ಇತ್ತೀಚಿನ ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತು ಗಾಂಧಿ ನಗರದ ಕರಾಳ ಮುಖವಿದು......ಇಲ್ಲಿ ಶೋಷಿತರು ಕೇವಲ ಹೆಣ್ಣು ಮಕ್ಕಳು ಮಾತ್ರ ಅಲ್ಲ......ಗಂಡು ಮಕ್ಕಳು ಆಸೆ ಹೊತ್ತು ಈ ಇಂಡಸ್ಟ್ರಿಯಲ್ಲಿ ಯಾರ್ಯಾರ್ದೋ ಕಾಲು ಗಡ್ಡ ಹಿಡಿದು ಒದ್ದಾಡಿದ್ದಾರೋ...?! ಗೊತ್ತಿಲ್ಲ.....
ದೊಡ್ಡ ದೊಡ್ಡ ನಿರ್ದೇಶಕರು...ನಟರು...ಪ್ರೊಡ್ಯೂಸರ್ ಗಳು....ನನ್ನ ಜೇಬಿನಲ್ಲೇ ಇದ್ದಾರೆ ಅಂತಾರೆ.. ಕಾಗೆ ಹಾರಿಸೋದು ಇಲ್ಲಿ ಕಾಮನ್....ಅವಕಾಶ ಕೊಡಸ್ತೀನಿ ಅಂತ.....ಪೋಟೋ ಕಳ್ಸಿ ಅಂತಾ ಹೇಳೋರು....ಕಾಫಿ ತಿಂಡಿಗೆ ಕಾಸು ಕೊಡಿ ಅಂತಾರೆ....ಇನ್ನೂ ಭಯಾನಕ ಮೋಸ ಇಲ್ಲಿದೆ.......ಮೋಸ ಮಾಡಲು ಗಂಡು ಹೆಣ್ಣೆಂಬ ಬೇಧವಿಲ್ಲ....
ಇನ್ನಾದರೂ ಈ ಲೋಕ ಸರಿ ಆಗಲಿ....
ಕನಸಿನಲ್ಲೇ ಕಾಗೆ ಹಾರಿಸುವವರ ಎದುರು ಗುಬ್ಬಚ್ಚಿಯಾಗಿ ಕುಳಿತಿದ್ದೆ!?!
*ವೆಂಕಟೇಶ ಸಂಪ.
ಮೊನ್ನೆ ಒಬ್ಬ ದೂರದ ಪರಿಚಿತನೊಬ್ಬ ಸಿಕ್ಕಿದ್ದ... ಗಾಂದೀನಗರದಲ್ಲಿ ಒಂದಷ್ಟು ದಾರಾವಾಹಿ ಮತ್ತು ಸಿನಿಮಾ ಅಂತ ಓಡಾಡಿಕೊಂಡಿದ್ದ..."ಸಾರ್...ಒಳ್ಳೆ ಕತೆ ಇದೆ ಸಾರ್..ನೀವು ಸ್ಮಾರ್ಟ್ ಇದಿರಾ..ನೀವೇ ಸಿನಿಮಾ ಹೀರೋ ಆಗಬಹುದು ಸಾರ್...ಒಂದಷ್ಟು ಹಣ ಇನ್ವೆಷ್ಟ್ ಮಾಡಿದ್ರೆ ಪ್ರೊಡ್ಯುಸರ್ ಆಗ್ಬಹುದು ..ಜೊತೆಗೆ ಹೀರೋನೂ ಆಗಬಹುದು ಸಾರ್"ಅಂದ....
ಆಗ ಹಳೆಯ ನೆನಪುಗಳು ಕಾಡಿದ್ದು ಹೀಗೆ....
ಮುಗಿಯದಷ್ಟು ಕೆಲಸವಿತ್ತು....ಪತ್ರಿಕೆ... ಕೃಷಿ....ಕಂಪನಿ....ಅಭಿಯಾನ....ರೆಡಿಯೊ....ಬರವಣಿಗೆ....ಹೀಗೆ ಎಲ್ಲೆಡೆ ಮಾಡಿದಷ್ಟೂ ಮುಗಿಯದ ಕೆಲಸಗಳಿತ್ತು...ಓದಲೇ ಬೇಕಾದ ಪುಸ್ತಕಗಳ ರಾಶಿ ಇತ್ತು.. ಬರಯಲೇಬೇಕಾದ ವಿಷಯಗಳು ಬೆಟ್ಟದಷ್ಟಿತ್ತು....ಬೆಳೆದಷ್ಟೂ ಬೆಳೆಯಬೇಕಾದ ವಿವಿಧ ಬಗೆಯ ಕೃಷಿ ಕೆಲಸವಿತ್ತು...ನಾನೇ ಪ್ರಾರಂಬಿಸಿದ ಕಂಪನಿ ಬೆಳೆಸುವುದಿತ್ತು....ಜನಗಳ ಆಲೋಚನೆಯ ಜೊತೆ ನಾವು ಪಾಸಿಟಿವ್ ಆಗಿ ಬದಲಾಗುವ ಸಂಪದ ಸಾಲು ಅಭಿಯಾನವಿತ್ತು.....ಇಷ್ಟೆಲ್ಲಾ ಜವಬ್ದಾರಿ ಜೊತೆಗಿದ್ದರೂ ಹಾಳಾದ್ದು ಒಂದು ಹುಚ್ಚು ಜೊತೆಗಿತ್ತು...!?
