
ಲಕ್ಷ ಲಕ್ಷ ಡೊನೇಷನ್ ಕೊಟ್ಟು ಪ್ರೈವೇಟ್ ಸ್ಕೂಲ್ ಗೆ ಸೇರಿಸುವವರು,ನಮ್ಮ ಮಕ್ಕಳು ಇಂಗ್ಲಿಷ್ ಮಾತಾಡಿದ್ರೆ ಸಾಕು ಎನ್ನುವವರು,ಕಂಪ್ಯೂಟರ್ ಕಲಿತರೆ ಸರ್ವಸ್ವ ಎನ್ನುವವರು,
ಬದುಕು ಕಲಿಯದಿದ್ರೂ ಸಂಬಳ ತರುವ ಫ್ಯಾಕ್ಟರಿ ಆದ್ರೆ ಸಾಕು ತನ್ನ ಮಕ್ಕಳು ಅಂದುಕೊಳ್ಳೋರು....ಜೀವನ ಅಂದ್ರೆ ಬರೀ ದುಡ್ಡು ಅಂದ
ುಕೊಂಡೋರು.......ಇದನ್ನು ಓದಲೇಬೇಕು......
"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ"
ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದ ನಿಮಿತ್ತ ಸಾಗರದಿಂದ ಅನಂತಪುರಕ್ಕೆ ಕಾರಲ್ಲಿ ಹೊರಟಿದ್ದೆ.ಯಾರನ್ನು ಭೇಟಿಯಾಗಲಿ?!ಹೇಗೆ ಸದಸ್ಯತ್ವ ಪಡೆದುಕೊಳ್ಳೋದು?!ಅನ್ನೋ ಆಲೋಚನೆಯಲ್ಲಿದ್ದೆ.ಕಾರು ಚಲಿಸುತ್ತಿತ್ತು.ಯಾರೋ ಪುಟ್ಟ ಹುಡುಗಿ ಅಣ್ಣಾ ಹೂವು....ಅಣ್ಣಾ ಹೂವು....ಅಂತ ಕೂಗಿದಳು....ನಾನು ಪರಿವೆಯೇ ಇಲ್ಲದೆ ಮುಂದೆ ಹೋದೆ......
ಅರ್ದ ಕಿಲೋಮಿಟರ್ ಹೋದ ನನಗೆ ಅಪರಾಧಿ ಪ್ರಜ್ನೆ ಕಾಡತೊಡಗಿತು.ಕಾರನ್ನು ವಾಪಸ್ಸು ತಿರುಗಿಸಿದೆ.!
ಮತ್ತೆ ಅದೇ ಹುಡುಗಿ....ಅಣ್ಣಾ ಹೂವು.....ಅಂದಳು...
ಹೇಯ್ ಪುಟ ಏನು ಹೆಸ್ರು?ಏನು ಓದ್ತಿದಿಯಾ?ಕೇಳಿದೆ....
ನಾನು ವಿದ್ಯಾ ಅಂತ.....ಆರನೇ ಕ್ಲಾಸು ಓದ್ತಿದಿನಿ....ಇಲ್ಲೇ ಸರ್ಕಾರಿ ಸ್ಕೂಲಲ್ಲಿ..ಅಂದ್ಲು.
ನಂಗೆ ಖುಶಿ ಆಯ್ತು...ಹೂವು ಎಲ್ಲಿಂದ ತರ್ತಿಯಾ?!ಯಾವಾಗ ಇದನ್ನ ಮಾಲೆ ಮಾಡ್ತಿಯಾ?ಅಂತೆಲ್ಲಾ ಕೇಳ್ದೆ....
ಇವನ್ಯಾಕಪ್ಪ ತಲೆ ತಿಂತಾನಪ್ಪ?ಅನ್ಕೋತಾಳೆನೋ ಅನ್ಕೊಂಡೆ...ಹಾಗಾಗಲಿಲ್ಲ...ಆಕೆ ಖುಶಿಂದ ಹೇಳಿದ್ಲು....
"ಅಣ್ಣಾ ನಾನೇ ಅಪ್ಪ ನ ಹತ್ರ ಏರಿ ಮಾಡ್ಸಿಕೊಂಡು ಹೂವು ಬೆಳ್ದಿದೀನಿ.ಬೆಳ್ಗೆ ಎದ್ದು ಅರ್ಧ ಗಂಟೆ ಈ ಹೂವಿನ ಕೆಲ್ಸ ಮಾಡ್ತಿನಿ.ಮದ್ಯಾನ್ಹ ಬಂದ ಕೂಡ್ಲೇ ಮಾಲೆ ರೆಡಿ ಮಾಡ್ತೀನಿ...ದಿನಕ್ಕೊಂದು ಐವತ್ತು ರೂಪಾಯಿ ಸಿಗತ್ತೆ....ನನ್ನ ಸ್ಕೂಲ್ ಗೆ ಬೇಕಾದ ಹಣ ನಾನೇ ದುಡ್ಕೋತೀನಿ ಅಂತ ಹೆಮ್ಮೆಯಿಂದ ಹೇಳಿದ್ಲು.....
ಒಂದು ಕ್ಷಣ...
ನಾನು ಹೈಸ್ಕೂಲ್ ಗೆ ಹೋಗುವಾಗ ಅಪ್ಪ ಎಲ್ಲಿಂದಲೋ ತಂದ ಜೇನುತುಪ್ಪನ ನಮ್ಮ ಮೇಸ್ಟ್ರಿಗೇ ಮಾರಿ ಆ ವರ್ಷದ ಸ್ಕೂಲ್ ಖರ್ಚು ನೊಡ್ಕಂಡಿದ್ದು ನೆನಪಾಯ್ತು....
ಆ ಹುಡ್ಗಿ ಹೇಳಿದ್ಲು....ಅಣ್ಣಾ ಕತೆ ಕೇಳಿದ್ರಿ....ಹೂವು ತಗೊಳ್ಳಿ ಅಂದ್ಲು.....ಅಷ್ಟು ಹೂವು ತಗೊಂಡು ನನ್ನ ಕಾರಲ್ಲಿ ಇದ್ದ ಸಂಪದ ಸಾಲು ಪುಸ್ತಕದ ರಾಶಿ ಮೇಲಿಟ್ಟೆ....
ನಮ್ಮ ಪತ್ರಿಕೆಯ ಒಂದಷ್ಟು ಸಂಚಿಕೆಯನ್ನು ಆ ಹುಡ್ಗಿಗೆ ಕೊಟ್ಟೆ.ಇದನ್ನು ಓದು ಅಂದೆ.ಆಕೆ ಹೇಳಿದ್ಲು..".ಅಣ್ಣಾ ,ಜೋಗ ನೋಡೋಕೆ ಅಂತ ತುಂಬಾ ಪ್ರವಾಸಿಗರು ಹೋಗ್ತಾರೆ..ಸಂಜೆ ವರೆಗೆ ಕೂತು ಇದನ್ನು ಮಾರಿ ಹೋಗ್ತೀನಿ...ಕೆಲವೊಬ್ರು ನನ್ನನ್ನು ನೋಡಿ ಹಿಯಾಳಿಸ್ತಾ....ಹೋಯ್ ಅಂತ ಕೂಗ್ತಾ ಹೋಗ್ತಾರೆ....ಕೆಲವೊಬ್ರು ಹೂವು ತಗೊಂಡು ಇನ್ನು ಸ್ವಲ್ಪ ಕಡಿಮೆಗೆ ಕೊಡಮ್ಮಾ ಅಂತಾ ಚೌಕಾಶಿ ಮಾಡ್ತಾರೆ....ಹೀಗೆ ಎಲ್ಲಾ ತರದವರು ಕಾಣ್ತಾರೆ."... ಖುಶಿ ಆಗತ್ತೆ..
"ನಾನು ದೊಡ್ಡವಳಾಗಿ ಈ ತರ ಕಾರಲ್ಲಿ ಬಂದು ಶಾಲೆ ಹುಡುಗರು..ವಯಸ್ಸಾದ ಹೆಂಗಸರು...ಅಂಗವಿಕಲರು ಈ ತರ ಹೂವು ಮಾರ್ತಾ ಇದ್ರೆ ಅಷ್ಟೂ ತಗೋಳ್ತೀನಿ.......ಅಣ್ಣಾ."ಅಂದ್ಲು...
ಅರಿವಿಲ್ಲದೇ ನನ್ನ ಕಣ್ಣಿಂದ ನೀರು ಬಿದ್ದಿತ್ತು.....
ಮತ್ತೆ ಕಾರು ತಿರುಗಿಸಿ ಅಭಿಯಾನಕ್ಕೆ ಹೊರಟೆ...ನಾನು ಕಣ್ಣಿಗೆ ಕಾಣುವಷ್ಟು ದೂರ ಹೋಗುವವರೆಗೂ " ಟಾ ಟಾ "ಮಾಡುತ್ತಿದ್ದಳು .ಆ ಹುಡುಗಿ .....ಮತ್ತು ಆ ಹುಡುಗಿಯ "ಟಾ ಟಾ" ದಲ್ಲೂ ತನ್ನ ದುಡಿಮೆಯ ಜೊತೆಗಿನ ಕಲಿಕೆಯ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು...!......
.ಮನಸ್ಸಿಗೀಗ ನಿರಾಳ......
"ಬೇಕು ಕಲಿಕೆಯ ಜೊತೆ ಗಳಿಕೆ"
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
—
ಒಬ್ಬ.....
ಕತ್ತಲೆಯನ್ನು ಓಡಿಸಬೇಕು.....ಕತ್ತಲೆಯನ್ನು ಓಡಿಸುತ್ತೇನೆ........ಕತ್ತಲೆ ಇದ್ದರೆ ಕಷ್ಟ ಅಂತ ಜೀವನವಿಡೀ ಬಾಷಣ ಮಾಡುತ್ತಿದ್ದ?!
ಮತ್ತೊಬ್ಬ......
ಎನೂ ಮಾತಾಡಲಿಲ್ಲ.......ಸುಮ್ಮನೆ ಒಂದು ದೀಪ ಹಚ್ಚಿದ..........!?
ಅದು ಸಾವಿರಾರು ದೀಪವಾಯಿತು..........!
ಕತ್ತಲೆ ಗೊತ್ತಿಲ್ಲದಂತೆ ಓಡಿ ಹೋಯಿತು.....
ನಮ್ಮ ದೇಶದಲ್ಲಿ ನೆಡೆಯುತ್ತಿರುವ ದುರಂತ ಏನು ಗೊತ್ತಾ?
ಬರೀ ಬಾಷಣಗಳು.ಮಾತೆತ್ತಿದರೆ ಹೋರಾಟ ಅಂತಾರೆ....ಭ್ರಷ್ಟಾಚಾರ ನಿರ್ಮೂಲನೆ ಅಂತ ಕೂಗಾಡ್ತಾರೆ....
ಆದರೆ ಈ ಭ್ರಷ್ಟಾಚಾರ ನಿರ್ಮೂಲನೆ ಅನ್ನೋ ಬದಲು ಪ್ರಾಮಾಣಿಕತೆಯ ಆಹ್ವಾನ ಅಂದಿದ್ರೆ ಬಹುಶಃ ಪಾಸಿಟೀವ್ ಆದ ಮನಸ್ಥಿತಿ ನಿರ್ಮಾಣ ಆಗುತ್ತಿತ್ತು.....!
ಬದಲಾವಣೆಗೆ ಬೇಕಿರುವುದು ಬಾಷಣವಲ್ಲ....ಸಹಜವಾಗಿ ಆಲೋಚಿಸುವ ಪರಿವರ್ತನೆಗೆ ಒಪ್ಪಿಕೊಳ್ಳುವ ಮನಸ್ಥಿತಿ ಬೇಕು...
"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."
ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?!*ವೆಂಕಟೇಶ ಸಂಪಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದ ಸಂದರ್ಭ!ನಮ್ಮ ಮಹಾರಾಜ ಕಾಲೇಜು ಬೇಗ ಮುಗಿಯುತ್ತಿತ್ತು.ಮದ್ಯಾನ್ಹ ಮೂರು ಗಂಟೆಯ ನಂತರ ಸಾಕಷ್ಟು ಸಮಯವಿರುತ್ತಿತ್ತು.ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನೊಬ್ಬನಿಗೆ ಪಾರ್ಟ್ ಟೈಮ್ ಸಹಾಯ ಮಾಡುತ್ತಿದ್ದೆ.ಅದಕ್ಕೆ ಪ್ರತಿಯಾಗಿ ಆತ ನಂಗೆ ಓದಲು ಪುಸ್ತಕ ಕೊಡುತ್ತಿದ್ದ.ಸಂಜೆ ಹೊತ್ತಿಗೆ ಬಿಸಿ ಬಿಸಿ ಬೋಂಡ ಮತ್ತು ಕಾಫಿಯನ್ನು ಕೊಡಿಸುತ್ತಿದ್ದ.ಹೀಗೆ ಸಂಜೆಯವರೆಗೂ ಒಂದು ರೀತಿಯಲ್ಲಿ ಸರಸ್ವತಿ ಪುತ್ರನಾಗುವ ಅವಕಾಶ ನೀಡುತ್ತಿದ್ದ ಆತನ ಮೇಲೆ ಒಂತರಾ ಗೌರವ ಮೂಡಿತ್ತು.....!
ಒಂದು ದಿನ......! ಹೀಗೆ ಪುಸ್ತಕಗಳ ಜೊತೆ ವ್ಯಾಪಾರ ವ್ಯವಹಾರ ಮುಗಿಸಿ ಸುಮ್ಮನೆ ಸಿಟಿ ರೌಂಡ್ಸ್ ಹೊಡೆಯೋಣ ಅಂತ ಏಕಾಂಗಿಯಾಗಿ ಪೇಟೆ ಸುತ್ತಲು ಶುರು ಮಾಡಿದೆ....ಅಹಾ.....ಅದೆಷ್ಟು ವೈಯ್ಯಾರ....ಅದೆಷ್ಟು ಬಿನ್ನಾಣ....ಈ.ದೇವರಾಜುಅರಸು ರಸ್ತೆ!? ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣೊ ಈ ಮೈಸೂರು....ಈ ರಸ್ತೆಯಲ್ಲಿ ಮಾತ್ರ ಒಂತರಾ ವಿಭಿನ್ನವಾಗಿತ್ತು...ಸ್ವಲ್ಪ ಹೈಫೈ ಟಚ್ ಹೊಂದಿದ್ದ ಈ ರಸ್ತೆಯ ತುಂಬಾ ವ್ಯಾಪರಸ್ತರದ್ದೇ ಕಾರುಬಾರು?!ಎಲ್ಲಿ ನೋಡಿದರಲ್ಲಿ ಬರೀ ಕನ್ನಡಿಯೊಳಗಿನ ಗಂಟುಗಳೇ ಇದ್ದವು..ಆ ಕೈಗೆಟುಕದ ಗಾಜಿನ ಒಳಗೆ ಗೊಂಬೆಗಳು.....ಅದರ ಜೊತೆ ಬಟ್ಟೆಗಳ ಬರದ ಮಾರಾಟ.....ಅಲ್ಲಲ್ಲಿ ನಿಲ್ಲಿಸಿದ ಕಾರುಗಳು....ಮತ್ತೊಂದಿಷ್ಟು ಬೈಕುಗಳು..ಇಡೀ ರಸ್ತೆಗೆ ಒಂದೇ ಮರ!..ಪ್ರತಿಯೊಬ್ಬರು ತಮ್ಮ ಅಂಗಡಿಯ ಸ್ವಚ್ಚವಾಗಿರಿಸಿಕೊಳ್ಳುವ ಬರದಲ್ಲಿ ರಸ್ತೆಗೆ ಕಸ ಎಸೆದ ಮಂದಿ....ಶೋಕಿಯೇ ಶ್ರೀಮಂತಿಕೆ ಅನಿಸಿಕೊಂಡು ಖರೀದಿಗೆ ಬಂದ ಜನಗಳು....ಹೀಗೆ ನೋಡುತ್ತಾ ಮುಂದೆ ಸಾಗಿದೆ!.....
ಹಾಗೆ ಸಂದಿಗಳ ಒಳಹೊಕ್ಕಾಗ ಅಲ್ಲೇ ಇಕ್ಕೆಲಗಳಲ್ಲೆ ಚಿಕ್ಕ ಚಿಕ್ಕ ಗುಡಿಸಲು ಇತ್ತು....ಅದನ್ನೆಲ್ಲಾ ನೋಡುತ್ತಾ ತಣ್ಣನೆಯ ಗಾಳಿ ಸವಿಯುತ್ತಾ ದಾರಿಯುದ್ದಕ್ಕೂ ಕಂಡ ಕಂಡದ್ದನ್ನೆಲ್ಲಾ ನೋಡುತ್ತಾ...ರಸ್ತೆಯ ಮದ್ಯದಲ್ಲಿ ಅಪರೂಪಕ್ಕೆ ಕಾಣುವ ಕಾಲೇಜಿಗೆ ಹೋಗುವರಂತೆ ಕಾಣುವ ಬಣ್ಣದ ಚಿಟ್ಟೆಗಳನ್ನು ಗಮನಿಸುತ್ತಾ.....ಅವರ ಸೌಂದರ್ಯಕ್ಕೆ ನನಗೆ ನಾನೇ ಗುನುಗುತ್ತಾ........ಸುತ್ತಾಡುತ್ತಲೇ ಸುಮಾರು ಸಮಯ ಕಾಲ ಕಳೆದೆ.......!?
