ಅತ್ತ ಹಿಂದೂ - ಮುಸ್ಲಿಂ ಎಂಬ ಕಿತ್ತಾಟ, ಇತ್ತ ಮುಸ್ಲಿಂ - ಕ್ರಿಸ್ಚಿಯನ್ ಎಂಬ ಹೊಡೆದಾಟ, ಧರ್ಮದೊಳಗೆ, ಜಾತಿಯೊಳಗೆ ತನ್ನದೇ ಶ್ರೇಷ್ಟ - ಕನಿಷ್ಟ ಎಂಬ ಕೂಗಾಟ,
ಈ ಎಲ್ಲಾ ಕೂಗಾಟಕ್ಕೆ ಕಾರಣವೆನು? ಇದರ ಪರಿಣಾಮವೇನು?ಇದರಿಂದಾಗುವ ಉಪಯೋಗವೇನು?ಬರೀ ಪ್ರಶ್ನೆಗಳು? !
ಹಾಗಂತ ಬೆಂಕಿಯ ಕಿಡಿ ಹೊತ್ತಿಸಿ ಅಮಾಯಕರನ್ನು ತಳ್ಳಿ ಬಾವಿಯ ಆಳ ನೋಡುವ ರಾಜಕೀಯ ನೇತಾರನೋ?ಧಾರ್ಮಿಕ ಮುಖಂಡನೋ,ಸ್ವಘೋಷಿತ ಬಾಡಿಗೆ ಭಾಷಣಕಾರನೋ,ಯಾರು ನಮ್ಮ ಸ್ವಂತ ಕಷ್ಟ ಬಂದಾಗ ಹತ್ತಿರವೂ ಸುಳಿಯಲಾರರು!
ಬೆಂಕಿ ಹೊತ್ತಿಸಿದವನು ಬಚಾವ್ ಆಗಿ ಇದೇ ಸಮಾಜದಲ್ಲಿ ವಿಕೃತವಾಗಿ ನಗುತ್ತಿದ್ದರೆ ಅಮಾಯಕ ಬೆಂಕಿಯಲ್ಲಿ ದಹಿಸಲ್ಪಡುತ್ತಾನೆ,
ಯಾವನದೋ ವಿಕೃತ ಕೃತ್ಯಕ್ಕೆ ಜನ ಸಾಮಾನ್ಯರೇ ಸೆಡ್ಡು ಹೊಡೆದು ನಿಂತು ಸುಂದರ ಸಮಾಜ ಕಟ್ಟಬೇಕಿದೆ.ಇಡೀ ಜಗತ್ತು ಬಯಸುವುದು ಸುಂದರ ಸಮಾಜ ಮತ್ತು ನೆಮ್ಮದಿಯ ಬದುಕನ್ನು! ಇದನ್ನು ಹಾಳು ಮಾಡುವ ಎಡ-ಬಲವೆಂಬ ಇಸಂಗಳಿಗೆ ದಿಕ್ಕಾರವಿರಲಿ! #ವೆಂಕಟೇಶಸಂಪ
ಯಾಕೆ ಇಂತಹ ಗಲಾಟೆ ಹೆಚ್ಚುತ್ತಿದೆ?ಇದಕ್ಕೇನು ಪರಿಹಾರ?ಇಂತಹ ಅಮಾಯಕ ಬಲಿಗೆ ಹೊಣೆ ಯಾರು?
ಸಂಪೂರ್ಣ ವಿವರಕ್ಕೆ ಓದಿ ಸಂಪದ ಸಾಲು ಪತ್ರಿಕೆ
ಸಂಪರ್ಕಿಸಿ 9448219347
No comments:
Post a Comment