ಆಳಬೇಕಾದ ಅನ್ನದಾತ ಅಳುತ್ತಿದ್ದಾನೆ. ದಯವಿಟ್ಟು ಸರ್ಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ.#ವೆಂಕಟೇಶಸಂಪ.
ಅತ್ತ ನೀರು ಕೇಳಿದ ರೈತರಿಗೆ ಬಾಸುಂಡೆ ಬರುವಂತೆ ಬಾರಿಸುತ್ತೆ ವ್ಯವಸ್ಥೆ. ಇನ್ನೇನು ಬದುಕಿನ ಸಂಜೆಯ ಸಮಯದ ವೃದ್ದರಿಗೂ ಕೈ ಮುರಿಯುವಂತೆ,ಜೀವ ಹೋಗುವ ರೀತಿ ಬಡಿಯುತ್ತಾರೆ ಈ ಪೋಲಿಸ್.ಮನೆಯಲ್ಲಿ ಗಂಡಸರಿಲ್ಲದ ಸಂದರ್ಭ ನೋಡಿ ವೃದ್ದ ಮಹಿಳೆ ಮತ್ತು ಗರ್ಭಿಣಿಯರಿಗೆ ಹೆದರಿಸಿ ಹೊಲಸು ಮಾತಾಡುತ್ತಾರೆ ಕೊಳಕು ಆಫೀಸರ್ಗಳು, ಇನ್ನೇನು ಪರೀಕ್ಷೆ ಬರೆದು ಐಏಎಸ್ ಆಫೀಸರ್ ಆಗಬೇಕೆಂದು ಮನೆಯಲ್ಲಿ ಓದುತ್ತಿದ್ದವರನ್ನು ಸುಮ್ಮನೆ ಎತ್ತಾಕಿಕೊಂಡು ಹೋಗಿ ಮನಸ್ಸಿಗೆ ಬಂದ ಕೇಸ್ ಹಾಕುತ್ತಾರೆ. ಇದನ್ನು ತೋರಿಸಿದ ಮಾದ್ಯಮಗಳು ಕೆಟ್ಟವರು ಅಂತ ಹೇಳಿಬಿಡುತ್ತಾನೆ ಹೊಲಸು ರಾಜಕಾರಣಿ.ಮಾನವೀಯತೆಯ ಲವಲೇಶವೂ ಇಲ್ಲದ ಕ್ರೂರತೆಯ ಮನಸ್ಥಿತಿಯ ಮಂದಿಗಳೇ ನಿಮಗೆ ಎಲ್ಲರಿಗೂ ನೀರು ಬೇಕು.ನಿಮ್ಮೆಲ್ಲರ ಹೊಟ್ಟೆಗೆ ನಮ್ಮ ರೈತ ಬೆಳೆದ ಅನ್ನ ಬೇಕು.ತಮ್ಮ ಕುಟುಂಬದ ಆರೋಗ್ಯಕ್ಕೆ ನಮ್ಮ ಅನ್ನದಾತನ ಹಸುವಿನ ಹಾಲು ಬೇಕು. ಆದರೇಕೆ ಇವರಿಗೆ ರೈತರೆಂದರೆ ತಾತ್ಸಾರ?
ಅವನ್ಯಾವನೋ ಕೋಟಿ ರೂಪಾಯಿ ವಂಚಿಸಿ ಓಡಿಹೋದವರನ್ನು ಆರಾಮಾಗಿ ಬಿಡುವ ವ್ಯವಸ್ಥೆ,
ಬ್ಯಾಂಕ್ ನವರು ಮುಷ್ಕರಕ್ಕೆ ನಿಂತರೆ ಒಂದೇ ದಿನಕ್ಕೆ ಪರಿಹರಿಸುವ ವ್ಯವಸ್ಥೆ, ನಮ್ಮನ್ನು ಸುಲಿಗೆ ಮಾಡಿದರೂ ಜನರ ಒಪ್ಪಿಗೆ ಇಲ್ಲದೆ ಲಕ್ಷ ಲಕ್ಷ ರೂಪಾಯಿ ಸಂಬಳ ಮಾಡಿಕೊಳ್ಳೋ ಶಾಸಕರು, ಸಂಸದರು,ಸಂಬಳದ ಜೊತೆ ಗಿಂಬಳಕ್ಕಾಗಿ ಹಲ್ಲುಗಿಂಜುವ ಅದೆಷ್ಟೋ ಅಧಿಕಾರಿಗಳು,ಇವರೆಲ್ಲರ ಭಾವನೆಗಳಿಗೆ ಸಿಗೋ ಒಂದು ಪರ್ಸೆಂಟ್ ಬೆಲೆ ಗೌರವ ನಮ್ಮ ಅನ್ನದಾತನಿಗೆ ಕೊಟ್ಟಿದ್ದರೆ ದೇಶ ಉದ್ದಾರವಾಗುತ್ತಿತ್ತು.