ರಾತ್ರಿ ಹೊತ್ತು ಬಾಯಿ ಚಪಲ....ರಸ್ತೆ ಬದಿಯ ಪಾನಿಪುರಿ ಅಂದ್ರೆ ಬಾಳ ಪ್ರೀತಿ....ಗೋಲುಗುಪ್ಪ ಮಾರುತ್ತಿದ್ದವನನ್ನು ನೋಡಿದ ನನಗೆ ಅಪರೂಪಕ್ಕೆ ಪರಿಚಿತ ಸಿಕ್ಕಾಗ ಆಗ ಖುಷಿ ಆಯ್ತು...ಐವತ್ತು ಪೈಸೆಗೆ ಒಂದು ಪೂರಿ....ಐದು ರೂಪಾಯಿಗೆ ಹತ್ತು ಪೂರಿ ಕೊಡುವವನು.....12 ಪೂರಿ ಕೊಟ್ಟ.....ಮಳೆ ಬರತ್ತೆ....ಅದ್ಕೆ ಕ್ಲೋಸ್ ಮಾಡ್ತೀನಿ ಅಂದ......ಸರಿ ಮನಸ್ಸಲ್ಲೊಂದು ತ್ಯಾಂಕ್ಸ್ ಅಂದ್ಕೊಂಡು ಅಲ್ಲಿಂದ ಮತ್ತೆ ಸಯ್ಯಾಜಿ ರಾವ್ ರಸ್ತೆ ಸೇರಿದೆ...ಮಳೆ ಶುರುವಾತು....!
..ಕೆ ಆರ್ ಸರ್ಕಲ್ ಸೇರಲು ಇನ್ನು ಹತ್ತು ನಿಮಿಷ ನೆಡೆಯಬೇಕಿತ್ತು...ತುಂತುರು ಮಳೆಯಲ್ಲಿ ತಲೆ ಮೇಲೆ ಕರ್ಚೀಫ್ ಹಕ್ಕೊಂಡು ನಿದಾನ ನೆಡೆದು ಬಂದೆ....ಕೆ ಆರ್ ಸರ್ಕಲ್ ಹತ್ತಿರದ ದೊಡ್ಡ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು...!
ಆ ರಸ್ತೆಯ ಬದಿಯಲ್ಲೊಬ್ಬ ನಿಂತು ಎನೋ ಹುಡುಕುತ್ತಿದ್ದ!ಚಿಟಿ ಚಿಟಿ ಮಳೆ...ನಾನಿದ್ದ ತಾತಯ್ಯ ಅನಾಥಾಲಯ ಹಾಸ್ಟೆಲ್ ಗೆ ಸಂಜೆ ಏಳು ಮುಕ್ಕಾಲು ಒಳಗೆ ಹೋಗಬೇಕಿತ್ತು....ವಾರ್ಡನ್ ಗೆ ಗೊತ್ತಾಗದೆ ಒಳಗೆ ಹೋಗಲು ಮನಸಿನೊಳಗೆ ಪ್ಲಾನ್ ಮಾಡುತ್ತಾ ಹೋಗುತ್ತಿದ್ದ ನನಗೆ ಏನೋ ಹುಡುಕುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕನಿಸಲಿಲ್ಲ... ರಸ್ತೆ ದಾಟುವ ಹೊತ್ತಿಗೆ ಆತ ಹೋಯ್ ಹೋಯ್ ಯಾರೀದಿರಾ?!ಅಂತಾ ಕೂಗಾಡಿದ..!
ತತ್ತೆರಿಕೆ ಯಾಕಪ್ಪಾ ಈತ ಕರಿತಾವ್ನೆ....ಯಾರದ್ರು ಕುಡುಕ ಇರ್ಬಹುದು ಅಂತ ಮತ್ತೆ ತಿರುಗಿ ಹೊರಟೆ...ಆತ ಮತ್ತೆ ಕೂಗಿದ....ಅಣ್ಣಾ ಯಾರದ್ರೂ ಇದಿರಾ?ಆ ಕಡೆ ದಾಟಸ್ತಿರಾ?!... ಕೇಳಿದ....
ಸರಕ್ಕೆಂದು ಓಡಿ ಬಂದೆ...ಆತನ ಕೈ ಹಿಡಿದು ದಾಟಿಸಿದೆ...ಹಾಳದ್ದು ಕಂಡ ಕಂಡವರ ಬಗ್ಗೆ ತಿಳಿದುಕೊಳ್ಳುವ ಕುತೋಹಲ....ಸಾರ್ ಯಾವ್ದು ನಿಮ್ಮೂರು?ಎನ್ಮಾಡ್ತೀರಿ?ಹುಟ್ಟಿನಿಂದಲೇ ಕಣ್ಣು ಕಾಣಲ್ವಾ?ಹೀಗೆ ಪ್ರಶ್ನೆ ಕೇಳಿದೆ....
ಆತನಿಗೆ ಏನನ್ನಿಸಿತೋ ಏನೋ....ಸಾರ್ ನನ್ನನ್ನು ಆ ಹೂವಿನ ಮಾರ್ಕೆಟ್ ಹತ್ರ ಬಿಡ್ತಿರಾ?ಅಂದ..ಸರಿ ಅಂದೆ..ಹೊರಟೆ...ಆತ ತನ್ನ ಕತೆ ಶುರು ಮಾಡಿದ....!
ನನ್ನೂರು ಪಿರಿಯಾ ಪಟ್ಟಣದ ಹತ್ರ ಒಂದು ಹಳ್ಳಿ...ಅಲ್ಲೆ ಓದಿದ್ದು.ನಂಗೆ ತಿಳುವಳಿಕೆ ಬರೋದ್ರೊಳಗೆ ಅಪ್ಪ ಅಮ್ಮ ಇರ್ಲಿಲ್ಲ...ಏಳನೆ ಕ್ಲಾಸ್ ಮುಗಿಯೋ ಹೊತ್ತಿಗೆ ಕಣ್ಣುಗಳು ಮಂಜಾಗತೊಡಗಿತು...ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ಕಣ್ಣು ಪೂರ್ತಿಯಾಗಿ ಕಾಣದಾಯಿತು....!
ಅಶಕ್ತನಾದವನನ್ನು ಯಾರು ನೊಡ್ಕೋತಾರೆ?!ಆಸ್ಪತ್ರೆಗೆ ಕರ್ಕೋಂಡು ಹೋಗೋ ನೆಪ ಮಾಡ್ಕೊಂಡು ನಮ್ಮಣ್ಣ ಮೈಸೂರಿನ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋದವನು ಎಲ್ಲಿ ಹೋದನೋ ಗೊತ್ತಿಲ್ಲ....ಇಲ್ಲೊಬ್ಬ ಹೂವು ಹಣ್ಣು ಮಾರುತ್ತಿದ್ದ.ಆತನೇ ನನ್ನನ್ನು ತನ್ನ ಜೊತೆ ಇಟ್ಕೊಂಡ.ಆತನ ಕೆಲ್ಸಕ್ಕೆ ನನ್ನ ಕೈಲಾದ ಸಹಾಯ ಮಾಡ್ತಿನಿ.ಆತ ನಂಗೊಂದು ಜೀವನ ಕೊಟ್ಟಿದ್ದಾರೆ..ಕೆ ಆರ್ ಆಸ್ಪತ್ರೆಗೆ ಹೋಗ್ಬಂದೆ..ಕಣ್ಣು ಬರಲ್ಲ ಅಂದ್ರು.ಆದ್ರೆ ದೊಡ್ಡ ಆಸ್ಪತ್ರೆಗೆಲ್ಲಾ ಹೋಗೋ ಶಕ್ತಿ ಇಲ್ಲ...ಹುಟ್ಟು ಕುರುಡ ಆಗಿದ್ರೆ ಬೇಸರವಿರ್ಲಿಲ್ಲ.ಆದ್ರೆ ಅಂದು ಒಂದಷ್ಟು ಜಗತ್ತನ್ನು ನೋಡಿದ ನನಗೀಗ ಜಗತ್ತೇ ಕತ್ತಲು!
ಅಂದು ಆಡಿದ ಆಟ...ಓಡಾಡಿದ ಜಾಗ...ಕಂಡ ಜನ...ಹಸಿರು ಹೊಲ....ನಮ್ಮೂರ ಕೆಂಪು ಬಸ್ಸು.....ಮನೆಯಲ್ಲಿ ಸಾಕಿದ್ದ ಬೀಳಿ ನಾಯಿ ಮರಿ.....ಇವೆಲ್ಲಾ ನಂಗೆ ಈಗ ನೆನಪುಗಳು ಮತ್ತು ಸಂಪೂರ್ಣ ಕತ್ತಲು!?!
ಯಾರಿಗೆ ಹೇಳಲಿ...?!ಊಟ ತಿಂಡಿ ನೆಡೆದಾಡೋದು..ಶೌಚ ಹೀಗೆ ಪ್ರತಿಯೊಂದಕ್ಕು ಇನ್ನೊಬ್ಬರನ್ನು ಕಾಯಬೇಕು...ಕೆಲವರು ಹೆಲ್ಪ್ ಮಾಡ್ತಾರೆ...ಕೆಲವರು ಓಡಿ ಹೋಗ್ತಾರೆ....
ಏನು ಮಾಡಲಿ...ಹೇಳಿ......"ಬದುಕಲೇ ಬೇಕಲ್ರಿ.....ಸಾವು ಬರುವ ತನಕ......"ಅಂದ......
ಯಾಕೋ...ಏನೋ .....ಮಾತಾಡಲು ಆಗಲಿಲ್ಲ......ಮೌನವೇ ಉತ್ತರವಾಗಿತ್ತು....ಆತನ ಕೈ ಹಿಡಿದಿದ್ದೆ......ಬೆನ್ನು ಸವರಿದೆ....ಅಣ್ಣಾ......ದೇವರು ಯಾಕೆ ಹೀಗೆ ಮಾಡ್ತಾನೋ ಗೊತ್ತಿಲ್ಲ.......ಆದರೆ ಈ ಕೆಟ್ಟ ಜಗತ್ತಿನಲ್ಲಿ ಹೊರ ನೋಟದ ಪ್ರಪಂಚಕ್ಕೆ ಕುರುಡರಾಗಿರಬಹುದು...ನಿಮ್ಮ ಒಳ ಕಣ್ಣು ಯಾವಾಗಲು ತೆರೆದಿದೆ......ಮುಂದೆ ಒಳ್ಳೆ ದಿನ ಬರುತ್ತದೆ ಅಣ್ಣಾ....ಅಂದೆ.....ಬೇರೆನೂ ಸಹಾಯ ಮಾಡದಷ್ಟು ಅಸಹಾಯಕನಾಗಿದ್ದೆ......ಮಳೆ ಬೀಳುತ್ತಿತ್ತು...!ನನ್ನ ಮತ್ತು ಅವನ ಕಣ್ಣಿನಿಂದ ಬೀಳುತ್ತಿದ್ದ ನೀರು ಅದೇ ಮಳೆ ನೀರಿನ ಜೊತೆ ಬೆರೆತು ಹೋಗುತ್ತಿತ್ತು....!....ಆತನಿಗೆ ಕಣ್ಣಿಲ್ಲ....ಆದರೆ ಕಣ್ಣೀರಿದೆ........
ದೂರದಿಂದ ಹಾಡೊಂದು ಕೇಳತೊಡಗಿತು....."ಮುರಿದು ಬಿದ್ದ ಕೊಳಲು ನಾನು...ನಾದವಿರದು ನನ್ನಲಿ.........ಸುನಾದವಿರದು ನನ್ನಲಿ"......ಅಂತ.
ಆ ನಂತರ ಡಿಗ್ರಿ ಮುಗಿಯುವವರೆಗೂ ಆತನನ್ನು ಭೇಟಿ ಆಗುತ್ತಿದ್ದೆ....ಹತ್ತು ನಿಮಿಷ ಮಾತಾಡಿಸಿ ಬರುತ್ತಿದ್ದೆ........ಮೊನ್ನೆ ಮೈಸೂರಿಗೆ ಹೋದಾಗ ಅಲ್ಲಿ ಹೋಗಿದ್ದೆ...ಅಲ್ಲಿ ಆತ ಇರಲಿಲ್ಲ...ಹೂವು ಮಾರುವವನೂ ಇರಲಿಲ್ಲ..ಅಲ್ಲೀಗ ಕೆಲವು ಕಮರ್ಷಿಯಲ್ ಕಟ್ಟಡಗಳಿದ್ದವು....ಅಲ್ಲೀಗ ದೊಡ್ಡ ಬುಸಿನೆಸ್ ಮಾಡುವ ಮಂದಿ ಇದ್ದರು....!!!!
ಮಾತಾಡಲೂ ಯಾರೂ ಇರಲಿಲ್ಲ.............ಉಳಿದದ್ದು ಆಗಿನ ನೆನಪುಗಳು ಮತ್ತು ಈಗ ಕಾಣುತ್ತಿರುವ ಮಾತೇ ಆಡದ ದೊಡ್ಡ ಬಿಲ್ಡಿಂಗ್ ಗಳು......!?!
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ...ಎನ್ನುತ್ತಾ ಪತ್ರಿಕಾ ಅಭಿಯಾನಕ್ಕೆಂದು ಮೈಸೂರಿಗೆ ಹೋದ ನನಗೆ ಕಾಡಿದ ಹಳೆ ನೆನಪುಗಳಿವು..........
# ಓದಿ ಸಂಪದ ಸಾಲು
ಸ್ನೇಹವೆಂದರೆ ಒಂದು ದಿನಕ್ಕೆ ಮುಗಿದು ಹೋಗುವ ಪ್ರಕ್ರಿಯೆಯಲ್ಲ...ಅದು ಒಂದು ರೀತಿಯ ನಿರಂತರ ಉಸಿರಾಟವಾಗಬೇಕು...ಜಾಸ್ತಿ ಪ್ರೀತಿ,ಸ್ವಲ್ಪ ಕೋಪ,ಹೆಚ್ಚು ಕಾಳಜಿ,ತುಂಬಾ ನಂಬಿಕೆ,ಚೂರು ಅಸೂಹೆ,ಎಂತಹ ಸಂದರ್ಭದಲ್ಲಿಯೂ ನಾನು ಜೊತೆಗಿರುತ್ತೇನೆಂಬ ಆತ್ಮವಿಶ್ವಾಸದ ದೃಷ್ಟಿ,ಆತ ನನ್ನವನು ಕಾಣಯ್ಯ....ಈಕೆ ನನ್ನೋಳು ಕಾಣೆ ಎಂಬಷ್ಟು ಅಟ್ಯಾಚ್ ಮೆಂಟು, ಇದೆಲ್ಲಾ ಸ್ನೇಹದ ಸ್ವಬಾವವಾದರೆ ಅದೇ ನಿಜವಾದ ಸ್ನೇಹ....
ಫೇಸ್ಬುಕ್ ಅಲ್ಲಿ ಪರಿಚಯ ಆಗಿ,ವಾಟ್ಸಪ್ಪಲ್ಲಿ ಆತ್ಮೀಯರಾದಂತೆ ಅನ್ನಿಸಿ..ಕೇವಲ ಲೈಕು ಕಾಮೆಂಟ್ ಮಾಡಲಿಲ್ಲವೆಂದ ಕಾರಣಕ್ಕೆ ಅನ್ ಫ್ರೆಂಡ್ ಆಗಿಬಿಡುವ ಸ್ನೇಹ...ಸ್ನೇಹವಾಗುವುದಿಲ್ಲ......
ಅದಕ್ಕೇ ಹೇಳೋದು...ತೋರಿಕೆಯ ಪ್ರೀತಿ..ಸ್ನೇಹ...ಆತ್ಮೀಯತೆ....ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. .
ಅಮರವಾಗಲಿ ಸ್ನೇಹ...ಉಕ್ಕಿ ಹರಿಯಲಿ ಬಂಧ.. ಎಲ್ಲೆಡೆಯಲ್ಲೂ ಸ್ನೇಹ ಸೌಧ ನಿರ್ಮಾಣವಾಗಲಿ....... ಸ್ನೇಹ ಒಂದೇ ದಿನ ಶುಬಾಷಯದೊಂದಿಗೆ ಮುಗಿಯದಿರಲಿ.....ನೈಜ ಸ್ನೇಹ ಶುರುವಾಗಲಿ..
ಮನುಷ್ಯತ್ವ ಮೇಳೈಸಿದರೆ ಶತ್ರುಗಳ ನಡುವೆಯೂ ಗೆಳೆತನ ಮೂಡುತ್ತದೆ....... ..
