ಬದುಕು ಕಲಿಯದಿದ್ರೂ ಸಂಬಳ ತರುವ ಫ್ಯಾಕ್ಟರಿ ಆದ್ರೆ ಸಾಕು ತನ್ನ ಮಕ್ಕಳು ಅಂದುಕೊಳ್ಳೋರು....ಜೀವನ ಅಂದ್ರೆ ಬರೀ ದುಡ್ಡು ಅಂದುಕೊಂಡೋರು.......ಇದನ್ನು ಓದಲೇಬೇಕು......
"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ"
ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದ ನಿಮಿತ್ತ ಸಾಗರದಿಂದ ಅನಂತಪುರಕ್ಕೆ ಕಾರಲ್ಲಿ ಹೊರಟಿದ್ದೆ.ಯಾರನ್ನು ಭೇಟಿಯಾಗಲಿ?!ಹೇಗೆ ಸದಸ್ಯತ್ವ ಪಡೆದುಕೊಳ್ಳೋದು?!ಅನ್ನೋ ಆಲೋಚನೆಯಲ್ಲಿದ್ದೆ.ಕಾರು ಚಲಿಸುತ್ತಿತ್ತು.ಯಾರೋ ಪುಟ್ಟ ಹುಡುಗಿ ಅಣ್ಣಾ ಹೂವು....ಅಣ್ಣಾ ಹೂವು....ಅಂತ ಕೂಗಿದಳು....ನಾನು ಪರಿವೆಯೇ ಇಲ್ಲದೆ ಮುಂದೆ ಹೋದೆ......
ಅರ್ದ ಕಿಲೋಮಿಟರ್ ಹೋದ ನನಗೆ ಅಪರಾಧಿ ಪ್ರಜ್ನೆ ಕಾಡತೊಡಗಿತು.ಕಾರನ್ನು ವಾಪಸ್ಸು ತಿರುಗಿಸಿದೆ.!
ಮತ್ತೆ ಅದೇ ಹುಡುಗಿ....ಅಣ್ಣಾ ಹೂವು.....ಅಂದಳು...
ಹೇಯ್ ಪುಟ ಏನು ಹೆಸ್ರು?ಏನು ಓದ್ತಿದಿಯಾ?ಕೇಳಿದೆ....
ನಾನು ವಿದ್ಯಾ ಅಂತ.....ಆರನೇ ಕ್ಲಾಸು ಓದ್ತಿದಿನಿ....ಇಲ್ಲೇ ಸರ್ಕಾರಿ ಸ್ಕೂಲಲ್ಲಿ..ಅಂದ್ಲು.
ನಂಗೆ ಖುಶಿ ಆಯ್ತು...ಹೂವು ಎಲ್ಲಿಂದ ತರ್ತಿಯಾ?!ಯಾವಾಗ ಇದನ್ನ ಮಾಲೆ ಮಾಡ್ತಿಯಾ?ಅಂತೆಲ್ಲಾ ಕೇಳ್ದೆ....
ಇವನ್ಯಾಕಪ್ಪ ತಲೆ ತಿಂತಾನಪ್ಪ?ಅನ್ಕೋತಾಳೆನೋ ಅನ್ಕೊಂಡೆ...ಹಾಗಾಗಲಿಲ್ಲ...ಆಕೆ ಖುಶಿಂದ ಹೇಳಿದ್ಲು....
"ಅಣ್ಣಾ ನಾನೇ ಅಪ್ಪ ನ ಹತ್ರ ಏರಿ ಮಾಡ್ಸಿಕೊಂಡು ಹೂವು ಬೆಳ್ದಿದೀನಿ.ಬೆಳ್ಗೆ ಎದ್ದು ಅರ್ಧ ಗಂಟೆ ಈ ಹೂವಿನ ಕೆಲ್ಸ ಮಾಡ್ತಿನಿ.ಮದ್ಯಾನ್ಹ ಬಂದ ಕೂಡ್ಲೇ ಮಾಲೆ ರೆಡಿ ಮಾಡ್ತೀನಿ...ದಿನಕ್ಕೊಂದು ಐವತ್ತು ರೂಪಾಯಿ ಸಿಗತ್ತೆ....ನನ್ನ ಸ್ಕೂಲ್ ಗೆ ಬೇಕಾದ ಹಣ ನಾನೇ ದುಡ್ಕೋತೀನಿ ಅಂತ ಹೆಮ್ಮೆಯಿಂದ ಹೇಳಿದ್ಲು.....
