ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ KUWJ ವಾರ್ಷಿಕ ಪ್ರಶಸ್ತಿ
ಪತ್ರಕರ್ತ, ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್ ಸಂಪ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ KUWJ ಪ್ರಶಸ್ತಿಯ, ಮಂಗಳ ಎಂ ವರ್ಗೀಸ್ ಪ್ರಶಸ್ತಿಯನ್ನು ಏಪ್ರಿಲ್ 11 ಮತ್ತು 12 ರಂದು ನೆಡೆಯುವ ಬೀದರನಲ್ಲಿ ನೆಡೆಯುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಬಿ ಸಿ ಲೋಕೇಶ್ ತಿಳಿಸಿದ್ದಾರೆ.
ವೆಂಕಟೇಶ ಸಂಪ ಅವರು
ಕಳೆದ 20 ವರ್ಷಗಳಿಂದ ನಿರಂತರವಾಗಿ ಸಂಪದ ಸಾಲು ಎನ್ನುವ ಧನಾತ್ಮಕ ಪತ್ರಿಕೆಯನ್ನು ನಡೆಸುತ್ತಿರುವ ವೆಂಕಟೇಶ ಸಂಪರವರ ಸಾವಿರಾರು ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಧನಾತ್ಮಕವಾಗಿ ಸಮಾಜಮುಖಿಯಾಗಿ ಮತ್ತು ಯುವಕರಿಗೆ ಸ್ಪೂರ್ತಿದಾಯಕವಾಗಿ ಅವರ ಹಲವಾರು ಲೇಖನಗಳು ಸಂಪದ ಸಾಲು ಪತ್ರಿಕೆಯ ಸಂಪಾದಕೀಯದಲ್ಲಿಯೂ ಪ್ರಕಟವಾಗಿವೆ. ಹಾಗೂ ರೇಡಿಯೋ ಟಿವಿಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಹಲವಾರು ಟೀವಿ ಚಾನಲ್ ಗಳ ಪ್ಯಾನಲ್ ಡಿಸ್ಕಷನ್ ಗಳಲ್ಲಿ ಭಾಗವಹಿಸುವುದರ ಜೊತೆಗೆ ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ರಕ್ತದಾನ,ನೇತ್ರದಾನ,ಪರಿಸರ ಜಾಗೃತಿ ಅಭಿಯಾನ,ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.ಎಂಬಿಎ ಪದವೀಧರ ಆಗಿರುವ ವೆಂಕಟೇಶ ಸಂಪ ಅವರು, ಹಲವು ಮಿಶ್ರ ಬೆಳೆಗಳನ್ನು ಬೆಳೆದು, ಸಾವಯವ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.
"ಸಂಪದ ಫೌಂಡೇಶನ್ ಫಾರ್ ಪಬ್ಲಿಕ್ ಅವೇರ್ನಸ್" ಸಂಸ್ಥೆ ಮೂಲಕ ಹಲವಾರು ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
No comments:
Post a Comment