ಛೇ ಈ ವ್ಯಕ್ತಿ ಮಾತಾಡುವಾಗ ಒಮ್ಮೆಯೂ ಯೋಚಿಸಿಲ್ಲ,ಅನ್ಸತ್ತೆ.ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಹೊತ್ತು,ಕನ್ನಡ ನಾಡನ್ನು ಒಡೆದು ಇನ್ನೊಂದು ರಾಜ್ಯ ಮಾಡಬೇಕೆಂದಿದ್ದಾರೆ.ಆರು ಬಾರಿ ಯಾವ್ಯಾವ್ದೋ ಪಕ್ಷದಿಂದ ಶಾಸಕ ಆಗಿರುವ ಹತ್ತು ವರ್ಷಗಳ ಕಾಲ ಮಂತ್ರಿಯೂ ಆಗಿದ್ದ ಈ ಉಮೇಶ್ ಕತ್ತಿ ಅನೇಕತೆಯಲ್ಲಿ ಏಕತೆಯಂತಿರುವ ನಮ್ಮ ಕನ್ನಡ ನಾಡನ್ನು ಒಡೆಯುವ ಮಾತಾಡಬಾರದಿತ್ತು.
ಅಭಿವೃದ್ದಿ ಆಗಬೇಕೆಂದರೆ ನಿಮ್ಮಂತ ಶಾಸಕರಿಗೆ ಬದ್ದತೆ ಬೇಕು.ಇಚ್ಚಾಶಕ್ತಿ ಬೇಕು.ಅಧಿಕಾರಿಗಳು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು.ಅದನ್ನು ಬಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದ ಕೋಟಿ ಕೋಟಿ ಹಣ ಪಡೆದ್ರೂ ಅಭಿವೃದ್ದಿ ಮಾಡದೇ ಈಗ ನಮ್ಮ ಕನ್ನಡಿಗರ ಜನರ ಮನಸ್ಸನ್ನು ಒಡೆಯಬೇಡಿ.ಕತ್ತಿಯವರೇ ನಿಮ್ಮ ಮುಖ್ಯಮಂತ್ರಿ ಆಸೆಗೆ ನಮ್ಮ ಕನ್ನಡ ನಾಡನ್ನು ಒಡೆಯಬೇಡಿ.ಸರ್ಕಾರ ಇದನ್ನು ನಿರ್ಲಕ್ಷಿಸಬೇಕು ಮತ್ತು ಬಿಜೆಪಿ ಪಕ್ಷ ಇಂತಹ ಹೇಳಿಕೆ ಕೊಡುವವರನ್ನು ನಿಯಂತ್ರಿಸಬೇಕಿದೆ.ಮಾದ್ಯಮಗಳು ಕೂಡ ಇಂತವರ ಹೇಳಿಕೆಗೆ ಬೆಲೆ ಕೊಡಬಾರದು .ಓದಿ ಸಂಪದ ಸಾಲು.
ವೆಂಕಟೇಶ ಸಂಪ.
"ಬದಲಾವಾಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."
No comments:
Post a Comment