ಶಿರಸಿಯ ಸಮೀಪದ ಬೆಂಗಳೆ ಎಂಬ ಊರಿನಿಂದ ದೂರದ ದೆಹಲಿಯ ಹತ್ತಿರ ನೋಯ್ಡಾಕ್ಕೆ ಹೋದ ವ್ಯಕ್ತಿ, ಇನ್ನೊಬ್ಬ ಸ್ನೇಹಿತನೊಂದಿಗೆ ಸೇರಿ ಸಹ ಸಂಸ್ಥಾಪಕನಾಗಿ ಒಂದು ಕಂಪನಿಗಳಲ್ಲಿ ಕೆಲಸ ಮಾಡಿದ, ಒಂದು ಹಂತದ ನಂತರ ತಾನು ಹುಟ್ಟಿ ಬೆಳೆದ ಊರಿನಲ್ಲಿಯೇ ಜಮೀನನ್ನು ಖರೀದಿಸಿ ಅಲ್ಲಿಯೇ ಒಂದಷ್ಟು ಜನಕ್ಕೆ ಕೆಲಸ ಕೊಡಬೇಕೆಂದು ಪ್ರಾರಂಭಿಸಿದ ಕಂಪನಿಯ ಹೆಸರೇ ಆಲ್ಟ್ ಡಿಜಿಟಲ್ ಟೆಕ್ನಾಲಜಿಸ್,ನಮ್ಮ ಸಂಪದ ಸಾಲು ಪತ್ರಿಕೆ ಯ ಬರಹಗಾರನಾಗಿ ಗುರುತಿಸಿಕೊಂಡಿದ್ದ,ಸರಳ ವ್ಯಕ್ತಿತ್ವದ ಹುಡುಗ ತನ್ನ ವಿದ್ಯಾಭ್ಯಾಸದ ಸಮಯದಲ್ಲಿ ಹಿಂದಿದ್ದರೂ ಬದುಕಿನ ಸಾಧನೆಯ ಹಾದಿಯಲ್ಲಿ ಮುಂದೆ ಸಾಗುವ ಪ್ರಯತ್ನ ಮಾಡಿದ. ಅದರ ಪ್ರತಿಫಲವೇ ಹಳ್ಳಿಯಲ್ಲೂ ಕೂಡ ಕಂಪನಿಯನ್ನು ಪ್ರಾರಂಭಿಸಬಹುದು ಎಂಬ ಹೊಸ ಆಲೋಚನೆಯನ್ನು ಮಾಡಿದ್ದಾನೆ.
ಕಂಪನಿಗಳು ಎಂದರೆ ದೊಡ್ಡ ದೊಡ್ಡ ಸಿಟಿಯಲ್ಲಿರಬೇಕು, ವಿಮಾನ ನಿಲ್ದಾಣ ಹತ್ತಿರವಿರಬೇಕು, ಎಲ್ಲಾ ಮೂಲಭೂತ ಸೌಕರ್ಯಗಳು ಇರಬೇಕು ಎಂದು ಬಯಸುವ ಈ ಕಾಲದಲ್ಲಿ ತಾನು ಹುಟ್ಟಿ ಬೆಳೆದ ಊರಿನ ನಡುವೆ, ಕಾಡಿನ ನಡುವೆ ಪುಟ್ಟದೊಂದು ಕಚೇರಿ ಕಟ್ಟಿ ಅಲ್ಲೇ ಒಂದು 10 -20 ಜನರಿಗೆ ಕೆಲಸ,ಕೈತುಂಬಾ ಸಂಬಳ ಕೊಡುವ ಮನಸ್ಸು ಕೂಡ ಅಭಿನಂದನಾರ್ಹ.
ಈ ಗೆಳೆಯನ ಹೆಸರು ಗೌತಮ ಬೆಂಗಳೆ,
ನಿನ್ನೆ ತಾನೇ ಈತನ ಕಂಪನಿ, ಬನವಾಸಿ ಸಮೀಪದ ವಡ್ಡಿನಕೊಪ್ಪದಲ್ಲಿ ನಡೆಯಿತು,
ಸಂಬಳ ಸಿಕ್ಕರೆ ಸಾಕು, ಎಂಬ ಮನಸ್ಥಿತಿಯಿಂದ ಸ್ವಂತ ಉದ್ಯಮ ಮಾಡಬೇಕೆಂಬ ಮನಸ್ಥಿತಿ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಶುಭ ಹಾರೈಸಿ ಬಂದೆ. ಗೆಳೆಯಾ, all the best Goutam Hegde
ಸಂಪದ ಸಾಲು ಪತ್ರಿಕೆ
9448219347
ಚಿತ್ರದಲ್ಲಿ ಗೆಳೆಯ ಗೌತಮ್ ಬೆಂಗಳೆ ಮತ್ತು ಆಲ್ಟ್ ಡಿಜಿಟಲ್ ಕಂಪನಿಯ ಸಂಸ್ಥಾಪಕ ವಿಕಾಸ್ ಗೋಯಲ್ ಜೊತೆ ಪತ್ರಕರ್ತ ವೆಂಕಟೇಶ ಸಂಪ