ಆತನ ಕಷ್ಟ ಒಮ್ಮೆ ಓದಿ.
ಆಳಬೇಕಾದ ಅನ್ನದಾತ ಅಳಬಾರದು!
ಸಣ್ಣದೊಂದು ಮನೋಸ್ಥೈರ್ಯ ಮೂಡಿಸೋಣ ಬನ್ನಿ!,,,,,,,
*ವೆಂಕಟೇಶ ಸಂಪ
ಒಬ್ಬ ರೈತ ಸತ್ತರೆ ಸಾವಿರ ಸೈನಿಕ ಸತ್ತಂತೆ!ಒಬ್ಬ ರೈತ ತನ್ನ ಕರ್ತವ್ಯದಿಂದ ವಿಮುಖನಾದರೆ ಆ ಊರಿಗೇ ಬರ ಬಂದಂತೆ.ಅನ್ನದಾತ ನಗಬೇಕು,ತುತ್ತು ಕೊಡುವ ಕೈಗೆ ಶಕ್ತಿ ತುಂಬಬೇಕು.ನಮ್ಮೂರಿನ ರೈತನಿಗೆ ಸಾದ್ಯವಾದಲ್ಲೆಲ್ಲಾ ಸಹಾಯ ಮಾಡೋಣ,ಆತನಿಗೆ ಬೇಕಾದ್ದು ಮಾನಸಿಕ ಸ್ಥೈರ್ಯ,ಉತ್ತಮ ಬೀಜ,ಗೊಬ್ಬರ,ಒಳ್ಳೆಯ ಮಾರುಕಟ್ಟೆ,ಆತನೂ ಎಲ್ಲರಂತೆ ಸ್ವಾಭಿಮಾನಿಯಾಗಿ ಬದುಕಬೇಕು!
ಆದರೆ ಏನು ಮಾಡೋಣ ಹೇಳಿ!!
ಇಷ್ಟು ಸಣ್ಣ ಸೌಲಭ್ಯ ಕೊಡಲಾಗದ ಸರ್ಕಾರಿ ವ್ಯವಸ್ಥೆ!,,ಭಾಷಣದಲ್ಲೇ ಅಭಿವೃದ್ದಿ ಮಂತ್ರ ಹೇಳೋ ರಾಜಕಾರಣಿಗಳು!ಇರುವ ಸೌಲಭ್ಯ ಕೊಡದೇ ಸತಾಯಿಸುವ ಅಧಿಕಾರಿಗಳು!?ರೈತರ ಹೆಸರಲ್ಲಿ ಹೋರಾಟದ ಹೆಸರು ಹೇಳಿ ತಿರುಗುವ ಮುಖಂಡರುಗಳು!ಒಮ್ಮೆ ಬರದ ಬರೆ,ಇನ್ನೊಮ್ಮೆ ನೆರೆಯ ಹಾವಳಿ ಎಂಬ ಪ್ರಕೃತಿಯ ವಿಚಿತ್ರ ಆರ್ಭಟ!ಬೆಳೆದ ಬೆಳೆ ಬೆಳೆಯಲು ಕಾಡುಪ್ರಾಣಿಗಳ ಜೊತೆ ಕಳ್ಳರ ಕಾಟ!ಊರೆಲ್ಲಾ ಸಾಲ ಮಾಡಿ ಬೆಳೆದ ಫಸಲನ್ನು ಪೇಟೆ ತಂದಾಗ ಮೂರು ರೂಪಾಯಿಗೆ ಕೇಳೋ ವ್ಯಾಪಾರಿ!ತುಂಬಿದ ಸಂಸಾರ!ಮಕ್ಕಳ ವಿದ್ಯಾಭ್ಯಾಸಕ್ಕೂ ದುಡ್ಡು ಇರದ ಸಂಕಷ್ಟ!ಕೆಲಸ ಮಾಡದ ಸಬ್ಸಿಡಿ ಯಂತ್ರಗಳು!ದಾರಿ ತಪ್ಪಿಸುವ ಸರ್ಕಾರದ ಪುಕ್ಸಟ್ಟೆ ಸೌಲಭ್ಯಗಳು!
ರೈತನೆಂದ ಕೂಡಲೇ ಮೂಗು ಮುರಿಯುವ ಸೋ ಕಾಲ್ಡ್ ಎಜುಕೇಟೆಡ್ ಜನಗಳು!?
ಇದು ಸರಿಯೇ!?
ಮೂರು ಹೊತ್ತಿಗೂ ನಮ್ಮ ಹೊಟ್ಟೆ ತುಂಬಿಸುವ ಅನ್ನದಾತನಿಗೇ ನೆಲೆ ಇಲ್ಲದಂತಾಯಿತೇ!?
ಒಮ್ಮೆ ಯೋಚಿಸಿ!
ನಾಳೆ ನಮ್ಮ ಬಳಿ ಸಾವಿರ ಕೋಟಿ ಹಣ ಇರಬಹುದು!ನೂರಾರು ಕೇಜಿ ಚಿನ್ನ ಇರಬಹುದು!ಓಡಾಡಲು ಕಾರು,ಐಶಾರಾಮಿ ಬಂಗಲೆ ಇರಬಹುದು!ಆದರೆ ಕುಡಿಯಲು ನೀರು,ತಿನ್ನಲು ಅನ್ನ,ಸೇವಿಸಲು ಗಾಳಿ ಇಲ್ಲದಿದ್ದರೆ ಏನು ತಾನೆ ಉಳಿದೀತು!?
ಒಂದು ಕ್ಷಣ!ನಾವು ನಾವಾಗೋಣ!ರಾಕ್ಷಸತ್ವ ಕಿತ್ತೊಗೆದು ಮಾನವೀಯ ಮುಖ ಹೊಂದೋಣ,!
ಕೃಷಿಕ ಸ್ವಾಭಿಮಾನಿಯಾಗಬೇಕು,ಕೃಷಿಕ ಧರಣಿಯನ್ನಾಳಬೇಕು!ಕೃಷಿಕನ ಬಗೆಗಿನ ಟೊಳ್ಳು ನಿರ್ಲಕ್ಷ ತೊಲಗಬೇಕು.ಒಂದು ಪತ್ರಿಕೆಯಾಗಿ ಸಂಪದ ಸಾಲು ರೈತರ ಮಾನಸಿಕ ಸ್ಥೈರ್ಯ ಹಾಗು ಜಾಗೃತಿ ಮೂಡಿಸಲು ಸಿದ್ದವಾಗಿದೆ.ಪ್ರತಿಯೊಬ್ಬ ಓದುಗನಲ್ಲಿ ಮನವಿ!
ಒಬ್ಬ ರೈತನಿಗೆ,ಒಬ್ಬ ಅನ್ನದಾತನಿಗೆ ಸಹಾಯ ಮಾಡಲು ಸಲಹೆ ಕೊಡಿ,
ನಾವೇನೋ ಆಕಾಶದಲ್ಲಿ ಅರಮನೆ ಕಟ್ಟುತ್ತೇವೆ ಎನ್ನುತ್ತಿಲ್ಲ.ವ್ಯವಸ್ಥೆಯನ್ನು ಒಂದೇ ದಿನಕ್ಕೆ ಸರಿ ಮಾಡುತ್ತೇವೆಂಬ ಹಠವೂ ಇಲ್ಲ!ಆದರೆ ಭೂಮಿಯಲ್ಲಿ ಗುಡಿಸಲನ್ನಾದರೂ ಕಟ್ಟುವ ಕನಸು ಹೊಂದಿದ್ದೇವೆ.ಸ್ವತಃ ನಾವು ರೈತರಾಗಿ ಆಲೋಚಿಸುತ್ತಿದ್ದೇವೆ,ತೀರಾ ಸಂಕಷ್ಟದ ಕೆಲವು ರೈತರಿಗೆ ಈಗಾಗಲೇ ಸಹಾಯ ಮಾಡಿದ್ದೇವೆ.ನಾವು ಮಾಡುವ ಸಣ್ಣ ಸಣ್ಣ ಪಾಸಿಟೀವ್ ಕಾರ್ಯಗಳು ಸೂರ್ಯನಷ್ಟು ಬೆಳಕು ನೀಡದಿದ್ದರೂ ಸಂಪೂರ್ಣ ಕತ್ತಲೆ ಕವಿಯದಂತೆ ಮಿಣುಕು ಬೆಳಕನ್ನು ಆಶಾಕಿರಣವನ್ನು ಮೂಡಿಸಬಲ್ಲದು!
ನಮ್ಮ ಸಂಪದ ಸಾಲು ಸಂಸ್ಥೆ ಜಾಗೃತಿಗೆ ಸಿದ್ದವಾಗಿದೆ,ಪ್ರತಿಯೊಬ್ಬರ ಸಹಕಾರ,ಸಹಾಯ ಅಗತ್ಯ!
ಅನ್ನದಾತ ಅಳಬಾರದು!ಆಳಬೇಕು,ಇದೇ ನಮ್ಮ ಕನಸು.ಇದನ್ನು ಒಪ್ಪಿವಿರಾದಲ್ಲಿ ಈ ಅಭಿಯಾನಕ್ಕೆ ಕೈ ಜೋಡಿಸಿ.ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿ.
ಜೈ ಹೋ ಅನ್ನದಾತ.
*ವೆಂಕಟೇಶ ಸಂಪ.
ಓದಿ ಸಂಪದ ಸಾಲು
ಅಂಚೆ ಪೆಟ್ಟಿಗೆ ಸಂಖ್ಯೆ 32,ಸಾಗರ 577401.
9448219347
#ಓದಿಸಂಪದಸಾಲುಪತ್ರಿಕೆ
No comments:
Post a Comment