ರಸ್ತೆಯಲ್ಲಿಯೇ ಮಳೆಯ ನೀರು ಇಂಗುವುದರ ಜೊತೆಗೆ ಭತ್ತದ ನಾಟಿ ಮಾಡಲು ಅವಕಾಶ ಮಾಡಿಕೊಟ್ಟ
ಕಂದಾಯ ಮಂತ್ರಿ ಮತ್ತು ಶಾಸಕರಾದ ಕಾಗೋಡು ತಿಮ್ಮಪ್ಪನವರಿಗೆ ಹಾಗು ಸಂಸದರಾದ ಯಡ್ಯೂರಪ್ಪನವರಿಗೆ ಅಭಿನಂದನೆಗಳು. !?
ಇದು ಸಾಗರ ತಾಲೂಕಿನ ಬೆಂಗಳೂರು ಮತ್ತು ಮಂಗಳೂರು ರಸ್ತೆಗೆ ಸೇರುವ ಬೈಪಾಸ್ ರಸ್ತೆ.ಗಡಿಕಟ್ಟೆಯಿಂದ ನಂದಿಕೆರೆ ಮೇಲೆ ಉಳ್ಳೂರು ಸೇರುವ ಬಹುಪಯೋಗಿ ರಸ್ತೆ.
ಕಳೆದ ಹತ್ತಾರು ವರ್ಷದಿಂದ ಈ ರಸ್ತೆಯ ಅಭಿವೃದ್ದಿಗಾಗಿ ಇಲ್ಲಿನ ಜನ ಬೇಡಿಕೆ ಇಟ್ಟಿದ್ದರು.
ಕರ್ನಾಟಕದ ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿ ಮತ್ತು ಅತ್ಯಂತ ಹಿರಿಯ ವಯಸ್ಸಿನ ಶಾಸಕರು ಪವರ್ಫುಲ್ ಕಂದಾಯ ಇಲಾಖೆಯ ಮಂತ್ರಿಗಳು ಆದ ಸನ್ಮಾನ್ಯ ಕಾಗೋಡು ತಿಮ್ಮಪ್ಪನವರು ಈ ತಾಲೂಕಿನ ಜನಪ್ರತಿನಿಧಿಗಳು.
ಹತ್ತಾರು ಬಾರಿ ಮನವಿ ಸಲ್ಲಿಸಿದರೂ ತಲೆ ಎತ್ತಿ ಕೂಡ ನೋಡದೇ ರಸ್ತೆ ಮಾಡದೇ ಕ್ಷೇತ್ರದ ಹಿತ ಕಾಪಾಡಿದ ಇಂತಹ ಜನಸೇವಕರಿಗೆ ಮೊದಲನೆಯದಾಗಿ ಈ ಬಾಗದ ಜನಗಳು ಅಭಿನಂಧಿಸಿದ್ದಾರೆ.
ಬಿಜೇಪಿಯ ರಾಜ್ಯಾಧ್ಯಕ್ಷರಾದ ಯಡ್ಯೂರಪ್ಪನವರು ಈ ಭಾಗದ ಸಂಸತ್ ಸದಸ್ಯರು. ನರೇಂದ್ರ ಮೋದಿಯವರ ಕನಸಿನ ಭಾರತಕ್ಕೆ ಕೊಡುಗೆಯಾಗಿ ಈ ಇಂಗುಗುಂಡಿ ಸಹಿತ ಗದ್ದೆಯಂತೆ ರಸ್ತೆ ನಿರ್ಮಿಸಲು ಈ ಬಾರಿ 3 ಲಕ್ಷ ನೀಡಿದ್ದಾರೆ.ಅದ್ಯಾರೋ ಪುಣ್ಯಾತ್ಮ ಕಂಟ್ರಾಕ್ಟರ್, ಜನಗಳು ನೆಡೆಯಲು ಆಗದ ಸೂಪರ್ ರಸ್ತೆ ನಿರ್ಮಿಸಿ ಗಿನ್ನಿಸ್ ಧಾಖಲೆ ಸೇರುವಂತೆ ರಸ್ತೆ ನಿರ್ಮಿಸಿದ್ದಕ್ಕೆ ಇಂಜಿನೀಯರ್ ಗಳು ಕಾಮಗಾರಿ ಪರಿಶೀಲಿಸದೇ ಬಿಲ್ ನೀಡಿ ಗೌರವಿಸಿದ್ದಾರೆ.
ಇಂತಹ ಮಹತ್ಕಾರ್ಯ ಮಾಡಿದ ಕಂದಾಯ ಇಲಾಖೆ ಮಂತ್ರಿಗಳಾದ ಕಾಗೋಡು ತಿಮ್ಮಪ್ಪನವರಿಗೆ ಮತ್ತು ಸಂಸದರಾದ ಯಡ್ಯೂರಪ್ಪನವರಿಗೆ ಹಾಗೂ ಇಂತಹ ಸೂಪರ್ ರಸ್ತೆ ಮಾಡಿದ ಕಂಟ್ರಾಕ್ಟರ್ ಗೆ ಹಾಗು ಇದನ್ನು ನೋಡದೇ ಬಿಲ್ ಪಾವತಿಸಿದ ಸಾಗರದ ಇಂಜಿನೀಯರ್ ಗಳಿಗೆ ಅಭಿನಂದಿಸಲು ಈ ಊರಿನ ಜನ ತೀರ್ಮಾನಿಸಿದ್ದಾರೆ.ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಇಂತಹ ಸಾಧಕರಿಗೆ ನಿಮ್ಮ ಅನಿಸಿಕೆ ತಿಳಿಸಿ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment