ಈ ಪೋಸ್ಟ್ ಯಾರ ವಿರೋಧವೂ ಅಲ್ಲ! ಸತ್ಯದ ಪರ ಅಷ್ಟೇ!
ಒಮ್ಮೆ ಪೂರ್ತಿ ಓದಿ ಹೇಳಿ,
ಪಾಸಿಟಿವ್ ಜರ್ನಲಿಸಂ ಬೇಕೋ ಬೇಡವೋ?
ಒಳ್ಳೆಯ ಪತ್ರಿಕೆ,ಪತ್ರಕರ್ತರೂ,ಟೀವಿಗಳು ಇವೆ. ಜನರ ಬೆಂಬಲವಿಲ್ಲದೆ ಅವು ನರಳುತ್ತಿವೆ.
ಎಲ್ಲಿಗೆ ಬಂತು ಪತ್ರಿಕೋದ್ಯಮ?
ಪತ್ರಿಕೆ ಅಂದರೆ ಸಾಕು ಸಾವಿರಾರು ಜನಕ್ಕೆ ಮಾಹಿತಿ ಕೊಡೋದು, ಜ್ಞಾನ ಹೆಚ್ಚಿಸೋದು, ಸತ್ಯಕ್ಕೆ ವೇದಿಕೆಯಾಗಿ ನಿಲ್ಲೋದು,ಇಂತಹ ಗೌರವದ ಕಾಯಕದಲ್ಲಿದ್ದ ಪತ್ರಿಕೆಗಳು ಮಿಡಿಯಾಗಳು ಎಲ್ಲಿಗೆ ಬಂದು ನಿಂತಿವೆ,
ಯಾರನ್ನೋ ಒಲೈಸಿ ದುಡ್ಡು ದೋಚುತ್ತವೆ ಅಥವಾ ಇನ್ಯಾರ ಮೇಲೋ ದ್ವೇಶ ಸಾಧಿಸಿ ತನ್ನ ತೀಟೆ ತೀರಿಸಿಕೊಳ್ಳುತ್ತಿವೆ.
ಟ್ಯಾಬ್ಲಾಲ್ಡ್ ಮಾದರಿಯಲ್ಲಿ ಜ್ಞಾನ ಮಾಲಿನ್ಯದ ಆಗರವಾದ ಬಹುತೇಕ ನ್ಯೂಸ್ಪೇಪರ್ ಗಳು,ದುಡ್ಡಿಗಾಗಿ ಎನೂ ಬೇಕಾದ್ರೂ ಸುದ್ದಿ ಮಾಡಿ ಟಿ ಆರ್ ಪಿ ಯ ಬೆನ್ನು ಹತ್ತುತ್ತವೆ, ಬ್ಲಾಕ್ ಮೈಲ್ ಅಥವಾ ಹೊಗಳುಭಟರಾಗೋ ಬಹುತೇಕ ಪತ್ರಕರ್ತರು, ಕೆಟ್ಟದ್ದನ್ನು ಬರೆದರೂ,ಅದನ್ನೇ ತೋರಿಸಿದರೂ ಪ್ರತಿಭಟಿಸದೇ ನೆಗೆಟಿವ್ ಜರ್ನಲಿಸಂ ಬೆಳೆಸೋ ನಾವು-ನೀವುಗಳು, ಇನ್ನೇನು ಸಿಕ್ಕೀತು ಫಲಿತಾಂಶ ಹೇಳಿ?
ಇಸ್ರೋದಂತಹ ಸಂಸ್ಥೆ ಜಾಗತಿಕ ಸಾಧನೆ ಮಾಡಿದರೆ ಈ ಮಿಡಿಯಾಗಳು ತಮಿಳುನಾಡಿನ ಅಪರಾಧಿ ಶಶಿಕಲಾಳ ಊಟ ತಿಂಡಿ ನಿದ್ದೆ ವಿಸರ್ಜನೆ ಅಂತ ತೋರಸ್ತವೆ! ?
ಅಮಾಯಕ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ನಂತಹ ಅಧಿಕಾರಿಗಳನ್ನು ಇವರೇ ತಪ್ಪಿತಸ್ಥರೆಂದು ತಿರ್ಮಾನ ಕೊಟ್ಟು ಆತನನ್ನು ನೇಣಿನ ಕುಣಿಕೆಗೆ ತಳ್ಳುತ್ತದೆ!
ವಾಸ್ತವ ವಿಚಾರ ಬರೆದ ಪ್ರೇಮಶೇಖರ್ ಅಂತಹ ಬರೆಹಗಾರನನ್ನು ತಪ್ಪಿತಸ್ಥರೆಂದು ತಮಗೆ ತಾವೇ ಬರೆದುಕೊಂಡು ಸಂಭ್ರಮಿಸುತ್ತಾರೆ!
ಅಭಿವ್ಯಕ್ತಿ ಸ್ವಾತಂತ್ರಕ್ಕೂ ಬೆಲೆ ಕೊಡದೇ ತಮ್ಮದೇ ನಂಬರ್ ಒಂದು ಅನ್ನುತ್ತಾ ಸತ್ಯ ಬರೆದರೂ ಬಂಧಿಸಿದ್ವಿ ಅಂತ ಬೀಗುತ್ತಾರೆ!
ಎಷ್ಟೋ ಜನಕ್ಕೇ ಬರವಣಿಗೆಯೇ ಗೊತ್ತಿಲ್ಲದಿದ್ದರೂ ಕಾರ್ಡ್ ಇದ್ದಿದ್ದಕ್ಕಾಗಿ ಪತ್ರಕರ್ತ ಎನ್ನುತ್ತಾರೆ!
ವಿಷಯದ ಕಲ್ಪನೆಯೇ ಇಲ್ಲದೇ ಗಂಟೆಗಟ್ಲೆ ಸುದ್ದಿ ಮಾಡ್ತಾರೆ!ಯಾರದೋ ಮನೆಯ ವೈಯುಕ್ತಿಕ ಬದುಕನ್ನು ಎಳೆದುಕೊಂಡು ಬಂದು ಸಂಭ್ರಮಿಸುತ್ತಾರೆ.
ರೇಪು ಕೊಲೆ ಮಾಡಿದವರನ್ನೂ ದೊಡ್ಡ ಸಾಧಕರಂತೆ ಬಿಂಬಿಸುತ್ತಾರೆ,ಪ್ರಭಾವಿಗಳ ರಕ್ಷಣೆಗಾಗಿ ಜನರ,ಸರ್ಕಾರದ,ಅಧಿಕಾರಿಗಳ ದಿಕ್ಕುತಪ್ಪಿಸಿ ಪೈಸೆ ಪೀಕುತ್ತಾರೆ!
ಯಾಕೆ ಹೀಗೆ?ನಮ್ಮ ಸಮಾಜಕ್ಕೆ ಸ್ವಸ್ಥ ಮನಸ್ಥಿತಿ ಬೇಡವೇ?ಈಗಲಾದರೂ ಪಾಸಿಟಿವ್ ಜರ್ನಲಿಸಂ ಬೇಡವೇ?
ಟಿ ಆರ್ ಪಿ ಸಿಕ್ಕಿದೆ ಅದಕ್ಕಾಗಿ ಮೇಟಿಯ ಸೆಕ್ಸ್ ವಿಡಿಯೋ ಹಾಕ್ತಿವಿ ಅನ್ನುವಾಗ ಇದು ತಪ್ಪು ಅಂತ ಹೇಳೋ ಮನಸ್ಥೈರ್ಯ ಯಾಕೆ ತೊರಿಸುತ್ತಿಲ್ಲ?
ಈಗಲೂ ಒಳ್ಳೆಯ ಟಿವಿ ಚಾನಲ್ ಗಳಿವೆ, ಒಳ್ಳೆಯ ಕಾರ್ಯಕ್ರಮಗಳಿವೆ, ಒಳ್ಳೆಯ ಪತ್ರಿಕೆಗಳಿವೆ, ಸಜ್ಜನ ಪತ್ರಕರ್ತರೂ ಇದ್ದಾರೆ. ಆದರೆ ಅಂತಹ ಟಿವಿ, ಪತ್ರಿಕೆ,ಪತ್ರಕರ್ತರನ್ನು ಗುರುತಿಸಿ ಪ್ರೋತ್ಸಾಹಿಸದಿದ್ದರೆ ಬೆಳೆಯೋದು ಜ್ಞಾನ ಮಾಲಿನ್ಯದ ಟೀವಿಗಳು ಮತ್ತು ಪತ್ರಿಕೆಗಳು!
ಇನ್ನಾದರೂ ಜಾಗೃತರಾಗಬೇಕಿದೆ,ನಮ್ಮ ಸಂಪದ ಸಾಲು ಪತ್ರಿಕೆ ಕಳೆದ 10 ವರ್ಷದಿಂದ ಒಂದೂ ನೆಗೆಟಿವ್ ಸುದ್ದಿ ಬರೆಯದೇ, ಯಾರಿಗೂ ಹೊಗಳುಭಟರಾಗದೇ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಅಂದರೆ ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಬೆಂಬಲಿಸೋರು ಇನ್ನೂ ಇದ್ದಾರೆ ಅನ್ನೋದು ಸ್ಪಷ್ಟ.
ಸುಧಾ, ತರಂಗ,ಕರ್ಮವೀರ, ಮಯೂರದಂತಹ ಪತ್ರಿಕೆಗಳು ಪಾಸಿಟಿವ್ ಜರ್ನಲಿಸಂ ಗೆ ಒಳ್ಳೆಯ ಉದಾಹರಣೆ.
ಸ್ಪೆಲ್ಲಿಂಗ್ ಗಳು ಮಿಸ್ಟೇಕ್ ಆಗಬಹುದು ಅದು ತಪ್ಪಲ್ಲ,ಆದರೇ ಸುದ್ದಿಗಳೇ ಪೈಡ್ ನ್ಯೂಸ್ ಆಗ್ಬಾರದು,
ಒಳ್ಳೆಯದನ್ನು ಬೆಳೆಸೋಣ! ಕೆಟ್ಟದ್ದು ತಾನಾಗಿಯೇ ಹೋಗುತ್ತದೆ.ಕೃಷಿ ಭೂಮಿಯಲ್ಲಿ ಒಳ್ಳೆಯ ಬೆಳೆಗಳನ್ನು ಬೆಳೆದಾಗ ಕಳೆಗಿಡಗಳು ಸಾಯುವಂತೆ ವ್ಯವಸ್ಥೆ ರಚನೆಯಾಗಲಿ ಎಂಬ ಆಶಯದೊಂದಿಗೆ,
ಬದಲಾವಣೆ ಬರಲಿ-ಪರಿವರ್ತನೆ ತರಲಿ, ಇದು ಸಂಪದ ಸಾಲು ಪತ್ರಿಕೆಯ ಅಭಿಯಾನ ಕೂಡ, #ಬೇಕು_ಪಾಸಿಟಿವ್_ಜರ್ನಲಿಸಂ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ 9448219347
No comments:
Post a Comment