Tuesday, August 30, 2016

ಈ ಹೊತ್ತಿನಲ್ಲಿ ಮಹಾತ್ಮ ಗಾಂಧೀಜಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ..

ಈ ಹೊತ್ತಿನಲ್ಲಿ ಮಹಾತ್ಮ ಗಾಂಧೀಜಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ....!

ಸತ್ಯಮೇವ ಜಯತೆ.....ಎಂಬುದು ನಮ್ಮ ಪುರಾತನವಾದ ಒಂದು ಅದ್ಭುತವಾದ ವಾಕ್ಯ...ಆದರೆ ನಾವು ತಿಳಿದುಕೊಂಡಿದ್ದೇ ಸತ್ಯ ಎಂದು ನಂಬಲಾಗದು...

ಯಾವ ಹುತ್ತದಲ್ಲಿ ಯಾವ ಹಾವು ಅಡಗಿರುತ್ತದೋ?!.....

ಬಿಳಿ ಇರೋದೆಲ್ಲಾ ಹಾಲಲ್ಲ.....

.ಆದರೂ ಸತ್ಯ ಗೆಲ್ಲಬೇಕು ......
.ಏಕೆಂದರೆ......ಸುಳ್ಳುಗಳೇ ಸತ್ಯವೆಂದು ಬಿಂಬಿತವಾದರೆ ನಿಜವಾದ ಸತ್ಯವೆಂಬ ಅನರ್ಘ್ಯ ರತ್ನದ ಬೆಲೆ ತಿಳಿಯುವುದಿಲ್ಲ....

ವ್ಯಕ್ತಿ ಎಷ್ಟೇ ದೊಡ್ಡವನಿರಲಿ...ವಿಚಾರ ಯಾವುದೇ ಇರಲಿ....ತರ್ಕ ಮಾಡಬೇಕು.....ಒಪ್ಪಿಕೊಳ್ಳುವ ಮುನ್ನ ವಿಶ್ಲೇಷಣೆ ಮಾಡಬೇಕು....

ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡಬೇಕು..

ಪ್ರತಿಭಟಿಸುವ ಮುನ್ನ...  ಸುದ್ದಿ ಬಿತ್ತರಿಸುವ ಮುನ್ನ......ಯಾವುದೇ ಕೆಲಸ ಮಾಡುವ ಮುನ್ನ ಸಾವಿರ ಬಾರಿ ಆಲೋಚಿಸಬೇಕು ಅಲ್ಲವೇ?!

.ಹಿಂಸೆ ಯಾವುದಕ್ಕೂ ಪರಿಹಾರವಲ್ಲ...ಯಾರಿಗೂ ಹೆದರಿಸದೇ....ಯಾರ ಮೇಲೂ ಪ್ರಭಾವ ಬೀರದೇ ಶಸ್ತ್ರಗಳೇ ಇಲ್ಲದೆ ದೇಶವನ್ನು ಗೆದ್ದ ಮಹಾತ್ಮ ಗಾಂಧಿ ಗ್ರೇಟ್ ಅನ್ನಿಸುವುದು ಈ ಕಾರಣಕ್ಕೆ...
ಓದಿ ಸಂಪದ ಸಾಲು.

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"...

ಕನಸಿನಲ್ಲೇ ಕಾಗೆ ಹಾರಿಸುವವರ ಎದುರು ಗುಬ್ಬಚ್ಚಿಯಾಗಿ ಕುಳಿತಿದ್ದೆ!?! *ವೆಂಕಟೇಶ ಸಂಪ.

ಇತ್ತೀಚಿನ ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತು ಗಾಂಧಿ ನಗರದ ಕರಾಳ ಮುಖವಿದು......ಇಲ್ಲಿ ಶೋಷಿತರು ಕೇವಲ ಹೆಣ್ಣು ಮಕ್ಕಳು ಮಾತ್ರ ಅಲ್ಲ......ಗಂಡು ಮಕ್ಕಳು ಆಸೆ ಹೊತ್ತು ಈ ಇಂಡಸ್ಟ್ರಿಯಲ್ಲಿ ಯಾರ್ಯಾರ್ದೋ ಕಾಲು ಗಡ್ಡ ಹಿಡಿದು ಒದ್ದಾಡಿದ್ದಾರೋ...?! ಗೊತ್ತಿಲ್ಲ.....
ದೊಡ್ಡ ದೊಡ್ಡ ನಿರ್ದೇಶಕರು...ನಟರು...ಪ್ರೊಡ್ಯೂಸರ್ ಗಳು....ನನ್ನ ಜೇಬಿನಲ್ಲೇ ಇದ್ದಾರೆ ಅಂತಾರೆ..   ಕಾಗೆ ಹಾರಿಸೋದು ಇಲ್ಲಿ  ಕಾಮನ್....ಅವಕಾಶ ಕೊಡಸ್ತೀನಿ ಅಂತ.....ಪೋಟೋ ಕಳ್ಸಿ ಅಂತಾ ಹೇಳೋರು....ಕಾಫಿ ತಿಂಡಿಗೆ ಕಾಸು ಕೊಡಿ ಅಂತಾರೆ....ಇನ್ನೂ ಭಯಾನಕ ಮೋಸ ಇಲ್ಲಿದೆ.......ಮೋಸ ಮಾಡಲು ಗಂಡು ಹೆಣ್ಣೆಂಬ ಬೇಧವಿಲ್ಲ....
ಇನ್ನಾದರೂ ಈ  ಲೋಕ ಸರಿ ಆಗಲಿ....

ಕನಸಿನಲ್ಲೇ ಕಾಗೆ ಹಾರಿಸುವವರ ಎದುರು ಗುಬ್ಬಚ್ಚಿಯಾಗಿ ಕುಳಿತಿದ್ದೆ!?!
                        *ವೆಂಕಟೇಶ ಸಂಪ.

