Tuesday, July 5, 2016

ಮನಕೆಡಿಸುವ ಕತ್ತಲೆಯನ್ನು ದೂರ  ತಳ್ಳಿ
ನಗುವೆಂಬ ಬೆಳಕನ್ನು ಕರೆಯೋಣ ಬನ್ನಿ..

ಕಲ್ಲನ್ನೂ ಕರಗಿಸಿ ಮೃದುವಾಗಿಸುವ
ಆತ್ಮವಿಶ್ವಾಸದ ನಗೆಯನು ಚೆಲ್ಲಿ
ಶತ್ರುಸ್ವರೂಪದ ಕಠೋರ ಕ್ರೂರತೆಯ ನೂಕಿ
ಮಿತೃತ್ವದ ಮಧುರತೆಯ ಸಿಹಿ ಸವಿಯೋಣ ಬನ್ನಿ.

ನಿಶೆಯ ರೌದ್ರವತೆಯ ನಿದ್ದೆಯನು ಕೊಡವಿ
ಉಷೆಯ ಮಂದಹಾಸವ ನೇವರಿಸಿ
ಜಗದ ಹಸಿರ ಜೊತೆ ಮನಕೆ ಮುದನೀಡುವ
ಬೆಳಗೆಂಬ ಸ್ನೇಹಲತೆಯ ಬೆಳೆಸೋಣ ಬನ್ನಿ

ವೆಂಕಟೇಶ ಸಂಪ
ಓದಿ ಸಂಪದ ಸಾಲು

ನಾವು ಕಾಯೋ ಎರಡು ನಿಮಿಷ ಇನ್ನೊಂದು ಬದುಕನ್ನು ಉಳಿಸಬಲ್ಲದು, *ವೆಂಕಟೇಶ ಸಂಪ

ನಾವು ಕಾಯೋ ಎರಡು ನಿಮಿಷ ಇನ್ನೊಂದು ಬದುಕನ್ನು ಉಳಿಸಬಲ್ಲದು,               
                        *ವೆಂಕಟೇಶ ಸಂಪ

ಮೊನ್ನೆ ಯಾವುದೋ ಶೂಟಿಂಗ್ ನ ಕಾರಣಕ್ಕೆ ಕಾರು ತೆಗೆದುಕೊಂಡು  ಮಲ್ಲೇಶ್ವರಂನಿಂದ ಹೊರಟಿದ್ದೆ.ಯಶವಂತಪುರದ ಸರ್ಕಲ್ ಹತ್ತಿರ ಒಂದು ಬದಿಯಲ್ಲಿ ನಾನಿದ್ದೆ,ವಾಹನಗಳು ಕಿಕ್ಕಿರಿದು ರಸ್ತೆಯಲ್ಲಿ ನಿಂತಿದ್ದವು.ಮುಂದೆಯೂ ಚಲಿಸಲಾರದ ಹಿಂದೆಯೂ ಹೋಗಲಾರದ ಸ್ತಿತಿ.ಪೋಲಿಸ್ ಪೇದೆಯೊಬ್ಬ ಸುಗಮ ಸಂಚಾರಕ್ಕೆ ಒದ್ದಾಡುತ್ತಿದ್ದ.ಹಿಂದಿನಿನಿದ ಜೋರಾಗಿ ಸೈರನ್ ಮಾಡುತ್ತಾ ಅಂಬುಲೆನ್ಸ್ ದಾರಿಗಾಗಿ ಹಾತೊರಿಯುತ್ತಿತ್ತು.ಆ ಸೈರನ್ ಕೇಳಿದೊಡನೆ ನನ್ನ ಎದೆಯಲ್ಲೂ ಬಡಿತ ಹೆಚ್ಚಾಯ್ತು.ಸಾಯುವ ಜೀವ ಬದುಕಲಿ ಎಂಬ ಆಸೆ ಹೆಚ್ಚಾಯ್ತು.ಪೋಲಿಸ್, ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಪ್ರಯತ್ನ ಮಾಡುತ್ತಿದ್ದು,ಅದರಲ್ಲಿ ಅಸಹಾಯಕನಾದಂತೆ ಕಾಣುತ್ತಿದ್ದ.ಅಲ್ಲಿದ್ದ ಬಹುತೇಕ ಜನ,ಅಂಬುಲೆನ್ಸ್ ಗೆ ದಾರಿ ಬಿಡುವ ಬದಲು  ಸಿಕ್ಕ ಸ್ವಲ್ಪ ದಾರಿಯಲ್ಲಿ ತಾವು ನುಗ್ಗಿ ಹೋಗುವ ಪ್ರಯತ್ನದಲ್ಲಿದ್ದರು.ನನ್ನ ಕಾರು ಎಡ ಬಾಗದಲ್ಲಿ ಇದ್ದುದ್ದರಿಂದ ಅಲ್ಲೇ ನಿಲ್ಲಿಸಿ,ಪೋಲಿಸ್ ಗೆ ಸಹಾಯ ಮಾಡೋಣ ಅಂತ ತಿರ್ಮಾನಿಸಿ ಟ್ರಾಫಿಕ್ ಪೋಲಿಸ್ ಕೆಲಸ ಮಾಡಿದೆ.ಹತ್ತು ನಿಮಿಷದಲ್ಲಿ ಅಂಬುಲೆನ್ಸ್ ಸೈರನ್ ಮಾಡುತ್ತಾ ಮುಂದೆ ಹೋಯಿತು.ಅದರಲ್ಲಿದ್ದ ರೋಗಿಯ ಸಂಬಂದಿಕರಿರಬಹುದು.ಹೋಗುತ್ತಿರುವ ಅಂಬುಲೆನ್ಸ್ನಿಂದಲೇ ಕೈ ಮುಗಿದರು.ಅಂಬುಲೆನ್ಸ್ ದೂರ ಹೋದಂತೆ ಸೈರನ್ ಕಡಿಮೆ ಆದಂತೆ ಮನಸ್ಸು ನಿರಾಳವಾಗುತ್ತಿತ್ತು.ಪೋಲಿಸ್ ಕೂಡ ಕಣ್ಣಿನಲ್ಲೇ ಕೃತಜ್ಞತೆ ಅರ್ಪಿಸಿದ.ನನ್ನಪ್ಪಾಜಿ ಯಾವಾಗಲು ಹೇಳುತ್ತಿದ್ದ ಮಾತು ನೆನಪಿಗೆ ಬಂತು."ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿ ಆತ್ಮ ಸಂತೋಷವಿದೆ".ಎಂದದ್ದು.
ಥ್ಯಾಂಕ್ಸ್ ಅಪ್ಪ ಬದುಕನ್ನು ಕಲಿಸಿದ್ದಕ್ಕೆ.

ನಮಗೆ ಎಷ್ಟೇ ಗಡಿಬಿಡಿ ಇರಲಿ.ಅಂಬುಲೆನ್ಸ್,ಅಗ್ನಿಶಾಮಕದ ವಾಹನ ಬಂದಾಗ ದಯವಿಟ್ಟು ಅವರು ಮುಂದೆ ಚಲಿಸಲು ಅವಕಾಶ ಮಾಡಿಕೊಡಿ,ಸಾದ್ಯವಾದರೆ ಅವರಿಗೆ ಸಹಾಯ ಮಾಡಿ.
"ಹೋಗುವ ಜೀವ ಬದುಕಲಿ,ಆ ರೋಗಿಯ ಕುಟುಂಬದವರ ಆತಂಕ ಕಡಿಮೆ ಆಗಲಿ,".

# ಓದಿ ಸಂಪದ ಸಾಲು.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ಪ್ರಕೃತಿಯ ಮಡಿಲಲ್ಲಿ ಕುಳಿತುಕೊಂಡಾಗ ಜಗತ್ತೇ ಮರೆತು ಹೋಗುತ್ತದೆ.ಈ ಪ್ರಕೃತಿ ಸಂಪತ್ತಿನ ಮುಂದೆ ಯಾವ ಸಂಪತ್ತು ಸಾಟಿಯಲ್ಲ,

ಗಾಂಧಿಯ ಮೂಕ ಅಳಲು ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!? *ವೆಂಕಟೇಶ ಸಂಪ.