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
ಹೃದಯವಂತನಿಗೆ ಹೃದಯಾಘಾತವಾಯಿತೆ!?!?ಮರೆಯಲಾರದ ಮೀಸೆ ರಂಗಣ್ಣ.ಪ್ರತಿಯೊಬ್ಬರನ್ನು ಪ್ರೀತಿಯಿಂದ ಗೌರವಿಸಿ"ನಾನು ಮೀಸೆ ರಂಗಣ್ಣ...ನಮಸ್ಕಾರ ಕಾಣ್ರಿ"ಅಂತ ಕರೆದು ಕಲ್ಲನ್ನೂ ಮಾತಾಡಿಸುತ್ತಿದ್ದ ರಂಗಣ್ಣ ತನ್ನ ಮೀಸೆ ಮೇಲೆ ಅಗಾಧ ಅಭಿಮಾನ ಹೊಂದಿದ್ದರು.ನನ್ನ ಮೀಸೆ ಅಂದ್ರೆ ಡಾ.ರಾಜಕುಮಾರಗೂ ಇಷ್ಟ ಆಗಿತ್ತು ಕಾಣ್ರಿ..ಅಂತ ಆ ಪೋಟೋವನ್ನೇ ತನ್ನ ಮೊಬೈಲ್ ಸ್ಕ್ರೀನ್ ಸೇವರ್ ಮಾಡಿಕೊಂಡಿದ್ರು.. ನನ್ನನ್ನು ಎಲ್ಲಿ ನೋಡಿದ್ರು " ವಾಟ್ ಮಿಷ್ಟರ್ ಯಂಗ್ ಮ್ಯಾನ್"ಅಂತ ಹೆಗಲ ಮೇಲೆ ಕೈ ಹಾಕಿ ಸಂಪದ ಸಾಲು ಚೆನ್ನಾಗಿ ಬರ್ತಿದೆ...ಬೆಳಿಯಪ್ಪ ಚೆನ್ನಾಗಿ...ಅನ್ನುತ್ತಾ ಮೀಸೆ ಮುಟ್ಟಲ್ವಾ?!ಕೇಳುತ್ತಿದ್ದುದು ನೆನಪಾಯ್ತು... ಇಂತ ಹೃದಯವಂತ ಪತ್ರಕರ್ತ ಮೀಸೆ ರಂಗಣ್ಣ ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮನಸ್ಸಿಗ್ಯಾಕೋ ಬೇಸರದ ಛಾಯೆ ಆವರಿಸುತ್ತಿದೆ.....ಒಮ್ಮೆ ಪ್ರೆಸ್ ಕ್ಲಬ್ ಲ್ಲಿ ಕಾಫಿ ಕುಡಿತಾ ಮಾತಾಡ್ತಾ ಇದ್ವಿ.ನನ್ನಪ್ಪಾಜಿ ನಮ್ಮನ್ನಗಲಿದ ದುಃಖ ನನ್ನನ್ನಾವರಿಸಿತ್ತು...ಅದನ್ನು ನಾ ಹೇಳಿದ ತಕ್ಷಣ ಮೀಸೆ ರಂಗಣ್ಣ ತನ್ನ ಧರ್ಮಪತ್ನಿಯನ್ನು ಕಳೆದುಕೊಂಡಿದ್ದನ್ನು ನೆನೆಸಿ ಗದ್ಗದಿತರಾದರು.ನನ್ನ ಕೈ ಹಿಡಿದು ಮಾತಾಡ್ತಾ ಆಕೆ ನನ್ನ ಪಾಲಿನ ಪ್ರೀತಿಯ ದೇವರಾಗಿದ್ದಳು...ಆಕೆ ಇದ್ದಿದ್ದರೆ ಅನ್ನುತ್ತಾ ಕಣ್ಣೀರಿಟ್ಟರು... ನನ್ನ ದುಃಖದ ಜೊತೆ ಅವರ ದುಃಖವೂ ಸೇರುವಂತೆ ಮಾಡಿತ್ತು....
ಅವರು ಪತ್ರಕರ್ತರಾಗಿ ಏನೆಲ್ಲಾ ಬರೆದಿದ್ದಾರೋ?!ನನಗೆ ಗೊತ್ತಿಲ್ಲ.ಆದರೆ ಒಬ್ಬ ಹೃದಯವಂತನಾಗಿ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿಯಾಗಿದ್ದರು.....ಅಂತ ಹೃದಯವಂತನೊಬ್ಬ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ ಎಂಬುದು ನಿಜಕ್ಕೂ ಬೇಸರ...ನಿಮ್ಮ ನೈಜ ಆತ್ಮೀಯತೆಗೆ ನನ್ನದೊಂದು ಸಲಾಂ..ವಿ ಮಿಸ್ ಯು ಮೀಸೆ ರಂಗಣ್ಣ..........
#ಓದಿ ಸಂಪದ ಸಾಲು
ಪ್ರೀತಿಯಿಲ್ಲದ ಜಾತಿವಾದಕ್ಕೆ ಕೊನೆ ಎಂದು?!??!ಸಾಮಾಜಿಕ ತಾಣಗಳು ಜಾತಿ ಧರ್ಮದ ಸಂಘರ್ಷಕ್ಕೆ ಬಲಿಯಾಗುತ್ತಿದೆಯೆ?!ಹೌದು ಅನಿಸುತ್ತಿದೆ ಇತ್ತೀಚಿನ ಕೆಲವು ಬೆಳವಣಿಗೆಗಳು.ಯಾಕೆ ಹೀಗೆ?!ಮಾನವೀಯತೆಯೆ ಸರ್ವಸ್ವ ಎಂಬ ಮನುಜ ಮತ...ವಿಶ್ವ ಪಥಕ್ಕೆ ಸಾಗಬೇಕಾದ ನಾವೆಲ್ಲ ಸಾಗುತ್ತಿರುವುದಾದರೂ ಎಲ್ಲಿ?!ಹಣ ಸಂಸ್ಕ್ರತಿಯೇ ಜಗತ್ತನ್ನಾಳುತ್ತಿರುವಾಗ.. ಬಾವನೆಗಳೆಲ್ಲವೂ ಟಿ ವಿ ಸಿರಿಯಲ್ ಗಳಿಗೆ ಸೀಮಿತವಾಗುತ್ತಿವೆಯೆ?!ಎಲ್ಲಾ ಧರ್ಮವೂ ಹೇಳುವುದು "ಶಾಂತಿಯ ಕ್ರಾಂತಿ ಆಗಬೇಕೆ ವಿನಃ ಕ್ರಾಂತಿಯಿಂದ ಶಾಂತಿ ಸ್ಥಾಪನೆ ಸಾದ್ಯವೇ ಇಲ್ಲ "ಎಂದು.
ಯಾವುದೇ ಧರ್ಮ ಮತ್ತು ಜಾತಿವಾದಗಳಿರಲಿ....ಅದು ಮನೆ ಮತ್ತು ಮನಸ್ಸಿನಲ್ಲಿರಬೇಕು.ಅದನ್ನು ಸಾರ್ವತ್ರಿಕಗೊಳಿಸಿದರೆ ಆಗುವುದು ಸಮರವೇ ವಿನಃ ಶಾಂತಿ ಅಲ್ಲ.ಏಕೆಂದರೆ ಪ್ರತಿಯೊಬ್ಬ ಹೆತ್ತವರಿಗೂ ತಮ್ಮ ಹೆಗ್ಗಣ ಮುದ್ದು ಅಲ್ಲವೇ?!
ಜಾಗತೀಕರಣದ ನಂತರದ ಕಾಲಗಟ್ಟದಲ್ಲೂ ನೆಡೆಯುವ ಇಂತಹ ಜಾತಿವಾದ ಮತ್ತು ಧರ್ಮ ಸಂಘರ್ಷ ಕೊನೆಗೊಳ್ಳಲಿ....ಕಾನೂನುಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸರ್ಕಾರ ಮತ್ತು ಅಧಿಕಾರಿಗಳು ಪಕ್ಷಬೇದ ಮರೆತು..ಧರ್ಮ ಬೇದ ಮರೆತು ಕ್ರಮ ತೆಗೆದುಕೊಳ್ಳಬೇಕು..ಅದನ್ನು ಬಿಟ್ಟು ತಪ್ಪು ಮಾಡದವರನ್ನೂ ಶಿಕ್ಷಿಸುವ ಗೊಡವೆಗೆ ಹೋಗಬಾರದು..ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕೆ ವಿನಃ ಕಾಮೆಂಟ್ ಹಾಕುವವರಿಗೆಲ್ಲಾ ಗುಂಡಾ ಕಾಯ್ದೆ ಹಾಕಿ ಅದೆನೋ ಸಾಧಿಸಿದೆವು ಎಂದುಕೊಂಡರೆ ಅದು ಸಾಮಾಜಿಕ ಸಾಮರಸ್ಯಕ್ಕೆ ಕೊಡಲಿಪೆಟ್ಟು ನೀಡಿದಂತಾಗುತ್ತದೆ.
"ಇಸಂ"ಗಳೇ ತುಂಬಿರುವ ನಿರ್ಧಾರಗಳು.."ಜೀವನಪ್ರೀತಿ"ಇಲ್ಲದ ಧರ್ಮ ಪ್ರಭೋದನೆ ...ಮಾನವೀಯ ಮೌಲ್ಯಗಳೇ ಇಲ್ಲದ ಆಚರಣೆ....ಬದ್ದತೆಯೇ ಇಲ್ಲದ ಆಡಳಿತ ವ್ಯವಸ್ಥೆ.....ಸಾಮಾನ್ಯಜ್ಞಾನವೂ ಇಲ್ಲದ ಅಧಿಕಾರಿವರ್ಗ......ಒಂದು ಕಣ್ಣಿಗೆ ಸುಣ್ಣ.. ಇನ್ನೊಂದು ಕಣ್ಣಿಗೆ ಬೆಣ್ಣೆ ಮಾಡುವ ನ್ಯಾಯ ವ್ಯವಸ್ಥೆ.....ಪಾಸಿಟೀವ್ ಕಲ್ಪನೆ ಇಲ್ಲದ ಮಾಧ್ಯಮಗಳು....ಇನ್ನೊಬ್ಬರನ್ನು ನೆಗೆಟಿವ್ ಆಗಿಯೆ ನೋಡುವ ದೃಷ್ಟಿಕೋನ....ಕಂಡ ಕಂಡವರ ಬಗ್ಗೆ ಕೆಟ್ಟದಾಗಿ ಮಾತಾಡುವ ಸ್ವಭಾವ......!....
ಇದೆಲ್ಲವೂ ವ್ಯವಸ್ಥೆ ಮತ್ತು ಬದುಕನ್ನು ಕೆಡಗುತ್ತದೆಯೇ ವಿನಃ ಬದುಕು ಮತ್ತು ವ್ಯವಸ್ಥೆಯನ್ನು ಕಟ್ಟುವುದಿಲ್ಲ .
ಬೇಕಿದೆ....ಪ್ರೀತಿ ತುಂಬಿದ ಜಾತಿವಾದ.....
ಬೇಕಿದೆ..... ಶಾಂತಿಯ ಕ್ರಾಂತಿ ...
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
ಒಂದು ಕೊಳವೆ ಬಾವಿ ಇಡೀ ಬದುಕನ್ನು ಕೊಲ್ಲದಿರಲಿ.....!?!?!?ಮಗುವೊಂದು ಕೊಳವೆ ಬಾವಿಗೆ ಅಚಾನಕ್ಕಾಗಿ ಬೀಳುತ್ತದೆ!?!.ಬ್ರೇಕಿಂಗ್ ನ್ಯೂಸ್ ಅಲ್ಲಿ ಶುರುವಾಗುವ ಸುದ್ದಿ ಆ ಮಗುವಿನ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ....ಸರ್ಕಾರ ಮತ್ತು ಅಧಿಕಾರಿಗಳು ನಿದ್ದೆಯಿಂದ ದಿಡೀರ್ ಅಂತ ಎದ್ದಂತೆ ಕೆಲಸ ಮಾಡುತ್ತಾರೆ...ಆಮ್ಲಜನಕ ನೀರು ಅಹಾರದ ಕೊರತೆಯಿಂದ ಬಿದ್ದ ಮಗು ಬದುಕುವುದು ತುಂಬಾ ಕಷ್ಟ...ಆದರೂ ಮಾದ್ಯಮಗಳು ಮತ್ತು ಜನರ ಕಣ್ಣು ಮುಚ್ಚಿಸುವ ಸಲುವಾಗಿ ಕಾರ್ಯಾಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಈ ಟಿವಿ ಮಾದ್ಯಮಗಳು ಮಾಡುವ ತಪ್ಪೇನು ಗೊತ್ತಾ?!ಜೆಸಿಬಿ ಡ್ರೈವರನಿಂದ ಹಿಡಿದು ಕೊಳವೆ ಬಾವಿ ಅಂದರೆ ಏನೆಂದೇ ಗೊತ್ತಿಲ್ಲದವರ ಬಳಿಯೂ ಅರ್ಥವೇ ಇಲ್ಲದ ಪ್ರಶ್ನೆ ಕೇಳುವುದು.. ಶ್ರದ್ದೆಯಿಂದ ಸುರಂಗ ತೋಡುವವನ ಬಳಿ ಎಷ್ಟು ಅಡಿ ತೋಡಿದರು?! ಎಂದು ನಿಮಿಷಕ್ಕೊಂದು ಬಾರಿ ಪ್ರಶ್ನೆ ಕೇಳುವುದು....ಮತ್ತು ಗೊತ್ತಿಲ್ಲದ ವಿಷಯಗಳನ್ನು ಗೊತ್ತಿದ್ದಂತೆ ಹೇಳಿಬಿಡುವುದು....
ಸರಿ..ಕಾರ್ಯಾಚರಣೆ ಯಶಸ್ವಿಯಾಗಿ ಮಗು ಬದುಕಿ ಬಂದರೆ ಬಹಳ ಸಂತೋಷ...ಮಗು ಬದುಕಲಿಲ್ಲವಾದರೆ ಆ ರೈತನ ಹೊಲಗಳಲ್ಲೆಲ್ಲಾ ಸುರಂಗ ತೋಡಿ ಆತನ ಬದುಕಿನ ಆದಾಯವೇ ಇಲ್ಲದಂತಾಗುವ ಆತನ ಪರಿಸ್ತಿತಿಯನ್ನು ಯಾರೂ ಯೋಚಿಸುವುದಿಲ್ಲ....ಆ ರೈತನ ಸ್ಥಿತಿ "ಹೋದ ಕಣ್ಣು ಹೋಯತಣ್ಣ..ಇದ್ದ ಕಣ್ಣು ವಿನಾಶ"ವಾದಂತೆ ಮಗುವೂ ಇಲ್ಲ..ಹೊಲವೂ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ.
ನಾವೆಲ್ಲಾ ಪುಕ್ಸಟ್ಟೆ ಸಲಹೆ ನೀಡಬಹುದು...ಏನು ಬೇಕಾದರೂ ವಿಶ್ಲೇಷಣೆ ಮಾಡಬಹುದು...ಸರ್ಕಾರವೂ ಒಮ್ಮೆ ಸಹಾಯ ಮಾಡಿಬಿಡಬಹುದು...ಆದರೆ ಸಮಸ್ಯೆಯನ್ನು ಅನುಭವಿಸುವವನು ಅದೇ ರೈತ ಅಲ್ಲವೇ?!
ಕಾರ್ಯಾಚರಣೆ ಮಾಡಿದ್ದು ಸರಿ...ಅಗೆದ ಮಣ್ಣನ್ನು ಮತ್ತೆ ತುಂಬಿ ಕೊಡಬೇಕು ಇಲ್ಲವೇ ಆತನಿಗೆ ಬೇರೆ ಹೊಲ ಕೊಡಬೇಕು...ಇಲ್ಲದಿದ್ದರೆ ಬಾಗಲಕೋಟೆಯ ಸೂಳಿಕೆರಿಯ ರೈತನ ಬದುಕು ನಾಶವಾಗುತ್ತದೆ.
ಇನ್ನೊಂದು, ಸಣ್ಣ ವಿಷಯವಾದರೂ ಮಹತ್ವದ್ದು..ನಮಗೆ ಕಾಣುವ ಯಾವುದೇ ಕೊಳವೆ ಬಾವಿ ತೆರೆದಿದ್ದರೆ ಕೂಡಲೇ ಸರ್ಕಾರಕ್ಕೆ ಕಾಯದೇ ನಾವೇ ಮುಚ್ಚುವುದು....ಹಾಗು ಕೊಳವೆ ಬಾವಿ ಮುಚ್ಚುವುದೇ ಪ್ರಚಾರದ ಸರಕಾಗದಂತೆ ನೋಡಿಕೊಳ್ಳುವುದು...ಮತ್ತು ನೀರು ಬಾರದ ಬೋರ್ ವೆಲ್ ಅನ್ನು ಆ ಕಂಪನಿಯೇ ಮುಚ್ಚುವುದು ಕಡ್ಡಾಯವಾಗಬೇಕು.
"ಹೋದವರು ಹೋದರು..ಇದ್ದವರು ಸಾಯಬಾರದು" .ಕಂಡ ಕಂಡಲ್ಲಿ ಕೊಳವೆಬಾವಿ ಕೊರೆಯುವುದೇ ಅಂತರ್ಜಲದ ಕುಸಿತಕ್ಕೆ ಕಾರಣ ಎನ್ನುವುದನ್ನು ನೆನಪಿಡಬೇಕು...
