಿ ಪೈಪ್ ಕೆಳಗೆ ಇಳಿಸಿದೆವು..ಎರಡನೆ ಪೈಪು ಸ್ವಲ್ಪ ಮಾತ್ರ....ಹೋಯ್ತು....ಭೂಮಿಯ ಅಳತೆಗೆ ಅದನ್ನು ಕೊಯ್ಡು ಬೆಂಡ್ ಹಾಕಿದೆವು. ಆ ನಂತರ ರೆಡ್ಯೂಸರ್ ಪೈಪ್ ಹಾಕಿ...ಸಣ್ಣ ಪೈಪ್ ಅದಕ್ಕೆ ಜಾಯಂಟ್ ಮಾಡಿದೆವು...ಹಾಗು ಆ ಪೈಪಿನ ಒಳಗೆ ಮಳೆ ನೀರು ಹೋಗುವಂತೆ ಮಾಡಿ ಆ ನೀರನ್ನು ಭೂಮಿಗೆ ಇಂಗಿಸಲು ವ್ಯವಸ್ಥೆ ಮಾಡಿದೆವು....ಇನ್ನು ಸ್ವಲ್ಪ ಗ್ಯಾಪ್ ಇತ್ತು..ಗುದ್ದಲಿಯಿಂದ ಮಣ್ಣು ತುಂಬಿದರು.ಎಲ್ಲೋ ಹರಿದು ಸಮುದ್ರ ಸೇರಿ ವ್ಯರ್ಥ ವಾಗುವ ನೀರು ನಮ್ಮದೇ ಹೊಲದಲ್ಲಿ ಇಂಗಿತು ಎಂಬ ಖುಶಿ ಎಲ್ಲರ ಮುಖದಲ್ಲಿ ಮೂಡಿತು..

ಅಂತರ್ಜಲ ಹೆಚ್ಚಿಸಲು ಸರ್ಕಾರ ಎನೇನೋ ಯೋಜನೆ ಅನ್ನುತ್ತದೆ...ಆದರೆ ಇಷ್ಟು ಸರಳವಾದ ಕ್ರಮ ಇದ್ದರೂ ಯಾರು ಅನುಸರಿಸದೇ ಇರುವುದು ವಿಪರ್ಯಾಸ. . ಈ ವಾರದಲ್ಲಿ ಸಾವಿರಾರು ಕೊಳವೆ ಬಾವಿ ಮುಚ್ಚಿಸಿರಬಹುದು.....ಅದೆಲ್ಲವನ್ನು ಇಂಗುಗುಂಡಿಯಾಗಿ ಬದಲಾಯಿಸಿದ್ದರೆ ಬಹುಶಃ ಅಂತರ್ಜಲ ಮಟ್ಟ ಎಷ್ಟು ಏರುತ್ತಿತ್ತು ಎಂಬುದನ್ನು ನೆನಪಿಡಿ.....ಮುಚ್ಚುವುದಷ್ಟೇ ಪರಿಹಾರವಲ್ಲ...ಅದನ್ನು ಪಾಸಿಟಿವ್ ಆಗಿ ಪರಿವರ್ತಿಸುವುದೇ ಬುದ್ದಿವಂತಿಕೆ ಮತ್ತು ಅತ್ಯವಶ್ಯ.....ಸರ್ಕಾರ...ಟಿವಿ ಮಾದ್ಯಮಗಳು..ಅಧಿಕಾರಿಗಳು.ಸಂಬಂದ ಪಟ್ಟವರು ಇನ್ನಾದರೂ ಸಾಮಾನ್ಯ ಜ್ಞಾನ ಬಳಸಿ ಕೆಲಸ ಮಾಡಲಿ...ಅದಕ್ಕೇ ಹೇಳಿದ್ದು...."ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದಸಾಲು ಪತ್ರಿಕಾ ಅಭಿಯಾನ."ಅಂತ..
ಇನ್ನು ತೆರೆದ ಬಾವಿಗಳಿಗೆ ಮಳೆ ನೀರು ಇಂಗುವಂತೆ ಮಾಡೋಣ ... ಎಲ್ಲಾ ಕೊಳವೆ ಬಾವಿಗಳನ್ನು ಇಂಗು ಗುಂಡಿಗಳಾಗಿ ಬದಲಾಯಿಸಿ ಅದನ್ನು ಮೇಲಿಂದ ಮುಚ್ಚೋಣ..ಯಾವ ಮಗುವು ಕೊಳವೆ ಬಾವಿಗೆ ಬೀಳಬಾರದು...ಹಾಗು ಕಡಿಮೆ ಹಣದಲ್ಲಿ ಹೆಚ್ಚು ನೀರನ್ನು ಭೂಮಿಗೆ ಇಂಗಿಸಿ ಅಂತರ್ಜಲ ಏರಿಸಿದ ಕೀರ್ತಿ ನಮಗೆ ಸಲ್ಲುತ್ತದೆ....ಇನ್ನೇಕೆ ತಡ....ಇದನ್ನು ಎಲ್ಲರಿಗೂ ತಲುಪುವಂತೆ ಶೇರ್ ಮಾಡಿ.......

Friday, July 11, 2014

ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಜನ ಜಾಗೃತಿ ಬಳಗದ ಕಾರ್ಯಕ್ರಮ

ಪರೀಕ್ಷೆಯಲ್ಲಿ ಪಾಸಾಗುವುದಷ್ಟೇ ವಿದ್ಯಾಬ್ಯಾಸದ ಉದ್ದೇಶವಲ್ಲ.ಈ ಕಾರಣಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಜನ ಜಾಗೃತಿ ಬಳಗದ ವತಿಯಿಂದ "ಕಲಿಕೆಯ ಜೊತೆ ಗಳಿಕೆಯ ದಾರಿ" ಎಂಬ ಕಾರ್ಯಕ್ರಮ ಇಂದು ಶಿವಮೊಗ್ಗ ಜಿಲ್ಲೆ ಹೊಸನಗರದ ಚಿಕ್ಕಜೇನಿಯಲ್ಲಿ ಜರುಗಿತು.ಜೊತೆಯಲ್ಲಿ ಶಿಕ್ಷಣ ತಜ್ಞ ದೇವೇಂದ್ರ ಬೆಳೆಯೂರು ಇದ್ದಾರೆ........





























Saturday, July 5, 2014

"ಹೋಗುವ ಜೀವ ಬದುಕಲಿ,ಆ ರೋಗಿಯ ಕುಟುಂಬದವರ ಆತಂಕ ಕಡಿಮೆ ಆಗಲಿ,".......... "ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ಮೊನ್ನೆ ಯಾವುದೋ ಶೂಟಿಂಗ್ ನ ಕಾರಣಕ್ಕೆ ಕಾರು ತೆಗೆದುಕೊಂಡು  ಮಲ್ಲೇಶ್ವರಂನಿಂದ ಹೊರಟಿದ್ದೆ.ಯಶವಂತಪುರದ ಸರ್ಕಲ್ ಹತ್ತಿರ ಒಂದು ಬದಿಯಲ್ಲಿ ನಾನಿದ್ದೆ,ವಾಹನಗಳು ಕಿಕ್ಕಿರಿದು ರಸ್ತೆಯಲ್ಲಿ ನಿಂತಿದ್ದವು.ಮುಂದೆಯೂ ಚಲಿಸಲಾರದ ಹಿಂದೆಯೂ ಹೋಗಲಾರದ ಸ್ತಿತಿ.ಪೋಲಿಸ್ ಪೇದೆಯೊಬ್ಬ ಸುಗಮ ಸಂಚಾರಕ್ಕೆ ಒದ್ದಾಡುತ್ತಿದ್ದ.ಹಿಂದಿನಿನಿದ ಜೋರಾಗಿ ಸೈರನ್ ಮಾಡುತ್ತಾ ಅಂಬುಲೆನ್ಸ್ ದಾರಿಗಾಗಿ ಹಾತೊರಿಯುತ್ತಿತ್ತು.ಆ ಸೈರನ್ ಕೇಳಿದೊಡನೆ ನನ್ನ ಎದೆಯಲ್ಲೂ ಬಡಿತ ಹೆಚ್ಚಾಯ್ತು.ಸಾಯುವ ಜೀವ ಬದುಕಲಿ ಎಂಬ ಆಸೆ ಹೆಚ್ಚಾಯ್ತು.