ಒಂದು ಕ್ಷಣ...
ನಾನು ಹೈಸ್ಕೂಲ್ ಗೆ ಹೋಗುವಾಗ ಅಪ್ಪ ಎಲ್ಲಿಂದಲೋ ತಂದ ಜೇನುತುಪ್ಪನ ನಮ್ಮ ಮೇಸ್ಟ್ರಿಗೇ ಮಾರಿ ಆ ವರ್ಷದ ಸ್ಕೂಲ್ ಖರ್ಚು ನೊಡ್ಕಂಡಿದ್ದು ನೆನಪಾಯ್ತು....
ಆ ಹುಡ್ಗಿ ಹೇಳಿದ್ಲು....ಅಣ್ಣಾ ಕತೆ ಕೇಳಿದ್ರಿ....ಹೂವು ತಗೊಳ್ಳಿ ಅಂದ್ಲು.....ಅಷ್ಟು ಹೂವು ತಗೊಂಡು ನನ್ನ ಕಾರಲ್ಲಿ ಇದ್ದ ಸಂಪದ ಸಾಲು ಪುಸ್ತಕದ ರಾಶಿ ಮೇಲಿಟ್ಟೆ....
ನಮ್ಮ ಪತ್ರಿಕೆಯ ಒಂದಷ್ಟು ಸಂಚಿಕೆಯನ್ನು ಆ ಹುಡ್ಗಿಗೆ ಕೊಟ್ಟೆ.ಇದನ್ನು ಓದು ಅಂದೆ.ಆಕೆ ಹೇಳಿದ್ಲು..".ಅಣ್ಣಾ ,ಜೋಗ ನೋಡೋಕೆ ಅಂತ ತುಂಬಾ ಪ್ರವಾಸಿಗರು ಹೋಗ್ತಾರೆ..ಸಂಜೆ ವರೆಗೆ ಕೂತು ಇದನ್ನು ಮಾರಿ ಹೋಗ್ತೀನಿ...ಕೆಲವೊಬ್ರು ನನ್ನನ್ನು ನೋಡಿ ಹಿಯಾಳಿಸ್ತಾ....ಹೋಯ್ ಅಂತ ಕೂಗ್ತಾ ಹೋಗ್ತಾರೆ....ಕೆಲವೊಬ್ರು ಹೂವು ತಗೊಂಡು ಇನ್ನು ಸ್ವಲ್ಪ ಕಡಿಮೆಗೆ ಕೊಡಮ್ಮಾ ಅಂತಾ ಚೌಕಾಶಿ ಮಾಡ್ತಾರೆ....ಹೀಗೆ ಎಲ್ಲಾ ತರದವರು ಕಾಣ್ತಾರೆ."... ಖುಶಿ ಆಗತ್ತೆ..
"ನಾನು ದೊಡ್ಡವಳಾಗಿ ಈ ತರ ಕಾರಲ್ಲಿ ಬಂದು ಶಾಲೆ ಹುಡುಗರು..ವಯಸ್ಸಾದ ಹೆಂಗಸರು...ಅಂಗವಿಕಲರು ಈ ತರ ಹೂವು ಮಾರ್ತಾ ಇದ್ರೆ ಅಷ್ಟೂ ತಗೋಳ್ತೀನಿ.......ಅಣ್ಣಾ."ಅಂದ್ಲು...
ಅರಿವಿಲ್ಲದೇ ನನ್ನ ಕಣ್ಣಿಂದ ನೀರು ಬಿದ್ದಿತ್ತು.....
ಮತ್ತೆ ಕಾರು ತಿರುಗಿಸಿ ಅಭಿಯಾನಕ್ಕೆ ಹೊರಟೆ...ನಾನು ಕಣ್ಣಿಗೆ ಕಾಣುವಷ್ಟು ದೂರ ಹೋಗುವವರೆಗೂ " ಟಾ ಟಾ "ಮಾಡುತ್ತಿದ್ದಳು .ಆ ಹುಡುಗಿ .....ಮತ್ತು ಆ ಹುಡುಗಿಯ "ಟಾ ಟಾ" ದಲ್ಲೂ ತನ್ನ ದುಡಿಮೆಯ ಜೊತೆಗಿನ ಕಲಿಕೆಯ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು...!......
.ಮನಸ್ಸಿಗೀಗ ನಿರಾಳ......
"ಬೇಕು ಕಲಿಕೆಯ ಜೊತೆ ಗಳಿಕೆ"
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
No comments:
Post a Comment