Wednesday, January 9, 2019

ರಾಜಕೀಯಕ್ಕಾಗಿ ಬಂದ್ ಮಾಡಿದ ಬಂಧುಗಳೇ, ಏನು ಸಾಧಿಸಿದಿರಿ?

ರಾಜಕೀಯಕ್ಕಾಗಿ ಬಂದ್ ಮಾಡಿದ ಬಂಧುಗಳೇ,
ಏನು ಸಾಧಿಸಿದಿರಿ?   
                              #ವೆಂಕಟೇಶಸಂಪ
ಕೆಲಸಕ್ಕೆ ಹೊರಟವರಿಗೆ ಬಸ್ ಸಿಗದಂತೆ ಮಾಡಿ,
ಆಸ್ಪತ್ರೆಯಲ್ಲಿ ರೋಗಿಗಳು  ನರಳುವಂತೆ ಮಾಡಿ,
ಅಕ್ಷರ ಕಲಿಯುವ ಮಕ್ಕಳಿಗೆ ಶಾಲೆ ಇಲ್ಲದಂತೆ ಮಾಡಿ,
ಹಸಿದವನಿಗೆ ಊಟ ಸಿಗದಂತೆ ಹೊಟೆಲ್ ಮುಚ್ಚಿಸಿ,
ದೇಶದ ಆದಾಯಕ್ಕೆ, ದುಡಿಯುವ ಕೈಗೆ,
ಹೊತ್ತಿನ ಕೂಳಿಗೆ,ಕಲ್ಲು ಹಾಕಿ ನಮ್ಮದೇ ಬಸ್ಸುಗಳಿಗೆ,ಸರ್ಕಾರಿ ಕಛೇರಿಗಳಿಗೆ ಕಲ್ಲೆಸೆದು ವಿಕೃತ ನಗೆಬೀರಿ ಬಂದ್ ಮಾಡಿದ್ದೇವೆಂದು ಬೀಗುವುದನ್ನು ಬಿಟ್ಟು ಏನು ಸಾಧಿಸಿದಿರಿ?
ಆಳುವ ಮಂದಿಯ ಕತ್ತು ಪಟ್ಟಿ ಹಿಡಿದು ಕೇಳಬಹುದಿತ್ತು?
ದೇಶಕ್ಕೆ ಒಳ್ಳೆಯದಾಗುವಂತೆ ಅದೆಷ್ಟೋ ದಾರಿ ಇತ್ತು.ಅದೆಲ್ಲವೂ ನಿನ್ನದೇ ಮೂರ್ಖತನಕ್ಕೆ ನಿನ್ನದೇ ಮನೆಯ ಬಾಗಿಲು ಕಿಟಕಿ ಮುಚ್ಚಿಸಿ ಗಾಳಿಗೆ ತಡಕಾಡುವ ಓ ದುರ್ಮನಸ್ಸೇ ಏನು ಸಾಧಿಸಿದಿರಿ?
ಓ ಬಂದ್ ಮಾಡಿದ ಬಂಧುಗಳೇ ಏನು ಸಾಧಿಸಿದಿರಿ?
ಇವತ್ತು ನಿನ್ನೆಯದಲ್ಲ, ಕಾರಣ ಏನೇ ಇರಬಹುದು...ಎತ್ತಿಗೆ ಜ್ವರ ಬಂದಾಗ ಎಮ್ಮೆಗೆ ಬರೆ ಹಾಕಿದಂತೆ. ..  ನಿಮ್ಮ ರಾಜಕೀಯ ತೆವಲಿಗೆ ಜನರನ್ನು ಬಲಿ ಮಾಡಬೇಡಿ.....
#ವೆಂಕಟೇಶಸಂಪ #ಓದಿ ಸಂಪದ ಸಾಲು ಪತ್ರಿಕೆ
9448219347

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu