ಈ ಹೊತ್ತಿನಲ್ಲಿ ಮಹಾತ್ಮ ಗಾಂಧೀಜಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ....!
ಸತ್ಯಮೇವ ಜಯತೆ.....ಎಂಬುದು ನಮ್ಮ ಪುರಾತನವಾದ ಒಂದು ಅದ್ಭುತವಾದ ವಾಕ್ಯ...ಆದರೆ ನಾವು ತಿಳಿದುಕೊಂಡಿದ್ದೇ ಸತ್ಯ ಎಂದು ನಂಬಲಾಗದು...
ಯಾವ ಹುತ್ತದಲ್ಲಿ ಯಾವ ಹಾವು ಅಡಗಿರುತ್ತದೋ?!.....
ಬಿಳಿ ಇರೋದೆಲ್ಲಾ ಹಾಲಲ್ಲ.....
.ಆದರೂ ಸತ್ಯ ಗೆಲ್ಲಬೇಕು ......
.ಏಕೆಂದರೆ......ಸುಳ್ಳುಗಳೇ ಸತ್ಯವೆಂದು ಬಿಂಬಿತವಾದರೆ ನಿಜವಾದ ಸತ್ಯವೆಂಬ ಅನರ್ಘ್ಯ ರತ್ನದ ಬೆಲೆ ತಿಳಿಯುವುದಿಲ್ಲ....
ವ್ಯಕ್ತಿ ಎಷ್ಟೇ ದೊಡ್ಡವನಿರಲಿ...ವಿಚಾರ ಯಾವುದೇ ಇರಲಿ....ತರ್ಕ ಮಾಡಬೇಕು.....ಒಪ್ಪಿಕೊಳ್ಳುವ ಮುನ್ನ ವಿಶ್ಲೇಷಣೆ ಮಾಡಬೇಕು....
ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡಬೇಕು..
ಪ್ರತಿಭಟಿಸುವ ಮುನ್ನ... ಸುದ್ದಿ ಬಿತ್ತರಿಸುವ ಮುನ್ನ......ಯಾವುದೇ ಕೆಲಸ ಮಾಡುವ ಮುನ್ನ ಸಾವಿರ ಬಾರಿ ಆಲೋಚಿಸಬೇಕು ಅಲ್ಲವೇ?!
.ಹಿಂಸೆ ಯಾವುದಕ್ಕೂ ಪರಿಹಾರವಲ್ಲ...ಯಾರಿಗೂ ಹೆದರಿಸದೇ....ಯಾರ ಮೇಲೂ ಪ್ರಭಾವ ಬೀರದೇ ಶಸ್ತ್ರಗಳೇ ಇಲ್ಲದೆ ದೇಶವನ್ನು ಗೆದ್ದ ಮಹಾತ್ಮ ಗಾಂಧಿ ಗ್ರೇಟ್ ಅನ್ನಿಸುವುದು ಈ ಕಾರಣಕ್ಕೆ...
ಓದಿ ಸಂಪದ ಸಾಲು.
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"...
No comments:
Post a Comment