ಪೋಲಿಸ್, ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಪ್ರಯತ್ನ ಮಾಡುತ್ತಿದ್ದು,ಅದರಲ್ಲಿ ಅಸಹಾಯಕನಾದಂತೆ ಕಾಣುತ್ತಿದ್ದ.ಅಲ್ಲಿದ್ದ ಬಹುತೇಕ ಜನ,ಅಂಬುಲೆನ್ಸ್ ಗೆ ದಾರಿ ಬಿಡುವ ಬದಲು  ಸಿಕ್ಕ ಸ್ವಲ್ಪ ದಾರಿಯಲ್ಲಿ ತಾವು ನುಗ್ಗಿ ಹೋಗುವ ಪ್ರಯತ್ನದಲ್ಲಿದ್ದರು.ನನ್ನ ಕಾರು ಎಡ ಬಾಗದಲ್ಲಿ ಇದ್ದುದ್ದರಿಂದ ಅಲ್ಲೇ ನಿಲ್ಲಿಸಿ,ಪೋಲಿಸ್ ಗೆ ಸಹಾಯ ಮಾಡೋಣ ಅಂತ ತಿರ್ಮಾನಿಸಿ ಟ್ರಾಫಿಕ್ ಪೋಲಿಸ್ ಕೆಲಸ ಮಾಡಿದೆ.ಹತ್ತು ನಿಮಿಷದಲ್ಲಿ ಅಂಬುಲೆನ್ಸ್ ಸೈರನ್ ಮಾಡುತ್ತಾ ಮುಂದೆ ಹೋಯಿತು.ಅದರಲ್ಲಿದ್ದ ರೋಗಿಯ ಸಂಬಂದಿಕರಿರಬಹುದು.ಹೋಗುತ್ತಿರುವ ಅಂಬುಲೆನ್ಸ್ನಿಂದಲೇ ಕೈ ಮುಗಿದರು.ಅಂಬುಲೆನ್ಸ್ ದೂರ ಹೋದಂತೆ ಸೈರನ್ ಕಡಿಮೆ ಆದಂತೆ ಮನಸ್ಸು ನಿರಾಳವಾಗುತ್ತಿತ್ತು.ಪೋಲಿಸ್ ಕೂಡ ಕಣ್ಣಿನಲ್ಲೇ ಕೃತಜ್ಞತೆ ಅರ್ಪಿಸಿದ.ನನ್ನಪ್ಪಾಜಿ ಯಾವಾಗಲು ಹೇಳುತ್ತಿದ್ದ ಮಾತು ನೆನಪಿಗೆ ಬಂತು."ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿ ಆತ್ಮ ಸಂತೋಷವಿದೆ".ಎಂದದ್ದು.
ಥ್ಯಾಂಕ್ಸ್ ಅಪ್ಪ ಬದುಕನ್ನು ಕಲಿಸಿದ್ದಕ್ಕೆ.

ನಮಗೆ ಎಷ್ಟೇ ಗಡಿಬಿಡಿ ಇರಲಿ.ಅಂಬುಲೆನ್ಸ್,ಅಗ್ನಿಶಾಮಕದ ವಾಹನ ಬಂದಾಗ ದಯವಿಟ್ಟು ಅವರು ಮುಂದೆ ಚಲಿಸಲು ಅವಕಾಶ ಮಾಡಿಕೊಡಿ,ಸಾದ್ಯವಾದರೆ ಅವರಿಗೆ ಸಹಾಯ ಮಾಡಿ.
"ಹೋಗುವ ಜೀವ ಬದುಕಲಿ,ಆ ರೋಗಿಯ ಕುಟುಂಬದವರ ಆತಂಕ ಕಡಿಮೆ ಆಗಲಿ,".

# ಓದಿ ಸಂಪದ ಸಾಲು.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ಸಂತೋಷ

ರಾತ್ರಿ ಕಳೆದಂತೆ ಹಗಲು ಬರುತ್ತದೆ.ಕಷ್ಟಗಳು ಕಳೆದಂತೆ ಸುಖವು ಆವರಿಸುತ್ತದೆ.ಆಲೊಚನೆಗಳು ಸ್ಪಷ್ಟವಾದಂತೆಲ್ಲಾ ದಾರಿ ಸುಗಮವಾಗುತ್ತದೆ.ಗುರಿಯ ಬಗ್ಗೆ ಏಕಾಗ್ರತೆ ಮೂಡಿದರೆ ಸಾಧನೆ ಸುಲಭವಾಗುತ್ತದೆ.ಮನಸ್ಸು ವಿಕ್ರುತವಾದರೆ ಜಗತ್ತು ವಿಕ್ರುತವಾಗಿ ಕಾಣುತ್ತದೆ.ಅಂತರಂಗದ ಕಣ್ಣು ಮಸುಕಾಗದಂತೆ ನೋಡಿಕೊಂಡಾಗ ಆತ್ಮೀಯತೆಯ ಜೀವನ ನಮ್ಮದಾಗುತ್ತದೆ.ಸಾಧನೆಯ ಶಿಖರವೇರುವ ಸಂತೋಷ ಸದಾ ನಮ್ಮಲ್ಲುಳಿಯುತ್ತದೆ.......ಓದಿ ಸಂಪದ ಸಾಲು

ಓ ಪ್ರೀತಿಯ ಜನ್ಮದಾತನೇ ನಿನಗಿದೋ ಕೋಟಿ ಕೋಟಿ ನಮನ

ಆತ್ಮೀಯತೆಗೆ ಇನ್ನೊಂದು ಹೆಸರಾದ,ಜೀವನ ಪ್ರೀತಿಯ ಸಂಕೇತವಾದ,ಶೋಷಿಸುವ ಸಮಾಜದ ಎದುರು ತಲೆ ಎತ್ತಿ,ಸ್ವಾವಲಂಬನೆಯ ಬದುಕನ್ನು ಕಲಿಸಿದ,ಕಷ್ಟಗಳಿಗೆ ಹೆದರದೆ ಸಾಧನೆಗೆ ಬದುಕನ್ನು ಅರ್ಪಿಸುವುದನ್ನು ಹೇಳಿಕೊಟ್ಟು,ತನ್ನೆಲ್ಲಾ ಸಮಸ್ಯೆಗಳನ್ನು ಮರೆತು,ಅನಾರೋಗ್ಯವನ್ನು ಲೆಕ್ಕಿಸದೇ ಜೀವನದ ಎಲ್ಲಾ ಆಯಾಮವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿದ....ತನ್ನೆಲ್ಲಾ ಸಮಸ್ಯೆಗಳನ್ನು ಮರೆತು ಮಕ್ಕಳ ಯಶಸ್ಸಲ್ಲೇ ತನ್ನ ಸುಖವನ್ನು ಕಂಡರೂ,ಸಾರ್ಥಕ ಬದುಕಿಗೆ ಉದಾಹರಣೆಯಾದ
ಓ ಪ್ರೀತಿಯ ಜನ್ಮದಾತನೇ ನಿನಗಿದೋ ಕೋಟಿ ಕೋಟಿ ನಮನ

ಯಶಸ್ಸು

ಇಟ್ಟಿಗೆಯ ಮೇಲೆ ಇಟ್ಟಿಗೆಯ ಇಟ್ಟು ಕಟ್ಟಡವ ಕಟ್ಟಿದಂತೆ.....
ಯಶಸ್ಸು ಎಂಬುದು ಪ್ರತಿಕ್ಶಣದ ಪ್ರಯತ್ನ.

ಪ್ರಯತ್ನವಿಲ್ಲದೇ ಸಿಗುವ ಯಶಸ್ಸು ಸಂತೋಷವನ್ನು ನೀಡುವುದಿಲ್ಲ.

ಕನಸು ಕಾಣುತ್ತಾ ಆ ಕನಸನ್ನು ನನಸು ಮಾಡಲಿಕ್ಕೆ ಪ್ರತಿ ಕ್ಶಣ ಬದ್ದತೆಯೊಂದಿಗೆ ಪ್ರಯತ್ನಿಸಿದರೆ ಯಶಸ್ಸೆಂಬ ಸಂತೋಷದ ಅನರ್ಘ್ಯ ರತ್ನ ಸಿಗುತ್ತದೆ........ಓದಿ ಸಂಪದ ಸಾಲು
www.sampadasaalu.blogspot.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu