Sunday, September 21, 2014

ನಾವು ಕೊಡೋ ನಾಲ್ಕು ರೂಪಾಯಿ ಇನ್ನೊಂದು ಬದುಕನ್ನು ನಿರ್ಮಿಸಬಲ್ಲದು. be subscriber of our magazine.... by venkatesha sampa



ನಾವು ಕೊಡೋ ನಾಲ್ಕು ರೂಪಾಯಿ ಇನ್ನೊಂದು ಬದುಕನ್ನು ನಿರ್ಮಿಸಬಲ್ಲದು. 

ಬೆಳಗಿನ ಜಾವ!? ಬೆಂಗಳೂರಿನಿಂದ ರಾಜಹಂಸ ಬಸ್ಸಲ್ಲಿ ಸಾಗರಕ್ಕೆ ಬರುತ್ತಿದ್ದೆ..ಮುಂಚಿನ ದಿನದ ಕೆಲಸದೊತ್ತಡಕ್ಕೆ ಅನಿಸುತ್ತದೆ.ಬಸ್ ಹತ್ತಿದಕೂಡಲೇ ನಿದ್ದೆ ಆಕ್ರಮಿಸಿಬಿಟ್ಟಿತ್ತು.

ನಾ ನಿದ್ರೆಗಣ್ಣಿನಲ್ಲಿದ್ದೆ.ಯಾರೋ ಒಬ್ಬ ಹುಡುಗ ಬಂದು ಬಸ್ಸಲ್ಲಿದ್ದವರಿಗೆ "ಅಣ್ಣಾ ಪೇಪರ್ ತಗೊಳ್ಳಿ.ನಾ ಸ್ಕೂಲ್ ಗೆ ಹೋಗೊ ಹುಡುಗ.ನನಗೆ ಸಹಾಯ ಅಗತ್ತೆ..ಅಂತಿದ್ದ....ಬಸ್ಸಲ್ಲಿ ಕೂತಿದ್ದ ದೊಡ್ಡ ಮನುಷ್ಯನೊಬ್ಬ "ಏಯ್ ಬೆಳಿಗ್ಗೆ ಮುಂಚೆ ಬಿಕ್ಷೆ ಕೇಳ್ಬೇಡ.ಹೋಗಪ್ಪ."ಅಂತ ಗದರಿಸುತ್ತಿದ್ದ...ಆ ಹುಡುಗ ವಿಚಲಿತನಾಗದೇ ಹೇಳಿದ."ಅಣ್ಣಾ ನಾನು ದುಡಿಯುತ್ತಿದ್ದಿನಿ.ನಿಮಗೆ ಸಾಧ್ಯ ಆದ್ರೆ ಪೇಪರ್ ತಗೊಂಡು ತಗೊಳ್ಳಿ"ಹೇಳಿ ಮತ್ತೆ ಪೇಪರ್...ಪೇಪರ್ ಅಂದ.

ನನಗೆ ಹಳೆಯ ನೆನಪುಗಳು ಉಕ್ಕಿ ಬಂದವು.ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಪೇಪರ್ ಹಂಚಿದ್ದು...ಬೆಳಿಗ್ಗೆ ಮುಂಚೆ ಪೇಪರ್ ಹಾಕುವಾಗ ನಾಯಿ ಅಟ್ಟಿಸಿಕೊಂಡು ಬಂದದ್ದು....ಎಲ್ಲವೂ ಒಂದು ಕ್ಷಣ ನೆನಪಾಯ್ತು....

ಆ ಬಸ್ಸಲ್ಲಿದ್ದ ಮಹಾನುಭಾವ,ಕಷ್ಟ ಪಟ್ಟು ದುಡಿಯುವವನಿಗೆ ಸಹಾಯ ಮಾಡೋದನ್ನ ಬಿಟ್ಟು ಬಿಕ್ಷೆ ಕೇಳ್ಬೇಡ ಅಂದಾಗಲೂ ಒಂದು ಕ್ಷಣ ನಮ್ಮ ಜನಗಳ ವರ್ತನೆ ಕಣ್ಣ ಮುಂದೆ ಬಂತು....
ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನ ಕ್ಕೆ ಹೋದಾಗ...ಪಾಸಿಟೀವ್ ಜರ್ನಲಿಸಂ ಗೆ ಸಪೋರ್ಟ್ ಮಾಡಿ ಅಂದಾಗ,ಕ್ರೈಮ್ ನ್ನು ವೈಭವೀಕರಿಸೋದಿಲ್ಲ ಎಂದಾಗಲೂ ಪತ್ರಿಕೆಗೆ ಮೆಂಬರ್ ಆಗದೆ ಏನೋ ಒಂದು ಕೊಂಕು ಮಾತಾಡಿ ಅಕ್ಷರಶಃ ಬಿಕ್ಷುಕರಂತೆ ನನ್ನನ್ನು ನೋಡಿದ್ದು ನೆನಪಾಯ್ತು......

ನಿದ್ರೆ ಹಾರಿ ಹೋಯ್ತು..ಆ ಪೇಪರ್ ಮಾರುವ ಹುಡುಗನನ್ನು ಕರೆದೆ..ಎನು ಪುಟ್ಟ ನಿನ್ನ ಹೆಸ್ರು ಅಂದೆ...ಅಣ್ಣಾ ನನ್ ಹೆಸ್ರು ರಮೇಶ ಅಂದ.ನಾಲ್ಕನೆ ಕ್ಲಾಸ್ ಓದ್ತಿದಿನಿ.ಅಪ್ಪ ಕೂಲಿ ಕೆಲ್ಸಕ್ಕೆ ಹೋಗ್ತಾರೆ.ದಿನ ಬೆಳ್ಗೆ 3 ಗಂಟೆಯಿಂದ 7 ಗಂಟೆವರೆಗೆ ಪೇಪರ್ ಮಾರುತ್ತೀನಿ.ನೂರು ರೂಪಾಯಿ ಸಿಗತ್ತೆ.ಅಮೇಲೆ ಶಾಲೆಗೆ ಹೋಗ್ತಿನಿ.ಸಂಜೆ ಒಂದು ಅಂಗಡಿಗೆ ಹೋಗಿ ಸಾಮಾನು ಕಟ್ಟುತ್ತೀನಿ..ಐವತ್ತು ರೂಪಾಯಿ ಕೊಡ್ತಾರೆ ಅಂದ.....

ಆತನ ಬಗ್ಗೆ ಹೆಮ್ಮೆ ಅನ್ನಿಸ್ತು.ಎಲ್ಲಾ ಪೇಪರ್ ಒಂದೊಂದು ಕೊಡು ಅಂದೆ.50 ರೂಪಾಯಿ ಕೊಟ್ಟೆ.ಚಿಲ್ದ್ರೆ ನೀನೆ ಇಟ್ಕೊ ಅಂದೆ...ಆತ ಹೇಳಿದ್ದು "ಅಣ್ಣಾ ನಾ ದುಡಿದ ಹಣ ಮಾತ್ರ ಸಾಕು ನಂಗೆ"ಅಂತ....
ಇನ್ನೂ ಹೆಮ್ಮೆ ಅನ್ನಿಸ್ತು.ನನ್ನ ಫೋನ್ ನಂಬರ್ ಕೊಟ್ಟೆ.ಎನಾದ್ರು ಸಹಾಯ ಬೇಕಾದ್ರೆ ಯಾವಾಗ ಬೇಕಾದ್ರು ಕಾಲ್ ಮಾಡು ಹೇಳ್ದೆ....

ಆತ ಹೊರಟು ಹೋದ...ಬಸ್ ಹೊರಡಲು ಅನುವಾಯ್ತು.....ಬಿಕ್ಷೆ ಬೇಡು ಅಂದ ಮಹಾನುಭಾವನಿಗೆ ಪಶ್ಚಾತ್ತಾಪ ಮೂಡಿತ್ತು.ಆತ ಕಂಡಕ್ಟರ್ ಗೆ ಒಂದ್ನಿಷ ಅಂದವನೇ ಆ ಹುಡುಗನನ್ನು ಹುಡುಕಿ ಎಲ್ಲಾ ಪೇಪರನ್ನು ಒಂದೊಂದು ತಗೊಂಡು ಬಂದವನೇ ನನ್ನ ಪಕ್ಕ ಕುಳಿತ....

ನನ್ನ ನೋಡುತ್ತಾ....ಪ್ಲೀಸ್ ನನ್ನನ್ನ ಕ್ಷಮಿಸಿ.....ಒಬ್ಬ ದುಡಿಯುವ ಹುಡುಗನ್ನು ಅವಮಾನಿಸಿದೆ.....ಅದಕ್ಕೀಗ ಪಶ್ಚಾತ್ತಾಪ ಆಗ್ತಿದೆ...ಇನ್ಯಾವತ್ತು ಈ ತರ ದುಡಿಯೋ ಮಂದಿಗಳನ್ನು ಅಗೌರವಿಸೋದಿಲ್ಲ...ಅಂದ......ನೀವೇನು ಮಾಡ್ತಿರಾ ಕೇಳಿದ...ನಾನು ಸಂಪದ ಸಾಲು ಪತ್ರಿಕೆಯವನು ಅಂದೆ.....

ಸಾರ್ ನಿಮ್ಮ ಪತ್ರಿಕೆ ಯಾವಾಗಲು ಓದ್ತೀನಿ....ಪತ್ರಿಕೆ ಬ್ಲಾಕ್ ಎಂಡ್ ವೈಟ್ ಆದ್ರು ಚೆನ್ನಾಗಿದೆ...ಆದ್ರೆ ಕಲರ್ ಮಾಡಿ ಸಾರ್ ಅಂದ.

ನಾಲ್ಕು ವರ್ಷದಿಂದ ನಿಮ್ಮ ಪತ್ರಿಕೆ ನಮ್ಮನೆಗೆ ಬರ್ತಿದೆ.ಆದ್ರೆ ನಾನು ಒಂದೇ ವರ್ಷದ ದುಡ್ದು ಕೊಟ್ಟಿದ್ದು...ಬಸ್ಸಲ್ಲಿ ದುಡ್ಡು ಕೊಟ್ಟೆ ಅನ್ಕೋಬೇಡಿ...ತಗೊಳ್ಳಿ ಅಂತ ಹತ್ತು ವರ್ಷದ ಮೆಂಬರ್ ಶಿಪ್ ತಗೊಂಡ....
ಆತನೇ ಹೇಳಿದ....ದುಡಿಯುವವರನ್ನು ಗೌರವಿಸಿ ಚಿಕ್ಕದಾದ ಬೆಂಬಲ ನೀಡಿದ್ರೆ ಎಷ್ಟು ಖುಶಿ ಅಲ್ವಾ? ಅಂದ...

ನಾನು ಹೇಳಿದೆ."ಸಪೋರ್ಟ್ ಮಾಡದಿದ್ದರೂ ಬೇಸರವಿಲ್ಲ.ಅವಮಾನಿಸಬಾರದು...ಈ ಹುಡುಗನ ಕತೆ ನೋಡಿ..ನಾವು ಕೊಡೋ ನಾಲ್ಕು ರುಪಾಯಿಯಲ್ಲಿ ಆತ ಬಿಲ್ಡಿಂಗ್ ಕಟ್ಟಲ್ಲ...ಆದ್ರೆ ಬದುಕನ್ನು ಕಟ್ಟಿ ಕೊಳ್ತಾನೆ....ಅಂದೆ....

ಆತನ ಮುಖದಲ್ಲಿ ಪರಿವರ್ತನೆಯ ನಗು ಮೂಡಿತು.....

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು

be subscriber of our magazine....
ನಿಮ್ಮದೇ ಪತ್ರಿಕೆಗೆ ಚಂದದಾರರಾಗಿ...
account name sampada saalu.vijaya
bank.sagara branch 577401 account
no 142901011003877 IFSC code
VIJB0001429 ಇದಕ್ಕೆ ಹಣ ಕಳುಹಿಸಿ...
ಚಂದದಾರರಾಗಬಹುದು.
subscription details
1000/- fr 10 years
2500/- fr 25 years
5000/- fr life membershp
10000/- fr life membershp with free
advertisement
our adress
sampada saalu patrike
post box 32.sagara 577401 u can send ur article to
sampavenki@gmail.com plz send it in nudi font

"ಬೇಕು ಕಲಿಕೆಯ ಜೊತೆ ಗಳಿಕೆ" venkatesha sampa



ಲಕ್ಷ ಲಕ್ಷ ಡೊನೇಷನ್ ಕೊಟ್ಟು ಪ್ರೈವೇಟ್ ಸ್ಕೂಲ್ ಗೆ ಸೇರಿಸುವವರು,ನಮ್ಮ ಮಕ್ಕಳು ಇಂಗ್ಲಿಷ್ ಮಾತಾಡಿದ್ರೆ ಸಾಕು ಎನ್ನುವವರು,ಕಂಪ್ಯೂಟರ್ ಕಲಿತರೆ ಸರ್ವಸ್ವ ಎನ್ನುವವರು,
ಬದುಕು ಕಲಿಯದಿದ್ರೂ ಸಂಬಳ ತರುವ ಫ್ಯಾಕ್ಟರಿ ಆದ್ರೆ ಸಾಕು ತನ್ನ ಮಕ್ಕಳು ಅಂದುಕೊಳ್ಳೋರು....ಜೀವನ ಅಂದ್ರೆ ಬರೀ ದುಡ್ಡು ಅಂದುಕೊಂಡೋರು.......ಇದನ್ನು ಓದಲೇಬೇಕು......

"ಹೂವು ಮಾರೋ ಹುಡುಗಿಯ ಹೆಮ್ಮೆಯ ಟಾಟಾ"

ನಮ್ಮ ಸಂಪದ ಸಾಲು ಪತ್ರಿಕೆಯ ಅಭಿಯಾನದ ನಿಮಿತ್ತ ಸಾಗರದಿಂದ ಅನಂತಪುರಕ್ಕೆ ಕಾರಲ್ಲಿ ಹೊರಟಿದ್ದೆ.ಯಾರನ್ನು ಭೇಟಿಯಾಗಲಿ?!ಹೇಗೆ ಸದಸ್ಯತ್ವ ಪಡೆದುಕೊಳ್ಳೋದು?!ಅನ್ನೋ ಆಲೋಚನೆಯಲ್ಲಿದ್ದೆ.ಕಾರು ಚಲಿಸುತ್ತಿತ್ತು.ಯಾರೋ ಪುಟ್ಟ ಹುಡುಗಿ ಅಣ್ಣಾ ಹೂವು....ಅಣ್ಣಾ ಹೂವು....ಅಂತ ಕೂಗಿದಳು....ನಾನು ಪರಿವೆಯೇ ಇಲ್ಲದೆ ಮುಂದೆ ಹೋದೆ......

ಅರ್ದ ಕಿಲೋಮಿಟರ್ ಹೋದ ನನಗೆ ಅಪರಾಧಿ ಪ್ರಜ್ನೆ ಕಾಡತೊಡಗಿತು.ಕಾರನ್ನು ವಾಪಸ್ಸು ತಿರುಗಿಸಿದೆ.!

ಮತ್ತೆ ಅದೇ ಹುಡುಗಿ....ಅಣ್ಣಾ ಹೂವು.....ಅಂದಳು...
ಹೇಯ್ ಪುಟ ಏನು ಹೆಸ್ರು?ಏನು ಓದ್ತಿದಿಯಾ?ಕೇಳಿದೆ....

ನಾನು ವಿದ್ಯಾ ಅಂತ.....ಆರನೇ ಕ್ಲಾಸು ಓದ್ತಿದಿನಿ....ಇಲ್ಲೇ ಸರ್ಕಾರಿ ಸ್ಕೂಲಲ್ಲಿ..ಅಂದ್ಲು.

ನಂಗೆ ಖುಶಿ ಆಯ್ತು...ಹೂವು ಎಲ್ಲಿಂದ ತರ್ತಿಯಾ?!ಯಾವಾಗ ಇದನ್ನ ಮಾಲೆ ಮಾಡ್ತಿಯಾ?ಅಂತೆಲ್ಲಾ ಕೇಳ್ದೆ....

ಇವನ್ಯಾಕಪ್ಪ ತಲೆ ತಿಂತಾನಪ್ಪ?ಅನ್ಕೋತಾಳೆನೋ ಅನ್ಕೊಂಡೆ...ಹಾಗಾಗಲಿಲ್ಲ...ಆಕೆ ಖುಶಿಂದ ಹೇಳಿದ್ಲು....
"ಅಣ್ಣಾ ನಾನೇ ಅಪ್ಪ ನ ಹತ್ರ ಏರಿ ಮಾಡ್ಸಿಕೊಂಡು ಹೂವು ಬೆಳ್ದಿದೀನಿ.ಬೆಳ್ಗೆ ಎದ್ದು ಅರ್ಧ ಗಂಟೆ ಈ ಹೂವಿನ ಕೆಲ್ಸ ಮಾಡ್ತಿನಿ.ಮದ್ಯಾನ್ಹ ಬಂದ ಕೂಡ್ಲೇ ಮಾಲೆ ರೆಡಿ ಮಾಡ್ತೀನಿ...ದಿನಕ್ಕೊಂದು ಐವತ್ತು ರೂಪಾಯಿ ಸಿಗತ್ತೆ....ನನ್ನ ಸ್ಕೂಲ್ ಗೆ ಬೇಕಾದ ಹಣ ನಾನೇ ದುಡ್ಕೋತೀನಿ ಅಂತ ಹೆಮ್ಮೆಯಿಂದ ಹೇಳಿದ್ಲು.....

ಒಂದು ಕ್ಷಣ...

ನಾನು ಹೈಸ್ಕೂಲ್ ಗೆ ಹೋಗುವಾಗ ಅಪ್ಪ ಎಲ್ಲಿಂದಲೋ ತಂದ ಜೇನುತುಪ್ಪನ ನಮ್ಮ ಮೇಸ್ಟ್ರಿಗೇ ಮಾರಿ ಆ ವರ್ಷದ ಸ್ಕೂಲ್ ಖರ್ಚು ನೊಡ್ಕಂಡಿದ್ದು ನೆನಪಾಯ್ತು....

ಆ ಹುಡ್ಗಿ ಹೇಳಿದ್ಲು....ಅಣ್ಣಾ ಕತೆ ಕೇಳಿದ್ರಿ....ಹೂವು ತಗೊಳ್ಳಿ ಅಂದ್ಲು.....ಅಷ್ಟು ಹೂವು ತಗೊಂಡು ನನ್ನ ಕಾರಲ್ಲಿ ಇದ್ದ ಸಂಪದ ಸಾಲು ಪುಸ್ತಕದ ರಾಶಿ ಮೇಲಿಟ್ಟೆ....

ನಮ್ಮ ಪತ್ರಿಕೆಯ ಒಂದಷ್ಟು ಸಂಚಿಕೆಯನ್ನು ಆ ಹುಡ್ಗಿಗೆ ಕೊಟ್ಟೆ.ಇದನ್ನು ಓದು ಅಂದೆ.ಆಕೆ ಹೇಳಿದ್ಲು..".ಅಣ್ಣಾ ,ಜೋಗ ನೋಡೋಕೆ ಅಂತ ತುಂಬಾ ಪ್ರವಾಸಿಗರು ಹೋಗ್ತಾರೆ..ಸಂಜೆ ವರೆಗೆ ಕೂತು ಇದನ್ನು ಮಾರಿ ಹೋಗ್ತೀನಿ...ಕೆಲವೊಬ್ರು ನನ್ನನ್ನು ನೋಡಿ ಹಿಯಾಳಿಸ್ತಾ....ಹೋಯ್ ಅಂತ ಕೂಗ್ತಾ ಹೋಗ್ತಾರೆ....ಕೆಲವೊಬ್ರು ಹೂವು ತಗೊಂಡು ಇನ್ನು ಸ್ವಲ್ಪ ಕಡಿಮೆಗೆ ಕೊಡಮ್ಮಾ ಅಂತಾ ಚೌಕಾಶಿ ಮಾಡ್ತಾರೆ....ಹೀಗೆ ಎಲ್ಲಾ ತರದವರು ಕಾಣ್ತಾರೆ."... ಖುಶಿ ಆಗತ್ತೆ..

"ನಾನು ದೊಡ್ಡವಳಾಗಿ ಈ ತರ ಕಾರಲ್ಲಿ ಬಂದು ಶಾಲೆ ಹುಡುಗರು..ವಯಸ್ಸಾದ ಹೆಂಗಸರು...ಅಂಗವಿಕಲರು ಈ ತರ ಹೂವು ಮಾರ್ತಾ ಇದ್ರೆ ಅಷ್ಟೂ ತಗೋಳ್ತೀನಿ.......ಅಣ್ಣಾ."ಅಂದ್ಲು...

ಅರಿವಿಲ್ಲದೇ ನನ್ನ ಕಣ್ಣಿಂದ ನೀರು ಬಿದ್ದಿತ್ತು.....

ಮತ್ತೆ ಕಾರು ತಿರುಗಿಸಿ ಅಭಿಯಾನಕ್ಕೆ ಹೊರಟೆ...ನಾನು ಕಣ್ಣಿಗೆ ಕಾಣುವಷ್ಟು ದೂರ ಹೋಗುವವರೆಗೂ " ಟಾ ಟಾ "ಮಾಡುತ್ತಿದ್ದಳು .ಆ ಹುಡುಗಿ .....ಮತ್ತು ಆ ಹುಡುಗಿಯ "ಟಾ ಟಾ" ದಲ್ಲೂ ತನ್ನ ದುಡಿಮೆಯ ಜೊತೆಗಿನ ಕಲಿಕೆಯ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು...!......

.ಮನಸ್ಸಿಗೀಗ ನಿರಾಳ......

"ಬೇಕು ಕಲಿಕೆಯ ಜೊತೆ ಗಳಿಕೆ"

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".
#ಓದಿ ಸಂಪದ ಸಾಲು
 — 

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."


ಒಬ್ಬ.....

ಕತ್ತಲೆಯನ್ನು ಓಡಿಸಬೇಕು.....ಕತ್ತಲೆಯನ್ನು ಓಡಿಸುತ್ತೇನೆ........ಕತ್ತಲೆ ಇದ್ದರೆ ಕಷ್ಟ ಅಂತ ಜೀವನವಿಡೀ ಬಾಷಣ ಮಾಡುತ್ತಿದ್ದ?!

ಮತ್ತೊಬ್ಬ......

ಎನೂ ಮಾತಾಡಲಿಲ್ಲ.......ಸುಮ್ಮನೆ ಒಂದು ದೀಪ ಹಚ್ಚಿದ..........!?

ಅದು ಸಾವಿರಾರು ದೀಪವಾಯಿತು..........!

ಕತ್ತಲೆ ಗೊತ್ತಿಲ್ಲದಂತೆ ಓಡಿ ಹೋಯಿತು.....

ನಮ್ಮ ದೇಶದಲ್ಲಿ ನೆಡೆಯುತ್ತಿರುವ ದುರಂತ ಏನು ಗೊತ್ತಾ?

ಬರೀ ಬಾಷಣಗಳು.ಮಾತೆತ್ತಿದರೆ ಹೋರಾಟ ಅಂತಾರೆ....ಭ್ರಷ್ಟಾಚಾರ ನಿರ್ಮೂಲನೆ ಅಂತ ಕೂಗಾಡ್ತಾರೆ....

ಆದರೆ ಈ ಭ್ರಷ್ಟಾಚಾರ ನಿರ್ಮೂಲನೆ ಅನ್ನೋ ಬದಲು ಪ್ರಾಮಾಣಿಕತೆಯ ಆಹ್ವಾನ ಅಂದಿದ್ರೆ ಬಹುಶಃ ಪಾಸಿಟೀವ್ ಆದ ಮನಸ್ಥಿತಿ ನಿರ್ಮಾಣ ಆಗುತ್ತಿತ್ತು.....!

ಬದಲಾವಣೆಗೆ ಬೇಕಿರುವುದು ಬಾಷಣವಲ್ಲ....ಸಹಜವಾಗಿ ಆಲೋಚಿಸುವ ಪರಿವರ್ತನೆಗೆ ಒಪ್ಪಿಕೊಳ್ಳುವ ಮನಸ್ಥಿತಿ ಬೇಕು...

"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ."

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?! *ವೆಂಕಟೇಶ ಸಂಪ

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?!
*ವೆಂಕಟೇಶ ಸಂಪ

ಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದ ಸಂದರ್ಭ!ನಮ್ಮ ಮಹಾರಾಜ ಕಾಲೇಜು ಬೇಗ ಮುಗಿಯುತ್ತಿತ್ತು.ಮದ್ಯಾನ್ಹ ಮೂರು ಗಂಟೆಯ ನಂತರ ಸಾಕಷ್ಟು ಸಮಯವಿರುತ್ತಿತ್ತು.ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನೊಬ್ಬನಿಗೆ ಪಾರ್ಟ್ ಟೈಮ್ ಸಹಾಯ ಮಾಡುತ್ತಿದ್ದೆ.ಅದಕ್ಕೆ ಪ್ರತಿಯಾಗಿ ಆತ ನಂಗೆ ಓದಲು ಪುಸ್ತಕ ಕೊಡುತ್ತಿದ್ದ.ಸಂಜೆ ಹೊತ್ತಿಗೆ ಬಿಸಿ ಬಿಸಿ ಬೋಂಡ ಮತ್ತು ಕಾಫಿಯನ್ನು ಕೊಡಿಸುತ್ತಿದ್ದ.ಹೀಗೆ ಸಂಜೆಯವರೆಗೂ ಒಂದು ರೀತಿಯಲ್ಲಿ ಸರಸ್ವತಿ ಪುತ್ರನಾಗುವ ಅವಕಾಶ ನೀಡುತ್ತಿದ್ದ ಆತನ ಮೇಲೆ ಒಂತರಾ ಗೌರವ ಮೂಡಿತ್ತು.....!

ಒಂದು ದಿನ......! ಹೀಗೆ ಪುಸ್ತಕಗಳ ಜೊತೆ ವ್ಯಾಪಾರ ವ್ಯವಹಾರ ಮುಗಿಸಿ ಸುಮ್ಮನೆ ಸಿಟಿ ರೌಂಡ್ಸ್ ಹೊಡೆಯೋಣ ಅಂತ ಏಕಾಂಗಿಯಾಗಿ ಪೇಟೆ ಸುತ್ತಲು ಶುರು ಮಾಡಿದೆ....ಅಹಾ.....ಅದೆಷ್ಟು ವೈಯ್ಯಾರ....ಅದೆಷ್ಟು ಬಿನ್ನಾಣ....ಈ.ದೇವರಾಜುಅರಸು ರಸ್ತೆ!? ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣೊ ಈ ಮೈಸೂರು....ಈ ರಸ್ತೆಯಲ್ಲಿ ಮಾತ್ರ ಒಂತರಾ ವಿಭಿನ್ನವಾಗಿತ್ತು...ಸ್ವಲ್ಪ ಹೈಫೈ ಟಚ್ ಹೊಂದಿದ್ದ ಈ ರಸ್ತೆಯ ತುಂಬಾ ವ್ಯಾಪರಸ್ತರದ್ದೇ ಕಾರುಬಾರು?!ಎಲ್ಲಿ ನೋಡಿದರಲ್ಲಿ ಬರೀ ಕನ್ನಡಿಯೊಳಗಿನ ಗಂಟುಗಳೇ ಇದ್ದವು..ಆ ಕೈಗೆಟುಕದ ಗಾಜಿನ ಒಳಗೆ ಗೊಂಬೆಗಳು.....ಅದರ ಜೊತೆ ಬಟ್ಟೆಗಳ ಬರದ ಮಾರಾಟ.....ಅಲ್ಲಲ್ಲಿ ನಿಲ್ಲಿಸಿದ ಕಾರುಗಳು....ಮತ್ತೊಂದಿಷ್ಟು ಬೈಕುಗಳು..ಇಡೀ ರಸ್ತೆಗೆ ಒಂದೇ ಮರ!..ಪ್ರತಿಯೊಬ್ಬರು ತಮ್ಮ ಅಂಗಡಿಯ ಸ್ವಚ್ಚವಾಗಿರಿಸಿಕೊಳ್ಳುವ ಬರದಲ್ಲಿ ರಸ್ತೆಗೆ ಕಸ ಎಸೆದ ಮಂದಿ....ಶೋಕಿಯೇ ಶ್ರೀಮಂತಿಕೆ ಅನಿಸಿಕೊಂಡು ಖರೀದಿಗೆ ಬಂದ ಜನಗಳು....ಹೀಗೆ ನೋಡುತ್ತಾ ಮುಂದೆ ಸಾಗಿದೆ!.....

ಹಾಗೆ ಸಂದಿಗಳ ಒಳಹೊಕ್ಕಾಗ ಅಲ್ಲೇ ಇಕ್ಕೆಲಗಳಲ್ಲೆ ಚಿಕ್ಕ ಚಿಕ್ಕ ಗುಡಿಸಲು ಇತ್ತು....ಅದನ್ನೆಲ್ಲಾ ನೋಡುತ್ತಾ ತಣ್ಣನೆಯ ಗಾಳಿ ಸವಿಯುತ್ತಾ ದಾರಿಯುದ್ದಕ್ಕೂ ಕಂಡ ಕಂಡದ್ದನ್ನೆಲ್ಲಾ ನೋಡುತ್ತಾ...ರಸ್ತೆಯ ಮದ್ಯದಲ್ಲಿ ಅಪರೂಪಕ್ಕೆ ಕಾಣುವ ಕಾಲೇಜಿಗೆ ಹೋಗುವರಂತೆ ಕಾಣುವ ಬಣ್ಣದ ಚಿಟ್ಟೆಗಳನ್ನು ಗಮನಿಸುತ್ತಾ.....ಅವರ ಸೌಂದರ್ಯಕ್ಕೆ ನನಗೆ ನಾನೇ ಗುನುಗುತ್ತಾ........ಸುತ್ತಾಡುತ್ತಲೇ ಸುಮಾರು ಸಮಯ ಕಾಲ ಕಳೆದೆ.......!?

ರಾತ್ರಿ ಹೊತ್ತು ಬಾಯಿ ಚಪಲ....ರಸ್ತೆ ಬದಿಯ ಪಾನಿಪುರಿ ಅಂದ್ರೆ ಬಾಳ ಪ್ರೀತಿ....ಗೋಲುಗುಪ್ಪ ಮಾರುತ್ತಿದ್ದವನನ್ನು ನೋಡಿದ ನನಗೆ ಅಪರೂಪಕ್ಕೆ ಪರಿಚಿತ ಸಿಕ್ಕಾಗ ಆಗ ಖುಷಿ ಆಯ್ತು...ಐವತ್ತು ಪೈಸೆಗೆ ಒಂದು ಪೂರಿ....ಐದು ರೂಪಾಯಿಗೆ ಹತ್ತು ಪೂರಿ ಕೊಡುವವನು.....12 ಪೂರಿ ಕೊಟ್ಟ.....ಮಳೆ ಬರತ್ತೆ....ಅದ್ಕೆ ಕ್ಲೋಸ್ ಮಾಡ್ತೀನಿ ಅಂದ......ಸರಿ ಮನಸ್ಸಲ್ಲೊಂದು ತ್ಯಾಂಕ್ಸ್ ಅಂದ್ಕೊಂಡು ಅಲ್ಲಿಂದ ಮತ್ತೆ ಸಯ್ಯಾಜಿ ರಾವ್ ರಸ್ತೆ ಸೇರಿದೆ...ಮಳೆ ಶುರುವಾತು....!
..ಕೆ ಆರ್ ಸರ್ಕಲ್ ಸೇರಲು ಇನ್ನು ಹತ್ತು ನಿಮಿಷ ನೆಡೆಯಬೇಕಿತ್ತು...ತುಂತುರು ಮಳೆಯಲ್ಲಿ ತಲೆ ಮೇಲೆ ಕರ್ಚೀಫ್ ಹಕ್ಕೊಂಡು ನಿದಾನ ನೆಡೆದು ಬಂದೆ....ಕೆ ಆರ್ ಸರ್ಕಲ್ ಹತ್ತಿರದ ದೊಡ್ಡ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು...!

ಆ ರಸ್ತೆಯ ಬದಿಯಲ್ಲೊಬ್ಬ ನಿಂತು ಎನೋ ಹುಡುಕುತ್ತಿದ್ದ!ಚಿಟಿ ಚಿಟಿ ಮಳೆ...ನಾನಿದ್ದ ತಾತಯ್ಯ ಅನಾಥಾಲಯ ಹಾಸ್ಟೆಲ್ ಗೆ ಸಂಜೆ ಏಳು ಮುಕ್ಕಾಲು ಒಳಗೆ ಹೋಗಬೇಕಿತ್ತು....ವಾರ್ಡನ್ ಗೆ ಗೊತ್ತಾಗದೆ ಒಳಗೆ ಹೋಗಲು ಮನಸಿನೊಳಗೆ ಪ್ಲಾನ್ ಮಾಡುತ್ತಾ ಹೋಗುತ್ತಿದ್ದ ನನಗೆ ಏನೋ ಹುಡುಕುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕನಿಸಲಿಲ್ಲ... ರಸ್ತೆ ದಾಟುವ ಹೊತ್ತಿಗೆ ಆತ ಹೋಯ್ ಹೋಯ್ ಯಾರೀದಿರಾ?!ಅಂತಾ ಕೂಗಾಡಿದ..!

ತತ್ತೆರಿಕೆ ಯಾಕಪ್ಪಾ ಈತ ಕರಿತಾವ್ನೆ....ಯಾರದ್ರು ಕುಡುಕ ಇರ್ಬಹುದು ಅಂತ ಮತ್ತೆ ತಿರುಗಿ ಹೊರಟೆ...ಆತ ಮತ್ತೆ ಕೂಗಿದ....ಅಣ್ಣಾ ಯಾರದ್ರೂ ಇದಿರಾ?ಆ ಕಡೆ ದಾಟಸ್ತಿರಾ?!... ಕೇಳಿದ....

ಸರಕ್ಕೆಂದು ಓಡಿ ಬಂದೆ...ಆತನ ಕೈ ಹಿಡಿದು ದಾಟಿಸಿದೆ...ಹಾಳದ್ದು ಕಂಡ ಕಂಡವರ ಬಗ್ಗೆ ತಿಳಿದುಕೊಳ್ಳುವ ಕುತೋಹಲ....ಸಾರ್ ಯಾವ್ದು ನಿಮ್ಮೂರು?ಎನ್ಮಾಡ್ತೀರಿ?ಹುಟ್ಟಿನಿಂದಲೇ ಕಣ್ಣು ಕಾಣಲ್ವಾ?ಹೀಗೆ ಪ್ರಶ್ನೆ ಕೇಳಿದೆ....

ಆತನಿಗೆ ಏನನ್ನಿಸಿತೋ ಏನೋ....ಸಾರ್ ನನ್ನನ್ನು ಆ ಹೂವಿನ ಮಾರ್ಕೆಟ್ ಹತ್ರ ಬಿಡ್ತಿರಾ?ಅಂದ..ಸರಿ ಅಂದೆ..ಹೊರಟೆ...ಆತ ತನ್ನ ಕತೆ ಶುರು ಮಾಡಿದ....!

ನನ್ನೂರು ಪಿರಿಯಾ ಪಟ್ಟಣದ ಹತ್ರ ಒಂದು ಹಳ್ಳಿ...ಅಲ್ಲೆ ಓದಿದ್ದು.ನಂಗೆ ತಿಳುವಳಿಕೆ ಬರೋದ್ರೊಳಗೆ ಅಪ್ಪ ಅಮ್ಮ ಇರ್ಲಿಲ್ಲ...ಏಳನೆ ಕ್ಲಾಸ್ ಮುಗಿಯೋ ಹೊತ್ತಿಗೆ ಕಣ್ಣುಗಳು ಮಂಜಾಗತೊಡಗಿತು...ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ಕಣ್ಣು ಪೂರ್ತಿಯಾಗಿ ಕಾಣದಾಯಿತು....!

ಅಶಕ್ತನಾದವನನ್ನು ಯಾರು ನೊಡ್ಕೋತಾರೆ?!ಆಸ್ಪತ್ರೆಗೆ ಕರ್ಕೋಂಡು ಹೋಗೋ ನೆಪ ಮಾಡ್ಕೊಂಡು ನಮ್ಮಣ್ಣ ಮೈಸೂರಿನ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋದವನು ಎಲ್ಲಿ ಹೋದನೋ ಗೊತ್ತಿಲ್ಲ....ಇಲ್ಲೊಬ್ಬ ಹೂವು ಹಣ್ಣು ಮಾರುತ್ತಿದ್ದ.ಆತನೇ ನನ್ನನ್ನು ತನ್ನ ಜೊತೆ ಇಟ್ಕೊಂಡ.ಆತನ ಕೆಲ್ಸಕ್ಕೆ ನನ್ನ ಕೈಲಾದ ಸಹಾಯ ಮಾಡ್ತಿನಿ.ಆತ ನಂಗೊಂದು ಜೀವನ ಕೊಟ್ಟಿದ್ದಾರೆ..ಕೆ ಆರ್ ಆಸ್ಪತ್ರೆಗೆ ಹೋಗ್ಬಂದೆ..ಕಣ್ಣು ಬರಲ್ಲ ಅಂದ್ರು.ಆದ್ರೆ ದೊಡ್ಡ ಆಸ್ಪತ್ರೆಗೆಲ್ಲಾ ಹೋಗೋ ಶಕ್ತಿ ಇಲ್ಲ...ಹುಟ್ಟು ಕುರುಡ ಆಗಿದ್ರೆ ಬೇಸರವಿರ್ಲಿಲ್ಲ.ಆದ್ರೆ ಅಂದು ಒಂದಷ್ಟು ಜಗತ್ತನ್ನು ನೋಡಿದ ನನಗೀಗ ಜಗತ್ತೇ ಕತ್ತಲು!

ಅಂದು ಆಡಿದ ಆಟ...ಓಡಾಡಿದ ಜಾಗ...ಕಂಡ ಜನ...ಹಸಿರು ಹೊಲ....ನಮ್ಮೂರ ಕೆಂಪು ಬಸ್ಸು.....ಮನೆಯಲ್ಲಿ ಸಾಕಿದ್ದ ಬೀಳಿ ನಾಯಿ ಮರಿ.....ಇವೆಲ್ಲಾ ನಂಗೆ ಈಗ ನೆನಪುಗಳು ಮತ್ತು ಸಂಪೂರ್ಣ ಕತ್ತಲು!?!

ಯಾರಿಗೆ ಹೇಳಲಿ...?!ಊಟ ತಿಂಡಿ ನೆಡೆದಾಡೋದು..ಶೌಚ ಹೀಗೆ ಪ್ರತಿಯೊಂದಕ್ಕು ಇನ್ನೊಬ್ಬರನ್ನು ಕಾಯಬೇಕು...ಕೆಲವರು ಹೆಲ್ಪ್ ಮಾಡ್ತಾರೆ...ಕೆಲವರು ಓಡಿ ಹೋಗ್ತಾರೆ....

ಏನು ಮಾಡಲಿ...ಹೇಳಿ......"ಬದುಕಲೇ ಬೇಕಲ್ರಿ.....ಸಾವು ಬರುವ ತನಕ......"ಅಂದ......

ಯಾಕೋ...ಏನೋ .....ಮಾತಾಡಲು ಆಗಲಿಲ್ಲ......ಮೌನವೇ ಉತ್ತರವಾಗಿತ್ತು....ಆತನ ಕೈ ಹಿಡಿದಿದ್ದೆ......ಬೆನ್ನು ಸವರಿದೆ....ಅಣ್ಣಾ......ದೇವರು ಯಾಕೆ ಹೀಗೆ ಮಾಡ್ತಾನೋ ಗೊತ್ತಿಲ್ಲ.......ಆದರೆ ಈ ಕೆಟ್ಟ ಜಗತ್ತಿನಲ್ಲಿ ಹೊರ ನೋಟದ ಪ್ರಪಂಚಕ್ಕೆ ಕುರುಡರಾಗಿರಬಹುದು...ನಿಮ್ಮ ಒಳ ಕಣ್ಣು ಯಾವಾಗಲು ತೆರೆದಿದೆ......ಮುಂದೆ ಒಳ್ಳೆ ದಿನ ಬರುತ್ತದೆ ಅಣ್ಣಾ....ಅಂದೆ.....ಬೇರೆನೂ ಸಹಾಯ ಮಾಡದಷ್ಟು ಅಸಹಾಯಕನಾಗಿದ್ದೆ......ಮಳೆ ಬೀಳುತ್ತಿತ್ತು...!ನನ್ನ ಮತ್ತು ಅವನ ಕಣ್ಣಿನಿಂದ ಬೀಳುತ್ತಿದ್ದ ನೀರು ಅದೇ ಮಳೆ ನೀರಿನ ಜೊತೆ ಬೆರೆತು ಹೋಗುತ್ತಿತ್ತು....!....ಆತನಿಗೆ ಕಣ್ಣಿಲ್ಲ....ಆದರೆ ಕಣ್ಣೀರಿದೆ........

ದೂರದಿಂದ ಹಾಡೊಂದು ಕೇಳತೊಡಗಿತು....."ಮುರಿದು ಬಿದ್ದ ಕೊಳಲು ನಾನು...ನಾದವಿರದು ನನ್ನಲಿ.........ಸುನಾದವಿರದು ನನ್ನಲಿ"......ಅಂತ.

ಆ ನಂತರ ಡಿಗ್ರಿ ಮುಗಿಯುವವರೆಗೂ ಆತನನ್ನು ಭೇಟಿ ಆಗುತ್ತಿದ್ದೆ....ಹತ್ತು ನಿಮಿಷ ಮಾತಾಡಿಸಿ ಬರುತ್ತಿದ್ದೆ........ಮೊನ್ನೆ ಮೈಸೂರಿಗೆ ಹೋದಾಗ ಅಲ್ಲಿ ಹೋಗಿದ್ದೆ...ಅಲ್ಲಿ ಆತ ಇರಲಿಲ್ಲ...ಹೂವು ಮಾರುವವನೂ ಇರಲಿಲ್ಲ..ಅಲ್ಲೀಗ ಕೆಲವು ಕಮರ್ಷಿಯಲ್ ಕಟ್ಟಡಗಳಿದ್ದವು....ಅಲ್ಲೀಗ ದೊಡ್ಡ ಬುಸಿನೆಸ್ ಮಾಡುವ ಮಂದಿ ಇದ್ದರು....!!!!

ಮಾತಾಡಲೂ ಯಾರೂ ಇರಲಿಲ್ಲ.............ಉಳಿದದ್ದು ಆಗಿನ ನೆನಪುಗಳು ಮತ್ತು ಈಗ ಕಾಣುತ್ತಿರುವ ಮಾತೇ ಆಡದ ದೊಡ್ಡ ಬಿಲ್ಡಿಂಗ್ ಗಳು......!?!

"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ...ಎನ್ನುತ್ತಾ ಪತ್ರಿಕಾ ಅಭಿಯಾನಕ್ಕೆಂದು ಮೈಸೂರಿಗೆ ಹೋದ ನನಗೆ ಕಾಡಿದ ಹಳೆ ನೆನಪುಗಳಿವು..........

# ಓದಿ ಸಂಪದ ಸಾಲು

ಮತ್ತೊಮ್ಮೆ ಗುಲಾಮರಾಗಬಾರದು....!..? ಸ್ವಾತಂತ್ರ ಬೇಕು....ಸ್ವೇಚ್ಛಾಚಾರ ಬೇಡ . venkatesha sampa


  1. ಮತ್ತೊಮ್ಮೆ ಗುಲಾಮರಾಗಬಾರದು....!..?
    ಸ್ವಾತಂತ್ರ ಬೇಕು....ಸ್ವೇಚ್ಛಾಚಾರ ಬೇಡ .

    ಸರ್ವರಿಗೂ ಸ್ವಾತಂತ್ರೋತ್ಸವದ ಶುಭಾಷಯಗಳು .

    ನಮಗೆ
    ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರ ವಲ್ಲ
    ಭ್ರಷ್ಟಾಚಾರ ಮುಗಿಲು ಮುಟ್ಟಿದೆ.ಅದು ಕೇವಲ
    ಆರ್ಥಿಕ ಭ್ರಷ್ಟಾಚಾರವಲ್ಲ.
    ಮಾನಸಿಕ..ನೈತಿಕ.ಸಾಮಾಜಿಕ.ಸಾಮೂಹಿಕ.
    ಧಾರ್ಮಿಕ ಭ್ರಷ್ಟಾಚಾರ
    ಎಗ್ಗಿಲ್ಲದೇ ಸಾಗಿದೆ.ಮತ್ತು ಬೆಕ್ಕಿನ ಕೊರಳಿಗೆ
    ಗಂಟೆ ಕಟ್ಟಲಾಗದಂತ ಸ್ತಿತಿ
    ತಲುಪಿಸಿದೆ.ಹಾಗು ಈ ಬೃಹತ್ ಭ್ರಷ್ಟಾಚಾರದ
    ಕೂಪದಲ್ಲಿ ರಾಜಕಾರಣದ
    ಶಾಸಕಾಂಗ..ಕಾನೂನು ಹೇಳುವ ನ್ಯಾಯಾಂಗ..
    ಅಧಿಕಾರಿವರ್ಗದ ಕಾರ್ಯಾಂಗ..
    ಜನಗಳಲ್ಲಿ ಜಾಗೃತಿ ಮೂಡಿಸಬೇಕಾದ
    ಮಾದ್ಯಮಗಳು....ಇದೆಲ್ಲದರ ಪ್ರಯೋಜನ
    ಪಡೆಯುವ ಜನ ಸಾಮಾನ್ಯನೂ ...ಹೀಗೆ
    ಭ್ರಷ್ಟಾಚಾರದ ಕೂಪದಲ್ಲಿ ಒದ್ದಾಡುತ್ತಿದ್ದಾ
    ರೆ
    ನಮಗೆ
    ಬೇಕಿರುವುದು ಸ್ವಾತಂತ್ರ್ಯವೇ ವಿನಃ ಸ್ವೇಚ್ಚಾಚಾರವಲ್ಲ
    .
    ದೇಶದ ಅಭಿವೃದ್ದಿಗೆ ಬೇಕಿರುವುದು ಸಾಮಾನ್ಯ
    ಜ್ಣಾನ ಮತ್ತು ಇಚ್ಚಾಶಕ್ತಿಯೇ ವಿನಃ ಕೋಟಿ
    ಕೋಟಿ ಹಣವಲ್ಲ.
    ನಮಗೆ
    ಬೇಕಿರುವುದು ಸ್ವಾವಲಂಬನೆಯೇ ವಿನಃ ಶ್ರೀಮಂತಿಕೆಯಲ್ಲ.
    .
    ನಮಗೆ ಬೇಕಿರುವುದು ಜಗತ್ತೇ ಗೌರವಿಸುವ
    ನಮ್ಮತನವೇ ವಿನಃ ಶೋಕಿ ತೋರಿಸುವ
    ಬೂಟಾಟಿಕೆಯ ಜೀವನ ಪದ್ದತಿಯಲ್ಲ.
    ನಮಗೆ ಬೇಕಿರುವುದು ಪ್ರಕೃತಿಯನ್ನು ನಾಶ
    ಮಾಡದ ನೈಜ
    ಅಭಿವೃದ್ದಿಯೇ ವಿನಃ ಬಾಷಣಗಳಲ್ಲ...
    ಮತ್ತೊಮ್ಮೆ ನಮ್ನ ದೇಶ
    ಗುಲಾಮನಂತಾಗಬಾರದು.ಭವ್ಯ ಭರತ
    ಖಂಡದಲ್ಲಿ ಹುಟ್ಟಿ..ಪವಿತ್ರ
    ಪ್ರಜಾಪ್ರಭುತ್ವದಲ್ಲಿ ಬೆಳೆಯುತ್ತಿರುವ ನಮಗೆ
    ನಾವೇ ಶಪಥ ಮಾಡಬೇಕಿದೆ...ಈ ದೇಶದ
    ಅಭಿವೃದ್ದಿಗೆ...ಈ ಸಂಸ್ಕಾರಯುತ ಸಂಪದ್ಬರಿತ
    ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಧರ್ಮದ
    ಯೋಚನೆ ಮಾಡುವುದಿಲ್ಲ.ಮತ್ತು ಸಹಜ
    ಮತ್ತು ಸರಳ ಜೀವನ ಸಾಗಿಸುತ್ತೇನೆ.ಮತ
    ್ತು ದೇಶದ ವಿಚಾರ ಬಂದಾಗ
    ನಾವು ಒಂದಾಗುತ್ತೇವೆ...ನನ್ನ ದೇಶ
    ನನ್ನದು...
    ನನ್ನನ್ನು ನಾನು ಪ್ರೀತಿಸಿಕೊಂಡಷ್ಟೇ ನನ್ನ
    ದೇಶವನ್ನು ಪ್ರೀತಿಸುತ್ತೇನೆ.
    ಎಂದು ತೀರ್ಮಾನಿಸಿ ಕಾರ್ಯಪ್ರವೃತ್ತರಾದ
    ದಿನವೇ ಸ್ವಾತಂತ್ರ ದಿನಾಚರಣೆಗೆ ಅರ್ಥ
    ಬರುತ್ತದೆ.ಏಕೆಂದರೆ ಗುರಿ ಮುಟ್ಟುವ
    ಮೊದಲೇ ದಾರಿ ತಪ್ಪಬಾರದು ಅಲ್ಲವೇ?!?!
    ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ
    ವ್ಯತ್ಯಾಸವೇನು?೬೯ ವರ್ಷ ಸಾಧಿಸಿದ್ದೇನು?
    ನಮ್ಮ ಸ್ಥಿತಿಗೆ ಕಾರಣವೇನು?ಅದಕ್ಕೆ
    ಪರಿಹಾರವೇನು? ಅಂತ ತಿಳಿಯಲು ಈ ಬಾರಿಯ
    ಸಂಪದ ಸಾಲು ಪತ್ರಿಕೆಗೆ ಚೆಂದದಾರರಾಗಿ ಓದಿ.
    "ಬದಲಾವಣೆ ಬರಲಿ.ಪರಿವರ್ತನೆ ತರಲಿ
    ಇದು ಸಂಪದ ಸಾಲು ಪತ್ರಿಕಾ ಅಭಿಯಾನ

ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ. # ವೆಂಕಟೇಶ ಸಂಪ



ಕೊಳಕು ಪಟಾಲಂ ಇಲ್ಲದ ರಾಜಕಾರಣಬೇಕಿದೆ.
# ವೆಂಕಟೇಶ ಸಂಪ

ಖಾಸಗಿ ಟಿವಿ ಚಾನಲ್ ಒಂದರ ಕಾರ್ಯಕ್ರಮ ಮುಖ್ಯಸ್ಥನಾಗಿದ್ದ ದಿನಗಳವು.ಪಾಸಿಟೀವ್ ಪಾಲಿಟಿಕ್ಸ್ ಎಂಬ ಕಾರ್ಯಕ್ರಮದಡಿಯಲ್ಲಿ ಮಾಜಿ ಸಭಾದ್ಯಕ್ಷರಾದ ರಮೇಶ್ ಕುಮಾರ್ ಅವರ ಜೊತೆ ಮಾತಾಡುತ್ತಿದ್ದೆ....ಆ ಮಾತುಕತೆಯ ಕೆಲವು ಆಯ್ದ ವಿಷಯಗಳು ಎಷ್ಟು ಪ್ರಸ್ತುತ ಅನಿಸುತ್ತೆ....ಒಮ್ಮೆ ಓದಿ ಬಿಡಿ.....

ಒಬ್ಬ ರಾಜಕಾರಣಿ ಅನಿಸಿಕೊಂಡವನು ಎಮ್ ಎಲ್ ಎ ಆಗಬೇಕೆಂದರೆ ಲಕ್ಷಾಂತರ ಜನಗಳ ಮತ ಪಡೆಯಬೇಕಾಗುತ್ತದೆ.ಒಮ್ಮೆ ಗೆದ್ದ ನಂತರ ಮತ್ತು ರಾಜಕಾರಣದಲ್ಲಿ ಒಂದಷ್ಟು ಪಟಾಲಂ ಜೊತೆಗಿರುತ್ತದೆ..ಇವರು ಗೆದ್ದ ನಂತರ ದಿನಕ್ಕೊಂದು ಬಾರಿ ಒಂದೈವತ್ತು ಮಂದಿ ನಮ್ಮ ಸುತ್ತ ಸುತ್ತುತ್ತಾರೆ..ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ರಾಜಕಾರಣಿಗಳು ಮಾಡಿದ್ದೆಲ್ಲಾ ಸರಿ ಎಂಬಂತೆ ಈ ಪಟಲಾಂ ಸುಖಾಸುಮ್ಮನೆ ಜೈಕಾರ ಹಾಕುತ್ತಾರೆ.ಯಾಕೆಂದರೆ ಆತನದ್ದು ಯಾವುದೋ ಟ್ರಾನ್ಸಪರ್ರೋ,ಕಮಿಶನ್ ವ್ಯವಹಾರವೋ ಇರತ್ತೆ..ಅದಕ್ಕೆ ನಾವು ಆತನ ಜೈಕಾರ ಕ್ಕೆ ಮರುಳಾಗಿ ಆತ ಹೇಳಿದ್ದೆಲ್ಲಾ ಸರಿ ಅಂದುಬಿಡುತ್ತೇವೆ...ಕೇವಲ ಈ ಐವತ್ತು ನೂರು ಮಂದಿಗಳು ದಿನ ನಮ್ಮ ಸುತ್ತ ಗಿರ್ಕಿ ಹೊಡೆಯುತ್ತಾರೆ...ದುರಂತ ಅಂದ್ರೆ ಓಟ್ ಹಾಕಿದ ಲಕ್ಷಾಂತರ ಜನರನ್ನು ಮರಿತೀವಿ...ಈ ಪಟಾಲಂ ಅನ್ನೇ ಜನ ಅಂದುಕೊಳ್ತೀವಿ...ಈ ಐವತ್ತು ಹೊಗೊಳೋ ಭಟರನ್ನೇ ಜನ ಅಂದುಕೊಳ್ತೀವಿ....ಹಾಗು ಅವರು ಹೇಳಿದ ಕೆಲ್ಸವನ್ನೇ ಮಾಡ್ತಿವಿ....ಜನಗಳಿಗೆ ನಾವು ಮಾಡೊ ಕೆಲ್ಸ ಬೇಕೋ ಬೇಡವೋ ಯೋಚಿಸೋದಿಲ್ಲ...ಯಾವತ್ತು ಈ ಪಟಲಾಂಗಳನ್ನು ದೂರ ಇಟ್ಟುಕೊಳ್ಳಬೇಕು....

ಇನ್ನೊಂದು ಈ ಆಪ್ತ ಸಹಾಯಕರು...ಪಿ ಎ ಗಳು ಅಂತ ನೇಮಕ ಮಾಡಿಕೊಳ್ಳೋ ಮಂತ್ರಿಗಳು...ಶಾಸಕರುಗಳು...ಒಮ್ಮೆ ಯೋಚಿಸಬೇಕು...ಈ ಮನುಷ್ಯ ಡೀಲ್ ಮಾಷ್ಟರ್ರಾ?! ಅಥವಾ ಕೆಲಸ ಕೊಡಸ್ತೀನಿ ಅಂತಾ ಹೆಣ್ಣುಮಕ್ಕಳಿಗೆ ಆಸೆ ತೋರಿಸಿ ಮೋಸ ಮಾಡಿದವನಾ?!ಈತನಿಗೆ ತಲೆ ಇದೆಯಾ?!ಮಾನವೀಯ ಹೃದಯ ಇದೆಯಾ?!ಅಥವಾ ಶೋಕಿವಾಲ ನಾ?!ಅಥವಾ ಶಾಸಕನ ಹೆಸರಲ್ಲಿ ದುಡ್ಡು ಪೀಕುವವನಾ?!ಅಂತ ಯೋಚಿಸಬೇಕು...ಇಲ್ಲದಿದ್ದರೆ ಆ ರಾಜಕಾರಣಿಯೂ ಹಾಳು....ಈ ಅನಿಷ್ಟ ಪಿ ಎ ಯಿಂದ ಸಮಾಜವೂ ಹಾಳು.....

ಗೆಲುವು ಮತ್ತು ಅಧಿಕಾರ ಬಂದ ಮೇಲೆ ನಮ್ಮ ಜೊತೆಯಲ್ಲಿರುವವರ ಬಗ್ಗೆ ಜಾಗೃತರಾಗಿರಬೇಕು...ಜೊತೆಗೆ ಕೆಲಸ ಮಾಡುವವರು ಮತ್ತು ಪಟಾಲಂ ಗಳು ಅಭಿವೃದ್ದಿಗೆ ಪೂರಕವಾಗಬೇಕೇ ವಿನಃ ಜನ ಸಾಮಾನ್ಯರ ಬದುಕಿಗೇ ತಡೆ ಗೋಡೆಯಾಗಬಾರದು....

ಸಾಮಾನ್ಯ ಜ್ಞಾನ ಮತ್ತು ಮಾನವೀಯ ಮೌಲ್ಯ ಹಾಗು ಯಾರನ್ನು ಯಾವ ರೀತಿ ಬಳಸಿಕೊಳ್ಳಬೇಕು ಮತ್ತು ಯಾರಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಅರಿಯಬೇಕು.....

ಇಂದಿನ ಬಹುತೇಕ ರಾಜಕಾರಣಿಗಳನ್ನು ಮತ್ತು ಮಂತ್ರಿ ಮಹೋದಯರನ್ನು ನೋಡಿದ್ದೇನೆ..ಅವರ ಆಪ್ತ ಸಹಾಯಕರ ದುರಹಂಕಾರ ಮತ್ತು ಡೀಲ್ ಸ್ವಭಾವವನ್ನೂ ನೋಡಿದ್ದೇನೆ... ಕಂಡ ಕಂಡವರ ಜೊತೆ ಆಟ ಆಡುವ ಇಂತವರನ್ನು ನೋಡಿದಾಗ ನಮ್ಮ ರಮೇಶ್ ಕುಮಾರ್ ಅವರ ಮಾತು ಸದಾ ನೆನಪಾಗತ್ತೆ.......

ತೊಲಗಬೇಕು ದುರಹಂಕಾರಿಗಳು...."ಬೇಕು ಪಾಸಿಟೀವ್ ಪಾಲಿಟಿಕ್ಸ್"

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

MLC ganesh karnik is tieying rakhi in chairmen office ........venkatesha sampa



ಇದನ್ನು ಒಪ್ಪಿಕೊಳ್ತಿರಾ?! ಹಾಗಿದ್ರೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

ಯಾರು ನಮ್ಮನ್ನು ಗೌರವಿಸುತ್ತಾರೋ?!ಯಾರು ನಮ್ಮನ್ನು ಪ್ರೀತಿಸುತ್ತಾರೋ?! ಯಾರು ನಮ್ಮ ಕೆಲಸಗಳಿಗೆ ಜೊತೆಯಾಗಿ ಸಹಕರಿಸುತ್ತಾರೋ...?!ದೂರದಲ್ಲಿದ್ದರೂ ಇವರು ನಮ್ಮೋರು ಅಂತ ನಮ್ಮ ಬೆಳವಣಿಗೆಗೆ ಪೂರಕವಾಗಿ ನಿಲ್ಲುತ್ತಾರೋ?! ಯಾರು ನಮಗೆ ಕಷ್ಟ ಇದ್ದಾಗಲೂ ಏನು ಸಹಾಯ ಬೇಕು ಅಂತ ಕೇಳದೆಯೆ ತಮ್ಮಿಂದಾಗಬಹುದಾದ ಚಿಕ್ಕ ಸಹಾಯದ ಪ್ರಯತ್ನ ಮಾಡ್ತಾರೋ?! ಅವರೇ ನಮ್ಮ ನಿಜವಾದ ನೆಂಟರು...ನಿಜವಾದ ಗೆಳೆಯರು...ನಿಜವಾದ ಒಡನಾಡಿಗಳು...

ಯಾರು ನಮ್ಮನ್ನು ನಿರ್ಲಕ್ಷವಾಗಿ ನೋಡುತ್ತಾರೋ?!ಯಾರು ಸ್ನೇಹಿತರಂತೆ ಜೊತೆಗಿದ್ದು ಅಸೂಯೆ ಪಡುತ್ತಾರೋ?!ಯಾರು ಹಿತವಾಗಿದ್ದು ಶತ್ರುಗಳಂತೆ ನೆಡೆದುಕೊಳ್ಳುತ್ತಾರೋ?! ಯಾರು ನೆಂಟರಂತೆ ಇದ್ದರೂ ನಮ್ಮ ಏಳ್ಗೆಯನ್ನು ಹೀಯಾಳಿಸುತ್ತಾರೋ?!ಯಾರೋ ವಿಷಯವೇ ಗೊತ್ತಿಲ್ಲದಿದ್ದರೂ ಅಪಪ್ರಚಾರ ಮಾಡುತ್ತಾರೋ?!ಇವರೆಲ್ಲಾ ಯಾವತ್ತೂ ನಮ್ಮವರಲ್ಲ....

ಆದರೆ ಇಂತವರೂ ಇರಬೇಕು ಸಮಾಜದಲ್ಲಿ...ಏಕೆ ಗೊತ್ತಾ?!
ದಾಸರು ಹೇಳಿದಂತೆ ಹೊಲಸು ತಿನ್ನುವವರು ಇದ್ದರೆ ಸ್ವಚ್ಚತೆ ಉಳಿಯುತ್ತದೆ...

ನಮ್ಮನ್ನು ಪ್ರೀತಿಸುವವರನ್ನು ಗೌರವಿಸೋಣ.ನಿಂದಕರನ್ನು ಸ್ವಚ್ಛಗೊಳಿಸುವ ಪ್ರಾಣಿಯಂತೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ....

"ಬದಲಾವಣೆ ಬರಲಿ.....ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".

karnataka government speaker kagodu timmappa and chairmen D H shankaramurthy is reading sampada saalu

ಕೆಸರಿನಲ್ಲಿಯೇ ಕಮಲ ಅರಳುತ್ತದೆ..... ಆದರೂ ಕಮಲ ಎಲ್ಲರಿಗೂ ಇಷ್ಟವಾಗುತ್ತದೆ....ಅದರಂತೆ ಪ್ರತಿಯೊಂದರಲ್ಲಿ ಒಳ್ಳೆಯದನ್ನು ಗುರುತಿಸುವ ಗುಣ ಬೇಕು.
ಕೆಸರಿನಲ್ಲಿ ಕಮಲ ಅರಳಿದೆ ಅಂದ ಮಾತ್ರಕ್ಕೆ ಕಮಲವನ್ನು ದೂಷಿಸಲು ಸಾದ್ಯವಿಲ್ಲ...ಹಾಗೆಯೇ ಯಾವುದೋ ಒಂದು ವಿಚಾರದಲ್ಲಿ ಒಬ್ಬ ಕೆಟ್ಟವನು ಅನಿಸಿದರೆ ಆತ ತೀರಾ ಕೆಟ್ಟವನು ಎಂದು ಸರ್ಟಿಫಿಕೇಟ್ ಕೊಡುವುದರ ಬದಲು ಆತನ ಆ ಕೆಟ್ಟ ಗುಣವನ್ನು ಒಳ್ಳೆಯ ಗುಣವನ್ನಾಗಿಸಬೇಕು....ಸಾದ್ಯವಾಗದಿದ್ದರೆ....ಅವರಲ್ಲಿರಬಹುದಾದ ಯಾವುದಾದರೂ ಒಂದು ಒಳ್ಳೆ ಗುಣವನ್ನು ಒಪ್ಪಿಕೊಳ್ಳೋಬೇಕು....ಅದೂ ಆಗದಿದ್ದರೆ ಆ ವ್ಯಕ್ತಿಯನ್ನೂ ಸಂಪೂರ್ಣ ನಿರ್ಲಕ್ಷ ಮಾಡಬೇಕು..

..."ಅವನು ಸರಿ ಇಲ್ಲ...ಈಕೆ ಸರಿ ಇಲ್ಲ...ಅವರು ಹಂಗೆ...ಇವರು ಹಿಂಗೆ ಅನ್ನುವವರು .....ಯಾವತ್ತಿದ್ದರೂ ಕಮಲವಾಗುವುದಿಲ್ಲ....ಕಮಲ ಬೆಳೆಯಲು ಸಹಕರಿಸುವ ಕೆಸರಾಗುತ್ತಾರೆ....."
.
ಒಳ್ಳೆಯದನ್ನು ಗುರುತಿಸೋಣ....ಇನ್ನೊಬ್ಬರನ್ನು ದೂಷಿಸುವವರು ಕೆಸರಾಗುತ್ತಾರೆ......ದೂಷಿಸಿಕೊಂಡವನು ಕಮಲವಾಗುತ್ತಾನೆ.....ಆಯ್ಕೆ ನಮ್ಮದು....

# ವೆಂಕಟೇಶ ಸಂಪ
ಓದಿ ಸಂಪದ ಸಾಲು

"ಬದಲಾವಣೆ ಬರಲಿ.ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ".


.ನೀರು ಉಳಿಸಿ... ಬದುಕು ಬೆಳೆಸಿ.... rain water harvesting project by sampada saalu group .....venkatesha sampa

ಆತ್ಮಿಯರೇ ಒಂದು ಸಂತಸದ ಸುದ್ದಿ....ಹಾಳು ಬಿದ್ದ ಕೊಳವೆ ಬಾವಿಯನ್ನು ಇಂಗು ಗುಂಡಿ ಮಾಡುವ ನನ್ನ ಐಡಿಯಾ ಮತ್ತು ಲೇಖನವನ್ನು ಓದಿದ ಸರ್ಕಾರ ಮತ್ತು ಕೆಲವು ಮಂತ್ರಿಗಳು ಮತ್ತು ಕೆಲವು ಅಧಿಕಾರಿಗಳು ಪೋನಿನ ಮೂಲಕ ನನ್ನಜೊತೆ ಮಾತಾಡಿದ್ದಾರೆ...ಇದು ಅನುಷ್ಟಾನಗೊಳ್ಳಲು ಸರ್ಕಾರ ಗಂಬೀರವಾಗಿ ಪರಿಗಣಿಸಿದೆ...ಕೊಳವೆ ಬಾವಿಯನ್ನು ಇಂಗುಗುಂಡಿ ಮಾಡೋಣ ಎಂಬ ಮಾತಿಗೆ ಎಲ್ಲಾ ವಾಹಿನಿಗಳಿಗೆ ಕರೆ ಮಾಡಿ ಹೇಳಿದರೂ ಅದನ್ನು ಮುಚ್ಚಿ ಮುಚ್ಚಿ ಎಂದು ಸುದ್ದಿ ಮಾಡಿದ್ದರೂ...ನನ್ನ ಲೇಖನ ಓದಿದ ಸರ್ಕಾರ ಅಂತರ್ಜಲದ ಉಳಿವಿಗಾಗಿ ಪ್ರಯತ್ನಿಸುತ್ತಿರುವ ಸರ್ಕಾರಕ್ಕೆ..ಮತ್ತು ನಮ್ಮ ಸಂಪದಸಾಲು ಪತ್ರಿಕಾ ಅಭಿಯಾನಕ್ಕೆ ಬೆಂಬಲಿಸಿದ ಒಂದಷ್ಟು ಸಂಘಟನೆಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು...ಅಂತರ್ಜಲ ಉಳಿವಿಗೆ ನಮ್ಮ ಜೊತೆ ಕೈ ಜೋಡಿಸಿ....ಬದಲಾವಣೆ ಬರಲಿ.ಪರಿವರ್ತನೆ ತರಲಿ..ಇದು ಸಂಪದ ಸಾಲು ಪತ್ರಿಕಾ ಅಭಿಯಾನ..(9448219347)
ಮತ್ತೊಮ್ಮೆ ಎಲ್ಲರಲ್ಲಿ ವಿನಂತಿ....ನಿಮಗೆ ಕಾಳಜಿ ಇದ್ದರೆ ಇದನ್ನು ಶೇರ್ ಮಾಡಲೇಬೇಕು...?!

..

.ನೀರು ಉಳಿಸಿ... ಬದುಕು ಬೆಳೆಸಿ....
ಕೊಳವೆ ಬಾವಿ ಮುಚ್ಚುವುದರ
ಬದಲು ಅದನ್ನು ಅಂತರ್ಜಲದ
ವೃದ್ದಿಯಾಗುವಂತೆ ಮಾಡಬಹುದು
# ವೆಂಕಟೇಶ ಸಂಪ
ತೆರೆದ ಬೋರ್ ವೆಲ್ ನಲ್ಲಿ ನೀರು ಬರಲಿಲ್ಲ
ಎಂದ ಕಾರಣಕ್ಕೆ
ಅದನ್ನು ಮುಚ್ಚುವುದೊಂದೇ ಅದಕ್ಕೆ
ಪರಿಹಾರವಲ್ಲ.ಎಲ್ಲಾ ಟಿ ವಿ
ಮಾಧ್ಯಮಗಳು ಕಂಡ ಕಂಡ ಕೊಳವೆ ಬಾವಿ
ಮುಚ್ಚಿಸಿ ಅದೇ ಸಾಧನೆ
ಅಂದುಬಿಡಬಹುದು...ಸರ್ಕಾರವೂ ಕೊಳವೆ
ಬಾವಿ ಮುಚ್ಚಲು ಲಕ್ಷಾಂತರ
ವ್ಯಯಿಸಬಹುದು....
ಸಂಘಟನೆಗಳು ಕಲ್ಲು ಮುಚ್ಚಿ
ಸುಮ್ಮನಾಗಬಹುದು....ಆದರೆ ಪಾಳು ಬಿದ್ದ
ಬೋರ್ ವೆಲ್
ನ್ನು ಮುಚ್ಚುವುದೊಂದೇ ಅದಕ್ಕೆ
ಪರಿಹಾರವಲ್ಲ..ಅದನ್ನೇ ಅಂತರ್ಜಲ
ಮಟ್ಟ ಹೆಚ್ಚಿಸಲು ಸಾಧನವಾಗಿ
ಬಳಸಬಹುದು..ನಿಮಗೆ ತಿಳಿದಿರಲಿ...ಭೂಮ
ಿಯಲ್ಲಿನ ಅಂತರ್ಜಲ
ಕುಸಿಯಲು ಕಾರಣವಾದದ್ದು ಇದೇ ಬೊರವೆಲ್
ಗಳು....ಅದೇ ಹಾಳು ಬಿದ್ದ ಬೋರವೆಲ್
ಗಳನ್ನು ಭೂಮಿಗೆ ನೀರು ತುಂಬಿಸುವ
ಸಾಧನವಾಗಿ
ಬಲಸಬಹುದೆಂದು ಯಾರು ಯೋಚಿಸಲಿಲ್ಲ....ಆ
ಕಾಶದಲ್ಲಿ ಅರಮನೆ
ಕಟ್ಟುವವರು ಮೊದಲು ಭೂಮಿಯಲ್ಲಿ
ಗುಡಿಸಲು ಕಟ್ಟಿರಬೇಕು ಎಂದು..ಏಕೆಂದರೆ
ಮಾದ್ಯಮಗಳು ಮತ್ತು ಜನ ಕೂಗಿದ
ತಕ್ಷಣ ಸರ್ಕಾರ ಎಲ್ಲಾ ಕೊಳವೆ ಬಾವಿ
ಮುಚ್ಚಿಸಬೇಕೆಂದು ನಿರ್ದೇಶನ
ಕೊಟ್ಟರು....ಅದೇ ಈ ಮುಖ್ಯಮಂತ್ರಿಗಳು.
..ಸಚಿವರು...ಅಧಿಕಾರುಗಳು....ಮಾದ್ಯ
ಮಗಳು ಸಾಮಾನ್ಯ ಜ್ಞಾನ
ಉಪಯೋಗಿಸಬಹುದಿತ್ತ
ು!?...ನೀರು ಬಾರದ ಕೊಳವೆ
ಬಾವಿಯನ್ನು ಹೇಗೆ ಅಂತರ್ಜಲ ಹೆಚ್ಚಿಸುವ
ಸಾಧನವಾಗಿಸಬಹುದು....ಈ ಲೇಖನ ಪೂರ್ತಿ
ಓದಿದರೆ ತಿಳಿಯುತ್ತದೆ.
ನಮ್ಮ ಸಂಪದ ಸಾಲು ಪತ್ರಿಕಾ ಬಳಗ
ಮತ್ತು ಸಂಪದ ಜನ ಜಾಗೃತಿ ಬಳಗದ
ವತಿಯಿಂದ ಅಂತರ್ಜಲ ಹೆಚ್ಚಳಕ್ಕೆ ಬೇರೆ
ಬೇರೆ ತೆರನಾದ ಕೆಲಸ ಮಾಡುತ್ತಿದ್ದೇವೆ...
ಇವತ್ತು ಬೆಳಿಗ್ಗೆ ಎಂಟು ಗಂಟೆಗೆ
ವ್ಯಕ್ತಿಯೊಬ್ಬ ಕರೆ
ಮಾಡಿದ...ಅಣ್ಣಾ ಇಲ್ಲೊಂದು ನೀರು ಬಾರದ
ಕೊಳವೆ ಬಾವಿ
ಇದೆ..ನೀವು ಬನ್ನಿ..ವಿಡಿಯೋ ಮಾಡ್ಕೊಳ್ಳಿ...ಎಲ
್ಲಾ ಟಿವಿ ಗಳಿಗೆ ಪೋನ್
ಮಾಡಿದೆ.ಯಾರು ಪೋನ್
ಎತ್ತಲಿಲ್ಲ...ದಯವಿಟ್ಟು ಬನ್ನಿ
ಅಂದರು.....ಅದೀಗ ತಾನೆ
ಬೆಳಗಾಗಿತ್ತು ನನಗೆ...ಅಣ್ಣಾ ಖಂಡಿತ
ಬರ್ತಿನಿ...ನಾ ಬರುವವರೆಗೆ ಮುಚ್ಚಬೇಡ
ಅಂದೆ.....ನನ್ನ ಆತ್ನೀಯರಾದ
ಸೂರ್ಯನಾರಯಣ್
ಅವರನ್ನು ಕರೆದುಕೊಂಡು ಕಾರಲ್ಲಿ ಅಲ್ಲಿ
ಹೋದೆ. ನನ್ನನ್ನು ನೋಡಿದ ಅಲ್ಲಿಯ ಜನ
ದೊಡ್ಡ ದೊಡ್ಡ
ಕಲ್ಲು ಹಿಡಿದು ಅದನ್ನು ಮುಚ್ಚಿಸಲು ಹೊರಟ್ರು.....ಎಲ್
ಲಾ ಬನ್ನಿ ಅಣ್ಣಾ ಅಂತ...ಒಟ್ಟಿಗೆ
ಅಲ್ಲೇ ಮೀಟಿಂಗ್ ಗೆ
ಕೂತೆವು.ನಾ ಹೇಳಿದೆ.ಈ ಕೊಳವೆ ಬಾವಿ
ಮುಚ್ಚೋದು ಬೇಡ..ಇದನ್ನೇ ಇಂಗು ಗುಂಡಿ
ಮಾಡೋಣ..ನಾಲ್ಕು ಇಂಚಿನ
ಎರಡು ಪೈಪು..ಮತ್ತು ಒಂದು ಬೆಂಡು ಹಾಗು ರೆಡ್ಯೂಸರ್
ಪೈಪು ಹಾಗು ಒಂದು ಚಿಕ್ಕ ಫಿಲ್ಟರ್ ತನ್ನಿ
ಅಂದೆ... ನಾವು ಕಾಫಿ
ಕುಡ್ಯೋ ಹೊತ್ತಿಗೆ...ಅಂತರ್ಜಲದ
ಹೆಚ್ಚಿಸುವ ಬಗ್ಗೆ ಅದರ ಮಹತ್ವದ ಬಗ್ಗೆ
ತಿಳಿಸಿದೆ....ಆ ಪೈಪ್ ಗಳನ್ನು ತಂದ
ವ್ಯಕ್ತಿ....ಬೋರ್ ಪಾಯಂಟ್ ಹತ್ರ ಕಳೆ
ಸವರಿಸಿ..ಕ್ಲೀನ್ ಮಾಡಿಸಿದೆವು....ಆ
ಇಪ್ಪತ್ತು ಅಡಿ ಪೈಪ್ ಕೆಳಗೆ
ಇಳಿಸಿದೆವು..ಎರಡನೆ ಪೈಪು ಸ್ವಲ್ಪ
ಮಾತ್ರ....ಹೋಯ್ತು....ಭೂಮಿಯ ಅಳತೆಗೆ
ಅದನ್ನು ಕೊಯ್ಡು ಬೆಂಡ್ ಹಾಕಿದೆವು. ಆ
ನಂತರ ರೆಡ್ಯೂಸರ್ ಪೈಪ್ ಹಾಕಿ...ಸಣ್ಣ
ಪೈಪ್ ಅದಕ್ಕೆ ಜಾಯಂಟ್ ಮಾಡಿದೆವು...ಹಾಗು
ಆ ಪೈಪಿನ ಒಳಗೆ ಮಳೆ ನೀರು ಹೋಗುವಂತೆ
ಮಾಡಿ ಆ ನೀರನ್ನು ಭೂಮಿಗೆ
ಇಂಗಿಸಲು ವ್ಯವಸ್ಥೆ ಮಾಡಿದೆವು....ಇನ್
ನು ಸ್ವಲ್ಪ ಗ್ಯಾಪ್ ಇತ್ತು..ಗುದ್ದಲಿಯ
ಿಂದ
ಮಣ್ಣು ತುಂಬಿದರು.ಎಲ್ಲೋ ಹರಿದು ಸಮುದ್ರ
ಸೇರಿ ವ್ಯರ್ಥ ವಾಗುವ
ನೀರು ನಮ್ಮದೇ ಹೊಲದಲ್ಲಿ
ಇಂಗಿತು ಎಂಬ ಖುಶಿ ಎಲ್ಲರ ಮುಖದಲ್ಲಿ
ಮೂಡಿತು..
ಅಂತರ್ಜಲ ಹೆಚ್ಚಿಸಲು ಸರ್ಕಾರ
ಎನೇನೋ ಯೋಜನೆ ಅನ್ನುತ್ತದೆ...ಆದರೆ
ಇಷ್ಟು ಸರಳವಾದ ಕ್ರಮ
ಇದ್ದರೂ ಯಾರು ಅನುಸರಿಸದೇ ಇರುವುದು ವಿಪರ್ಯಾಸ. .
ಈ ವಾರದಲ್ಲಿ ಸಾವಿರಾರು ಕೊಳವೆ ಬಾವಿ
ಮುಚ್ಚಿಸಿರಬಹುದು.....ಅದೆಲ್ಲವನ್ನು
ಇಂಗುಗುಂಡಿಯಾಗಿ ಬದಲಾಯಿಸಿದ್ದರೆ
ಬಹುಶಃ ಅಂತರ್ಜಲ ಮಟ್ಟ
ಎಷ್ಟು ಏರುತ್ತಿತ್ತು ಎಂಬುದನ್ನು ನೆನಪಿಡಿ.....ಮುಚ
್ಚುವುದಷ್ಟೇ ಪರಿಹಾರವಲ್ಲ...ಅದ
ನ್ನು ಪಾಸಿಟಿವ್ ಆಗಿ
ಪರಿವರ್ತಿಸುವುದೇ ಬುದ್ದಿವಂತಿಕೆ
ಮತ್ತು ಅತ್ಯವಶ್ಯ.....ಸರ್ಕಾರ...ಟಿವಿ
ಮಾದ್ಯಮಗಳು..ಅಧಿಕಾರಿಗಳು.ಸಂಬಂದ
ಪಟ್ಟವರು ಇನ್ನಾದರೂ ಸಾಮಾನ್ಯ
ಜ್ಞಾನ ಬಳಸಿ ಕೆಲಸ
ಮಾಡಲಿ...ಅದಕ್ಕೇ ಹೇಳಿದ್ದು...."ಬದ
ಲಾವಣೆ ಬರಲಿ.ಪರಿವರ್ತನೆ
ತರಲಿ.ಇದು ಸಂಪದಸಾಲು ಪತ್ರಿಕಾ ಅಭಿಯಾನ."ಅಂತ..
ಇನ್ನು ತೆರೆದ ಬಾವಿಗಳಿಗೆ ಮಳೆ
ನೀರು ಇಂಗುವಂತೆ ಮಾಡೋಣ ...
ಎಲ್ಲಾ ಕೊಳವೆ
ಬಾವಿಗಳನ್ನು ಇಂಗು ಗುಂಡಿಗಳಾಗಿ
ಬದಲಾಯಿಸಿ ಅದನ್ನು ಮೇಲಿಂದ
ಮುಚ್ಚೋಣ..ಯಾವ ಮಗುವು ಕೊಳವೆ
ಬಾವಿಗೆ ಬೀಳಬಾರದು...ಹಾಗು ಕಡಿಮೆ
ಹಣದಲ್ಲಿ ಹೆಚ್ಚು ನೀರನ್ನು ಭೂಮಿಗೆ ಇಂಗಿಸಿ
ಅಂತರ್ಜಲ ಏರಿಸಿದ ಕೀರ್ತಿ ನಮಗೆ
ಸಲ್ಲುತ್ತದೆ....ಇನ್ನೇಕೆ
ತಡ....ಇದನ್ನು ಎಲ್ಲರಿಗೂ ತಲುಪುವಂತೆ
ಶೇರ್ ಮಾಡಿ.......
9448219347...
ಇನ್ನೂ ಹಲವಾರು ಉಪಾಯಗಳಿವೆ...ಕೊಳವೆಬಾವಿಯನ್ನು ಇಂಗುಗುಂಡಿ ಮಾಡಲು ಮತ್ತು ಅಂತರ್ಜಲ ವೃದ್ದಿ ಮಾಡಲು...ನಾವೇ ಕಡಿಮೆ ವೆಚ್ಚದಲ್ಲಿ ಈ ಕೆಲಸ ಮಾಡಲು ಸಿದ್ದ...ದಯಮಾಡಿ ಜೊತೆಯಾಗಿ...ನೀರು ಉಳಿಸಿ...ಬದುಕು ಬೆಳೆಸಿ......

venkatesha sampa



ಕಟ್ಟುವುದು ಭಾರತೀಯ ಸಂಸ್ಕೃತಿಯೇ ವಿನಃ ಕೆಡಗುವುದಲ್ಲ.ಒಂದು ವ್ಯವಸ್ಥೆಯನ್ನು ಹಾಳು ಮಾಡುವ ಮೊದಲು ಸಾವಿರ ಬಾರಿ ಯೋಚಿಸಬೇಕು..ಅನಾವಶ್ಯಕ ಅರೋಪಗಳು ವ್ಯವಸ್ಥೆಯನ್ನು ಸಂಶಯದಿಂದ ನೋಡುವಂತೆ ಮಾಡುತ್ತದೆ..ಇದರಿಂದ ನಮಗರಿವಿಲ್ಲದಂತೆ ನಮ್ಮ ಆಲೋಚನೆಗಳು ಅಸ್ವಸ್ಥವಾಗುತ್ತದೆ.ಒಮ್ಮೆ ನಮ್ಮ ಮನಸ್ಸು ಗೊಬ್ಬರದ ಗುಂಡಿಯಂತಾದರೆ ಅದರಿಂದ ಆಗುವುದು ಕೆಡಹುವ ಸಂಸ್ಕೃತಿಯೇ ವಿನಃ ಕಟ್ಟುವುದಲ್ಲ....ಬೇಕು ಪಾಸಿಟೀವ್ ಜರ್ನಲಿಸಂ...ಬೇಕು ಪಾಸಿಟೀವ್ ಥಿಂಕಿಂಗ್ ....

ಓದಿ ಸಂಪದ ಸಾಲು
"ಬದಲಾವಣೆ ಬರಲಿ..ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ"

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu