Sunday, September 21, 2014

sampa with na disouza

ಓದುಗ ಇದ್ದರೆ ಮಾತ್ರ ಬರಹಗಾರ ಉಳಿಯಬಲ್ಲ...ಪ್ರಜೆಗಳಿದ್ದರೆ ಮಾತ್ರ ಶಾಸಕ ಉಳಿಯಬಲ್ಲ........
ನೋಡುಗ ಇದ್ದರೆ ಮಾತ್ರ ಒಂದು ಸಿನಿಮಾ ಗೆಲ್ಲಬಲ್ಲದು...ಭಕ್ತರು ಚೆನ್ನಾಗಿದ್ದರೆ ಮಾತ್ರಾ ಒಬ್ಬ ಗುರು ಉಳಿಯಬಲ್ಲ.....

ಹಾಗಾಗಿ ನಮ್ಮವರನ್ನು ನಾವು ಪ್ರೀತಿಸಬೇಕು...ಮತ್ತು ಅವರಿಗೆ ಉಪಕಾರಿಯಾಗುವಂತಿರಬೇಕು.......ಸಮಾಜದ ವಾತಾವರಣ ಸಾಧಕರನ್ನು ಸೃಷ್ಟಿಸುವಂತಿರಬೇಕು....

ಓದುಗನಿಗಾಗಿ ಬರಹಗಾರ.....ಬರಹಗಾರನಿಗಾಗಿ ಓದುಗ.......ಪ್ರಜೆಗಳಿಗಾಗಿ ಶಾಸಕ......ಶಾಸಕನಿಗಾಗಿ ಪ್ರಜೆ......ನೋಡುಗನಿಗಾಗಿ ಸಿನೆಮಾ.....ಭಕ್ತರಿಗಾಗಿ ಗುರು.......ಗುರುವಿಗಾಗಿ ಭಕ್ತರು ಇದ್ದರೆ ಎಷ್ಟು ಚೆಂದ ಅಲ್ವಾ?!

ಓದಿ ಸಂಪದ ಸಾಲು

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",…..9448219347


ಮರಗಳನ್ನೇ ಮಕ್ಕಳೆಂದು ತಿಳಿದ ಮಹನೀಯಳು ಈ ಸಾಲು ಮರದ ತಿಮ್ಮಕ್ಕ.ಈಕೆ ನೆಟ್ಟ ಮರಗಳೇ ಇಂದು ಹಸಿರು ತುಂಬಿ ಉಸಿರಾಡುವಂತೆ ಮಾಡಿದೆ. ಕನ್ನಡಿಗರು ಯಾರೂ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ.ಬೇಗ ಗುಣಮುಖರಾಗಿ ಬನ್ನಿ ಅಜ್ಜಿ.ಮೊಮ್ಮೊಕ್ಕಳಂತೆ ನಿಮ್ಮ ಆರೋಗ್ಯ ರಕ್ಷಣೆಗಾಗಿ ಪ್ರಾರ್ಥಿಸುತ್ತೇವೆ.* ಓದಿ ಸಂಪದ ಸಾಲು
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",…..9448219347
ಹಸಿರೆ ಉಸಿರು ಎಂದು ತೋರಿಸಿಕೊಟ್ಟ ತಾಯಿ ಹುಶಾರಿಲ್ಲದೆ ಮಲಗಿದ್ದಾರೆ.ಸರ್ಕಾರ ಮತ್ತು ಸಂಘ ಸಂಸ್ಥೆಗಳು ಆಕೆಯ ನೆರವಿಗೆ ಸಾಗಬೇಕಿದೆ.ಯಾವುದೇ ಧರ್ಮ ಜಾತಿಯ ಬೇಧವೆಣಿಸದ ಪಕೃತಿಯನ್ನು ಪೂಜಿಸಿದ ತಿಮ್ಮಕ್ಕನಿಗೆ ಕೋಟಿ ಕೋಟಿ ನಮನಗಳು.ದಯವಿಟ್ಟು ಎಲ್ಲರೂ ಆಕೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿ.ಮತ್ತು ಆಕೆಯ ಮಹದಾಸೆಯಂತೆ ವರ್ಷಕ್ಕೊಂದು ಮರ ನೆಡುವ ಪಣ ತೊಡೋಣ,

ನೀರು ಉಳಿಸಿ,ಬದುಕು ಬೆಳೆಸಿ,ಇದು ಸಂಪದ ಸಾಲು ಪತ್ರಿಕಾ ಅಭಿಯಾನ,ಅಂತರ್ಜಲ ಅಭಿವೃದ್ದಿಗೆ ನಮ್ಮ ಜೊತೆಯಾಗಿ 9448219347



ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?! #ವೆಂಕಟೇಶ ಸಂಪ


ದುಡಿಯುವ ಕೈಗೆ ಭಿಕ್ಷೆ ನೀಡಿ ನಿಷ್ಕ್ರಿಯಗೊಳಿಸಬೇಡಿ...!?!
#ವೆಂಕಟೇಶ ಸಂಪ

ಮೇಖ್ರಿ ಸರ್ಕಲ್ ಬಳಿ ನಿಂತಿದ್ದೆ .ಜೊತೆಗೆ ಗೆಳೆಯನೂ ಇದ್ದ..ಅತ್ತಿಂದ ಇತ್ತ...ಇತ್ತಿಂದ ಅತ್ತ ವಾಹನಗಳು ಚಲಿಸುತ್ತಿದ್ದವು....ಆಗಾಗ ಸಿಗ್ನಲ್ ಗಳು ಬದಲಾಗುತ್ತಾ ನಿಂತು ಹೋಗುವ ವಾಹನಗಳು ನೋಡಿದಾಗ..ಜೀವನದಲ್ಲಿ ಎಷ್ಟೇ ವೇಗವಾಗಿ ಓಡಿದರೂ ಮದ್ಯದಲ್ಲೇಲ್ಲೋ ಯಾರೋ ನಿಯಂತ್ರಿಸುತ್ತಾರೆಂಬ ಸೂಚನೆಯಂತಿತ್ತು.....

ಈ ನಿಂತು ಹೋಗುವ ವಾಹನಗಳ ನಡುವೆಯೇ ಒಂದಷ್ಟು ಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದರು.ಅದರಲ್ಲಿ ಮಂಗಳಮುಖಿಯರೂ ....ನಿದ್ದೆ ಇಂಜಕ್ಷನ್ ಕೊಟ್ಟ ಮಗುವೂ..ಅದನ್ನೆತ್ತಿಕೊಂಡ ತಾಯಿಯೂ....ಶಾಲೆಗೆ ಹೊಗಬಹುದಾದ ಮಕ್ಕಳೂ....ಗಟ್ಟಿ ದೇಹ ಹೊಂದಿದ್ದ ಗಂಡಸೂ ಇದ್ದರು.....

ಇದು ನನ್ನ ಏರಿಯಾ..ಇಲ್ಲಿ ಬರಬೇಡ ಹೋಗು....ಬರಬೇಡ ಹೋಗು.....ಎನ್ನುತ್ತಾ ಮಂಗಳಮುಖಿಯೊಬ್ಬಳು ಮಗುವೆತ್ತಿಕೊಂಡಾಕೆಯನ್ನು ತಳ್ಳುತ್ತಿದ್ದಳು...ಒಂದು ಸಣ್ಣ ಜಗಳ...ಅಲ್ಲಿದ್ದವರಿಗೆ ಮನರಂಜನೆ ನೀಡುತ್ತಿದೆ ಅನಿಸಿತು...ಬಾರೋ ನೋಡೋಣ ಎಂತ ಘಲಾಟೆ ಅಂತ ನನ್ನ ಗೆಳೆಯನನ್ನು ಕರದೆ...ಲೇ ಸಂಪಾ ಸುಮ್ನಿರೋ...ಊರಿನ ಉಸಾಬರಿ ನಿಂಗ್ಯಾಕೋ...ಬೇಡ....ಬಾ....ಅಂದ.....ಇರಲಿ ಬಾರೋ ಅಂತ ಆತನನ್ನು ಎಳೆದುಕೊಂಡು ಹೋದೆ....ಸರಿ.....ಎನ್ರಮ್ಮಾ ನಿಮ್ಮ ಗಲಾಟೆ ಅಂತ ಹತ್ರ ಹೋದೆ.......ನೋಡಿ ಸಾರ್ ನಮ್ಮ ಏರಿಯಾ....ದಲ್ಲಿ ಭಿಕ್ಷೆ ಬೇಡ್ತಾ ಇದಾರೆ......ಅದ್ಕೆ .........ಅವರಿನ್ನ ಬಿಡಲ್ಲಾ.....ಹಾಗೆ ಹೀಗೆ ಅಂತಾ ಕೂಗಾಡಿದ ಮಂಗಳಮುಖಿಗೆ ಕೇಳಿದೆ....ಬಿಕ್ಷೆ ಬೇಡೋದೆ ಅಪರಾದ....ಅದರಲ್ಲಿ ಏರಿಯಾ ನಂದು ಅಂತಾ ಅವಾಜು ಬೇರೇನಾ.....ನಮ್ಮ ತೋಟದಲ್ಲಿ ಕೆಲಸ ಮಾಡೊದಾದ್ರೆ ನಾ ಸಂಬಳ ಕೊಡ್ತಿನಿ....ಭಿಕ್ಷೆ ಕೇಳ್ಬೇಡಿ.....ಈಗ ಪೋಲಿಸ್ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಪೋನ್ ಮಾಡ್ತಿನಿ....ಇರಿ...ಏಯ್ ಪೋಟೋ ತೆಕ್ಕೋಳ್ಳೋ ಅಂದೆ.........!?!?

ನನ್ನ ಗೆಳೆಯ ಕ್ಯಾಮರ ತೆಗೆಯುವುದ್ರೋಳಗೆ.....ಅಲ್ಲಿದ್ದ ಆ ಮಕ್ಕಳು....ಆ ಮಗು ಎತ್ತಿಕೊಂಡ ತಾಯಿ....ಗಂಡಸು....ಶಾಲೆಗೆ ಹೋಗಬಹುದಾದ ಮಗು....ನನ್ನ ಏರಿಯಾ ಅಂತ ಅವಾಜು ಹಾಕ್ತಿದ್ದ ಮಂಗಳಮುಖಿ.....ಯಾರು ಇರಲಿಲ್ಲ.....ಚಲಿಸುತ್ತಿದ್ದ ವಾಹನಗಳ ನಡುವೆ ನಮ್ಮಿಂದ ದೂರವಾದರು....

ದಯವಿಟ್ಟು ದೇಹದಲ್ಲಿ ಗಟ್ಟಿಯಾಗಿರೋ ಜನಗಳಿಗೆ ಭಿಕ್ಷೆ ನೀಡಿ ಒಳ್ಳೆಯವರಾಗುವ ಪ್ರಯತ್ನ ಮಾಡಬೇಡಿ...ಸರ್ಕಾರದ ಕಾನೂನಿನ ಪ್ರಕಾರ ಬಿಕ್ಷೆ ಬೇಡೋದು ಮತ್ತು ಕೊಡೋದು ಎರಡೂ ಅಪರಾಧ...ಅಂಗವಿಕಲರಾದವರೇ ಸಾಧನೆ ಮಾಡುತ್ತಿರುವ ಸಾವಿರಾರು ಜನ ಇದ್ದಾರೆ.....ಅಂತಹ ಜನಗಳ ನಡುವೆ ಗಟ್ಟಿಮುಟ್ಟಾದ ಜನ ಸರಳವಾಗಿ ಹಣ ಮಾಡೋ ಅಕ್ರಮ ದಂಧೆ ಶುರು ಮಾಡಿದ್ದಾರೆ..ಕಷ್ಟದಲ್ಲಿರೋರಿಗೆ ಸಹಾಯ ಮಾಡೋಣ...ಆದರೆ ಅದು ಬಿಕ್ಷೆಯ ರೂಪದಲ್ಲಿ ಅಲ್ಲ...ಸಾಧ್ಯವದಷ್ಟು ದುಡಿಯಲು ಅವಕಾಶ ಮಾಡಿಕೊಡೋಣ... ಭಿಕ್ಷಾಟನೆ ಬಿಟ್ಟು ಕೆಲಸಕ್ಕೆ ಬರುವ ಒಂದಷ್ಟು ಜನಕ್ಕೆ ನನ್ನ ತೋಟದಲ್ಲಿ ಕೆಲಸ ನೀಡಲು ಸಿದ್ದನಿದ್ದೇನೆ......ದಯವಿಟ್ಟು ಭಿಕ್ಷಾಟನೆಗೆ ಪ್ರೋತ್ಸಾಹ ನೀಡಬೇಡಿ...ದುಡಿಯುವ ಕೈಯನ್ನು ನಿಷ್ಕ್ರಿಯಗೊಳಿಸದಿರಿ......

