*ಸದ್ದು ಮಾಡದ ಸಾಧಕರು* ,
ಇವರು ನಮ್ಮ ಹೆಮ್ಮೆ... ಸಂಪದ ಸಾಲು ಪತ್ರಿಕೆಯ ವತಿಯಿಂದ *ಸಾಧಕರ ಪರಿಚಯ ಮಾಲಿಕೆ,*
ಇಂದಿನ ಸಾಧಕರು,
*ಶ್ರೀ ಚಂದ್ರಶೇಖರ್ ಕಾಕಾಲ್*
ಮಲೆನಾಡಿನ ಹಳ್ಳಿಮೂಲೆಯಲ್ಲಿ ಹುಟ್ಟಿದ ಇವರು IT ಕ್ಷೇತ್ರದಲ್ಲಿ ಜಗತ್ತಿನ ದೈತ್ಯ ಕಂಪನಿಗಳಾದ ಇನ್ಫೋಸಿಸ್, ಎಲ್ ಅಂಡ್ ಟಿ ಇನ್ಫೋಟೆಕ್ ನಂತಹ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಯಲ್ಲಿದ್ದ ಹಿರಿಯ ಸ್ನೇಹಿತರಾದ ಚಂದ್ರಶೇಖರ್ ಕಾಕಾಲ್. ಇವರಿಗೆ ಜಗತ್ತಿನ 25 ಮಂದಿ ಶ್ರೇಷ್ಠ ಕನ್ಸಲ್ಟೆಂಟ್ ಗಳಲ್ಲಿ ಒಬ್ಬರು ಎಂದು *ಅಮೆರಿಕಾದ ಕನ್ಸಲ್ಟಿಂಗ್ ಮ್ಯಾಗಝೀನ್ ಪ್ರಶಸ್ತಿ* ನೀಡಿತ್ತು. ಹೆಗ್ಗೋಡಿನ ಸುತ್ತಲಿನ ಮೂರು ಪಂಚಾಯತಿ ಗಳು ಸೇರಿ ' ನಾಗರಿಕ ಸಮ್ಮಾನ ' ವನ್ನೂ ಏರ್ಪಡಿಸಿದ ಹಿರಿಮೆ ಇವರಿಗೆ ಸಂದಿದೆ.
ಊರಿನ ಜನರಿಗಾಗಿ ತಾವು ಓದಿದ ಶಾಲೆಯಲ್ಲಿ ಕಾಲೇಜ್ ಶಿಕ್ಷಣ ವ್ಯವಸ್ಥೆ ಮಾಡಿದ್ದಾರೆ. ನೂರಾರು ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಿದ್ದಾರೆ. ಊರಿನ ಮಕ್ಕಳಿಗೆ ಉದ್ಯೋಗವಾಗಲಿ ಮತ್ತು ಹಳ್ಳಿಯ ಜನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಳ್ಳಿಯಲ್ಲಿಯೇ ಸೂಪರ್ ಮಾರ್ಕೆಟ್ ಮಾಡಿದ್ದಾರೆ.
ಹಳ್ಳಿಯಲ್ಲಿಯೇ ಪೆಟ್ರೋಲ್ ಸಿಗಲಿ ಎಂಬ ಉದ್ದೇಶಕ್ಕೆ ಹೆಗ್ಗೋಡು ಎಂಬ ಹಳ್ಳಿಯಲ್ಲಿ ಪೆಟ್ರೋಲ್ ಬಂಕ್ ಶುರು ಮಾಡಿದವರು ಇವರು.
ಸಾಗರದಂತಹ ಪ್ರದೇಶದಲ್ಲಿ ಒಬ್ಬರಾದರೂ ಹೆಸರಾಂತ ವಿಜ್ಞಾನಿ ಆಗಲಿ ಎಂಬ ಆಶಯದಲ್ಲಿ ವಿಜ್ಞಾನ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಆಟಿಸಂ ಮಕ್ಕಳ ಶಾಲೆಗೆ ಸಹಾಯ ಮಾಡಿದ್ದಾರೆ. ಊರಿನ ಕೆರೆ ಹೂಳೆತ್ತಿಸಿದ್ದಾರೆ, ದ್ಯಾವಾಸ ಎಂಬ ನದಿಗೆ ಪುನರುಜ್ಜೀವನ ಕೊಡಲು, ನೀರು ಇಂಗಿಸಲು ಜನ ಜಾಗೃತಿ ಮೂಡಿಸಿದ್ದಾರೆ . ಬೆಂಗಳೂರಿನ ತಮ್ಮ ಬಡಾವಣೆಯಲ್ಲಿ 4 ಕಡೆ ಮಿಯಾವಾಕಿ ಕಿರು ಅರಣ್ಯವನ್ನು ರೂಪಿಸಿ 5000 ಕ್ಕೂ ಹೆಚ್ಚು ಗಿಡ ನೆಡಿಸಿದ್ದಾರೆ.
ಇವರಿಗೆ *ಸಂಪದ ಸಾಲು ಪತ್ರಿಕೆಯ* ವತಿಯಿಂದ ಶುಭಾಶಯಗಳು,
ವೆಂಕಟೇಶ ಎಸ್ ಸಂಪ
ಸಂಪದ ಸಾಲು ಪತ್ರಿಕೆ
9448219347