ಒಂದು ರಾಜಕೀಯ ಪಕ್ಷದಲ್ಲಿ ಕುರ್ಚಿಗಾಗಿ ಏನೆಲ್ಲಾ ಗಲಾಟೆ ರಾದ್ದಾಂತವಾಗುತ್ತವೆ.ಬಕೆಟ್ ಹಿಡಿಯೋನು,ಕುತಂತ್ರ ಮಾಡೋ ವ್ಯಕ್ತಿಗಳು ಬಹುಬೇಗ ಅಧಿಕಾರ ಗಿಟ್ಟಿಸಿಕೊಂಡು ಮೆರೆಯುತ್ತಾರೆ.ಪಕ್ಷಕ್ಕಾಗಿ,ತತ್ವಕ್ಕಾಗಿ ಹಗಲು ರಾತ್ರಿ ಶ್ರಮಿಸಿದ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ಮಾತ್ರಾ ನೆನಪಾಗುತ್ತಾರೆ.
ಇದಕ್ಕೆ ತಾಜ ಉದಾಹರಣೆಯಾಗಿದ್ದಾರೆ ಜಿ ಎನ್ ಗೋಪಾಲಕೃಷ್ಣರವರು.ಬೆಂಗಳೂರಿನ ಗಾಂಧಿನಗರ ಕ್ಷೇತ್ರದವರಾದ ಇವರು ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿದ್ದಾಗ ಚುನಾವಣೆಗೆ ಮೀಸಲಿರಿಸಿದ್ದ ಹಣವನ್ನೆಲ್ಲಾ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗೆ ಬಡವರ ಚಿಕಿತ್ಸೆಗಾಗಿ ದೇಣಿಗೆ ನೀಡಿದರು. ಕಾಂಗ್ರೇಸ್ ನ ಎಲ್ಲಾ ಮುಖ್ಯಮಂತ್ರಿಗಳಿಗೂ ಗೆಲುವು ತಂದುಕೊಡುವಲ್ಲಿ ಶ್ರಮಿಸಿದವರು.ಎಲೆ ಮರೆಯ ಕಾಯಿಯಂತಿರುವ ಇವರು ಎಲ್ಲಾ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ.ಇಂತವರನ್ನು ಗುರುತಿಸಿ ಇವರ ಸೇವೆ ಪಡೆದುಕೊಂಡರೆ ರಾಜ್ಯಕ್ಕೆ ಒಳಿತಾಗುವುದರಲ್ಲಿ ಸಂದೇಹವಿಲ್ಲ. *ವೆಂಕಟೇಶ ಸಂಪ, ಓದಿ ಸಂಪದ ಸಾಲು ಪತ್ರಿಕೆ,
Friday, July 1, 2016
Why party workers are not getting position in party?
Subscribe to:
Post Comments (Atom)
Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )
ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu
No comments:
Post a Comment