ಕೊಳವೆ ಬಾವಿ ತೆರೆದಿಟ್ಟು. ಇನ್ಯಾರೋ ಬಿದ್ದು....ವಾರಗಟ್ಟಲೆ ಕಾರ್ಯಾಚರಣೆ ಮಾಡಿ...ಪ್ರತಿಕ್ಷಣವೂ ಬ್ರೇಕಿಂಗ್ ನ್ಯೂಸ್ ಆಗಿ....ಸರ್ಕಾರ ಮತ್ತು ಅಧಿಕಾರಿಗಳು ಒಮ್ಮೆಲೆ ಬ್ಯಾಟ್ರಿ ಚಾರ್ಜ್ ಆದವರಂತೆ ಕುಣಿದಾಡಿ....ಜನಗಳೆಲ್ಲಾ ಮರುಗಿ.... ಮತ್ತದೇ ರಾಗ...ಮತ್ತದೇ ತಾಳ...ಮತ್ತದೇ ಗೋಳು ಆಗದಿರಲಿ.......ಮುಗ್ದ ಮಕ್ಕಳು.... ಮತ್ತವರ ಕುಟುಂಬದವರ ಬದುಕು ನಾಶವಾಗದಿರಲಿ......ನೊಂದವರಿಗೆ ನೆಮ್ಮದಿ ಸಿಗಲಿ
"ಬದಲಾವಣೆ ಬರಲಿ ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
ನೊಂದವರಿಗೆ ನೆಮ್ಮದಿ ಸಿಗಲಿ....ನನ್ನ ಆತ್ಮೀಯರಲ್ಲೊಬ್ಬರಾದ ಸಚಿವ ಎಸ್ ಆರ್ ಪಾಟೀಲ್ ಅವರೊಂದಿಗೆ ಮಾತಾಡಿದೆ....ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಪಾಟೀಲ್ ಅವರ ಹತ್ತಿರ ಸೂಳಿಕೇರಿಯ ರೈತ ಹನುಮಂತ ಹಟ್ಟಿಯವರ ಮಗ ಕೊಳವೆ ಬಾವಿಗೆ ಬಿದ್ದದ್ದು...ಕಾರ್ಯಾಚರಣೆ ನೆಡೆಸಿದ್ದು...ಸುರಂಗ ತೋಡಿದ್ದು....ರೋಬೋ ತರಿಸಿದ್ದು ಎಲ್ಲಾ ವಿಚಾರ ಮಾತಾಡಿದೆವು...ಆ ರೈತನ ಮಗ ತಿಮ್ಮಣ್ಣನನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೀವಿ...ದೇವರ ಕೃಪೆ ಇದ್ದರೆ ಮಗು ಬದುಕುತ್ತದೆ ಎಂದರು...ಅದೇ ಸಂದರ್ಭದಲ್ಲಿ ನಾ ಅವರಿಗೆ ಹೇಳಿದೆ...ದಯವಿಟ್ಟು ಆ ರೈತನ ಹೊಲವನ್ನು ಮೊದಲಿನಂತೆ ಮಾಡಬೇಕಾದ ಜವಬ್ದಾರಿ ತಮ್ಮದಿದೆ..ಹಾಗು ಆ ರೈತನ ಆರ್ಥಿಕ ಸಂಕಷ್ಟಕ್ಕೂ ತಾವು ಸಹಕರಿಸಬೇಕು..ಮತ್ತು ಆ ವ್ಯಕ್ತಿಗೆ ನೈತಿಕವಾದ ಬೆಂಬಲ ನೀಡಬೇಕು ಸಾರ್ ಅಂದೆ....ಸಂಪಾ ಅವರೆ ನೀವು ಹೇಳಿದ ಸಲಹೆ ಸೂಕ್ತವಾದದ್ದು...ಖಂಡಿತಾ ಆ ಹೊಲವನ್ನು ಮೊದಲಿನಂತೆ ಮಾಡಿಕೊಡುತ್ತೇವೆ..ಮತ್ತು ಆ ರೈತನ ಆರ್ಥಿಕ ಸಂಕಷ್ಟಕ್ಕೆ ಜೊತೆಯಾಗಿರ್ತೇನೆ ಅಂದ್ರು...ಒಬ್ಬ ನಾಯಕನಾದವನಿಗೆ ಸ್ಪಂದನೆಯ ಗುಣ ಇರಬೇಕು..ಮತ್ತು ಭರವಸೆಗೆ ಮೀಸಲಾಗದೆ ಕೆಲಸ ಮಾಡಬೇಕು ಹಾಗು ನಂಬಿದವರ ರಕ್ಷಣೆ ಆಗಬೇಕು.ಅವರಿಗೆ ಸಹಕಾರಿಯಾಗಿ ನಿಲ್ಲಬೇಕೆಂಬ ಬದ್ದತೆಯನ್ನು ಸಚಿವರಾದ ಎಸ್ ಆರ್ ಪಾಟೀಲ್ ಪ್ರದರ್ಶಿಸುತ್ತಾರೆಂಬ ನಂಬಿಕೆ ಇದೆ....ಮತ್ತು ಆ ಶಕ್ತಿಯೂ ಅವರಿಗಿದೆ.
ಅವರ ಒಳ್ಳೆಯ ಕೆಲಸಕ್ಕೆ ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಬೆಂಬಲ ವ್ಯಕ್ತ ಪಡಿಸುತ್ತಾ ಅವರಿಗೆ ಶುಭ ಹಾರೈಸುತ್ತದೆ..... .ರೈತನ ಬದುಕು ಹಸನಾಗಲಿ...ನೊಂದವರಿಗೆ ನೆಮ್ಮದಿ ಸಿಗಲಿ.......
ನೀವಿದನ್ನು ಶೇರ್ ಮಾಡಲೇಬೇಕು....ನೀರು ಉಳಿಸಿ... ಬದುಕು ಬೆಳೆಸಿ....
ಕೊಳವೆ ಬಾವಿ ಮುಚ್ಚುವುದರ ಬದಲು ಅದನ್ನು ಅಂತರ್ಜಲದ ವೃದ್ದಿಯಾಗುವಂತೆ ಮಾಡಬಹುದು
# ವೆಂಕಟೇಶ ಸಂಪ
ತೆರೆದ ಬೋರ್ ವೆಲ್ ನಲ್ಲಿ ನೀರು ಬರಲಿಲ್ಲ ಎಂದ ಕಾರಣಕ್ಕೆ ಅದನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ.ಎಲ್ಲಾ ಟಿ ವಿ ಮಾಧ್ಯಮಗಳು ಕಂಡ ಕಂಡ ಕೊಳವೆ ಬಾವಿ ಮುಚ್ಚಿಸಿ ಅದೇ ಸಾಧನೆ ಅಂದುಬಿಡಬಹುದು...ಸರ್ಕಾರವೂ ಕೊಳವೆ ಬಾವಿ ಮುಚ್ಚಲು ಲಕ್ಷಾಂತರ ವ್ಯಯಿಸಬಹುದು....ಸಂಘಟನೆಗಳು ಕಲ್ಲು ಮುಚ್ಚಿ ಸುಮ್ಮನಾಗಬಹುದು....ಆದರೆ ಪಾಳು ಬಿದ್ದ ಬೋರ್ ವೆಲ್ ನ್ನು ಮುಚ್ಚುವುದೊಂದೇ ಅದಕ್ಕೆ ಪರಿಹಾರವಲ್ಲ..ಅದನ್ನೇ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧನವಾಗಿ ಬಳಸಬಹುದು..ನಿಮಗೆ ತಿಳಿದಿರಲಿ...ಭೂಮಿಯಲ್ಲಿನ ಅಂತರ್ಜಲ ಕುಸಿಯಲು ಕಾರಣವಾದದ್ದು ಇದೇ ಬೊರವೆಲ್ ಗಳು....ಅದೇ ಹಾಳು ಬಿದ್ದ ಬೋರವೆಲ್ ಗಳನ್ನು ಭೂಮಿಗೆ ನೀರು ತುಂಬಿಸುವ ಸಾಧನವಾಗಿ ಬಲಸಬಹುದೆಂದು ಯಾರು ಯೋಚಿಸಲಿಲ್ಲ....ಆಕಾಶದಲ್ಲಿ ಅರಮನೆ ಕಟ್ಟುವವರು ಮೊದಲು ಭೂಮಿಯಲ್ಲಿ ಗುಡಿಸಲು ಕಟ್ಟಿರಬೇಕು ಎಂದು..ಏಕೆಂದರೆ ಮಾದ್ಯಮಗಳು ಮತ್ತು ಜನ ಕೂಗಿದ ತಕ್ಷಣ ಸರ್ಕಾರ ಎಲ್ಲಾ ಕೊಳವೆ ಬಾವಿ ಮುಚ್ಚಿಸಬೇಕೆಂದು ನಿರ್ದೇಶನ ಕೊಟ್ಟರು....ಅದೇ ಈ ಮುಖ್ಯಮಂತ್ರಿಗಳು...ಸಚಿವರು...ಅಧಿಕಾರುಗಳು....ಮಾದ್ಯಮಗಳು ಸಾಮಾನ್ಯ ಜ್ಞಾನ ಉಪಯೋಗಿಸಬಹುದಿತ್ತು!?...ನೀರು ಬಾರದ ಕೊಳವೆ ಬಾವಿಯನ್ನು ಹೇಗೆ ಅಂತರ್ಜಲ ಹೆಚ್ಚಿಸುವ ಸಾಧನವಾಗಿಸಬಹುದು....ಈ ಲೇಖನ ಪೂರ್ತಿ ಓದಿದರೆ ತಿಳಿಯುತ್ತದೆ.
ನಮ್ಮ ಸಂಪದ ಸಾಲು ಪತ್ರಿಕಾ ಬಳಗ ಮತ್ತು ಸಂಪದ ಜನ ಜಾಗೃತಿ ಬಳಗದ ವತಿಯಿಂದ ಅಂತರ್ಜಲ ಹೆಚ್ಚಳಕ್ಕೆ ಬೇರೆ ಬೇರೆ ತೆರನಾದ ಕೆಲಸ ಮಾಡುತ್ತಿದ್ದೇವೆ...
ಇವತ್ತು ಬೆಳಿಗ್ಗೆ ಎಂಟು ಗಂಟೆಗೆ ವ್ಯಕ್ತಿಯೊಬ್ಬ ಕರೆ ಮಾಡಿದ...ಅಣ್ಣಾ ಇಲ್ಲೊಂದು ನೀರು ಬಾರದ ಕೊಳವೆ ಬಾವಿ ಇದೆ..ನೀವು ಬನ್ನಿ..ವಿಡಿಯೋ ಮಾಡ್ಕೊಳ್ಳಿ...ಎಲ್ಲಾ ಟಿವಿ ಗಳಿಗೆ ಪೋನ್ ಮಾಡಿದೆ.ಯಾರು ಪೋನ್ ಎತ್ತಲಿಲ್ಲ...ದಯವಿಟ್ಟು ಬನ್ನಿ ಅಂದರು.....ಅದೀಗ ತಾನೆ ಬೆಳಗಾಗಿತ್ತು ನನಗೆ...ಅಣ್ಣಾ ಖಂಡಿತ ಬರ್ತಿನಿ...ನಾ ಬರುವವರೆಗೆ ಮುಚ್ಚಬೇಡ ಅಂದೆ.....ನನ್ನ ಆತ್ನೀಯರಾದ ಸೂರ್ಯನಾರಯಣ್ ಅವರನ್ನು ಕರೆದುಕೊಂಡು ಕಾರಲ್ಲಿ ಅಲ್ಲಿ ಹೋದೆ. ನನ್ನನ್ನು ನೋಡಿದ ಅಲ್ಲಿಯ ಜನ ದೊಡ್ಡ ದೊಡ್ಡ ಕಲ್ಲು ಹಿಡಿದು ಅದನ್ನು ಮುಚ್ಚಿಸಲು ಹೊರಟ್ರು.....ಎಲ್ಲಾ ಬನ್ನಿ ಅಣ್ಣಾ ಅಂತ...ಒಟ್ಟಿಗೆ ಅಲ್ಲೇ ಮೀಟಿಂಗ್ ಗೆ ಕೂತೆವು.ನಾ ಹೇಳಿದೆ.ಈ ಕೊಳವೆ ಬಾವಿ ಮುಚ್ಚೋದು ಬೇಡ..ಇದನ್ನೇ ಇಂಗು ಗುಂಡಿ ಮಾಡೋಣ..ನಾಲ್ಕು ಇಂಚಿನ ಎರಡು ಪೈಪು..ಮತ್ತು ಒಂದು ಬೆಂಡು ಹಾಗು ರೆಡ್ಯೂಸರ್ ಪೈಪು ಹಾಗು ಒಂದು ಚಿಕ್ಕ ಫಿಲ್ಟರ್ ತನ್ನಿ ಅಂದೆ... ನಾವು ಕಾಫಿ ಕುಡ್ಯೋ ಹೊತ್ತಿಗೆ...ಅಂತರ್ಜಲದ ಹೆಚ್ಚಿಸುವ ಬಗ್ಗೆ ಅದರ ಮಹತ್ವದ ಬಗ್ಗೆ ತಿಳಿಸಿದೆ....ಆ ಪೈಪ್ ಗಳನ್ನು ತಂದ ವ್ಯಕ್ತಿ....ಬೋರ್ ಪಾಯಂಟ್ ಹತ್ರ ಕಳೆ ಸವರಿಸಿ..ಕ್ಲೀನ್ ಮಾಡಿಸಿದೆವು....ಆ ಇಪ್ಪತ್ತು ಅಡಿ ಪೈಪ್ ಕೆಳಗೆ ಇಳಿಸಿದೆವು..ಎರಡನೆ ಪೈಪು ಸ್ವಲ್ಪ ಮಾತ್ರ....ಹೋಯ್ತು....ಭೂಮಿಯ ಅಳತೆಗೆ ಅದನ್ನು ಕೊಯ್ಡು ಬೆಂಡ್ ಹಾಕಿದೆವು. ಆ ನಂತರ ರೆಡ್ಯೂಸರ್ ಪೈಪ್ ಹಾಕಿ...ಸಣ್ಣ ಪೈಪ್ ಅದಕ್ಕೆ ಜಾಯಂಟ್ ಮಾಡಿದೆವು...ಹಾಗು ಆ ಪೈಪಿನ ಒಳಗೆ ಮಳೆ ನೀರು ಹೋಗುವಂತೆ ಮಾಡಿ ಆ ನೀರನ್ನು ಭೂಮಿಗೆ ಇಂಗಿಸಲು ವ್ಯವಸ್ಥೆ ಮಾಡಿದೆವು....ಇನ್ನು ಸ್ವಲ್ಪ ಗ್ಯಾಪ್ ಇತ್ತು..ಗುದ್ದಲಿಯಿಂದ ಮಣ್ಣು ತುಂಬಿದರು.ಎಲ್ಲೋ ಹರಿದು ಸಮುದ್ರ ಸೇರಿ ವ್ಯರ್ಥ ವಾಗುವ ನೀರು ನಮ್ಮದೇ ಹೊಲದಲ್ಲಿ ಇಂಗಿತು ಎಂಬ ಖುಶಿ ಎಲ್ಲರ ಮುಖದಲ್ಲಿ ಮೂಡಿತು..
ಅಂತರ್ಜಲ ಹೆಚ್ಚಿಸಲು ಸರ್ಕಾರ ಎನೇನೋ ಯೋಜನೆ ಅನ್ನುತ್ತದೆ...ಆದರೆ ಇಷ್ಟು ಸರಳವಾದ ಕ್ರಮ ಇದ್ದರೂ ಯಾರು ಅನುಸರಿಸದೇ ಇರುವುದು ವಿಪರ್ಯಾಸ. . ಈ ವಾರದಲ್ಲಿ ಸಾವಿರಾರು ಕೊಳವೆ ಬಾವಿ ಮುಚ್ಚಿಸಿರಬಹುದು.....ಅದೆಲ್ಲವನ್ನು ಇಂಗುಗುಂಡಿಯಾಗಿ ಬದಲಾಯಿಸಿದ್ದರೆ ಬಹುಶಃ ಅಂತರ್ಜಲ ಮಟ್ಟ ಎಷ್ಟು ಏರುತ್ತಿತ್ತು ಎಂಬುದನ್ನು ನೆನಪಿಡಿ.....ಮುಚ್ಚುವುದಷ್ಟೇ ಪರಿಹಾರವಲ್ಲ...ಅದನ್ನು ಪಾಸಿಟಿವ್ ಆಗಿ ಪರಿವರ್ತಿಸುವುದೇ ಬುದ್ದಿವಂತಿಕೆ ಮತ್ತು ಅತ್ಯವಶ್ಯ.....ಸರ್ಕಾರ...ಟಿವಿ ಮಾದ್ಯಮಗಳು..ಅಧಿಕಾರಿಗಳು.ಸಂಬಂದ ಪಟ್ಟವರು ಇನ್ನಾದರೂ ಸಾಮಾನ್ಯ ಜ್ಞಾನ ಬಳಸಿ ಕೆಲಸ ಮಾಡಲಿ...ಅದಕ್ಕೇ ಹೇಳಿದ್ದು...."ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದಸಾಲು ಪತ್ರಿಕಾ ಅಭಿಯಾನ."ಅಂತ..
ಇನ್ನು ತೆರೆದ ಬಾವಿಗಳಿಗೆ ಮಳೆ ನೀರು ಇಂಗುವಂತೆ ಮಾಡೋಣ ... ಎಲ್ಲಾ ಕೊಳವೆ ಬಾವಿಗಳನ್ನು ಇಂಗು ಗುಂಡಿಗಳಾಗಿ ಬದಲಾಯಿಸಿ ಅದನ್ನು ಮೇಲಿಂದ ಮುಚ್ಚೋಣ..ಯಾವ ಮಗುವು ಕೊಳವೆ ಬಾವಿಗೆ ಬೀಳಬಾರದು...ಹಾಗು ಕಡಿಮೆ ಹಣದಲ್ಲಿ ಹೆಚ್ಚು ನೀರನ್ನು ಭೂಮಿಗೆ ಇಂಗಿಸಿ ಅಂತರ್ಜಲ ಏರಿಸಿದ ಕೀರ್ತಿ ನಮಗೆ ಸಲ್ಲುತ್ತದೆ....ಇನ್ನೇಕೆ ತಡ....ಇದನ್ನು ಎಲ್ಲರಿಗೂ ತಲುಪುವಂತೆ ಶೇರ್ ಮಾಡಿ.......
ಪರೀಕ್ಷೆಯಲ್ಲಿ ಪಾಸಾಗುವುದಷ್ಟೇ ವಿದ್ಯಾಬ್ಯಾಸದ ಉದ್ದೇಶವಲ್ಲ.ಈ ಕಾರಣಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಜನ ಜಾಗೃತಿ ಬಳಗದ ವತಿಯಿಂದ "ಕಲಿಕೆಯ ಜೊತೆ ಗಳಿಕೆಯ ದಾರಿ" ಎಂಬ ಕಾರ್ಯಕ್ರಮ ಇಂದು ಶಿವಮೊಗ್ಗ ಜಿಲ್ಲೆ ಹೊಸನಗರದ ಚಿಕ್ಕಜೇನಿಯಲ್ಲಿ ಜರುಗಿತು.ಜೊತೆಯಲ್ಲಿ ಶಿಕ್ಷಣ ತಜ್ಞ ದೇವೇಂದ್ರ ಬೆಳೆಯೂರು ಇದ್ದಾರೆ........