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".9448219347

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕ ಆಭಿಯಾನ".



ವಿಚಾರ ಮತ್ತು ತತ್ವಗಳ ಮೇಲೆ ನಮ್ಮ ವಿಮರ್ಷೆ ಇರಬೇಕು.ಮತ್ತು ಬೆಂಬಲ ಕೊಡಬೇಕು.ಆದರೆ ವ್ಯಕ್ತಿಗಳ ಮೇಲಲ್ಲ.

ಮುಖ್ಯಮಂತ್ರಿಗಳ ಹುದ್ದೆ ದೊಡ್ಡದಿರುತ್ತದೆ.ಮತ್ತು ಮಹತ್ವದ್ದಾಗಿರುತ್ತದೆ.ಆದರೆ ಮುಖ್ಯಮಂತ್ರಿ ಆದವನು ಭ್ರಷ್ಟನಾದರೆ ಆ ವ್ಯಕ್ತಿಯನ್ನು ಕೆಳಗಿಳಿಸಬೇಕೇ ವಿನಃ ಮುಖ್ಯಮಂತ್ರಿ ಹುದ್ದೆಯನ್ನೇ ಝರಿಯುವುದಲ್ಲ.ಅಥವಾ ಅವರನನ್ನೇ ಹೊಗಳುತ್ತಾ ಇರುವುದಲ್ಲ.ಹಾಗಂತ ಮುಖ್ಯಮಂತ್ರಿಗಳೇ ತಪ್ಪು ಮಾಡಿದರೆ.ಅದೂ ತಪ್ಪೇ ಆಗಿರುತ್ತದೆ.ಅವರಿಗೂ ಶಿಕ್ಷೆ ಆಗಬೇಕು.ಆಗ ಮಾತ್ರ ಜನ ಸಾಮಾನ್ಯರಿಗೆ ಕಾನೂನಿನ ಮೇಲೆ ಗೌರವ ಮೂಡುತ್ತದೆ.
ಓದಿ ಸಂಪದ ಸಾಲು
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕ ಆಭಿಯಾನ".

we should respect modi'ji for his attitude by sampa


ನನ್ನ ಹುಟ್ಟು ಹಬ್ಬದ ಆಚರಣೆಗಾಗಿ ಹಣ ಖರ್ಚು ಮಾಡಬೇಡಿ.ಅದನ್ನೇ ಕಾಶ್ಮೀರಿ ಸಂತ್ರಸ್ತರಿಗೆ ನೀಡಿ ಎಂದರು ನಮ್ಮ ನರೇಂದ್ರ ಮೋದಿ.
ತಮ್ಮ ಬರ್ತ್ ಡೇ ಗಾಗಿ ಲಕ್ಷಾಂತರ ಹಣ ಖರ್ಚು ಮಾಡುವವರು,ಕೋಟ್ಯಾಂತರ ಹಣ ಖರ್ಚು ಮಾಡಿ ಮದುವೆ ಮಾಡುವವರು,ದುಂದು ವ್ಯಚ್ಚ ಮಾಡೋರು,ಊಟ ಮಾಡದೇ ಪಂಚತಾರ ಹೋಟೆಲ್ ಗೆ ಸಾವಿರಾರು ರೂಪಾಯಿ ಕೊಡುವವರು,ದಯವಿಟ್ಟು ಕಷ್ಟದಲ್ಲಿರೋರಿಗೆ ಸಹಾಯ ಮಾಡಿ..ಅಥವಾ ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ ಅದನ್ನು ಬೆಳೆಸಿ.ಒಳ್ಳೆ ನಾಟಕ ಸಿನಿಮಾ ಯಕ್ಷಗಾನ ಜನಪದ ಕಲೆಗೆ ಬೆಂಬಲಿಸಿ.ನಾವು ಮಾಡುವ ದುಂದು ವೆಚ್ಚದ ಹಣ ಅದೆಷ್ಟೋ ಬದುಕನ್ನು ನಿರ್ಮಿಸಬಲ್ಲದು.ಓದಿ ಸಂಪದ ಸಾಲು.ವೆಂಕಟೇಶ ಸಂಪ.
"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."9448219347

abhiyana



ಛೇ ಈ ವ್ಯಕ್ತಿ ಮಾತಾಡುವಾಗ ಒಮ್ಮೆಯೂ ಯೋಚಿಸಿಲ್ಲ,ಅನ್ಸತ್ತೆ.ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಹೊತ್ತು,ಕನ್ನಡ ನಾಡನ್ನು ಒಡೆದು ಇನ್ನೊಂದು ರಾಜ್ಯ ಮಾಡಬೇಕೆಂದಿದ್ದಾರೆ.ಆರು ಬಾರಿ ಯಾವ್ಯಾವ್ದೋ ಪಕ್ಷದಿಂದ ಶಾಸಕ ಆಗಿರುವ ಹತ್ತು ವರ್ಷಗಳ ಕಾಲ ಮಂತ್ರಿಯೂ ಆಗಿದ್ದ ಈ ಉಮೇಶ್ ಕತ್ತಿ ಅನೇಕತೆಯಲ್ಲಿ ಏಕತೆಯಂತಿರುವ ನಮ್ಮ ಕನ್ನಡ ನಾಡನ್ನು ಒಡೆಯುವ ಮಾತಾಡಬಾರದಿತ್ತು.
ಅಭಿವೃದ್ದಿ ಆಗಬೇಕೆಂದರೆ ನಿಮ್ಮಂತ ಶಾಸಕರಿಗೆ ಬದ್ದತೆ ಬೇಕು.ಇಚ್ಚಾಶಕ್ತಿ ಬೇಕು.ಅಧಿಕಾರಿಗಳು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು.ಅದನ್ನು ಬಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದ ಕೋಟಿ ಕೋಟಿ ಹಣ ಪಡೆದ್ರೂ ಅಭಿವೃದ್ದಿ ಮಾಡದೇ ಈಗ ನಮ್ಮ ಕನ್ನಡಿಗರ ಜನರ ಮನಸ್ಸನ್ನು ಒಡೆಯಬೇಡಿ.ಕತ್ತಿಯವರೇ ನಿಮ್ಮ ಮುಖ್ಯಮಂತ್ರಿ ಆಸೆಗೆ ನಮ್ಮ ಕನ್ನಡ ನಾಡನ್ನು ಒಡೆಯಬೇಡಿ.ಸರ್ಕಾರ ಇದನ್ನು ನಿರ್ಲಕ್ಷಿಸಬೇಕು ಮತ್ತು ಬಿಜೆಪಿ ಪಕ್ಷ ಇಂತಹ ಹೇಳಿಕೆ ಕೊಡುವವರನ್ನು ನಿಯಂತ್ರಿಸಬೇಕಿದೆ.ಮಾದ್ಯಮಗಳು ಕೂಡ ಇಂತವರ ಹೇಳಿಕೆಗೆ ಬೆಲೆ ಕೊಡಬಾರದು .ಓದಿ ಸಂಪದ ಸಾಲು.
ವೆಂಕಟೇಶ ಸಂಪ.
"ಬದಲಾವಾಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",

"ದೇವೋ ದುರ್ಬಲ ಘಾತಕಃ"
ದೇವರಿಗೂ ಕೂಡ ದುರ್ಬಲವಾದ ಪ್ರಾಣಿಯನ್ನೇ ಬಲಿ ಕೊಡುತ್ತಾರೆ.ಆನೆಯನ್ನೋ,ಸಿಂಹವನ್ನೊ,ಹುಲಿಯನ್ನೋ,ಬಲಿ ಕೊಡದ ನಾವು,ಕುರಿ ಕೋಳಿ,ಈ ತರಹದ ಪ್ರಾಣಿಯನ್ನೇ ಬಲಿ ಕೊಟ್ಟು ದೇವರು ಸಂತೃಪ್ತರಾದರು ಅಂದುಕೊಳ್ಳುತ್ತೇವೆ.ಹಾಗಾಗಿ ನಾವು ದುರ್ಬಲರಾಗಬಾರದು.ಅದಕ್ಕೇ ಸ್ವಾಮಿ ವಿವೇಕಾನಂದರು ಹೇಳಿದ್ದು,ಸಬಲತೆಯೇ ಜೀವನ,ದುರ್ಬಲತೆಯೇ ಮರಣ ಎಂದು,ಓದಿ ಸಂಪದ ಸಾಲು.ವೆಂಕಟೇಶ ಸಂಪ.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ",

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

ಖಾಲಿ ಮನಸುಗಳು= ದೆವ್ವದ ಕಾರ್ಖಾನೆಗಳು,
ಕೆಲಸ ಮಾಡದ ದೇಹಗಳು = ಜೀವಂತ ಶವಗಳು,
ಮಾನವೀಯತೆ ಇಲ್ಲದ ಮನುಷ್ಯರುಗಳು = ಇದ್ದೂ ಸತ್ತ 'ವ್ಯಕ್ತಿ'ತ್ವಗಳು,

ಧರ್ಮದ ಹೆಸರಲ್ಲೂ ದ್ರೋಹ ಮಾಡುವವರು,ಆಡಳಿತದ ಹೆಸರಲ್ಲೂ ವಂಚನೆ ಮಾಡುವವರು,ಅಧಿಕಾರವಿದ್ದರೂ ಸಹಕಾರಿಯಾಗದವರು,ಕರ್ತವ್ಯಪ್ರಜ್ನೆ ಮರೆತವರು,=ಇವರು ಯಾವಾಗಲೂ ನಿಷ್ಪ್ರಯೋಜಕರು.
ಓದಿ ಸಂಪದ ಸಾಲು
ವೆಂಕಟೇಶ ಸಂಪ

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"



ಕೆಲವು ವಿಚಾರಗಳಿಗೆ ನಾವು ತಟಸ್ತರಾಗಿರುವುದೇ ಶ್ರೇಷ್ಟವಾಗಿರುತ್ತದೆ.
ವಿರೋಧಾಭಾಸದ ಹೇಳಿಕೆ ನೀಡುವವರನ್ನು ನಿರ್ಲಕ್ಷಿಸಿದರೆ ಸಾಕು,ಅದಕ್ಕೆ ಪರ ವಿರೋದ ಮಾಡಿದರೆ ಅದ್ಯಾವುದೋ ಮೌಲ್ಯಗಳಿಲ್ಲದ ವ್ಯಕ್ತಿಯನ್ನು ಬೆಳೆಸಿದಂತಾಗುತ್ತದೆ.ಇತ್ತೀಚೆಗೆ ಬಹಳ ಜನ ತಮ್ಮ ಬಾಯಿ ಚಪಲತೆಗೆ ವದರಿಕೊಳ್ಳುತ್ತಿದ್ದಾರೆ.ಅದಕ್ಕೆ ಅಲಕ್ಷವೇ ಪರಿಹಾರ,ಬೆಳಕು ಮೂಡಿದಂತೆಲ್ಲಾ ಕತ್ತಲೆ ತಾನಾಗಿಯೇ ಹೊರಟುಹೋಗುತ್ತದೆ.ಓದಿ ಸಂಪದ ಸಾಲು.ವೆಂಕಟೇಶ ಸಂಪ.
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu