Welcome to Sampadasaalu !!!
“ವಿದ್ಯಾನ್ಮಾನ ಮಾಧ್ಯಮಗಳು ಮನೆಯ ಹಜಾರಗಳಲ್ಲಿ ಟಿ.ವಿ ಪರದೆಗಳಲ್ಲಿ ಕಾಣತೊಡಗಿದಾಗ ,ಸಿ.ಡಿ ಗಳು ಬರತೊಡಗಿದಾಗ ಪತ್ರಿಕೆ ,ಪುಸ್ತಕಗಳು ಇನ್ನು ಬೆಳೆಯುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ವಿದ್ಯುನ್ಮಾನ ಮಾಧ್ಯಮಗಳು ಕೆಲಸ ಪ್ರಾರಂಭಿಸಿದ ನಂತರ ಹಿಂದಿಲ್ಲದ ವೇಗದಲ್ಲಿ ಪತ್ರಿಕೆ ಮತ್ತು ಪುಸ್ತಕಗಳ ಪ್ರಕಟಣೆ ಅಧಿಕವಾಗಿದೆ. ತತ್ಕಾಲದ ತೀರ್ಮಾನ ಸುಳ್ಳಾಗಿದೆ.ಇದಕ್ಕೆ ಉದಾಹರಣೆ ಸಂಪದ ಸಾಲು.”ಪ್ರಕಟಣೆಯ ಪ್ರಾರಂಭದ ದಿನಗಳಲ್ಲಿ ಮೂಗುಮುರಿವ ಜನರನ್ನೂ ಕಂಡಿದ್ದುಂಟು. ಆದರೆ ಪತ್ರಿಕೆ ದಿನೇ ದಿನೇ ಹೆಚ್ಚೆಚ್ಚು ಉಪಯುಕ್ತ ಮತ್ತು ಹೆಚ್ಚೆಚ್ಚು ಜನರನ್ನು ತಲುಪಿದ್ದು ಕನ್ನಡಿಗರ ಅಭಿಮಾನಕ್ಕೆ ಉದಾಹರಣೆ.
"ಸಂಪದ ಸಾಲು" ಎಂಬ ಪತ್ರಿಕೆಯು ೨೦೦೬ರಲ್ಲಿ ಪ್ರಾರಂಭವಾಯಿತು."ಸಂಪದ" - ಎಂದರೆ ಅಭಿವ್ರದ್ದಿ, ಐಶ್ವರ್ಯ, ಸಂಪತ್ತು ಎಂಬರ್ಥವಿದೆ. ಇದರ ಸಂಪಾದಕರು ವೆಂಕಟೇಶ್.ಎಸ್.ಸಂಪ.೧೯ವರ್ಷಕ್ಕೇ ಪತ್ರಿಕೆಯನ್ನು ಪ್ರಾರಂಭಿಸಿದರು. ಇವರು ಚಿಕ್ಕ ವಯಸ್ಸಿನಲ್ಲೇ ಪತ್ರಿಕೆಯನ್ನು ಪ್ರಾರಂಭಿಸಿದ ಕೀರ್ತಿ ಪಡೆದವರು. ಕೇವಲ ೮ ಪುಟದಿಂದ ಪ್ರಾರಂಭವಾದ ಪತ್ರಿಕೆ ಇಂದು ಬ್ರಹದಾಕಾರವಾಗಿ ಬೆಳೆಯುತ್ತಿದ್ದು, ಇದಕ್ಕೆ ಸಹ್ರದಯ ಕನ್ನಡ ಓದುಗರೇ ಕಾರಣ.ಹಾಗೂ ಅವರಿಗೆ ಪತ್ರಿಕೆ ಅಭಿನಂದನೆ ಸಲ್ಲಿಸುತ್ತದೆ. ಕರ್ನಾಟಕದ ಸುಪ್ರಸಿದ್ದ ಸಾಹಿತಿ,ಬರಹಗಾರರಾದ ಡಾ||ನಾ.ಡಿಸೋಜ, ಡಾ||ದೊಡ್ಡರಂಗೇಗೌಡ,ವಸುಮತಿ ಉಡುಪ,ಬಂದಗದ್ದೆ ರಾಧಾಕ್ರಷ್ಣ, ಮುಂತಾದವರ ಬರವಣಿಗೆಗಳು ಪತ್ರಿಕೆಯ ಮೌಲ್ಯವನ್ನು ಹೆಚ್ಚಿಸಿದೆ.ಸತತ ಹೊಸ ಸುದ್ದಿಗಳತ್ತ ಗಮನ,ಅದರ ಆಗುಹೋಗುಗಳ ಅವಲೋಕನ ಈ ಪತ್ರಿಕೆಯ ಒಂದು ವೈಶಿಷ್ಟ್ಯ. ಸಾಮಾಜಿಕ ಸಾಮರಸ್ಯದ ಗುರಿಯನ್ನು ಹೊಂದಿರುವ ಪತ್ರಿಕೆ ನೊಂದವರ ಧ್ವನಿಯಾಗಿರುವುದಂತು ಖಂಡಿತಾ. ಇದು ಕೇವಲ ಸಾಮಾಜಿಕ ದೃಷ್ಟಿಕೋನವನ್ನು ಹೊಂದಿರದೇ ಕೌಟುಂಬಿಕ ಕಳಕಳಿಯನ್ನೂ ಹೊಂದಿದೆ. ಯಾವ ಒತ್ತಡಕ್ಕೂ ಮಣಿಯದೇ ತನ್ನ ದ್ಯೇಯ ವಾಕ್ಯವನ್ನು ಇಂದಿನ ತನಕ ಕಾಪಾಡಿಕೊಂಡು ಬಂದಿದ್ದು,ಮುಂದೂ ಇದನ್ನು ಮುಂದುವರೆಸಿಕೊಂಡು ಹೋಗುವುದೆಂಬ ವಿಶ್ವಾಸ ಹೊಂದಿದೆ ಸಂಪದ ಸಾಲು.ನಮ್ಮ ಪಾರಂಪರಿಕ ಹಿನ್ನಲೆಗಳನ್ನು ಜನರಿಗೆ ಮನಮುಟ್ಟುವ ಹಾಗೆ ಸರಳ ರೀತಿಯಲ್ಲಿ ವಿಶ್ಲೇಷಿಸುವ ಕಲೆ ಈ ಪತ್ರಿಕೆಗೆ ಇದೆ.ಇದು ಹಲವು ಹೊಸತು,ಹೊಸಬಗೆ,ಹೊಸಮುಖ ಇಂತವುಗಳ ಪರಿಚಯ ಮಾಡುವ ಹವ್ಯಾಸ ಇಟ್ಟುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಹಿತ್ಯ,ಕ್ರಷಿ,ಕೈಗಾರಿಕೆ,ಸಂಸ್ಕ್ರತಿ,ಸಂಗೀತ,ಸಿನಿಮಾ, ಹವ್ಯಾಸ,ಹೀಗೆ ಜನರ ಭಾವನೆಗಳಿಗೆ ತಕ್ಕಂತೆ ಲೇಖನ, ಕವನ, ಕತೆ, ವಿಮರ್ಶೆ, ರಾಜಕೀಯ ವಿಶ್ಲೇಷಣೆಗಳು "ಸಂಪದ ಸಾಲು" ಪತ್ರಿಕೆಯಲ್ಲಿ ಪ್ರತಿ ತಿಂಗಳು ಮೂಡಿ ಬರುತ್ತಿದೆ..ಸಾಧನೆಯ ಹಾದಿಯಲ್ಲಿ ಸಾಗುವವರಿಗೆ ಸಾಧಕರ ಪರಿಚಯ, ಪ್ರಚಲಿತ ವಿಧ್ಯಮಾನಗಳ ಸಂಪೂರ್ಣ ಮಾಹಿತಿ,ವಿಜ್ನ್ಹಾನ ,ಆಧ್ಯಾತ್ಮದ ನೈಜ ವಿವರಣೆ,ಕನಸುಗಳ ಬೆನ್ನುಹತ್ತಿ ನನಸಾಗುವ ಬಗೆ,ವಿಧ್ಯಾರ್ಥಿಗಳಿಗಾಗಿ ಕಲಿಕೆಯ ಜೊತೆ ಗಳಿಕೆಯ ದಾರಿ ಹೀಗೆ ವಿವಿಧ ತೆರನಾದ ಸುಂದರ ಸಮ್ರದ್ದ,ಸ್ವಾವಲಂಬಿ ಸಮಾಜಕ್ಕೆ ಪೂರಕವಾದ ಬರವಣಿಗೆಗಳನ್ನು "ಸಂಪದ ಸಾಲು" ನೀಡುತ್ತಿದೆ.ನವಯುಗದ ನಿರ್ಮಾಣಕ್ಕೆ ತಕ್ಕಂತೆ ,ಹೊಸ ಬಗೆಯ ಚಿಂತನೆಯ ಒಳ-ಹೊರ ನೋಟಗಳು ನಮ್ಮ ಪತ್ರಿಕೆಯ ಮೂಲಕ ಸಿಗುತ್ತಿದೆ.
೨೯೪೮೩ ಹಳ್ಳಿಗಳನ್ನೊಳಗೊಂಡಿರುವ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಮಟ್ಟದಲ್ಲಿ ಓದುಗರನ್ನು ಹೊಂದಿದ ಕೀರ್ತಿ "ಸಂಪದ ಸಾಲು" ಪತ್ರಿಕೆಗಿದೆ. ಕೇವಲ ಎಂಟು ಪುಟದಿಂದ ಚಿಕ್ಕಮಟ್ಟದಲ್ಲಿ ಪ್ರಾರಂಭವಾದ ಸಂಪದ ಸಾಲು ಪತ್ರಿಕೆಯು ಇಂದು ರಾಷ್ಟ್ರಮಟ್ಟದ ಮೌಲ್ವಿಕ ಪ್ರಬುದ್ದಮಾನ ಪತ್ರಿಕೆಯಾಗಿ ನಿಮ್ಮೆದುರು ನಿಂತಿದೆ.ಅಂತಹ ಯಶಸ್ಸಿಗೆ ಕಾರಣರಾದ ನಮ್ಮೆಲ್ಲಾ ಓದುಗ ದೊರೆಗಳನ್ನು ಹಾಗೂ ಜಾಹೀರಾತುದಾರರನ್ನು,ಬರಹಗಾರರನ್ನು ಸ್ಮರಿಸುತ್ತಾ ಹೊಸ ಕನಸಿನ ಬೆನ್ನು ಹತ್ತಿದ್ದೇವೆ.ನಮ್ಮ ಕನ್ನಡದ ಸಹೃದಯರೆಲ್ಲರೂ ನಮ್ಮ ಸಂಪದ ಸಾಲು ಪತ್ರಿಕೆಗೆ ಚಂದಾದಾರರಾಗಬೇಕೆಂಬುದು ನಮ್ಮ ಮನವಿ. ಸುಂದರ ಕರ್ನಾಟಕ ,ಸಮ್ರದ್ದ ಕನ್ನಡನಾಡಿ ಹೆಮ್ಮೆಯ ಪತ್ರಿಕೆ ಸಂಪದ ಸಾಲು.
ಪ್ರತಿ ಮನೆ ಮನವನ್ನು ತಲುಪಲು ನಾವು ತಯಾರಾಗಿದ್ದೇವೆ.ನಿಮ್ಮ ಸಹಕಾರ ಮುಖ್ಯ.
ನಿಮ್ಮ ಸಂಪೂರ್ಣ ವಿಳಾಸ ವಿವರದೊಂದಿಗೆ ನಮಗೆ ತಲುಪಿ.:-
ಪೋಸ್ಟ್ ಮಾಡಿ - ಚೆಕ್ ಅಥವಾ ಡಿಡಿ ಯನ್ನು "ಸಂಪದ ಸಾಲು'
ಅಂಚೆ ಪೆಟ್ಟಿಗೆ ಸಂಖ್ಯೆ ೩೨,ಸಾಗರ - ೫೭೭೪೦೧.
ಇದಕ್ಕೆ ಕಳುಹಿಸಿ.
ಆನ್ ಲೈನ್ ಮೂಲಕ ಪತ್ರಿಕೆಗೆ ಪ್ರೋತ್ಸಾಹಿಸುವವರು :-
For subscribe of Sampada Saalu Magazine...Please credit the amount to Our account:
Account name SAMPADA SAALU
Vijaya bank
Sagar branch- 577401
Account no: 14290101003877
IFSC code: VIJB00001429
No comments:
Post a Comment