ಮೊನ್ನೆ ಒಬ್ಬ ದೂರದ ಪರಿಚಿತನೊಬ್ಬ ಸಿಕ್ಕಿದ್ದ... ಗಾಂದೀನಗರದಲ್ಲಿ ಒಂದಷ್ಟು ದಾರಾವಾಹಿ ಮತ್ತು ಸಿನಿಮಾ ಅಂತ ಓಡಾಡಿಕೊಂಡಿದ್ದ..."ಸಾರ್...ಒಳ್ಳೆ ಕತೆ ಇದೆ ಸಾರ್..ನೀವು ಸ್ಮಾರ್ಟ್ ಇದಿರಾ..ನೀವೇ ಸಿನಿಮಾ ಹೀರೋ ಆಗಬಹುದು ಸಾರ್...ಒಂದಷ್ಟು ಹಣ ಇನ್ವೆಷ್ಟ್ ಮಾಡಿದ್ರೆ ಪ್ರೊಡ್ಯುಸರ್ ಆಗ್ಬಹುದು ..ಜೊತೆಗೆ ಹೀರೋನೂ ಆಗಬಹುದು ಸಾರ್"ಅಂದ....
ಆಗ ಹಳೆಯ ನೆನಪುಗಳು ಕಾಡಿದ್ದು ಹೀಗೆ....

ಮುಗಿಯದಷ್ಟು ಕೆಲಸವಿತ್ತು....ಪತ್ರಿಕೆ... ಕೃಷಿ....ಕಂಪನಿ....ಅಭಿಯಾನ....ರೆಡಿಯೊ....ಬರವಣಿಗೆ....ಹೀಗೆ ಎಲ್ಲೆಡೆ ಮಾಡಿದಷ್ಟೂ ಮುಗಿಯದ ಕೆಲಸಗಳಿತ್ತು...ಓದಲೇ ಬೇಕಾದ ಪುಸ್ತಕಗಳ ರಾಶಿ ಇತ್ತು..  ಬರಯಲೇಬೇಕಾದ ವಿಷಯಗಳು ಬೆಟ್ಟದಷ್ಟಿತ್ತು....ಬೆಳೆದಷ್ಟೂ ಬೆಳೆಯಬೇಕಾದ ವಿವಿಧ ಬಗೆಯ ಕೃಷಿ ಕೆಲಸವಿತ್ತು...ನಾನೇ ಪ್ರಾರಂಬಿಸಿದ ಕಂಪನಿ ಬೆಳೆಸುವುದಿತ್ತು....ಜನಗಳ ಆಲೋಚನೆಯ ಜೊತೆ ನಾವು ಪಾಸಿಟಿವ್ ಆಗಿ ಬದಲಾಗುವ ಸಂಪದ ಸಾಲು ಅಭಿಯಾನವಿತ್ತು.....ಇಷ್ಟೆಲ್ಲಾ ಜವಬ್ದಾರಿ ಜೊತೆಗಿದ್ದರೂ ಹಾಳಾದ್ದು ಒಂದು ಹುಚ್ಚು ಜೊತೆಗಿತ್ತು...!?

ಸಂಜೆಯಾದೊಡನೆ ಪ್ರಪಂಚವನ್ನೇ ಮರೆತು ಟಿ ವಿ ಮುಂದೆ ಕುಳಿತು ಲಕ್ಷಾಂತರ ಜನ ನೋಡುವ ಈ ದಾರಾವಾಹಿಗಳಲ್ಲಿ ಅಭಿನಯಿಸಲೇಬೇಕೆಂದು...!?

ಈ ಕಾರಣಕ್ಕಾಗಿ ಅದೆಷ್ಟು ಅ(ಪ್ರಸಿದ್ದ) ನಿರ್ದೇಶಕರಿಗೆ.... ಪೋಟೋ ಕಳಿಸಿದ್ದೆನೋ?!..ಅವರ ರಿಪ್ಲೇಗಾಗಿ ಶಬರಿಯಂತೆ ಕಾದೆನೋ?ಅವರು ಕರೆದಲ್ಲೆಲ್ಲಾ ಹೋಗಿ ಅವರ ಬಳಿ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆನೋ?! ಮಾಡಿದ ನಾಟಕ...ಯಕ್ಷಗಾನದ ಪೋಟೋ ತೋರಿಸಿ ನಂಗೊಂದು ಛಾನ್ಸ್ ಕೊಡಿ ಅಂತೆಲ್ಲಾ ಅಂಗಲಾಚಿದ್ದು...ಅವರು ಹೇಳಿದ ಕೆಲಸ ಮಾಡಿದ್ದು....ಅವರು ಹೇಳಿದ ಜಾಗಕ್ಕೆಲ್ಲಾ ಹೋಗಿ ಕಂಡ ಕಂಡವರಿಗೆಲ್ಲಾ ಸಲ್ಯೂಟ್ ಹೊಡೆದಿದ್ದು...ಪದೇ ಪದೇ ನಾನೇ ಪೋನ್ ಮಾಡಿ ಯಾವಾಗ ಅವಕಾಶ ಕೊಡ್ತೀರಿ ಅಂತ ಕೇಳಿ ಬೈಸಿಕೊಂಡಿದ್ದು...ನಂಗೊಂದು ಅವಕಾಶ ಕೊಡಿ ಎಂದರೆ ಒಳ್ಳೆ ಹುಡುಗಿಯರು  ಯಾಕ್ಟಿಂಗ್ ಗೆ ಬೇಕು ಇದ್ರೆ ಹೇಳ್ರಿ ಅನ್ನಿಸಿಕೊಂಡಿದ್ದು.....ಅಯ್ಯೋ ಅವಕಾಶ ಕೊಡ್ತಿನಿ ಸ್ವಲ್ಪ ದುಡ್ಡು ಕೊಡಿ ಅಂದ ಅದ್ಯಾವುದೋ ಪ್ರೊಡಕ್ಷನ್ ಮ್ಯಾನೇಜರ್ರು.....ಎದುರಿಗೆ ಬಂದ ನನ್ನನ್ನು ನಿಂಗೆ ಅದು ಬರತ್ತಾ...ಇದು ಬರತ್ತಾ....ಯಾವದ್ರಲ್ಲಿ ಮಾಡಿದೀರಿ?... ಅಂತೆಲ್ಲಾ ಕೇಳಿ ಪೋನ್ ಮಾಡ್ತಿನಿ ಅಂದೋರು ಎಲ್ಲಿ ಹೋದರೋ ಗೊತ್ತಿಲ್ಲ.....

