Sunday, August 6, 2017

ಡಿಜಿಟಲ್ ಜಗತ್ತಿನ ಹುಡುಕಾಟದ ದಿವಸದಲ್ಲಿ, ಟಿಕೇಟ್ ಕಳೆದುಕೊಂಡಿದ್ದ ಪ್ರಯಾಣಿಕ ಜೊತೆಯಲ್ಲಿ,!!!! #ವೆಂಕಟೇಶಸಂಪ

ಡಿಜಿಟಲ್ ಜಗತ್ತಿನ ಹುಡುಕಾಟದ ದಿವಸದಲ್ಲಿ,
ಟಿಕೇಟ್ ಕಳೆದುಕೊಂಡಿದ್ದ ಪ್ರಯಾಣಿಕ ಜೊತೆಯಲ್ಲಿ,!!!!
#ವೆಂಕಟೇಶಸಂಪ

ಉತ್ತರ ಕರ್ನಾಟಕದ ಗುಲ್ಬರ್ಗಾದ ಕಡೆ ಕೆಲಸದ  ನಿಮಿತ್ತ ಹೊರಟಿದ್ದೆ.ಸಂಪದ ಸಾಲು ಕೆಲಸಕ್ಕೆಂದು ಸಾಗರದಿಂದ ಬಸ್ಸು ಹತ್ತಿ ಶಿವಮೊಗ್ಗ ಕ್ಕೆ ಬಂದು ಅಲ್ಲಿಂದ ಗುಲ್ಬರ್ಗಾದ ಬಸ್ಸು ಹತ್ತಿದ್ದೆ. ಸ್ಲೀಪರ್ ಕೋಚ್ ಬಸ್ಸ್  ಚಲಿಸುತ್ತಿತ್ತು,ಸರ್ಕಾರದ ಸ್ಲೀಪರ್ ಕೋಚ್ ಬಸ್ಸ್ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು.ಎಲ್ಲರಿಗೂ ಟಿಕೇಟ್ ನೀಡಿದ ಕಂಡಕ್ಟರ್ ಎಷ್ಟೋ ಹೊತ್ತಿನ ನಂತರ     ಒಬ್ಬನ ಜೊತೆ ಜೋರಾಗಿ ಜಗಳ ಆಡುತ್ತಿದ್ದ. ಜಗಳ ತಾರಕಕ್ಕೇರಿತ್ತು.
ಇದೆಂತ ಗಲಾಟೆ ಅಂತ  ನಾನೂ ಎಂಟ್ರಿ ಕೊಟ್ಟೆ.   
ಕಂಡಕ್ಟರ್ ಟಿಕೇಟ್ ಕೊಟ್ಟಿದ್ದ.  ಪ್ರಯಾಣಿಕ ಎಲ್ಲೋ ಅದನ್ನು ಕಳೆದುಕೊಂಡಿದ್ದ. 
ನೀ ಇನ್ನೊಂದು ಟಿಕೇಟ್ ತೆಗೆದುಕೋ ಇಲ್ಲಾ   ಇಲ್ಲೇ ಇಳಿ ಅಂತ ನಡು ರಸ್ತೇಲಿ ಚಲಿಸುತ್ತಿದ್ದ ಬಸ್ಸಲ್ಲಿ ಕೂಗುತ್ತಿದ್ದ.ಆತ ಅಣ್ಣ ಎಲ್ಲೋಯ್ತು ಗೊತ್ತಿಲ್ಲ.ಮತ್ತೆ ದುಡ್ಡು ಕೊಡೋಕಾಗಲ್ಲ ಅಂತ ಕೇಳ್ತಿದ್ದ.
ಎನ್ರಪಾ       ಕತೆ ಅಂದೆ ನಾನು,
ನೋಡ್ರಿ ಇವನು ಟಿಕೇಟ್ ಕಳ್ಕೊಂಡಿದಾನೆ.ಚೆಕಿಂಗ್ ಗೆ ಬಂದರೆ ನಮ್ ಕೇಳ್ತಾರೆ ಅಂದ ಕಂಡಕ್ಟರ್,
ಅಣ್ಣಾ ನನ್ ಹತ್ರ ಇದ್ದ ದುಡ್ಡು ಕೊಟ್ಟು    ಟಿಕೇಟ್ ತಗೊಂಡೆ.ಎಲ್ಲೋ ಬಿದ್ದೋಯ್ತು.ಏನ್ಮಾಡ್ಲಿ?ಮತ್ತೆ ದುಡ್ಡು ಕೊಡೋಕಾಗಲ್ಲ ಅಂದ.
ಅವರ ಜಗಳ ನೋಡಿಯೂ ಸುಮ್ಮನಿದ್ರು ಜನ.
ಅಲ್ರೀ ಕಂಡಕ್ಟರ್ ನಿಮ್ಮ ಟಿಕೇಟ್ ಮಶೀನ್ ಅಲ್ಲಿ ಟಿಕೇಟ್ ಎಂಟ್ರಿ ಇದೆ ಅಲ್ವಾ?ಈತನಿಗೆ ನೀವು ಟಿಕೇಟ್ ಕೊಟ್ಟಿದ್ದಲ್ವಾ?ಟಿಕೇಟ್ ನಂಬರ್ ನಿಮ್ಮ ಹತ್ರ ಇದೆ ತಾನೆ?ಬಸ್ಸಲಿ ಇರೋ ಜನಕ್ಕು ನಿಮ್ಮ ಮಶಿನ್ ತೋರ್ಸೋ ಟಿಕೇಟ್ ಕೌಂಟ್ ಗು ಸರಿ ಇದೆ ತಾನೆ?ಮತ್ಯಾಕ್ರಿ ಟಾರ್ಚರ್ ಮಾಡ್ತಿರಿ ಅಂದೆ,    
ಆತ ಸುಮ್ಮನಾದ. ಮತ್ತೆ ಎರಡು ನಿಮಿಷಕ್ಕೆ ಆ ಹುಡಗನಿಗೆ ಗಲಾಟೆ  ಮಾಡೋಕೆ ಶುರು ಮಾಡಿದ.ದುಡ್ಡು ಕೊಡು ಇಲ್ಲಾ ಇಳಿ !
ಈಗ ನಾನು ಸುಮ್ಮನಿದ್ರೆ ಸರಿ ಅಲ್ಲ ಅಂತ ಕನ್ಫರ್ಮ್ ಆಯ್ತು.  ಎನಯ್ಯಾ, ನಿಮ್ಮ ಡಿಪೋ ಮ್ಯಾನೇಜರ್ ಗೆ ಮಾತಾಡ್ಲಾ ಅಥವ ನಿಮ್ಮ ಎಂ ಡಿ ಗೆ ಮಾತಾಡ್ಲಾ ಅಥವಾ ನಿಮ್ಮ ಮಿನಿಸ್ಟರ್ ಗೆ ಪೋನ್ ಮಾಡ್ಲಾ?ನಾಟ್ಕ ಮಾಡ್ತಿರಾ? ಪ್ರಯಾಣಿಕಂಗೆ ತೊಂದರೆ ಮಾಡ್ತಿರಾ?  ಡಿಜಿಟಲ್ ಇಂಡಿಯಾ ಅಂತ ಮಾಡ್ತಿದಾರೆ, ಪೇಪರ್ ಲೆಸ್ಸ್ ಮಾಡೋ ಈ ದಿನಗಳಲ್ಲಿ ಟಿಕೇಟ್ ಅಂತ ಕೂಗಾಡ್ಬೇಡಿ.ಚೆಕಿಂಗ್ ಗೆ ಬಂದರೆ ನಾನೇ ಮಾತಾಡ್ತಿನಿ ಅಂದೆ.ಈಗ ಕಂಡಕ್ಟರ್ ಮುಖ ಸಣ್ಣಗಾಯ್ತು. ಕೂಗಾಡೋದಲ್ರೀ ಸ್ವಾಮಿ; ತಪ್ಪು ಮಾಡಿದವರಿಗೆ ಬಿಡಿಸಿ ಹೇಳ್ಬೇಕು  ವಿನಃ ಟಿಕೇಟ್ ಕಳ್ಕೊಂಡ ಅಂತ ನಡು ರಸ್ತೇಲಿ ಮದ್ಯ ರಾತ್ರಿ ಇಳ್ಸೋದಲ್ರೀ ಕಂಡಕ್ಟರ್ ಸಾಹೇಬ್ರೇ ಅಂದೆ.
ನಂಗೆ ಟಿಕೇಟ್ ಕೊಡುವಾಗಲೇ ನಾನು ಜರ್ನಲಿಸ್ಟ್ ಅಂತ ತಿಳಿದಿದ್ದ ಕಂಡಕ್ಟರ್ ಸೈಲೆಂಟ್    ಆದ.ಬಸ್ಸು ನಿದಾನವಾಗಿ ಚಲಿಸುತ್ತಿತ್ತು.ಆ ಪ್ರಯಾಣಿಕ ಅಣ್ಣಾ ಥ್ಯಾಂಕ್ಸ್ ಅನ್ನುತ್ತಾ ಸ್ಲೀಪರ್ ಕೋಚ್ ಬಸ್ಸಿನ ಸೀಟು ಏರಿದ.
ಸ್ವಲ್ಪವೇ ಕಿಟಕಿ ತೆಗೆದುಕೊಂಡು ಪ್ರಯಾಣಿಸುತ್ತಿದ್ದ ನನಗೆ ಹೊರಗಡೆಯಲ್ಲಿ ಆಕಾಶದ ಶಶಿ ನನ್ನನ್ನು ನೋಡಿ ಮುಗುಳ್ನಕ್ಕಂತೆ ಅನಿಸಿತ್ತು,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu