ಕಟ್ಟುವಿಕೆಯ ಕನಸು ಕಂಡು
#ವೆಂಕಟೇಶಸಂಪ
ಕಟ್ಟುವಿಕೆಯ ಬದುಕು ನಮ್ಮದಾಗಬೇಕು.ಕಟ್ಟುವಿಕೆಯ ಸಂಸ್ಕೃತಿ ನಮ್ಮದಾಗಬೇಕು,ಕಟ್ಟುವಿಕೆಯನ್ನು ಜೀವನ ಪದ್ದತಿ ಮಾಡಿಕೊಳ್ಳಬೇಕಿದೆ,ಸಂಪದ ಸಾಲು ಪತ್ರಿಕೆ
ಆದರೆ ನೋಡಿ ಇಂದಿನ ದಿನದ ವಿದ್ಯಮಾನಗಳನ್ನು!
ಆಧುನೀಕತೆಯ ತುಟ್ಟತುದಿಯಲ್ಲಿ ನಿಂತು ಬೀಗುತ್ತಿದ್ದೇವೆ.ವಿದ್ಯಾವಂತರಾಗಿದ್ದೇವೆಂದು ಕೊಚ್ಚಿಕೊಳ್ಳುತ್ತಿದ್ದೇವೆ.ನಾಗರೀಕತೆಯ ವಿಕಾಸ ಎಂದೆಲ್ಲಾ ಬಾಯಿ ಬಡಿದುಕೊಳ್ಳುತ್ತಿದ್ದೇವೆ.ಆದರೆ ಎಲ್ಲಾ ಎಲ್ಲೆಯನ್ನೂ ಮೀರಿದ್ದೇವೆ ಎನ್ನುವ ನಾವೇ
ಮಾನವೀಯತೆಯ ತಳಹದಿಯನ್ನು ಮರೆಯುತ್ತಿದ್ದೇವೆ.
ಯಾಕೆ ಹೀಗೆ!?
ಪ್ರತಿ ಸ್ವತಂತ್ರೋತ್ಸವ ಬಂದಾಗಲೂ ಅಷ್ಟೇ
ನಾವು ಸ್ವಾತಂತ್ರ ಅನುಭವಿಸುತ್ತಿದ್ದೇವೆ.ನಾವು ಸ್ವಾವಲಂಬಿಗಳು ಅಂತೆಲ್ಲಾ ನಮಗೆ ನಾವೇ ಭಾಷಣ ಮಾಡಿ ಸ್ವೀಟು ತಿಂದು ಅವತ್ತೂ ಕೆಲಸಕ್ಕೆ ರಜೆ ಘೋಷಿಸಿ ಮನೆಯಲ್ಲಿ ಉಳಿದುಬಿಡುತ್ತೇವಲ್ಲವಾ!?
ಆದರೆ ಇಷ್ಟು ವರ್ಷಕ್ಕೆ ನಾವು ಕಟ್ಟುವಿಕೆಯ ಬಗ್ಗೆ ಯೋಚಿಸಲೇ ಇಲ್ಲ ನೋಡಿ,ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಕಟ್ಟುವಂತೆ ಸುಂದರ ಸೌಧ ನಿರ್ಮಿಸಿದಂತೆ ನಮ್ಮ ಆಲೋಚನೆಗಳು ಮತ್ತು ಒಂದಕ್ಕೊಂದು ಮನಸ್ಸುಗಳು ಕಟ್ಟಬೇಕಿದೆ,
ಒಂದಕ್ಕೊಂದು ಸಮಾಜಗಳು ಪರಸ್ಪರ ಕಟ್ಟಬೇಕಿದೆ. ಧರ್ಮ ಧರ್ಮಗಳ ನಡುವೆ ಮಾನವೀಯತೆ ಬೆಸೆಯಬೇಕಿದೆ.ಸಂಸ್ಕೃತಿ ಆಚರಣೆಗಳ ನಡುವೆಯೂ ದೇಶ ಕಟ್ಟಬೇಕಿದೆ.ದ್ವೇಶ ಅಸೂಯೆ ಸಿಟ್ಟು ದುಃಖ ಎಲ್ಲದರ ನಡುವೆ ನಾವು ನಾವಾಗುವುದು ಯಾವಾಗ!?
ಒಂದೆಡೆ ದೇಶದ ದ್ವೇಷ ಸಾಧಿಸಲು ಹವಣಿಸುವ ಶತ್ರುರಾಷ್ಟ್ರಗಳು,ಮತ್ತೊಂದೆಡೆ ದೇಶದ ಒಳಗೆ ಇದ್ದು ನಮ್ಮವರ ಮೇಲೆಯೇ ಹಗೆ ಸಾಧಿಸಲು ಹಗೆ ಸಾಧಿಸಲು ಸಂಚು ರೂಪಿಸುವವರು.
ಇದರ ಮಧ್ಯೆ ಧರ್ಮದ ಹೆಸರಲ್ಲಿ ದೇವರ ಹೆಸರಲ್ಲಿ ಜಾತಿಯ ಹೆಸರಲ್ಲಿ ವಿಷ ಬೀಜ ಬಿತ್ತಿ ಮತ್ತೆ ಕೆಡಹುವ ಒಂದಷ್ಟು ರಾಜಕಾರಣಿಗಳು,ಮತ್ತೊಂದಷ್ಟು ಧಾರ್ಮಿಕ ಮುಖಂಡರುಗಳು, ಅರ್ಧಂಬರ್ದ ತಿಳಿದುಕೊಂಡ ಬುದ್ದಿಜೀವಿ ಸೋಗಿನ ಮನುಷ್ಯರುಗಳು, ಕೇವಲ ಗದ್ದಲ ಸೃಷ್ಟಿಸೋದೇ ಮಾಧ್ಯಮ ಎಂಬ ಕಲ್ಪನೆಯಂತೆ ವರ್ತಿಸುವ ಒಂದಷ್ಟು ಪತ್ರಕರ್ತರು,
ತಿಳಿದೂ ತಿಳಿದು ಭ್ರಷ್ಟರನ್ನೇ ಆಯ್ಕೆ ಮಾಡುವ ಕೆಟ್ಟದ್ದನ್ನೇ ಪ್ರೋತ್ಸಾಹಿಸುವ ಒಳ್ಳೆಯದನ್ನು ತಿರಸ್ಕರಿಸಿ ಬೆಳೆಸದೇ ಇರುವ ಒಂದಷ್ಟು ಜನ ಸಾಮಾನ್ಯರು!
ಆದರೂ ದ್ವೇಷ ಅಳಿಸಬೇಕಿದೆ! ದೇಶ ಕಟ್ಟಬೇಕಿದೆ!
ಸುಂದರ ಆಲೋಚನೆಗಳ ಸ್ವತಂತ್ರ ಬದುಕಿನ ಸುಸಂಸ್ಕೃತ ಮನಸ್ಥಿತಿಯ ಸಾಧಿಸುವ ಹಂಬಲದ ಚೆಂದನೆಯ ವಾತಾವರಣದ ಉತ್ತಮ ದೇಶ ಕಟ್ಟಲು ಜೊತೆಯಾಗೋಣ ಬನ್ನಿ , 9448219347
ಸರ್ವರಿಗೂ ಸ್ವತಂತ್ರೋತ್ಸವದ ಶುಭಾಶಯಗಳು,
ಸಸಂಪದ ಸಾಲು ಪತ್ರಿಕೆ
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
No comments:
Post a Comment