Monday, June 18, 2018

ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಫೌಂಡೇಶನ್ ಸಾಗರದ ವತಿಯಿಂದ ನೆಡೆದ ರಾಜ್ಯ ಮಟ್ಟದ ಕತೆ /ಕವನ ಸ್ಪರ್ಧೆಯ ಫಲಿತಾಂಶ ನಾಡಿನ ಹೆಮ್ಮೆಯ ಸಾಹಿತಿಗಳಾದ ಡಾ. ನಾ. ಡಿಸೋಜ ಅವರಿಂದ ಪ್ರಕಟವಾಯಿತು.

ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಫೌಂಡೇಶನ್ ಸಾಗರದ ವತಿಯಿಂದ ನೆಡೆದ ರಾಜ್ಯ ಮಟ್ಟದ ಕತೆ /ಕವನ ಸ್ಪರ್ಧೆಯ ಫಲಿತಾಂಶ ನಾಡಿನ ಹೆಮ್ಮೆಯ ಸಾಹಿತಿಗಳಾದ ಡಾ. ನಾ. ಡಿಸೋಜ ಅವರಿಂದ  ಪ್ರಕಟವಾಯಿತು. 

ಪಾಸಿಟಿವ್ ಜರ್ನಲಿಸಂಗೆ ಹೆಸರಾದ ಜನಪ್ರಿಯ ಸಂಪದಸಾಲು ಮಾಸಪತ್ರಿಕೆಯ 11 ನೆಯ ವರ್ಷದ ಸಂಭ್ರಮಕ್ಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಕಥೆ\ಕವನ ಸ್ಪರ್ಧೆಯ
ಫಲಿತಾಂಶ . ಒಟ್ಟು 1891 ಕವಿತೆಗಳೂ, 819 ಕಥೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ಬರಹಗಾರರು ಭಾಗವಹಿಸಿದ್ದರು. ಇದನ್ನು 8 ತೀರ್ಪುಗಾರರ ತಂಡ ಪರಿಶೀಲಿಸಿ ಅಂತಿಮವಾಗಿ ಖ್ಯಾತ ಸಾಹಿತಿಗಳಾದ ಡಾ. ನಾ. ಡಿಸೋಜರವರ ಜೊತೆ ಚರ್ಚಿಸಿ
ಅಂತಿಮಗೊಳಿಸಲಾಯಿತು. ಫಲಿತಾಂಶವನ್ನು ಶ್ರೀ. ನಾ.ಡಿಸೋಜಾರವರು ಪ್ರಕಟಿಸಿದರು.
ಕಥಾ ಸ್ಪರ್ಧೆಯ
ಫಲಿತಾಂಶದ ವಿವರ ಇಂತಿದೆ.
ಪ್ರಥಮ ಬಹುಮಾನ 7500 ರೂ. ಮಣಿಪಾಲಿನ ಮಂಜುನಾಥ ಹಿಲಿಯಾಣರವರ (ಸೀತಾಪ್ರಲಾಪ),

ದ್ವಿತೀಯ ಬಹುಮಾನ 4000 ರೂ. ವಿಷ್ಣು ಭಟ್ ಹೊಸ್ಮನೆಯವರ  -(ಪಯಣ)
ತೃತೀಯ ಬಹುಮಾನ 2500 ರೂ ಹೈದರಾಬಾದಿನ ಅರ್ಪಣಾ ಎಚ್.ಎಸ್ ರವರ (ಪಂಕ್ತಿ ಬೇಧ) ಕಥೆಗಳು ಬಹುಮಾನ ಪಡೆದುಕೊಂಡವು.

ಕವನ ಸ್ಪರ್ಧೆ ಫಲಿತಾಂಶ
ಪ್ರಥಮ ಬಹುಮಾನ 3000 ರೂ ಕಾಸರಗೋಡಿನ ಡಾ:ರತ್ನಾಕರ ಮಲ್ಲಮೂಲೆ ಅವರ (ಭೂತ)
ದ್ವಿತೀಯ ಬಹುಮಾನ 2000 ತೀರ್ಥಹಳ್ಳಿಯ ವಿನಾಯಕ ಅರಳಸುರಳಿಯವರ (ದೇವರ ಹೊತ್ತವನು)
ತೃತೀಯ ಬಹುಮಾನ 1000 ರೂ ಸೊರಬದ ಡಾ. ಅಜಿತ್ ಹೆಗಡೆ , ಹರೀಶಿಯವರ (ವೇದಾಂತದ ವಿಗತ) ಕವನಗಳು ಬಹುಮಾನ ಪಡೆದುಕೊಂಡಿವೆ.

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು (ಪ್ರಯೋಗ)-ಸಿ.ಜು ಪಾಶಾ ಶಿವಮೊಗ್ಗ, (ಒಂದು ಸೀರೆಯ ಕಥೆ-) ಪರಮೇಶ್ವರ ಕರೂರು ಸಾಗರ, (ಚಿರಂಜೀವಿ)-ದತ್ತಗುರು ಕಂಠಿ ಬನವಾಸಿ, (ತುಂಡು ಭೂಮಿ)-ಪ್ರಶಾಂತ ಎ.ಎಸ್ ಹಂಪಿ, (ದೈವವಾಕ್ಕು)-ಡಾ:ಟಿ.ಗೋವಿಂದರಾಜು ಬೆಂಗಳೂರು, (ಪೇಯಿಂಗ್ ಗೆಸ್ಟ್)-ರೋಷನ್ ಸಿಕ್ವೆರಾ ಮಂಗಳೂರು, (ಕಾವು)-ಟಿ.ಎಂ.ಜಗದೀಶ ಶಿರಸಿ, (ಚೌಡನೂ ಮತ್ತು ಒಕ್ಕಲುತನವೂ)-ರಮೇಶ ನೆಲ್ಲೀಸರ ತೀರ್ಥಹಳ್ಳಿ, (ಸಂದರ್ಶನ)-ಜಿ.ನಾಗರಾಜ ಬೆಂಗಳೂರು, (ಮರುಹುಟ್ಟು)-ತೈರೊಳ್ಳಿ ಮಂಜುನಾಥ ಉಡುಪ ಮಂಡ್ಯ.

ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆಗಳು
(ಸಾಕ್ಷಿ)-ರಾಘವೇಂದ್ರ ಶೆಡ್ತಿಕೆರೆ ಸಾಗರ, (ಮಣ್ಣು)-ಸೋಮು ಕುದುರೀಹಾಳ ಕೊಪ್ಪಳ,( ಈ ಕಾಂಕ್ರೀಟ್ ಕಾಡಿನಲ್ಲಿ)-ಸ್ವಾಮಿ ಪೊನ್ನಾಚಿ ಚಾಮರಾಜನಗರ, (ಹಿಂಬಾರದಿರುವನೆ-)ಅನಿತಾ ಪೂಜಾರಿ ಮುಂಬೈ, (ಮಾನವ)-ಸುಧಾ ತೇಲ್ಕರ್ ಮಹಾರಾಷ್ಟ್ರ, (ಭೀಷ್ಮಾಂತರಂಗ)-ನಿರ್ಮಲಾ ಹೆಗಡೆ ಗೋಳೀಕೊಪ್ಪ ಶಿರಸಿ, (ಮನುಷ್ಯರ ಮಾತು ಕೇಳಿಸುತ್ತಿಲ್ಲ)-ಎನ್.ರವಿಕುಮಾರ ಶಿವಮೊಗ್ಗ, (ರಕ್ತರಾತ್ರಿ)-ರಾಜೇಂದ್ರಪ್ರಸಾದ ಮಂಡ್ಯ, (ಬಣ್ಣದ ಬೇಲಿ)-ಎನ್.ಆರ್ ರೂಪಶ್ರೀ ಮೈಸೂರು, (ದೇವಿಯವಳೆನಗೆ)-ಗುರುಪ್ರಸಾದ ಕಾನ್ಲೆ ಸಾಗರ.

ಅಕ್ಟೋಬರ್  2018 ರಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಹುಮಾನ ನೀಡುವುದರೊಂದಿಗೆ ವಿಶೇಷ ಸಂಚಿಕೆ ಕೂಡಾ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಮತ್ತೊಮ್ಮೆ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

ವೆಂಕಟೇಶ ಸಂಪ
ಸಂಪಾದಕರು
ಸಂಪದ ಸಾಲು ಕಛೇರಿ.
ಅಂಚೆ ಪೆಟ್ಟಿಗೆ ಸಂಖ್ಯೆ 32
ಸಾಗರ 577401.
9448219347
sampadasaalu@gmail.com
          *************

Wednesday, May 9, 2018

ನನ್ನ ಪುಟ್ಟ ಪ್ರಯತ್ನವನ್ನು ಪ್ರೋತ್ಸಾಹಿಸಿದ ಸ್ವರ್ಣವಲ್ಲೀ ಪ್ರಭಾ ಪತ್ರಿಕೆಗೆ ಹಾಗು ನಿರ್ಮಲಾ ಹೆಗಡೆ ಅವರಿಗೆ ಧನ್ಯವಾದಗಳು #ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ #9448219347

ನನ್ನ ಪುಟ್ಟ ಪ್ರಯತ್ನವನ್ನು ಪ್ರೋತ್ಸಾಹಿಸಿದ   ಸ್ವರ್ಣವಲ್ಲೀ ಪ್ರಭಾ ಪತ್ರಿಕೆಗೆ ಹಾಗು ನಿರ್ಮಲಾ ಹೆಗಡೆ ಅವರಿಗೆ ಧನ್ಯವಾದಗಳು
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ #9448219347

Tuesday, January 2, 2018

ಕನ್ನಡದ ಎಲ್ಲಾ ಬರಹಗಾರರಿಗೆ ತಲುಪುವವರೆಗೆ ಶೇರ್ ಮಾಡಿ: ಸಂಪದ ಸಾಲು ರಾಜ್ಯ ಮಟ್ಟದ ಕತೆ ಕವನ ಮತ್ತು ಪ್ರಬಂಧ ಸ್ಪರ್ಧೆಗೆ ಭಾಗವಹಿಸಲು ಸುವರ್ಣಾವಕಾಶ

ಕನ್ನಡದ ಎಲ್ಲಾ ಬರಹಗಾರರಿಗೆ ತಲುಪುವವರೆಗೆ ಶೇರ್ ಮಾಡಿ:

ಸಂಪದ ಸಾಲು ರಾಜ್ಯ ಮಟ್ಟದ ಕತೆ ಕವನ ಮತ್ತು ಪ್ರಬಂಧ ಸ್ಪರ್ಧೆಗೆ ಭಾಗವಹಿಸಲು ಸುವರ್ಣಾವಕಾಶ!
11 ನೇ ವರ್ಷದತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸಂಪದ ಸಾಲು ಪತ್ರಿಕೆಯು ಪಾಸಿಟಿವ್ ಜರ್ನಲಿಸಂ ಗೆ ಇನ್ನೊಂದು ಹೆಸರಾಗಿದೆ.
ಈ ಸುಸಂದರ್ಭದಲ್ಲಿ ಕನ್ನಡ ಬರಹಗಾರರಿಗೆ ರಾಜ್ಯ ಮಟ್ಟದ ಕತೆ ಕವನ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ, 

18 ವರ್ಷದ ಮೇಲ್ಪಟ್ಟವರಿಗೆ:

ಕತೆ ಸ್ಪರ್ಧೆ ವಿಭಾಗ:

ಪ್ರಥಮ ಬಹುಮಾನವಾಗಿ ನಗದು  7500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ದ್ವಿತೀಯ ಬಹುಮಾನವಾಗಿ ನಗದು 4000 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ,

ತೃತೀಯ ಬಹುಮಾನವಾಗಿ ನಗದು 2500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ಕವನ ವಿಭಾಗ:

ಪ್ರಥಮ ಬಹುಮಾನವಾಗಿ ನಗದು 3000 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ದ್ವಿತೀಯ ಬಹುಮಾನವಾಗಿ ನಗದು 2000 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ತೃತೀಯ ಬಹುಮಾನವಾಗಿ ನಗದು 1000 ರೂಪಾಯಿಗಳು,ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ

18 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ :
ಪ್ರಬಂಧ ವಿಷಯ:
"ಬದಲಾಗುತ್ತಿರುವ  ಪ್ರಪಂಚದಲ್ಲಿ
ಸಾಮಾಜಿಕ ಶೈಕ್ಷಣಿಕ ಆರ್ಥಿಕ ಧಾರ್ಮಿಕ ಕೌಟುಂಬಿಕವಾಗಿ ವಿದ್ಯಾರ್ಥಿಗಳ ಪಾತ್ರ"

ಪ್ರಥಮ ಬಹುಮಾನವಾಗಿ ನಗದು 3500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ದ್ವಿತೀಯ ಬಹುಮಾನವಾಗಿ ನಗದು 2500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ತೃತೀಯ ಬಹುಮಾನವಾಗಿ 1500 ರೂಪಾಯಿಗಳು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ,

ನಿಯಮಗಳು:

*ಕತೆ ಅಥವಾ ಪ್ರಬಂಧಗಳ ಪದಗಳ ಮಿತಿ 1000 ಪದಗಳು

*ಬರೆದ ಕತೆಕವನ ಮತ್ತು ಪ್ರಬಂಧವನ್ನು
ನುಡಿ ಅಥವಾ ಬರಹ ತಂತ್ರಾಂಶ ಬಳಸಿ ಇಮೈಲ್ ಮಾಡಬಹುದು  ಅಥವಾ ಸ್ಪುಟವಾಗಿ ಬರೆದು ಅಂಚೆ  ಮೂಲಕ ಕಳುಹಿಸಬಹುದು,

*ಪ್ರಬಂಧಗಳ ಜೊತೆ ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರ ದೃಡೀಕರಣ ಕಳುಹಿಸಬೇಕು,

*ಕವನ ಫುಲ್ ಸ್ಕೇಪ್ ಹಾಳೆಯ ಒಂದು ಪುಟದ ಮಿತಿಯಿರಲಿ,

*ಸ್ಪರ್ಧೆಗೆ ಬರಹ ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ     15, 2018

ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ:

ಸಂಪದ ಸಾಲು ಪತ್ರಿಕೆ
ಅಂಚೆ ಪೆಟ್ಟಿಗೆ ಸಂಖ್ಯೆ 32.
ಸಾಗರ 577401

Contact :9448219347

Email:sampadasaalu@gmail.com

ಸಂಪಾದಕ:ವೆಂಕಟೇಶ ಎಸ್ ಸಂಪ #ಓದಿಸಂಪದಸಾಲುಪತ್ರಿಕೆ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu