ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿ ಪ್ರದಾನ.
ಬೆಳಕು ಸಾಹಿತ್ಯಿಕ,ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ),ನೀಡುವ
ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆ ಸಂಪಾದಕ, ವೆಂಕಟೇಶ ಎಸ್ ಸಂಪ ಅವರಿಗೆ ಸೆಪ್ಟೆಂಬರ್ 29 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರದಾನ ಮಾಡಲಾಯಿತು.
ವೆಂಕಟೇಶ ಸಂಪ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು,ಇವರ ಸಾವಿರಾರು ಕತೆ,ಕವನ,ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಹಾಗು ಟಿ ವಿ,ರೇಡಿಯೋಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು,ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ರಕ್ತದಾನ,ನೇತ್ರದಾನ,ಪರಿಸರ ಜಾಗೃತಿ ಅಭಿಯಾನ,ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ವೆಂಕಟೇಶ ಸಂಪ ಅವರು, ಸಾವಯವ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಡಾ ಮಹೇಶ್ವರ ಸ್ವಾಮಿಗಳು,ಶ್ರೀ ಮ.ನೀ.ಪ್ರ ಕಲ್ಯಾಣ ಸ್ವಾಮಿಗಳು,ಹೊಸಪೇಟೆ ಕ್ಷೇತ್ರದ ಶಾಸಕರಾದ ಎಚ್ ಆರ್ ಗವಿಯಪ್ಪ,ಬರಹಗಾರರಾದ ಕುಮಾರಸ್ವಾಮಿ ಹಿರೇಮಠ್,ಬೆಳಕು ಸಂಸ್ಥೆಯ ಮುಖ್ಯಸ್ಥರಾದ ಅಣ್ಣಪ್ಪ ಮೇಟಿ ಗೌಡ ಮುಂತಾದವರು ಉಪಸ್ಥಿತರಿದ್ದರು.