ಸಂಜೆಯಾದೊಡನೆ ಪ್ರಪಂಚವನ್ನೇ ಮರೆತು ಟಿ ವಿ ಮುಂದೆ ಕುಳಿತು ಲಕ್ಷಾಂತರ ಜನ ನೋಡುವ ಈ ದಾರಾವಾಹಿಗಳಲ್ಲಿ ಅಭಿನಯಿಸಲೇಬೇಕೆಂದು...!?
ಈ ಕಾರಣಕ್ಕಾಗಿ ಅದೆಷ್ಟು ಅ(ಪ್ರಸಿದ್ದ) ನಿರ್ದೇಶಕರಿಗೆ.... ಪೋಟೋ ಕಳಿಸಿದ್ದೆನೋ?!..ಅವರ ರಿಪ್ಲೇಗಾಗಿ ಶಬರಿಯಂತೆ ಕಾದೆನೋ?ಅವರು ಕರೆದಲ್ಲೆಲ್ಲಾ ಹೋಗಿ ಅವರ ಬಳಿ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆನೋ?! ಮಾಡಿದ ನಾಟಕ...ಯಕ್ಷಗಾನದ ಪೋಟೋ ತೋರಿಸಿ ನಂಗೊಂದು ಛಾನ್ಸ್ ಕೊಡಿ ಅಂತೆಲ್ಲಾ ಅಂಗಲಾಚಿದ್ದು...ಅವರು ಹೇಳಿದ ಕೆಲಸ ಮಾಡಿದ್ದು....ಅವರು ಹೇಳಿದ ಜಾಗಕ್ಕೆಲ್ಲಾ ಹೋಗಿ ಕಂಡ ಕಂಡವರಿಗೆಲ್ಲಾ ಸಲ್ಯೂಟ್ ಹೊಡೆದಿದ್ದು...ಪದೇ ಪದೇ ನಾನೇ ಪೋನ್ ಮಾಡಿ ಯಾವಾಗ ಅವಕಾಶ ಕೊಡ್ತೀರಿ ಅಂತ ಕೇಳಿ ಬೈಸಿಕೊಂಡಿದ್ದು...ನಂಗೊಂದು ಅವಕಾಶ ಕೊಡಿ ಎಂದರೆ ಒಳ್ಳೆ ಹುಡುಗಿಯರು ಯಾಕ್ಟಿಂಗ್ ಗೆ ಬೇಕು ಇದ್ರೆ ಹೇಳ್ರಿ ಅನ್ನಿಸಿಕೊಂಡಿದ್ದು.....ಅಯ್ಯೋ ಅವಕಾಶ ಕೊಡ್ತಿನಿ ಸ್ವಲ್ಪ ದುಡ್ಡು ಕೊಡಿ ಅಂದ ಅದ್ಯಾವುದೋ ಪ್ರೊಡಕ್ಷನ್ ಮ್ಯಾನೇಜರ್ರು.....ಎದುರಿಗೆ ಬಂದ ನನ್ನನ್ನು ನಿಂಗೆ ಅದು ಬರತ್ತಾ...ಇದು ಬರತ್ತಾ....ಯಾವದ್ರಲ್ಲಿ ಮಾಡಿದೀರಿ?... ಅಂತೆಲ್ಲಾ ಕೇಳಿ ಪೋನ್ ಮಾಡ್ತಿನಿ ಅಂದೋರು ಎಲ್ಲಿ ಹೋದರೋ ಗೊತ್ತಿಲ್ಲ.....
ಕ್ಷಣಗಳು ಉರುಳಿದಂತೆ......ದಿನಗಳು ಕಳೆಯಿತು.....ಕಡೆಗೂ ಒಂದಷ್ಟು ದಾರಾವಾಹಿಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡಿದ್ದು ಆಯ್ತು.....ಈ ಗಾಂಧೀನಗರದ ಅಸಲಿ ಮುಖಗಳು ಸ್ಪಷ್ಟವಾಗುತ್ತಾ ಬಂತು.......ಕನಸಿನಲ್ಲೇ ಕಾಗೆ ಹಾರಿಸುವವರು........ಮಾತಿನಲ್ಲಿ ಮಂಟಪ ಕಟ್ಟುವವರು......ರಾಜಕಾರಣಿಗಳಂತೆ ಭರವಸೆ ಕೊಟ್ಟವರು.......ದೇಶವೇ ತನ್ನ ಮೇಲಿದೆ ಎಂಬಂತೆ ಪೋಸು ಕೊಟ್ಟವರ ನಡುವೆಯೂ ಒಂದಷ್ಟು ಒಳ್ಳೆ ನಿರ್ದೇಶಕರು...ನಿರ್ಮಾಪಕರು.... ಕಲಾವಿದರು ಇದ್ದಾರೆ..... ಹಾಗಾಗಿಯೇ ಕನ್ನಡ ಸಿನಿಮಾ ಲೋಕ...ಹಿರಿ ತೆರೆ....ಕಿರುತೆರೆ ಬೆಳೆಯಬಹುದೆಂಬ ನಿರೀಕ್ಷೆಯಿದೆ....
#ಓದಿ ಸಂಪದ ಸಾಲು...
"ಬದಲಾವಣೆ ಬರಲಿ.ಪರಿವರ್ತನೆ ಬರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ... .........
No comments:
Post a Comment