ಕ್ಷಣಗಳು ಉರುಳಿದಂತೆ......ದಿನಗಳು ಕಳೆಯಿತು.....ಕಡೆಗೂ ಒಂದಷ್ಟು ದಾರಾವಾಹಿಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡಿದ್ದು ಆಯ್ತು.....ಈ ಗಾಂಧೀನಗರದ ಅಸಲಿ ಮುಖಗಳು ಸ್ಪಷ್ಟವಾಗುತ್ತಾ ಬಂತು.......ಕನಸಿನಲ್ಲೇ ಕಾಗೆ ಹಾರಿಸುವವರು........ಮಾತಿನಲ್ಲಿ ಮಂಟಪ ಕಟ್ಟುವವರು......ರಾಜಕಾರಣಿಗಳಂತೆ ಭರವಸೆ ಕೊಟ್ಟವರು.......ದೇಶವೇ ತನ್ನ ಮೇಲಿದೆ ಎಂಬಂತೆ ಪೋಸು ಕೊಟ್ಟವರ ನಡುವೆಯೂ ಒಂದಷ್ಟು ಒಳ್ಳೆ ನಿರ್ದೇಶಕರು...ನಿರ್ಮಾಪಕರು.... ಕಲಾವಿದರು ಇದ್ದಾರೆ..... ಹಾಗಾಗಿಯೇ ಕನ್ನಡ ಸಿನಿಮಾ ಲೋಕ...ಹಿರಿ ತೆರೆ....ಕಿರುತೆರೆ ಬೆಳೆಯಬಹುದೆಂಬ ನಿರೀಕ್ಷೆಯಿದೆ....

#ಓದಿ ಸಂಪದ ಸಾಲು...
"ಬದಲಾವಣೆ ಬರಲಿ.ಪರಿವರ್ತನೆ ಬರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ... .........

#ಓದಿಸಂಪದಸಾಲುಪತ್ರಿಕೆ

ನಮ್ಮ ದೇಶದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಮಾನವೀಯತೆ
ಮಣ್ಣಾಗಿ ಹೋಗಿರಬಹುದು.ಆದರೆ ನಮ್ಮ ಭಾರತದಲ್ಲಿ ಸಹೃದಯರೂ
ಇದ್ದಾರೆ. ನಮ್ಮ ದೇಶದ ಅವ್ಯವಸ್ಥೆ ಗೆ ಇನ್ಯಾವುದೋ ದೇಶದ
ಪ್ರಧಾನಿ ಸಹಾಯ ಮಾಡುವ ದುಸ್ಥಿತಿ ಬಾರದಿರಲಿ.125 ಕೋಟಿ
ಜನಸಂಖ್ಯೆಯ ಭಾರತದಲ್ಲಿ ಒಳ್ಳೆಯ ಕೆಲಸಕ್ಕೆ ಬೆಂಬಲಿಸುವವರಿದ್ದ
ಾರೆ.ವಿದೇಶದಲ್ಲಿ ಭಾರತದ ಕೀರ್ತಿ ಹೆಚ್ಚಿಸುತ್ತಿರುವ ಸನ್ಮಾನ್ಯ
ನರೇಂದ್ರ ಮೋದಿಯಂತಹ ನಾಯಕರಿದ್ದಾರೆ. ಸಾವಿರ ಸಾವಿರ ಕೋಟಿ
ಖರ್ಚು ಮಾಡುವ ಮಹಶಯರಿದ್ದಾರೆ.ದೇವರು ಧರ್ಮಕ್ಕೆ ಸರ್ವಸ್ವವನ್ನೂ
ಅರ್ಪಿಸುವವರು ಎಲ್ಲಾ ಧರ್ಮದಲ್ಲೂ ಇದ್ದಾರೆ.ಮಾನವೀಯತೆಗೆ
ಸ್ಪಂದಿಸುವ ಜನ ಇಲ್ಲವೇ?ಇನ್ನಾದರೂ ಮಾನವೀಯತೆ
ಗೆಲ್ಲಲಿ.ಮನುಷ್ಯತ್ವದ ಧರ್ಮ ಬೇರೂರಲಿ. # ವೆಂಕಟೇಶಸಂಪ.
# ಓದಿಸಂಪದಸಾಲುಪತ್ರಿಕೆ .

Saturday, August 13, 2016

Earn and learn

ಕಲಿಕೆಯ ಜೊತೆ ಗಳಿಕೆ ಮಾಡುತ್ತಾ ಸಾಧಿಸಿದವರಿಗೊಂದು ಗೌರವ ಸಲ್ಲಿಸೋಣ.ಸಂಪದ ಸಾಲು ಪತ್ರಿಕೆಯ ಅಭಿಯಾನಕ್ಕೆ ಜೊತೆಯಾಗಿ * ವೆಂಕಟೇಶ ಸಂಪ,
ಯೆಸ್,ಎಸ್ ಎಸ್ ಎಲ್ ಸಿ ಅನ್ನೋದೇ ಹಾಗೆ.ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ.  ಬದುಕಿನ ಗುರಿ ಮತ್ತು ಗಮ್ಯತೆಯ ಕಡೆಗೆ ಸಾಗುವ ದಿಕ್ಸೂಚಿ ಕೂಡ. ಅಂಕ ಗಳಿಕೆಯ ಹಪಹಪಿಯ ವ್ಯವಸ್ಥೆಯಲ್ಲಿ ಅದೇ ಅಭಿವೃದ್ದಿಯ ಮಾನದಂಡ ಅನ್ನಿಸಬಹುದು.ಆದರೆ ನನ್ನ ಪ್ರಕಾರ ಅಂಕ ಗಳಿಕೆ ಎಷ್ಟು ಮುಖ್ಯವೋ?    ಅದಕ್ಕಿಂತ ಬದುಕನ್ನು  ಕಲಿಯುವವರು ಗ್ರೇಟ್ ಅನಿಸುತ್ತಾರೆ.    ಹೆಚ್ಚು ಅಂಕ ಗಳಿಸೋರನ್ನು ಅಭಿನಂದಿಸುವುದರ ಜೊತೆ ಇನ್ನೊಂದು ಮುಖ್ಯವಾದದ್ದೇನು ಗೊತ್ತಾ?
ಹಳ್ಳಿಯ ಮನೆಯಿಂದ ಮನೆ ಕೆಲಸ ಮುಗಿಸಿ ದೂರದ ಸರ್ಕಾರಿ ಶಾಲೇಲಿ ಅವ್ಯವಸ್ಥೆಯ ನಡುವೆ ಫಷ್ಟ್ ಕ್ಲಸೋ ಡಿಷ್ಟಿಂಕ್ಷನ್ನೋ    ಬಂದಿರ್ತಾನೆ ನೋಡಿ ಅವರೇ ನಂಗೆ ಹೆಚ್ಚು ಗ್ರೇಟ್ ಅನ್ನಿಸ್ತಾರೆ.  ಬೆಳಗ್ಗೇ ಪೇಪರ್ ಹಂಚಿ ಮಧ್ಯಹ್ನ ಶಾಲೆಗೆ ಹೋಗೋರು,   ಸಣ್ಣ ಗೂಡಂಗಡಿಯಲ್ಲಿ ಕೆಲಸ ಮಾಡಿ ಎಕ್ಷ್ಟರ್ನಲ್ ಆಗಿ ಪರೀಕ್ಷೆ    ಬರೆಯೋರು, ರಜದ ದಿನದಲ್ಲಿ ಅಡುಗೆ ಕೆಲ್ಸ ಮಾಡಿ ಸ್ಕೂಲ್ ಫೀಸ್ ಕಟ್ಟೋರು, ಬಟ್ಟೆ ಅಂಗಡಿ ನಲ್ಲಿ,  ಗಾರ್ಮೆಂಟ್ಸಲ್ಲೋ ಕೆಲ್ಸ ಮಾಡಿ ಸ್ಕೋರ್ ಮಾಡಿ ಮುಂದಿನ ಬದುಕಿಗಾಗಿ ತಡಕಾಡುವವರ ಜೊತೆ ನಮ್ಮ ಸಂಪದ ಸಾಲು ಪತ್ರಿಕೆ  ನೆರವಾಗಬೇಕು ಮತ್ತು ಅಂತವರನ್ನು ಗುರುತಿಸಬೇಕು    ಎಂದುಕೊಂಡಿದ್ದೇವೆ.ನಿಮ್ಮ ಸುತ್ತ ಮುತ್ತ ಬದುಕಿನ ಜಂಜಡದ ನಡುವೆ ಅರ್ನ್ ಎಂಡ್ ಲರ್ನ್   ಮಾಡಿ ಒಳ್ಳೆ ಸ್ಕೋರ್ ಮಾಡಿರೋರ ಫೋಟೋ ಮತ್ತು ವಿವರ ಕಳುಹಿಸಿ.    ಕಲಿಕೆಯ ಜೊತೆ ಗಳಿಕೆ ಮಾಡುವ ಸಾಧಕರನ್ನು ಪ್ರೋತ್ಸಾಹಿಸೋಣ.  ನಮ್ಮ ಸಂಪದ ಸಾಲು ಪತ್ರಿಕೆಯ ಈ ಅಭಿಯಾನಕ್ಕೆ ಜೊತೆಯಾಗಿ. *ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ,
Contact:9448219347 sampadasaalu@gmail.com

Share and forward this information

ಇದನ್ನು ಒಪ್ಪಿಕೊಳ್ತಿರಾ?! ಹಾಗಿದ್ರೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

ಇದನ್ನು ಒಪ್ಪಿಕೊಳ್ತಿರಾ?! ಹಾಗಿದ್ರೆ  ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

ಯಾರು ನಮ್ಮನ್ನು ಗೌರವಿಸುತ್ತಾರೋ?!ಯಾರು ನಮ್ಮನ್ನು ಪ್ರೀತಿಸುತ್ತಾರೋ?! ಯಾರು ನಮ್ಮ ಕೆಲಸಗಳಿಗೆ ಜೊತೆಯಾಗಿ ಸಹಕರಿಸುತ್ತಾರೋ...?!ದೂರದಲ್ಲಿದ್ದರೂ ಇವರು ನಮ್ಮೋರು ಅಂತ ನಮ್ಮ ಬೆಳವಣಿಗೆಗೆ ಪೂರಕವಾಗಿ ನಿಲ್ಲುತ್ತಾರೋ?! ಯಾರು ನಮಗೆ ಕಷ್ಟ ಇದ್ದಾಗಲೂ ಏನು ಸಹಾಯ ಬೇಕು ಅಂತ ಕೇಳದೆಯೆ ತಮ್ಮಿಂದಾಗಬಹುದಾದ ಚಿಕ್ಕ ಸಹಾಯದ ಪ್ರಯತ್ನ ಮಾಡ್ತಾರೋ?! ಅವರೇ ನಮ್ಮ ನಿಜವಾದ ನೆಂಟರು...ನಿಜವಾದ ಗೆಳೆಯರು...ನಿಜವಾದ ಒಡನಾಡಿಗಳು...

ಯಾರು ನಮ್ಮನ್ನು ನಿರ್ಲಕ್ಷವಾಗಿ ನೋಡುತ್ತಾರೋ?!ಯಾರು ಸ್ನೇಹಿತರಂತೆ ಜೊತೆಗಿದ್ದು ಅಸೂಯೆ ಪಡುತ್ತಾರೋ?!ಯಾರು ಹಿತವಾಗಿದ್ದು ಶತ್ರುಗಳಂತೆ ನೆಡೆದುಕೊಳ್ಳುತ್ತಾರೋ?! ಯಾರು ನೆಂಟರಂತೆ ಇದ್ದರೂ ನಮ್ಮ ಏಳ್ಗೆಯನ್ನು ಹೀಯಾಳಿಸುತ್ತಾರೋ?!ಯಾರೋ ವಿಷಯವೇ ಗೊತ್ತಿಲ್ಲದಿದ್ದರೂ ಅಪಪ್ರಚಾರ ಮಾಡುತ್ತಾರೋ?!ಇವರೆಲ್ಲಾ ಯಾವತ್ತೂ ನಮ್ಮವರಲ್ಲ....

ಆದರೆ ಇಂತವರೂ ಇರಬೇಕು ಸಮಾಜದಲ್ಲಿ...ಏಕೆ ಗೊತ್ತಾ?!
ದಾಸರು ಹೇಳಿದಂತೆ ಹೊಲಸು ತಿನ್ನುವವರು ಇದ್ದರೆ ಸ್ವಚ್ಚತೆ ಉಳಿಯುತ್ತದೆ...

ನಮ್ಮನ್ನು ಪ್ರೀತಿಸುವವರನ್ನು ಗೌರವಿಸೋಣ.ನಿಂದಕರನ್ನು ಸ್ವಚ್ಛಗೊಳಿಸುವ ಪ್ರಾಣಿಯಂತೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ....

"ಬದಲಾವಣೆ ಬರಲಿ.....ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ. # ವೆಂಕಟೇಶ ಸಂಪ

ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ.
                        # ವೆಂಕಟೇಶ ಸಂಪ

ಖಾಸಗಿ ಟಿವಿ ಚಾನಲ್ ಒಂದರ ಕಾರ್ಯಕ್ರಮ ಮುಖ್ಯಸ್ಥನಾಗಿದ್ದ ದಿನಗಳವು.ಪಾಸಿಟೀವ್ ಪಾಲಿಟಿಕ್ಸ್ ಎಂಬ ಕಾರ್ಯಕ್ರಮದಡಿಯಲ್ಲಿ ಮಾಜಿ ಸಭಾದ್ಯಕ್ಷರಾದ ರಮೇಶ್ ಕುಮಾರ್ ಅವರ ಜೊತೆ ಮಾತಾಡುತ್ತಿದ್ದೆ....ಆ ಮಾತುಕತೆಯ ಕೆಲವು ಆಯ್ದ ವಿಷಯಗಳು ಎಷ್ಟು ಪ್ರಸ್ತುತ ಅನಿಸುತ್ತೆ....ಒಮ್ಮೆ ಓದಿ ಬಿಡಿ.....

ಒಬ್ಬ ರಾಜಕಾರಣಿ ಅನಿಸಿಕೊಂಡವನು ಎಮ್ ಎಲ್ ಎ ಆಗಬೇಕೆಂದರೆ ಲಕ್ಷಾಂತರ ಜನಗಳ ಮತ ಪಡೆಯಬೇಕಾಗುತ್ತದೆ.ಒಮ್ಮೆ ಗೆದ್ದ ನಂತರ ಮತ್ತು ರಾಜಕಾರಣದಲ್ಲಿ ಒಂದಷ್ಟು ಪಟಾಲಂ ಜೊತೆಗಿರುತ್ತದೆ..ಇವರು ಗೆದ್ದ ನಂತರ ದಿನಕ್ಕೊಂದು ಬಾರಿ ಒಂದೈವತ್ತು ಮಂದಿ ನಮ್ಮ ಸುತ್ತ ಸುತ್ತುತ್ತಾರೆ..ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ರಾಜಕಾರಣಿಗಳು ಮಾಡಿದ್ದೆಲ್ಲಾ ಸರಿ ಎಂಬಂತೆ ಈ ಪಟಲಾಂ ಸುಖಾಸುಮ್ಮನೆ ಜೈಕಾರ ಹಾಕುತ್ತಾರೆ.ಯಾಕೆಂದರೆ ಆತನದ್ದು ಯಾವುದೋ ಟ್ರಾನ್ಸಪರ್ರೋ,ಕಮಿಶನ್ ವ್ಯವಹಾರವೋ ಇರತ್ತೆ..ಅದಕ್ಕೆ ನಾವು ಆತನ ಜೈಕಾರ ಕ್ಕೆ ಮರುಳಾಗಿ ಆತ ಹೇಳಿದ್ದೆಲ್ಲಾ ಸರಿ ಅಂದುಬಿಡುತ್ತೇವೆ...ಕೇವಲ ಈ ಐವತ್ತು ನೂರು ಮಂದಿಗಳು ದಿನ ನಮ್ಮ ಸುತ್ತ ಗಿರ್ಕಿ ಹೊಡೆಯುತ್ತಾರೆ...ದುರಂತ ಅಂದ್ರೆ ಓಟ್ ಹಾಕಿದ ಲಕ್ಷಾಂತರ ಜನರನ್ನು ಮರಿತೀವಿ...ಈ ಪಟಾಲಂ ಅನ್ನೇ ಜನ ಅಂದುಕೊಳ್ತೀವಿ...ಈ ಐವತ್ತು ಹೊಗೊಳೋ ಭಟರನ್ನೇ ಜನ ಅಂದುಕೊಳ್ತೀವಿ....ಹಾಗು ಅವರು ಹೇಳಿದ ಕೆಲ್ಸವನ್ನೇ ಮಾಡ್ತಿವಿ....ಜನಗಳಿಗೆ ನಾವು ಮಾಡೊ ಕೆಲ್ಸ ಬೇಕೋ ಬೇಡವೋ ಯೋಚಿಸೋದಿಲ್ಲ...ಯಾವತ್ತು ಈ ಪಟಲಾಂಗಳನ್ನು ದೂರ ಇಟ್ಟುಕೊಳ್ಳಬೇಕು....

ಇನ್ನೊಂದು ಈ ಆಪ್ತ ಸಹಾಯಕರು...ಪಿ ಎ ಗಳು ಅಂತ ನೇಮಕ ಮಾಡಿಕೊಳ್ಳೋ ಮಂತ್ರಿಗಳು...ಶಾಸಕರುಗಳು...ಒಮ್ಮೆ ಯೋಚಿಸಬೇಕು...ಈ ಮನುಷ್ಯ ಡೀಲ್ ಮಾಷ್ಟರ್ರಾ?! ಅಥವಾ ಕೆಲಸ ಕೊಡಸ್ತೀನಿ ಅಂತಾ ಹೆಣ್ಣುಮಕ್ಕಳಿಗೆ ಆಸೆ ತೋರಿಸಿ ಮೋಸ ಮಾಡಿದವನಾ?!ಈತನಿಗೆ ತಲೆ ಇದೆಯಾ?!ಮಾನವೀಯ ಹೃದಯ ಇದೆಯಾ?!ಅಥವಾ ಶೋಕಿವಾಲ ನಾ?!ಅಥವಾ ಶಾಸಕನ ಹೆಸರಲ್ಲಿ ದುಡ್ಡು ಪೀಕುವವನಾ?!ಅಂತ ಯೋಚಿಸಬೇಕು...ಇಲ್ಲದಿದ್ದರೆ ಆ ರಾಜಕಾರಣಿಯೂ ಹಾಳು....ಈ ಅನಿಷ್ಟ ಪಿ ಎ ಯಿಂದ ಸಮಾಜವೂ ಹಾಳು.....

ಗೆಲುವು ಮತ್ತು ಅಧಿಕಾರ ಬಂದ ಮೇಲೆ ನಮ್ಮ ಜೊತೆಯಲ್ಲಿರುವವರ ಬಗ್ಗೆ ಜಾಗೃತರಾಗಿರಬೇಕು...ಜೊತೆಗೆ ಕೆಲಸ ಮಾಡುವವರು ಮತ್ತು ಪಟಾಲಂ ಗಳು ಅಭಿವೃದ್ದಿಗೆ ಪೂರಕವಾಗಬೇಕೇ ವಿನಃ ಜನ ಸಾಮಾನ್ಯರ ಬದುಕಿಗೇ ತಡೆ ಗೋಡೆಯಾಗಬಾರದು....

ಸಾಮಾನ್ಯ ಜ್ಞಾನ ಮತ್ತು ಮಾನವೀಯ ಮೌಲ್ಯ ಹಾಗು ಯಾರನ್ನು ಯಾವ ರೀತಿ ಬಳಸಿಕೊಳ್ಳಬೇಕು ಮತ್ತು ಯಾರಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಅರಿಯಬೇಕು.....

  ಇಂದಿನ ಬಹುತೇಕ ರಾಜಕಾರಣಿಗಳನ್ನು ಮತ್ತು ಮಂತ್ರಿ ಮಹೋದಯರನ್ನು ನೋಡಿದ್ದೇನೆ..ಅವರ ಆಪ್ತ ಸಹಾಯಕರ ದುರಹಂಕಾರ ಮತ್ತು ಡೀಲ್ ಸ್ವಭಾವವನ್ನೂ ನೋಡಿದ್ದೇನೆ... ಕಂಡ ಕಂಡವರ ಜೊತೆ ಆಟ ಆಡುವ ಇಂತವರನ್ನು ನೋಡಿದಾಗ ನಮ್ಮ ರಮೇಶ್ ಕುಮಾರ್ ಅವರ ಮಾತು ಸದಾ ನೆನಪಾಗತ್ತೆ.......

ತೊಲಗಬೇಕು ದುರಹಂಕಾರಿಗಳು...."ಬೇಕು ಪಾಸಿಟೀವ್ ಪಾಲಿಟಿಕ್ಸ್"

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

ಎಲ್ಲಿದೆ ಸ್ವಾಮಿ ಸ್ವತಂತ್ರ!? *ವೆಂಕಟೇಶ ಸಂಪ,

ಎಲ್ಲಿದೆ ಸ್ವಾಮಿ ಸ್ವತಂತ್ರ!?
          *ವೆಂಕಟೇಶ ಸಂಪ,
ಒಂದೆಡೆ ಸ್ವೆಚ್ಚಾಚಾರ ಮತ್ತೊಂದೆಡೆ ಜೀತದಾಳತ್ವ!?
ಒಂದೆಡೆ ಹೈ ಪ್ರೋಫೈಲ್ ಕೇಸ್ ಗಳಲ್ಲಿ ಶಿಕ್ಷೆಯಾದರೂ ಕಾನೂನಿನ ಲೂಪ್ ಹೋಲ್ಸ್ ಬಳಸಿ ಅಪರಾಧಿಯಾದರೂ ಅಟ್ಟಹಾಸ ಮಾಡೋರು.ಮಾಡದ ತಪ್ಪಿಗೆ ಬಡತನದಲ್ಲಿ ಶೋಷಿತರಾಗಿ ನರಳುವ, ಜೀತದಾಳಾಗಿ ಬದುಕುವವರು! ಇನ್ನೊಂದೆಡೆ,
ಇದಾ ಸ್ವಾತಂತ್ರ್ಯ!?
ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ಅನ್ನೋದು ಕೇವಲ ಜಾಹೀರಾತಿಗೆ ಸೀಮಿತವೇ!?
ಅತ್ಯಾಚಾರ,ಕೊಲೆ,ದರೋಡೆ ಮಾಡಿದರೂ ಸಮಾಜದ ಗಣ್ಯ ವ್ಯಕ್ತಿಯಂತೆ ಪೋಸ್ ಕೊಡ್ತಾ ಬದುಕುವ ಫಟಿಂಗರನ್ನು ನೋಡಿ ಸ್ವತಂತ್ರ ಅನ್ನಬೇಕೆ!?

ಚಿಕ್ಕದೊಂದು ಆದಾಯ ಧೃಡೀಕರಣ ಪತ್ರಕ್ಕಾಗಿ ತಿಂಗಳುಗಟ್ಟಲೇ ಸರ್ಕಾರಿ ಕಛೇರಿ ಅಲೆಯುವ ಹಳ್ಳಿಯ ವೃದ್ದನನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೇ!
ಅಧಿಕಾರ,ಹಣ ಇದೆ ಎಂಬ ಕಾರಣಕ್ಕೆ ಕಾನೂನನ್ನು ಮರೆತು ಸಾವಿರಾರು ಎಕರೆ ಜಮೀನನ್ನು ಮಂಜೂರು ಮಾಡೋದನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೋ!?
ಒಂದೆಡೆ ಹೊಟ್ಟೆಗಿಲ್ಲದ ಸ್ಥಿತಿ,ಇನ್ನೊಂದೆಡೆ ಮೃಷ್ಟಾನ್ನ ಭೋಜನ!ಇದಾ ಸ್ವಾತಂತ್ರ್ಯ!?
ಅನ್ನ ನೀಡೋ ಅನ್ನದಾತನಿಗೆ ಬೆಳೆ ಬೆಳೆಯೋಕೆ ಸೌಲಭ್ಯ ಕೊಡದೆ,ಬೆಳೆದ ಬೆಳೆಗೂ ಮಾರ್ಕೇಟ್ ಕೊಡದ ನಾವು ಸ್ವತಂತ್ರಿಗಳೇ?
ಉದ್ಘಾಟನೆ ಆಗುವ ಮೊದಲೇ ಉರುಳಿ ಬೀಳುವ ಸರ್ಕಾರಿ ಕಟ್ಟಡಗಳನ್ನು ಕಟ್ಟುವ ನಾವು ಹೊಂಡ ಬಿದ್ದ ರಸ್ತೆ ಮುಚ್ಚಲು ಹತ್ತು ವರ್ಷ ತೆಗೆದುಕೊಳ್ಳುತ್ತೇವೆ.ದುಡ್ಡಿದ್ದವರ ಕೆಲಸ ಮಾಡೋಕೆ ಹಿಂದೆ ಮುಂದೆ ನೋಡದ ಅಧಿಕಾರಿ ವರ್ಗ ಬಡವರ ಕೆಲಸ ಮಾಡಲು ಕಾನೂನು ಪುಸ್ತಕ ತೆಗೆಯುತ್ತದೆ.ದೊಡ್ಡ  ಕಳ್ಳರನ್ನು ಹಿಡಿಯಲಾಗದ ದುರವಸ್ಥೆ ಪಿಕ್ ಪಾಕೇಟ್ ಮಾಡಿದವನನ್ನು ಒಳಗೆ ಹಾಕಿ ಪ್ರಚಾರ ಪಡೆಯುತ್ತದೆ.ದುಡ್ಡಿಲ್ಲದೆ ಮತ ಹಾಕದ ಜನ ಶ್ರೇಷ್ಟ ನಾಯಕನ ಕನಸು ಕಾಣುತ್ತದೆ.ರಾವಣರೇ ರಾಮನ ಮುಖವಾಡ ಧರಿಸಿದಾಗ ನಂಬೋದಾದ್ರು ಯಾರನ್ನ!?ಎಗ್ಗಿಲ್ಲದೆ ಏರುವ ಕ್ರೈಮ್ ಗಳಿಗೆ ಶಿಕ್ಷಿಸುವ ಬದಲು ವಿಳಂಬ ನೀತಿಗೆ ನ್ಯಾಯಾಂಗವೂ ಸ್ಥಬ್ದವಾಗಿಹೋಗಿದೆ.ಸುದ್ದಿ ಮಾಡಿ ಜನರನ್ನು ತಲುಪುವ ಬಹುತೇಕ ಮಾಧ್ಯಮಗಳು ಟಿಆರ್ ಪಿ ಯ ಬೆನ್ನುಹತ್ತಿದೆ.ವ್ಯವಸ್ಥೆಯ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಆವರಿಸಿದಾಗ ಆರೋಗ್ಯವಂತ ಸಮಾಜದ ಕಲ್ಪನೆ ಮೂಡುವುದಾದರೂ ಹೇಗೆ!?ಅರವತ್ತೊಂಬತ್ತು ವರ್ಷದ ಹಿಂದೆ ಅರ್ಧರಾತ್ರಿಯ ನಿದ್ರೆಗಣ್ಣಿನಲ್ಲಿ ಪಡೆದ ಸ್ವಾತಂತ್ರ್ಯವೆಂಬ ಅನರ್ಘ್ಯ ರತ್ನ ಮಂಗನ ಕೈಗೆ ಕೊಟ್ಟ ಮಾಣಿಕ್ಯ ಆಯಿತೆ?!ಅಂದು ಶಾಂತಿಕಾರಿಗಳು,ಕ್ರಾಂತಿಕಾರಿಗಳು,ಸಾಮಾನ್ಯರು ಹೋರಾಡಿದ್ದು ,ಸ್ವತಂತ್ರರಾಗಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೇಲಿಬಿಟ್ಟಂತಾಯ್ತೆ!?
ಆಕಾಶಕ್ಕೆ ಕ್ಷಿಪಣಿ ಹಾರಿಸಿದ್ದೇವೆ,ಕೋಟ್ಯಾಂತರ ಬಂಡವಾಳ ತಂದಿದ್ದೇವೆ.ಬೆಳೆ ಬರಬೇಕಾದ ಜಾಗದಲ್ಲೆಲ್ಲಾ ವಿದೇಶಿ ದುಡ್ಡಿನ ಹೊಗೆ ಉಗುಳುವ ಕಾರ್ಖಾನೆ ನಿರ್ಮಿಸುತ್ತಿದ್ದೇವೆ.ಮನುಷ್ಯರು ಹುಟ್ಟಿದಂತೆ ಮನುಷ್ಯತ್ವ ಸಾಯುತ್ತಿದೆ.ವಾಹನಗಳು ಹೆಚ್ಚಿವೆ,ರಸ್ತೆ ಚಿಕ್ಕದಾಗಿದೆ.ನಾನು ನನ್ನದು ಎಂಬ ದಾಹದಲ್ಲಿ ಎಲ್ಲವೂ ಇಂಗಿ ಹೋಗಿ ಬರಡಾಗುತ್ತಿದೆ.ಸ್ವತಂತ್ರಕ್ಕೂ ಎರಡು ವರ್ಷ ಮೊದಲೇ ಅಪಕ್ವರಾದವರಿಗೆ ಸ್ವತಂತ್ರ ಸಿಕ್ಕರೆ ಏನಾಗುತ್ತದೆ ಎಂದು ಚರ್ಚಿಲ್ ಎಂಬ ಪುಣ್ಯಾತ್ಮ ಹೇಳಿದಂತೆ "power will go to the hands of rascals,rogues,and freebooters.
All indians leaders will be of low caliber and men of straw.
They will have sweet toungues and silly hearts.
They will fight amongst themselves for power and India will be lost in political squabbles.
A day would come when even air and water would be taxed in India."ಆಗಿ ಹೋಗಿದೆ.
ಆದರೂ ಉತ್ಸವ ಮಾಡಬೇಕಿದೆ.ಬಾವನೆಗಳೆಲ್ಲಾ ಟಿವಿ ದಾರಾವಾಹಿಗಳಿಗೆ ಸೀಮಿತವಾದ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಒಂದು ಹಬ್ಬವಾಗಿ ಹೋಗಿದೆ ಅಷ್ಟೆ.ಪಕ್ಷ ಯಾವುದೇ ಇರಲಿ,ವ್ಯವಸ್ಥೆಗಳೇ ಹೊದ್ದು ಮಲಗಿದಾಗ ಎಳೆದು ಕೂರಿಸಬೇಕಾದ ಕರ್ತವ್ಯ ಜನಸಾಮಾನ್ಯರದ್ದು.
ಚೆಂದದ ಡ್ರೆಸ್ ಹಾಕಿ,ಬ್ಯಾಂಡ್ ಬಾರಿಸಿ,ಬಾವುಟ ಹಾರಿಸಿ,ಉದ್ದುದ್ದ ಭಾಷಣ ಮಾಡಿ,ಚಾಕಲೇಟ್ ತಿಂದು,ಅದಕ್ಕೂ ನಮ್ಮದೇ ತೆರಿಗೆಹಣ ಉಪಯೊಗಿಸಿ ಉತ್ಪಾದಕತೆ ಇಲ್ಲದೆ  ದಿನ ದೂಡಿದರೆ ಪ್ರಯೋಜನವೇನು!?ಮನುಷ್ಯತ್ವ ಮರೆತು ಜಾತಿ ಧರ್ಮದ ದೃಷ್ಟಿಯಲ್ಲಿ ಆಡಳಿತ ನೆಡೆದರೆ,ಪಾಸಿಟೀವ್ ಆಲೋಚನ ಕ್ರಮ ಮೂಡದೇ ಇದ್ದರೆ ಸ್ವಾತಂತ್ರೋತ್ಸವ ಅರವತ್ತೊಂಬತ್ತು ಅಲ್ಲ ಆರುಸಾವಿರದ ಒಂಭತ್ತು ವರ್ಷ ಕಳೆದರೂ ತೂತು ಬಿದ್ದ ಬಲೂನಿಗೆ ಗಾಳಿ ತುಂಬಿದಂತಾಗುತ್ತದೆ ಅಷ್ಟೆ.ಸ್ವತಂತ್ರ ಭಾರತದ ಸ್ವಚ್ಚ ಆಡಳಿತದ ಕನಸು ಕಂಡ ಮಹಾತ್ಮ ಗಾಂಧೀಜಿ,ಅಬ್ದುಲ್ ಕಲಾಂರ ಕನಸಿಗೆ ಇನ್ನಾದರೂ ಸಿಕ್ಕಬಹುದೇ ಮನ್ನಣೆ!?
ಸ್ವೇಚ್ಚಾಚಾರವಾಗದ ಸ್ವತಂತ್ರ ಉಳಿಯಬಹುದೇ!? ಹೆಮ್ಮೆಯಿಂದ ಶುಭಾಶಯ ಕೋರಬಹುದೇ!?
#ವೆಂಕಟೇಶ ಸಂಪ.
#ಓದಿಸಂಪದಸಾಲುಪತ್ರಿಕೆ www.sampadasaalu.blogspot.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu