Wednesday, November 8, 2017
Tuesday, October 31, 2017
ಭಾಷಣದಿಂದ ಭಾಷೆ ಬೆಳೆಯುವುದಿಲ್ಲ, ಪ್ರೀತಿಸುವುದರಿಂದ ದೇಶ ಬೆಳೆಯುತ್ತದೆ ವೆಂಕಟೇಶ ಸಂಪ
ಭಾಷಣದಿಂದ ಭಾಷೆ ಬೆಳೆಯುವುದಿಲ್ಲ,
ಪ್ರೀತಿಸುವುದರಿಂದ ದೇಶ ಬೆಳೆಯುತ್ತದೆ
ವೆಂಕಟೇಶ ಸಂಪ
ನವೆಂಬರ್ ಒಂದು !
ಕನ್ನಡ ಕನ್ನಡ ಕನ್ನಡ ಅಂತ ಭಾಷಣ ಮಾಡಿ ಸಿಹಿ ತಿಂದು ಪೋಟೋಗೆ ಪೋಸ್ ಕೊಡುವ ಬಹುತೇಕ ಕನ್ನಡದ ಸ್ವಘೋಷಿತ ಹೊರಾಟಗಳಿಗಿಂತ,ಪತ್ರಿಕೆ ಟಿವಿ ಫೇಸ್ಬುಕ್ ವಾಟ್ಸಫ್ ಅಂತ ಕೇವಲ ಪ್ರಚಾರ ಮಾಡೋದಕ್ಕಿಂತ ತುರ್ತಾಗಿ ಮಾಡಲೇಬೇಕಾದದ್ದು ಏನು ಗೊತ್ತಾ!?
ಕನ್ನಡದ ಪತ್ರಿಕೆಗಳನ್ನು ಖರೀದಿಸಿ ಓದುವುದನ್ನು ಕಲಿಯಬೇಕು.ಪಕ್ಕದ ಮನೆಯ ಪತ್ರಿಕೆಯನ್ನೇ ಹತ್ತು ಜನ ಓದುವುದಲ್ಲ,
ಕನ್ನಡದ ನಾಟಕ ಮತ್ತು ಯಕ್ಷಗಾನದಂತಹ ಕಲೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಅಂತಹ ಸಂಸ್ಥೆಗಳಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು.
ಕನ್ನಡದ ಸರ್ಕಾರಿ ಶಾಲೆಯಲ್ಲಿ ಓದುವವರಿಗೆ ಸಾಕಷ್ಟು ಸೌಲಭ್ಯ ಒದಗಿಸಬೇಕು.
ಬೇರೆ ಭಾಷೆ ಕಲಿಯಲಿ ಆದರೆ ಕನ್ನಡವನ್ನು ಕಡ್ಡಾಯ ಸಿಲಬಸ್ ಅಂತ ಮಾಡಬೇಕು,
ಅಗತ್ಯ ವಸ್ತುಗಳನ್ನು ದೊಡ್ಡ ದೊಡ್ಡ ಮಲ್ಟಿನ್ಯಾಷನಲ್ ಕಂಪನಿಯ ಮಾಲ್ ಗಳಲ್ಲಿ ಖರೀದಿಸುವುದಲ್ಲ,ನಮ್ಮ ಕನ್ನಡಿಗರ ಸಣ್ಣ ಸಣ್ಣ ಅಂಗಡಿಗಳಿಗೆ,ನಮ್ಮ ಕನ್ನಡದ ಉತ್ಪನ್ನಗಳನ್ನು ಬಳಸಬೇಕು,
ಆದರೆ ದುರಂತವೇನು ಗೊತ್ತಾ!
ಬಹುತೇಕರು ಕನ್ನಡದ ಪತ್ರಿಕೆಗೆ ಸಣ್ಣ ಪ್ರೋತ್ಸಾಹ ಕೂಡ ಕೊಡಲ್ಲ, ನಾಟಕ ಯಕ್ಷಗಾನ ಸಿನಿಮಾಗಳನ್ನು ದುಡ್ಡು ಕೊಟ್ಟು ನೋಡಲ್ಲ. ನಮ್ಮ ನಾಡು ನುಡಿಯ ಕೆಲಸಕ್ಕಿಂತ ಹೆಚ್ಚಾಗಿ ಎಲ್ಲೋ ಆದ ಗಲಾಟೆಗೆ ನಮ್ಮ ಕರ್ನಾಟಕವನ್ನೇ ಬಂದ್ ಮಾಡಿ ನಮ್ಮ ಕನ್ನಡಿಗರಿಗೇ ತೊಂದರೆ ಕೊಟ್ಟರೆ ಏನು ಲಾಭ!?
