Monday, October 19, 2026

ಪತ್ರಕರ್ತ ವೆಂಕಟೇಶ ಎಸ್ ಸಂಪ ಅವರಿಗೆ ಪ್ರತಿಷ್ಠಿತ ‘ಇಂಟರ್‌ನ್ಯಾಷನಲ್ ನೋಬ್ಲರ್ ಅವಾರ್ಡ್–2026’

ಪತ್ರಕರ್ತ ವೆಂಕಟೇಶ ಎಸ್ ಸಂಪ ಅವರಿಗೆ  ಪ್ರತಿಷ್ಠಿತ ‘ಇಂಟರ್‌ನ್ಯಾಷನಲ್ ನೋಬ್ಲರ್ ಅವಾರ್ಡ್–2026’ 

ಪತ್ರಕರ್ತ,ಸಂಪದ ಸಾಲು ಪತ್ರಿಕೆ  ಸಂಪಾದಕರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ ಗರಿ; ಅಕ್ಟೋಬರ್‌ 25 ರಂದು  ಗೋವಾದಲ್ಲಿ ಪ್ರಶಸ್ತಿ ಪ್ರದಾನ


 ಕಳೆದ ಎರಡು ದಶಕಗಳಿಂದ ಧನಾತ್ಮಕ ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪತ್ರಕರ್ತ ಹಾಗೂ ‘ಸಂಪದ ಸಾಲು’ ಪತ್ರಿಕೆಯ ಸಂಪಾದಕ ವೆಂಕಟೇಶ ಎಸ್ ಸಂಪ ಅವರಿಗೆ ಮತ್ತೊಂದು ಪ್ರತಿಷ್ಠಿತ ಗೌರವ ಲಭಿಸಲಿದೆ. ಜಿಎಸ್ ಹೈ-ಟೆಕ್ ಸೊಲ್ಯೂಷನ್ಸ್ (GS High-Tech Solutions) ಸಂಸ್ಥೆ ಮತ್ತು ಕನ್ನಡ ಸ್ನೇಹ ಬಳಗ ನೀಡುವ ‘ಇಂಟರ್‌ನ್ಯಾಷನಲ್ ನೋಬ್ಲರ್ ಅವಾರ್ಡ್–2026’ ಅನ್ನು 2026ರ ಅಕ್ಟೋಬರ್‌ 25 ರಂದು ಗೋವಾದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘಟಕ ಮತ್ತು ಉದ್ಯಮಿ ಡಾ.ಜಿ. ಶಿವಣ್ಣ ತಿಳಿಸಿದ್ದಾರೆ.

ಈಗಾಗಲೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯ ಪ್ರಶಸ್ತಿ,ಕೇಂದ್ರ ಸರ್ಕಾರದ ಸಹಯೋಗದ ಡಾ. ಎ.ಪಿ. ಜೆ ಅಬ್ದುಲ್ ಕಲಾಂ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಗೌರವಗಳಿಗೆ  ಭಾಜನರಾಗಿರುವ ವೆಂಕಟೇಶ ಎಸ್ ಸಂಪ ಅವರಿಗೆ ಮತ್ತೊಂದು ಪ್ರಶಸ್ತಿ ಘೋಷಣೆಯಾಗಿರುವುದು ಅವರ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದ ಸಾಧನೆಗೆ ಸಂದ ಗೌರವವೆಂದು ಪರಿಗಣಿಸಲಾಗಿದೆ.

20 ವರ್ಷಗಳ ಧನಾತ್ಮಕ ಪತ್ರಿಕೋದ್ಯಮದ ಪಯಣ
ವೆಂಕಟೇಶ ಎಸ್ ಸಂಪ ಅವರು ಕಳೆದ 20 ವರ್ಷಗಳಿಂದ ‘ಸಂಪದ ಸಾಲು’ ಎಂಬ ಧನಾತ್ಮಕ ಕನ್ನಡ ಪತ್ರಿಕೆಯನ್ನು ನಿರಂತರವಾಗಿ ಮುನ್ನಡೆಸುತ್ತಿದ್ದಾರೆ. ಸಮಾಜಮುಖಿ ಚಿಂತನೆ, ಯುವಜನರಿಗೆ ಪ್ರೇರಣೆ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಹಾಗೂ ಸಕಾರಾತ್ಮಕ ಬದಲಾವಣೆಯ ಆಶಯಗಳನ್ನು ತಮ್ಮ ಬರಹಗಳ ಮೂಲಕ ಓದುಗರಿಗೆ ತಲುಪಿಸುತ್ತಿದ್ದಾರೆ.

ಅವರ ಸಾವಿರಾರು ಲೇಖನಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಸಂಪದ ಸಾಲು’ ಪತ್ರಿಕೆಯ ಸಂಪಾದಕೀಯಗಳ ಮೂಲಕವೂ ಸಾಮಾಜಿಕ ಸಮಸ್ಯೆಗಳು, ಬದುಕಿನ ಮೌಲ್ಯಗಳು, ಯುವಜನರ ಭವಿಷ್ಯ ಹಾಗೂ ಸಮಾಜದ ಪ್ರಗತಿಯ ಕುರಿತು ತಮ್ಮದೇ ಆದ ವಿಶಿಷ್ಟ ಚಿಂತನೆಗಳನ್ನು ಮಂಡಿಸಿದ್ದಾರೆ. ಹತ್ತಾರು ಪತ್ರಿಕೆಗಳಲ್ಲಿ ಪ್ರಕಟವಾಗುವ ಅವರ ಅಂಕಣ ಬರಹಗಳು  ಓದುಗರಲ್ಲಿ ಜನಪ್ರಿಯತೆಯನ್ನು ಗಳಿಸಿವೆ.

ಪತ್ರಿಕೋದ್ಯಮದಾಚೆಗೂ ವಿಸ್ತರಿಸಿದ ಸಾಧನೆ

ಮುದ್ರಣ ಮಾಧ್ಯಮದ ಜೊತೆಗೆ ರೇಡಿಯೋ ಮತ್ತು ದೂರದರ್ಶನ ಕ್ಷೇತ್ರಗಳಲ್ಲಿಯೂ ವೆಂಕಟೇಶ ಎಸ್ ಸಂಪ ತಮ್ಮ ಛಾಪು ಮೂಡಿಸಿದ್ದಾರೆ. ನೂರಾರು ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಅವರು, ವಿವಿಧ ಟಿವಿ ಚಾನೆಲ್‌ಗಳ ಚರ್ಚಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿಯೂ ನಟಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಅವರ ಹಲವು ಕವಿತೆಗಳು ಹಾಡಿನ ರೂಪದಲ್ಲಿ ಪ್ರಸಾರವಾಗಿದ್ದು ಕೇಳುಗರ ಮನಗೆದ್ದಿದೆ.

ಎಂಬಿಎ ಪದವೀಧರರಾಗಿರುವ ಅವರು ಕೃಷಿಯಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದು, ವಿವಿಧ ಮಿಶ್ರ ಬೆಳೆಗಳ ಕೃಷಿ ಹಾಗೂ ಸಾವಯವ ಕೃಷಿಯ ಮೂಲಕ ಸ್ವಾವಲಂಬಿ ಬದುಕಿನ ಮಹತ್ವವನ್ನು ಸಾರುತ್ತಿದ್ದಾರೆ.

ಸಾಮಾಜಿಕ ಜಾಗೃತಿಯೇ ಮುಖ್ಯ ಧ್ಯೇಯ

ರಕ್ತದಾನ, ನೇತ್ರದಾನ, ಪರಿಸರ ಜಾಗೃತಿ ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ಹಲವು ಸಾಮಾಜಿಕ ಅಭಿಯಾನಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಸಂಪದ ಫೌಂಡೇಶನ್ ಫಾರ್ ಪಬ್ಲಿಕ್ ಅವೇರ್ನೆಸ್’ ಸಂಸ್ಥೆಯ ಮೂಲಕ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ.

ಪತ್ರಿಕೋದ್ಯಮವನ್ನು ಕೇವಲ ಸುದ್ದಿಗಳ ಪ್ರಕಟಣೆಗೆ ಸೀಮಿತಗೊಳಿಸದೆ, ಸಮಾಜದಲ್ಲಿ ಜವಾಬ್ದಾರಿಯುತ ಚಿಂತನೆ ಬೆಳೆಸುವ ಹಾಗೂ ಜನರಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿಸುವ ಮಾಧ್ಯಮವನ್ನಾಗಿ ರೂಪಿಸುವುದು ಅವರ ಕಾರ್ಯದ ಪ್ರಮುಖ ಆಶಯವಾಗಿದೆ.

ಪತ್ರಕರ್ತ ವೆಂಕಟೇಶ ಎಸ್ ಸಂಪ ಅವರಿಗೆ “”ನೋಬ್ಲರ್ ಅವಾರ್ಡ್- 2026 ” ಘೋಷಣೆ https://klive.news/2026/10/19/78809/

ವೆಂಕಟೇಶ್ ಎಸ್. ಸಂಪ ಅವರಿಗೆ ಇಂಟರ್ನ್ಯಾಷನಲ್ ನೋಬರ್ ಪ್ರಶಸ್ತಿ — https://ai-vartha.in/venkatesh-s-sampa-international-nobber-award/

https://aimamedia.org/newsdetails.aspx?nid=816346





No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu