ಮನಕೆಡಿಸುವ ಕತ್ತಲೆಯನ್ನು ದೂರ ತಳ್ಳಿ
ನಗುವೆಂಬ ಬೆಳಕನ್ನು ಕರೆಯೋಣ ಬನ್ನಿ..
ಕಲ್ಲನ್ನೂ ಕರಗಿಸಿ ಮೃದುವಾಗಿಸುವ
ಆತ್ಮವಿಶ್ವಾಸದ ನಗೆಯನು ಚೆಲ್ಲಿ
ಶತ್ರುಸ್ವರೂಪದ ಕಠೋರ ಕ್ರೂರತೆಯ ನೂಕಿ
ಮಿತೃತ್ವದ ಮಧುರತೆಯ ಸಿಹಿ ಸವಿಯೋಣ ಬನ್ನಿ.
ನಿಶೆಯ ರೌದ್ರವತೆಯ ನಿದ್ದೆಯನು ಕೊಡವಿ
ಉಷೆಯ ಮಂದಹಾಸವ ನೇವರಿಸಿ
ಜಗದ ಹಸಿರ ಜೊತೆ ಮನಕೆ ಮುದನೀಡುವ
ಬೆಳಗೆಂಬ ಸ್ನೇಹಲತೆಯ ಬೆಳೆಸೋಣ ಬನ್ನಿ
ವೆಂಕಟೇಶ ಸಂಪ
ಓದಿ ಸಂಪದ ಸಾಲು
No comments:
Post a Comment