ಈ ಸುದ್ದಿ ಓದಿ.ಮನುಷ್ಯತ್ವ ಇದ್ದವರಿಗೆ ಮನ ಕಲುಕುತ್ತದೆ.ತಾನೇ ಸಾಕಿ ಬೆಳೆಸಿದ ಅಡಿಕೆ ಗಿಡವನ್ನು ಕೈಯಾರೆ ಕಡಿದು ಬೆಂಕಿ ಇಡುವಷ್ಟು ಅಸಹಾಯಕಳಾದ ರೈತ ಹೆಂಗಸಿನ ಬದುಕು ನೋಡಿ, ಇದು ಒಬ್ಬ ರೈತನ ಕತೆಯಲ್ಲ, ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ, ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,
ಇವರು ಅನ್ನದಾತರು ಕಾಣ್ರಿ.ಇವರ ಮೇಲೆ ಎಲ್ಲಾ ಪಕ್ಷಗಳು ರಾಜಕೀಯ ಮಾಡ್ತಾರೆ.ಅತ್ತ ಕೇಂದ್ರ ಸರ್ಕಾರವೂ ನಾಟಕ ಮಾಡತ್ತೆ. ಇತ್ತ ರಾಜ್ಯ ಸರ್ಕಾರವೂ ರೈತರ ಪಾಲಿಗೆ ಸತ್ತುಹೋಗಿದೆ.
ಕೇಂದ್ರ ಸರ್ಕಾರ ಹೇಳತ್ತೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಅಂತಾ. ರಾಜ್ಯ ಸರ್ಕಾರಕ್ಕೆ ಅನ್ನ ಕೊಡುವ ಅನ್ನದಾತನಿಗೆ ಕೊಡಲು ದುಡ್ಡಿಲ್ಲಂತೆ.ಮಟನ್ ಅಂಗಡಿಗೆ ದುಡ್ಡು ಕೊಡೋಕೆ ಹಣ ಸರಿ ಆಗತ್ತೆ ಅವರಿಗೆ.
ಎರಡು ಕಡೆ ಅಧಿವೇಶನ ನೆಡೆಯುತ್ತಿದೆ.ಯಾವ ಪಕ್ಷಗಳು ಯಾವೊಬ್ಬ ರಾಜಕಾರಣಿಯೂ ರೈತರ ಸಾಲ ಮನ್ನ ಮಾಡದಿದ್ದರೆ ಸದನ ನೆಡೆಸಲು ಬಿಡುವುದಿಲ್ಲ ಅಂತ ಪ್ರತಿಭಟಿಸಲಿಲ್ಲ.
ಎಲ್ಲರಿಗೂ ಎಲೆಕ್ಷನ್ ಟೈಮ್ ಗೆ ನಮ್ಮ ರೈತರು ನೆನಪಾಗ್ತಾರೆ.ರೈತರನ್ನು ರಾಜಕೀಯ ಸರಕು ಮಾಡಿಕೊಂಡವರಿಗೆ ದಿಕ್ಕಾರವಿರಲಿ.ಇನ್ನಾದರೂ ರೈತರ ಸಾಲ ಮನ್ನಾ ಮಾಡಲಿ.ಅನ್ನದಾತನ ಅಳಲಿಗೆ ಕೊನೆ ಎಂದು!? ಸರ್ಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Sunday, March 26, 2017
ಇದು ಒಬ್ಬ ರೈತನ ಕತೆಯಲ್ಲ, ಎಲ್ಲಾ ರೈತರ ದುರಂತ ಬದುಕು,ನೀರಿಲ್ಲ,ಬೆಳೆಯಿಲ್ಲ, ಬೆಳೆಗಳಿಗೆ ಸ್ಥಿರ ಬೆಲೆಯಿಲ್ಲ,ಸಾಮಾಜಿಕ ಗೌರವವಿಲ್ಲ,ರೈತನ ಅಳಲಿಗೆ ಕೊನೆಯಿಲ್ಲ,
Subscribe to:
Post Comments (Atom)
Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )
ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu
No comments:
Post a Comment