ಕನ್ನಡ ಅನ್ನೋದು ನಮ್ಮ ಮಾನಸಿಕತೆಯ ಭದ್ರ ನೆಲೆ ಆಗಬೇಕು ಆಗ ಮಾತ್ರಾ ಕನ್ನಡಕ್ಕೆ ಬೆಲೆ,
ನಮ್ಮತನ ಎನ್ನುವುದು ಪ್ರಚಾರಕ್ಕೆ ಮಾತ್ರಾ ನಿಂತು ಕೇವಲ ನವೆಂಬರ್ ಗೆ ಸೀಮಿತವಾದರೆ ಕಟ್ಟುವುದಾದರೂ ಏನನ್ನು! ?
ನಮ್ಮ ಆಲೋಚನೆಗಳು ಕನ್ನಡ ,ನಮ್ಮ ಕನಸುಗಳು ಕನ್ನಡ,ನಮ್ಮ ಉಸಿರು ಕನ್ನಡ,ನಮ್ಮ ಹೆಸರು ಕನ್ನಡ,ನಮ್ಮ ಬದುಕು ಕನ್ನಡ,ನಾವು ಕನ್ನಡ,ನಾನು ಕನ್ನಡ,ನಮ್ಮ ಸಂಪದ ಸಾಲು ಪತ್ರಿಕೆ ಕನ್ನಡ,ನನ್ನ ಬೆಂಬಲ ಕನ್ನಡಕ್ಕೆ ಎಂಬ ಮಾನೋಭಾವ ಮೂಡಿದ ದಿನವೇ ನಾವು ಸ್ವಾಭಿಮಾನಿ ಕನ್ನಡ ನಾಡು ಸರ್ವರೀತಿಯಲ್ಲೂ ಸಂಪದವಾಗಬಲ್ಲದು,
ಕಟ್ಟೋಣ ಕನ್ನಡ ನಾಡು ಬೆಳೆಸೋಣ ನಮ್ಮ ಬೀಡು!
ಜೈ ಕನ್ನಡಾಂಬೆ,
9448219347
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Sunday, September 3, 2017
Sunday, August 6, 2017
ಡಿಜಿಟಲ್ ಜಗತ್ತಿನ ಹುಡುಕಾಟದ ದಿವಸದಲ್ಲಿ, ಟಿಕೇಟ್ ಕಳೆದುಕೊಂಡಿದ್ದ ಪ್ರಯಾಣಿಕ ಜೊತೆಯಲ್ಲಿ,!!!! #ವೆಂಕಟೇಶಸಂಪ
ಡಿಜಿಟಲ್ ಜಗತ್ತಿನ ಹುಡುಕಾಟದ ದಿವಸದಲ್ಲಿ,
ಟಿಕೇಟ್ ಕಳೆದುಕೊಂಡಿದ್ದ ಪ್ರಯಾಣಿಕ ಜೊತೆಯಲ್ಲಿ,!!!!
#ವೆಂಕಟೇಶಸಂಪ
ಉತ್ತರ ಕರ್ನಾಟಕದ ಗುಲ್ಬರ್ಗಾದ ಕಡೆ ಕೆಲಸದ ನಿಮಿತ್ತ ಹೊರಟಿದ್ದೆ.ಸಂಪದ ಸಾಲು ಕೆಲಸಕ್ಕೆಂದು ಸಾಗರದಿಂದ ಬಸ್ಸು ಹತ್ತಿ ಶಿವಮೊಗ್ಗ ಕ್ಕೆ ಬಂದು ಅಲ್ಲಿಂದ ಗುಲ್ಬರ್ಗಾದ ಬಸ್ಸು ಹತ್ತಿದ್ದೆ. ಸ್ಲೀಪರ್ ಕೋಚ್ ಬಸ್ಸ್ ಚಲಿಸುತ್ತಿತ್ತು,ಸರ್ಕಾರದ ಸ್ಲೀಪರ್ ಕೋಚ್ ಬಸ್ಸ್ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು.ಎಲ್ಲರಿಗೂ ಟಿಕೇಟ್ ನೀಡಿದ ಕಂಡಕ್ಟರ್ ಎಷ್ಟೋ ಹೊತ್ತಿನ ನಂತರ ಒಬ್ಬನ ಜೊತೆ ಜೋರಾಗಿ ಜಗಳ ಆಡುತ್ತಿದ್ದ. ಜಗಳ ತಾರಕಕ್ಕೇರಿತ್ತು.
ಇದೆಂತ ಗಲಾಟೆ ಅಂತ ನಾನೂ ಎಂಟ್ರಿ ಕೊಟ್ಟೆ.
ಕಂಡಕ್ಟರ್ ಟಿಕೇಟ್ ಕೊಟ್ಟಿದ್ದ. ಪ್ರಯಾಣಿಕ ಎಲ್ಲೋ ಅದನ್ನು ಕಳೆದುಕೊಂಡಿದ್ದ.
ನೀ ಇನ್ನೊಂದು ಟಿಕೇಟ್ ತೆಗೆದುಕೋ ಇಲ್ಲಾ ಇಲ್ಲೇ ಇಳಿ ಅಂತ ನಡು ರಸ್ತೇಲಿ ಚಲಿಸುತ್ತಿದ್ದ ಬಸ್ಸಲ್ಲಿ ಕೂಗುತ್ತಿದ್ದ.ಆತ ಅಣ್ಣ ಎಲ್ಲೋಯ್ತು ಗೊತ್ತಿಲ್ಲ.ಮತ್ತೆ ದುಡ್ಡು ಕೊಡೋಕಾಗಲ್ಲ ಅಂತ ಕೇಳ್ತಿದ್ದ.
ಎನ್ರಪಾ ಕತೆ ಅಂದೆ ನಾನು,
ನೋಡ್ರಿ ಇವನು ಟಿಕೇಟ್ ಕಳ್ಕೊಂಡಿದಾನೆ.ಚೆಕಿಂಗ್ ಗೆ ಬಂದರೆ ನಮ್ ಕೇಳ್ತಾರೆ ಅಂದ ಕಂಡಕ್ಟರ್,
ಅಣ್ಣಾ ನನ್ ಹತ್ರ ಇದ್ದ ದುಡ್ಡು ಕೊಟ್ಟು ಟಿಕೇಟ್ ತಗೊಂಡೆ.ಎಲ್ಲೋ ಬಿದ್ದೋಯ್ತು.ಏನ್ಮಾಡ್ಲಿ?ಮತ್ತೆ ದುಡ್ಡು ಕೊಡೋಕಾಗಲ್ಲ ಅಂದ.
ಅವರ ಜಗಳ ನೋಡಿಯೂ ಸುಮ್ಮನಿದ್ರು ಜನ.
ಅಲ್ರೀ ಕಂಡಕ್ಟರ್ ನಿಮ್ಮ ಟಿಕೇಟ್ ಮಶೀನ್ ಅಲ್ಲಿ ಟಿಕೇಟ್ ಎಂಟ್ರಿ ಇದೆ ಅಲ್ವಾ?ಈತನಿಗೆ ನೀವು ಟಿಕೇಟ್ ಕೊಟ್ಟಿದ್ದಲ್ವಾ?ಟಿಕೇಟ್ ನಂಬರ್ ನಿಮ್ಮ ಹತ್ರ ಇದೆ ತಾನೆ?ಬಸ್ಸಲಿ ಇರೋ ಜನಕ್ಕು ನಿಮ್ಮ ಮಶಿನ್ ತೋರ್ಸೋ ಟಿಕೇಟ್ ಕೌಂಟ್ ಗು ಸರಿ ಇದೆ ತಾನೆ?ಮತ್ಯಾಕ್ರಿ ಟಾರ್ಚರ್ ಮಾಡ್ತಿರಿ ಅಂದೆ,
ಆತ ಸುಮ್ಮನಾದ. ಮತ್ತೆ ಎರಡು ನಿಮಿಷಕ್ಕೆ ಆ ಹುಡಗನಿಗೆ ಗಲಾಟೆ ಮಾಡೋಕೆ ಶುರು ಮಾಡಿದ.ದುಡ್ಡು ಕೊಡು ಇಲ್ಲಾ ಇಳಿ !
ಈಗ ನಾನು ಸುಮ್ಮನಿದ್ರೆ ಸರಿ ಅಲ್ಲ ಅಂತ ಕನ್ಫರ್ಮ್ ಆಯ್ತು. ಎನಯ್ಯಾ, ನಿಮ್ಮ ಡಿಪೋ ಮ್ಯಾನೇಜರ್ ಗೆ ಮಾತಾಡ್ಲಾ ಅಥವ ನಿಮ್ಮ ಎಂ ಡಿ ಗೆ ಮಾತಾಡ್ಲಾ ಅಥವಾ ನಿಮ್ಮ ಮಿನಿಸ್ಟರ್ ಗೆ ಪೋನ್ ಮಾಡ್ಲಾ?ನಾಟ್ಕ ಮಾಡ್ತಿರಾ? ಪ್ರಯಾಣಿಕಂಗೆ ತೊಂದರೆ ಮಾಡ್ತಿರಾ? ಡಿಜಿಟಲ್ ಇಂಡಿಯಾ ಅಂತ ಮಾಡ್ತಿದಾರೆ, ಪೇಪರ್ ಲೆಸ್ಸ್ ಮಾಡೋ ಈ ದಿನಗಳಲ್ಲಿ ಟಿಕೇಟ್ ಅಂತ ಕೂಗಾಡ್ಬೇಡಿ.ಚೆಕಿಂಗ್ ಗೆ ಬಂದರೆ ನಾನೇ ಮಾತಾಡ್ತಿನಿ ಅಂದೆ.ಈಗ ಕಂಡಕ್ಟರ್ ಮುಖ ಸಣ್ಣಗಾಯ್ತು. ಕೂಗಾಡೋದಲ್ರೀ ಸ್ವಾಮಿ; ತಪ್ಪು ಮಾಡಿದವರಿಗೆ ಬಿಡಿಸಿ ಹೇಳ್ಬೇಕು ವಿನಃ ಟಿಕೇಟ್ ಕಳ್ಕೊಂಡ ಅಂತ ನಡು ರಸ್ತೇಲಿ ಮದ್ಯ ರಾತ್ರಿ ಇಳ್ಸೋದಲ್ರೀ ಕಂಡಕ್ಟರ್ ಸಾಹೇಬ್ರೇ ಅಂದೆ.
ನಂಗೆ ಟಿಕೇಟ್ ಕೊಡುವಾಗಲೇ ನಾನು ಜರ್ನಲಿಸ್ಟ್ ಅಂತ ತಿಳಿದಿದ್ದ ಕಂಡಕ್ಟರ್ ಸೈಲೆಂಟ್ ಆದ.ಬಸ್ಸು ನಿದಾನವಾಗಿ ಚಲಿಸುತ್ತಿತ್ತು.ಆ ಪ್ರಯಾಣಿಕ ಅಣ್ಣಾ ಥ್ಯಾಂಕ್ಸ್ ಅನ್ನುತ್ತಾ ಸ್ಲೀಪರ್ ಕೋಚ್ ಬಸ್ಸಿನ ಸೀಟು ಏರಿದ.
ಸ್ವಲ್ಪವೇ ಕಿಟಕಿ ತೆಗೆದುಕೊಂಡು ಪ್ರಯಾಣಿಸುತ್ತಿದ್ದ ನನಗೆ ಹೊರಗಡೆಯಲ್ಲಿ ಆಕಾಶದ ಶಶಿ ನನ್ನನ್ನು ನೋಡಿ ಮುಗುಳ್ನಕ್ಕಂತೆ ಅನಿಸಿತ್ತು,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Sunday, July 30, 2017
Sunday, July 23, 2017
ರಸ್ತೆಯಲ್ಲಿಯೇ ಮಳೆಯ ನೀರು ಇಂಗುವುದರ ಜೊತೆಗೆ ಭತ್ತದ ನಾಟಿ ಮಾಡಲು ಅವಕಾಶ ಮಾಡಿಕೊಟ್ಟ ಕಂದಾಯ ಮಂತ್ರಿ ಮತ್ತು ಶಾಸಕರಾದ ಕಾಗೋಡು ತಿಮ್ಮಪ್ಪನವರಿಗೆ ಹಾಗು ಸಂಸದರಾದ ಯಡ್ಯೂರಪ್ಪನವರಿಗೆ ಅಭಿನಂದನೆಗಳು. !?
ರಸ್ತೆಯಲ್ಲಿಯೇ ಮಳೆಯ ನೀರು ಇಂಗುವುದರ ಜೊತೆಗೆ ಭತ್ತದ ನಾಟಿ ಮಾಡಲು ಅವಕಾಶ ಮಾಡಿಕೊಟ್ಟ
ಕಂದಾಯ ಮಂತ್ರಿ ಮತ್ತು ಶಾಸಕರಾದ ಕಾಗೋಡು ತಿಮ್ಮಪ್ಪನವರಿಗೆ ಹಾಗು ಸಂಸದರಾದ ಯಡ್ಯೂರಪ್ಪನವರಿಗೆ ಅಭಿನಂದನೆಗಳು. !?
ಇದು ಸಾಗರ ತಾಲೂಕಿನ ಬೆಂಗಳೂರು ಮತ್ತು ಮಂಗಳೂರು ರಸ್ತೆಗೆ ಸೇರುವ ಬೈಪಾಸ್ ರಸ್ತೆ.ಗಡಿಕಟ್ಟೆಯಿಂದ ನಂದಿಕೆರೆ ಮೇಲೆ ಉಳ್ಳೂರು ಸೇರುವ ಬಹುಪಯೋಗಿ ರಸ್ತೆ.
ಕಳೆದ ಹತ್ತಾರು ವರ್ಷದಿಂದ ಈ ರಸ್ತೆಯ ಅಭಿವೃದ್ದಿಗಾಗಿ ಇಲ್ಲಿನ ಜನ ಬೇಡಿಕೆ ಇಟ್ಟಿದ್ದರು.
ಕರ್ನಾಟಕದ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿ ಮತ್ತು ಅತ್ಯಂತ ಹಿರಿಯ ವಯಸ್ಸಿನ ಶಾಸಕರು ಪವರ್ಫುಲ್ ಕಂದಾಯ ಇಲಾಖೆಯ ಮಂತ್ರಿಗಳು ಆದ ಸನ್ಮಾನ್ಯ ಕಾಗೋಡು ತಿಮ್ಮಪ್ಪನವರು ಈ ತಾಲೂಕಿನ ಜನಪ್ರತಿನಿಧಿಗಳು.
ಹತ್ತಾರು ಬಾರಿ ಮನವಿ ಸಲ್ಲಿಸಿದರೂ ತಲೆ ಎತ್ತಿ ಕೂಡ ನೋಡದೇ ರಸ್ತೆ ಮಾಡದೇ ಕ್ಷೇತ್ರದ ಹಿತ ಕಾಪಾಡಿದ ಇಂತಹ ಜನಸೇವಕರಿಗೆ ಮೊದಲನೆಯದಾಗಿ ಈ ಬಾಗದ ಜನಗಳು ಅಭಿನಂಧಿಸಿದ್ದಾರೆ.
ಬಿಜೇಪಿಯ ರಾಜ್ಯಾಧ್ಯಕ್ಷರಾದ ಯಡ್ಯೂರಪ್ಪನವರು ಈ ಭಾಗದ ಸಂಸತ್ ಸದಸ್ಯರು. ನರೇಂದ್ರ ಮೋದಿಯವರ ಕನಸಿನ ಭಾರತಕ್ಕೆ ಕೊಡುಗೆಯಾಗಿ ಈ ಇಂಗುಗುಂಡಿ ಸಹಿತ ಗದ್ದೆಯಂತೆ ರಸ್ತೆ ನಿರ್ಮಿಸಲು ಈ ಬಾರಿ 3 ಲಕ್ಷ ನೀಡಿದ್ದಾರೆ.ಅದ್ಯಾರೋ ಪುಣ್ಯಾತ್ಮ ಕಂಟ್ರಾಕ್ಟರ್, ಜನಗಳು ನೆಡೆಯಲು ಆಗದ ಸೂಪರ್ ರಸ್ತೆ ನಿರ್ಮಿಸಿ ಗಿನ್ನಿಸ್ ಧಾಖಲೆ ಸೇರುವಂತೆ ರಸ್ತೆ ನಿರ್ಮಿಸಿದ್ದಕ್ಕೆ ಇಂಜಿನೀಯರ್ ಗಳು ಕಾಮಗಾರಿ ಪರಿಶೀಲಿಸದೇ ಬಿಲ್ ನೀಡಿ ಗೌರವಿಸಿದ್ದಾರೆ.
ಇಂತಹ ಮಹತ್ಕಾರ್ಯ ಮಾಡಿದ ಕಂದಾಯ ಇಲಾಖೆ ಮಂತ್ರಿಗಳಾದ ಕಾಗೋಡು ತಿಮ್ಮಪ್ಪನವರಿಗೆ ಮತ್ತು ಸಂಸದರಾದ ಯಡ್ಯೂರಪ್ಪನವರಿಗೆ ಹಾಗೂ ಇಂತಹ ಸೂಪರ್ ರಸ್ತೆ ಮಾಡಿದ ಕಂಟ್ರಾಕ್ಟರ್ ಗೆ ಹಾಗು ಇದನ್ನು ನೋಡದೇ ಬಿಲ್ ಪಾವತಿಸಿದ ಸಾಗರದ ಇಂಜಿನೀಯರ್ ಗಳಿಗೆ ಅಭಿನಂದಿಸಲು ಈ ಊರಿನ ಜನ ತೀರ್ಮಾನಿಸಿದ್ದಾರೆ.ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಇಂತಹ ಸಾಧಕರಿಗೆ ನಿಮ್ಮ ಅನಿಸಿಕೆ ತಿಳಿಸಿ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Sunday, July 9, 2017
ಯಾರು ಗುರು?
ಯಾರು ಗುರು?
ವರ್ಣ ಮಾತ್ರಂ ಕಲಿಸಿದಾತಂ ಗುರು,
ಅಕ್ಷರವೊಂದನ್ನು ಹೇಳಿಕೊಟ್ಟವರನ್ನು ಗುರು ಎನ್ನಲೇಬೇಕು.
ಬದುಕಿನ ನಿತ್ಯ ಪಯಣದಲ್ಲಿ ಪ್ರತಿ ಹೆಜ್ಜೆಯಲ್ಲೂ ಏನೇನನ್ನೋ,ಯಾರ್ಯಾರಿಂದಲೋ ಕಲಿಯುತ್ತಲೇ ಇರುತ್ತೇವೆ.
ಹುಟ್ಟಿದ ಕ್ಷಣದಿಂದ ಪ್ರಾರಂಭವಾದ ಬದುಕಿನ ಪಯಣದಲ್ಲಿ ಅಮ್ಮ ಅಪ್ಪ ಶಿಕ್ಷಕ ಸ್ನೇಹಿತ ಸಮಾಜ,ಸಂದರ್ಭ ,ಕೆಲವು ಘಟನೆಗಳು, ಕೆಲವೊಮ್ಮೆ ನಮಗೆ ನಾವು ಗುರುಗಳಾಗುತ್ತೇವೆ,
ಪ್ರತಿಕ್ಷಣದ ಕಲಿಕೆಯೇ ಒಂತರದ ನಿಜವಾದ ಗುರುಗಳ ಹುಡುಕಾಟ ಅಲ್ಲವೇ?
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Friday, April 7, 2017
ನೆನಹುಗಳ ಸರಮಾಲೆ venkatesha sampa
ನೆನಹುಗಳ ಸರಮಾಲೆ
ಬದುಕೆಂಬ ಬರಹದ ಮುನ್ನುಡಿಯ
ಬಾಲ್ಯದ ಚಿತ್ತಾರದ ನೆನಪು..
ಚಕೋರ ಚಂದ್ರಮನ ಕರದೊಳಗೆ
ಮುಡಿಪಾಗಿರಿಸುವಾ ಕನಸು..
ಚಿಣ್ಣರ ಚಿಣ್ಣಿಕೋಲಿನ ಗಮ್ಮತ್ತು
ಗಾಳಿಪಟ ಹಾರಿಸುತ್ತ
ದಾರ ದೂರದತ್ತ ಬಿಡಿಸುತ್ತ
ಆಕಾಶದೆತ್ತರಕ್ಕೆ ಏರುವಾ ಮನಸು...
ಚೆಂಡು, ಬುಗುರಿ, ಲಗೋರಿ
ಗೆದ್ದೇ ಗೆಲ್ಲುವೆನೆಂಬ ಗುರಿ
ಯಾರೂ ಮೇಲಲ್ಲ.. ಯಾರೂ ಕೀಳಲ್ಲ
ಏನು ಹೇಳಲಿ ಸಂತಸದಾ ಪರಿ...
ಎಂದೆಂದೂ ಜೊತೆಗಿರಲಿ ಬಾಲ್ಯದಾ ಸವಿನೆನಪು
ಪ್ರೌಢತೆ.. ಯೌವ್ವನ... ಜವ್ವನದಲ್ಲಿ ಮರುಕಳಿಸಲಿ ಸುಮಧುರ ನೆನಹುಗಳ ಸರಮಾಲೆ....
*ವೆಂಕಟೇಶ ಸಂಪ
ಓದಿ "ಸಂಪದ ಸಾಲು "