ಗಾಂಧಿಯ ಮೂಕ ಅಳಲು
ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!?
                      *ವೆಂಕಟೇಶ ಸಂಪ.
ಆರು ತಿಂಗಳ ಹಿಂದೆ!ಅಂದು ನಮ್ಮ ಸಂಪದ ಕೃಷಿ ಉತ್ಪನ್ನವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಬಗ್ಗೆ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿನ ಮಿತ್ರ ಕಂಪನಿಯೊಂದರ ಜೊತೆ ಚರ್ಚಿಸಿ ವಾಪಸ್ಸು ಹೊರಟಿದ್ದೆ.ನೆಡೆದುಕೊಂಡು ಹೊರಟ ನನಗೆ ವಿಶ್ವೇಶ್ವರಯ್ಯ ಟವರ್ ಗೆ ಹೋಗಿ ವಾರ್ತಾ ಇಲಾಖೆ ತಲುಪಬೇಕಿತ್ತು.
ಸ್ವಲ್ಪ ದೂರ ಬರುವ ಮೊದಲೇ ಎಲ್ಲೆಡೆ ಪೋಲಿಸ್ ಸರ್ಪಗಾವಲು ಕಂಡಿತು.ಅರೇ ಇದೆನಪ್ಪಾ ಇಷ್ಟೊಂದು ಪೋಲಿಸ್ ಅನ್ನುತ್ತಾ ಸಿಗ್ನಲ್ ಹತ್ತಿರ ನಿಂತಿದ್ದೆ.ಯಾವ ವಾಹನಗಳು ಚಲಿಸದಂತೆ ನಿರ್ಬಂದ ಹೇರಿದ್ದರು.ಪೋಲಿಸ್ ಅಧಿಕಾರಿ ಮತ್ತು ಕೆಲವು ಪೇದೆಗಳು ನಿಂತಿದ್ದರು.ಅವರ ವೈರ್ ಲೆಸ್ ಏನೇನೋ ಬಡಿದುಕೊಳ್ಳುತ್ತಿತ್ತು.ಸಿಗ್ನಲ್ ಗೆ ನಿಂತ ಜನ ಮತ್ತು ವಾಹನದವರು ಹಿಡಿಶಾಪ ಹಾಕುತ್ತಾ,ಗೊಣಗುತ್ತಾ ನಿಂತಿದ್ದರು.ನನಗೂ ಒಂಥರಾ ಕಸಿವಿಸಿ,ಇರ್ರಿಟೇಶನ್ ಆಗ್ತಾ ಇತ್ತು.ಸಿಗ್ನಲ್ ದಾಟೋಕು "ತಡ್ಯಪ್ಪಾ ಹೋಗ್ಬೇಡ ಸಿ ಎಂ ಸಾಹೇಬ್ರು ಬರ್ತಿದಾರೆ,ಇರಪ್ಪಾ ಈ ಸೈಡ್ ಗೆ"ಅವಾಜು ಹಾಕಿದ ಪೋಲಿಸ್ ಪೇದೆ.ಇರಲಿ ಬಿಡು ಈತನ ಸಂಸ್ಕಾರವೇ ಅಂತದ್ದಿರಬೇಕು,ಈ ತರ ಮಾತಾಡ್ತಾನೆ ಅಂದುಕೊಂಡೆ.ದೊಡ್ಡ ಸೈರನ್ ಮಾಡುತ್ತಾ ಬಂದ ವಾಹನ ಟ್ರಾಫಿಕ್ ದಾಟುವ ಬರದಲ್ಲಿ ಬಡಿದುಕೊಳ್ಳುತ್ತಿತ್ತು.ಆ ಕಡೆ ತಿರುಗಿದೆ.ಅಂಬುಲೆನ್ಸ್ ಜೋರಾಗಿ ಬಡಿದುಕೊಳ್ಳುತ್ತಿತ್ತು.ನನ್ನ ಹೃದಯವೇ ಬಡಿದುಕೊಂಡಂತೆ ಭಾಸವಾಗತೊಡಗಿತು.ಐದು ನಿಮಿಷವಾದರೂ ಈ ಪೋಲಿಸ್ನೋರು ಸಿಗ್ನಲ್ ಕ್ಲಿಯರ್ ಮಾಡಲಿಲ್ಲ.ನನಗೆ ಸಿಟ್ಟು ನೆತ್ತಿಗೇರಿತ್ತು.ಪೋಲಿಸ್ ಅಧಿಕಾರಿಯ ಬಳಿ ಹೋಗಿ ವಿನಂತಿಸಿಕೊಂಡೆ.ಸಾರ್ ಅಂಬುಲೆನ್ಸ್ ಬಂದಿದೆ.ಪಾಪ ಯಾರೋ ಸಾಮಾನ್ಯ ರೋಗಿ ಬದುಕಿಕೊಳ್ಳಲಿ.ಪ್ಲೀಸ್ ಸಿಗ್ನಲ್ ಬಿಡಿ ಸಾರ್,ಅಂದೆ.ಕೇಳಲಿಲ್ಲ.ಹೋಗಯ್ಯಾ ನೀನೇನು ನಂಗೆ ಹೇಳೋದು,ಸಿ ಎಂ ಬರ್ತಿದಾರೆ.ಅವರು ಮುಖ್ಯ,ಸೆಕ್ಯುರಿಟಿ ಸರಿ ಇಲ್ದಿದ್ರೆ ನೋಟಿಸ್ ಕೊಡ್ತಾರೆ ಹೋಗಪ್ಪಾ,ಅಂದ.ನನಗೂ ಉರಿ ಹತ್ತಿತು."ನಾನು ಪತ್ರಕರ್ತ ಕಾಣ್ರಿ"ಅಂದೆ.ಆತನ ಮುಖಭಾವ ಸ್ವಲ್ಪ ಬದಲಾದಂತೆ ಕಂಡಿತು.
ಎದೆ ದಗದಗ ಅನ್ನತೊಡಗಿತ್ತು."ರೀ ಯಾವನ್ರೀ ಸಿ ಎಂ.ನಾವು ಕಾಮನ್ ಮ್ಯಾನ್ ಗಳು ಸಿಎಂ ಕಾಣ್ರಿ.ನಮ್ಮಿಂದಾಗಿ ಅವರು ಸಿಎಂ ಆಗಿದ್ದು.ನಮ್ಮ ವೋಟ್ಗಳಿಂದಲೇ ಅವರು ಅಧಿಕಾರಕ್ಕೆ ಬಂದಿದ್ದು.ಸಾಕು ನಿಲ್ಸ್ರಿ ನಿಮ್ಮ ಆಟನಾ,ಆ ರೋಗಿ ಸಾಯ್ತಾ ಇದಾನೆ.ಅಂಬುಲೆನ್ಸ್ ಲ್ಲಿ.ಕೂಗ್ತಾ ಇದೆ ಆ ರೀತಿ.ಮಾನವೀಯತೆ ಇಲ್ಲದ ನಿಮ್ ರೂಲ್ಸಗೆ ದಿಕ್ಕಾರ ಕಾಣ್ರಿ.ಈಗ ಬಿಡ್ರಿ.ನನ್ನ ಕೂಗಾಟ ಜೋರಾಗಿತ್ತು.ಸುತ್ತ ಮುತ್ತ ಇದ್ದ ಕೆಲವು ಜನ ಅಲ್ಲೇ ಗೊಣಗಿದರು.ಕೆಲವು ಜನ ಬಿಡಿ ಸಾರ್ ಅಂತ ಉದ್ಗಾರ ಎಳೆದರು.ಇನ್ನುಳಿದವರು ನಮಗ್ಯಾಗೆ,ಆ ಅಂಬುಲೆನ್ಸ್ ನಲ್ಲಿರೋ ರೋಗಿ ಬದುಕಿದ್ರೆ ತನಗೇನು ಲಾಭ ಅಂದುಕೊಂಡು ನಮ್ಮ ಗಲಾಟೆ ನೋಡ್ತಾ ಇದ್ರು.ಮತ್ತೊಮ್ಮೆ ಆ ಪೋಲಿಸ್ ಅಧಿಕಾರಿಗೆ ಹೇಳಿದೆ,"ರೀ ನಿಮ್ಮವರಿಗೇ ಹೀಗಾದ್ರೆ,ಅಂಬುಲೆನ್ಸ್ ನಲ್ಲಿ ನಿಮ್ಮವರೆ ಇದ್ದರೆ ನೀವು ಇದೇ ತರಹ ಕಾನೂನು ಹೇಳ್ತಿದ್ರಾ!?ಅಥವಾ ಬಿಡ್ತಿದ್ರಾ?ಹೇಳ್ರಿ ಅಂದೆ.ಆತ ಗೌರವವಾಗಿ ಸಾರ್ ಹೋಗಿ ಸಾರ್ ಮೇಲಾಧಿಕಾರಿ ನೋಟಿಸ್ ಕೊಡ್ತಾರೆ.ಸಿ ಎಂ ಸೆಕ್ಯುರಿಟಿ ಸರಿ ಮಾಡ್ಲಿಲ್ಲಾ ಅಂತ.ಪ್ಲೀಸ್ ಒತ್ತಾಯ ಮಾಡ್ಬೇಡಿ ಕೈ ಮುಗಿತೀನಿ ಅಂದ.ನಂಗೆ ಸಿಟ್ಟು ನೆತ್ತಿಗೇರಿತ್ತು.ನೀನು ಕೈ ಮುಗಿದು ನನಗೇನು ಆಗ್ಬೇಕಿದೆ.ಆ ಅಂಬುಲೆನ್ಸ್ ನ ರೋಗಿ ಸರಾಗವಾಗಿ ಆಸ್ಪತ್ರೆಗೆ ಹೋಗ್ಬೇಕಷ್ಟೆ.ಅಂದೆ.ತಕ್ಷಣ ಹಿರಿಯ ಪೋಲಿಸ್ ಅಧಿಕಾರಿಗೆ ನಾನೇ ಕರೆ ಮಾಡಿದೆ.ಘಟನೆ ವಿವರಿಸಿದೆ.ನಮ್ಮ ಸಂಪದ ಸಾಲು ಪತ್ರಿಕೆಯ ಜೊತೆ ವಾರ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗಲೇ ಪರಿಚಿತನಾಗಿದ್ದ ಆಫೀಸರ್ ಅವರು.ಈಗ ಪೋಲಿಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದರು.ತಕ್ಷ ಣ ಈ ಅಧಿಕಾರಿಗೆ ಪೋನ್ ಕೊಡುವಂತೆ ಹೇಳಿದರು.ಪೋನ್ ಕೊಟ್ಟೆ.ಅವರು ಹೇಳಿದ್ದಕ್ಕೆಲ್ಲಾ ಹೂಂ ಅಂದ ಈ ಅಧಿಕಾರಿ ಕೂಡಲೇ ಅಂಬುಲೆನ್ಸ್ ಮುಂದೆ ಹೋಗುವಂತೆ ಸಹಕರಿಸಿ ಸಿಗ್ನಲ್ ಫ್ರೀ ಮಾಡಿದ್ದಲ್ಲದೆ ಆ ಅಂಬುಲೆನ್ಸ್ ಜೊತೆ ರಸ್ತೆಯಲ್ಲಿ ಟ್ರಾಫ್ಹಿಕ್ ಆಗದಂತೆ ನೋಡಿಕೊಳ್ಳಲು ಒಂದು ಪೋಲಿಸ್ ವಾಹನವನ್ನು ಕಳಿಸಿಕೊಟ್ಟರು.
ಸ್ವಲ್ಪ ಸಮಾದಾನವಾಯಿತು.ಆದರೂ ಈ ವಿ ಐ ಪಿ ಸಂಸ್ಕೃತಿಯ ಬಗ್ಗೆ ಅಸಹಾಯಕತೆಯ ಜೊತೆ ಸಿಟ್ಟು ಬರುತ್ತಿತ್ತು.ನೋಡೋಣ ಸಿಎಂ ವಾಹನ ಎಷ್ಟೊತ್ತಿಗೆ ಬರಬಹುದು ಅಂತ ಇಲ್ಲೆ ಕಾಯೋಣ ಅಂದುಕೊಂಡು ಕುಳಿತೆ.ಪಕ್ಕದಲ್ಲೇ ಇದ್ದ ಪೋಲಿಸ್ ಆಫೀಸರ್ ಗೆ ಭಯ.ಸಾರ್ ನಿಮ್ಮನ್ನು ಎಲ್ಲಿಗಾದ್ರೂ ಡ್ರಾಪ್ ಮಾಡಸ್ಲಾ ಅಂದರು.ನೋ ಸಾರ್ ನಿಮ್ಮ ಸಿಎಂ ಎಷ್ಟೋತ್ತಿಗೆ ಬರ್ತಾರೆ ನೋಡಿಯೇ ಹೋಗ್ತೀನಿ ಅಂದೆ.ಸುಮಾರು ಅರ್ದಗಂಟೆಗೂ ಲೇಟಾಗಿ ಸಿ ಎಂ ವಾಹನಗಳು ಸೈರನ್ ಮಾಡುತ್ತಾ ಪಾಸ್ ಆಯಿತು.ಅದಾಗಿ ಐದು ನಿಮಿಷದ ನಂತರ ಸಿಗ್ನಲ್ ನಲ್ಲಿ ಜನ ಸಾಮಾನ್ಯರ ವಾಹನಗಳಿಗೆ ಅನುವು ಮಾಡಿಕೊಟ್ಟರು.ಗೊಣಗುತ್ತಾ,ಮೌನದಲ್ಲಿ ಎಲ್ಲರೂ ಹೊರಟುಹೋದರು.ನಾನು ಮಾತ್ರಾ ಏಕಾಂಗಿಯಾಗಿ ಸಿಗ್ನಲ್ ದಾಟಿ ನೆಡೆದುಕೊಂಡು ಹೊರಟೆ.ಇಡೀ ತಲೆಯಲ್ಲಿ ಬರೀ ಈ ವಿಐಪಿ ಸಂಸ್ಕೃತಿಯ ಬಗ್ಗೆ ಅಸಹನೆಯ ಹೌಯ್ದಾಟ ನೆಡೆಯುತ್ತಿತ್ತು.ದೊಡ್ಡವರ ಹೆಸರಲ್ಲೇಕೆ ಜನ ಸಾಮಾನ್ಯರ ಮೇಲೆ ಪ್ರಹಾರ!?ನಮ್ಮಿಂದಲೇ ಗೆದ್ದ ಈ ಮಂದಿಗಳ ಸೆಕ್ಯುರಿಟಿ ಹೆಸರಲ್ಲಿ ಸಾಮಾನ್ಯರನ್ನು, ವೃದ್ದರನ್ನು,ಹೆಂಗಸರನ್ನು,ಮಕ್ಕಳನ್ನು ಟೆರರಿಷ್ಟ್ ತರಹ ನೋಡೋ ಪೋಲಿಸ್ ಬುದ್ದಿ.ಅದನ್ನು ಕಂಡೂ ಪ್ರತಿಭಟಿಸದ ಜನ,ಗೊಣಗುತ್ತಾ ವ್ಯವಸ್ತೆಗೆ ಅಡ್ಜಷ್ಟ್ ಆಗೋ ರೀತಿ,ಮನುಷ್ಯ ಮನುಷ್ಯರ ನಡುವೆಯೇ ಉಂಟಾದ ಕಂದಕ,ಈ ತರಹದ ಸನ್ನಿವೇಶಗಳೇ ಕಣ್ಣಿಗೆ ಕಟ್ಟುತ್ತಿತ್ತು.ಯಾರೋ ದಬ್ಬಿದಂತೆ ನೆಡೆದು ಬರುತ್ತ್ತಿದ್ದೆ. ಕೈಲಿ ಕೋಲು ಹಿಡಿದ ಗಾಂಧಿ ಪ್ರತಿಮೆ ಮೂಕವಾಗಿ ಅಳುತ್ತಿತ್ತು.ನಾನು ಮೂಕನಾಗಿ ಅದನ್ನು ನೋಡುತ್ತಾ ಕುಳಿತೆ.*ವೆಂಕಟೇಶ ಸಂಪ.
ಓದಿ ಸಂಪದ ಸಾಲು,

ಚಟಕ್ಕೆ ಬಿದ್ದವರ ಬದುಕಿಸೋ ಭಗವಂತ!? *ವೆಂಕಟೇಶ ಸಂಪ,

ಚಟಕ್ಕೆ ಬಿದ್ದವರ ಬದುಕಿಸೋ ಭಗವಂತ!?         
                     *ವೆಂಕಟೇಶ ಸಂಪ,
ನಾಲ್ಕು ತಿಂಗಳ ಹಿಂದಿನ ಮಾತು!ವಿಧಾನ ಸೌಧದ ಎದುರು ಬಾಗಿಲಲ್ಲಿ ನಿಂತ ಮಹಿಳೆಯೊಬ್ಬಳು ಒಂದೇ ಸಮನೇ ರೋಧಿಸುತ್ತಿದ್ದಳು.ವರದಿಗೆಂದು ಹೊರಟ ನನಗೆ ಏನು ಕತೆ ನೋಡೋಣ ಅನಿಸಿತ್ತು.ಒಳಗೆ ಬಿಡಿ ಸಾರ್,ನನ್ನ ಗಂಡ ಸಾಯೋ ಸ್ತಿತಿಲಿ ಇದಾರೆ.ವಿಕ್ಟೋರಿಯಾ ಆಸ್ಪತ್ರೆಲಿ ಸೇರ್ಸ್ಕೊಂಡಿದಾರೆ.ಟ್ರಿಟಮೆಂಟ್ ಕೊಡ್ತಿಲ್ಲ.ದುಡ್ಡು ತನ್ನಿ ಅಂತಾರೆ.ಇಲ್ಲಿ ಸಭಾಪತಿ ಶಂಕರಮೂರ್ತಿ ಆಫೀಸ್ ಅಲ್ಲಿ ಪರಿಚಯದವರಿದ್ದಾರೆ.ಅವರ ಹತ್ತಿರ ಹೇಳಿಸುತ್ತೇನೆ.ಪ್ಲೀಸ್ ಬಿಡಿ ಅಂತ ವಿಧಾನ ಸೌಧದ ಗೇಟ್ ಕಾಯುವ ಪೋಲಿಸ್ ಬಳಿ ಅಂಗಲಾಚುತ್ತಿದ್ದಳು.ಸುಂಕದವರ ಜೊತೆ ದುಃಖ ಹೇಳಿದ್ರೆ ಕೇಳಲ್ಲ ಅಲ್ವಾ!?ಆ ಪೋಲಿಸ್ ನಿಮ್ಮೂರು ಯಾವದಮ್ಮ!?ಎಂ ಎಲ್ ಏ ಪಾಸ್ ಇದೆಯಾ!?ಮಧ್ಯಾನ್ಹ 3 ಗಂಟೆ ಮೇಲೆ ಬಾರಮ್ಮ ಎನ್ನುತ್ತಾ ಆ ಪೋಲಿಸ್ ನವರು ಸಂಬಂಧವೇ ಇಲ್ಲದಂತೆ ಸುಮ್ಮನಾದ.ಯಾಕೆ ಸಾರ್ ಎಂತೆಂತವರಿಗೋ ಒಳಗೆ ಬಿಡ್ತಿರಾ!?ಈ ಯಮ್ಮ ಇಷ್ಟೆಲ್ಲಾ ಹೇಳಿದ್ರು ಮಾತೇ ಕೇಳದಂತೆ ಇದಿರಾ!,ಆಕೆಯ ಅಳು ನಿಜವಾದದ್ದಾ!?ಅಥವಾ ನಾಟಕನಾ!?ನೋಡಿ ತಿಳ್ಕೊಳ್ಳಿ.ಹೌದಾದ್ರೆ ಒಳಗೆ ಬಿಡಿ.ನಿಮ್ಮ ರೂಲ್ಸ ಆಮೇಲೆ,ಕಷ್ಟದವರಿಗೆ ಸ್ಪಂದಿಸೋ ಗುಣ ಕಲೀಬೇಕಲ್ವಾ ಅಂದೆ.
ಹೌದು ಸಂಪ ಸಾರ್ ನೀವು ಹೇಳಿದ್ದು.ಆದರೆ ನಮ್ಮ ಮೇಲಿನ ಆಫೀಸರ್ ಗಳು ಬೈತಾರೆ.ಅದಲ್ಲದೆ ಈ ತರಹ ನಾಟಕ ಮಾಡೋರು ತುಂಬಾ ಬರ್ತಾರೆ ಸಾರ್.ಏನ್ಮಾಡಲಿ ಸಾರ್ ಅಂದರು.ಸರಿ ಸಾರ್ ಇವರು ಸಭಾಪತಿಗಳ ಕಚೇರಿಯವರ ಪರಿಚಯ ಅಂತಾರೆ.ಅವರಿಗೆ ಕಾಲ್ ಮಾಡಿ ಕೇಳಿ ಅಂದೆ.ತಕ್ಷಣ ಕಾಲ್ ಮಾಡಿದಾಗ ಈ ಹೆಂಗಸು ಪರಿಚಯ ಇದ್ದಿದ್ದು ಹೌದು ಅಂದರು. ಒಳಗೆ ನಾನೇ ಕರೆದುಕೊಂಡು ಹೊರಟೆ.
ಏನಮ್ಮಾ ನಿನ್ನ ಕಷ್ಟ ಕೇಳಿದೆ.ಅಣ್ಣಾ ನನ್ನ ಗಂಡ ಸಿಕ್ಕಾಪಟ್ಟೆ ಕುಡಿತಾನೆ.ಅದ್ಯಾವ್ದೋ ಸಮಸ್ಯೆ ಇದೆಯಂತೆ.ಅದಕ್ಕೆ ರಕ್ತ ತೆಗೆದು ಮತ್ತೆ ಫಿಲ್ಟ್ರು ಮಾಡ್ಬೇಕಂತೆ.ದುಡ್ಡಿಲ್ಲ.ಒಂದು ವಾರ ಆಯ್ತು ಇಲ್ಲಿ ಬಂದು.ಡಾಕ್ಟ್ರಿಗೆ ಹೇಳ್ಬೇಕಿತ್ತು.ಅಂದಾಗ ಆಕೆಯನ್ನು ಸುಮ್ಮನೆ ನೋಡಿದೆ.ಪಾಪ ಊಟ ಮಾಡದ,ಆಕೆಯ ಅಸಹಾಯಕತೆಯ ಕಣ್ಣು ನೋಡಿದಾಗ ಅನುಕಂಪ ಮೂಡಿತ್ತು.ಆಕೆಯ ಬಟ್ಟೆ ಮಾಸಿತ್ತು.ಸಂಬಂದಪಟ್ಟವರ ಬಳಿ ಕರೆದುಕೊಂಡು ಹೋದೆ.ಅಲ್ಲಿಂದ ಆಸ್ಪತ್ರೆಯ ಡಾಕ್ಟರ್ ಗೆ ಮಾತಾಡಿ ಟ್ರೀಟ್ಮೆಂಟ್ ಗೆ ವ್ಯವಸ್ತೆಯೂ ಆಯಿತು.ಅವಳಿಗೆ ಊಟಕ್ಕೆ ಮತ್ತು ಖರ್ಚಿಗೆ ಅವರು ನಾನು ಇಬ್ಬರೂ ಸ್ವಲ್ಪ ಹಣ ಕೊಟ್ಟೆವು.ಆಕೆಯ ಮುಖದಲ್ಲಿ ಚೂರು ಕೃತಜ್ಞತಾಭಾವ ಮೂಡಿತ್ತು..ತನ್ನ ಗಂಡನ ಅನಾರೋಗ್ಯದಲ್ಲಿ ಆಕೆಗೇನೂ ಹೇಳಲಾಗುತ್ತಿಲ್ಲವೆಂಬುದು ಅರ್ಥವಾಗಿತ್ತು.ನಮ್ಮ ಸಂಪದ ಸಾಲು  ಕಚೇರಿಯ  ಕಾರ್ಡ್ ಕೊಟ್ಟು ಏನಾದ್ರು ತೊಂದ್ರೆ ಆದ್ರೆ ಹೇಳಮ್ಮ ಅಂದೆ.ಆಕೆಗೆ ಯಾವ ಭಾವವೂ ಇರಲಿಲ್ಲ.ಆಸ್ಪತ್ರೆಗೆ ಓಡಿದ್ದಳು.ಇತ್ತೀಚೆಗೆ ಯಾವ್ದೋ ಕಾಯಿನ್ ಬಾಕ್ಸ್ ಪೋನಿಂದ ಕರೆ ಮಾಡಿದ್ದಳು.ಅಣ್ಣಾ ಅವತ್ತು ವಿಧಾನಸೌಧದಲ್ಲಿ ಸಿಕ್ಕಿದ್ರಲ್ರಿ.ನನ್ನ ಗಂಡ ಬದುಕಿದಾನ್ರೀ.ಅಣ್ಣಾ,ಆದ್ರೆ ಕುಡಿಯೋದು ಬಿಟ್ಟಿಲ್ರಿ ಅಂದಳು.
ಛೇ ಅಂದುಕೊಂಡೆ.ಆತ ಆರಾಮಾಗಿದ್ದಕ್ಕೆ ಖುಷಿ ಒಂದೆಡೆ ಆದರೆ,ಆತ ಕುಡಿತ ಬಿಟ್ಟಿಲ್ವಲ್ರಿ ಅಂತ ಬೇಜಾರಾಯ್ತು.ಈ ಹಾಳಾದ್ದು ಸಿಗರೇಟ್,ಬಿ ಡಿ,ಕುಡಿತದಂತ ಚಟಗಳನ್ನು ಯಾಕಾದ್ರೂ ಕಲಿತು ಇಡೀ ಸಮಾಜ ಹಾಳು ಮಾಡ್ತಾರೋ ಅಂತ ಅಸಹಾಯಕನ ದುಃಖ ಮೂಡಿತು.
ಹಾಳು ಸರ್ಕಾರವೇ ಬಿ.ಡಿ,ಸಿಗರೇಟ್,ತಂಬಾಕು,ಹೆಂಡಗಳನ್ನು ಯಾಕಾದ್ರೂ ತಯಾರಿಸುತ್ತೋ!?ಇಂತಹ ದರಿದ್ರಗಳನ್ನು ಮಾಡ್ಬಾರದು ಅನ್ನೋದು ಜನಕ್ಕೂ ಅರ್ಥ ಆಗಲ್ಲ.ಯಾಕೆ ಹೆತ್ತವರಿಗೂ ಕಟ್ಟಿಕೊಂಡವರಿಗೂ ಸಮಾಜಕ್ಕೂ ಕಷ್ಟಕೊಡ್ತಾರೋ!?ದರಿದ್ರ ವ್ಯವಸ್ಥೆ ನೆನೆದು ಅಸಹಾಯಕನಂತೆ ನಿಂತೆ.ಕಣ್ಣಿಂದ ಬಿದ್ದ ಹನಿ ನನಗೂ ತಿಳಿಯಲಿಲ್ಲ,ದುಶ್ಚಟದ ವಿರುದ್ದ ಏನಾದ್ರೂ ಜಾಗೃತಿ ಅಭಿಯಾನ ಮಾಡೋಣ್ವಾ!?*ವೆಂಕಟೇಶ ಸಂಪ.
ಓದಿ ಸಂಪದ ಸಾಲು,

Friday, July 1, 2016

Why party workers are not getting position in party?

ಒಂದು ರಾಜಕೀಯ ಪಕ್ಷದಲ್ಲಿ ಕುರ್ಚಿಗಾಗಿ ಏನೆಲ್ಲಾ ಗಲಾಟೆ ರಾದ್ದಾಂತವಾಗುತ್ತವೆ.ಬಕೆಟ್ ಹಿಡಿಯೋನು,ಕುತಂತ್ರ ಮಾಡೋ ವ್ಯಕ್ತಿಗಳು ಬಹುಬೇಗ ಅಧಿಕಾರ ಗಿಟ್ಟಿಸಿಕೊಂಡು ಮೆರೆಯುತ್ತಾರೆ.ಪಕ್ಷಕ್ಕಾಗಿ,ತತ್ವಕ್ಕಾಗಿ ಹಗಲು ರಾತ್ರಿ ಶ್ರಮಿಸಿದ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ಮಾತ್ರಾ ನೆನಪಾಗುತ್ತಾರೆ.
ಇದಕ್ಕೆ ತಾಜ ಉದಾಹರಣೆಯಾಗಿದ್ದಾರೆ ಜಿ ಎನ್ ಗೋಪಾಲಕೃಷ್ಣರವರು.ಬೆಂಗಳೂರಿನ ಗಾಂಧಿನಗರ ಕ್ಷೇತ್ರದವರಾದ ಇವರು ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿದ್ದಾಗ ಚುನಾವಣೆಗೆ ಮೀಸಲಿರಿಸಿದ್ದ ಹಣವನ್ನೆಲ್ಲಾ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗೆ ಬಡವರ ಚಿಕಿತ್ಸೆಗಾಗಿ ದೇಣಿಗೆ ನೀಡಿದರು.           ಕಾಂಗ್ರೇಸ್ ನ ಎಲ್ಲಾ ಮುಖ್ಯಮಂತ್ರಿಗಳಿಗೂ ಗೆಲುವು ತಂದುಕೊಡುವಲ್ಲಿ ಶ್ರಮಿಸಿದವರು.ಎಲೆ ಮರೆಯ ಕಾಯಿಯಂತಿರುವ ಇವರು ಎಲ್ಲಾ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ.ಇಂತವರನ್ನು ಗುರುತಿಸಿ ಇವರ ಸೇವೆ ಪಡೆದುಕೊಂಡರೆ ರಾಜ್ಯಕ್ಕೆ ಒಳಿತಾಗುವುದರಲ್ಲಿ ಸಂದೇಹವಿಲ್ಲ.   *ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ,  

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu